Friday, July 26, 2019

ಇಂದಿನ ಇತಿಹಾಸ History Today ಜುಲೈ 26


2019: ಬೆಂಗಳೂರು: ಕಾಂಗ್ರೆಸ್, ಬಿಜೆಪಿ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ  ಈದಿನ ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (ಬಿಎಸ್ ಯಡಿಯೂರಪ್ಪ) ಅವರು ನಾಲ್ಕನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹಸಿರು ಶಾಲು ಹೊದ್ದು ರಾಜಭವನಕ್ಕೆ ಆಗಮಿಸಿದ್ದ ಯಡಿಯೂರಪ್ಪ. ಸಮಾರಂಭಕ್ಕೆ ಆಗಮಿಸಿದ ಗಣ್ಯರ ಜೊತೆ ಯಡಿಯೂರಪ್ಪ ಸಂದರ್ಭದಲ್ಲಿ ಕುಶಲೋಪರಿ ನಡೆಸಿದರು. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್ ವಾಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರು, ಬಿಎಸ್ ವೈ ಪುತ್ರರು, ಪುತ್ರಿಯರು, ಅಳಿಯಂದಿರು ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.  ಯಡಿಯೂರಪ್ಪ ಅವರು  ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜುಲೈ 29ನೇ ತಾರೀಖು ಸೋಮವಾರ ವಿಧಾನಮಂಡಲ ಅಧಿವೇಶನದಲ್ಲಿ  ವಿಶ್ವಾಸಮತ ಸಾಬೀತುಗೊಳಿಸಿದ ತಕ್ಷಣ ಅದೇ ದಿನ ಹಣಕಾಸು ವಿಧೇಯಕಕ್ಕೆ ಸದನದ ಒಪ್ಪಿಗೆ ಪಡೆಯಲಾಗುವುದು. ಸಂಪುಟ ಸಭೆಯಲ್ಲಿ ಎರಡು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.  ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾಕ್ಕೆ ಬಿಜೆಪಿ ಸರ್ಕಾರ ನಿರ್ಧಾರ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದಿಂದ ರಾಜ್ಯದ ರೈತರಿಗೆ 4000 ರೂಪಾಯಿ ಹೆಚ್ಚುವರಿ ಸಹಾಯಧನ. 2 ಕಂತುಗಳಲ್ಲಿ ರೈತರ ಖಾತೆಗೆ ವರ್ಗಾವಣೆಗೆ ನಿರ್ಧಾರ ಮಾಡಲಾಯಿತು ಎಂದು ಯಡಿಯೂರಪ್ಪ ತಿಳಿಸಿದರು.

2019: ಮುಂಬೈ: ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಸಂಸ್ಥೆಯಾಗಿರುವ ವೊಡಾಫೋನ್ ಐಡಿಯಾ 2019ರ ಜೂನ್ ೩೦ಕ್ಕೆ ಅಂತ್ಯಗೊಂಡಿರುವ ತ್ರೈಮಾಸಿಕದಲ್ಲಿ ,೮೭೩. ಕೋಟಿ ರೂಪಾಯಿಗಳ ನಿವ್ವಳ ನಷ್ಟ ಅನುಭವಿಸಿತು. ಪ್ರಮುಖ ಟೆಲಿಕಾಂ ಸಂಸ್ಥೆಯು ವರ್ಷದ ಹಿಂದೆ ಇದೇ ಅವಧಿಯಲ್ಲಿ ೨೫೬. ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿತ್ತು. ಮಾರುಕಟ್ಟೆ ಸಮಯದ ಬಳಿಕ ಸಲ್ಲಿಸಿದ ತನ್ನ ಫೈಲಿಂಗ್ನಲ್ಲಿ ವೊಡಾಫೋನ್ ಐಡಿಂಯಾ ಕಂಪೆನಿಯ ವಹಿವಾಟು ವರ್ಷದ ಹಿಂದೆ ಇದೇ ಅವಧಿಯಲ್ಲಿ ,೮೮೯. ಕೋಟಿ ರೂಪಾಯಿಗಳಿಂದ ೧೧,೨೬೯. ಕೋಟಿ ರೂಪಾಯಿಗಳಿಗೆ ಏರಿತ್ತು ಎಂದು ಹೇಳಿತು. ಹೆಚ್ಚಿನ ಜಾಲವ್ಯವಸ್ಥೆ ವೆಚ್ಚ ಮತ್ತು ಐಟಿ ಹೊರಗುತ್ತಿಗೆ ವೆಚ್ಚಗಳು ಕಂಪೆನಿಯ ಆದಾಯದ ಮೇಲೆ ಪರಿಣಾಮ ಬೀರಿದೆ. ವೊಡಾಫೋನ್ ಐಡಿಯಾದ ಜಾಲವ್ಯವಸ್ಥೆಯ ವೆಚ್ಚ ಮತ್ತು ಐಟಿ ಹೊರಗುತ್ತಿಗೆ ವೆಚ್ಚಗಳು ಮೂರು ತಿಂಗಳ ಅವಧಿಯಲ್ಲಿ ಶೇಕಡಾ ೧೪.೩೬ ರಷ್ಟು ಅಂದರೆ ,೯೯೮. ಕೋಟಿ ರೂಪಾಯಿಗಳಿಗೆ ಏರಿತು. ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಂದಾದಾರರ ಸಂಖ್ಯೆ ಕಳೆದ ವರ್ಷ ಇದ್ದ ೩೩೪. ಮಿಲಿಯನ್ (೩೩೪೧ ಲಕ್ಷ) ದಿಂದ  ವರ್ಷ ೩೨೦. ಮಿಲಿಯನ್ (೩೨೦೦ ಲಕ್ಷ) ಗೆ ಇಳಿದಿದೆ ಎಂದು ಕಂಪೆನಿ ತಿಳಿಸಿತು. ತಲಾ ಬಳಕೆದಾರನ ಮೇಲಿನ ಸರಾಸರಿ ಹುಟ್ಟುವಳಿಯು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ೧೦೪ ರೂ ಇದ್ದುದು ವರ್ಷ ೧೦೮ ರೂ ಅಂದರೆ ಶೇಕಡಾ .೮೫ರಷ್ಟು ಹೆಚ್ಚಳ ಕಂಡಿದೆ ಎಂದು ಖಾಸಗಿ ರಂಗದ ಪ್ರಮುಖ ಟೆಲಿಕಾಂ ಕಂಪೆನಿ ಹೇಳಿತು. ತಲಾ ಬಳಕೆದಾರನ ಮೇಲಿನ ಸರಾಸರಿ ಹುಟ್ಟುವಳಿಯು ಹೆಚ್ಚುಕಡಿಮೆ ಸ್ಥಿರವಾಗಿತ್ತು ಎಂದು ಕಂಪೆನಿ ಹೇಳಿತು.
2019: ನವದೆಹಲಿ: ಸಂಸತ್ತಿನಲ್ಲಿ ತರಾತುರಿಯಿಂದ ಯಾವುದೇ ಪರಾಮರ್ಶೆಯಿಲ್ಲದೆ ಮಸೂದೆಗಳನ್ನು ಅನುಮೋದಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ೧೭ ವಿರೋಧ ಪಕ್ಷಗಳು ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದವು. ರೀತಿ ತರಾತುರಿಯಲ್ಲಿ ಪರಾಮರ್ಶೆಯಿಲ್ಲದೆ ಮಸೂದೆಗಳನ್ನು ಅನುಮೋದಿಸುವುದು ಅನುಸರಿಸಿಕೊಂಡು ಬರಲಾಗಿರುವ ಸ್ಥಾಪಿತ ಪರಂಪರೆಗೆ ವಿರುದ್ಧ ಎಂದು ವಿರೋಧ ಪಕ್ಷಗಳು ಹೇಳಿದವು. ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾದಳ, ತೆಲುಗುದೇಶಂ ಪಕ್ಷ, ಭಾರತದ ಕಮ್ಯೂನಿಸ್ಟ್ ಪಕ್ಷ ಮತ್ತು ಸಿಪಿಐ(ಎಂ) ಪಕ್ಷಗಳ ನಾಯಕರು ಪತ್ರಕ್ಕೆ ಸಹಿ ಮಾಡಿದ್ದರು. ನಾವು, ಕೆಳಗೆ ಸಹಿ ಮಾಡಿರುವ ಪಕ್ಷಗಳು, ಶಾಸನಗಳನ್ನು ಸಂಸದೀಯ ಸ್ಥಾಯಿ ಸಮಿತಿಗಳ ಪರಾಮರ್ಶೆ ಇಲ್ಲದೆ ಸರ್ಕಾರವು ತರಾತುರಿಯಲ್ಲಿ ಅಂಗೀಕರಿಸುತ್ತಿರುವುದಕ್ಕೆ ಗಂಭೀರ ಕಳವಳವನ್ನು ದಾಖಲು ಪಡಿಸಲು ಇಚ್ಛಿಸುತ್ತೇವೆ. ಇದು ಶಾಸನ ರೂಪಿಸುವ ಸ್ಥಾಪಿತ ಪರಂಪರೆ ಮತ್ತು ಆರೋಗ್ಯಕರ ಸಂಪ್ರದಾಯಗಳಿಂದ ಮೂಲಭೂತವಾಗಿ ದೂರಸರಿದಂತೆ  ಎಂದು ಪತ್ರ ತಿಳಿಸಿತು. ೧೪ನೇ ಲೋಕಸಭೆಯಲ್ಲಿ ಶೇಕಡಾ ೬೦ರಷ್ಟು ಮಸೂದೆಗಳನ್ನು ಸಂಸದೀಯ ಸಮಿತಿಗಳಿಗೆ ಪರಾಮರ್ಶೆಗೆ ಕಳುಹಿಸಲಾಗಿದ್ದರೆ, ೧೫ನೇ ಲೋಕಸಭೆಯಲ್ಲಿ ಶೆಕಡಾ ೭೧ರಷ್ಟು ಮಸೂದೆಗಳನ್ನು ಪರಾಮರ್ಶೆಗೆ ಕಳುಹಿಸಲಾಗಿತ್ತು ಎಂದು ಪತ್ರ ಹೇಳಿತು. ಏನಿದ್ದರೂ, ೧೬ನೇ ಲೋಕಸಭೆಯಲ್ಲಿ ಶೇಕಡಾ ೨೬ರಷ್ಟು ಮಸೂದೆಗಳನ್ನು ಮಾತ್ರವೇ ಪರಾಮರ್ಶೆಗೆ ಕಳುಹಿಸಲಾಗಿದೆ    ಎಂದು ಪತ್ರ ತಿಳಿಸಿತು.  ಈಗ ೧೭ನೇ ಲೋಕಸಭೆಯಲ್ಲಿ, ೧೪ ಮಸೂದೆಗಳನ್ನು ಈಗಾಗಲೇ ಮೊದಲ ಅಧಿವೇಶನದಲ್ಲಿಯೇ ಅನುಮೋದಿಸಲಾಗಿದೆ. ಇವುಗಳಲ್ಲಿ ಯಾವುದೇ ಒಂದು ಮಸೂದೆಯನ್ನೂ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಗೆ ಶಾಸನಬದ್ಧ ಪರಾಮರ್ಶೆಗಾಗಿ ಕಳುಹಿಸಿಲ್ಲ. ಶಾಸನದ ವಿಷಯ ಮತ್ತು ಗುಣಮಟ್ಟ ವರ್ಧನೆ ಸಲುವಾಗಿ ಸಂಸದೀಯ ಸಮಿತಿಗಳಲ್ಲಿ ಮಸೂದೆಗಳ ಪರಾಮರ್ಶೆ, ಚರ್ಚೆ ಮೂಲಕ ಬಹಿರಂಗ ಸಮಾಲೋಚ ನಡೆಸುವುದು ದೀರ್ಘಕಾಲದ ಸ್ಥಾಪಿತ ಸಂಪ್ರದಾಯವಾಗಿದೆಎಂದು ಪತ್ರ ಹೇಳಿತು. ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪಕ್ಷಗಳು ಸಭಾಪತಿಯವರನ್ನು ಕೋರಿತು.
2019: ನವದೆಹಲಿ: ದೇಶದ ಭಯೋತ್ಪಾದನೆ ನಿಗ್ರಹ ಕಾನೂನಿನ ಪ್ರಸ್ತಾಪಿತ ತಿದ್ದುಪಡಿಗಳು ಜಾರಿಗೆ ಬಂದೊಡನೆಯೇ ಮೊತ್ತ ಮೊದಲನೆಯದಾಗಿ ಭಯೋತ್ಪಾದಕರು ಎಂಬುದಾಗಿ ಘೋಷಿತವಾಗಲಿರುವ ವ್ಯಕ್ತಿಗಳು ಭಾರತಕ್ಕೆ ದೀರ್ಘ ಕಾಲದಿಂದ ಬೇಕಾಗಿರುವ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್. ಅಧಿಕಾರಿಗಳು ಇಲ್ಲಿ ವಿಚಾರವನ್ನು ತಿಳಿಸಿದರು. ಭಯೋತ್ಪಾದಕರು ಎಂಬುದಾಗಿ ಘೋಷಿತರಾಗುವ ವ್ಯಕ್ತಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಮತ್ತು ಅವರ ಪ್ರವಾಸಗಳ ಮೇಲೆ ನಿಷೇಧ ವಿಧಿಸಲು ಅವಕಾಶವನ್ನು ಲೋಕಸಭೆಯು ಅನುಮೋದಿಸಿರುವ ಮತ್ತು ರಾಜ್ಯಸಭೆಯ ಒಪ್ಪಿಗೆಗಾಗಿ ಕಾದಿರುವ ಅಕ್ರಮ ಚಟುವಟಿಕೆಗಳ (ನಿಗ್ರಹ) ತಿದ್ದುಪಡಿ ಮಸೂದೆ, ೨೦೧೯, ನೀಡುತ್ತದೆ.  ೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ರೂವಾರಿ ಎನ್ನಲಾಗಿರುವ ಸಯೀದ್ ಮತ್ತು ಇತ್ತೀಚಿನ ಪುಲ್ವಾಮ ದಾಳಿ ಹಾಗೂ ೨೦೦೧ರ ಸಂಸತ್ ಮೇಲಿನ ಭಯೋತ್ಪಾದಕ ದಾಳಿಗಳಿಗೆ ಹೊಣೆಗಾರನಾಗಿರುವ ಅಜರ್ ಅವರು ಮಸೂದೆಗೆ ರಾಜ್ಯಸಭೆಯ ಅನುಮೋದನೆ ಲಭಿಸುತ್ತಿದ್ದಂತೆಯೇಭಯೋತ್ಪಾದಕರುಎಂಬುದಾಗಿ ಘೋಷಿತರಾಗಲಿರುವ ಮೊದಲ ವ್ಯಕ್ತಿಗಳು ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಪ್ರಸ್ತಾಪಿತ ಕಾನೂನು ವಿಶ್ವಸಂಸ್ಥೆ ಸಮಾವೇಶವು ನಿಗದಿ ಪಡಿಸಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ. ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ಬಳಿಕ ಮಾತ್ರವೇ ಯಾರೇ ವ್ಯಕ್ತಿಯನ್ನುಭಯೋತ್ಪಾದಕಎಂಬದಾಗಿ ಘೋಷಿಸಲು ಸಾಧ್ಯ ಎಂದು ಅಧಿಕಾರಿ ನುಡಿದರು. ಭಯೋತ್ಪಾದಕ ಎಂಬುದಾಗಿ ಘೋಷಿಸಲ್ಪಟ್ಟ ವ್ಯಕ್ತಿ ಕೇಂದ್ರ ಗೃಹ ಕಾರ್ಯದರ್ಶಿ ಅವರಿಗೆ ಮನವಿ ಮಾಡಬಹುದು. ಕೇಂದ್ರ ಗೃಹ ಕಾರ್ಯದರ್ಶಿಯು ಅಂತಹ ಮನವಿಯನ್ನು ೪೫ ದಿನಗಳ ಒಳಗಿನ ಅವಧಿಯಲ್ಲಿ ಇತ್ಯರ್ಥ ಮಾಡಬೇಕು. ಇದರ ಜೊತೆಗೆ, ಭಯೋತ್ಪಾದಕ ಎಂಬುದಾಗಿ ಮಾಡಲಾಗುವ ಘೋಷಣೆ ವಿರುದ್ಧ, ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದ, ಕನಿಷ್ಠ ಇಬ್ಬರು ನಿವೃತ್ತ ಸರ್ಕಾರಿ ಕಾರ್ಯದರ್ಶಿಗಳು ಸದಸ್ಯರಾಗಿ ಇರುವ ಪರಿಶೀಲನಾ ಸಮಿತಿಗೆ ಭಯೋತ್ಪಾದಕ ಎಂಬುದಾಗಿ ಘೋಷಿತನಾದ ವ್ಯಕ್ತಿ ದೂರು ನೀಡಬಹುದು.ಭಯೋತ್ಪಾದಕ ಎಂಬುದಾಗಿ ಒಮ್ಮೆ ಘೋಷಿತನಾದರೆ ಅಂತಹ ವ್ಯಕ್ತಿಯ ಆಸ್ತಿ ಮುಟ್ಟುಗೋಲಿನಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು. ಏನಿದ್ದರೂ ಸದರಿ ಕಾಯ್ದೆಗೆ ಸಂಸತ್ತಿನ ಅನುಮೋದನೆ ಹಾಗೂ ರಾಷ್ಟ್ರಪತಿಯವರ ಅಂಕಿತ ಲಭಿಸಿದ ಬಳಿಕ ಅದರ ಅಡಿಯಲ್ಲಿ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ಇನ್ನೊಬ್ಬ ಅಧಿಕಾರಿ ನುಡಿದರು. ಭಯೋತ್ಪಾದಕ ಎಂಬುದಾಗಿ ಘೋಷಿತನಾಗುವ ವ್ಯಕ್ತಿಯ ಮಾಹಿತಿಗಳನ್ನು ವಿದೇಶೀ ಸರ್ಕಾರಗಳ ಜೊತೆಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಕಳೆದ ೧೫ ವರ್ಷಗಳಲ್ಲಿ, ೪೨ ಸಂಘಟನೆಗಳನ್ನು ಕಾನೂನುಬಾಹಿರ ಸಂಘಟನೆಗಳು ಎಂಬುದಾಗಿ ಘೋಷಿಸಲಾಗಿದೆ. ಅವುಗಳ ಪೈಕಿ ದೀನದಾರ್ ಅಂಜುಮನ್ ಮಾತ್ರ ಸರ್ಕಾರದ ಮುಂದೆ ನಿರ್ಧಾರದ ವಿರುದ್ಧ ಮನವಿ ಸಲ್ಲಿಸಿದೆ. ಏನಿದ್ದರೂ, ಸರ್ಕಾರ ತನ್ನ ನಿರ್ಧಾರವನ್ನು ಮರುದೃಢೀಕರಣ ಮಾಡಿದ ಬಳಿಕ ಸಂಘಟನೆಯು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿಲ್ಲ. ಸಂಘಟನೆಗಳಿಗೆ ಸಂಬಂಧಿಸಿದಂತೆ ತಡೆಗಳು ಹಾಗೂ ಸಮತೋಲನಗಳು ಗಟ್ಟಿಮುಟ್ಟಾಗಿವೆ. ವ್ಯಕ್ತಿಗಳಿಗೆ ಸಂಬಂಧಿಸಿದಂತೆಯೂ ಅಂತಹುದೇ ದೃಢತೆಯನ್ನು ತರಲಾಗುವುದು ಎಂದು ಅವರು ಹೇಳಿದರು. ಲೋಕಸಭೆಯು ಬುಧವಾರ ವ್ಯಕ್ತಿಗಳನ್ನು ಭಯೋತ್ಪಾದಕರು ಎಂಬುದಾಗಿ ಘೋಷಿಸಲು ಅವಕಾಶ ನೀಡುವ ಭಯೋತ್ಪಾದನೆ ನಿಗ್ರಹ ಕಾಯ್ದೆ ಮೇಲಿನ ತಿದ್ದುಪಡಿ ಮಸೂದೆಗೆ ತನ್ನ ಅನುಮೋದನೆ ನೀಡಿತ್ತು. ಭಯೋತ್ಪಾದನೆಯನ್ನು ಮೂಲದಿಂದಲೇ ಚಿವುಟಿಹಾಕಲು ಅತ್ಯಂತ ಮಹತ್ವದ ಕ್ರಮ ಇದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಮಸೂದೆ ದುರುಪಯೋಗದ ಸಾಧ್ಯತೆಯನ್ನು ಅವರು ಬಲವಾಗಿ ಅಲ್ಲಗಳೆದಿದ್ದರು. ಭಯೋತ್ಪಾದನೆ ವಿರುದ್ಧದ ಮೋದಿ ಸರ್ಕಾರದ ಶೂನ್ಯ ಸಹನೆ ನೀತಿಯನ್ನು ಪುನರುಚ್ಚರಿಸಿದ ಶಾ, ಭಯೋತ್ಪಾದನಾ ಅಪರಾಧಗಳ ತನಿಖೆಯನ್ನು ತ್ವರಿತಗೊಳಿಸಲು ಮಸೂದೆ ನೆರವಾಗಲಿದೆ ಎಂದು ಹೇಳಿದ್ದರು. ’ವ್ಯಕ್ತಿಗಳ ಮಾನಸಿಕ ಸ್ಥಿತಿಯೇ ಭಯೋತ್ಪಾದನೆಯ ಜನ್ಮಸ್ಥಾನ. ವ್ಯಕ್ತಿಗಳನ್ನು ಬೇರೆ ವ್ಯಕ್ತಿಗಳಿಂದ ಭಯೋತ್ಪಾದನೆಯತ್ತ ಸೆಳೆಯುವುದನ್ನೇ ತಡೆದರೆ ಹಾವಳಿ ನಿರ್ನಾಮವಾಗುತ್ತದೆ ಎಂದು ಅವರು ಹೇಳಿದ್ದರು.

2019: ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಮೇಲಿನ ಚರ್ಚೆಯ ಕಾಲದಲ್ಲಿ ಲಿಂಗತಾರತಮ್ಯ ಮತ್ತು ಸ್ತ್ರೀದ್ವೇಷಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಲೋಕಸಭೆಯಲ್ಲಿ ಕ್ಷಮೆಯಾಚನೆ ಮಾಡುವಂತೆ ಸಮಾಜವಾದಿ ಪಕ್ಷದ ಸಂಸತ್ ಸದಸ್ಯ ಆಜಂ ಖಾನ್ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು  ಹೇಳಿದರು. ಲೋಕಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಸದನ ನಾಯಕರ ಸಭೆಯಲ್ಲಿ ಖಾನ್ ಅವರು ಕ್ಷಮೆ ಯಾಚಿಸಬೇಕು ಅಥವಾ ಕ್ರಮ ಎದುರಿಸಬೇಕು ಎಂದು ನಿರ್ಧರಿಸಲಾಯಿತು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಖಾನ್ ಅವರಿಗೆ ಕ್ಷಮೆಯಾಚಿಸುವಂತೆ ಸೂಚಿಸಲಿದ್ದಾರೆ. ’ಸಭಾಧ್ಯಕ್ಷರು ಆಜಂ ಖಾನ್ ಅವರಿಗೆ ರಮಾ ದೇವಿ ಅವರ ವಿರುದ್ಧ ಮಾಡಿದ ತಮ್ಮ ಟೀಕೆಗಳಿಗಾಗಿ ಸದನದಲ್ಲಿ ಭೇಷರತ್ ಕ್ಷಮೆ ಯಾಚಿಸುವಂತೆ ಸೂಚಿಸುವರು. ಅವರು ಅದನ್ನು ಪಾಲಿಸದೇ ಇದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡಲಾಗಿದೆಎಂದು ಜೋಶಿ ನುಡಿದರು. ಬಿಜೆಪಿ ಸಂಸತ್ ಸದಸ್ಯೆ ರಮಾದೇವಿ ಅವರು ಗುರುವಾರ ಸಭಾಧ್ಯಕ್ಷ ಪೀಠದಲ್ಲಿದ್ದಾಗ ಅವರನ್ನು ಉದ್ದೇಶಿಸಿ ಆಜಂ ಖಾನ್ ಅವರು ಮಾಡಿದ್ದ ಟೀಕೆ ದ್ವಂದ್ವಾರ್ಥದ, ದುರುದ್ದೇಶಪೂರಿತವಾದ, ಖಂಡನಾರ್ಹವಾದ ಟೀಕೆಯಾಗಿದ್ದು, ಕಪ್ಪು ಚುಕ್ಕೆಯಾಗಿದೆ ಎಂದು ಕೆಳಮನೆಯ ಎಲ್ಲ ಶಾಸನಕರ್ತರು, ಸಚಿವರು ಮತ್ತು ಸಂಸದರು ಹಾಗೂ ರಾಜಕಾರಣಿಗಳು ಪಕ್ಷಾತೀತವಾಗಿ ಖಂಡಿಸಿದ್ದು,  ಕ್ಷಮೆ ಯಾಚನೆ ಮಾಡುವಂತೆ ಖಾನ್ ಅವರನ್ನು ಒತ್ತಾಯಿಸಿದರು. ಲೋಕಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿ ಸಭಾಧ್ಯಕ್ಷರಿಗೆ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಿದೆ. ಓಂ ಬಿರ್ಲಾ ಅವರ ಜೊತೆಗಿನ ಸಭೆಯ ವೇಳೆಯಲ್ಲಿ ಪಕ್ಷಗಳು ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ವಹಿಸಿದವು ಎಂದು ಮೂಲಗಳು ಹೇಳಿದವು. ಆಜಂ ಖಾನ್ ಅವರ ಲಿಂಗತಾರಮ್ಯದ ಟೀಕೆಯನ್ನು ಪ್ರಸ್ತಾಪಿಸಿದ ಜವುಳಿ ಸಚಿವೆ ಸ್ಮೃತಿ ಇರಾನಿ ಅವರುಮಹಿಳೆಯರನ್ನು ಅವರು ಯಾವುದೇ ಪಕ್ಷದವರಾಗಿದ್ದರೂ ಅವಮಾನಿಸಬಾರದು ಎಂದು ಹೇಳಿದರು. ದುರ್ವರ್ತನೆಯನ್ನು ತೋರಿ ನೀವು ತಪ್ಪಿಸಿಕೊಂಡು ಹೋಗಲಾರಿರಿ ಎಂದೂ ಸಚಿವೆ ಖಾನ್ ಅವರನ್ನು ಎಚ್ಚರಿಸಿದರು. ಟೀಕೆಗಳನ್ನು ಸದನದ ಹೊರಗೆ ಮಾಡಿದ್ದರೆ ಪೊಲೀಸರು ಅವರನ್ನು ಬಂಧಿಸುತ್ತಿದ್ದರು ಎಂದು ಇರಾನಿ ಅವರು ಲೋಕಸಭೆಯಲ್ಲಿ ಹೇಳಿದರು. ಖಾನ್ ಅವರ ಸ್ತ್ರೀದ್ವೇಷಿ ಹೇಳಿಕೆಗೆ ಗುರಿಯಾದ ರಮಾದೇವಿ ಅವರು ಖಾನ್ ಅವರು ಎಂದೂ ಮಹಿಳೆಯರನ್ನು ಗೌರವಿಸಿಲ್ಲವಾದ್ದರಿಂದ ಅವರನ್ನು ಲೋಕಸಭೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ’ಅವರು ಎಂದೂ ಮಹಿಳೆಯರನ್ನು ಗೌರವಿಸಿಲ್ಲ, ಅವರು ಜಯಪ್ರದಾ ಜಿ ಅವರ ಬಗೆಗೂ ಕೀಳಾಗಿ ಮಾತನಾಡಿದ್ದು ನಮಗೆ ಗೊತ್ತಿದೆ. ಅವರಿಗೆ ಲೋಕಸಭೆಯಲ್ಲಿ ಇರುವ ಹಕ್ಕಿಲ್ಲ. ಅವರನ್ನು ವಜಾಮಾಡುವಂತೆ ನಾನು ಸಭಾಧ್ಯಕ್ಷರನ್ನು ಕೋರುತ್ತೇನೆ. ಆಜಂ ಖಾನ್ ಅವರು ಕ್ಷಮೆ ಕೇಳಲೇಬೇಕುಎಂದು ರಮಾದೇವಿ ಅವರು ಒತ್ತಾಯಿಸಿದರು. ಬಿಜೆಪಿ, ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ), ತೃಣಮೂಲ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಬಿಜು ಜನತಾ ದಳ (ಬಿಜೆಡಿ) ಸೇರಿದಂತೆ ವಿವಿಧ ಪಕ್ಷಗಳ ಹಲವಾರು ಸದಸ್ಯರು ಇಂತಹ ವರ್ತನೆ ವಿರುದ್ಧ ಸದನವು ಕಠಿಣ ಸಂದೇಶ ನೀಡಬೇಕು ಎಂದು ಒತ್ತಾಯಿಸಿದರು.
2019: ಚಂಡೀಗಢ: ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕ (ಲೌಡ್ ಸ್ಪೀಕರ್) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ನೀಡಿತು. ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಸೀದಿಗಳು ಹಾಗೂ ಗುರುದ್ವಾರಗಳಲ್ಲಿಯೂ ಜಿಲ್ಲಾಧಿಕಾರಿಗಳ ಲಿಖಿತ ಅನುಮತಿ ಇಲ್ಲದೇ ಲೌಡ್ ಸ್ಪೀಕರ್ ಗಳನ್ನು ಬಳಸುವುದಕ್ಕೆ ಕೋರ್ಟ್ ನಿರ್ಬಂಧ ವಿಧಿಸಿತು. ಬೆಳಗ್ಗೆ ೬ಗಂಟೆಯಿಂದ ರಾತ್ರಿ ೧೦ಗಂಟೆವರೆಗೆ ಯಾವುದೇ ಧ್ವನಿವರ್ಧಕ ಅಥವಾ ಸಂಗೀತ ಸಾಧನಗಳನ್ನು ಬಳಸುವುದಕ್ಕೆ ಅವಕಾಶ ಇಲ್ಲ. ಅಷ್ಟೇ ಅಲ್ಲ ಸಂಗೀತ ರಸಮಂಜರಿ, ಸಂಗೀತ ಕಾರ್ಯಕ್ರಮಗಳಲ್ಲಿ ಶಬ್ದ ೧೦ ಡೆಸಿಬಲ್ಸ್ ಗಿಂತ ಹೆಚ್ಚಾಗಿರಬಾರದು ಎಂದು ಹೈಕೋರ್ಟ್ ಆದೇಶ ನೀಡಿತು. ಈ ಮಧ್ಯೆ, ವಾರ್ಷಿಕವಾಗಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ೧೫ ದಿನಗಳ ಕಾಲ ಧ್ವನಿವರ್ಧಕ ಬಳಸಲು ಅವಕಾಶ ನೀಡಿತು. ರಾತ್ರಿ ೧೦ರಿಂದ ಮಧ್ಯರಾತ್ರಿವರೆಗೆ ಧ್ವನಿ ವರ್ಧಕ ಬಳಸಬಹುದು ಎಂದು ಕೋರ್ಟ್ ತಿಳಿಸಿತು.  ರಾಜ್ಯದಲ್ಲಿ ಆದೇಶವನ್ನು ಜಾರಿಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ರಾಜೀವ್ ಶರ್ಮಾ ಮತ್ತು ಹರೀಂದರ್ ಸಿಂಗ್ ಸಿಧು ಅವರನ್ನು ಒಳಗೊಂಡ ಹೈಕೋರ್ಟ್ ಪೀಠ ನಿರ್ದೇಶನ ನೀಡಿತು.
2019: ನವದೆಹಲಿ: ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಗೆ ಸಮಾನವಾದ ಸ್ಥಾನಮಾನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ  ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯಾದ ಜನಗಣ ಮನಕ್ಕೆ ಸಮಾನವಾದ ಮಾನ್ಯತೆ ನೀಡಿ ಸೂಕ್ತ ಗೌರವ ನೀಡಬೇಕೆಂದು ಕೋರಿ ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಕುಮಾರ್ ಪಾಂಡೆ ಉಪಾಧ್ಯಾಯ ಅವರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜನಗಣ ಮನ ರಾಷ್ಟ್ರಗೀತೆಯಷ್ಟೇ ಬಂಕೀಮ್ ಚಂದ್ರ ಚಟರ್ಜಿಯವರು ಬರೆದಿರುವ ವಂದೇ ಮಾತರಂಗೂ ಸಮಾನ ಸ್ಥಾನಮಾನ ನೀಡುವ ನಿಯಮಾವಳಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಉಪಾಧ್ಯಾಯ ಅವರು ಮನವಿ ಮಾಡಿಕೊಂಡಿದ್ದರು. ಅಲ್ಲದೇ ಎಲ್ಲಾ ಶಾಲೆಗಳಲ್ಲಿಯೂ ವಂದೇ ಮಾತರಂ ಮತ್ತು ಜನಗಣ ಮನ ಹಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಉಪಾಧ್ಯಾಯ ಅರ್ಜಿಯಲ್ಲಿ ಕೋರಿದ್ದರು ಎಂದು ವರದಿ ತಿಳಿಸಿತು.
2018: ನವದೆಹಲಿ: ಬಿಹಾರದ ಬಾಲಿಕಾ ಆಶ್ರಯಧಾಮದ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರ ಆದೇಶ ನೀಡಿತು. ಆಶ್ರಯ ಧಾಮವನ್ನು ನಡೆಸುತ್ತಿರುವ ಸರ್ಕಾರೇತರ ಸಂಘಟನೆಯ ಮುಖ್ಯಸ್ಥ ಬ್ರಜೇಶ್ ಠಾಕೂರ್ ಕಳೆದ ಲೋಕಸಭಾ ಚುನಾವಣೆ ಕಾಲದಲ್ಲಿ ಮುಜಾಫ್ಫರಪುರದಲ್ಲಿ ಮುಖ್ಯಮಂತ್ರಿಯವರ ಚುನಾವಣಾ ಪ್ರಚಾರ ತಂಡದಲ್ಲಿದ್ದ ಎಂಬುದಾಗಿ ಆರ್ ಜೆಡಿ ಶಾಸಕ ತೇಜಸ್ವಿ ಯಾದವ್ ಆಪಾದಿಸಿದ ಒಂದು ದಿನದ ಬಳಿಕ ಬೆಳವಣಿಗೆ ನಡೆಯಿತು. ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವಂತೆ ಯಾದವ್ ಆಗ್ರಹಿಸಿದ್ದರು.  ಬಿಹಾರ ಆಶ್ರಯಧಾಮಗಳಲ್ಲಿ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ವರದಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಾಜ್ಯ ಸರ್ಕಾರವು ಮನವಿ ಮಾಡಿದರೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವ ಬಗ್ಗೆ ಕೇಂದ್ರವು ಪರಿಶೀಲಿಸುವುದು ಎಂದು ಹೇಳಿದ್ದರು.

2018: ವಾಷಿಂಗ್ಟನ್: ಹಿಮಾಲಯ ಪ್ರದೇಶದ ಡೊಕ್ಲಾಮ್ ನಲ್ಲಿ ಚೀನಾ ಸದ್ದು ಗದ್ದಲ ಇಲ್ಲದೆ ಮತ್ತೆ ತನ್ನ ರಸ್ತೆ ನಿರ್ಮಾಣ ಇತ್ಯಾದಿ ಚಟುವಟಿಕೆಗಳನ್ನು ಆರಂಭಿಸಿದೆಯೇ? ಅಮೆರಿಕದ ಕಾಂಗ್ರೆಸ್ ಶಾಸಕರೊಬ್ಬರ ಮಾತನ್ನು ನಂಬುವುದಾದರೆ ಹೌದುಚೀನಾ ಸದ್ದು ಗದ್ದಲ ಇಲ್ಲದೆಯೇ ಡೊಕ್ಲಾಮ್ ಪ್ರದೇಶದಲ್ಲಿ ಚೀನಾ ಮತ್ತೆ ತನ್ನ ಚಟುವಟಿಕೆಗಳನ್ನು ಸದ್ದು ಗದ್ದಲ ಇಲ್ಲದೆಯೇ ಪುನಾರಂಭ ಮಾಡಿದೆ ಎಂದು ಇಲ್ಲಿ ಕಾಂಗ್ರೆಸ್ ಸಭೆಗೆ ತಿಳಿಸಿದ ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಭಾರತವಾಗಲಿ, ಭೂತಾನ್ ಆಗಲಿ ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರುಹಿಮಾಲಯ ಪ್ರದೇಶದಲ್ಲಿ ಚೀನಾ ಕೈಗೊಂಡಿರುವ ಕ್ರಮಗಳು ವಿವಾದಿತ ದಕ್ಷೀಣ ಚೀನಾ ಸಮುದ್ರದಲ್ಲಿ ಬೀಜಿಂಗ್ ನಡೆಸುತ್ತಿರುವ ಚಟುವಟಿಕೆಗಳನ್ನೇ ಹೋಲುತ್ತಿವೆ ಎಂದು ಅವರು ನುಡಿದರು. ಚೀನಾವು ದಕ್ಷಿಣ ಚೀನಾ ಸಮುದ್ರದಾದ್ಯಂತ ತನಗೆ ಸಾರ್ವಭೌಮತ್ವ ಇದೆ ಎಂದು ಚೀನಾ ಪ್ರತಿಪಾದಿಸುತ್ತಿದೆ. ವಿಯೆಟ್ನಾಮ್, ಮಲೇಶ್ಯಾ, ಫಿಲಿಪ್ಪೈನ್ಸ್ , ಬ್ರೂನಿ ಮತ್ತು ತೈವಾನ್ ಇದಕ್ಕೆ ವಿರುದ್ಧವಾದ ಪ್ರತಿಪಾದನೆಗಳನ್ನು ಮಾಡುತ್ತಿವೆಚೀನಾವು ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಪ್ರಾದೇಶಿಕ ವಿವಾದದಲ್ಲಿ ನಿರತವಾಗಿದೆ. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳಲ್ಲಿ ಚೀನಾವು ಪ್ರಾದೇಶಿಕ ವಿವಾದಗಳನ್ನೂ ನಡೆಸುತ್ತಿದೆ.
2018: ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ ಚುನಾವಣೆಯ ಮತಎಣಿಕೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ --ಇನ್ಸಾಫ್ (ಪಿಟಿಐ) ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್ ಬೆಂಬಲಿತ ಅಲ್ಲಾ ಹೋ ಅಕ್ಬರ್ ತೆಹ್ರೀಕ್ ಪಕ್ಷವನ್ನು ಪಾಕ್ ಮತದಾರರು ಸಾರಾ ಸಗಟಾಗಿ ತಿರಸ್ಕರಿಸಿದ್ದು ಬೆಳಕಿಗೆ ಬಂದಿತು. ಉಗ್ರ ಸಯೀದ್ ಮಿಲ್ಲಿ ಮುಸ್ಲಿಂ ಲೀಗ್ ಗೆ ರಾಜಕೀಯ ಪಕ್ಷ ಎಂದು ಮಾನ್ಯತೆ ಕೊಡಲು ಪಾಕ್ ಚುನಾವಣಾ ಆಯೋಗ ನಿರಾಕರಿಸಿತ್ತು. ಹಿನ್ನೆಲೆಯಲ್ಲಿ ಅಲ್ಲಾ ಹೋ ಅಕ್ಬರ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಲಾಗಿತ್ತು.. ಬಳಿಕ ಸಯೀದ್ ಬೆಂಬಲಿತ ಅಭ್ಯರ್ಥಿಗಳು ಪಕ್ಷದ ಬ್ಯಾನರ್ ಹಿಡಿದುಕೊಂಡು ಸಾರ್ವತ್ರಿಕ ಚುನಾವಣೆಯಲ್ಲಿ ಅಖಾಡಕ್ಕಿಳಿದಿದ್ದರು. ರಾಜಕೀಯ ಪಕ್ಷ ಎಂದು ಮಾನ್ಯತೆ ಪಡೆಯದ ಉಗ್ರ ಹಫೀಜ್ ಸ್ಥಾಪಿತ ಮಿಲಿ ಮುಸ್ಲಿಂ ಲೀಗ್ ೨೬೫ ಅಭ್ಯರ್ಥಿಗಳು ಅಲ್ಲಾಹು ಅಕ್ಬರ್ ತೆಹ್ರೀಕ್(ಎಎಟಿ) ಬ್ಯಾನರ್ನಡಿಯಲ್ಲಿ ಸ್ಪರ್ಧಿಸಿದ್ದರು. ೮೦ ಅಭ್ಯರ್ಥಿಗಳು ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಮತ್ತು ೧೮೫ ಪ್ರಾದೇಶಿಕ ಅಸೆಂಬ್ಲಿ ಸ್ಥಾನಗಳಿಗೆ ಸ್ಪರ್ಧಿಸಿದ್ದರು.  ಡಾನ್ ಡಾಟ್ ಕಾಂನ ಫಲಿತಾಂಶದ ಪ್ರಕಾರ, ೨೭೨ ಸ್ಥಾನಗಳ ಪೈಕಿ ಎಎಟಿ (ಅಲ್ಲಾ ಹೋ ಅಕ್ಬರ್ ಪಕ್ಷ) ಕೇವಲ ಒಂದು ಸ್ಥಾನದಲ್ಲಷ್ಟೇ ಗೆಲುವು ಸಾಧಿಸಿದೆ ಎಂದು ಹೇಳಲಾಯಿತು..


2018: ನವದೆಹಲಿ: ಚರ್ಚ್ ಪಾದ್ರಿಗಳಿಗೆ ಸಂಬಂಧಿಸಿದ ಅತ್ಯಾಚಾರ ಪ್ರಕರಣಗಳು ದಿಢೀರನೆ ಹೆಚ್ಚಿರುವುದು ಏಕೆ ಎಂದು ಸುಪ್ರೀಂಕೋರ್ಟ್ ಅಚ್ಚರಿ ವ್ಯಕ್ತ ಪಡಿಸಿತುನ್ಯಾಯಮೂರ್ತಿಗಳಾದ ಎಕೆ ಸಿಕ್ರಿ ಮತ್ತು ಆಶೋಕ ಭೂಷಣ್ ಅವರನ್ನು ಒಳಗೊಂಡ ಪೀಠವು ಕೇರಳದ ಎರಡು ಚರ್ಚ್ಗಳ ಪಾದ್ರಿಗಳಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳು ತನ್ನ ಮುಂದೆ ಬಂದಾಗ ಪ್ರಶ್ನೆಯನ್ನು ಎತ್ತಿತುಎರಡು ಪ್ರತ್ಯೇಕ ಪ್ರಕರಣಗಳು ಒಂದಾದ ಬಳಿಕ ಒಂದರಂತೆ ಪೀಠದ ಮುಂದೆ ಬಂದಿದ್ದವು. ಮೊದಲ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಪೀಠಏನಾಗುತ್ತಿದೆ? ಪಾದ್ರಿಗಳ ಪ್ರಕರಣ ಒಂದರ ನಂತರ ಮತ್ತೊಂದು’ ಎಂದು ಉದ್ಘರಿಸಿತು.  ‘ನಾವು ಹೇಳುತ್ತಿರುವುದು ಏನೆಂದರೆ ಸೆಕ್ಷನ್ ೩೭೬ (ಅತ್ಯಾಚಾರ) ಅಡಿಯಲ್ಲಿ ದಾಖಲಾದ ಪಾದ್ರಿಗಳಿಗೆ ಸಂಬಂಧಿಸಿದ ಇಷ್ಟೊಂದು ಪ್ರಕರಣಗಳು ಬರುತ್ತಿವೆಯಲ್ಲ ಏಕೆ ಎಂದು’ ಎಂದು ಪೀಠ ಹೇಳಿತುಪೀಠದ ಮುಂದೆ ಬಂದ ಮೊದಲ ಪ್ರಕರಣದಲ್ಲಿ ಥೆರಾಕಂನ ಫಾದರ್ ಥಾಮಸ್ ಜೋಸೆಫ್ ಅವರು ಅತ್ಯಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ಮಾಡಲಾದ ಆಪಾದನೆಗಳನ್ನು ರದ್ದು ಪಡಿಸಬೇಕು ಎಂದು ಸುಪ್ರೀಂಕೋರ್ಟನ್ನು ಕೋರಿದ್ದರು. ಕೊಟ್ಟಿಯೂರು ಪಾದ್ರಿ ರಾಬಿನ್ ವಡಕ್ಕಂಚೆರಿ ಅವರ ವಿರುದ್ಧದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಜೋಸೆಫ್ ಅವರು ಸಹಕರಿಸಿದರು ಎಂದು ಆಪಾದಿಸಲಾಗಿದ್ದ ಪ್ರಕರಣದ ಇದು. ಪ್ರಕರಣದಲ್ಲಿ ಅತ್ಯಾಚಾರಕ್ಕೆ ಒಳಗಾದಳೆನ್ನಲಾದ ಬಾಲಕಿ ಬಳಿಕ ಮಗುವೊಂದಕ್ಕೆ ಜನ್ಮ ನೀಡಿದ್ದಳುಕಳೆದ ವರ್ಷ ವೇನಾಡ್ ಮಕ್ಕಳ ಕಲ್ಯಾಣ ಸಮಿತಿಯ (ಸಿ ಡಬ್ಲ್ಯೂಸಿ) ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲ್ಪಟ್ಟ ಜೋಸೆಫ್ ಅವರಲ್ಲದೆ ಐವರು ಕ್ರೈಸ್ತ ಸನ್ಯಾಸಿನಿಯರು ಮತ್ತು ಇಬ್ಬರು ವೈದ್ಯರೂ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

2018: ಇಸ್ಲಾಮಾಬಾದ್: ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯ ಪೂರ್ಣ ಫಲಿತಾಂಶ ಇನ್ನೂ ಘೋಷಣೆಯಾಗದೇ ಇದ್ದರೂ, ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಗೆಲುವು ಘೋಷಿಸಿಕೊಂಡಿದ್ದು, ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ವಿವಾದವನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಮತದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬುದಾಗಿ ಪ್ರತಿಸ್ಪರ್ಧಿ ಪಕ್ಷಗಳು ಆಪಾದಿಸಿರುವುದರ ಮಧ್ಯೆ, ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್ -- ಇನ್ಸಾಫ್ (ಪಿಟಿಐ) ಪಕ್ಷವು ೧೧೦ ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದು, ಜನಾದೇಶವು ತಮ್ಮ ಪರವಾಗಿ ಬಂದಿದೆ ಎಂದು ಇಮ್ರಾನ್ ಖಾನ್ ಘೋಷಿಸಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿದರು. ಸಂಪೂರ್ಣ ಫಲಿತಾಂಶ ಬರುವುದಕ್ಕೂ ಮುನ್ನವೇ ಮಾಧ್ಯಮಗಳ ಜೊತೆ ಮಾತನಾಡಿದ ಇಮ್ರಾನ್ ಖಾನ್ಶಾಂತಿಗಾಗಿ ಮತ್ತು ಪ್ರದೇಶದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ಒಟ್ಟಾಗಿ ದುಡಿಯಬೇಕು’ ಎಂದು ಹೇಳಿದರುಇನ್ನೊಂದೆಡೆಯಲ್ಲಿ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಚುಕೋರ ಜಮಾತ್ -ಉದ್ ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಪಕ್ಷವನ್ನು ಪಾಕಿಸ್ತಾನದ ಮತದಾರರು ಸಾರಾ ಸಗಟು ತಿರಸ್ಕರಿಸಿದರು ಮಧ್ಯೆ ಚುನಾವಣೆಯ ಪೂರ್ಣ ಫಲಿತಾಂಶ ಘೋಷಣೆಯಲ್ಲಿ ವಿಳಂಬವಾಗುತ್ತಿದೆ. ಇದರಲ್ಲಿ ಅಕ್ರಮ ಇದೆ ಎಂದು ವಿಪಕ್ಷಗಳು ಚುನಾವಣಾ ಆಯೋಗದ ಮೇಲೆ ಹರಿಹಾಯ್ದವು.  ಆದರೆ ಶೇಕಡಾ ೯೦ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಉಳಿದ ಫಲಿತಾಂಶಗಳೂ ೨೪ ಗಂಟೆಗಳ ಒಳಗೆ ಪ್ರಕಟಗೊಳ್ಳಲಿವೆ. ಯಾವುದೇ ವಿಳಂಬ ಆಗಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಪ್ರತಿಪಾದಿಸಿತು.

2016: ಅಬುಧಾಬಿ: ವಿಶ್ವದ ಅಂತ್ಯಂತ ದೊಡ್ಡ ಸೌರಶಕ್ತಿ ಚಾಲಿತ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಸೋಲಾರ್ ಇಂಪಲ್ಸ್ 2 ಈದಿನ ಮುಂಜಾನೆ ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೂಲಕ ತನ್ನ ಚೊಚ್ಚಲ ವಿಶ್ವ ಪಯಣವನ್ನು ಪೂರೈಸಿ ಇತಿಹಾಸ ನಿರ್ಮಿಸಿತು2015 ಮಾರ್ಚ್ ತಿಂಗಳಲ್ಲಿ ಪ್ರಯಾಣ ಆರಂಭಿಸಿದ ವಿಮಾನ ಒಂದು ವರ್ಷಕ್ಕೂ ಅಧಿಕ ಕಾಲ ಒಟ್ಟು 42,000 ಕಿ.ಮೀ.ಗೂ ಹೆಚ್ಚು ದೂರವನ್ನು ಕೇವಲ ಸೌರ ಶಕ್ತಿಯಿಂದಲೇ ಪಯಣಿಸಿ ವಿಶ್ವದ ನಾನಾಭಾಗಗಳಿಗೆ ಭೇಟಿ ನೀಡಿದೆಬರ್ಟ್ರಾಂಡ್ ಪಿಕಾರ್ಡ್ ಮತ್ತು ಆಂಡ್ರೆ ಬೋಸ್ಟ್ ಬರ್ಗ್ ವಿಮಾನವನ್ನು ಹಾರಿಸಿದ್ದಾರೆ.  

2016: ನವದೆಹಲಿಪಾಕಿಸ್ತಾನ ಮೂಲದ ಗುಂಪೊಂದು ಕಾಶ್ಮೀರದ ಘಟನಾವಳಿಗಳನ್ನು ಖಂಡಿಸಲು ಪ್ರಧಾನಿ ಮೋದಿಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಪೆಲ್ಲೆಟ್ ದಾಳಿಗೆ ತುತ್ತಾದವರಂತೆ ಚಿತ್ರಿಸಿ ವಿಕೃತ ಮನೋಭಾವ ಮೆರೆಯಿತು. ಹಿಬ್ಜುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನಿ ವನಿ ಹತ್ಯೆ ವಿಚಾರವಾಗಿ ಭಾರತ ಕೆಟ್ಟದಾಗಿ ನಡೆದುಕೊಂಡುಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದೆ ಮೂಲಕ ಕಾಶ್ಮೀರ ಹೋರಾಟಗಾರರನ್ನು ಹತ್ತಿಕ್ಕಲಾಗುತ್ತಿದೆ ಎಂದು ಭಾರತೀಯರು ನಂಬಿದ್ದಾರೆಇದೊಂದು ಅಮಾನವೀಯ ಘಟನೆಯಾಗಿದ್ದುಇದೇ ರೀತಿ ದಾಳಿ ಪ್ರಧಾನಿ ಮೋದಿನಟ ಅಮಿತಾಭ್ ಬಚ್ಚನ್ , ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಲೆ ದಾಳಿ ನಡೆದರೆ ಹೇಗಿರುತ್ತೇಎನ್ನುವುದನ್ನು ನೋಡಿಕೊಳ್ಳಿ ಎಂದು ಹೇಳಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ಭಾರತಕ್ಕೆ ಸವಾಲು ಹಾಕಿತು.

2016: ಪ್ಯಾರಿಸ್: ಫ್ರಾನ್ಸ್ ಉತ್ತರದಲ್ಲಿರುವ ರೋಯೆನ್ ನಗರದ ಇಗರ್ಜಿ (ಚರ್ಚ್) ಒಂದರಲ್ಲಿ ಇಬ್ಬರು ದುಷ್ಕರ್ವಿುಗಳು ದಾಳಿ ನಡೆಸಿ ಪಾದ್ರಿಯನ್ನು ಹತ್ಯೆ ಮಾಡಿದರುಪೊಲೀಸರು ಇಬ್ಬರೂ ದುಷ್ಕರ್ವಿುಗಳನ್ನು ಹೊಡೆದುರುಳಿಸಿದರುರೋಯೆನ್ ನಗರದ ದಕ್ಷಿಣ ಭಾಗದಲ್ಲಿರುವ ಸೈಂಟ್ ಎಟಿನೆ ಡು ರೌವರೆ ಇಗರ್ಜಿಗೆ ಏಕಾಏಕಿ ನುಗ್ಗಿದ ಇಬ್ಬರು ದುಷ್ಕರ್ವಿುಗಳು ಇಗರ್ಜಿಯಲ್ಲಿ ಇದ್ದವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದರುಒತ್ತೆಯಾಳುಗಳ ಪೈಕಿ ಪಾದ್ರಿಗಳನ್ನು ದುಷ್ಕರ್ವಿುಗಳು ಬ್ಲೇಡ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದರು.

 2016: ಮೊಗದಿಶುಸೋಮಾಲಿಯಾದ ರಾಜಧಾನಿ ಮೊಗದಿಶುವಿನ ವಿಮಾನ ನಿಲ್ದಾಣದಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿಗೆ 13 ಜನರು ಬಲಿಯಾಗಿಹಲವರು ಗಾಯಗೊಂಡರು. ಅಲ್ ಖೈದಾ ಸಂಘಟನೆಯೊಂದಿಗೆ ಗುರುತಿಸಿಕೊಂಡ ಸೋಮಾಲಿಯಾದ ಉಗ್ರಗಾಮಿ ಸಂಘಟನೆ ‘ಶಬಾಬ್’ ಸ್ಫೋಟದ ಹೊಣೆ ಹೊತ್ತುಕೊಂಡಿತು.

2016: ದಿ ಹೇಗ್: ಅಂತಾರಾಷ್ಟ್ರೀಯ ಮಟ್ಟದ ಪ್ರಕರಣವಾಗಿದ್ದ ಉಪಗ್ರಹ ಮತ್ತು ತರಂಗಾಂತರ ಹಂಚಿಕೆಯಲ್ಲಿ ಸರ್ಕಾರಿ ಸ್ವಾಮ್ಯದ ಅಂತರಿಕ್ಷ ಸಂಸ್ಥೆ ಇಸ್ರೋಗೆ ಭಾರಿ ಹಿನ್ನಡೆಯಾಯಿತುಪ್ರಕರಣಕ್ಕೆ ಸಂಬಂಧಿಸಿದಂತೆ 100 ಕೋಟಿ ದಂಡ ಪಾವತಿಸಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿತು. ಹೇಗ್ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಹಠಾತ್ ನೀತಿ ನಿಯಮಗಳ ಬದಲಾವಣೆ ತರುವ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಮಂಡಳಿಯಾಗಿದೆ

2016: ಕಾಶ್ಮೀರ: ಗಡಿ ನಿಯಂತ್ರಣಾ ರೇಖೆಯ ಬಳಿಯಿರುವ ಕುಪ್ವಾರ ಜಿಲ್ಲೆಯ ನೌಗಾಂವ್ ಪ್ರದೇಶದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಉಗ್ರಗಾಮಿಗಳನ್ನು ಭಾರತೀಯ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದರು. ಅದೇ ವೇಳೆ ಒಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿದವು. ಗಡಿಪ್ರದೇಶದೊಳಗೆ ನುಗ್ಗಿದ್ದ ಉಗ್ರರು ವಿದೇಶೀ ಮೂಲದವರು ಎಂದು ಮೂಲಗಳು ತಿಳಿಸಿದವು.

2016: ನವದೆಹಲಿ : ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂದು ಸಾಬೀತಾದ ಬೆನ್ನಲ್ಲೇ ರಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಶಾಟ್ಪುಟ್ ಪಟು ಇಂದ್ರಜೀತ್ ಸಿಂಗ್ ಕೂಡಾ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂಬುದು ಸಾಬೀತಾಯಿತು. ಜೂನ್ 22 ರಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ 28 ಹರೆಯದ ಇಂದ್ರಜೀತ್ನಿಷೇಧಿತ ಸ್ಟೆರಾಯ್ಡ್ ಸೇವನೆ ಮಾಡಿರುವುದು ಪತ್ತೆಯಾಯಿತು

2016: ನವದೆಹಲಿದೇಶದ ಎರಡನೇ ಅತೀ ದೊಡ್ಡ ಆನ್ಲೈನ್ ಫ್ಯಾಷನ್ ಮಾರಾಟ ಮಳಿಗೆ ಜಬಂಗ್ ಇದೀಗ ಫ್ಲಿಪ್ಕಾರ್ಟ್ ಸ್ವಾಮ್ಯದ ಮಿಂತ್ರ ಪಾಲಾಯಿತು. ಅತ್ಯಂತ ಜನಪ್ರಿಯ ಹಾಗೂ ದೇಶದ ಅತಿ ದೊಡ್ಡ ಆನ್ಲೈನ್ ಫ್ಯಾಷನ್ ಮಾರಾಟ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಿಂತ್ರಕ್ಕೆ ಜಬಂಗ್ ಸೇರ್ಪಡೆಯಿಂದಾಗಿ ಇನ್ನಷ್ಟು ಬಲಬಂದಂತಾಯಿತುಎರಡು ವರ್ಷದ ಹಿಂದೆ ಫ್ಲಿಪ್ಕಾರ್ಟ್ ಮಿಂತ್ರವನ್ನು ಖರೀದಿಸುವ ಮೂಲಕ ತನ್ನ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಿಕೊಂಡಿತ್ತು

2016: ಟೋಕಿಯೊ: ವಿಕಲಾಂಗರ ಆಶ್ರಯಧಾಮದ ಮೇಲೆ ದಾಳಿ ಮಾಡಿದ ವ್ಯಕ್ತಿಯೊಬ್ಬ 19 ವಿಕಲಾಂಗರನ್ನು ಚಾಕುವಿನಿಂದ ಇರಿದು ಸಾಯಿಸಿಇತರ 26 ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಈದಿನ ಬೆಳಗಿನಜಾವ ಘಟಿಸಿದೆ. ಟೋಕಿಯೋದಿಂದ ತುಸು ದೂರದ ಸಗಾಮಿಹಾರ ಬಳಿಯ ವಿಕಲಾಂಗರ ಆಶ್ರಯಧಾಮದೊಳಕ್ಕೆ ಏಕಾಏಕಿ ನುಗ್ಗಿದ ಆಗಂತುಕ ಮನಬಂದಂತೆ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೊಲೆಗಾರನನ್ನು ವಶಕ್ಕೆ ಪಡೆದರು. 26 ವರ್ಷದ ಬಂಧಿತ ಆರೋಪಿ  ವಿಕಲಾಂಗಧಾಮದ ಹಳೆಯ ನೌಕರನಾಗಿದ್ದಜಗತ್ತಿನಲ್ಲಿ ವಿಕಲಾಂಗರು ಇರಬಾರದುಅದಕ್ಕಾಗಿ ಅವರನ್ನು ಹತ್ಯೆ ಮಾಡಿದ್ದೇನೆ ಎಂದು ಈತ ಹೇಳಿಕೆ ನೀಡಿದಜಪಾನಿ ಇತಿಹಾಸದಲ್ಲೇ ಇದೊಂದು ಭಯಾನಕ ಕೃತ್ಯ ಎಂದು ಸ್ಥಳೀಯ ಮಾಧ್ಯಮಗಳು ಬಣ್ಣಿಸಿದವು.

2008:
ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟದ ದುಷ್ಕೃತ್ಯ ನಡೆದ ಬೆನ್ನಲ್ಲೇ ಈದಿನ ಸಂಜೆ ಗುಜರಾತಿನ ಅಹಮದಾಬಾದಿನಲ್ಲಿಯೂ ಅದೇ ರೀತಿಯ ಕಡಿಮೆ ತೀವ್ರತೆಯ ಸರಣಿ ಬಾಂಬ್ ಸ್ಫೋಟ ಸಂಭವಿಸಿ 29ಕ್ಕೂ ಹೆಚ್ಚು ಮಂದಿ ಮೃತರಾಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡರು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಮಣಿನಗರ್ ಸೇರಿದಂತೆ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ 17 ಸ್ಫೋಟಗಳು ಸಂಭವಿಸಿದವು.

2007: ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಜತೆ ಸಂವಾದ ನಡೆಸಲು ಮಾಜಿ ರಾಷ್ಟ್ರಪತಿ ಡಾ. .ಪಿ.ಜೆ. ಅಬ್ದುಲ್ ಕಲಾಂ ಅವರ www.abdulkalam.com ಎಂಬ ಹೊಸ ವೆಬ್ಸೈಟ್ ಈದಿನ ಆರಂಭಗೊಂಡಿತು. ಚೆನ್ನೈಯ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಶಿಕ್ಷಕರ ಜತೆಗೆ ಕಲಾಂ ಸಂವಾದ ನಡೆಸಿದ ಸಂದರ್ಭದಲ್ಲಿ ವೆಬ್ಸೈಟನ್ನು ಪ್ರಾರಂಭಿಸಲಾಗಿತ್ತು. ರಾಷ್ಟ್ರಪತಿ ಕಚೇರಿಯಲ್ಲಿದ್ದ ಹಿಂದಿನ ವೆಬ್ಸೈಟಿನ ಎಲ್ಲ ವಿಷಯಗಳು ವೆಬ್ ಸೈಟಿನಲ್ಲಿ ಲಭಿಸುತ್ತವೆ.

2007: ಸುಮಾರು 700 ಕಿಲೋ ಮೀಟರ್ ದೂರದ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಮರ್ಥ್ಯವುಳ್ಳ `ಬಾಬರ್' ನೌಕಾ ಕ್ಷಿಪಣಿಯ ಪರೀಕ್ಷೆಯನ್ನು ಪಾಕಿಸ್ತಾನ ಸರ್ಕಾರ ಯಶಸ್ವಿಯಾಗಿ ನಡೆಸಿತು. ವ್ಯಾಪ್ತಿಯೊಳಗೆ ಬರುವ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತ-ರಷ್ಯಾ ಜಂಟಿ ಕಾರ್ಯಾಚರಣೆಯ ಅನ್ವಯ ಭಾರತ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಬಾಬರ್ ಕ್ಷಿಪಣಿಯನ್ನು ಪಾಕ್ ನಿರ್ಮಿಸಿದೆ. 2005ರಲ್ಲಿ 500 ಕಿಲೋ ಮೀಟರ್ವರೆಗೆ ಕ್ರಮಿಸುವ ಸಾಮರ್ಥ್ಯ ಇದ್ದ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯವನ್ನು 700 ಕಿಲೋ ಮೀಟರ್ಗೆ ಹೆಚ್ಚಿಸಿ ಕಳೆದ ಮಾರ್ಚ್ 22ರಂದು ಭಾರತ ಪರೀಕ್ಷೆ ನಡೆಸಿತ್ತು.

2007: ಉಗ್ರರ ಸಂಘಟನೆ ಲಷ್ಕರ್--ತೊಯ್ಬಾಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕ ಪ್ರಜೆ ಮಹಮದ್ ಫಾರೂಕ್ ಬ್ರೆಂಟ್ ಎಂಬಾತನಿಗೆ ನ್ಯೂಯಾರ್ಕಿನ ಸ್ಥಳೀಯ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಬ್ರೆಂಟ್ನಂತಹ ವ್ಯಕ್ತಿಗಳ ಸಹಾಯದಿಂದಲೇ ಉಗ್ರರ ಸಂಘಟನೆಗಳು ದೇಶದಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಲೊರೆಟ್ಟಾ ಹೇಳಿದರು. ಬ್ರೆಂಟ್ 2002ರಲ್ಲಿ ಪಾಕಿಸ್ಥಾವನದಲ್ಲಿ ಉಗ್ರರ ತರಬೇತಿ ಪಡೆದುಕೊಂಡು ಅಮೆರಿಕಕ್ಕೆ ವಾಪಸ್ಸಾದ ನಂತರ ಮಹಮದ್ ಅಲ್ ಮುತಜ್ಜಮ್ ಎಂಬ ಹೆಸರಿನಲ್ಲಿ ದುಷ್ಕೃತ್ಯ ನಡೆಸಲು ಆರಂಭಿಸಿದನು. 2005ರಲ್ಲಿ ಬಾಲ್ಟಿಮೋರ್, ಮೇರಿಲ್ಯಾಂಡ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಈತ ಸೆರೆ ಸಿಕ್ಕಿದ.

2007: ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸ್ ನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು. `ಶಂಬೊ'ವನ್ನು ಕೊಲ್ಲದಂತೆ ದೇವಾಲಯದ ಹಿಂದೂ ಭಕ್ತರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹತ್ಯೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪಶುವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ತಮ್ಮನ್ನು ಈಗ ವಾಪಸ್ ಕಳುಹಿಸಿದರೂ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡು ಬಂದು ಹೋರಿಯನ್ನು ವಧಿಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದರು.

2007: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು 2007 28 ರಿಂದ ನವೆಂಬರ್ 18 ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವರು. 28 ಸಂಜೆ 5 ಗಂಟೆಗೆ ಯಶವಂತಪುರದ ಗಾಯತ್ರಿ ದೇವಸ್ಥಾನದ ಬಳಿ ಚಿದಂಬರ ದೀಕ್ಷಿತ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ವಾಮೀಜಿಗಳು ಪುರ ಪ್ರವೇಶ ಮಾಡುವರು ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್ ಹಾಗೂ ಸಂಚಾಲಕ ಕೆ.ಲಕ್ಷ್ಮಿನಾರಾಯಣ ಪ್ರಕಟಿಸಿದರು. ಚಾತುರ್ಮಾಸ್ಯ ಕಾಲದಲ್ಲಿ ಇತರ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ವಾರದ ಎಲ್ಲ ದಿನಗಳಲ್ಲೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಗೋ ಯಾತ್ರೆ ನಡೆಯುವುದು. ಸಂದರ್ಭದಲ್ಲಿ ಭಾರತೀಯ ಗೋವಿನ ಮಹತ್ವ ಸಾರುವ ಪುರ ಸಂಚಲನ ಮತ್ತು ಮನೆ ಬಾಗಿಲಿಗೆ ಗೋ ಸಂದೇಶ ಸಾರಲಾಗುವುದು. ಪ್ರತಿ ಭಾನುವಾರ ನಗರದ ವಿವಿಧ ವಲಯ ಕೇಂದ್ರಗಳಲ್ಲಿ ಗೋ ವಿಚಾರ ಪ್ರಬೋಧಕ, ಗಾನ. ನೃತ್ಯ ಸಮೇತ ಬೃಹತ್ ಸಾರ್ವಜನಿಕ ಸಭೆ ನಡೆಯುವುದು. ವಾರದ ದಿನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಸಂವಾದ ನಡೆಸಲಾಗುವುದು. ಸೆಪ್ಟೆಂಬರ್ 26 ರಂದು ಸೀಮೋಲ್ಲಂಘನ, ನವೆಂಬರ್ 18 ರಂದು ಕೋಟಿ ನೀರಾಜನ - ಲಕ್ಷ ಮಹಿಳೆಯರು ಗೋಮಾತೆಗೆ ಕೋಟಿ ಸಂಖ್ಯೆಯ ದೀಪ ಬೆಳಗಲಾಗುವುದು ಎಂದು ಅವರು ಹೇಳಿದರು.

2007: ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಟ್ಟೆ ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾದವು.

2006: ಬೆಂಗಳೂರಿನ ಫ್ರೇಜರ್ಟೌನ್ ನಿವಾಸಿ, ವೈಟ್ಫೀಲ್ಡ್ ಕುಂದಲ ಹಳ್ಳಿಯ ಅವಿವಾ ಕಸ್ಟಮರ್ ಆಪರೇಷನಲ್ ಸರ್ವೀಸ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಅವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಎಸೆಯಲಾಯಿತು. ಬೆಂಗಳೂರಿನ ಕಾಲ್ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇನ್ನೊಬ್ಬ ಕಾಲ್ಸೆಂಟರ್ ಉದ್ಯೋಗಿಯ ಹತ್ಯೆ ಜನರನ್ನು ಕಂಗೆಡಿಸಿತು.

2006: ಇಂಗ್ಲೆಂಡಿನ ಉತ್ತರ ಯಾರ್ಕ್ಷೈರ ತಂಡ ಕೌಂಟಿಯಲ್ಲಿ 5 ರನ್ಗಳಿಗೆ ಆಲೌಟ್ ಆಯಿತು. ಡಿಶ್ಫೋರ್ತ್ ತಂಡದ ವಿರುದ್ಧ ಉತ್ತರ ಯಾರ್ಕ್ಷೈರ್ ತಂಡದ ಎಲ್ಲ ಬ್ಯಾಟ್ಸ್ಮನ್ಗಳೂ ಶೂನ್ಯ ಸಂಪಾದನೆ ಮಾಡಿದರು. ಇವರಿಗೆ ಬಂದ ಐದು ರನ್ಗಳು ಇತರ ರನ್ಗಳಿಂದ ಕೊಡುಗೆಯಾಗಿ ಬಂದವುಗಳು. ನಿಡ್ಡರ್ಡೇಲ್ ಮತ್ತು ಅಮೆಚೂರ್ ಕ್ರಿಕೆಟ್ ಲೀಗಿನ 112 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ವಿಸ್ಡನ್ ಅಲ್ಮನಾಕ್ ಪ್ರಕಾರ ಇದು ಅತ್ಯಂತ ಅಪೂರ್ವ ಘಟನೆ. 1931ರಲ್ಲಿ ಮಿಡ್ಲ್ಯಾಂಡ್ಸ್ನಲ್ಲಿ ಶೆಪ್ಸ್ಟೋನ್ ಇಲೆವೆನ್ ತಂಡವು 4 ಇತರೆ ರನ್ಗಳಿಸಿ ಆಲೌಟ್ ಆಗಿತ್ತು.

2006: ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2000: 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರಿ ನೌಕರಿ, ಮನೆಗೆಲಸಕ್ಕೆ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ನಿಷೇಧ.

1991: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್.

1958: ತೇಜಸ್ವಿನಿ ನಿರಂಜನ ಜನನ.

1956: ಖ್ಯಾತ ಒರಿಯಾ ಕವಿ, ನಾಟಕಕಾರ, ಪ್ರಬಂಧಕಾರ ಗೋಧಾವರೀಶ್ ಮಿಶ್ರಾ ನಿಧನ.

1945: ಬ್ರಿಟನ್ ಪ್ರಧಾನಿ ಹುದ್ದೆಗೆ ವಿನ್ಸ್ಟನ್ ಚರ್ಚಿಲ್ ರಾಜೀನಾಮೆ.

1938: ಜಿ.ಜೆ. ಹರಿಜಿತ್ ಜನನ.

1935: ಶೈಲಜಾ ಉಡಚಣ ಜನನ.

1934: ಖ್ಯಾತ ಕಾದಂಬರಿಕಾರ ಎಲ್.ಎಲ್. ಭೈರಪ್ಪ ಅವರು ಲಿಂಗಣ್ಣಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ ಜನಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭಿಸಿದ ಭೈರಪ್ಪ ಈವರೆಗೆ 22 ಕಾದಂಬರಿಗಳನ್ನು ಬರೆದಿದ್ದಾರೆ. ನೀಳ್ಗತೆ, ವಿಮರ್ಶಾಕೃತಿ, ಆತ್ಮವೃತ್ತಾಂತವನ್ನೂ ಬರೆದಿದ್ದಾರೆ. ಅವರ ಮೊದಲ ಕಾದಂಬರಿ `ಜಟ್ಟಿ ಮತ್ತು ಮಟ್ಟಿ'ಯಾದರೆ ಇತ್ತೀಚಿನ ಜನಪ್ರಿಯ ಕಾದಂಬರಿ `ಆವರಣ'.

1926: ವಾಗೀಶ್ವರಿ ಶಾಸ್ತ್ರಿ ಜನನ.

1923: ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ಚಂದ್ರ ಮಾಥುರ್ ಜನನ.

1891: ಖ್ಯಾತ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ರಾಜೇಂದ್ರಲಾಲ್ ಮಿತ್ರ (ರಾಜಾ) ನಿಧನ.

1775: ಮೊದಲ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಬೆಂಜಮಿನ್ ಫ್ರಾಂಕ್ಲಿನ್ ನೇಮಕ.




No comments:

Post a Comment