ನಾನು ಮೆಚ್ಚಿದ ವಾಟ್ಸಪ್

Monday, July 22, 2019

ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ History Today ಜುಲೈ 22
2019:
ನವದೆಹಲಿತಾಂತ್ರಿಕ ಅಡಚಣೆಯಿಂದ ಕೊನೆಯ ಕ್ಷಣದಲ್ಲಿ ಸ್ಥಗಿತಗೊಳಿಸಲಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ- ಉಡಾವಣೆಯನ್ನು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋದೇಶದ ಏಕೈಕ ಉಡ್ಡಯನ ಕೇಂದ್ರವಾದ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ  ಈದಿನ  ನಡೆಸಿಉಪಗ್ರಹವನ್ನು ಯಶಸ್ವಿಯಾಗಿ ಭೂ ಕಕ್ಷೆಗೆ  ಒಯ್ದಿತು. ಉಪಗ್ರಹವನ್ನು ಹೊತ್ತ ೬೪೦ ಟನ್ ತೂಕದ ಜಿಎಸ್ಎಲ್ವಿ ಎಂಕೆ೩-ಎಂ (ಜಿಯೋಸಿಂಕ್ರನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ - ಮಾರ್ಕ್ ರಾಕೆಟ್  ಮಧ್ಯಾಹ್ನ .೪೩ ಗಂಟೆಗೆ ನಿಗದಿಯಂತೆಯೇ ಕಿತ್ತಳೆ ಬಣ್ಣದ ಬೆಂಕಿಯನ್ನು ಉಗುಳುತ್ತಾ  ಲಕ್ಷಾಂತರ ಮಂದಿಯ ಹರ್ಷೋದ್ಘಾರಗಳೊಂದಿಗೆ ನಭೋಮಂಡಲಕ್ಕೆ ಚಿಮ್ಮಿತುರಾಕೆಟ್ ಗರ್ಜಿಸುತ್ತಾ ಯಶಸ್ವಿಯಾಗಿ ಗಗನಕ್ಕೆ ಏರಿದ್ದನ್ನು ಭಾರತ ವಿದೇಶಗಳ ಲಕ್ಷಾಂತರ ಮಂದಿ ವೀಕ್ಷಿಸಿದರು.  ‘ಬಾಹುಬಲಿ’ ಅಡ್ಡ ಹೆಸರಿನ ಚಂದ್ರಯಾನ - ಬಾಹ್ಯಾಕಾಶ ನೌಕೆಯು ೪೪ ಮೀಟರ್ ಎತ್ತರವಿದೆಮೂರು ಹಂತಗಳ  ಬಾಹ್ಯಾಕಾಶ ನೌಕೆಯು  ಟನ್ ತೂಕದ ಉಪಗ್ರಹಗಳನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋಕೈಗೊಂಡ ಯೋಜನೆಗಳಲ್ಲೇ ಅತ್ಯಂತ ಸಂಕೀರ್ಣವಾದ ಚಂದ್ರಯಾನ- ಉಡಾವಣೆಗೆ ಭಾನುವಾರ ಸಂಜೆ .೪೩ ಗಂಟೆಗೆ ಕ್ಷಣಗಣನೆ ಆರಂಭಿಸಲಾಗಿತ್ತು.  ತನ್ನ ಎರಡನೇ ಚಂದ್ರಯಾನವನ್ನು ಭಾರತವು ಜುಲೈ ೧೫ರಂದು ಐದನೇ ಬಾರಿಗೆ ಮುಂದೂಡಿತ್ತುಉಡಾವಣೆಗೆ ಕೇವಲ ಒಂದು ಗಂಟೆ ಮುಂಚಿತವಾಗಿ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಅಡಚಣೆ ಇದ್ದುದನ್ನು ವಿಜ್ಞಾನಿಗಳು ಗಮನಿಸಿದ ಬಳಿಕ ಕೊನೆಯ ಕ್ಷಣದಲ್ಲಿ ಯಾನವನ್ನು ಸ್ಥಗಿತಗೊಳಿಸಲಾಗಿತ್ತುವಿಜ್ಞಾನಿಗಳು ದೋಷವನ್ನು ಸರಿಪಡಿಸಿದ ಬಳಿಕ ಜುಲೈ ೨೨ರಂದು ಉಡಾವಣೆಗೆ ಸಮಯ ಮರುನಿಗದಿ ಮಾಡಲಾಗಿತ್ತು.  ಚೀನಾವು ಕಳೆದ ಜನವರಿಯಲ್ಲಿ ಚಂದ್ರನಲ್ಲಿ ಈವರೆಗೆ ಯಾವ ದೇಶವೂ ಅನ್ಷೇಷಿಸದೇ ಇದ್ದ ಭಾಗದಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು೯೭೮ ಕೋಟಿ ರೂಪಾಯಿಗಳ ಚಾಂಗ್- ಯೋಜನೆಯ ಮೂಲಕ ಚೀನಾ  ಸಾಹಸ ನಡೆಸಿತ್ತು ಬಳಿಕ ಭಾರತ ಇದೀಗ ಚಂದ್ರನಲ್ಲಿ ಇನ್ನೂ ಅನ್ವೇಷಣೆ ನಡೆಯದೇ ಇರುವ ದಕ್ಷಿಣ ಧ್ರುವ ಪ್ರದೇಶಕ್ಕೆ ತನ್ನ ನೌಕೆಯನ್ನು ಕಳುಹಿಸಿದೆಈವರೆಗೆ ಅಮೆರಿಕಹಿಂದಿನ ಸೋವಿಯತ್ ಯೂನಿಯನ್ ಮತ್ತು ಚೀನಾ ಮಾತ್ರ  ಯಶಸ್ವಿಯಾಗಿ ಚಂದ್ರನ ಮೇಲೆ ತಮ್ಮ ಬಾಹ್ಯಾಕಾಶ ನೌಕೆಗಳನ್ನು ಇಳಿಸಿದ್ದುಚಂದ್ರಯಾನದ ಮೂಲಕ  ಭಾರತವು ೪ನೇ ರಾಷ್ಟ್ರವಾಗಿ  ಸಾಲಿಗೆ ಸೇರ್ಪಡೆಯಾಗಿದೆ.   ಚಂದ್ರನ ಕಕ್ಷೆಯಲ್ಲಿ ಒಂದು ವರ್ಷಕಾಲ ಸುತ್ತರಲಿರುವ ಆರ್ಬಿಟರ್ ಸೇರಿದಂತೆ ಚಂದ್ರಯಾನ- ಒಟ್ಟು ,೮೫೦ ಕಿಗ್ರಾಂ ತೂಕವನ್ನು ಹೊಂದಿದೆ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಚಂದ್ರನ ಭಾವಚಿತ್ರಗಳನ್ನು ತೆಗೆಯುವುದರ ಜೊತೆಗೆ ಅಲ್ಲಿನ ಪರಿಸರದ ಮತ್ತು ಚಂದ್ರ ನೆಲದಲ್ಲಿ ಇಳಿಯುವ ’ವಿಕ್ರಮ್’ ಹೆಸರಿನ ಲಾಂಡರ್ ನಡೆಸುವ ಪರೀಕ್ಷೆಯ ವಿವರಗಳನ್ನು ಭೂಮಿಗೆ ಕಳುಹಿಸುವುದುಚಂದ್ರ ನೆಲದಲ್ಲಿ ಇಳಿಯುವ ಲ್ಯಾಂಡರ್ಗೆ ಭಾರತದ ಮುಂಚೂಣಿಯ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ನೆನಪಿಗಾಗಿ ’ವಿಕ್ರಮ್’ ಹೆಸರು ಇಡಲಾಗಿದೆ. ’ವಿವೇಚನೆ’ ಎಂಬ ಅರ್ಥವನ್ನು ಕೊಡುವ ಸಂಸ್ಕೃತ ಪದ ’ಪ್ರಗ್ಯಾನ್’ ಎಂಬ ಹೆಸರನ್ನು ರೋವರ್ಗೆ ಇರಿಸಲಾಗಿತ್ತು. ಆರ್ಬಿಟರ್ಲ್ಯಾಂಡರ್ ಮತ್ತು ರೋವರ್ನ್ನು ಒಯ್ಯುತ್ತಿರುವ ೩೭೫ ಕೋಟಿ ರೂಪಾಯಿ ವೆಚ್ಚದ ಜಿಎಸ್ಎಲ್ವಿಎಂಕೆ  ನೌಕೆಯು ೬೦೩ ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ- ಬಾಹ್ಯಾಕಾಶ ನೌಕೆಯನ್ನು ೧೬ ನಿಮಿಷಗಳಲ್ಲಿ ಭೂ ಕಕ್ಷೆಗೆ ಒಯ್ದಿದೆಅಲ್ಲಿಂದ ಮುಂದಕ್ಕೆ ಚಂದ್ರನ ಕಕ್ಷೆಯ ಕಡೆಗೆ ಅದು ಸಾಗಲಿದೆಭೂಮಿ ಮತ್ತು ಚಂದ್ರನ ನಡುವಣ ದೂರ ಅಂದಾಜು .೮೪೪ ಲಕ್ಷ ಕಿಲೋ ಮೀಟರುಗಳುಯೋಜನೆಯ ಅಡಿಯಲ್ಲಿ ಚಂದ್ರಯಾನವು ತನ್ನ ರೋವರ್ನ್ನು ಇದುವರೆಗೆ ಯಾವುದೇ ದೇಶವೂ ಅನ್ವೇಷಣೆ ಮಾಡದೇ ಇರುವ ಚಂದ್ರದ ದಕ್ಷಿಣ ಧ್ರುವದಲ್ಲಿ ಇಳಿಸಲಿದ್ದು ಚಂದ್ರನ ಮೇಲ್ಮೈಯಲ್ಲಿ ಇರುವ ನೀರಿನ ಗಡ್ಡೆಯ ಅನ್ವೇಷಣೆ ನಡೆಸಲಿದೆತನ್ಮೂಲಕ ೨೦೦೮ರಲ್ಲಿ ಭಾರತದ ಮೊದಲ ಚಂದ್ರಯಾನವು ಒದಗಿಸಿದ್ದ ಮಾಹಿತಿಗೆ ಸಾಕ್ಷ್ಯಾಧಾರವನ್ನು ಕಲೆ ಹಾಕಲಿದೆಉಡ್ಡಯನದಿಂದ ಆರಂಭಿಸಿಚಂದ್ರಯಾನ - ಯೋಜನೆಗೆ ೫೮ ದಿನಗಳನ್ನು ನಿಗದಿ ಪಡಿಸಲಾಗಿದೆಭೂಸ್ಥಿರ ವರ್ಗಾವಣೆ ಕಕ್ಷೆಯಿಂದ ಮೇಲೇರಲು ೧೬ ದಿನಚಂದ್ರನ ಕಕ್ಷೆ ಸೇರಲು  ದಿನ ಹಿಡಿಯಲಿದೆಅಲ್ಲಿಗೆ ತಲುಪಿದ ಬಳಿಕ ೨೭ ದಿನಗಳ ಕಾಲ ಅದು ಚಂದ್ರನಿಗೆ ಪ್ರದಕ್ಷಿಣೆ ಹಾಕಲಿದೆ ಬಳಿಕ ಲ್ಯಾಂಡರ್ ಕಕ್ಷೆಯಿಂದ ಕೆಳಕ್ಕೆ ಇಳಿಯುವ ಪ್ರಯತ್ನ ಮಾಡುವುದುಇನ್ನೂ ನಾಲ್ಕು ದಿನಗಳ ಬಳಿಕ ಲ್ಯಾಂಡರ್ ಚಂದ್ರನ ನೆಲದಲ್ಲಿ ಇಳಿಯುವ ಯತ್ನ ನಡೆಸುವುದುಅತ್ಯಂತ ಕ್ಲಿಷ್ಟಕರವಾದ  ಸಾಹಸಕ್ಕೆ ಅದು ೧೫ ನಿಮಿಷಗಳನ್ನು ತೆಗೆದುಕೊಳ್ಳುವುದುಚಂದ್ರನ ನೆಲದಲ್ಲಿ ಚಂದ್ರಯಾನ-೨ನ್ನು ಇಳಿಯುವುದು ಇಸ್ರೋದ ಈವರೆಗಿನ ಅತ್ಯಂತ ದೊಡ್ಡ ಸವಾಲಾಗಿದ್ದುಚಂದ್ರನ ನೆಲ ತಲುಪುವ ಮುನ್ನ ಲ್ಯಾಂಡರ್ ಪ್ರತ್ಯೇಕಗೊಳ್ಳುವ  ೧೫ ನಿಮಿಷಗಳನ್ನು ’ಭಯಾನಕ ಕ್ಷಣಗಳು’ ಎಂಬುದಾಗಿ ಸಂಸ್ಥೆಯು ಕರೆದಿದೆಇಸ್ರೋ ಇಲ್ಲಿಯವರೆಗೂ ಇಂತಹ ಸಾಹಸವನ್ನೂ ಎಂದೂ ನಡೆಸಿಲ್ಲ.  ಚಂದ್ರಯಾನ - ’ವಿಕ್ರಮ್’ ಲ್ಯಾಂಡರ್ ಮತ್ತು ’ಪ್ರಗ್ಯಾನ್’ ರೋವರ್ನ್ನು ಮಂಜಿನಸ್ ಸಿ ಮತ್ತು ಸಿಂಪೆಲಿಯಸ್ ಎನ್ ಹೆಸರಿನ ಎರಡು ಚಂದ್ರ ಕುಳಿಗಳ ನಡುವಣ ಎತ್ತರದ ಪ್ರದೇಶದಲ್ಲಿ ಇಳಿಸುವುದುಅನ್ವೇಷಣೆಗೆ ಇಲ್ಲಿ ಸೌರ ಶಕ್ತಿಯಿಂದ ಪಡೆಯಲಾಗುವ ಬೆಳಕನ್ನು ಬಳಸಲಾಗುವುದುದಕ್ಷಿಣ ಧ್ರುವ ಪ್ರದೇಶದಲ್ಲಿ ನೀರು ಮತ್ತು ಖನಿಜಗಳು ಇರಬಹುದು ಎಂಬ ನಿರೀಕ್ಷೆಯೊಂದಿಗೆ ಇಸ್ರೋ ದಕ್ಷಿಣ ಧ್ರುವ ಪ್ರದೇಶದ  ಭಾಗವನ್ನು ಅನ್ವೇಷಣೆಗಾಗಿ ಆಯ್ಕೆ ಮಾಡಿದೆ.  ರೋವರ್ ಮತ್ತು ಲ್ಯಾಂಡರ್ ಒಂದು ಚಾಂದ್ರ ದಿನದ (೧೪ ಭೂ ದಿನಗಳುಜೀವಿತಾವಧಿ ಹೊಂದಿರುತ್ತದೆಮತ್ತು  ಅವಧಿಯಲ್ಲಿ ಅದು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಿದೆಏನಿದ್ದರೂಆರ್ಬಿಟರ್ ಒಂದು ವರ್ಷದವರೆಗೆ ಕಾರ್ ನಿರ್ವಹಿಸುತ್ತದೆ.  ಚಂದ್ರನೆಲ ಸ್ಪರ್ಶದ ಮೊದಲ ಚಿತ್ರಗಳು ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶಿಸಿದ ೧೫ ನಿಮಿಷಗಳ ಒಳಗೆ ಲಭಿಸಬಹುದುಏನಿದ್ದರೂ ಚಂದ್ರ ನೆಲದಲ್ಲಿ ಇಳಿಯುವುದರಿಂದ ಹಿಡಿದು ಲ್ಯಾಂಡರ್ನಿಂದ ರೋವರ್ ಹೊರಬರುವವರೆಗಿನ ಪ್ರಕ್ರಿಯೆಗೆ ನಾಲ್ಕು ಗಂಟೆಗಳು ತಗುಲುತ್ತವೆ.  ಇಸ್ರೋ ಮತ್ತು ಅಮೆರಿಕದ ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ಯೋಜನೆಯಲ್ಲಿ ಪರಸ್ಪರ ಸಹಕರಿಸುತ್ತಿದ್ದು ನಾಸಾದ ಲೇಸರ್ ರೇಂಜಿಂಗ್ ಉಪಕರಣವನ್ನು ಚಂದ್ರಯಾನ- ಒಯ್ದಿದೆವಿವಿಧ ಪ್ರಯೋಗಗಳಿಗಾಗಿ ಚಂದ್ರಯಾನ - ಒಟ್ಟು ೧೩ ಭಾರತೀಯ ವೈಜ್ಞಾನಿಕ ಉಪಕರಣಳನ್ನು ಒಯ್ದಿದೆಚಂದ್ರ ಶಿಲೆಗಳಲ್ಲಿ ಮ್ಯಾಗ್ನೇಸಿಯಂಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಲೋಹಗಳ ಅಂಶ ಎಷ್ಟಿದೆಮತ್ತು ನೀರಿನ ಸೂಚನೆ ಇದೆಏ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಅವುಗಳ ಚಿತ್ರ ತೆಗೆಯುವ ಕಾರ್ಯವನ್ನೂ ಚಂದ್ರಯಾನ ಮಾಡಲಿದೆ.


2019: ನವದೆಹಲಿಕಾನೂನಿನ ಪಾರದರ್ಶಕತೆಯನ್ನು ಮೂಲೆಪಾಲು ಮಾಡುವ ಸಲುವಾಗಿ  ತಿದ್ದುಪಡಿ ತರಲಾಗಿದೆ ಎಂಬ ವಿರೋಧ ಪಕ್ಷಗಳ ತೀವ್ರ ಟೀಕೆಯ ನಡುವೆಮಾಹಿತಿ ಹಕ್ಕು (ತಿದ್ದುಪಡಿಮಸೂದೆ ೨೦೧೯ಕ್ಕೆ ಲೋಕಸಭೆಯು ತನ್ನ ಅನುಮೋದನೆ ನೀಡಿತುಮಾಹಿತಿ ಹಕ್ಕು (ತಿದ್ದುಪಡಿಮಸೂದೆ೨೦೧೯ ಕಾನೂನನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ತಿರಸ್ಕರಿಸಿದ ಸರ್ಕಾರ ’ವಿರೋಧ ಪಕ್ಷವು ಜನರನ್ನು ದಾರಿತಪ್ಪಿಸುತ್ತಿದೆಉದ್ದೇಶಿತ ಬದಲಾವಣೆಗಳು ಕಾರ್ಯ ನಿರ್ವಹಣೆಯನ್ನು ಸುಗಮಗೊಳಿಸುವ ಗುರಿ ಹೊಂದಿವೆ’ ಎಂದು ಪ್ರತಿಪಾದಿಸಿತು.  ಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ವಿಪಕ್ಷಗಳ ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ’ಉದ್ದೇಶಿತ ಬದಲಾವಣೆಗಳ ಅಡಿಯಲ್ಲಿ ಸರ್ಕಾರವು ಸ್ವತಂತ್ರ ಮಾಹಿತಿ ಆಯುಕ್ತರನ್ನು ತರಾಟೆಗೆ ತೆಗೆದುಕೊಳ್ಳಬಹುದು’ ಎಂದು ಹೇಳಿದರು.  ‘ಇದು ತಿದ್ದುಪಡಿ ಮಸೂದೆಯಲ್ಲಬದಲಿಗೆ ನಿರ್ಮೂಲನಾ ಮಸೂದೆ’ ಎಂದು ಅವರು ನುಡಿದರು.  ‘ಕಾಯ್ದೆಯು ರಾಷ್ಟ್ರದ ಪ್ರಜಾಪ್ರಭುತ್ವದ ಗುರಿಸಾಧನೆಗೆ ಮುಖ್ಯವಾಗಿದೆ ಮತ್ತು ಅದು ಸರ್ಕಾರದಲ್ಲಿನ ಸ್ಥಾಪಿತ ಹಿತಾಸಕ್ತಿಗಳಿಗೆ ಸವಾಲು ಹಾಕಿದೆ’ ಎಂದು ಮಾಜಿ ಕೇಂದ್ರ ಸಚಿವ ನುಡಿದರು.  ‘ಯಾವುದೇ ಸಾರ್ವಜನಿಕ ಸಮಾಲೋಚನೆ ಇಲ್ಲದೆ  ಮಸೂದೆಯನ್ನು ಏಕೆ ತರಲಾಗಿದೆ?’ ಎಂದು ಅವರು ಪ್ರಶ್ನಿಸಿದರು.  ‘ಮಸೂದೆಯನ್ನು ಅಂಗೀಕರಿಸಲು ಸರ್ಕಾರಕ್ಕೆ ಇಷ್ಟೊಂದು ಅವಸರ ಏಕೆಏಕೆಂದರೆ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿಪ್ರಧಾನ ಮಂತ್ರಿಯವರ ಶೈಕ್ಷಣಿಕ ವಿವರಗಳಿಗೆ ಸಂಬಂಧಿಸಿದಂತೆ ಆದೇಶ ಒಂದನ್ನು ನೀಡಿದೆ’ ಎಂದು ಅವರು ನುಡಿದರು.  ಕೇಂದ್ರೀಯ ಮಾಹಿತಿ ಆಯೋಗದಲ್ಲಿ ಮಾಹಿತಿ ಆಯುಕ್ತರ ನಾಲ್ಕು ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅವರು ಬೊಟ್ಟು ಮಾಡಿದರು.  ‘ಮಾಹಿತಿ ಹಕ್ಕು (ತಿದ್ದುಪಡಿ)ಮಸೂದೆ - ೨೦೧೯ಮೂಲ ಕಾಯ್ದೆಯನ್ನು ಮೂಲೆಗುಂಪು ಮಾಡಿಅದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಂತೆ (ಎನ್ಎಚ್ಆರ್ಸಿಹಲ್ಲಿಲ್ಲದ ಹುಲಿಯನ್ನಾಗಿ ಮಾಡುವ ಯತ್ನವಾಗಿದೆ’ ಎಂದು ತರೂರ್ ಆಪಾದಿಸಿದರು.

2019: ಬೆಂಗಳೂರು:  ಕಾಂಗ್ರೆಸ್ ಮತ್ತು ಜನತಾದಳದ (ಎಸ್) 15 ಮಂದಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕುವ ವಿಚಾರದಲ್ಲಿ ಹಗ್ಗ ಜಗ್ಗಾಟ ಮುಂದುವರೆದು, ಜುಲೈ 23ರ ಮಂಗಳವಾರ ಸಂಜೆ 4 ಗಂಟೆಯ ಒಳಗೆ ವಿಶ್ವಾಸ ಮತ ಕಲಾಪ ಮುಗಿಸುವ ಸ್ಪಷ್ಟ ಸೂಚನೆಯೊಂದಿಗೆ ವಿಧಾನಸಭಾಧ್ಯಕ್ಷ ಕೆ.ಆರ್.  ರಮೇಶ ಕುಮಾರ್ ಅವರು ವಿಧಾನಸಭಾ ಕಲಾಪಗಳನ್ನು ಜುಲೈ 23ರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು. ಇದಕ್ಕೆ ಮುನ್ನ ಸದನದಲ್ಲಿ ಮುಖ್ಯಮಂತ್ರಿಯವರಿಂದ ರಾಜೀನಾಮೆ ಸಲ್ಲಿಕೆಗೆ ಸಂಬಂಧಿಸಿದ ನಕಲಿ ಪತ್ರದ ಪ್ರದರ್ಶನ, ಮೈತ್ರಿ ಪಕ್ಷಗಳ ಸದಸ್ಯರಿಂದ ಕಲಾಪ ಮುಂದೂಡಿಕೆಗೆ ಆಗ್ರಹಿಸಿ ಘೋಷಣೆ,  ಸಭಾಧ್ಯಕ್ಷರಿಂದ ನನ್ನನ್ನು ರಾಜೀನಾಮೆ ಬೆದರಿಕೆ,  ನನ್ನನ್ನು ಬಲಿಪಶು ಮಾಡಬೇಡಿ, ಕಲಾಪ ಮುಗಿಸುವುದಾಗಿ ನೀಡಿದ ವಚನ ಈಡೇರಿಸಿ ಎಂಬ ಖಡಕ್ ಸೂಚನೆ,  ವಿರೋಧ ಪಕ್ಷ ಸದಸ್ಯರಿಂದ ಇದೇ ದಿನ ಕಲಾಪ ಮುಗಿಸಲು ಆಗ್ರಹದ ದೃಶ್ಯಗಳಿಗೆ ವಿಧಾನಸಭೆ ಸಾಕ್ಷಿಯಾಯಿತು.  ಕಾಂಗ್ರೆಸ್ ಮತ್ತು ಜನತಾದಳದ (ಎಸ್೧೫ ಶಾಸಕರು ನೀಡಿದ ರಾಜೀನಾಮೆಯ ಪರಿಣಾಮವಾಗಿ ಸರ್ಕಾರವು ಪತನದ ಅಂಚಿಗೆ ಸರಿದ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿಯವರು 2019 ಜುಲೈ 18ರ ಗುರುವಾರ ವಿಶ್ವಾಸ ಮತ ನಿರ್ಣಯವನ್ನು ಮಂಡಿಸಿದ್ದರುನಿರ್ಣಯದ ಮೇಲಿನ ಚರ್ಚೆಯನ್ನು ಶುಕ್ರವಾರ ಮುಕ್ತಾಯಗೊಳಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ನೀಡಿದ್ದ ಎರಡು ಗಡುವುಗಳನ್ನು ಉಲ್ಲಂಘಿಸಿ ಸದನದಲ್ಲಿ ಚರ್ಚೆ ಮುಂದುವರೆದುಈದಿನಕ್ಕೆ ಮುಂದೂಡಿಕೆಯಾಗಿತ್ತುಶುಕ್ರವಾರ ಮಧ್ಯಾಹ್ನ  .೩೦ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರಿಗೆ ಮೊದಲ ಗಡುವು ನೀಡಿದ್ದ ರಾಜ್ಯಪಾಲರುಅದರ ಉಲ್ಲಂಘನೆಯಾಗಿ ಚರ್ಚೆ ಮುಂದುವರೆದಾಗ ಅದೇ ದಿನ ಸಂಜೆ  ಗಂಟೆಯ ಒಳಗಾಗಿ ರಾಜೀನಾಮೆ ನೀಡುವಂತೆ ಎರಡನೇ ಗಡುವು ವಿಧಿಸಿದ್ದರುಆದರೆ ಕಲಾಪವನ್ನು ಜುಲೈ 22ರ ಸೋಮವಾರಕ್ಕೆ ಮುಂದೂಡುವಂತೆ ಆಡಳಿತಾರೂಢ ಮೈತ್ರಿಕೂಟ ಸದಸ್ಯರು ಆಗ್ರಹಿಸಿದಾಗ ಅದೇ ದಿನ  ಪ್ರಕ್ರಿಯೆ ಪೂರ್ಣಗೊಳಿಸುವ ಬದ್ಧತೆಯನ್ನು ಸರ್ಕಾರದಿಂದ ಪಡೆದುಕೊಂಡು ಸಭಾಧ್ಯಕ್ಷರು ಕಲಾಪವನ್ನು ಜುಲೈ ೨೨ಕ್ಕೆ ಮುಂದೂಡಿದ್ದರು.  ಇದರ ಹೊರತಾಗಿಯೂ ವಿಶ್ವಾಸ ಮತ ಯಾಚನೆಯ ಕಲಾಪವನ್ನು ಇನ್ನೆರಡು ದಿನ ಮುಂದೂಡುವಂತೆ ಆಡಳಿತ ಪಕ್ಷದಿಂದ ಆಗ್ರಹ ಬಂದಾಗ ’ಇದು ಸದನಕ್ಕಾಗಲೀ ನನಗಾಗಲೀ ಗೌರವ ತರುವುದಿಲ್ಲ’ ಎಂಬುದಾಗಿ ಹೇಳುವ ಮೂಲಕ  ಸಭಾಧ್ಯಕ್ಷರು ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟ ಪಡಿಸಿದ್ದರುನಾವು ಸಾರ್ವಜನಿಕ ಜೀವನದಲ್ಲಿ ಇದ್ದೇವೆಜನರು ನಮ್ಮನ್ನು ಗಮನಿಸುತ್ತಿದ್ದಾರೆಚರ್ಚೆಯ ನೆಪದಲ್ಲಿ ನಾವು ಕಾಲಹರಣ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಮೂಡಿದಲ್ಲಿಅದು ನನಗಾಗಲೀ ಅಥವಾ ಬೇರೆ ಯಾರಿಗಾದರೂ ಶೋಭೆ ತರುವುದಿಲ್ಲಅದು ಸರಿಯೂ ಅಲ್ಲ’ ಎಂದು ರಮೇಶ ಕುಮಾರ್ ಹೇಳಿದರುಶಾಸಕರ ರಾಜೀನಾಮೆಗಳ ಬಗ್ಗೆ ಸಭಾಧ್ಯಕ್ಷರು ನಿರ್ಧರಿಸುವವರೆಗೂ ವಿಶ್ವಾಸ ಮತ ನಿರ್ಣಯದ ಮೇಲೆ ಮತದಾನ ನಡೆಸಿದರೆ ಅದಕ್ಕೆ ಯಾವುದೇ ಪಾವಿತ್ರ್ಯ ಇರುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಹಿರಿಯ ಸಚಿವ ಕೃಷ್ಣ ಬೈರೇಗೌಡ ಅವರು ಕಾಂಗ್ರೆಸ್ ನಿಲುವು ಏನೆಂಬುದನ್ನು ಸದನದಲ್ಲಿ ಚರ್ಚೆಯ ವೇಳೆಯಲ್ಲಿ ಸ್ಪಷ್ಟ ಪಡಿಸಿದರುನಾವು ಅಸಾಧಾರಣ ಪರಿಸ್ಥಿತಿ ಎದುರಿಸುತ್ತಿದ್ದೇವೆರಾಜೀನಾಮೆ ವಿಚಾರವನ್ನು ಮೊದಲು ನಿರ್ಧರಿಸಿ ಎಂಬುದಾಗಿ ನಾನು ಪೀಠಕ್ಕೆ ಮನವಿ ಮಾಡುತ್ತೇನೆಇಲ್ಲದೇ ಇದ್ದಲ್ಲಿ ಅದಕ್ಕೆ (ವಿಶ್ವಾಸಮತಯಾವ ಅರ್ಥವೂ ಇರುವುದಿಲ್ಲ’ ಎಂದು ಬೈರೇಗೌಡ ಪ್ರತಿಪಾದಿಸಿದರುರಾಜೀನಾಮೆಗಳು ಸ್ವ ಇಚ್ಛೆ ಮತ್ತು ನೈಜವಾದವುಗಳೇಅವು ಪ್ರಜಾಪ್ರಭುತ್ವಕ್ಕೆ ವಿರುದ್ಧವಲ್ಲವೇ?’ ಎಂದು ಅವರು ಪ್ರಶ್ನಿಸಿದರುಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ದಾಳಿ ನಡೆಸಿದ ಸಚಿವರು ’ರಾಷ್ಟ್ರದಲ್ಲಿ ರಾಜಕೀಯ ವಿರೋಧವನ್ನು ನಿರ್ನಾಮ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆಬಿಜೆಪಿಯಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಆಪರೇಷನ್ ಇಂತಹ ಯತ್ನದ ಭಾಗ ’ ಎಂದು ಅವರು ನುಡಿದರುದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆಪಾದಿಸಿದ ಬೈರೇಗೌಡ, ’ಪ್ರಜಾಪ್ರಭುತ್ವದ ರಕ್ತದ ಕಲೆ ನಿಮ್ಮ ಕೈಗಳಲ್ಲಿದೆ’ ಎಂದು ಬಿಜೆಪಿಯನ್ನು ಉದ್ದೇಶಿಸಿ ಹೇಳಿದರುತಮ್ಮ ನಿಲುವು ಮರುಪರಿಶೀಲನೆ ಮಾಡುವಂತೆ ಅವರು ಬಂಡಾಯ ಶಾಸಕರಿಗೆ ಮನವಿ ಮಾಡಿದರುವಿಶ್ವಾಸ ಮತ ನಿರ್ಣಯದ ಮೇಲಿನ ಕಲಾಪವನ್ನು ಈದಿನವೇ ಪೂರ್ಣಗೊಳಿಸಬೇಕುಅದನ್ನು ನಿರಂತರ ಮುಂದೂಡುತ್ತಾ ಹೋಗಬಾರದು ಎಂದು ಬಿಜೆಪಿಯ ಹಿರಿಯ ನಾಯಕರಾದ ಜಗದೀಶ ಶೆಟ್ಟರ ಮತ್ತು ಮಾಧುಸ್ವಾಮಿ ಅವರು ಸಭಾಧ್ಯಕ್ಷರಿಗೆ ಹೇಳಿದರುಇದಕ್ಕೆ ಮುನ್ನ ಬೆಳಗ್ಗೆಯೇ ಸಭಾಧ್ಯಕ್ಷರು ಸಿದ್ದರಾಮಯ್ಯ ಅವರು ವಿಪ್ ಹಕ್ಕಿಗೆ ಸಂಬಂಧಿಸಿದಂತೆ ಎತ್ತಿದ್ದ ಕ್ರಿಯಾಲೋಪಕ್ಕೆ ಸಂಬಂಧಿಸಿದಂತೆ ರೂಲಿಂಗ್ ನೀಡಿ ’ಶಾಸಕಾಂಗ ಪಕ್ಷದ ನಾಯಕರಿಗೆ ವಿಪ್ ನೀಡುವ ಹಕ್ಕು ಇದೆ’ ಎಂದು ಹೇಳಿದ್ದರು.  ವಿಪ್ ನೀಡುವುದು ನಿಮ್ಮ ಹಕ್ಕುಅದನ್ನು ಪಾಲಿಸುವುದು ಶಾಸಕರಿಗೆ ಬಿಟ್ಟದ್ದುವಿಪ್ ಉಲ್ಲಂಘನೆ ಬಗ್ಗೆ ನನಗೇನಾದರೂ ದೂರು ಬಂದಲ್ಲಿ ನಾನು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದ್ದರುಬಂಡಾಯ ಶಾಸಕರನ್ನು ಸದನಕ್ಕೆ ಬರುವಂತೆ ಯಾರೂ ಬಲವಂತ ಪಡಿಸುವಂತಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವಾರ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿಮುಖ್ಯಮಂತ್ರಿ  ವಿಶ್ವಾಸಮತ ಯಾಚನೆ ಮಾಡುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ’ವಿಪ್ ಹಕ್ಕಿನ’ ಬಗ್ಗೆ ಕ್ರಿಯಾಲೋಪ ಎತ್ತಿಸಭಾಧ್ಯಕ್ಷರು  ಬಗ್ಗೆ ನಿರ್ಧರಿಸಬೇಕುಅಲ್ಲಿಯವರೆಗೆ ವಿಶ್ವಾಸಮತ ಕಲಾಪವನ್ನು ಮುಂದೂಡಬೇಕು ಎಂದು ಹೇಳಿದ್ದರು.

2018: ಶ್ರೀನಗರಜಮ್ಮು ಮತ್ತು ಕಾಶ್ಮೀರದ ಕುಲಗಮ್ ಜಿಲ್ಲೆಯ ಖುದ್ವಾನಿಯ ವಾನಿ ಮೊಹಲ್ಲಾದಲ್ಲಿ ಭದ್ರತಾ ಪಡೆಗಳು ಭಾರೀ ಗುಂಡಿನ ಚಕಮಕಿ ನಡೆಸಿ ಮೂವರು ಉಗ್ರರನ್ನು ಬಲಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವುಹತ್ಯೆಗೀಡಾದ  ಉಗ್ರರು ಸಿ.ಟಿಮೊಹಮ್ಮದ್ ಸಲೀಂ ಎಂಬ ಪೊಲೀಸ್ ಪೇದೆಯನ್ನು ಅಪಹರಿಸಿ ಜುಲೈ 21 ಶನಿವಾರ ಹತ್ಯೆಗೈದಿದ್ದರುಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗಜುಲೈ ೨೦ರ ಶುಕ್ರವಾರ ರಾತ್ರಿ ಅವರನ್ನು ಉಗ್ರಗಾಮಿಗಳು  ಅಪಹರಿಸಿದ್ದರು.  ಪೊಲೀಸ್ ಹತ್ಯೆ ಬಳಿಕ ಉಗ್ರಗಾಮಿಗಳ ಸುಳಿವನ್ನು ಅನುಸರಿಸಿ ಗಡಿ ಭದ್ರತಾ ಪಡೆ (ಬಿಎಸ್ ಎಫ್ಯೋಧರುಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ ಆರ್ ಪಿ ಎಫ್)  ಜಂಟಿಯಾಗಿ ಭಾನುವಾರ ಬೆಳ್ಳಂಬೆಳಗ್ಗೆಯೇ ಭಾರೀ ಕಾರ್ಯಾಚರಣೆಗಿಳಿದು ಕೆಲವೇ ತಾಸುಗಳ ಒಳಗಾಗಿ ಮೂವರು ಉಗ್ರಗಾಮಿಗಳನ್ನು ಕೊಂದು ಹಾಕಿದರು

2018: ನವದೆಹಲಿಕಾಂಗ್ರೆಸ್ ಕಾರ್ಯಕಾರಿ ಸಮತಿಯನ್ನು (ಸಿ ಡಬ್ಲ್ಯೂಸಿಅನುಭವ ಮತ್ತು ಚೈತನ್ಯದ ಸಂಸ್ಥೆ’ ಎಂಬುದಾಗಿ ಇಲ್ಲಿ ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು  ಸಂಸ್ಥೆಯು ವರ್ತಮಾನಕಾಲಭೂತಕಾಲ ಮತ್ತು ಭವಿಷ್ಯತ್ ಕಾಲಗಳ ನಡುವಣ ಸೇತುವೆಯಾಗಿ ದುಡಿಯುವುದು ಎಂದು ಹೇಳಿದರು.  ಹೊಸದಾಗಿ ರಚನೆಗೊಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚೊಚ್ಚಲ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಸದಸ್ಯಸದಸ್ಯೆಯರು ಎದ್ದೇಳಬೇಕು ಮತ್ತು ಭಾರತದಲ್ಲಿನ ತುಳಿತಕ್ಕೆ ಒಳಗಾದವರ ಪರ ಹೋರಾಡಬೇಕು’ ಎಂದು ಅವರು ಕರೆ ನೀಡಿದರು. 

2018: ಕೊಲಂಬೋಭಾರತದ ದಕ್ಷಿಣ ತುದಿಯಲ್ಲಿ ಇರುವ ಪುಟ್ಟ ನೆರೆರಾಷ್ಟ್ರ ಶ್ರೀಲಂಕಾದಲ್ಲಿ ತನ್ನ ಪ್ರಾಬಲ್ಯ ವರ್ಧನೆಗೆ ಹವಣಿಸುತ್ತಿರುವ ಚೀನಾವು  ರಾಷ್ಟ್ರಕ್ಕೆ ೨೦೦ ಕೋಟಿ ಯುವಾನ್ (೨೯.೫೦ ಕೋಟಿ ಡಾಲರ್ಮೊತ್ತದ ಹೊಸ ಅನುದಾನದ ಕೊಡುಗೆ ನೀಡಲು ಮುಂದಾಯಿತು.  ಚೀನಾದ ಬಹುರಾಷ್ಟ್ರ ವಲಯ ಮತ್ತು ರಸ್ತೆ ಮೂಲಸವಲತ್ತು ಯೋಜನೆಯಲ್ಲಿ ಪಾಲುದಾರನಾಗಿರುವ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಚೀನಾದ ಹಣಕಾಸು ನೆರವಿನೊಂದಿಗೆ ರಾಜಧಾನಿ ಕೊಲಂಬೋದಿಂದ ೨೩೦ ಕಿಮೀ ದೂರದಲ್ಲಿರುವ ತಮ್ಮ ಸ್ವಕ್ಷೇತ್ರದ ಪೊಲೊನ್ನಾರುವಾದಲ್ಲಿ ನಿರ್ಮಿಸಲಾಗುವ ಕಿಡ್ನಿ ಆಸ್ಪತ್ರೆಯ ಕಾಮಗಾರಿ ಆರಂಭದ ಸಮಾರಂಭದ ವೇಳೆ ಶನಿವಾರ ಚೀನಾದ ಹೊಸ ಕೊಡುಗೆ ವಿಚಾರವನ್ನು ಪ್ರಕಟಿಸಿದರು.
  
2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲುಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರವನ್ನು ವಿಸ್ತರಿತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು  ಈದಿನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿತು. ಇದೇ ವೇಳೆಗೆ ಉತ್ತರ ಪ್ರದೇಶದಲ್ಲಿ ೨೦೧೯ರ ಮಹಾಚುನಾವಣೆ ವೇಳೆಗೆ ಸಮಾಜವಾದಿ ಪಕ್ಷದ (ಎಸ್ ಪಿಜೊತೆಗೆ ಮೈತ್ರಿ ಸಾಧಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ವಿಶ್ವಾಸ ವ್ಯಕ್ತ ಪಡಿಸಿತುಹೊಸದಾಗಿ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ (ಸಿ ಡಬ್ಲ್ಯೂಸಿಚೊಚ್ಚಲ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹಿರಿಯ ದೊಡ್ಡ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿಲ್ಲ ಎಂಬ ವರದಿಯು ಸ್ಥಾನ ಹಂಚಿಕೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯಲು ನಡೆಸುತ್ತಿರುವ ಯತ್ನದ ಹೊರತು ಬೇರೇನಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ಹೇಳಿದವು.

2018: ಮುಂಬೈ: ಲೋಕಸಭೆಯಲ್ಲಿ ತೆಲುಗುದೇಶಂ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಚರ್ಚೆಮತದಾನದಲ್ಲಿ ಗೈರು ಹಾಜರಾಗುವುದರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣವನ್ನು ಹೊಗಳಿರುವ ಶಿವಸೇನೆಯ ವರ್ತನೆಗೆ ಮುನಿಸಿಕೊಂಡಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸಮರಕ್ಕೆ ಸಜ್ಜಾಯಿತು.  ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕಹಿಮಿತ್ರ’ ಶಿವಸೇನೆ ಜೊತೆಗೆ ಮೈತ್ರಿ ಇರುವುದಿಲ್ಲ ಎಂಬುದಾಗಿ ಮಹಾರಾಷ್ಟ್ರದ ಪಕ್ಷ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಕಾಂಗಿ ಸಮರಕ್ಕೆ ಸಜ್ಜಾಗುವಂತೆ ಸೂಚನೆ ನೀಡಿದರುಮುಂದಿನ ವರ್ಷದ ಚುನಾವಣೆಯಲ್ಲಿ ಬಿಸಿ ಸಮರಕ್ಕೆ ಸಜ್ಜಾಗುವಂತೆ ಸೂಚಿಸಿರುವ ಶಾ ಮುಂಚಿತವಾಗಿಯೇ ಸಮರಕ್ಕೆ ಸಜ್ಜಾಗಲು ೨೩ ಅಂಶಗಳ ಯೋಜನೆಯನ್ನು ನೀಡಿದರು.

2018: ಬೆಂಗಳೂರುರಾಷ್ಟ್ರದಲ್ಲಿ ಅತ್ಯುತ್ತಮ ಆಡಳಿತವನ್ನು ಹೊಂದಿರುವ ರಾಜ್ಯ ಕೇರಳವಾಗಿದ್ದುಕರ್ನಾಟಕ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ೪ನೇ ಸ್ಥಾನವನ್ನು ಪಡೆದಿದೆ ಎಂದು ಸಾರ್ವಜನಿಕ ವ್ಯವಹಾರಗಳ ಕೇಂದ್ರದ (ಪಿಎಸಿಚಿಂತನ ಕೊಳವು ಬಿಡುಗಡೆ ಮಾಡಿದ ೨೦೧೮ರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ (ಪಿಎಐತಿಳಿಸಿತು೨೦೧೮ರ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕೇರಳವು ಮೊದಲ ಸ್ಥಾನವನ್ನು ಪಡೆದಿದ್ದು ೨೦೧೬ರಿಂದ ಸತತ ಮೂರನೇ ವರ್ಷ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಬೆಂಗಳೂರು ಮೂಲಕ ಸಾರ್ವಜನಿಕ ವ್ಯವಹಾರಗಳ ಕೇಂದ್ರವು ತನ್ನ ವರದಿಯಲ್ಲಿ ತಿಳಿಸಿತು೨೦೧೬ರಿಂದ ಪ್ರತಿವರ್ಷವೂ ಅತ್ಯುತ್ತಮ ಆಡಳಿತದ ರಾಜ್ಯಗಳ ಪಟ್ಟಿಯನ್ನು ಪ್ರಕಟಿಸುತ್ತಿರುವ ಕೇಂದ್ರಸಾಮಾಜಿಕಆರ್ಥಿಕ ಅಭಿವೃದ್ಧಿ ಸೇರಿದಂತೆ ವಿವಿಧ ಮಾನದಂಡಗಳ ಅಡಿಯಲ್ಲಿ  ಪಟ್ಟಿಯನ್ನು ಸಿದ್ದ ಪಡಿಸುತ್ತಿರುವುದಾಗಿ ಹೇಳಿತುಖ್ಯಾತ ಭಾರತೀಯ ಆರ್ಥಿಕ ತಜ್ಞ ದಿವಂಗತ ಸ್ಯಾಮ್ಯುಯೆಲ್ ಪೌಲ್ ಅವರು ೧೯೯೪ರಲ್ಲಿ ಸ್ಥಾಪಿಸಿರುವ  ಸಂಸ್ಥೆಯು ರಾಷ್ಟ್ರದಲ್ಲಿ ಅತ್ಯುತ್ತಮ ಆಡಳಿತಕ್ಕಾಗಿ ಆಗ್ರಹ ಮೂಡುವಂತೆ ಮಾಡಲು ಶ್ರಮಿಸುತ್ತಿದೆ. ತಮಿಳುನಾಡುತೆಲಂಗಾಣಕರ್ನಾಟಕ ಮತ್ತು ಗುಜರಾತ್   ನಾಲ್ಕು ರಾಜ್ಯಗಳು ಅತ್ಯುತ್ತಮ ಆಡಳಿತ ಒದಗಿಸಿರುವ ರಾಜ್ಯಗಳ ಪೈಕಿ ಕೇರಳದ ನಂತರದ ಸ್ಥಾನ ಪಡೆದಿವೆ

2017: ಅಹಮದಾಬಾದ್, ಮುಂಬೈ: ಮಹಾರಾಷ್ಟ್ರಗುಜರಾತ್ನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದುಐವರು ಮೃತರಾದರುಗುಜರಾತಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹ ಭೀತಿ ಎದುರಾಯಿತುಧಾರಾಕಾರ ಮಳೆಯಲ್ಲಿ ಸಿಲುಕಿ ಮೂವರು ಮೃತರಾದರು. 6 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತುರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡ ಮತ್ತು ವಾಯುಪಡೆ ಪ್ರವಾಹ  ಪ್ರದೇಶಕ್ಕೆ ದೌಡಾಯಿಸಿದ್ದುಪ್ರವಾಹದಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತುಕಳೆದ 24 ಗಂಟೆಗಳಿಂದ ಸೌರಾಷ್ಟ್ರದಲ್ಲಿ ಮಳೆ ಅಬ್ಬರಿಸಿದೆಇಲ್ಲಿನ ಎಲ್ಲಾ ನದಿಗಳು ತುಂಬಿ ಹರಿಯುತ್ತಿದ್ದು ಋತುವಿನ ಶೇ 52ರಷ್ಟು ಮಳೆಯಾಗಿದೆ ಎಂದು ಗುಜರಾತಿನ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಹೇಳಿದರುಮಳೆಗೆ ಸಿಲುಕಿ ಮೃತಪಟ್ಟವರು ರಾಜ್ಕೋಟ್ ಹಾಗೂ ಅಮರೇಲಿ ನಿವಾಸಿಗಳು.
2017: ಮುಂಬೈ: ಹಿರಿಯ ಕಾಂಗ್ರೆಸ್ ನಾಯಕಮಾಜಿ ಸಂಸದ ಮತ್ತು ನಟಿ ಸ್ಮಿತಾ ಪಾಟೀಲ್‌ ಅವರ ತಂದೆ ಶಿವಾಜಿರಾವ್‌ ಪಾಟೀಲ್‌(92) ಅವರು ನಿಧನರಾದರು. 1960–67 ಅವಧಿಯಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್‌, 1967–80 ಅವಧಿಯಲ್ಲಿ ವಿಧಾನ ಸಭೆ ಹಾಗೂ 1992–98 ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರುಇವರಿಗೆ 2013ರಲ್ಲಿ ಪದ್ಮ ಭೂಷಣ ಗೌರವ ಲಭಿಸಿತ್ತು.

2017: ಲಖನೌ: ಪಕ್ಷದ ಸಭೆ ನಡುವೆ ಹೃದಯಾಘಾತಕ್ಕೆ ಒಳಗಾದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಉಮಾಶಂಕರ್ ಚೌಧರಿ (60) ಅವರು ನಿಧನರಾದರುಪಕ್ಷ ಸಂಘಟನೆ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತುಸಭೆ ಮಧ್ಯೆ ಚೌಧರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತುಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಖಿಲೇಶ್ ಯಾದವ್ ಸೇರಿದಂತೆ ಪಕ್ಷದ ಹಲವು ನಾಯಕರುಮಾಜಿ ಸಚಿವರು ಆಸ್ಪತ್ರೆಗೆ ಧಾವಿಸಿದರುಚೌಧರಿ ಅವರಿಗೆ ಸಕ್ಕರೆ ಖಾಯಿಲೆಯಿತ್ತುತೊಂದರೆ ಕಾಣಿಸಿಕೊಂಡ ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತುಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತರಾದರು ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಹೇಳಿದರು.
2017: ನವದೆಹಲಿರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ ಕೋವಿಂದ ಅವರ ಕಾರ್ಯದರ್ಶಿಯಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮಾಜಿ ಕಾರ್ಯದರ್ಶಿ ಸಂಜಯ ಕೊಠಾರಿ ಅವರನ್ನು ನೇಮಕ ಮಾಡಲಾಯಿತುನವದೆಹಲಿಯಲ್ಲಿ ಗುಜರಾತ್‌ ಸರ್ಕಾರದ ಸ್ಥಾನಿಕ ಆಯುಕ್ತರಾಗಿರುವ ಭರತ್ ಲಾಲ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ಹಿರಿಯ ಪತ್ರಕರ್ತಒಆರ್ಎಫ್‌ ಫೆಲೋ ಅಶೋಕ್ ಮಲ್ಲಿಕ್ ಅವರನ್ನು ಮಾಧ್ಯಮ ಕಾರ್ಯದರ್ಶಿಯಾಗಿ ನೇಮಿಸಲಾಯಿತುಕೇಂದ್ರ ಸರ್ಕಾರವು ಹಿಂದಿನ ದಿನ  ರಾತ್ರಿ ನೇಮಕಾತಿ ಪತ್ರ ಕಳುಹಿಸಿಕೊಟ್ಟಿತುಕೊಠಾರಿ ಅವರು ನವದೆಹಲಿಯ ಪ್ರಧಾನಿ ಕಚೇರಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ ಮಿಶ್ರಾ ಅವರ ಆಪ್ತರು ಎನ್ನಲಾಯಿತುರಾಮನಾಥ ಕೋವಿಂದ ಅವರು ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ಹೆಚ್ಚು ಮತ ಪಡೆದು 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರುಕೋವಿಂದ್ ಅವರು ಜುಲೈ 25ರಂದು ಸಂಸತ್ತಿನ ಸೆಂಟ್ರಲ್‌ ಹಾಲ್ನಲ್ಲಿ ರಾಜಕೀಯ ಮುಖಂಡರುಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸುವರು.
2017: ಚೆನ್ನೈ: ಬೆಂಗಳೂರಿನ ಖಾಸಗಿ ಸಂಸ್ಥೆ ಟೀಮ್ ಇಂಡಸ್‌’ ಚಂದ್ರನಲ್ಲಿ ಬಾಹ್ಯಕಾಶ ನೌಕೆ ಹಾಗೂ ರೋವರ್‌  ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು ಈಗಾಗಲೇ  ಬಾಹ್ಯಾಕಾಶ ನೌಕೆಯ ಮಾದರಿ ಸಿದ್ಧಪಡಿಸಿದೆಆಗಸ್ಟ್ನಲ್ಲಿ ಇಸ್ರೊ ಮಾದರಿಯ ಪರೀಕ್ಷೆ ನಡೆಸಲಿದೆಹೀಗೆ ಚಂದ್ರನಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ ವಿಶ್ವದ ಪ್ರಥಮ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಸ್ ಪಾತ್ರವಾಗಲಿದೆಚೆನ್ನೈ ಇಂಟರ್ನ್ಯಾಷನಲ್ ಸೆಂಟರ್ ಆಯೋಜಿಸಿದ್ದ ಮಿಷನ್ ಟು ದಿ ಮೂನ್‌’ ಕಾರ್ಯಕ್ರಮದಲ್ಲಿ ಟೀಮ್ ಇಂಡಸ್ ಸಂಸ್ಥೆಯ ಸಂಸ್ಥಾಪಕದೆಹಲಿ ಐಐಟಿಯ ಹಿರಿಯ ವಿದ್ಯಾರ್ಥಿ ರಾಹುಲ್ ನಾರಾಯಣ್ ಯೋಜನೆ ಪ್ರಸ್ತುತ ಪಡಿಸಿದರುಯಾವುದೇ ಸ್ವರೂಪದಲ್ಲಿ ಸರ್ಕಾರದ ನೆರವು ಪಡೆಯದ ಸಂಪೂರ್ಣ ಖಾಸಗಿ ಪ್ರಯತ್ನ ಆಗಿರುವುದು  ಯೋಜನೆಯ ವಿಶೇಷತೆಸಿದ್ಧಗೊಂಡಿರುವ ಮಾದರಿಯು ಇಸ್ರೊ ಪರೀಕ್ಷೆಯಲ್ಲಿ ಅರ್ಹಗೊಂಡ ನಂತರ ಚಂದ್ರನಲ್ಲಿಗೆ ಸಾಗುವ ಬಾಹ್ಯಾಕಾಶ ನೌಕೆಯ ಅಂತಿಮ ತಯಾರಿ ನಡೆಯಲಿದೆ ಎಂದು ಟೀಮ್ ಇಂಡಸ್ ಸಹ ಸ್ಥಾಪಕದಲ್ಲಿ ಒಬ್ಬರಾಗಿರುವ  ಶೀಲಿಕಾ ರವಿಶಂಕರ್ ತಿಳಿಸಿದರುಗೂಗಲ್ ಲೂನಾರ್ ಎಕ್ಸ್ ಸ್ಪರ್ಧೆಯಲ್ಲಿ ಅಂತಿಮಗೊಂಡ ಐದು ತಂಡಗಳಲ್ಲಿ ಟೀಮ್ ಇಂಡಸ್ ಕೂಡ ಒಂದುಉಳಿದಂತೆ ಅಮೆರಿಕದ ಎರಡುಇಸ್ರೇಲ್ ಹಾಗೂ ಜಪಾನ್ ಒಂದೊಂದು ತಂಡಗಳು ಟಾಪ್ ಐದರಲ್ಲಿವೆ. 
2017: ಮುಂಬಯಿ : ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌  ಗಾಂಧಿ ಅವರಿಗೆ ಜನಿಸಿದ ಪುತ್ರಿ ತಾನು ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್‌ ಎಂಬ ಮಹಿಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಮಧುರ್‌ ಭಂಡಾರ್ಕರ್‌ ಅವರ ಮುಂಬರುವ  "ಇಂದು ಸರ್ಕಾರ್‌' ಚಿತ್ರಕ್ಕೆ ತಡೆ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಲೇರಿದರುಎಪ್ಪತ್ತರ ದಶಕದಲ್ಲಿ ದೇಶ ಕಂಡಿದ್ದ ಕರಾಳ ತುರ್ತು ಪರಿಸ್ಥಿತಿಯ ಹಿನ್ನೆಲೆಯನ್ನು ಹೊಂದಿರುವ ತನ್ನ "ಇಂದು ಸರ್ಕಾರ್‌' ಸಿನೇಮಾದ ಶೇ.30 ಭಾಗ ಸತ್ಯಾಂಶ ಹೊಂದಿದ್ದು ಉಳಿದ ಭಾಗ ಕಾಲ್ಪನಿಕವಾಗಿದೆ ಎಂದು ಈಚೆಗೆ ಮಧುರ್‌ ಭಂಡಾರ್ಕರ್‌ ಹೇಳಿಕೊಂಡಿದ್ದರುಭಂಡಾರ್ಕರ್‌ ಅವರು ತಮ್ಮ ಇಂದು ಸರ್ಕಾರ್‌ ಚಿತ್ರದಲ್ಲಿ 'ಸತ್ಯ ಯಾವುದು ಕಟ್ಟು ಕಥೆ ಯಾವುದುಎಂಬುದನ್ನು ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಪ್ರಿಯಾ ಪೌಲ್‌ ಹಿಂದಿನ ದಿನ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರುತುರ್ತು ಪರಿಸ್ಥಿತಿಯ ವೇಳೆ ನೆಗೆಟೀವ್‌ ಹೀರೋ ಆಗಿ ಮೆರೆದಿದ್ದ ಸಂಜಯ್‌ ಗಾಂಧಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿರುವ ಸಾಧ್ಯತೆಯನ್ನು ಪ್ರಿಯಾ ಪೌಲ್‌ ಶಂಕಿಸಿ ಚಿತ್ರದ ತಡೆಗೆ ಹೈಕೋರ್ಟಿಗೆ ಮನವಿ ಸಲ್ಲಿಸಿರುವುದಾಗಿ ಹೇಳಲಾಯಿತು

2017: ವಾಷಿಂಗ್ಟನ್ವೈದ್ಯಕೀಯ ಲೋಕದಲ್ಲಿ ಹಲವು ಉತ್ಪನ್ನಗಳಿಗೆ ಗೋಜನ್ಯಪ್ರಾಣಿಜನ್ಯ ವಸ್ತುಗಳು ಬಳಕೆಯಾಗುತ್ತವೆಆದರೀಗ ಮನುಷ್ಯರಿಗೆ ಮಾರಣಾಂತಿಕವಾದಜಗತ್ತಿನಲ್ಲಿ ಈವರೆಗೆ ಔಷಧವೇ ಇಲ್ಲದ ಎಚ್ಐವಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಗೋವಿನಲ್ಲಿದೆ ಎಂಬ ವಿಚಾರ ಬಹಿರಂಗಗೊಂಡಿತು.  ಗೋವಿನ ಸಂಕೀರ್ಣ ಹಾಗೂ ಬ್ಯಾಕ್ಟೀರಿಯಾಮಯ ಜೀರ್ಣಾಂಗ ವ್ಯವಸ್ಥೆಯ ಮಾದರಿಯಲ್ಲಿ ಕ್ಷಿಪ್ರವಾಗಿ ಅದಿಕ ಸಂಖ್ಯೆಯಲ್ಲಿ ಪ್ರತಿಜೀವಿಗಳನ್ನು ತಯಾರಿಸುವ ವಿಧಾನವನ್ನು ರೂಪಿಸಿ ತನ್ಮೂಲಕ  ಲಸಿಕೆಯನ್ನು ತಯಾರಿಸಿ ಎಚ್ಐವಿ ನಿರೋಧಕವಾಗಿ ಬಳಸಲ್ಪಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದರುಇಂಥ ವಿನೂತನ ಸಂಶೋಧನೆಯನ್ನು ಅಮೆ ರಿಕದ ಸಂಶೋಧಕರ ತಂಡ ಮಾಡಿದ್ದು, "ನೇಚರ್‌' ಹೆಸರಿನ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳನ್ನು ನೀಡಿತುಸಂಶೋಧನೆ ಪ್ರಕಾರಗೋವಿನಿಂದ ಎಚ್ಐವಿಗಳನ್ನು ತಡೆಯುವ ಪ್ರತಿಜೀವಿಗಳನ್ನು ಕೆಲವು ವಾರಗಳಲ್ಲಿ ತಯಾರು ಮಾಡಬಹುದುಗೋವುಗಳಲ್ಲಿರುವ ಬ್ಯಾಕ್ಟೀರಿಯಾ ಪೂರಿತ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಸಂಕೀರ್ಣ ವಾಗಿದ್ದುಹೊಟ್ಟೆಯಲ್ಲಿನ ಬಹುಹಂತದ ವ್ಯವಸ್ಥೆಹುಲ್ಲುಗಳನ್ನು ಜೀರ್ಣಗೊಳಿಸಲು ಸಹಾಯ ಮಾಡುತ್ತವೆಇದಕ್ಕೆ ತಕ್ಕುದಾದ ಭಾರೀ ಪ್ರಮಾಣದ ಬ್ಯಾಕ್ಟೀರಿಯಾ ವ್ಯವಸ್ಥೆ ಅವು ಗಳಲ್ಲಿದೆಆದ್ದರಿಂದ ಅವುಗಳಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿಯೂ ಹೆಚ್ಚುಜತೆಗೆ ಪ್ರತಿಜೀವಿ (ಆ್ಯಂಟಿಬಾಡಿ)ಗಳು ಅತಿ ವೇಗದಲ್ಲಿ ಗೋವುಗಳಲ್ಲಿ ಉತ್ಪತ್ತಿಯಾಗುತ್ತವೆಇದೇ ರೀತಿ ಮಾನವನಲ್ಲಾದರೆ ಪ್ರಾಕೃತಿಕವಾಗಿ ಎಚ್ಐವಿ ವಿರುದ್ಧದ ಪ್ರತಿಜೀವಿಗಳು (ಬಿಎನ್ಎಬಿಎಸ್‌) ಬೆಳವಣಿಗೆ ಹೊಂದುವ ಪ್ರಮಾಣ ಶೇ. 10ರಿಂದ 20ರಷ್ಟು ಮಾತ್ರವಾಗಿದೆಇಷ್ಟು ಬೆಳವಣಿಗೆ ಯಾಗಲು 2 ವರ್ಷ ಬೇಕಾಗಿದ್ದುಅದಾಗಲೇ ಎಚ್ಐವಿ ವೈರಸ್‌ ರೂಪಾಂತರಗೊಂಡು ದೇಹ ವನ್ನು ಜರ್ಝರಿತಗೊಳಿಸಿರುತ್ತದೆಆದರೆಸಂಶೋಧನೆ ಪ್ರಕಾರಎಚ್ಐವಿ ವಿರುದ್ಧ ಕೆಲವೇ ವಾರಗಳಲ್ಲಿ ಗೋವುಗಳಲ್ಲಿ ಬಿಎನ್ಎಬಿಎಸ್ಗಳು ಸೃಷ್ಟಿಯಾಗಿವೆನಾಲ್ಕು ಹಸುಗಳ ಮೇಲೆ ಇಂತಹ ಪ್ರಯೋಗ ಮಾಡಲಾಗಿದ್ದುಧನಾತ್ಮಕ ಲಿತಾಂಶಗಳು ಗೋಚರವಾಗಿವೆಎಚ್ಐವಿ ಗೋವುಗಳ ಮೇಲೆ ಪರಿ ಣಾಮ ಬೀರುವುದಿಲ್ಲ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಗೋವಿನ ಪ್ರತಿಜೀವಕ ಗಳನ್ನೇ ಔಷಧವನ್ನಾಗಿ ಮಾನವನಿಗೆ ನೀಡಲು ಸಾಧ್ಯವಿಲ್ಲಆದ್ದರಿಂದ ಮುಂದಿನ ದಿನಗಳಲ್ಲಿ ಅವುಗಳನ್ನು ಪೂರಕ ವಾಗಿ ಬಳಸಿ ಮಾನವರಿಗೆ ಬೇಕಾದ ಸುಧಾರಿತ ಎಚ್ಐವಿ ವಿರೋಧಿ ಲಸಿಕೆ ಕಂಡುಹಿಡಿಯುವುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ ಬಗ್ಗೆ ಇನ್ನೂ ವ್ಯಾಪಕವಾದ ಸಂಶೋಧನೆಗಳು ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆಎಚ್ಐವಿ ವಿರುದ್ಧ ಹೋರಾಟ ಹೇಗೆ ? ಮಾನವನಲ್ಲಿ ಎಚ್ಐವಿ ಬಳಿಕ ಪ್ರತಿಜೀವಿಗಳು ಸೃಷ್ಟಿಯಾಗುತ್ತಾವಾದರೂಅವುಗಳ ಉತ್ಪಾದನೆ ನಿಧಾನವಾಗಿರುತ್ತದೆ ಮತ್ತು ಪ್ರಬಲವಾಗಿರುವುದಿಲ್ಲವಿರೋಧಿ ಪ್ರತಿಜೀವಿಗಳ ಬೆಳವಣಿಗೆಗೆ ಸುಮಾರು 2 ವರ್ಷ ತಗಲುತ್ತವೆಆದರೆ ಮಾನವ ದೇಹ ಆಗ ಎಚ್ಐವಿನಿಂದಾಗಿ ತೀರಾ ಘಾಸಿಗೊಂಡಿರುತ್ತವೆಆದರೆ ಗೋವು ಗಳಲ್ಲಿ 30-45 ದಿನಗಳಲ್ಲಿ ಪ್ರತಿಜೀವಿಗಳು ಉತ್ಪತ್ತಿಯಾಗಿ ಎಚ್ಐವಿ ನಿರೋಧಕವಾಗಿ ಕೆಲಸ ಮಾಡುವುದನ್ನು ಪತ್ತೆ ಹಚ್ಚಲಾಗಿದೆ.
2016: ನವದೆಹಲಿಇಪ್ಪತ್ತೊಂಬತ್ತು ಮಂದಿಯಿದ್ದ ಭಾರತೀಯ ವಾಯುಪಡೆಗೆ ಸೇರಿದ ಎಎನ್-32 ವಿಮಾನ ನಾಪತ್ತೆಯಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಅಂದಾಜು 280 ಕಿಲೋ ಮೀಟರ್ ದೂರದಲ್ಲಿ ಪತನಗೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಯಿತು. ಬಂಗಾಳ ಕೊಲ್ಲಿ ವ್ಯಾಪ್ತಿಯಲ್ಲಿ ವಿಮಾನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತುಚೆನ್ನೈಯ ತಂಬರಂನಿಂದ ಹಾರಿದ ವಾಯಪಡೆಯ ವಿಮಾನ ಪತನಗೊಂಡಿರುವ ಬಗ್ಗೆ ಯಾವುದೇ ಸುಳಿವು ರಾತ್ರಿಯವರೆಗೂ ಸಿಗಲಿಲ್ಲ. ಆದರೆ ಸಾಕಷ್ಟು ಹುಡುಕಾಟದ ಬಳಿಕವೂ ಯಾವುದೇ ಸುಳಿವು ಇಲ್ಲದಿರುವುದನ್ನು ಗಮನಿಸಿದರೆ ಪತನಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂಬುದು ಐಎಎಫ್ ತಜ್ಞರ ಅಭಿಪ್ರಾಯ. 

2016: ನವದೆಹಲಿ: ಮುಂಬೈಯ 31 ಮಹಡಿಗಳ ವಿವಾದಾತ್ಮಕ ಆದರ್ಶ ಅಪಾರ್ಟ್ಮೆಂಟ್ ಕಟ್ಟಡವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿದ ಸುಪ್ರೀಂಕೋರ್ಟ್,  ಕಟ್ಟಡವನ್ನು ನಾಶಪಡಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿವಿಧ ಅರ್ಜಿದಾರರಿಗೆ ನೋಟಿಸ್ಗಳನ್ನು ಜಾರಿ ಮಾಡಿತುಕಟ್ಟಡವನ್ನು ಕೆಡವಿ ಹಾಕಲಾಗುವುದಿಲ’ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಭರವಸೆ ನೀಡಿತುನಾವು ಕಟ್ಟಡವನ್ನು ಮತ್ತು ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಯಾವುದನ್ನೂ ಕೆಡವಿ ಹಾಕುವುದಿಲ್ಲ’ ಎಂದು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಮತ್ತು .ಎಂ. ಸಪ್ರೆ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. 

2016: ನವದೆಹಲಿಸಂಸತ್ತಿನ ಭದ್ರತೆಗೆ ಸಂಬಂಧಿಸಿದ ವಿವಾದಾತ್ಮಕ ವಿಡಿಯೋ ಪ್ರಸಾರಿಸಿದ ಆಮ್ ಆದ್ಮಿ ಪಕ್ಷದ (ಆಪ್) ಸಂಸತ್ ಸದಸ್ಯ ಭಗವಂತ ಮಾನ್ ಅವರು ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಂದ ಬುಲಾವ್ ಬಂದ ಬಳಿಕ ಭೇಷರತ್ ಕ್ಷಮಾಯಾಚನೆ ಮಾಡುವುದಾಗಿ ಹೇಳಿ, ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬುದಾಗಿ ಭರವಸೆ ನೀಡಿದರು.  ಮಧ್ಯೆ ಭಗವಂತ ಮಾನ್ ವಿರುದ್ಧ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ‘ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಅಪಾಯಕ್ಕೆ ಒಡ್ಡಲು ನಾನೆಂದೂ ಬಯಸಿರಲಿಲ್ಲ. ನಾನು ಲಿಖಿತವಾಗಿಯೇ ಕ್ಷಮಾಯಾಚನೆ ಮಾಡಿದ್ದೇನೆ’ ಎಂದು ಮಾನ್ ತಿಳಿಸಿದರು
2016: ನವದೆಹಲಿಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತುಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ (ಅಜಿಎಲ್) ಹಾಗೂ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗಳಿಗೆ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಿದ ಆರೋಪದ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕಾರ ಭೂಪೀಂದರ್ ಸಿಂಗ್ ಸೇರಿ ಹಲವರ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತುಭೂಪೀಂದರ್ ಸಿಂಗ್ ಹೂಡಾ ಹರ್ಯಾಣದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ಗೆ ಪಂಚಕುಲಾದಲ್ಲಿ ಅಕ್ರಮವಾಗಿ ಭೂಮಿ ಹಂಚಿಕೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೈಗಾರಿಕಾ ಭೂಮಿ ಹಂಚಿಕೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಈಗಾಗಲೇ ಹೂಡಾ ಮೇಲೆ ಸಿಬಿಐ ಕಣ್ಣಿಟ್ಟಿದೆ.

2016: ಗೋರಖ್ಪುರ್ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದರುಇದಕ್ಕೂ ಮೊದಲು ಗೋರಖ್ಪುರ ಗೋರಖ್ನಾಥ ಮಂದಿರದಲ್ಲಿ ನಿರ್ಮಿಸಿರುವ ಮಹಾಂತ ಅವೈದ್ನಾಥ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಅಡಿಗಲ್ಲು ಸಮಾರಂಭದಲ್ಲಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಭೋಜಪುರಿ ಭಾಷೆಯಲ್ಲಿ ಭಾಷಣದ ಮೊದಲ ಸಾಲುಗಳನ್ನು ಹೇಳಿದ ಮೋದಿಗೆ ಜನ ಹಷೋದ್ಘಾರ ಮಾಡಿದರು. ಮಹಾಂತ ಅವೈದ್ನಾಥ್ರನ್ನು ಸ್ಮರಿಸಿದ ಮೋದಿ ರಾಜಕೀಯಕ್ಕೆ ಧುಮುಕದೆ ಜನಸೇವೆ ಮಾಡಿದ ಅಪರೂಪದ ಸಂತ ಎಂದು ಹೊಗಳಿದರು

2016: ನವದೆಹಲಿಪಾಕಿಸ್ತಾನದ ಜಮಾಯತ್-ಉದ್-ದವಾ ಮತ್ತು ಲಷ್ಕರ್--ತೊಯ್ಬಾ ಉಗ್ರಗಾಮಿ ಸಂಘಟನೆಗಳ ನಾಯಕ, ಮುಂಬೈ 2008 ಮೇಲಿನ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ ಜೊತೆಗೆ ಕಾಶ್ಮೀರದಲ್ಲಿ ಇತ್ತೀಚೆಗೆ ಹತನಾದ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಭಯೋತ್ಪಾದಕ ಬುರ್ಹಾನ್ ವನಿ ಮತ್ತು ದುಖ್ತ್ರನ್--ಮಿಲ್ಲತ್ ಮುಖ್ಯಸ್ಥ್ಥೆ ಅಸಿಯಾ ಅಂದ್ರಬಿಗೆ ನಿಕಟ ಸಂಪರ್ಕವಿತ್ತು ಎಂಬುದನ್ನು ಬಹಿರಂಗ ಪಡಿಸುವ ವಿಡಿಯೋ ಬೆಳಕಿಗೆ ಬಂದಿತುಸ್ವತಃ ಹಫೀಜ್ ಸಯೀದ್ ಕಾಶ್ಮೀರ ಕ್ಯಾರವಾನ್ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ವನಿ ಮತ್ತು ಅಂದ್ರಬಿ ಜೊತೆಗಿನ ಸಂಪರ್ಕಗಳನ್ನು ಬಹಿರಂಗ ಗೊಳಿಸಿದ್ದು  ವಿಡಿಯೋದಲ್ಲಿ ಅನಾವರಣಗೊಂಡಿತು. ‘ನನ್ನ ಸಹೋದರಿ ಅಸಿಯಾ ಅಂದ್ರಬಿ ನನಗೆ ಕರೆ ಮಾಡಿದ್ದಳು. ಆಕೆ 15 ನಿಮಿಷಕಾಲ ನಿರಂತರವಾಗಿ ಅತ್ತಳು. ನಾನು ಆಕೆಗೆ ಸಹೋದರಿ ಅಳಬೇಡ, ನಾವು ನಮ್ಮ ದಾರಿಯಲ್ಲಿ ಮುನ್ನಡೆದಿದ್ದೇವೆ’ ಎಂದು ಸಮಾಧಾನ ಹೇಳಿರುವುದಾಗಿ ಸ್ವತಃ ಸಯೀದ್ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ 
2016: ಐಜ್ವಾಲ್38 ಪತ್ನಿಯರು ಹಾಗೂ 89 ಮಕ್ಕಳು, ಅಸಂಖ್ಯಾತ ಮೊಮ್ಮಕ್ಕಳನ್ನು ಹೊಂದುವ ಮೂಲಕ ವಿಶ್ವದಲ್ಲಿಯೇ ಅತಿದೊಡ್ಡ ಕುಟಂಬ ಎಂಬ ಗೌರವಕ್ಕೆ ಪಾತ್ರರಾಗಿರುವ ಮಿಜೋರಾಂನ ಜ್ಯೋಣ ಚಾನ 72ನೇ ಜನ್ಮದಿನೋತ್ಸವವನ್ನು ಕುಟುಂಬದ ಪ್ರೀತಿಪಾತ್ರರೊಂದಿಗೆ ಆಚರಿಸಿಕೊಂಡರು.
ಹೌದು, ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವ ಇತ್ತೀಚಿನ ದಿನದಲ್ಲಿ ಒಂದೇ ಕುಟುಂಬದಲ್ಲಿ 162 ಜನ ಸದಸ್ಯರನ್ನು ಒಟ್ಟಿಗೆ ಪ್ರೀತಿಯಿಂದ ಕೊಂಡೊಯ್ಯುವ ಮೂಲಕ ಜ್ಯೋಣ ಆದರ್ಶಪ್ರಾಯರಾಗಿದ್ದಾರೆ. ಚಾನ ಪಂಥದ ಜ್ಯೋಣ ಚಾನ ಹಲವು ಧಾರ್ವಿುಕ ಹಾಗೂ ಸಾಮುದಾಯಿಕ ಗೀತೆಗಳ ಗಾಯನ ಹಾಗೂ ನೃತ್ಯ ಪ್ರದರ್ಶನದ ಮೂಲಕ ವಿಶ್ವಾದ್ಯಂತ ಚಿರಪರಿಚಿತರಾಗಿದ್ದಾರೆ. ಈಗಾಗಲೇ ಸುಮಾರು ಎರಡು ಸಾವಿರಕ್ಕೂ ಅಧಿಕ ಉತ್ಸವಗಳಲ್ಲಿ ಭಾಗವಹಿಸಿ, ತಮ್ಮ ಕಲೆಯನ್ನು ಅನಾವರಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಒಟ್ಟು 38 ಪತ್ನಿಯರನ್ನು ಹೊಂದಿರುವ ಜ್ಯೋಣ 1959ರಲ್ಲಿ ಹದಿನೈದನೇ ವಯಸ್ಸಿನಲ್ಲಿ ಮೊದಲ ವಿವಾಹವಾದರು. 2004ರಲ್ಲಿ 60ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ 38ನೇ ಮದುವೆಯಾದರು. 89 ಮಕ್ಕಳನ್ನು ಹೊಂದಿರುವ ಚಾನ ಹಲವು ಮೊಮ್ಮಕ್ಕಳಿಗೆ ಅಜ್ಜನ ಪ್ರೀತಿಯನ್ನು ಧಾರೆಯೆರೆಯುತ್ತಿದ್ದಾರೆ. ಇದೀಗ ನಾಲ್ಕು ಅಂತಸ್ತಿನ ಮನೆಯಲ್ಲಿ ಚಾನ ಸೇರಿದಂತೆ ಒಟ್ಟು 162 ಸದಸ್ಯರು ಜೀವನ ಸಾಗಿಸುತ್ತಿದ್ದಾರೆ.ಮಿಜೋರಾಂಗೆ ಆಗಮಿಸಿದ ಪ್ರವಾಸಿಗರು ಚಾನ ಮನೆಗೆ ಭೇಟಿ ನೀಡುವುದನ್ನು ಮರೆಯುವುದಿಲ್ಲ. ಅಷ್ಟೇ ಅಲ್ಲ  ಸುಂದರ ಕುಟುಂಬದೊಂದಿಗೆ ಭೇಟಿ ನೀಡಿದ ಪ್ರತಿಯೊಬ್ಬರು ಪೋಟೋ ಕ್ಲಿಕ್ಕಿಸಿಕೊಳ್ಳದೆ ಹಿಂತಿರುಗುವುದೇ ಇಲ್ಲ.

2016: ಲಖನೌ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಕುಟುಂಬ ಸದಸ್ಯರು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಕೆಲ ಬಿಎಸ್ಪಿ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದರುಉತ್ತರ ಪ್ರದೇಶ ಚುನಾವಣೆಗೆ ಬಿಎಸ್ಪಿ ಮುಖ್ಯಸ್ಥೆ ಲೈಂಗಿಕ ಕಾರ್ಯಕರ್ತೆಯಂತೆ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ 6 ವರ್ಷ ಅವಧಿಗೆ ಉಚ್ಚಾಟಿತರಾದ ದಯಾಶಂಕರ್ ವಿರುದ್ಧ ಉತ್ತರ ಪ್ರದೇಶದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

2008: ಯುಪಿಎ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಪರೀಕ್ಷೆಯಲ್ಲಿ 275 ಮತಗಳನ್ನು ಪಡೆದು ತೃಪ್ತಿಕರ ಅಂತರದಲ್ಲಿ ಗೆಲುವು ಪಡೆಯಿತುಇದರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ `ಅಣುಮತ ಗೆದ್ದರುಸರ್ಕಾರದ ವಿರುದ್ಧ 256 ಮತಗಳು ಬಿದ್ದವುಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಉದ್ಭವಿಸಿದ್ದ ರಾಜಕೀಯ ಅನಿಶ್ಚಿತತೆ ದೂರವಾಯಿತುಅಮೆರಿಕ ಜತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಕನಸು ನನಸಾಗುವತ್ತ ಸಾಗಿತು.

2007: ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಫ್ತುಲ್ಲಾ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವರು ಎಂದು ಎನ್ ಡಿಎ ಪ್ರಕಟಿಸಿತುಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ನಡೆದ ಎನ್ ಡಿಎ ಸಭೆಯ ನಂತರ  ವಿಷಯ ಪ್ರಕಟಿಸಲಾಯಿತುನಜ್ಮಾ ಹೆಫ್ತುಲ್ಲಾ ಅವರು ಸ್ವಾತಂತ್ರ್ಯಯೋಧ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಮೊಮ್ಮಗಳು ಮೊದಲು ಇವರು ಕಾಂಗ್ರೆಸ್ಸಿನಲ್ಲಿದ್ದರು.

2007: ಟಿವಿಂಯಲ್ಲಿ ಕ್ರೈಸ್ತಧರ್ಮದ ಪ್ರಚಾರ ಮಾಡುತ್ತಿದ್ದ ಟಾಮಿ ಫಯೆ ಬಕ್ಕೆರ್ ಮೆಸ್ಸನೆರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಕಾನ್ಸಸ್ ಸಿಟಿಯಲ್ಲಿ ಮೃತರಾದರು.
ಮೆಸ್ಸನೆರ್ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. `ಪ್ರೈಸ್ ದಿ ಲಾರ್ಡ್ಸಂಘಟನೆಯ ಸಂಸ್ಥಾಪಕರಾದ ಅವರ ಮೊದಲ ಪತಿ ಜಿಮ್ ಬಕ್ಕರ್ ಅವರಿಂದ ಮೆಸ್ಸನೆರ್ ಅವರು ಅಮೆರಿಕದಲ್ಲಿ ಮನೆಮಾತಾಗಿದ್ದರು.

2007: ಜೆ.ಕೆ.ರಾವ್ಲಿಂಗ್ ಬರೆದಿರುವ 'ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್ಪುಸ್ತಕದ 30 ಲಕ್ಷ ಪ್ರತಿಗಳು ಲಂಡನ್ನಿನ ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಮ್ಮಿನಲ್ಲಿ 24 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಾಣಗೊಂಡಿತುಡಬ್ಲ್ಯು ಎಚ್ ಸ್ಮಿತ್ ಮತ್ತು ವೂಲ್ವತ್ಸರ್್ ಅವರು ಬರೆದಿದ್ದ ಹಿಂದಿನ `ಹ್ಯಾರಿ ಪಾಟರ್ಪುಸ್ತಕಕ್ಕೆ ಹೋಲಿಸಿದರೆ  ಪುಸ್ತಕದ 10 ಲಕ್ಷದಷ್ಟು ಹೆಚ್ಚು ಪ್ರತಿಗಳು ಮಾರಾಟವಾದವುಪುಸ್ತಕವನ್ನು ಮಾರಾಟಕ್ಕೆ ಇಟ್ಟ ಎರಡು ಗಂಟೆಗಳಲ್ಲಿಯೇ 1 ಲಕ್ಷ ಪ್ರತಿ ಖರ್ಚಾಯಿತು ಎಂದು ಪ್ರಕಾಶಕ ಬ್ಲೂಮ್ಸ್ಬರಿ ಹೇಳಿದರು.

2007: ಸರ್ಕಾರದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನದ ಮಿರಾನ್ಷಾ ಪ್ರದೇಶದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದ 13 ಮಂದಿ ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹತ್ಯೆ ಮಾಡಿತು.

2007: ಮಾಜಿ ಚಾಂಪಿಯನ್ ಗೀತ್ ಸೇಥಿ ಅವರು ಬ್ರಿಟನ್ನಿನ ಲೀಡ್ಸ್ ನಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಲು ವಿಫಲರಾದರುನಾರ್ಥನ್ ಸ್ನೂಕರ್ ಸೆಂಟರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡಿನ ಮೈಕ್ ರಸ್ಸೆಲ್ ಅವರು 1835-1231ರಲ್ಲಿ ಎಂಟು ಬಾರಿಯ ವಿಶ್ವ ಚಾಂಪಿಯನ್ ಸೇಥಿ ಅವರನ್ನು ಮಣಿಸಿದರುಇದೇ ಚಾಂಪಿಯನ್ ಷಿಪ್ ನಲ್ಲಿ ಪೈಪೋಟಿಗೆ ಇಳಿದ ಭಾರತದ ಇತರ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿದೇವೇಂದ್ರ ಜೋಶಿಅಶೋಕ್ ಶಾಂಡಿಲ್ಯಾಅಲೋಕ್ ಕುಮಾರ್ಸೌರವ್ ಕೊಠಾರಿಧ್ರುವ ಸೀತಾವಾಲಾ ಅವರು ಆರಂಭದ ಹಂತದಲ್ಲಿಯೇ ಸೋತು ಹೊರ ಬಿದ್ದಿದ್ದರು.

2006: ಹಿರಿಯ ನೃತ್ಯಗುರು ಎಚ್.ಆರ್ಕೇಶವಮೂರ್ತಿ (87) ನಿಧನರಾದರು. 1949ರಲ್ಲಿ ಇವರು ಕೇಶವ ನೃತ್ಯ ಶಾಲೆಯನ್ನು ಸ್ಥಾಪಿಸಿ ಭರತನಾಟ್ಯವನ್ನು ಅತ್ಯಂತ ಶುದ್ಧ ಶೈಲಿಯಲ್ಲಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು.

2006: ಮಾಜಿ ಪ್ರಧಾನಿ ಎಚ್.ಡಿದೇವೇಗೌಡ ಅವರಿಗೆ ಸೆಡ್ಡು ಹೊಡೆದು ಜಾತ್ಯತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯ ನವದೆಹಲಿಯಲ್ಲಿ ವಿಧಿವತ್ತಾಗಿ ಕಾಂಗ್ರೆಸ್ ಸೇರಿದರು.

2006: ರಾಷ್ಟ್ರಪತಿಯವರು ತಿರಸ್ಕರಿಸಿದ `ಲಾಭದ ಹುದ್ದೆಮಸೂದೆಯನ್ನು ಯಾವ ಬದಲಾವಣೆಯನ್ನೂ ಮಾಡದೆ ಯಥಾವತ್ತಾಗಿ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿತುಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಬೇಕಾದ ಅಗತ್ಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿಗೆ ವಿವರಿಸಿದರುಲಾಭದ ಹುದ್ದೆ ವಿನಾಯ್ತಿಗೆ ಬಳಸಿದ ಮಾನದಂಡ ಅಪೂರ್ಣ ಎಂದು ಹೇಳಿದ ರಾಷ್ಟ್ರಪತಿ .ಪಿ.ಜೆಅಬ್ದುಲ್ ಕಲಾಂ ದೇಶವ್ಯಾಪಿ ಅನ್ವಯವಾಗುವಂತಹ ಏಕರೂಪಿ ಸೂತ್ರ ರೂಪಿಸಲು ಸಲಹೆ ಮಾಡಿದ್ದರುವಿನಾಯ್ತಿಗೆ ಬಳಸುವ ಮಾನದಂಡಗಳು ನಿಷ್ಪಕ್ಷಪಾತಪಾರದರ್ಶಕಗೊಂದಲ ರಹಿತವಾಗಿರಬೇಕು ಎಂದು ಅವರು ಸೂಚಿಸಿದ್ದರು.

2000: ಪಾಕಿಸ್ತಾನದ ನ್ಯಾಯಾಲಯವೊಂದು ನವಾಜ್ ಷರೀಫ್ ಅವರಿಗೆ 14 ವರ್ಷಗಳ ಶಿಕ್ಷೆ ಮತ್ತು 21 ವರ್ಷಗಳ ಅವಧಿಯ ರಾಜಕೀಯ ಬಹಿಷ್ಕಾರವನ್ನು ವಿಧಿಸಿತು.

1999: ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.

1997: ಸೆಪ್ಟೆಂಬರ್ 15ರಿಂದ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತು.

1993: ವಿಲೆ ಪೋಸ್ಟ್ ಅವರು 7 ದಿನ 18 ಗಂಟೆ 49 ನಿಮಿಷದಲ್ಲಿ ವಿಶ್ವವನ್ನು ಸುತ್ತಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಗಾಯಕ ಪಂಡಿತ ಬಸವರಾಜ ರಾಜಗುರು ನಿಧನ.

1981: ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಆ್ಯಪಲ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಪ್ರಾರಂಭಿಸಿಎಲ್ಲ ನಿರೀಕ್ಷಿತ ಸಂಪರ್ಕ ಕಾರ್ಯಕ್ರಮ ಆರಂಭಿಸಿ ಸ್ಪಷ್ಟ ಚಿತ್ರಗಳನ್ನು ಪ್ರಸಾರ ಮಾಡಿತು.

1966: ಶಂಕರ ಬೈಚಬಾಳ ಜನನ.

1959: ಸಂಸದಬಿಜೆಪಿ ನಾಯಕ ಅನಂತಕುಮಾರ ಜನನ.

1943: ಕುಮುದಾ ಪುರುಷೋತ್ತಮ ಜನನ.

1938: ಸಾಹಿತಿ ಕೆ.ಟಿಗಟ್ಟಿ ಜನನ.

1929: ನವ್ಯ ಕಾದಂಬರಿಕಾರವಿಮರ್ಶಕಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರುಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿದ್ದ ದೇಸಾಯಿ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಥೆ ಇಂಗ್ಲೆಂಡಿಗೆ ಹಡಗಿನ ಪ್ರಯಾಣ ಕಾಲದಲ್ಲಿ ಬರೆದ `ಕ್ಷಿತಿಜ'. ಅವರ ಐವತ್ತಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆಕನ್ನಡವಲ್ಲದೆ ಇಂಗ್ಲಿಷ್ನಲ್ಲೂ ಕೃತಿಗಳನ್ನು ರಚಿಸಿದ ಅವರಿಗೆ ವರ್ಧಮಾನ ಪ್ರಶಸ್ತಿರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.


No comments:

Post a Comment