Monday, July 15, 2019

ಇಂದಿನ ಇತಿಹಾಸ History Today ಜುಲೈ 15

2019: ಶ್ರೀಹರಿಕೋಟ (ಆಂಧ ಪ್ರದೇಶ): ಆಂಧ್ರಪ್ರದೇಶದ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ನಡೆಯಬೇಕಾಗಿದ್ದ ಚಂದ್ರಯಾನ - ಉಡ್ಡಯನವನ್ನು ತಾಂತ್ರಿಕ ಅಡಚಣೆ ಪರಿಣಾಮವಾಗಿ ಈದಿನ  ಸ್ಥಗಿತಗೊಳಿಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಕಟಿಸಿತು. ನಿಗದಿ ಪಡಿಸಲಾಗಿದ್ದ ಮಾನದಂಡಕ್ಕೆ ಅನುಗುಣವಾಗಿ ರಾಕೆಟ್ ಕಾರ್ ನಿರ್ವಹಿಸುತ್ತಿಲ್ಲ ಎಂಬುದು ಕ್ರಯೋಜನಿಕ್ ಎಂಜಿನ್ಗೆ ಇಂಧನ ತುಂಬುತ್ತಿದ್ದ ವೇಳೆಯಲ್ಲಿ ಪತ್ತೆಯಾಯಿತು. ಹೀಗಾಗಿ ನಸುಕಿನ .೫೧ ಗಂಟೆಗೆ ನಡೆಯಬೇಕಾಗಿದ್ದ ರಾಕೆಟ್ ಉಡಾವಣೆಯ ಕ್ಷಣಗಣನೆಯನ್ನು ೫೬ ನಿಮಿಷ ಮುಂಚಿತವಾಗಿ ನಿಲ್ಲಿಸಿ, ಚಂದ್ರಯಾನ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಇಸ್ರೋ ತಿಳಿಸಿತು.  ಉಡ್ಡಯನಕ್ಕೆ ಮೊದಲೇ ಸಮಸ್ಯೆ  ಪತ್ತೆಯಾದ್ದು ನಮ್ಮ ಅದೃಷ್ಟ. ನಾವು ಪರಿಸ್ಥಿತಿಯ ಮೇಲೆ ಪೂರ್ಣ ಹತೋಟಿ ಹೊಂದಿದ್ದೇವೆ. ರಾಕೆಟ್ ಮತ್ತು ಉಪಗ್ರಹ ಸುರಕ್ಷಿತವಾಗಿದೆ ಎಂದು ಇಸ್ರೋ ಮೂಲ ಹೇಳಿತು. ಆದಷ್ಟೂ ಶೀಘ್ರವಾಗಿ ಚಂದ್ರಯಾನಕ್ಕೆ ಪರಿಷ್ಕೃತ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಇಸ್ರೋ ಹೇಳಿತು. ಆರ್ಬಿಟರ್ ಉಪಗ್ರಹ, ಲ್ಯಾಂಡರ್ ಮತ್ತು ರೋವರ್ನ್ನು ಹೊತ್ತ ಜಿಎಸ್ಎಲ್ವಿ ಮಾರ್ಕ್ ರಾಕೆಟ್ ನಸುಕಿನ .೫೧ ಗಂಟೆಗೆ ದೇಶದ ಏಕೈಕ ಉಡ್ಡಯನ ಕೇಂದ್ರವಾದ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಗಗನಕ್ಕೆ ಚಿಮ್ಮಬೇಕಿತ್ತು. ಆದರೆ ಕ್ಷಣಗಣನೆಯು ನಿಗದಿತ ಸಮಯಕ್ಕಿಂತ ೫೬ ನಿಮಿಷ ಮುಂಚಿತವಾಗಿಯೇ ನಿಂತು ಹೋಯಿತು. ತಜ್ಞರ ತಂಡವೊಂದು ಎಲ್ಲಿ ಏನು ತಪ್ಪಾಯಿತು ಎಂದು ಪರಿಶೀಲಿಸಲಿದೆ ಮತ್ತು ಅಡಚಣೆ ನಿವಾರಣೆಗೆ ಸೂಕ್ತ ಮಾರ್ಗೋಪಾಯಗಳನ್ನು ಸೂಚಿಸಲಿದೆ. ನಿರ್ದಿಷ್ಟವಾಗಿ ಏನು ತಪ್ಪಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸುಮಾರು ಒಂದು ವಾರ ಬೇಕಾಗಬಹುದು ಎಂದು ಇಸ್ರೋ ಮೂಲ ಹೇಳಿತುಸಮಸ್ಯೆಯ ಬೇರನ್ನು ಗುರುತಿಸಲು ನಾವು ರಾಕೆಟನ್ನು ಬಿಚ್ಚಬೇಕಾಗುತ್ತದೆ. ಅದಕ್ಕೂ ಮುನ್ನ ಇಂಧನವನ್ನು ಖಾಲಿ ಮಾಡಬೇಕು. ಬಳಿಕ ರಾಕೆಟನ್ನು ಹೆಚ್ಚಿನ ತನಿಖೆಗೆ ಒಳಪಡಿಸಬೇಕಾಗುತ್ತದೆ. ಪ್ರಕ್ರಿಯೆಗೆ ಕನಿಷ್ಠ ೧೦ ದಿನ ಬೇಕಾಗುತ್ತದೆ. ಬಳಿಕ ಉಡಾವಣಾ ಕಾಲಸೂಚಿ ನಿಗದಿ ಪಡಿಸಬಹುದು ಎಂದು ಮೂಲ ತಿಳಿಸಿತು. ಚಂದ್ರಯಾನ ಉಡಾವಣೆಗೆ ಮಾಸಾಂತ್ಯದವರೆಗೂ ನಮಗೆ ಅವಕಾಶಗಳಿವೆ. ಜುಲೈ ತಿಂಗಳಲ್ಲಿ ಜುಲೈ ೧೫, ಜುಲೈ ೧೬ ಹಾಗೂ ಜುಲೈ ೨೯ ಮತ್ತು ೩೦ರಂದು ಅವಕಾಶಗಳಿದ್ದವು ಎಂದು ಮೂಲ ಹೇಳಿತು,೮೫೦ ಕಿಗ್ರಾಂ ತೂಕದ ಬಾಹ್ಯಾಕಾಶ ನೌಕೆಯು ಆರ್ಬಿಟರ್ ಉಪಗ್ರಹ, ಲ್ಯಾಂಡರ್ ಮತ್ತು ರೋವರ್ ಮೂರನ್ನು ಒಯ್ಯಬೇಕಿತ್ತು. ನಸುಕಿನ .೫೧ ಗಂಟೆಗೆ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಗೆ ಸಮಯ ನಿಗದಿಪಡಿಸಲಾಗಿತ್ತು.  ೨೦೦೮ರಲ್ಲಿ ಉಡಾವಣೆ ಮಾಡಲಾಗಿದ್ದ ಚಂದ್ರಯಾನ- ಯೋಜನೆಯ ಚೊಚ್ಚಲ ಯಶಸ್ಸಿನ ಸ್ಫೂರ್ತಿಯಿಂದ ಚಂದ್ರಯಾನ - ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಚಂದ್ರಯಾನ- ಬಾಹ್ಯಾಕಾಶ ನೌಕೆಯು ಚಂದ್ರನಿಗೆ ,೪೦೦ ಪ್ರದಕ್ಷಿಣೆ ಹಾಕಿತ್ತು. ೨೦೦೯ರ ಆಗಸ್ಟ್ ೨೯ರವರೆಗೆ ೩೧೨ ದಿನಗಳ ಕಾಲ ಅದು ಕಾರ್ಯ ನಿರ್ವಹಿಸಿತ್ತು.  ೯೭೮ ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ - ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ - ಜಿಎಸ್ಎಲ್ವಿ - ಎಂಕೆ೩-ಎಂ೧ ಮೂಲಕ ಗಗನಕ್ಕೆ ಏರಿ ಬಾಹ್ಯಾಕಾಶದಲ್ಲಿ ಸಾಗಿ ೫೪ ದಿನಗಳ ಬಳಿಕ ಭೂಮಿ ಉಪಗ್ರಹವಾದ ಚಂದ್ರನ ಅಂಗಳದಲ್ಲಿ ನಿಗದಿತ ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ಲ್ಯಾಂಡರ್ ಮತ್ತು ರೋವರ್ನ್ನು ಇಳಿಸಬೇಕಾಗಿತ್ತು. ಹಾಗೆಯೇ ಆರ್ಬಿಟರ್ ಉಪಗ್ರಹವನ್ನು ಚಂದ್ರ ಕಕ್ಷೆಯಲ್ಲಿ ನಿಲ್ಲಿಸಬೇಕಾಗಿತ್ತು.  ಹಿಂದಿನ ದಿನ ಬೆಳಗ್ಗೆ .೫೧ಕ್ಕೆ ಚಂದ್ರಯಾನ - ಉಡಾವಣೆಗೆ ಕ್ಷಣಗಣನೆ ಆರಂಭವಾಗಿತ್ತು. ಮತ್ತು ವಿಜ್ಞಾನಿಗಳು ಯಶಸ್ವೀ ಉಡಾವಣೆಗಾಗಿ ಭರದ ಸಿದ್ಧತೆ ನಡೆಸಿದ್ದರುಚಂದ್ರಯಾನ - ಯೋಜನೆಯ ಯಶಸ್ಸಿನೊಂದಿಗೆ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡುವುದರೊಂದಿಗೆ ಚಂದ್ರದಲ್ಲಿ ಅನ್ವೇಷಣೆಗಾಗಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ೪ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನ ದಕ್ಷಿಣ ಧ್ರುವದವರೆಗಿನ ,೮೪,೦೦೦ ಕಿಮೀ ದೂರದ ಪಯಣಕ್ಕಾಗಿ ಭಾರತ ೧೪೦ ಮಿಲಿಯನ್ (೧೪೦೦ ಲಕ್ಷ) ಡಾಲರ್ ಹಣವನ್ನು ವೆಚ್ಚ ಮಾಡಿದೆಅಮೆರಿಕವು ೨೫ ಬಿಲಿಯನ್ ಡಾಲರುಗಳು ಅಂದರೆ ಈಗಿನ ದರದಲ್ಲಿ ೧೦೦ ಬಿಲಿಯನ್ ಡಾಲರ್ಗಳಷ್ಟು ವೆಚ್ಚ ಮಾಡಿ ೧೫ ಅಪೋಲೋ ಯಾನಗಳನ್ನು ನಡೆಸಿದೆ. ಇವುಗಳಲ್ಲಿ ಆರು ಯಾನಗಳು ಮೊತ್ತ ಮೊದಲ ಗಗನಯಾತ್ರಿ ಆರ್ಮ್ಸ್ಟ್ರಾಂಗ್ ಸೇರಿದಂತೆ ಹಲವಾರು ಗಗನಯಾತ್ರಿಗಳನ್ನು ಒಳಗೊಂಡ ಚಂದ್ರಯಾಗಳಾಗಿವೆ.  ಚೀನಾ ಮತ್ತು ರಶ್ಯಾ ಕೂಡಾ ಕೋಟಿ ಗಟ್ಟಲೆ ಡಾಲರುಗಳನ್ನು ಚಂದ್ರ ಯಾನ ಮತ್ತು ಚಂದ್ರನ ಅನ್ವೇಷಣೆಗಾಗಿ ವೆಚ್ಚ ಮಾಡಿದ್ದವು.

2019: ನವದೆಹಲಿ: ಬಿಜೆಪಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಸರ್ಕಾರವು ಮಂಡಿಸಿದ ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಿಷ್ಠಗೊಳಿಸುವ ತಿದ್ದುಪಡಿ ಮಸೂದೆಯನ್ನು  ಆಡಳಿತ ಸದಸ್ಯರು ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವಣ ಭಾರೀ ವಾಕ್ಸಮರದ ಬಳಿಕ ಲೋಕಸಭೆಯು ಅಂಗೀಕರಿಸಿತು. ವಿದೇಶಗಳಲ್ಲಿಯೂ ಭಾರತೀಯರ ಮೇಲೆ ನಡೆಯುವ ದಾಳಿಯ ತನಿಖೆ ನಡೆಸಲು ತಿದ್ದುಪಡಿ ಮಸೂದೆಯು ರಾಷ್ಟ್ರೋ ತನಿಖಾ ಸಂಸ್ಥೆಗೆ (ಎನ್ಐಎ) ವಿಶೇಷ ಅಧಿಕಾರವನ್ನು ನೀಡುತ್ತದೆ. ಎನ್ಐಎ (ತಿದ್ದುಪಡಿ) ಮಸೂದೆ ೨೦೧೯ನ್ನು ಸರ್ಕಾರ ಯಾವ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ ಧಾರ್ಮಿಕ ನೆಲೆಯಲ್ಲೂ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಯಾಗಿ ಪ್ರತಿಪಾದಿಸಿದರು. ಆರೋಪಿಯು ಯಾವುದೇ ಮತ, ಧರ್ಮಕ್ಕೆ ಸೇರಿರಲಿ, ಜಾತ್ಯತೀತವಾಗಿ ಭಯೋತ್ಪಾದನೆಯನ್ನು ಮಟ್ಟಹಾಕುವುದೇ ಸರ್ಕಾರದ ಗುರಿಯಾಗಿದೆ ಎಂದು ಸಂದರ್ಭದಲ್ಲಿ ಅಮಿತ್ ಶಾ ಹೇಳಿದರು. ಎನ್ ಐಎ ತಿದ್ದುಪಡಿ ಮಸೂದೆಯನ್ನು ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಭಯೋತ್ಪಾದನಾ ನಿಗ್ರಹದ ಪೋಟಾ ಕಾಯ್ದೆಯನ್ನು ರದ್ದು ಮಾಡಿರುವುದಾಗಿ ವಾಗ್ದಾಳಿ ನಡೆಸಿದ ಶಾ, ಇದು ದುರುಪಯೋಗ ಅಲ್ಲ, ಆದರೆ ತಮ್ಮ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಳ್ಳಲು ಮಾಡಿದ್ದು ಎಂದು ಚಾಟಿ ಬೀಸಿದರು.

2019: ನವದೆಹಲಿ: ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ, ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ನೀರಜ್ ಶೇಖರ್ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದವು. ಸಮಾಜವಾದಿ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ನೀರಜ್ ಶೇಖರ್ (೫೦ವರ್ಷ) ಅವರ ಅವಧಿ ಮುಂದಿನ ವರ್ಷ ಅಂತ್ಯಗೊಳ್ಳಲಿತ್ತು. ಮೂಲಗಳ ಪ್ರಕಾರ, ನೀರಜ್ ಅವರನ್ನು ಬಿಜೆಪಿ ಉತ್ತರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು. ೨೦೦೭ರಲ್ಲಿ ನೀರಜ್ ಶೇಖರ್ ತಮ್ಮ ತಂದೆ ಚಂದ್ರಶೇಖರ್ ಅವರ ಕ್ಷೇತ್ರವಾದ ಬಲ್ಲಿಯಾದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ  ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ೨೦೦೯ರಲ್ಲಿಯೂ ಪುನರಾಯ್ಕೆಗೊಂಡಿದ್ದರು.

2019: ಬೆಂಗಳೂರು: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಾ ಸಾಗಿದ್ದ ಕರ್ನಾಟಕದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅಳಿವು ಉಳಿವಿಗೆ ಸಂಬಂಧಿಸಿದಕುತೂಹಲಕ್ಕೆ ಕಡೆಗೂ ತೆರೆ ಬಿದ್ದಿತು. ೧೬ ಮಂದಿ ಅತೃಪ್ತ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಇಳಿದ ಮೈತ್ರಿ ಸರ್ಕಾರದ ವಿಶ್ವಾಸ ಮತ ಯಾಚನೆಗೆ ಮುಹೂರ್ತ ನಿಗದಿಯಾಯಿತು. 2019 ಜುಲೈ ೧೮ರ ಗುರುವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.  ಜುಲೈ 17ರ ಗುರುವಾರ ಬೆಳಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ವಿಶ್ವಾಸ ಮತ ಯಾಚನೆ ನಿರ್ಣಯ ಮಂಡಿಸಲಿದ್ದಾರೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸದನದಲ್ಲಿ ಘೋಷಿಸಿದರು. ವಿರೋಧ ಪಕ್ಷಗಳ ಬೇಡಿಕೆಯಂತೆ ಅಲ್ಲಿಯವರೆಗೆ ಬೇರೆ ಯಾವುದೇ ಕಲಾಪವನ್ನೂ ನಡೆಸಲಾಗುವುದಿಲ್ಲ ಎಂದು ಹೇಳಿದ ವಿಧಾನಸಭಾಧ್ಯಕ್ಷರು ಸದನದ ಕಲಾಪಗಳನ್ನು  ಮುಂದೂಡಿದರು. ಇದಕ್ಕೂ ಮುನ್ನ,  ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನೇತೃತ್ವದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಶ್ವಾಸ ಮತ ಕೋರಿಕೆ ಬಗ್ಗೆ ನಿರ್ಧರಿಸಲಾಗಿತ್ತು. ಕಲಾಪ ಸಮಿತಿ ಸಭೆಯಲ್ಲಿ ಈದಿನವೇ ವಿಶ್ವಾಸ ಮತ ಯಾಚನೆ ಮಾಡುವಂತೆ ಸೂಚಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಆದರೆ ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ  ಜುಲೈ 16ರ ಮಂಗಳವಾರ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದ ಹಿನ್ನೆಲೆಯಲ್ಲಿ ಜುಲೈ ೧೮ರ ಗುರುವಾರ ಬೆಳಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚನೆ ಮಾಡುವರು ಎಂದು ವಿಧಾನಸಭಾಧ್ಯಕ್ಷರು ಸಭೆಯಲ್ಲಿ ಸ್ಪಷ್ಟ ಪಡಿಸಿದರು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಭೆಯ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದರು. ವಿಶ್ವಾಸಮತ ದಿನಾಂಕ ನಿಗದಿ ಪಡಿಸಿದ  ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ಗಣೇಶ್ ಹುಕ್ಕೇರಿ, ಕೆಜೆ ಜಾರ್ಜ್, ಡಾ.ಜಿ.ಪರಮೇಶ್ವರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸುನಿಲ್ ಕುಮಾರ್, ಗೋವಿಂದ ಕಾರಜೋಳ, ಜೆಸಿ ಮಾಧುಸ್ವಾಮಿ, ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಿದ್ದರು. ಮುಖ್ಯಮಂತ್ರಿಯವರ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಗುರುವಾರಕ್ಕೆ ಮುಂದೂಡಿಕೆಯಾದ ಕಾರಣ, ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇನ್ನೂ ಮೂರು ದಿನಗಳ ಕಾಲ ಮುಂದುವರಿಯುವುದು ಇದೀಗ ಖಚಿತವಾಯಿತು. ಮೈತ್ರಿಕೂಟ ಸರ್ಕಾರದ ಅಂಗಪಕ್ಷಗಳ ಸುಮಾರು ೧೬ ಮಂದಿ ಶಾಸಕರು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಕಳೆದ ವಾರ ರಾಜೀನಾಮೆ ಪತ್ರಗಳನ್ನು ಸಲ್ಲಿಸದ ಬಳಿಕ ಮೈತ್ರಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತಾವು ಸದನದಲ್ಲಿ ವಿಶ್ವಾಸ ಮತ ಯಾಚಿಸುವುದಾಗಿ ಅಚ್ಚರಿಯ ಪ್ರಕಟಣೆ ಮಾಡಿದ್ದರು. ೨೨೪ ಸದಸ್ಯ ಬಲದ ರಾಜ್ಯ ವಿಧಾನ ಸಭೆಯಲ್ಲಿ ೧೬ ಸದಸ್ಯರ ರಾಜೀನಾಮೆಗಳು ಅಂಗೀಕೃತವಾದರೆ ವಿಧಾನಸಭೆಯ ಸದಸ್ಯ ಬಲ ೨೦೯ಕ್ಕೆ ಇಳಿಯಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ೧೦೫ ಸದಸ್ಯರ ಬೆಂಬಲ ಬೇಕಾಗುತ್ತದೆ. ಆದರೆ ಮೈತ್ರಿಕೂಟದ ಬಳಿ ಉಳಿಯುವುದು ೧೦೧ ಮಂದಿ ಶಾಸಕರು ಮಾತ್ರ. ವಿರೋಧ ಪಕ್ಷವಾಗಿರುವ ಭಾರತೀಯ ಜನತಾಪಕ್ಷವು (ಬಿಜೆಪಿ) ೧೦೫ ಶಾಸಕರನ್ನು ಹೊಂದಿದ್ದು, ಇಬ್ಬರು ಪಕ್ಷೇತರ ಶಾಸಕರ ಬೆಂಬಲದ ಭರವಸೆಯನ್ನೂ ಪಡೆದಿದೆ. ಕರ್ನಾಟಕ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸಲು ಒಪ್ಪದ ಪರಿಣಾಮವಾಗಿರಾಜೀನಾಮೆ ಪ್ರಹಸನದ ಬಳಿಕವೂ ಮೈತ್ರಿ ಸರ್ಕಾರ ಬಚಾವ್ ಆಗಿದೆ. ಕಾನೂನಿನ ಪ್ರಕಾರ ಶಾಸಕರು ಸ್ವ ಇಚ್ಛೆಯಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ರಾಜೀನಾಮೆ ನೀಡಿದ್ದಾರೆ ಎಂಬುದು ತಮಗೆ ಖಚಿತವಾಗಬೇಕು ಎಂಬುದಾಗಿ ಸಭಾಧ್ಯಕ್ಷರು ಪ್ರತಿಪಾದಿಸಿದ್ದರು. ತಮ್ಮ ರಾಜೀನಾಮೆಯನ್ನು ಅಂಗೀಕರಿಸದೇ ಇರುವ ಸಭಾಧ್ಯಕ್ಷರ ಕ್ರಮವನ್ನು ಪ್ರಶ್ನಿಸಿ ೧೦ ಮಂದಿ ಶಾಸಕರು ಸುಪ್ರೀಂಕೋರ್ಟಿನ ಮೊರೆ ಹೊಕ್ಕಿದ್ದಾರೆ.  ಮೊದಲಿಗೆ ಸುಪ್ರೀಂಕೋರ್ಟ್ ರಾಜೀನಾಮೆಗಳ ಬಗ್ಗೆ ತತ್ ಕ್ಷಣ ನಿರ್ಧಾರ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ನಿರ್ದೇಶಿಸಿದರೂ, ಸಭಾಧ್ಯಕ್ಷರ ವಾದ ಆಲಿಸಿದ ಬಳಿಕ ಬಂಡಾಯ ಶಾಸಕರ ಅನರ್ಹತೆ ಅಥವಾ ರಾಜೀನಾಮೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸಭಾಧ್ಯಕ್ಷರಿಗೆ ನಿರ್ದೇಶಿಸಿ, ಪ್ರಕರಣದ ವಿಚಾರಣೆಯನ್ನು ತಾನು ಜುಲೈ ೧೬ರ ಮಂಗಳವಾರ ನಡೆಸುವುದಾಗಿ ತಿಳಿಸಿತ್ತು. ಮಧ್ಯೆ ಇನ್ನೂ ಐವರು ಅತೃಪ್ತ ಶಾಸಕರು ಸುಪ್ರೀಂಕೋರ್ಟಿನ ಮೊರೆಹೊಕ್ಕು ೧೦ಮಂದಿ ಶಾಸಕರಿಗೆ ನೀಡಿದ ಪರಿಹಾರದ ಆದೇಶವನ್ನು ತಮಗೂ ಅನ್ವಯಿಸಬೇಕು ಎಂದು ಕೋರಿದ್ದಾರೆ. ಈದಿನ   ಅತೃಪ್ತ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜುಲೈ 16ರ ಮಂಗಳವಾರ ಅವುಗಳ ವಿಚಾರಣೆ ನಡೆಸುವುದಾಗಿ ಹೇಳಿತು. ರಾಜೀನಾಮೆಗಳ ಪರಿಣಾಮವಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ತತ್ ಕ್ಷಣವೇ ರಾಜೀನಾಮೆ ನೀಡಬೇಕು ಎಂಬುದಾಗಿ ಬಿಜೆಪಿ ಪ್ರಚಾರಾಂದೋಲನ ನಡೆಸಿತ್ತು. ಅದಕ್ಕೆ ಒಪ್ಪದ ಮುಖ್ಯಮಂತ್ರಿ ಕಳೆದ ವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಎದುರಿಸುವ ಘೋಷಣೆ ಮಾಡಿದ್ದರು. ಆದರೆ ವಿಶ್ವಾಸ ಮತದ ಸಮಯ ನಿಗದಿ ಕುರಿತ ನಿರ್ಣಯವನ್ನು ಯಡಿಯೂರಪ್ಪ ಅವರೂ ಸದಸ್ಯರಾಗಿರುವ ಕಲಾಪ ಸಲಹಾ ಸಮಿತಿ ಕೈಗೊಳ್ಳಬೇಕಾಗುತ್ತದೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದರುಕಾಂಗ್ರೆಸ್ ಪಕ್ಷವು ವಾರಾಂತ್ಯದಲ್ಲಿ ಬಂಡಾಯ ಶಾಸಕರು ತಮ್ಮ ರಾಜೀನಾಮೆಗಳನ್ನು ಹಿಂಪಡೆಯುವಂತೆ ಮಾಡಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿತು. ಒಂದು ಹಂತದಲ್ಲಿ ಸಂಧಾನ ಪ್ರಕ್ರಿಯೆಯಲ್ಲಿ ಸ್ವಲ್ಪ ಪ್ರಗತಿಯಾದಂತೆ ಕಂಡು ಬಂದು ಶಾಸಕ ಎಂಟಿಬಿ ನಾಗರಾಜ್ ತಮ್ಮ ನಿಲುವು ಬದಲಾಯಿಸಿರುವುದಾಗಿಯೂ ಒಂದು ಹಂತದಲ್ಲಿ ಘೋಷಿಸಿದ್ದರು. ಆದರೆ ಪಕ್ಷ ನಾಯಕರಿಗೆ ಕೈಕೊಟ್ಟ ನಾಗರಾಜ್ ವಿಶೇಷ ವಿಮಾನವನ್ನು ಏರಿ ಇತರ ೧೨ ಮಂದಿ ಅತೃಪ್ತ ಶಾಸಕರ ಜೊತೆ ಸೇರಲು ಮುಂಬೈಗೆ ತೆರಳಿದ್ದರು.ಮುಂಬೈಯಲ್ಲಿ ಪಂಚತಾರಾ ಹೋಟೆಲಿನಲ್ಲಿ ವಸತಿ ಹೂಡಿದ ಕಾಂಗ್ರೆಸ್- ಜನತಾದಳ ಬಂಡಾಯ ಶಾಸಕರು ಮುಂಬೈ ಪೊಲೀಸರಿಗೆ ದೂರೊಂದನ್ನು ಸಲ್ಲಿಸಿ ತಮಗೆ ಆಡಳಿತಾರೂಢ ಕಾಂಗ್ರೆಸ್ಸಿನಿಂದ ಬೆದರಿಕೆ ಎಂದು ತಿಳಿಸಿದ್ದಲ್ಲದೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಯಾರೇ ನಾಯಕರನ್ನೂ ಭೇಟಿ ಮಾಡಲು ಮನಸ್ಸಿಲ್ಲ ಎಂದು ತಿಳಿಸಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆಯೂ ಕೋರಿದರು. ತಾವು ರಾಜೀನಾಮೆ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದೂ ನಾಗರಾಜ್ ಅವರು ಮುಂಬೈಯಲ್ಲಿ ಪತ್ರಕರ್ತರಿಗೆ ತಿಳಿಸಿದರು. ‘ನಾನು ಮತ್ತು ಸುಧಾಕರ್ ಒಟ್ಟಿಗೆ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಹಿಂಪಡೆಯಲು ಅವರ ಮನವೊಲಿಸಲು ಯತ್ನಿಸುವೆ, ಅವರು ಒಪ್ಪಿದರೆ ಮಾತ್ರ ರಾಜೀನಾಮೆ ವಾಪಸ್ ಪಡೆಯುವೆ ಎಂದು ನಾನು ಹೇಳಿದ್ದೆ. ಈಗ ಕೂಡಾ ಸುಧಾಕರ್ ಅವರ ಜೊತೆಗೆ ಮಾತನಾಡಿದ ಬಳಿಕವೇ ನನ್ನ ನಿರ್ಧಾರ. ರಾಜೀನಾಮೆ ವಾಪಸ್ ಪ್ರಶ್ನೆಯೇ ಇಲ್ಲ ಎಂದು ನಾಗರಾಜ್ ನುಡಿದರು. ಇನ್ನೊಬ್ಬ ಬಂಡಾಯ ಶಾಸಕ ಎಸ್.ಟಿ. ಸೋಮಶೇಖರ್ ಅವರೂ ಮುಂಬೈಯಲ್ಲಿ ನಾಗರಾಜ್ ಅಭಿಪ್ರಾಯವನ್ನು ಪ್ರತಿಧ್ವನಿಸಿದರು. ’ನಾವು ಒಟ್ಟಾಗಿದ್ದೇವೆ ಮತ್ತು ನಾವು ನಮ್ಮ ರಾಜೀನಾಮೆಗಳನ್ನು ಹಿಂಪಡೆಯುವುದಿಲ್ಲ ಎಂದು ಅವರು ಹೇಳಿದರು.

2019: ಬೆಂಗಳೂರು: ಸಹಸ್ರಾರು ಜನರಿಗೆ ವಂಚನೆ ಮಾಡಿ ಬಹುಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಎಂಎ ಸಮೂಹ ಕಂಪೆನಿಗಳ ಮಾಲೀಕ ಮೊಹಮ್ಮದ್ ಮನ್ಸೂರ್ ಅಲಿ ಖಾನ್ ಈದಿನ  ಹೊಸದಾಗಿ ಇನ್ನೊಂದು ವಿಡಿಯೋ ಬಿಡುಗಡೆ ಮಾಡಿದ.  ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿರುವ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್  ೨೪ ಗಂಟೆಯೊಳಗೆ ಬೆಂಗಳೂರಿಗೆ ವಾಪಸ್ ಬರುವುದಾಗಿ ಹೊಸ ವಿಡಿಯೋದಲ್ಲಿ ತಿಳಿಸಿದ.  ‘ಆದರೆ ಪೊಲೀಸರು ನನಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡುತ್ತಾರಾ?’ ಎಂದು ಪ್ರಶ್ನಿಸಿದ.  ‘ಭಾರತಕ್ಕೆ ಕೂಡಲೇ ಬರುತ್ತೇನೆ. ಯಾರು ಯಾರಿಗೆ ಹಣವನ್ನು ಕೊಟ್ಟಿದ್ದೇನೆ. ಅದರ ಸಂಪೂರ್ಣ ವಿವರ ನೀಡುತ್ತೇನೆ. ಭಾರತದಲ್ಲಿರುವ ನನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು, ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ಮನ್ಸೂರ್ ವಿಡಿಯೋದಲ್ಲಿ ಹೇಳಿದ.  ‘ನಾನು ಹಲವಾರು ದಿನಗಳಿಂದ ಅಸ್ವಸ್ಥನಾಗಿದ್ದೇನೆ. ನನಗೆ ಯಾರು ಕೂಡ ಹೆಚ್ಚು ಫೋನ್ ಮಾಡಬೇಡಿ ಎಂದೂ ಮನ್ಸೂರ್ ಮನವಿ ಮಾಡಿಕೊಂಡ. ಬಂಡವಾಳ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಮನ್ಸೂರ್ ಅಲಿ ಖಾನನನ್ನು ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಲು ಜಾರಿ ನಿರ್ದೇಶನಾಲಯ (.ಡಿ) ನಿರ್ಧರಿಸಿತ್ತು. ಜೂನ್ ೮ರಿಂದ ಮನ್ಸೂರ್ ತಲೆಮರೆಸಿಕೊಂಡಿದ್ದು, ಪ್ರಕರಣ ತನಿಖೆ ನಡೆಸುತಿರುವ ವಿಶೇಷ ತನಿಖಾ ತಂಡವು (ಎಸ್ ಐಟಿ)  ತೀವ್ರ ಶೋಧ ಕಾರ್ಯದಲ್ಲಿ ನಿರತವಾಗಿದೆ.  ಮಧ್ಯೆ, ಮನ್ಸೂರ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಜೊತೆ .ಡಿ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿದವು.   ‘ಕಂಪನಿ ಅವನತಿಯ ಹಾದಿ ಹಿಡಿಯಲು ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಕಾರಣ ಎಂದು ತಾನು ಬಿಡುಗಡೆ ಮಾಡಿದ್ದ ಮೊದಲ ವಿಡಿಯೊದಲ್ಲಿ ಮನ್ಸೂರ್ ಆರೋಪಿಸಿದ್ದ. ’ಆದರೆ, ಆರೋಪಿಸಿದ ಕಾರಣಕ್ಕೆ ಪ್ರಕರಣದಲ್ಲಿ ಪ್ರಭಾವಿಗಳೂ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಏನಿದ್ದರೂ ತನಿಖೆ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿದ್ದವು.  ಮನ್ಸೂರ್ ಜೊತೆ ಸಂಪರ್ಕ ಇತ್ತೆನ್ನಲಾದ ರಾಜ್ಯದ ಆಹಾರ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ರಿಚ್ಮಂಡ್ ಟೌನಿನಲ್ಲಿ ಇರುವ ಆಸ್ತಿ ಮಾರಾಟ ಸೇರಿದಂತೆ, ಇತರ ವಿಷಯಗಳ ಬಗ್ಗೆಯೂ ಸಚಿವರನ್ನು ಪ್ರಶ್ನಿಸುವ ಸಾಧ್ಯತೆ ಇದೆ. ಯಾವ ವಿಷಯದ ಕುರಿತು ವಿಚಾರಣೆಗೊಳಿಸಲಾಗುವುದು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿದ್ದವು.  ಐಎಂಎ ಕಂಪನಿಯು ,೦೦೦ ಕೋಟಿ ರೂಪಾಯಿ ಬಂಡವಾಳದ ವ್ಯವಹಾರ ನಡೆಸಿದೆ. ಹಾಗೆಂದು, ಅಷ್ಟೂ ಮೊತ್ತ ನಷ್ಟವಾಗಿದೆ ಎಂದು ಅರ್ಥವಲ್ಲ. ಮೊತ್ತದಲ್ಲಿ ಬಹಳಷ್ಟು ಹಣವನ್ನು ಬಂಡವಾಳ ಹೂಡಿಕೆದಾರರಿಗೆ ಕಂಪನಿ ಈಗಾಗಲೇ ವಾಪಸು ನೀಡಿದೆ. ಮನ್ಸೂರ್ ಎಷ್ಟು ಮೊತ್ತವನ್ನು ಬಂಡವಾಳ ಹೂಡಿಕೆದಾರರಿಗೆ ಮರಳಿಸಿದ್ದಾನೆ ಎನ್ನುವುದರ ಮೇಲೆ ನಷ್ಟವನ್ನು ಲೆಕ್ಕ ಹಾಕಬೇಕಾಗುತ್ತದೆ. ನಷ್ಟದ ಪ್ರಮಾಣವನ್ನು ಪೊಲೀಸರು ನಿಖರವಾಗಿ ಲೆಕ್ಕ ಹಾಕಲಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು.




No comments:

Post a Comment