ನಾನು ಮೆಚ್ಚಿದ ವಾಟ್ಸಪ್

Sunday, July 14, 2019

ಇಂದಿನ ಇತಿಹಾಸ History Today ಜುಲೈ 14

ಇಂದಿನ ಇತಿಹಾಸ History Today ಜುಲೈ 14
2019: ಚಂಡೀಗಢ: ರಾಜಕಾರಣಿಯಾಗಿ ಪರಿವರ್ತನೆಗೊಂಡ ನವಜೋತ್ ಸಿಂಗ್ ಸಿಧು ಅವರು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಜೊತೆಗಿನ ಘರ್ಷಣೆಯ ಮಧ್ಯೆ ಪಂಜಾಬ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಂಜಾಬ್ ಸಂಪುಟಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರನ್ನು ಉದ್ದೇಶಿಸಿ ಬರೆದ ಜೂನ್ ೧೦ರ ದಿನಾಂಕ ನಮೂದಿಸಿದರಾಜೀನಾಮೆ ಪತ್ರವನ್ನು ಸಿಧು ಅವರು ಟ್ವಿಟ್ಟರಿನಲ್ಲಿ ಪ್ರಕಟಿಸಿದರು. ೨೦೧೯ರ ಜೂನ್ ೧೦ರಂದೇ ರಾಜೀನಾಮೆ ಪತ್ರವನ್ನು ತಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಲ್ಲಿಸಿರುವುದಾಗಿ ಅವರು ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು. ಪಕ್ಷಾಧ್ಯಕ್ಷರನ್ನು ಉದ್ದೇಶಿಸಿ ಬರೆದಿರುವ ರಾಜೀನಾಮೆ ಪತ್ರದಲ್ಲಿ ಸಿಧು ಅವರು ಸಂಪುಟ ತ್ಯಾಗಕ್ಕೆ ಯಾವುದೇ ಕಾರಣವನ್ನೂ ನಮೂದಿಸಲಿಲ್ಲ್ಲ.  ‘ನಾನು ಮೂಲಕ ಪಂಜಾಬ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಧು ತಮ್ಮ ಪತ್ರದಲ್ಲಿ ತಿಳಿಸಿದರು. ರಾಜೀನಾಮೆ ಪತ್ರವನ್ನು ಪಂಜಾಬ್ ಮುಖ್ಯಮಂತ್ರಿಯವರಿಗೆ ಕಳುಹಿಸುತ್ತಿದ್ದೇನೆ ಎಂದೂ ಅವರು ನುಡಿದರು. ಸಿಧು ಅವರ ಟ್ವೀಟ್ ಪ್ರಕಟಗೊಂಡ ಬೆನ್ನಲ್ಲೇ ತಮಗೆ ಇನ್ನೂ ಸಿಧು ಅವರ ಪತ್ರ ತಮಗೆ ಇನ್ನೂ ತಲುಪಿಲ್ಲ ಎಂದು ಮುಖ್ಯಮಂತ್ರಿಯವರ ಕಚೇರಿ ಪ್ರತಿಕ್ರಿಯಿಸಿತು. ಜೂನ್ ೬ರಂದು ಸಂಪುಟ ಪುನರ್ರಚನೆಯ ಬಳಿಕ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಸಿಧು ಅವರನ್ನು ಸ್ಥಳೀಯ ಸಂಸ್ಥೆಗಳ ಖಾತೆಯಿಂದ ತಪ್ಪಿಸಿ, ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಂಪನ್ಮೂಲ ಖಾತೆಯನ್ನು ನೀಡಿದ್ದರು.  ಏನಿದ್ದರೂ, ಸಿಧು ಅವರು ನೂತನ ಸಚಿವ ಸ್ಥಾನವನ್ನು ವಹಿಸುವುದಕ್ಕೆ ಬದಲಾಗಿ ತಮ್ಮ ಅತೃಪ್ತಿ ವ್ಯಕ್ತ ಪಡಿಸಲು ಪಕ್ಷದ ವರಿಷ್ಠ ಮಂಡಳಿಯನ್ನು ಸಂಪರ್ಕಿಸಿದ್ದರು ಮತ್ತುಹೈಕಮಾಂಡ್ಗೆ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಪಕ್ಷದ  ಕಳಪೆ ಸಾಧನೆಯ ನೆಪ ಒಡ್ಡಿ ಅನ್ಯಾಯವಾಗಿ ತಮ್ಮನ್ನು ಪ್ರತ್ಯೇಕಿಸಲಾಗಿದೆ ಎಂದು ದೂರಿದ್ದರು. ೨೦೧೯ರ ಲೋಕಸಭಾ ಚುನಾವಣೆಯಿಂದೀಚೆಗೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಸಿಧು ಅವರು ಪರಸ್ಪರ ತಿಕ್ಕಾಟ ನಿರತರಾಗಿದ್ದರು. ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ತಮಗೆ ಚಂಡೀಗಢ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗದಂತೆ ತಡೆಯುತ್ತಿದ್ದಾರೆ ಎಂಬುದಾಗಿ ಆಪಾದಿಸುವುದರೊಂದಿಗೆ ಉಭಯ ನಾಯಕರ ಗುದ್ದಾಟ ಶುರುವಾಗಿತ್ತು. ಬಳಿಕ, ಸಿಧು ಅವರು ತಮ್ಮ ಇಲಾಖೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿಲ್ಲ. ಪರಿಣಾಮವಾಗಿ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ನಗರ ಪ್ರದೇಶದಲ್ಲಿ ಕಳಪೆ ಪ್ರದರ್ಶನ ನೀಡಿತು ಎಂದು ಮುಖ್ಯಮಂತ್ರಿ ದೂರಿದ್ದರು. ಕಳೆದ ತಿಂಗಳು ಸ್ಥಳೀಯ ಸಂಸ್ಥೆಗಳು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆಗಳನ್ನು ಕಳೆದುಕೊಂಡ ಬಳಿಕ ಸಿಧು ಅವರು ಸಚಿವ ಸಂಪುಟ ಸಭೆಗೆ ಗೈರುಹಾಜರಾಗಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿಧುನಾನು ಪಂಜಾಬ್ ಜನರಿಗೆ ಮಾತ್ರ ಉತ್ತರದಾಯಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕ್ರಮಕ್ಕೆ ತಿರುಗೇಟು ನೀಡಿದ್ದರು.  ಸಂಪುಟ ಪುನರ್ರಚನೆಯ ಬಳಿಕ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಪಕ್ಷದ ಹಿರಿಯ ನಾಯಕ ಅಹಮದ್ ಪಟೇಲ್ ಅವರ ಜೊತೆಗಿನ ಭಾವಚಿತ್ರವನ್ನು ಸಿಧು ಟ್ವೀಟ್ ಮಾಡಿದ್ದರುಸಿಧು ಅವರ ಗೈರು ಹಾಜರಿಯಲ್ಲಿ ವಿದ್ಯುತ್ ಇಲಾಖೆಯ ಸಭೆಗಳ ಅಧ್ಯಕ್ಷತೆಯನ್ನು ಅಮರೀಂದರ್ ಸಿಂಗ್ ಅವರೇ ವಹಿಸುತ್ತಿದ್ದರು. ನಗರ ಪ್ರದೇಶವು ಪಂಜಾಬಿನಲಿ ಕಾಂಗ್ರೆಸ್ಸಿನ ಬೆನ್ನು ಮೂಳೆಯಾಗಿದ್ದು, ಅಲ್ಲಿ ಅಭಿವೃದ್ಧಿಗೆ ಆಗುವ ಯಾವುದೇ ಹಿನ್ನಡೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಟೀಕಿಸಿದ್ದ ಮುಖ್ಯಮಂತ್ರಿ ಭಟಿಂಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಸಿಧು ಅವರು ನೀಡಿದ್ದಫ್ರೆಂಡ್ಲಿ ಮ್ಯಾಚ್ ಹೇಳಿಕೆಗೂ ಅಸಮಾಧಾನ ವ್ಯಕ್ತ ಪಡಿಸಿದ್ದರು.

2019: ಅಹಮದಾಬಾದ್: ಅಹಮದಾಬಾದಿನ ಅಡ್ವೆಂಚರ್ ಪಾರ್ಕಿನಲ್ಲಿ ಜಾಯ್ ರೈಡ್ ವೇಳೆಯಲ್ಲಿಜಯಂಟ್ ವ್ಹೀಲ್ ಮುರಿದು ಬಿದ್ದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿ, ಇತರ ೨೬ ಮಂದಿ ಗಾಯಗೊಂಡ ಘಟನೆ ಘಟಿಸಿತು. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಎಂದು ಮುನಿಸಿಪಲ್ ಕಮೀಷನರ್ ವಿಜಯ್ ನೆಹ್ರಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ಕಳೆದ ತಿಂಗಳು ಚೆನ್ನೈಯಲ್ಲಿ ಇಂತಹುದೇ ಘಟನೆ ಘಟಿಸಿತ್ತು. ತಮಿಳುನಾಡಿನ ಕಾಂಚೀಪುರಂನ ಕಿಶ್ಕಿಂಟ ಥೀಮ್ ಪಾರ್ಕಿನಲ್ಲಿ ಜಯಂಟ್ ವ್ಹೀಲ್ ಮುರಿದು ಬಿದ್ದಿತ್ತು. ಘಟನೆಯಲ್ಲಿ ಒಬ್ಬ ಮೃತನಾಗಿ, ಮಂದಿ ಗಾಯಗೊಂಡಿದ್ದರು.

2019: ನವದೆಹಲಿ: ಸ್ವದೇಶೀ ನಿರ್ಮಿತ ಚಂದ್ರಯಾನ-  ಯೋಜನೆಯ ಯಶಸ್ಸಿನ ೧೦ ವರ್ಷಗಳ ಬಳಿಕ, ಭಾರತೀಯ  ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಚಂದ್ರನ ಅಂಗಳಕ್ಕೆ ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ  ಚಂದ್ರಯಾನ- ಬಾಹ್ಯಾಕಾಶ ವಿಕ್ರಮಕ್ಕೆ ಸಜ್ಜಾಯಿತು.  ಶ್ರೀಹರಿಕೋಟಾದ ಬಾಹ್ಯಾಕಾಶ ಉಡ್ಡಯನ ಕೇಂದ್ರದಿಂದ ಜುಲೈ ೧೫ರ ಸೋಮವಾರ ನಸುಕಿನ .೫೧ ಗಂಟೆಗೆ ಚಂದ್ರಯಾನ - ಬಾಹ್ಯಾಕಾಶ ನೌಕೆ ನಭಕ್ಕೆ ಏರಲಿದೆ. ಮಹತ್ವಾಕಾಂಕ್ಷಿ ಯಾನದ ಮೂಲಕ, ಭಾರತ ಕೂಡಾ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಅಮೆರಿಕ, ರಷ್ಯಾ ಮತ್ತು ಚೀನಾದಂತಹ ದೇಶಗಳಿಗೆ ಸೆಡ್ಡು ಹೊಡೆಯಲು ಮುಂದಾಯಿತು. ಚಂದ್ರಯಾನ- ಯೋಜನೆಗಾಗಿ ಇಸ್ರೋ  ಜಿಎಸ್ಎಲ್ವಿ ಎಂಕೆ ಎಂಬ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ನ್ನು ನಿರ್ಮಿಸಿದೆ. ಇದರ ಮೂಲಕ ಭೂಮಿಯಿಂದ ಭೂ ಕಕ್ಷೆಗೆ ಏರಿ, ಅಲ್ಲಿಂದ  ಚಂದ್ರನ ಮೇಲ್ಮೈಗೆ ಸಾಗಲಿರುವ ನೌಕೆಯು ಭೂಮಿಯ ಉಪಗ್ರಹವಾದ ಚಂದ್ರನ ಕಕ್ಷೆಯಲ್ಲಿ ಉಪಗ್ರಹವನ್ನು ನಿಲ್ಲಿಸುವುದರ ಜೊತೆಗೆ ಸೆ.೬ರಂದು ಚಂದ್ರನ ದಕ್ಷಿಣ ಧ್ರುವದಲ್ಲಿರೋವರ್ನ್ನು ಇಳಿಸಲಿದೆ. ಬಳಿಕ ರೋವರ್ ಚಂದ್ರನ ಅಂಗಳದಲ್ಲಿ ತನ್ನ ಪ್ರಯೋಗಗಳನ್ನು ಆರಂಭಿಸಲಿದೆ.  ಚಂದ್ರಯಾನ ೨ರ ವಿಶೇಷತೆ: ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಈವರೆಗೂ ಅಧ್ಯಯನ ಮಾಡಿಲ್ಲ. ಹಾಗಾಗಿ ಚಂದ್ರಯಾನ- ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿದೆ. ಚಂದ್ರ ಕಕ್ಷೆಯಲ್ಲಿ ಇಳಿಸಲಾಗುವ ಉಪಗ್ರಹ ,೮೭೭ ಕೆಜಿ ತೂಕವಿದೆ. ಅಂದರೆ ಚಂದ್ರಯಾನ ೧ರಲ್ಲಿ ಬಳಕೆ ಮಾಡಿದ ಉಪಗ್ರಹದ ತೂಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಭಾರವನ್ನು ಇದು ಹೊಂದಿದೆ. ಗಗನನೌಕೆಯು ಆರ್ಬಿಟರ್, ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಅನ್ನು ತನ್ನ ಜೊತೆಗೆ ಹೊತ್ತೊಯ್ಯುತ್ತಿದೆಸೆ.೬ರಂದು ಬಾಹ್ಯಾಕಾಶ ನೌಕೆ ಚಂದ್ರನನ್ನು ತಲುಪಲಿದೆ. ನಂತರ ಅಧ್ಯಯನ ಆರಂಭಿಸಲಿದೆ. ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ ೯೭೮ ಕೋಟಿ ರೂಪಾಯಿ. ಅಂದರೆ ಹಾಲಿವುಡ್ಡಿನಅವೆಂಜರ್ ಎಂಡ್ಗೇಮ್ಸಿನಿಮಾ ಬಜೆಟಿಗಿಂತಲೂ ಕಡಿಮೆ ಮೊತ್ತದಲ್ಲಿ ಯೋಜನೆ ಸಿದ್ಧಗೊಂಡಿದೆ. ’ಅವೆಂಜರ್ ಎಂಡ್ಗೇಮ್ಸಿನಿಮಾಗೆ ೨೪೦೦ ಕೋಟಿ ರೂ. ವೆಚ್ಛ ಮಾಡಲಾಗಿತ್ತು. ಚಂದ್ರಯಾನ ೨ರ ಗುರಿ: ಉಪಗ್ರಹವು  ಟೆರ್ರೇನ್ ಮ್ಯಾಪಿಂಗ್ ಕ್ಯಾಮರಾ ೨ನ್ನು ಹೊಂದಿದೆ. ಚಂದ್ರನ ಮೇಲಿಳಿಯುವ ೨೦ ಕೆಜಿ ತೂಕದ ರೋವರ್, ಚಂದ್ರನ ಮೇಲೆ ಸಂಚರಿಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್-ರೋವರಿನ ಆಯುಷ್ಯ ೧೪ ದಿನಗಳಿದ್ದರೆ ಆರ್ಬಿಟರ್ ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆಹೊಸ ದಾಖಲೆ: ವರೆಗೆ ಚಂದ್ರನಲ್ಲಿಗೆ ರಷ್ಯಾ, ಅಮೆರಿಕ ಮತ್ತು ಚೀನಾ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗುತ್ತಿದೆ. ಯೋಜನೆ ಯಶಸ್ವಿಯಾದರೆ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ರೋವರ್ ಕಳುಹಿಸಿದ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಲಿದೆ. ಇಸ್ರೋ ಸ್ಥಾಪನೆಯ ಬಳಿಕದ ಅತ್ಯಂತ ಕ್ಲಿಷ್ಟ ಯೋಜನೆ ಇದಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಹೇಳಿದರು. ನೀರಿನ ಸುಳಿವು ನೀಡಿದ್ದ ಚಂದ್ರಯಾನ : ಚಂದ್ರನಲ್ಲಿ ನೀರಿನ ಅಂಶವನ್ನು ಪತ್ತೆ ಹಚ್ಚುವ ಮಹತ್ವದ ಸಾಧನೆಯನ್ನು ಭಾರತದ ಚಂದ್ರಯಾನ - ಮಾಡಿತ್ತು. ಭಾರತದ ಇಸ್ರೋ ವಿಜ್ಞಾನಿಗಳು ೨೦೦೮ರ ಅಕ್ಟೋಬರಿನಲ್ಲಿ ಮೊದಲ ಬಾರಿಗೆ, ಮಾನವರಹಿತ ಚಂದ್ರಯಾನ- ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಸಿದ್ದರು.  ಚಂದ್ರಯಾನ - ಯೋಜನೆಯ ಭಾಗವಾಗಿ ಅದೇ ವರ್ಷದ ನವೆಂಬರ್ ೧೪ರಂದು ಭಾರತದ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿದಿತ್ತು. ಇದರೊಂದಿಗೆ ಭಾರತವು ಚಂದ್ರನ ಮೇಲೆ ಧ್ವಜ ನೆಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಗಳಿಸಿಕೊಂಡಿತ್ತು. ಭಾರತದ ಒಂದನೇ ಚಂದ್ರಯಾನ ೨೦೦೯ ಆಗಸ್ವ್ ತನಕವೂ ಕಾರ್ಯ ನಿರ್ವಹಿಸಿತ್ತು. ಇದಕ್ಕಾಗಿ ಸುಮಾರು ೩೮೬ ಕೋಟಿ ರೂಪಾಯಿ ವ್ಯಯಿಸಲಾಗಿತ್ತು. ’ನಮ್ಮ ಚಂದ್ರಯಾನ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ ಎಂದು ಭಾರತದ ವಿಜ್ಞಾನಿಗಳು ಹೇಳಿದ್ದರಾದರೂ, ಅದು ಕೇವಲ ೩೧೨ ದಿನಗಳ ಮಾತ್ರ ಕಾರ್ಯನಿರ್ವಹಿಸಿತ್ತು. ಆದರೂ, ಉದ್ದೇಶಿಸಿದಂತೆಯೇ ಶೇ.೯೫ರಷ್ಟು ಕಾರ್ಯವನ್ನು ಚಂದ್ರಯಾನ - ಸಾಧಿಸಿತ್ತು. ಭಾರತವು ಚಂದ್ರನ ಮೇಲೆ ಹೋಗುವುದಕ್ಕೆ ಹಲವು ವರ್ಷಗಳಷ್ಟು ಹಿಂದೆಯೇ ವಿವಿಧ ರಾಷ್ಟ್ರಗಳು ಚಂದ್ರನ ಕಕ್ಷೆಗೆ ತಮ್ಮ ಉಪಗ್ರಹಗಳನ್ನು ಹಾರಿಸಿದ್ದವು. ಅಮೆರಿಕ ಮಾತ್ರ ೭೦ರ ದಶಕದಲ್ಲೇ ಮಾನವನನ್ನು ಚಂದ್ರನ ಮೇಲೆ ಇಳಿಸಿತ್ತು. ಹೀಗೆ ರಷ್ಯಾ, ಅಮೆರಿಕ, ಐರೋಪ್ಯ ರಾಷ್ಟ್ರಗಳು ಚಂದ್ರ ಸಂಶೋಧನೆಯಲ್ಲಿ ಮೇಲೆ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಾ ಹೋಗಿದ್ದವು. ಇದೇ ವೇಳೆಗೆ ಭಾರತ ಕೂಡಾ ಚಂದ್ರನ ಅಂಗಳಕ್ಕೆ ಹೋಗುವ ಕನಸು ಕಾಣಲು ಆರಂಭಿಸಿತ್ತುಇದಾದ ಎಷ್ಟೋ ವರ್ಷಗಳ ಬಳಿಕ ಭಾರತ ಬಾಹ್ಯಾಕಾಶ ಪೈಪೋಟಿಗೆ ಇಳಿಯಿತು. ಆದರೂ ಬಾಹ್ಯಾಕಾಶ ಕ್ಷೇತ್ರಕ್ಕೆ ನುಗ್ಗುತ್ತಿದಂತೆಯೇ ವಿಶ್ವದ ಎಲ್ಲ ರಾಷ್ಟ್ರಗಳು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಸಾಧನೆಯನ್ನು ಭಾರತ ಮಾಡಿತ್ತು. ತನ್ನ ಚೊಚ್ಚಲ ಪ್ರಯತ್ನದಲ್ಲೇ ಭಾರತ ಚಂದ್ರನ ಅಂಗಳದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ್ದಷ್ಟೇ ಅಲ್ಲ, ಚಂದ್ರನ ಮೇಲ್ಮೈಯಲ್ಲಿ ನೀರು ಇದೆಯೇ ಎಂಬ ಯಕ್ಷ ಪ್ರಶ್ನೆಗೆ ಉತ್ತರ ದೊರಕಿಸಿತ್ತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶ ಇದೆ ಎಂಬುದನ್ನು ತೋರಿಸಿಕೊಟ್ಟ ಚಂದ್ರಯಾನ- ಮನಕುಲದ ಸುದೀರ್ಘ ಕಾಲದ ಕುತೂಹಲವನ್ನು ತಣಿಸಿತ್ತು.

2019: ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆಯ ನೇತೃತ್ವವನ್ನು ಬಾರಿ ಇಬ್ಬರು ಮಹಿಳೆಯರು ವಹಿಸಿಕೊಂಡಿದ್ದಾರೆ ಎಂದು ಇಸ್ರೋ ಮೂಲಗಳು ತಿಳಿಸಿದವು. ಕರಿಧಾಲ್ ಮತ್ತು ಎಂ.ವನಿತಾ ಎಂಬ ಮಹಿಳಾ ವಿಜ್ಞಾನಿಗಳು ಚಂದ್ರಯಾನ- ಯೋಜನೆ ಸಿದ್ಧಪಡಿಸಿದ್ದಾರೆ. ಹಿಂದಿನ ಮಂಗಳಯಾನದಲ್ಲಿ ಮಹತ್ವದ ಪಾತ್ರವಹಿಸಿದ್ದ ಇವರು, ಬಾರಿ ಚಂದ್ರಯಾನ- ಯೋಜನೆಯ ರೂವಾರಿಗಳಾಗಿದ್ದಾರೆ. ಹಾಗೆಯೇ ಟಿ.ಕೆ. ಅನುರಾಧ, ಎನ್. ವಲಾರ್ಮತಿ, ವಿ.ಆರ್ ಲಲಿತಾಂಬಿಕ, ಸೀತಾ ಸೋಮ ಸುಂದರಂ, ನಂದಿನಿ ಹರಿನಾಥ್, ಮಿನಲ್ ರೋಹಿತ್ ಸೇರಿದಂತೆ ಹಲವರು ಯೋಜನೆಗಾಗಿ ಶ್ರಮಿಸಿದ್ದಾರೆ ಎಂದು ಮೂಲಗಳು ಹೇಳಿದವು.

2019: ಶಿಮ್ಲಾ: ಭಾರೀ ಮಳೆಯ ಪರಿಣಾಮವಾಗಿ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು  ಈದಿನ ಸಂಜೆ ಕುಸಿದು ಬಿದ್ದಿದ್ದು ಒಬ್ಬ ಯೋಧ ಸೇರಿದಂತೆ ಇಬ್ಬರು ಸಾವನ್ನಪ್ಪಿ ೨೩ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ೩೭ ಕ್ಕೂ ಹೆಚ್ಚು ಮಂದಿ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದರು. ಅವರ ಪೈಕಿ ೨೩ ಮಂದಿಯನ್ನು ರಕ್ಷಿಸಲಾಯಿತು. ದುರಂತದಲ್ಲಿ ಸಂತ್ರಸ್ತರಾದವರಲ್ಲಿ ೩೦-೩೫ ಮಂದಿ ಭಾರತೀಯ ಸೇನೆಯ ಯೋಧರಾಗಿದ್ದಾರೆ ಎಂದು ವರದಿಗಳು ತಿಳಿಸಿದವು. ಸಂಜೆ ಗಂಟೆ ಸುಮಾರಿಗೆ ರಾಜ್ಯದ ರಾಜಧಾನಿ ಶಿಮ್ಲಾದಿಂದ ೫೫ ಕಿಮೀ ದೂರದ ಕುಮಾರಹಟ್ಟಿ-ನಹನ್ ರಸ್ತೆಯಲ್ಲಿ ದುರಂತ ಸಂಭವಿಸಿತು. ಪೊಲೀಸ್ ಸಿಬ್ಬಂದಿ ಮತ್ತು ಹೋಮ್ ಗಾರ್ಡ್ಗಳು ಸೇರಿದಂತೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ ಎಂದು ಸೋಲನ್ ಜಿಲ್ಲೆಯ ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶಿವಕುಮಾರ್ ತಿಳಿಸಿದರು. ದಾಗ್ಶಾಯಿ ದಂಡು ಪ್ರದೇಶದಿಂದ ಸೇನಾ ಯೋಧರ ತಂಡವೂ ರಕ್ಷಣಾ ತಂಡಗಳ ಜೊತೆಗೆ ಸೇರಿಕೊಂಡಿತು. ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ನುಡಿದರು. ಕಟ್ಟಡ ದುರಂತದ ಗಾಯಾಳುಗಳನ್ನು ಧರಮ್ಪುರದ ಆಸ್ಪತ್ರೆ ಮತ್ತು ಸೋಲನ್ನಿನ ಮಹರ್ಷಿ ಮಾರ್ಕಾಂಡೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು. ಈವರೆಗೆ ಕಟ್ಟಡ ಅವಶೇಷಗಳ ಅಡಿಯಿಂದ ನಾಲ್ವರನ್ನು ರಕ್ಷಿಸಲಾಯಿತು. ಭಾರೀ ಮಳೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು. ಕಟ್ಟಡ ಕುಸಿದಾಗ ಅದರ ತುತ್ತ ತುದಿಯ ಮಹಡಿಯಲ್ಲಿದ್ದ ರೆಸ್ಟೋರೆಂಟಿನಲ್ಲಿ ಪ್ರವಾಸಿಗರು ಮತ್ತು ಸೇನಾ ಯೋಧರು ಊಟ ಮಾಡುವುದರಲ್ಲಿ ಮಗ್ನರಾಗಿದ್ದರು ಎಂದು ಅವರು ನುಡಿದರು. ಕಟ್ಟಡದ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ವಸತಿ ಕ್ವಾರ್ಟರ್ಗಳು ಇದ್ದವು. ಘಟನಾಸ್ಥಳದಲ್ಲಿ ಇಬ್ಬರು ಶವಗಳು ಪತ್ತೆಯಾಗಿವೆ ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು. ನಹನ್- ಕುಮಾರಹಟ್ಟಿ ರಸ್ತೆಯಲ್ಲಿನ ರೆಸ್ಟೋರೆಂಟ್ ಇದ್ದ ಬಹುಮಹಡಿ ಕಟ್ಟಡ ಭಾರೀ ಮಳೆಯ ಪರಿಣಾಮವಾಗಿ ಕುಸಿಯಿತು. ದುರಂತದಲ್ಲಿ ಸಿಕ್ಕಿಹಾಕಿಕೊಂಡವರಲ್ಲಿ ಕೆಲವು ಸೇನಾ ಯೋಧರು ಮತ್ತು ಅವರ ಕುಟುಂಬ ಸದಸ್ಯರಿದ್ದರು. ಉತ್ತರಾಖಂಡಕ್ಕೆ ಹೊರಟಿದ್ದ ಅವರು ಮಾರ್ಗ ಮಧ್ಯದಲ್ಲಿ ಊಟದ ಸಲುವಾಗಿ ರೆಸ್ಟೋರೆಂಟಿಗೆ ಬಂದಿದ್ದರು ಎಂದು ಶಿವಕುಮಾರ್ ನುಡಿದರುಸುದ್ದಿ ತಿಳಿದ ತತ್ ಕ್ಷಣವೇ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಗೆ ಇಳಿದರು ಎಂದು ಅಧಿಕಾರಿ ನುಡಿದರು.


No comments:

Post a Comment