ನಾನು ಮೆಚ್ಚಿದ ವಾಟ್ಸಪ್

Tuesday, July 16, 2019

ಇಂದಿನ ಇತಿಹಾಸ History Today ಜುಲೈ 16


2019: ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ಗೆ ನುಗ್ಗಿ ಭಯೋತ್ಪಾದಕ ನೆಲೆಯ ಮೇಲೆ ಫೆಬ್ರುವರಿ ೨೬ರಂದು ನಡೆಸಲಾದ ವಾಯುದಾಳಿಯ ಭಾರತೀಯ ವಾಯುಪಡೆಯು ದೂರದಿಂದಲೇ ನಿಖರ ಗುರಿಯ ದಾಳಿಗಳನ್ನು ನಡೆಸಲು ಸಮರ್ಥವಾಗಿದೆ ಎಂಬುದನ್ನು ಸಾಬೀತು ಪಡೆಸಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಲ್ಲಿ ಹೇಳಿದರು.  ಕಾರ್ಗಿಲ್ ಸಮರದ ವೇಳೆಯಲ್ಲಿ ಭಾರತೀಯ ವಾಯುಪಡೆಯು ನಡೆಸಿದ್ದಆಪರೇಷನ್ ಸಫೇದ್ ಸಾಗರ್ ಕಾರ್ಯಾಚರಣೆಯ ೨೦ನೇ ವರ್ಷದ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಧನೋವಾ ಅವರುಬಾಲಾಕೋಟ್ ದಾಳಿಯು ಭಾರತೀಯ ವಾಯುಪಡೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವಿದೆ ಎಂಬುದನ್ನು ಸಾಬೀತು ಪಡಿಸಿದೆ. ಸುದೀರ್ಘ ಕಾಲದ ಯೋಜನೆ ಮತ್ತು ಯೋಗ್ಯ ವೇದಿಕೆಗಳ ಸೇರ್ಪಡೆ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ನುಡಿದರು. ಇತ್ತೀಚಿನ ವರ್ಷಗಳಲ್ಲಿ ಆಗಿರುವ ದೊಡ್ಡ ಬದಲಾವಣೆ ಇದು. ತಮ್ಮ ಪೂರ್ವಾಧಿಕಾರಿಗಳು ಸಾಮರ್ಥ್ಯ ವಿಸ್ತರಣೆಗಾಗಿ ಹಾಕಿದ ಬುನಾದಿಯಿಂದಾಗಿ ಇದು ಸಾಧ್ಯವಾಯಿತು ಎಂದು ಧನೋವಾ ಹೇಳಿದರು.  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ೪೦ ಮಂದಿ ಯೋಧರನ್ನು ಬಲಿಪಡೆದ ಫೆಬ್ರುವರಿ ೧೪ರ ಪುಲ್ವಾಮ ಆತ್ಮಹತ್ಯಾ ದಾಳಿಗೆ ಪ್ರತಿಯಾಗಿ ಭಾರತವು ಬಾಲಾಕೋಟ್ ದಾಳಿಯನ್ನು ನಡೆಸಿತ್ತು. ಭಾರತೀಯ ವಾಯುಪಡೆಯ ಮಿರಾಜ್- ೨೦೦೦ ಸಮರ ವಿಮಾನವು ಬಾಲಾಕೋಟ್ನಲ್ಲಿನ ಮೂರು ಗುರಿಗಳ ಮೇಲೆ ಐದು ಇಸ್ರೇಲ್ ಮೂಲದ ಸ್ಪೈಸ್ ೨೦೦೦ ಬಾಂಬುಗಳನ್ನು ಸಿಡಿತಲೆಗಳ ಸಹಿತವಾಗಿ ಉದುರಿಸಿತ್ತು. ಸಿಡಿತಲೆಗಳು ಸ್ಫೋಟಕ್ಕೂ ಮುನ್ನ ಕಟ್ಟಡಗಳ ಛಾವಣಿಯನ್ನು ಭೇದಿಸಿ ಒಳನುಗ್ಗಿ ಗುರಿ ಇಡಲಾದ ಕಟ್ಟಡಗಳ ಒಳಗೆ ಅಪರಿಮಿತ ಹಾನಿ ಎಸಗುವ ಸಾಮರ್ಥ್ಯ ಹೊಂದಿದ್ದವು.   ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನದ ವಾಯುಪಡೆ ಯುದ್ಧ ವಿಮಾನಗಳು ಫೆಬ್ರುವರಿ ೨೭ರಂದು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ವಿಫಲ ಯತ್ನ ನಡೆಸಿದ್ದವು. ಸಂದರ್ಭದಲಿ ನಿಯಂತ್ರಣ ರೇಖೆಯಲ್ಲಿ ವೈಮಾನಿಕ ಘರ್ಷಣೆ ಘಟಿಸಿತ್ತು. ಭಾರತದ ಸಮರ ವಿಮಾನ ಒಂದನ್ನು ಪಾಕಿಸ್ತಾನವು ಹೊಡೆದುರುಳಿಸಿ, ಭಾರತೀಯ ಪೈಲಟ್ ಒಬ್ಬರನ್ನು ಸೆರೆ ಹಿಡಿದು ಸ್ವಲ್ಪ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಪಾಕಿಸ್ತಾನಿ ವಾಯುಪಡೆಯೂ ವೈಮಾನಿಕ ಕದನದಲ್ಲಿ ತನ್ನ ಯುದ್ಧ ವಿಮಾನ ಒಂದನ್ನು ಕಳೆದುಕೊಂಡಿತ್ತು. ಫೆಬ್ರುವರಿ ೨೭ರ ವೈಮಾನಿಕ ಘರ್ಷಣೆಯು ಭಾರತೀಯ ವಾಯುಪಡೆಯ ಜಾಲ ಕೇಂದ್ರಿತ ಸಮರ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.  ೧೯೯೯ರ ಕಾರ್ಗಿಲ್ ಕದನದ ವೇಳೆಯಲ್ಲಿ ಮಿಗ್-೨೧ ದಳದ ಮುಖ್ಯಸ್ಥರಾಗಿದ್ದ ಧನೋವಾ, ’ಭಾರತೀಯ ವಾಯುಪಡೆಯು ಕಾರ್ಗಿಲ್ ಮಾದರಿಯ ಕಾರ್ಯಾಚರಣೆಗೂ ಸಜ್ಜಾಗಿತ್ತು ಎಂದು ಹೇಳಿದರು. ’ಎಲ್ಲ ಒಳ್ಳೆಯ ಜನರಲ್ಗಳಂತೆ ನಾವೂ ಸಮರಕ್ಕೆ ಸಜ್ಜಾಗಿದ್ದೆವು. ಮತ್ತೊಮ್ಮೆ ಕಾರ್ಗಿಲ್ ಯುದ್ಧ ಎದುರಾದರೂ, ನಾವು ಅತ್ಯುತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ ಎಂದು ಹೇಳಿದರು. ಕಾರ್ಗಿಲ್ ಸಮರದ ವೇಳೆಯಲ್ಲಿ ಭಾರತದ ಮಿಗ್ -೨೧ ವಿಮಾನವು ಮೊತ್ತ ಮೊದಲ ಬಾರಿಗೆ ಬಾನಿನಿಂದ ನೆಲದ ಮೇಲಕ್ಕೆ ಬಾಂಬ್ ದಾಳಿ ನಡೆಸುವ ಕಾರ್ಯಾಚರಣೆಯನ್ನು ಪರ್ವತ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ನಡೆಸಿತ್ತು ಎಂದು ಧನೋವಾ ನೆನಪಿಸಿದರು. ೧೯೯೯ರ ಕಾರ್ಯಾಚರಣಾ ಮಿತಿಗಳ ಬಗ್ಗೆ ಮಾತನಾಡಿದ ಅವರು ಮಿತಿಗಳಿಂದ ಹೊರಬರಲು ಭಾರತೀಯ ವಾಯುಪಡೆಯು ನವನವೀನ ತಂತ್ರಗಳನು ಅನುಸರಿಸಿತ್ತು ಎಂದು ಹೇಳಿದರು. ಕಾರ್ಗಿಲ್ ಬೆಳವಣಿಗೆಯು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಯಾವುದೇ ರೀತಿಯ ವಾಯುಬೆದರಿಕೆ ಎದುರಿಸಲು ಸಾಧ್ಯವಾಗುವ ರೀತಿಯಲ್ಲಿ ಬೆಳೆಸಿಕೊಳ್ಳಲು ನೆರವಾಯಿತು ಎಂದು ಅವರು ನುಡಿದರು. ಕಾರ್ಗಿಲ್ ಸಮರದ ಕಾಲದಲ್ಲಿ ನಿಖರ ಬಾಂಬ್ ದಾಳಿಯ ಸಾಮರ್ಥ್ಯ ಮಿರಾಜ್-೨೦೦೦ಕ್ಕೆ ಮಾತ್ರವೇ ಇತ್ತು. ಈಗ ಇದು ಮೇಲ್ದರ್ಜೆಗೆ ಏರಿದ ಎಸ್ಯು ೩೦. ಜಾಗ್ವಾರ್, ಮಿಗ್ -೨೯ ಮತ್ತು ಮಿಗ್-೨೭ ಯುದ್ಧ ವಿಮಾನಗಳಿಗೂ ಇದೆ ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನವು ತನ್ನ ಸಾಮರ್ಥ್ಯಗಳನ್ನು ಅತ್ಯಂತ ಕ್ಷಿಪ್ರ ನಿರ್ಣಯಗಳ ಮೂಲಕ ಮೇಲ್ದರ್ಜೆಗೆ ಏರಿಸಿಕೊಂಡಿದೆ. ಭಾರತ ಕೂಡಾ ಇತ್ತೀಚೆಗೆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿತು ಎಂದು ಧನೋವಾ ನುಡಿದರು.

2019: ಮುಂಬೈ: ವಾಣಿಜ್ಯನಗರಿ ಮುಂಬೈನಲ್ಲಿ ಶಿಥಿಲಾವಸ್ಥೆಯ ಬಹುಅಂತಸ್ತುಗಳ ಕಟ್ಟಡ ಕುಸಿತ ಪ್ರಕರಣಗಳು ಆತಂಕಕಾರಿಯಾಗಿ ಮುಂದುವರಿದಿರುವಾಗಲೇ ಡೊಂಗ್ರಿ ಪ್ರದೇಶದಲ್ಲಿ
ಮಧ್ಯಾಹ್ನ ೪ ಮಹಡಿಗಳಕಟ್ಟಡ ಕುಸಿದು 10 ಮಂದಿ ಮೃತರಾಗಿ
೫೦ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿಕೊಂಡರು. ಸಮರೋಪಾದಿಯಲ್ಲಿ ರಕ್ಷಣಾ
ಕಾರ್ಯ ಮುಂದುವರೆಯಿತು.  ದಕ್ಷಿಣ ಮುಂಬೈನ ಡೊಂಗ್ರಿ ಪ್ರದೇಶದ ತಂಡೆಲ್ ರಸ್ತೆಯಲ್ಲಿದ್ದ ಕೇಸರಬಾಯಿ ೪ ಅಂತಸ್ತುಗಳ ಕಟ್ಟಡ ಹಠಾತ್ ಕುಸಿದು ಬಿತ್ತು. ಈ ಘಟನೆ ನಡೆದಾಗ ೪೦ ರಿಂದ ೫೦ಕ್ಕೂ ಹೆಚ್ಚು ಮಂದಿ ಈ ಕಟ್ಟಡದಲ್ಲಿದ್ದರು.

2019:  ನವದೆಹಲಿ: ಹದಿನಾರು ಮಂದಿ ಅತೃಪ್ತ ಶಾಸಕರ ರಾಜೀನಾಮೆಗಳ ಬಗ್ಗೆ ಕ್ಷಿಪ್ರ ತೀರ್ಮಾನ ಕೈಗೊಳ್ಳದೇ
ಇದ್ದುದಕ್ಕಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್  ಪೀಠ, ಎಲ್ಲ ಕಕ್ಷಿದಾರರ ವಾದ ಆಲಿಕೆಯ ಬಳಿಕ ತನ್ನ ತೀರ್ಪನ್ನು ಜುಲೈ ೧೭ರ ಬುಧವಾರಕ್ಕೆ ಕಾಯ್ದಿರಿಸಿತು. ಅಲ್ಲಿಯವರೆಗೂ ಯಥಾಸ್ಥಿತಿ ಮುಂದುವರಿಕೆಗೂ ಸೂಚಿಸಿತು. ಕರ್ನಾಟಕ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮತ್ತು ಬಂಡಾಯ ಶಾಸಕರ ಪರ ವಾದ- ಪ್ರತಿವಾದಗಳನ್ನು ಆಲಿಸಲು ದಿನದ ಬಹುಭಾಗವನ್ನು ತೆಗೆದುಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ೧೬ ಮಂದಿ ಶಾಸಕರ ಅರ್ಜಿ ಬಗ್ಗೆ ಬುಧವಾರ ಬೆಳಗ್ಗೆ ೧೦.೩೦ ಗಂಟೆ ತೀರ್ಪು ನೀಡುವುದಾಗಿ ಪ್ರಕಟಿಸಿತುತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಕೋರಿ ೧೬ ಶಾಸಕರು ಸಲ್ಲಿಸಿರುವ ಅರ್ಜಿಗಳ ಮೇಲಿನ ಸುಪ್ರೀಂಕೋರ್ಟ್ ತೀರ್ಪು, ಹಲವಾರು ಸಾಂವಿಧಾನಿಕ ವಿಷಯಗಳನ್ನು ಒಳಗೊಳ್ಳಲಿದ್ದು, ರಾಜ್ಯ ಸರ್ಕಾರದ ಅಳಿವು ಉಳಿವನ್ನೂ ತೀರ್ಮಾನಿಸಲಿರುವುದರಿಂದ ಭಾರೀ ಮಹತ್ವವನ್ನು ಪಡೆದಿದೆರಾಜೀನಾಮೆಗಳ ಬಗ್ಗೆ ನಿರ್ಧಾರ ಪ್ರಕ್ರಿಯೆಯಲ್ಲಿ ವಿಳಂಬನೀತಿ ಅನುಸರಿಸಿದ್ದಕ್ಕಾಗಿ ಪೀಠವು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಳಿಕ ವಿಧಾನಸಭಾಧ್ಯಕ್ಷರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಬಂಡಾಯ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತು ನಿರ್ಧರಿಸಲು ನಾಳೆಯವರೆಗೆ ಕಾಲಾವಕಾಶ ನೀಡವಂತೆಯೂ ಒಂದು ಕೋರಿದರು. ೧೬ ಮಂದಿ ಬಂಡಾಯ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಕಳೆದ ವಾರ ನೀಡಲಾಗಿದ್ದ ನಿರ್ದೇಶನವನ್ನು ತೆರವುಗೊಳಿಸಿ ಎಂದೂ ಸಿಂಘ್ವಿ ಅವರು ಪೀಠಕ್ಕೆ ಮನವಿ ಮಾಡಿದರು. ಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವ ಮುನ್ನ ಮಧ್ಯಪ್ರವೇಶ ಮಾಡಲು ಸುಪೀಂಕೋರ್ಟಿಗೆ ಅಧಿಕಾರ ಎಲ್ಲಿದೆ ಎಂದೂ ಪ್ರಶ್ನಿಸಿದ ಸಿಂಘ್ವಿಸಾಂವಿಧಾನಿಕ ಅಧಿಕಾರಿಯು ಇನ್ನೊಬ್ಬ ಸಾಂವಿಧಾನಿಕ ಅಧಿಕಾರಿಗೆ ನಿರ್ದೇಶನ ನೀಡಲಾಗದು. ಹಾಗೆ ಮಾಡುವುದು ಸಾಂವಿಧಾನಿಕ ವ್ಯವಸ್ಥೆಗೆ ಹಾನಿಕರ ಎಂದು ನುಡಿದರು.  ಸಿಂಘ್ವಿ ಅವರು ಪೀಠಕ್ಕೆ ಅದರ ಸಾಂವಿಧಾನಿಕ ಕರ್ತವ್ಯದ ಬಗ್ಗೆ ನೆನಪಿಸಿದಾಗ ಪೀಠವುವಿಧಾನಸಭಾಧ್ಯಕ್ಷರು ರಾಜೀನಾಮೆಗಳ ಬಗ್ಗೆ ನಿರ್ಧರಿಸಿಲ್ಲವೇಕೆ? ಎಂದು ಪ್ರಶ್ನಿಸಿತು. ಅವರ ರಾಜೀನಾಮೆ ಬಗ್ಗೆ ನಿರ್ಧರಿಸದಂತೆ ಸಭಾಧ್ಯಕ್ಷರನ್ನು ಯಾವುದು ತಡೆಯಿತು? ಸಭಾಧ್ಯಕ್ಷರು ಅವುಗಳನ್ನು ಸ್ವ ಇಚ್ಛೆಯ ರಾಜೀನಾಮೆಗಳಲ್ಲ ಎಂಬುದಾಗಿ ಬಣ್ಣಿಸಬಹುದಾಗಿತ್ತು. ೨೪ ಗಂಟೆಗಳ ಒಳಗಾಗಿ ಅವುಗಳ ಬಗ್ಗೆ ನಿರ್ಧರಿಸಿ ಬಳಿಕ ಅನರ್ಹತೆ ಬಗ್ಗೆ ಗಮನಿಸಬಹುದಾಗಿತ್ತಲ್ಲ? ನ್ಯಾಯಾಲಯವು ೨೪ ಗಂಟೆಗಳ ಒಳಗಾಗಿ ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯಬೇಕು ಎಂದು ಆದೇಶ ನೀಡಿತ್ತು ಮತ್ತು ಹಂಗಾಮೀ ಸಭಾಧ್ಯಕ್ಷರನ್ನೂ ನೇಮಿಸಿತ್ತು. ವ್ಯಾಪ್ತಿಯ ಪ್ರಶ್ನೆ ಎಲ್ಲಿ ಬರುತ್ತದೆ? ಅದು ನಿಮಗೆ ಅನುಕೂಲಕರವಾಗಿದ್ದುದಕ್ಕೆ ಒಕೆ ಆಯಿತಾ?’ ಎಂದು ಪೀಠ ಖಾರವಾಗಿ ಕೇಳಿತುಕಳೆದ ವರ್ಷ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ನಿಗದಿ ಪಡಿಸಿದ ೧೫ ದಿನಗಳ ಒಳಗಾಗಿ ಅಲ್ಲ, ೨೪ ಗಂಟೆಗಳ ಒಳಗಾಗಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ಆಜ್ಞಾಪಿಸಿತ್ತು. ೨೪ ಗಂಟೆಗಳ ಸುಪ್ರೀಂಕೋರ್ಟ್ ಗಡುವಿನ ಪರಿಣಾಮವಾಗಿ ಕಾಂಗ್ರೆಸ್- ಜೆಡಿಎಸ್ ಶಾಸಕರನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಸಾಧ್ಯವಾಗದೆ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಬಳಿಕ ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸಿಜೆಐ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಘ್ವಿ ಅವರುನಾಳೆವರೆಗೆ ಸಮಯ ಕೊಡಿ, ಅಷ್ಟರೊಳಗೆ ಸಭಾಧ್ಯಕ್ಷರು ರಾಜೀನಾಮೆ ಮತ್ತು ಅನರ್ಹತೆ ಬಗೆ ನಿರ್ಧರಿಸುತ್ತಾರೆ ಎಂದು ಹೇಳಿದರು. ಬಂಡಾಯ ಶಾಸಕರು ಸುಪ್ರೀಂಕೋರ್ಟಿನ ಕಳೆದ ವರ್ಷದ ತೀರ್ಪನ್ನು ತಿರುಚುತ್ತಿದ್ದಾರೆ. ಕಳೆದ ವರ್ಷ ಸರ್ಕಾರ ಇರಲಿಲ್ಲ, ಸಮಯದಲ್ಲಿ ವಿಧಾನಸಭಾಧ್ಯಕ್ಷರೂ ಇರಲಿಲ್ಲ. ಆದ್ದರಿಂದ ಹಂಗಾಮೀ ಸಭಾಧ್ಯಕ್ಷರ ನೇಮಕಕ್ಕೆ ಪೀಠ ಆದೇಶ ನೀಡಿತ್ತು ಎಂದೂ ಸಿಂಘ್ವಿ ಹೇಳಿದರು.
ಇದಕ್ಕೆ ಮುನ್ನ ಬಂಡಾಯ ಶಾಸಕರ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಅನರ್ಹತೆಗೆ ಸಂಬಂಧಿಸಿದ ದೂರುಗಳ ಇತ್ಯರ್ಥ ಬಾಕಿ ಇರುವುದು ರಾಜೀನಾಮೆಗಳ ಬಗ್ಗೆ ನಿರ್ಧರಿಸಲು ಯಾವುದೇ ತಡೆಯನ್ನೂ ಒಡ್ಡುವುದಿಲ್ಲ ಎಂದು ವಾದಿಸಿದರು. ’ಇಲ್ಲಿಗೆ ಅರ್ಜಿ ಸಲ್ಲಿಸಿರುವ ಎಲ್ಲ ೧೦ ಮಂದಿ ಶಾಸಕರೂ ತಮ್ಮ ಸ್ವ ಹಸ್ತಕ್ಷರದಲ್ಲಿ ಬರೆದ ರಾಜೀನಾಮೆ ಪತ್ರಗಳನ್ನು ಸಲ್ಲಿಸಿ, ಸಭಾಧ್ಯಕ್ಷರಿಗೆ ತಮ್ಮ ನಿರ್ಧಾರವನ್ನು ವೈಯಕ್ತಿಕವಾಗಿ ತಿಳಿಸಿದ್ದಾರೆ. ೧೦ ಮಂದಿಯ ಪೈಕಿ ಕೇವಲ ಇಬ್ಬರ ವಿರುದ್ಧ ಅನರ್ಹತೆ ಕುರಿತ ದೂರುಗಳಿವೆ. ಉಮೇಶ ಜಾಧವ್ ಅವರು ಮಾರ್ಚ್ ೨೦ರಂದು ರಾಜೀನಾಮೆ ಕೊಟ್ಟಿದ್ದಾರೆ ಮತ್ತು ಅವರ ಅನರ್ಹತೆ ಅರ್ಜಿ ಬಾಕಿ ಇದ್ದರೂ ಏಪ್ರಿಲ್ ೧ರಂದು ಸಭಾಧ್ಯಕ್ಷರು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ರೋಹ್ಟಗಿ ಹೇಳಿದರು. ಸದನಕ್ಕೆ ಹಾಜರಾಗುವಂತೆ ಶಾಸಕರನ್ನು ಬಲಾತ್ಕರಿಸಲು ಸಾಧ್ಯವಿಲ್ಲ. ಶಾಸಕರು ಸಭಾಧ್ಯಕ್ಷರ ಮುಂದೆ, ಮಾಧ್ಯಮಗಳ ಮುಂದೆ ಹಾಜರಾಗಿರುವಾಗ ಇನ್ನಷ್ಟು ತನಿಖೆಯ ಪ್ರಶ್ನೆ ಎಲ್ಲಿ ಬರುತ್ತದೆ? ರಾಜೀನಾಮೆಯನ್ನು ಅನರ್ಹತೆ ಜೊತೆಗೆ ಬೆರಕೆ ಮಾಡಲು ಸಾಧ್ಯವಿಲ್ಲ. ನಾನು ವಿಧಾನಸಭೆಗೆ ಹಾಜರಾಗಲು ಇಚ್ಛಿಸದೇ ಇದ್ದಲ್ಲಿ, ಹಾಗೆ ಮಾಡುವಂತೆ ನನ್ನನ್ನು ಬಲಾತ್ಕರಿಸಬಹುದೇ?’ ಎಂದು ರೋಹ್ಟಗಿ ಪ್ರಶ್ನಿಸಿದರು. ಜುಲೈ ೧೨ರಂದು ೧೦ ಮಂದಿ ಬಂಡಾಯ ಶಾಸಕರ ಅರ್ಜಿಗಳ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮಂಗಳವಾರ ತಮ್ಮನ್ನೂ ಇತರ ಬಂಡಾಯ ಶಾಸಕರ ಜೊತೆ ಸೇರಿಸುವಂತೆ ಕೋರಿ ಸಲ್ಲಿಸಿದ ಶಾಸಕರ ಅರ್ಜಿಯ ವಿಚಾರಣೆಯನ್ನೂ ಈದಿನ ನಡೆಸಿ, ಮೂಲ ಅರ್ಜಿಯಲ್ಲಿ ಅಗತ್ಯ ಮಾರ್ಪಾಡು ಮಾಡಲು ಅವಕಾಶ ನೀಡಿತು೧೬ ಶಾಸಕರ ರಾಜೀನಾಮೆಯಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರವು ವಿಧಾನಸಭೆಯಲ್ಲಿ ಬಹುಮತ ನಷ್ಟದ ಅಪಾಯಕ್ಕೆ ಗುರಿಯಾಗಿ ಬಿಕ್ಕಟ್ಟು ಎದುರಿಸುತ್ತಿತ್ತು. ಸಂವಿಧಾನದ ೩೨ನೇ ವಿಧಿಯ ಅಡಿಯಲ್ಲಿ ಶಾಸಕರು ಸಲ್ಲಿಸಿರುವ ಅರ್ಜಿಗಳ ಪುರಸ್ಕಾರ ಯೋಗ್ಯತೆಯ ಜೊತೆಗೆ, ಶಾಸಕರ ರಾಜೀನಾಮೆ ಅಂಗೀಕರಿಸುವ ಮುನ್ನ ಶಾಸಕರು ಅನರ್ಹತೆ ಪ್ರಕ್ರಿಯೆಗಳನ್ನು ನಡೆಸುವುದು ಸಭಾಧ್ಯಕ್ಷರಿಗೆ ಅನಿವಾರ್ಯವೇ ಎಂಬ ಬಗೆಗೂ ತಾನು ನಿರ್ಧರಿಸುವ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್ ಹೇಳಿತು. ವಿಧಾನಸಭೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದರೆ ತಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಸಲುವಾಗಿ ಮತ್ತು ಪಕ್ಷದ ವಿಪ್ಗೆ ತಮ್ಮನ್ನು ಒಳಪಡಿಸುವ ಸಲುವಾಗಿಯೇ ಸಭಾಧ್ಯಕ್ಷರು ತಮ್ಮ ರಾಜೀನಾಮೆಗಳನ್ನು ಅಂಗೀಕರಿಸಿಲ್ಲ ಎಂಬುದಾಗಿ ಬಂಡಾಯ ಶಾಸಕರ ಪರ ವಕೀಲರು ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು೧೬ ಶಾಸಕರ ಪರ ಸಮಾಪ್ತಿಗೊಳಿಸುತ್ತಾ ವಕೀಲ ರೋಹ್ಟಗಿ ಅವರು ಯಥಾಸ್ಥಿತಿ ಪಾಲನೆಗೆ ಸುಪ್ರೀಂಕೋರ್ಟ್ ನೀಡುವ ನಿರ್ದೇಶನದ ಮುಂದುವರಿಕೆಗೂ ಮನವಿ ಮಾಡಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ ಧವನ್ ಅವರುರಾಜ್ಯ ವಿಧಾನಸಭೆಯಲ್ಲಿ ಗುರುವಾರಕ್ಕೆ ನಿಗದಿಯಾಗಿರುವ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ಮತ್ತು ಚರ್ಚೆಯಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವುದು ಬೇಡ ಎಂದು ಮನವಿ ಮಾಡಿದರು.   ‘ವಿಧಾನಸಭೆಯಲ್ಲಿ ಪೂರ್ಣ ಪ್ರಮಾಣದ ಚರ್ಚೆಯಾಗಲಿ. ಎಲ್ಲ ಶಾಸಕರೂ ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಲುವಾಗಿ ಚರ್ಚೆಯಲ್ಲಿ ಹಾಜರಿರಬೇಕು ಎಂದು ನುಡಿದ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿರುವ ಶಾಸಕರು ತಾವು ೧೦ನೇ ಶೆಡ್ಯೂಲಿನ ಕೆಳಗೆ ಬರುವುದಿಲ್ಲ ತಾವಾಗಿಯೇ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇದನ್ನು ವಿಧಾನಸಭಾಧ್ಯಕ್ಷರು ನಿರ್ಧರಿಸಬೇಕಾಗುತ್ತದೆ ಎಂದು ವಾದಿಸಿದರು. ನ್ಯಾಯಾಲಯವು ಸಭಾಧ್ಯಕ್ಷರು ನಿರ್ಧರಿಸಿದ ಬಳಿಕ ಮಾತ್ರವೇ ಮಧ್ಯಪ್ರವೇಶ ಮಾಡಬಹುದು, ಅದಕ್ಕೆ ಮುನ್ನ ಅಲ್ಲ, ವಿಧಾನಸಭಾಧ್ಯಕ್ಷರು ನಿರ್ಧಾರ ಕೈಗೊಳ್ಳುವುದಕ್ಕೆ ಮೊದಲೇ ನ್ಯಾಯಾಂಗ ಪರಾಮರ್ಶೆ ನಡೆಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.  ‘ರಾಜೀನಾಮೆ ಮತ್ತು ಅನರ್ಹತೆ ವಿಷಯ ಕೋಳಿ ಮೊದಲೋ- ಮೊಟ್ಟೆ ಮೊದಲೋ ಎಂಬ ಪ್ರಶ್ನೆಯಂತೆ ಇದೆ. ರಾಜೀನಾಮೆ ವಿಷಯ ಮೊದಲು ತೀರ್ಮಾನಿಸಿದರೂ ಒಂದೇ, ಅನರ್ಹತೆ ವಿಷಯ ಮೊದಲು ತೀರ್ಮಾನಿಸಿದರೂ ಒಂದೇ. ಯಾವುದನ್ನು ಮೊದಲು ನಿರ್ಧರಿಸಬೇಕು ಎಂದು ಸಂವಿಧಾನ ಹೇಳುವುದಿಲ್ಲ. ರಾಜೀನಾಮೆಯ ಹಿಂದಿನ ಉದ್ದೇಶ ಏನೆಂಬುದು ಮುಖ್ಯವಾಗುತ್ತದೆ. ಸರ್ಕಾರವನ್ನು ಉರುಳಿಸುವುದು ಉದ್ದೇಶವಾಗಿದ್ದರೆ, ಸಂವಿಧಾನದ ವಿಧಿಗಳ ಅಡಿಯಲ್ಲಿ ತನಿಖೆ ನಡೆಸುವುದು ಸಭಾಧ್ಯಕ್ಷರಿಗೆ ಅನಿವಾರ್ಯವಾಗುತ್ತದೆ. ಹೀಗಾಗಿ ರಾಜೀನಾಮೆ ಸ್ವ ಇಚ್ಛೆಯದೋ ಮತ್ತು ನೈಜವೋ ಎಂಬುದಾಗಿ ಸಭಾಧ್ಯಕ್ಷರು ಮೊದಲು ಮನನ ಮಾಡಿಕೊಳ್ಳಬೇಕಾಗುತ್ತದೆ. ಸಭಾಧ್ಯಕ್ಷರ ಅಧಿಕಾರಕ್ಕೆ ಸಂಬಂಧಪಟ್ಟಿರುವ ವಿಷಯದಲ್ಲಿ ಕರ್ನಾಟಕ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡಿಲ್ಲ ಎಂದೂ ಧವನ್ ನುಡಿದರು.  ಇಂತಹ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟಿಗೆ ಹಿಂದೆಯೂ ಅಧಿಕಾರ ವ್ಯಾಪ್ತಿ ಇರಲಿಲ್ಲ, ಈಗಲೂ ಇಲ್ಲ ಎಂದೂ ಧವನ್ ಹೇಳಿದರು. ಶಾಸಕರ ರಾಜೀನಾಮೆಯ ಏಕೈಕ ಉದ್ದೇಶ ಮಂತ್ರಿಗಳಾಗುವುದು. ಸುತ್ತಮುತ್ತ ಏನಾಗುತ್ತಿದೆ ಎಂಬ ಬಗ್ಗೆ ಸಭಾಧ್ಯಕ್ಷರು ಗಮನ ಹರಿಸದೇ ಇರುವುದು ಸಾಧ್ಯವಿಲ್ಲ. ಶಾಸಕರು ಸರ್ಕಾರವನ್ನು ಬೇಟೆಯಾಡುತ್ತಿದ್ದಾರೆ. ಇವರದ್ದು ವೈಯಕ್ತಿಕ ಮನವಿಗಳಲ್ಲ ಎಂದು ರಾಜೀವ ಧವನ್ ನುಡಿದರು.

2019: ಸೂರತ್:ಮೋದಿ ಉಪನಾಮ ಕುರಿತ ಹೇಳಿಕೆಗಾಗಿ ಗುಜರಾತಿನ ಶಾಸಕರೊಬ್ಬರು ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ನ್ಯಾಯಾಲಯವು ಖುದ್ದು ಹಾಜರಾತಿಯಿಂದ ವಿನಾಯ್ತಿ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೧೦ಕ್ಕೆ ಮುಂದೂಡಿತು. ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಿಎಚ್ ಕಪಾಡಿಯಾ ಅವರ ನ್ಯಾಯಾಲಯವು ಕಳೆದ ವಾರ ಕ್ರಿಮಿನಲ್ ಮಾನನಷ್ಟ ಖಟ್ಲೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೫೦೦ರ ಅಡಿಯಲ್ಲಿ ತಮ್ಮ ಮುಂದೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು.  ಪ್ರಕರಣವು ವಿಚಾರಣೆಗೆ ಬಂದಾಗ, ರಾಹುಲ್ ಗಾಂಧಿಯವರ ವಕೀಲ ಕಿರಿಟ್ ಪಾನ್ವಾಲಾ ಅವರು ತಮ್ಮ ಕಕ್ಷಿದಾರರಿಗೆ ಕೆಲವು ದಿನಗಳ ಹಿಂದಷ್ಟೇ ಸಮನ್ಸ್ ತಲುಪಿದ್ದು, ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣ ಇಂತಹ ಅಲ್ಪಾವಧಿಯ ನೋಟಿಸ್ ಬಂದಾಗ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಖುದ್ದು ಹಾಜರಾತಿಯಿಂದ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದರು.  ನ್ಯಾಯಾಲಯವು ಮನವಿಯನ್ನು ಪುರಸ್ಕರಿಸಿ ಖುದ್ದು ಹಾಜರಿಯಿಂದ ವಿನಾಯ್ತಿ ನೀಡಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೧೦ಕ್ಕೆ ನಿಗದಿ ಪಡಿಸಿತು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೯ ಮತ್ತು ೫೦೦ರ ಅಡಿಯಲ್ಲಿ ಏಪ್ರಿಲ್ ೧೬ರಂದು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಖಟ್ಲೆಯ ಮೇಲೆ ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು.  ಎಲ್ಲ ಕಳ್ಳರೂ ಮೋದಿ ಉಪನಾಮವನ್ನು ಹೇಗೆ ಹೊಂದಿರುತ್ತಾರೆ ಎಂಬ ಹೇಳಿಕೆ ಮೂಲಕ ರಾಹುಲ್ ಗಾಂಧಿಯವರು ಸಂಪೂರ್ಣ ಮೋದಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಸೂರತ್ (ಪಶ್ಚಿಮ) ಕ್ಷೇತ್ರದ ಶಾಸಕ ತಮ್ಮ ದೂರಿನಲ್ಲಿ ಪ್ರತಿಪಾದಿಸಿದ್ದರು.  ಕರ್ನಾಟಕದ ಕೋಲಾರದಲ್ಲಿ ಏಪ್ರಿಲ್ ೧೩ರಂದು ನಡೆದ ಚುನಾವಣಾ ಪ್ರಚಾರದ ವೇಳೆಯಲ್ಲಿ ರಾಹುಲ್ ಗಾಂಧಿಯವರುನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ... ಎಲ್ಲರೂ ಹೇಗೆ ಮೋದಿ ಎಂಬ ಸಾಮಾನ್ಯ ಉಪನಾಮ ಹೊಂದಿರುತ್ತಾರೆ? ಎಲ್ಲ ಕಳ್ಳರೂ ಮೋದಿ ಉಪನಾಮ ಹೊಂದಿರುವುದು ಹೇಗೆ?’ ಎಂಬುದಾಗಿ ಪ್ರಶ್ನಿಸಿದ್ದನ್ನು ಗುಜರಾತ್ ಶಾಸಕ ಉಲ್ಲೇಖಿಸಿದ್ದರು. ಹಿಂದಿನ ವಾರ ಅಹಮದಾಬಾದ್ ಡಿಸ್ಟ್ರಿಕ್ಟ್ ಕೋಆಪರೇಟಿವ್ ಬ್ಯಾಂಕ್ ಮತ್ತು ಅದರ ಅಧ್ಯಕ್ಷ ಅಜಯ್ ಪಟೇಲ್ ಅವರು ಕಾಂಗ್ರೆಸ್ ನಾಯಕ ಬ್ಯಾಂಕಿನ ಹೆಸರಿಗೆ ಅಪಖ್ಯಾತಿ ಬರುವಂತೆ ಮಾಡಿದ ಟ್ವೀಟಿಗಾಗಿ ದಾಖಲಿಸಿದ್ದ ಇನ್ನೊಂದು ಮಾನನಷ್ಟ ಖಟ್ಲೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಅಹಮದಾಬಾದ್ ನ್ಯಾಯಾಲಯದ ಮುಂದೆ ಹಿಂದಿನ ವಾರ ಹಾಜರಾಗಿದ್ದರು.
ಅಹಮದಾಬಾದಿನ ಇನ್ನೂ ಒಂದು ಕ್ರಿಮಿನಲ್ ಮಾನನಷ್ಟ ಮೊಕ್ಕದಮೆಯಲ್ಲಿ ಕಳೆದ ವಾರ ಮೆಟ್ರೋಪಾಲಿಟನ್ ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ಕೇಂದ್ರ ಸಚಿವ ಅಮಿತ್ ಶಾ ಅವರನ್ನುಕೊಲೆ ಆರೋಪಿ ಎಂಬುದಾಗಿ ಹೇಳಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು.



No comments:

Post a Comment