2019: ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ವಿಧಾನಸಭೆಯಲ್ಲಿ ಸರ್ಕಾರದ ಬಹುಮತ ಸಾಬೀತು ಪಡಿಸಲು ಸದನದಲ್ಲಿ ಬಲಾಬಲ ಪರೀಕ್ಷೆಗೆ ಸಜ್ಜಾಗುತ್ತಿದ್ದಂತೆಯೇ,
ಕಾಂಗ್ರೆಸ್ ಮತ್ತು ಜನತಾದಳ (ಎಸ್) ಪಕ್ಷಗಳ ಇನ್ನೂ ಐವರು ಬಂಡಾಯ ಶಾಸಕರು ವಿಧಾನಸಭಾಧ್ಯಕ್ಷರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಇದರೊಂದಿಗೆ ಕರ್ನಾಟಕದ ರಾಜಕೀಯ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿತು. ಶಾಸಕರಾದ ಆನಂದ ಸಿಂಗ್, ಡಾ. ಕೆ. ಸುಧಾಕರ್, ಎಂಟಿಬಿ. ನಾಗರಾಜ್, ಮುನಿರತ್ನ ಮತ್ತು ರೋಷನ್ ಬೇಗ್ ಅವರು ಈದಿನ ಸುಪ್ರೀಂಕೋರ್ಟಿಗೆ ಜಂಟಿ ಅರ್ಜಿಯನ್ನುಸಲ್ಲಿಸಿ ಸುಪ್ರೀಂಕೋರ್ಟಿನ
ಮಧ್ಯಪ್ರವೇಶ ಮತ್ತು ರಾಜೀನಾಮೆ ಅಥವಾ ಶಾಸಕರ ಅನರ್ಹತೆ ವಿಷಯದಲ್ಲಿ ಯಥಾಸ್ಥಿತಿ ಪಾಲಿಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಶಾಸಕರಾದ ಆನಂದ ಸಿಂಗ್, ಡಾ. ಕೆ. ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ ಮತ್ತು ರೋಷನ್ ಬೇಗ್ ಅವರು ತಾವು ಬೇರೆ ಬೇರೆ ದಿನಾಂಕಗಳಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿದ್ದರೂ ಅವರು ಅದನ್ನು ಅಂಗೀಕರಿಸುತ್ತಿಲ್ಲ
ಎಂಬುದಾಗಿ ಸುಪ್ರಿಂಕೋರ್ಟಿಗೆ
ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ ತಿಳಿಸಿದರು. ತಮ್ಮ ಪರಿಸ್ಥಿತಿಯು ಸುಪ್ರೀಕೋರ್ಟಿಗೆ
ಈ ವಾರಾರಂಭದಲ್ಲಿ ಅರ್ಜಿ ಸಲ್ಲಿಸಿರುವ ೧೦ ಮಂದಿ ಬಂಡಾಯ ಶಾಸಕರ ಪರಿಸ್ಥಿತಿಯಂತೆಯೇ ಆಗಿದೆ. ಆದ್ದರಿಂದ ಈ ೧೦ ಮಂದಿ ಶಾಸಕರಿಗೆ ಸುಪ್ರಿಂಕೋರ್ಟ್ ಆದೇಶದಿಂದ ಲಭಿಸಿರುವ ಅನುಕೂಲದ ವ್ಯಾಪ್ತಿಗೆ ತಮ್ಮನ್ನೂ ತರಬೇಕು ಎಂದು ಐದೂ ಮಂದಿ ಶಾಸಕರು ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಕರ್ನಾಟಕ ವಿಧಾನಸಭಾಧ್ಯಕ್ಷ
ಕೆ.ಆರ್. ರಮೇಶ್ ಕುಮಾರ್ ಅವರು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಲೋಪ ಎಸಗಿದ್ದಾರೆ ಮತ್ತು ತಮ್ಮ
ರಾಜೀನಾಮೆ ಪತ್ರಗಳನ್ನು ಅಂಗೀಕರಿಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಕಳೆದವಾರ ತಮ್ಮ ರಾಜೀನಾಮೆಗಳನ್ನು ಕಳುಹಿಸಿದ್ದ ಕಾಂಗ್ರೆಸ್ ಮತ್ತು ಜನತಾದಳ (ಜಾತ್ಯತೀತ) ಪಕ್ಷಗಳ ೧೦ ಮಂದಿ ಬಂಡಾಯ ಶಾಸಕರು ಸುಪ್ರೀಂಕೋರ್ಟಿಗೆ
ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ದೂರಿದ್ದರು. ಹಿಂದಿನ ದಿನ ೧೦ ಮಂದಿ ಬಂಡಾಯ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಯಥಾಸ್ಥಿತಿ ಪಾಲಿಸುವಂತೆ ವಿಧಾನಸಭಾಧ್ಯಕ್ಷರಿಗೆ ಆಜ್ಞಾಪಿಸಿತ್ತು.
’ರಾಜೀನಾಮೆಯ ವಿಷಯ ಇಲ್ಲವೇ ಅನರ್ಹತೆಯ ವಿಷಯನ್ನು ತೀರ್ಮಾನಿಸಬಾರದು.
ವಿಶಾಲ ಪ್ರಶ್ನೆಯನ್ನು ತೀರ್ಮಾನಿಸಲು ನ್ಯಾಯಾಲಯಕ್ಕೆ ಸಾಧ್ಯವಾಗುವಂತಾಗಲು ಈ ಆದೇಶ ನೀಡಲಾಗುತ್ತಿದೆ’ ಎಂದು ಪೀಠವು ಹೇಳಿತ್ತು. ’ಸಾಂವಿಧಾನಿಕ ನ್ಯಾಯಾಲಯವು ಸಾಂವಿಧಾನಿಕ ಅಧಿಕಾರಿಗೆ (ವಿಧಾನಸಭಾಧ್ಯಕ್ಷರು) ನೀಡಬಹುದಾದ ನಿರ್ದೇಶನದ ವ್ಯಾಪ್ತಿ ಎಷ್ಟು’ ಎಂಬ ವಿಶಾಲ ವಿಷಯದ ಬಗೆಗೂ ನಿರ್ಧರಿಸಲು ಸಾಧ್ಯವಾಗುವಂತಾಗಲು ತಾನು ಪ್ರಕರಣವನ್ನು ಜುಲೈ ೧೬ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿಯೂ ಪೀಠ ತಿಳಿಸಿತ್ತು. ಸರ್ಕಾರವನ್ನು ಬೆಂಬಲಿಸುವಂತೆ ತಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದೂ ಶನಿವಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ ಬಂಡಾಯ ಶಾಸಕರು ತಿಳಿಸಿದ್ದಾರೆ. ’ಮುಖ್ಯಮಂತ್ರಿಯವರು
ತಾವು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಕೋರುವುದಾಗಿ ಜುಲೈ ೧೨ರಂದು ಪ್ರಕಟಿಸಿದ್ದಾರೆ.
ಅರ್ಜಿದಾರರು ರಾಜೀನಾಮೆ ನೀಡಿರುವುದರ ಹೊರತಾಗಿಯೂ, ಸರ್ಕಾರವನ್ನು ಬೆಂಬಲಿಸುವಂತೆಯೂ
, ಇಲ್ಲದಿದ್ದಲ್ಲಿ ಅನರ್ಹಗೊಳಿಸಲಾಗುತ್ತದೆ ಎಂದೂ ಬೆದರಿಸಲಾಗುತ್ತಿದೆ
ಎಂದು ಅರ್ಜಿಯಲ್ಲಿ ಶಾಸಕರು ತಿಳಿಸಿದರು. ‘ನಮಗೆ ಭದ್ರತೆಯ ಭೀತಿ ಇದೆ. ಕೆಲವು ಅರ್ಜಿದಾರರು ೧೦.೭.೨೦೧೯ರಂದೇ ರಾಜೀನಾಮೆ ಸಲ್ಲಿಸಲು ತೆರಳಿದಾಗ ವಿಧಾನಸಭೆಯಲ್ಲಿ ಅವರ ಮೇಲೆ ಕೈ ಮಾಡಲಾಯಿತು ಮತ್ತು ದಿಗ್ಬಂಧನದಲ್ಲಿ ಇಡಲಾಯಿತು. ಏನಿದ್ದರೂ ವಿಧಾನಸಭೆಯ ಒಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸಿದರು’ ಎಂದೂ
ಅರ್ಜಿಯಲ್ಲಿ ಶಾಸಕರು ವಿವರಿಸಿದರು. ತಮ್ಮ ರಾಜೀನಾಮೆಗಳು ಕರ್ನಾಟಕ ವಿಧಾನಮಂಡಲ ಕಲಾಪ ನಿಯಮಾವಳಿಗಳ ೧೯೦ನೇ ವಿಧಿಗೆ ಅನುಗುಣವಾಗಿ ಇವೆ. ನೇರವಾಗಿ ಅದನ್ನು ಸಲ್ಲಿಸುವುದು ಸ್ವ ಇಚ್ಛೆ ಮತ್ತು ರಾಜೀನಾಮೆಯ ನೈಜತೆಯ ಸ್ವರೂಪವನ್ನು ತೋರಿಸುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಮತ್ತು ತತ್ ಕ್ಷಣವೇ ಅದನ್ನು ಅಂಗೀಕರಿಸಬೇಕು. ಬೇರೆ ಏನಾದರೂ ಸಂಶಯ ನಿವಾರಿಸಲು ಅರ್ಜಿದಾರರು ಈ ಅರ್ಜಿಯ ಜೊತೆಗೆ ’ತಾವು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಮತ್ತು ಅವುಗಳನ್ನು ಅಂಗೀಕರಿಸಬಹುದು’ ಎಂದೂ ತಿಳಿಸಿರುವ ಪ್ರಮಾಣಪತ್ರಗಳನ್ನೂ (ಅಫಿಡವಿಟ್) ಸಲ್ಲಿಸಿದ್ದಾರೆ ಎಂದೂ ಶಾಸಕರು ಪ್ರತಿಪಾದಿಸಿದರು. ಒಂದೆಡೆಯಲ್ಲಿ ಸಭಾಧ್ಯಕ್ಷರು ರಾಜೀನಾಮೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುತ್ತಿಲ್ಲ
ಮತ್ತು ಇನ್ನೊಂದೆಡೆಯಲ್ಲಿ
ಆಡಳಿತ ಪಕ್ಷವು ವಿಪ್ ಜಾರಿ ಮಾಡಿ ೧೨.೭.೨೦೧೯ರಂದು ಆರಂಭವಾಗುವ ಶಾಸನಸಭಾ ಅಧಿವೇಶನದ ಕಲಾಪಗಳಲ್ಲಿ ಪಾಲ್ಗೊಳ್ಳಲು ವಿಫಲರಾದಲ್ಲಿ ಅನರ್ಹಗೊಳಿಸಲಾಗುವುದು ಎಂದು ಬೆದರಿಕೆ ಹಾಕುತ್ತಿದೆ ಎಂದೂ ಅರ್ಜಿಯು ನ್ಯಾಯಾಲಯಕ್ಕೆ ವಿವರಿಸಿತು. ಬಂಡಾಯ
ಶಾಸಕರಾದ ಪ್ರತಾಪಗೌಡ ಪಾಟೀಲ್, ರಮೇಶ ಜಾರಕಿಹೊಳಿ, ಬೈರತಿ ಬಸವರಾಜ್, ಬಿಸಿ ಪಾಟೀಲ್, ಎಸ್.ಟಿ ಸೋಮಶೇಖರ್, ಅರಬೈಲು ಶಿವರಾಂ ಹೆಬ್ಬಾರ್, ಮಹೇಶ ಕುಮಠಳ್ಳಿ, ಕೆ. ಗೋಪಾಲಯ್ಯ, ಎ.ಎಚ್.ವಿಶ್ವನಾಥ್ ಮತ್ತು ನಾರಾಯಣಗೌಡ ಅವರು ಈ ಮುನ್ನ ಸುಪ್ರೀಂಕೋರ್ಟಿಗೆ
ಅರ್ಜಿ ಸಲ್ಲಿಸಿದ್ದ ೧೦ ಮಂದಿ.
2019: ಬೆಂಗಳೂರು: ತಾವು ವಿಶ್ವಾಸ ಮತ ಕೋರುವುದಾಗಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅಚ್ಚರಿಯ ಪ್ರಕಟಣೆ ಮಾಡಿದ ಒಂದು ದಿನದ ಬಳಿಕ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ’ವಿರೋಧ ಪಕ್ಷ ಕೂಡಾ ಅವಿಶ್ವಾಸ ನಿರ್ಣಯದ ’ಅಗ್ನಿ ಪರೀಕ್ಷೆ’ಗೆ
ಸಜ್ಜಾಗಿದೆ ಎಂದು ಸವಾಲು ಎಸೆದರು. ‘ಅವಿಶ್ವಾಸ ಗೊತ್ತುವಳಿಗೆ ನಮ್ಮ ಆಕ್ಷೇಪವಿಲ್ಲ. ಅವಿಶ್ವಾಸ ನಿರ್ಣಯವನ್ನು ಎದುರಿಸಲು ನಾವು ಸಜ್ಜಾಗಿರುವುದರಿಂದ ನಾವೂ ಕಾಯುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು..
ಜುಲೈ 15ರ ಸೋಮವಾರ
ವಿಧಾನಸಭೆಯಲ್ಲಿ ವಿಶ್ವಾಸಮತ ಕೋರುವಂತೆ ಪಕ್ಷವು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಆಗ್ರಹಿಸುವುದು ಎಂದು ಯಡಿಯೂರಪ್ಪ ಹೇಳಿದರು. ‘ಜುಲೈ 15ರ ಸೋಮವಾರ ಬೆಳಗ್ಗೆ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ತಮ್ಮ ಬದ್ಧತೆಯನ್ನು ಈಡೇರಿಸುವಂತೆ ನಾವು ಮುಖ್ಯಮಂತ್ರಿಯವರಿಗೆ ಸಲಹೆ ಮಾಡುತ್ತೇವೆ’ ಎಂದು ಬಿಜೆಪಿ ನಾಯಕ ನುಡಿದರು. ಮೂಲಗಳ ಪ್ರಕಾರ ಹಿಂದಿನ ದಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕುಮಾರ ಸ್ವಾಮಿಯವರು ವಿಶ್ವಾಸ ಮತ ಕಲಾಪ ನಡೆಸಲು ಪ್ರಸ್ತಾಪ ಮಂಡಿಸಿದ್ದಾರೆ ಎನ್ನಲಾಯಿತು. ಆದರೆ ಸಭೆಗೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಹಾಜರಾಗಿರಿಲಿಲ್ಲವಾದ್ದರಿಂದ ಈ ಬಗ್ಗೆ ಯಾವುದೇ ನಿರ್ಣಯವನ್ನೂ ಕೈಗೊಂಡಿರಲಿಲ್ಲ. ‘೧೬ ಶಾಸಕರ ರಾಜೀನಾಮೆ ಮತ್ತು ಇಬ್ಬರು ಪಕ್ಷೇತರರು ಬೆಂಬಲ ಹಿಂತೆಗೆದುಕೊಂಡಿರುವುದರಿಂದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಸ್ಪಷ್ಟವಾಗಿ ಬಹುಮತ ಕಳೆದುಕೊಂಡಿದ್ದಾರೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.
’ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿ ನೂತನ ಸರ್ಕಾರಕ್ಕೆ ರಾಜ್ಯದ ಜನರಿಗಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದು ಒಳ್ಳೆಯದು’ ಎಂದು
ಬಿಜೆಪಿ ನಾಯಕ ನುಡಿದರು. ‘ಶಾಸಕರ ಬೆಂಬಲವಿಲ್ಲದೇ ಇದ್ದಲ್ಲಿ ಅಧಿಕಾರದಲ್ಲಿ ಮುಂದುವರೆಯಲು ತಾವು ಇಚ್ಛಿಸುವುದಿಲ್ಲ
ಎಂದು ಸ್ವತಃ ಮುಖ್ಯಮಂತ್ರಿಯವರೇ ವಿಧಾನಸಭೆಯಲ್ಲಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಸದನದಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸುವುದಾಗಿ ಅವರು ಪ್ರಕಟಿಸಿದ್ದಾರೆ. ಕಾಯೋಣ, ಅವರು ವಿಶ್ವಾಸ ನಿರ್ಣಯ ಮಂಡಿಸುವುದಾದರೆ ನಮ್ಮ ಆಕ್ಷೇಪವಿಲ್ಲ. ನಾವು ಕಾಯುತ್ತೇವೆ’ ಎಂದು
ಯಡಿಯೂರಪ್ಪ ಹೇಳಿದರು. ಹಿಂಬಾಗಿಲ ಸಂಧಾನ: ಈ ಮಧ್ಯೆ, ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಜೊತೆ ಹಿರಿಯ ಕಾಂಗ್ರೆಸ್ ನಾಯಕರು ಹಿಂಬಾಗಿಲ ಮಾತುಕತೆಗಳನ್ನು ಆರಂಭಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕಾಂಗ್ರೆಸ್ಸಿನ
’ಟ್ರಬಲ್ ಶೂಟರ್’ ಜಲ
ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ವಸತಿ ಸಚಿವ ಎಂಟಿಬಿ ನಾಗರಾಜ್ ಅವರ ನಿವಾಸಕ್ಕೆ ಈದಿನ ನಸುಕಿನ ೫ ಗಂಟೆಗೇ ತೆರಳಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಅಲ್ಲೇ ’ಕ್ಯಾಂಪ್’ ಹೂಡಿ
ನಾಗರಾಜ್ ಅವರನ್ನು ಸಮಾಧಾನಿಸಲು ಯತ್ನಿಸಿದರು.
ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರುಕೂಡಾ ನಾಗರಾಜ್ ಅವರ ಮನೆಗೆ ತೆರಳಿ ರಾಜೀನಾಮೆ ಹಿಂಪಡೆಯುವಂತೆ ಅವರ ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿದವು. ಎಂಟಿಬಿ ನಾಗರಾಜ್ ಅವರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈಮಧ್ಯೆ, ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿಕೂಟದ ೧೬ ಮಂದಿ ಬಂಡಾಯ ಶಾಸಕರ ಪೈಕಿ ಒಬ್ಬರಾದ ನಾಗರಾಜ್ ಅವರು ’ಕಾಂಗ್ರೆಸ್ ನಾಯಕರು ನನ್ನನ್ನು ಭೇಟಿ ಮಾಡಿ ರಾಜೀನಾಮೆ ಹಿಂಪಡೆಯುವಂತೆ ಹೇಳಿರುವುದು ನಿಜ’ ಎಂದು
ಹೇಳಿದರು. ‘ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೂ ನನಗೆ ಕರೆ ಮಾಡಿ ರಾಜೀನಾಮೆ ಹಿಂಪಡೆಯುವಂತೆ ಮತ್ತು ಪಕ್ಷದಲ್ಲೆ ಉಳಿಯುವಂತೆ ಮನವಿ ಮಾಡಿದ್ದಾರೆ. ಆ ಬಗ್ಗೆ ಪರಿಶೀಲಿಸಲು ಸಮಯ ಕೋರಿದ್ದೇನೆ. ನಾನು ಚಿಕ್ಕಬಳ್ಳಾಪುರದ ಶಾಸಕ ಸುಧಾಕರ್ ಅವರ ಜೊತೆ ಮಾತನಾಡಿ ರಾಜೀನಾಮೆ ಹಿಂಪಡೆಯುವಂತೆ ಅವರ ಮನವೊಲಿಸಲು ಪ್ರಯತ್ನಿಸುವುದಾಗಿ ಹೇಳಿದ್ದೇನೆ. ನಾವು ಇಲ್ಲೇ ಉಳಿಯಲು ಯೋಜಿಸುತ್ತಿದ್ದೇವೆ’ ಎಂದು ಪರಮೇಶ್ವರ್, ಶಿವಕುಮಾರ್ ಮತ್ತಿತರ ನಾಯಕರ ಜೊತೆ ಮಾತನಾಡಿದ ಬಳಿಕ ನಾಗರಾಜ್ ನುಡಿದರು. ಶಾಸಕರಾದ ರಾಮಲಿಂಗಾರೆಡ್ಡಿ,
ಮುನಿರತ್ನ ಮತ್ತು ಆರ್ ರೋಶನ್ ಬೇಗ್ ಅವರ ಮನವೊಲಿಸಲೂ ಇಂತಹುದೇ ಪ್ರಯತ್ನ ನಡೆದಿದೆ. ರಾಜೀನಾಮೆ ನೀಡಿದ ಕನಿಷ್ಠ ನಾಲ್ವರು ಕಾಂಗ್ರೆಸ್ ಶಾಸಕರ ಜೊತೆಗೆ ಕುಮಾರ ಸ್ವಾಮಿಯವರು ನೇರ ಮಾತುಕತೆ ನಡೆಸಿದ್ದು, ಅವರು ರಾಜೀನಾಮೆ ಹಿಂಪಡೆಯುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು. ಸದನದಲ್ಲಿ
ಬಲಾಬಲ ಪರೀಕ್ಷೆಗೆ ಮುನ್ನ ತಮ್ಮ ತಮ್ಮ ಪಕ್ಷದ ಸದಸ್ಯರನ್ನು ಒಟ್ಟಾಗಿ ಇರಿಸಿಕೊಳ್ಳುವ ಯತ್ನವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಶಾಸಕರನ್ನು ಹೋಟೆಲ್ ಮತ್ತು ರೆಸಾರ್ಟ್ಗಳಿಗೆ ಕಳುಹಿಸಿದವು.
2019: ಪಣಜಿ: ಕಾಂಗ್ರೆಸ್ಸಿನಿಂದ
ಬಿಜೆಪಿಗೆ ಸೇರ್ಪಡೆಯಾದ ೧೦ ಮಂದಿ ಶಾಸಕರ ಪೈಕಿ ೩ ಶಾಸಕರಿಗೆ ಗೋವಾ ಸಂಪುಟ ಸಚಿವರಾಗಿ ಬಡ್ಡಿ ಲಭಿಸಿದ್ದು, ವಿರೋಧ ಪಕ್ಷದ ಮಾಜಿ ನಾಯಕ ಚಂದ್ರಕಾಂತ ಕವಲೇಕರ್ ಮತ್ತು ವಿಧಾನಸಬಾ ಉಪಸಭಾಧ್ಯಕ್ಷ ಮೈಕೆಲ್ ಲೋಬೋ ಸೇರಿದಂತೆ ನಾಲ್ವರು ಶಾಸಕರು ಗೋವಾ ಸಂಪುಟಕ್ಕೆ ಸೇರ್ಪಡೆಯಾದರು. ಕವಲೇಕರ್ ಅವರನ್ನು ರಾಜ್ಯ ಉಪ ಮುಖ್ಯಮಂತ್ರಿಯಗಿ ನೇಮಕ ಮಾಡಲಾಯಿತು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ತಮ್ಮ ಮೈತ್ರಿಕೂಟದ ಅಂಗಪಕ್ಷವಾದ ಗೋವಾ ಫಾರ್ವರ್ಡ್ ಪಾರ್ಟಿಯ (ಜಿಎಫ್ಪಿ) ಮೂವರು ಸದಸ್ಯರು ಮತ್ತು ಒಬ್ಬ ಪಕ್ಷೇತರ ಶಾಸಕ ರೋಹನ್ ಕೌಂಟೆ ಅವರನ್ನು ಶುಕ್ರವಾರ ಸಂಪುಟದಿಂದ ಕೈಬಿಟ್ಟಿದ್ದರು. ತಮ್ಮ ಸಂಪುಟದಿಂದ ಕೈಬಿಟ್ಟಿರುವವರಲ್ಲಿ
ವಿಜಯ್ ಸರ್ದೇಸಾಯಿ, ವಿನೋದ ಪಲಿಂಕರ್, ಜಯೇಶ್ ಸಲ್ಗಾವ್ಕರ್ (ಎಲ್ಲರೂ ಜಿಎಫ್ಪಿ) ಸೇರಿದ್ದಾರೆ. ರಾಜ್ಯಪಾಲರಾದ ಮೃದುಲಾ ಸಿನ್ಹ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಇದಕ್ಕೆ ಮುನ್ನ ಲೋಬೋ ಅವರು ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬಹುದೆಂಬ
ನಿರೀಕ್ಷೆಯಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷದ ೧೫ ಮಂದಿ ಶಾಸಕರ ಪೈಕಿ ೧೦ ಮಂದಿ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರೊಂದಿಗೆ ೪೦ ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯ ಬಲ ೨೭ಕ್ಕೆ ಏರಿತ್ತು. ಇದು ಸಾವಂತ್ ಅವರು ಮೂರು ತಿಂಗಳ ಹಿಂದೆ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎರಡನೇ ಸಂಪುಟ ಪುನಾರಚನೆ. ಮೊದಲ ಪುನಾರಚನೆಯಲ್ಲಿ ಸಾವಂತ್ ಅವರು ಉಪ ಮುಖ್ಯಮಂತ್ರಿ ಸುದಿನ್ ಧವಳಿಕರ್ ಅವರನ್ನು ಕೈಬಿಟ್ಟು ಎಂಜಿಪಿಯ ಸಿಡಿ ಶಾಸಕ ದೀಪಕ್ ಪೌಸ್ಕರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿದ್ದರು. ಮಿತ್ರ ಪಕ್ಷಗಳನ್ನು ಸಂಪುಟದಿಂದ ಕೈಬಿಟ್ಟಿರುವುದೇಕೆ
ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಕೇಂದ್ರ ನಾಯಕತ್ವದ ನಿರ್ದೇಶನ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ’ನಾನು ಹೆಚ್ಚಿನ ವಿವರಗಳಿಗೆ ಹೋಗಬಯಸುವುದಿಲ್ಲ.
ಜನರಿಗೆ ಉತ್ತಮ ಆಡಳಿತ ನೀಡುವ ಸಲುವಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ನಿರ್ಧಾರಕ್ಕೆ ಹಲವಾರು ಕಾರಣಗಳಿವೆ’ ಎಂದು
ಅವರು ನುಡಿದರು. ಸಾವಂತ್ ಅವರು ಮೂರು ಮಂದಿ ಜಿಎಫ್ಪಿ ಶಾಸಕರು ಮತ್ತು ಒಬ್ಬರ ಪಕ್ಷೇತರ ಶಾಸಕನ ಬೆಂಬಲ ಹೊಂದಿದ್ದಾರೆ. ಜಿಎಫ್ಪಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಅವರು ಇದಕ್ಕೆ ಮುನ್ನ ಬಿಕಟ್ಟಿಗೆ ಸೌಹಾರ್ದಯುತ ಪರಿಹಾರ ಲಭಿಸಬಹುದು ಎಂದು ಹೇಳಿದ್ದರು. ‘ಜಿಎಫ್ಪಿಯು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ಡಿಎ) ಭಾಗವಾಗಿದ್ದು, ಕೇಸರಿ ಪಕ್ಷದ ರಾಷ್ಟ್ರೀಯ ನಾಯಕತ್ವದ ಜೊತೆಗೆ ಮಾತುಕತೆ ನಡೆಸಿದ ಬಳಿಕ ಬಿಜೆಪಿ ನೇತೃತ್ವದ ಸರ್ಕಾರವನ್ನು ಸೇರಿತ್ತು’ ಎಂದು ಸರ್ದೇಸಾಯಿ ಹೇಳಿದರು. ’ಬಿಜೆಪಿಯ ಹಾಲಿ ರಾಜ್ಯ ನಾಯಕರು ಆಗ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿರಲಿಲ್ಲ.
ಆದ್ದರಿಂದ ಕೇಂದ್ರದ ಎನ್ಡಿಎ ನಾಯಕತ್ವದ ಜೊತೆಗೆ ಮಾತುಕತೆ ನಡೆಸಿದ ಬಳಿಕವೇ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ನುಡಿದರು. ‘ನಮಗೆ
ಪ್ರತಿಕೂಲಕರವಾದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಬದಲಾಗಿ ಶೀಘ್ರದಲ್ಲೇ ಸೌಹಾರ್ದಯುತವಾಗಿ ವಿಷಯವನ್ನು ಇತ್ಯರ್ಥಗೊಳಿಸಲಾಗುವುದು ಎಂಬ ಸೂಚನೆ ನಮಗೆ ಲಭಿಸಿದೆ’ ಎಂದು ಅವರು ಹೇಳಿದರು. ೧೫ ಮಂದಿ ಕಾಂಗ್ರೆಸ್ ಶಾಸಕರ ಪೈಕಿ ೧೦ ಮಂದಿ ಬುಧವಾರ ಕವಲೇಕರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
೧೦ ಶಾಸಕರ ಮತ್ತು ಲೋಬೋ ಅವರು ದೆಹಲಿಯಿಂದ ವಾಪಸಾದರೂ, ಸಾವಂತ್ ಅವರು ಶುಕ್ರವಾರ ನಡೆದ ಗೋವಾ ಗಣಿಗಾರಿಕೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಯಲ್ಲಿ ತಂಗಿದ್ದರು. ಸುಪ್ರೀಂಕೋರ್ಟ್ ಫೆಬ್ರುವರಿ ೨೦೧೮ರಲ್ಲಿ ನೀಡಿದ್ದ ಆದೇಶದ ಬಳಿಕ ಈ ಬಿಕ್ಕಟ್ಟು ನೆನೆಗುದಿಯಲ್ಲಿ ಬಿದ್ದಿತ್ತು.
ಇಂದಿನಇತಿಹಾಸ History Today ಜುಲೈ 13 (2018+ ಹಿಂದಿನವುಗಳಿಗೆ
ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment