Tuesday, July 30, 2019

ಇಂದಿನ ಇತಿಹಾಸ History Today ಜುಲೈ 30

2019: ನವದೆಹಲಿಲೋಕಸಭೆಯಲ್ಲಿ ಮೂರು ಬಾರಿ ಅನುಮೋದನೆ ಪಡೆದರೂರಾಜ್ಯಸಭೆಯಲ್ಲಿ ೧೯ ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ,  ಒಂದೇ ಉಸಿರಿನಲ್ಲಿ ಮೂರು ಬಾರಿ ’ತಲಾಖ್’ ಪದವನ್ನು ಉಸುರಿ ವಿವಾಹ ವಿಚ್ಛೇದನ ನೀಡುವ ಪದ್ಧತಿಯನ್ನು ದಂಡನಾರ್ಹ ಅಪರಾಧವನ್ನಾಗಿ ಮಾಡುವ ’ತ್ರಿವಳಿ ತಲಾಖ್ ಮಸೂದೆ’  ರಾಜ್ಯಸಭೆಯಲ್ಲಿ ತನ್ನ ಕಠಿಣ ಪರೀಕ್ಷೆಯಲ್ಲಿ ಜಯಗಳಿಸಿತುವಿಪಕ್ಷಗಳ ಪ್ರತಿಭಟನೆಯ ಮಧ್ಯೆ ಸದನ ಮಸೂದೆಗೆ ಒಪ್ಪಿಗೆ ನೀಡಿತುನಿತೀಶ ಕುಮಾರ್ ಅವರ ಜನತಾದಳ (ಯುಮತ್ತು ಎಐಎಡಿಎಂಕೆಯಂತಹ ಕೆಲವೊಂದು ಮಿತ್ರ ಪಕ್ಷಗಳಿಂದಲೂ ವಿರೋಧಿಸಲ್ಪಟ್ಟ ಮಸೂದೆಕಡೆಗೆ  ಪಕ್ಷಗಳು ಮತದಾನದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದರಿಂದ೨೪೦ ಸದಸ್ಯಬಲದ ರಾಜ್ಯಸಭೆಯಲ್ಲಿ ಬಹುಮತದ ಗಡಿದಾಟಲು ಸಾಧ್ಯವಾಯಿತುಮಸೂದೆಯನ್ನು ಹೆಚ್ಚಿನ ಪರಾಮರ್ಶೆಗಾಗಿ ಜಂಟಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ಮುಂದಿಟ್ಟ ಬೇಡಿಕೆಯನ್ನು ಪರವಾಗಿ ಕೇವಲ ೮೪ ಮಂದಿಮತ್ತು ವಿರೋಧವಾಗಿ ೧೦೦ ಮಂದಿ ಮತಚಲಾಯಿಸುವ ಮೂಲಕ ತಿರಸ್ಕರಿಸಿದರುಬೆನ್ನಲ್ಲೇ ತ್ರಿವಳಿ ತಲಾಖ್ ಮಸೂದೆಗೆ ಸದನ ತನ್ನ ಒಪ್ಪಿಗೆ ನೀಡಿತುಒಂದೇ ಉಸಿರಿನಲ್ಲಿ ನೀಡುವ ತ್ರಿವಳಿ ತಲಾಖ್ನ್ನು ಕಾನೂನುಬಾಹಿರವನ್ನಾಗಿ ಮಾಡುವ ಮಸೂದೆಯು ಇದರ ಉಲ್ಲಂಘನೆಗೆ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದೆತ್ರಿವಳಿ ತಲಾಖ್ ಪದ್ಧತಿಯನ್ನು ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತುಆದರೆ ಸುಗ್ರೀವಾಜ್ಞೆಯ ಜಾಗದಲ್ಲಿ ಕಾಯ್ದೆ ರೂಪಿಸುವುದಕ್ಕೆ ಎನ್ಡಿಎ ಸರ್ಕಾರ ಅಗ್ರ ಪ್ರಾಶಸ್ತ್ಯ ನೀಡಿತ್ತುಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಅಧಿಕಾರಕ್ಕೆ ಪುನರಾಯ್ಕೆಯಾಗಿ ಬಂದ ಬಳಿಕ ಸಂಸತ್ತಿನಲ್ಲಿ ಮಂಡನೆಯಾದ ಚೊಚ್ಚಲ ಮಸೂದೆ ಇದುಮುಸ್ಲಿಮ್ ಮಹಿಳಾ (ಮದುವೆ ಹಕ್ಕುಗಳ ರಕ್ಷಣೆಮಸೂದೆಯನ್ನು ೧೯ ತಿಂಗಳುಗಳ ಹಿಂದೆ ಮೊತ್ತ ಮೊದಲಿಗೆ ಸಂಸತ್ತಿನಲ್ಲಿ ಮಂಡಿಸಲಾಗಿತ್ತುಲೋಕಸಭೆ ಒಪ್ಪಿಗೆ ಕೊಟ್ಟರೂರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ (ಎನ್ಡಿಎಬಹುಮತವಿಲ್ಲದ ರಾಜ್ಯಸಭೆಯಲ್ಲಿ ತೀವ್ರ ವಿರೋಧದ ಪರಿಣಾಮವಾಗಿ ಮಸೂದೆ ನೆನೆಗುದಿಗೆ ಬಿದ್ದಿತ್ತು.  ವಾಸ್ತವವಾಗಿ ರಾಜ್ಯಸಭೆಯಲ್ಲಿ ಈಗಲೂ ಎನ್ಡಿಎ ಬಹುಮತವನ್ನು ಹೊಂದಿಲ್ಲಆದರೆ ವಿರೋಧ ಪಕ್ಷಗಳ ಬಲ ಕುಂದಿದ್ದು ಎನ್ಡಿಎಗೆ ಅನುಕೂಲವಾಯಿತುಕೆಲವು ಮಿತ್ರ ಪಕ್ಷಗಳು ಮಸೂದೆಯನ್ನು ವಿರೋಧಿಸಿದರೂಮಸೂದೆಯನ್ನು ಮತಕ್ಕೆ ಹಾಕುವ ವೇಳೆಯಲ್ಲಿ ಅದನ್ನು ಬೆಂಬಲಸುವ ಮೂಲಕ ಇಲ್ಲವೇ ಮತದಾನದಿಂದ ಗೈರುಹಾಜರಾಗುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅತ್ಯಂತ ವಿವಾದಾಸ್ಪದವಾಗಿದ್ದ ಕಾನೂನು ಅಂಗೀಕರಿಸಲು ನೆರವಾದವುಜನತಾದಳ (ಯುಸದಸ್ಯ ವಶಿಷ್ಠ ನಾರಾಯಣ್ ಸಿಂಗ್ ಅವರು ತಮ್ಮ ಪಕ್ಷವು ಕಾನೂನಿಗೆ ವಿರುದ್ಧವಾಗಿದೆ ಮತ್ತು ಚರ್ಚೆಯಿಂದ ಹೊರಗುಳಿಯುತ್ತದೆ ಎಂಬುದಾಗಿ ಘೋಷಿಸುವ ಮೂಲಕ ಸದನದ ಚರ್ಚೆಗೆ ತಿರುವು ನೀಡಿದರು. ’ನಾವು ಇದನ್ನು ಬಹಿಷ್ಕರಿಸುತ್ತೇವೆ’ ಎಂದು ಸಿಂಗ್ ಹೇಳಿದರುಜನತಾದಳ (ಯುಸದನದಲ್ಲಿ  ಸದಸ್ಯರನ್ನು ಹೊಂದಿದೆ.  ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯನ್ನು ಬೆಂಬಲಿಸಿದ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ಎಐಎಡಿಎಂಕೆ ರಾಜ್ಯಸಭೆಯಲ್ಲಿ ಮಸೂದೆಯ ವಿರುದ್ಧ ಮಾತನಾಡಿತುರಾಜ್ಯಸಭೆಯಲ್ಲಿ ಎಐಎಡಿಎಂಕೆಯ ಸದನ ನಾಯಕರಾದ ನವನೀತಕೃಷ್ಣನ್ ಅವರು ಮಸೂದೆಯನ್ನು ಜಂಟಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರುಆದರೆ ಬಳಿಕ ಮಸೂದೆಯನ್ನು ಮತಕ್ಕೆ ಹಾಕಿದಾಗ ಅವರ ಪಕ್ಷವು ಅದನ್ನು ವಿರೋಧಿಸಿ ಸಭಾತ್ಯಾಗ ಮಾಡಿತುಮಸೂದೆಯನ್ನು ವಿರೋಧಿಸಿದ ಮಿತ್ರ ಪಕ್ಷಗಳು ಸಭಾತ್ಯಾಗ ಮಾಡಿದ್ದರಿಂದ ಸದನದ ಬಲ ಹಾಗೂ ಬಹುಮತದ ಮಾನದಂಡ ಕೆಳಕ್ಕೆ ಇಳಿಯಿತು.  ಇನ್ನೊಂದೆಡೆಯಲ್ಲಿ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳವು ಮಸೂದೆಯನ್ನು ಬೆಂಬಲಿಸಿತುಮಸೂದೆಯನ್ನು ತಮ್ಮ ಪಕ್ಷವು ಒಮ್ಮೆ ವಿರೋಧಿಸಿತ್ತುಆದರೆ ಸರ್ಕಾರವು ಕೆಲವು ವಿಧಿಗಳಿಗೆ ತಿದ್ದುಪಡಿ ಮಾಡಿರುವುದರಿಂದ ತನ್ನ ನಿಲುವನ್ನು ಪರಿಷ್ಕರಿಸಿದೆ ಎಂದು ಬಿಜು ಜನತಾದಳದ ಪ್ರಸನ್ನ ಆಚಾರ್ಯ ಸದನದಲ್ಲಿ ಹೇಳಿದರು.ಮಸೂದೆ ಮೇಲಿನ ಚರ್ಚೆಗೆ ಚಾಲನೆ ನೀಡಿದ ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ಅವರು ’ಸದಸ್ಯರು ಇದನ್ನು ರಾಜಕೀಯದ ಕನ್ನಡಕ ಮತ್ತು ಮತಬ್ಯಾಂಕ್ ದೃಷ್ಟಿಯಿಂದ ನೋಡಬಾರದು’ ಎಂದು ಕೋರಿದರು. ‘ಇದು ಮಹಿಳೆಯರಿಗೆ ನ್ಯಾಯ ಒದಗಿಸುವ ಮತ್ತು ಅವರನ್ನು ಸಬಲೀಕರಣ ಮಾಡುವ ಪ್ರಶ್ನೆಇದು ಲಿಂಗ ನ್ಯಾಯಘನತೆ ಮತ್ತು ಸಮಾನತೆಯ ವಿಷಯ’ ಎಂದು ಸಚಿವರು ಹೇಳಿದರುಕಾಂಗ್ರೆಸ್ ಶಾಸನಕರ್ತ ಅಮೀ ಯಾಜ್ಞಿಕ್ ಅವರು ಮಸೂದೆಯನ್ನು ಬೆಂಬಲಿಸುತ್ತೇವೆಆದರೆ ಅದನ್ನು ದಂಡನೀಯವನ್ನಾಗಿ ಮಾಡುವುದನ್ನು ಅಲ್ಲ ಎಂದು ಹೇಳಿದರುವಿವಾದಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ವಹಿಸಬಾರದುಬದಲಿಗೆ ಮಹಿಳೆಯರ ಘನತೆಯ ಹಿತಾಸಕ್ತಿ ದೃಷ್ಟಿಯಿಂದ ಕೌಟುಂಬಿಕ ನ್ಯಾಯಾಲಯಗಳಿಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರುಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ರಾಜ್ಯಸಭೆಯಲ್ಲಿ ಅಧಿಕಾರದ ಸಮೀಕರಣ ಬದಲಾಗಿರುವುದನ್ನು ಪ್ರಸ್ತಾಪಿಸಿದರು ಮತ್ತು ಕಾಂಗ್ರೆಸ್ ಹೇಗೆ ತನ್ನ ಸಂಖ್ಯಾಬಲದಿಂದ ಸದನವನ್ನು ’ಹೈಜಾಕ್’ ಮಾಡಿ ಮಸೂದೆಯನ್ನು ತಡೆ ಹಿಡಿದಿತ್ತು ಎಂದು ನೆನಪಿಸಿದರು೨೦೧೭ರಲ್ಲಿ ಸುಪ್ರೀಂಕೋರ್ಟ್ ಒಂದೇ ಉಸಿರಿನಲ್ಲಿ ನೀಡುವ ತ್ರಿವಳಿ ತಲಾಖ್ ವಿವಾಹ ವಿಚ್ಛೇದನ ಪದ್ಧತಿಯನ್ನು ಕಾನೂನು ಬಾಹಿರ ಎಂಬುದಾಗಿ ಘೋಷಿಸಿದ್ದನ್ನು ಅನುಸರಿಸಿ  ಮಸೂದೆಯನ್ನು ತರಲಾಯಿತು. ಲೋಕಸಭೆಯು ಮಸೂದೆಗೆ  ಹಿಂದಿನ  ವಾರ ತನ್ನ ಅನುಮೋದನೆ ನೀಡಿತ್ತುಸುಪ್ರೀಂಕೋರ್ಟ್ ತೀರ್ಪಿನ ಬಳಿಕ ೫೭೪ ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗಿದ್ದು,  ಸರ್ಕಾರವು  ಪದ್ಧತಿಯನ್ನು ದಂಡನೀಯವನ್ನಾಗಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ೧೦೧ ಪ್ರಕರಣಗಳು ಬಳಕಿಗೆ ಬಂದಿದ್ದವು ಎಂದು ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಇದಕ್ಕೆ ಮುನ್ನ ರಾಜ್ಯಸಭೆಗೆ ತಿಳಿಸಿದ್ದರು೨೦ ಮುಸ್ಲಿಮ್ ರಾಷ್ಟ್ರಗಳು ತ್ರಿವಳಿ ತಲಾಖ್ ಪದ್ಧತಿಯನ್ನು ವಿವಿಧ ರೀತಿಗಳಲ್ಲಿ ನಿಯಂತ್ರಿಸಿವೆಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದೆಆದರೆ ದುರದೃಷ್ಟಕರವಾಗಿ ಒಂದಲ್ಲ ಒಂದು ಕಾರಣಕ್ಕಾಗಿ ಹಾಗಾಗಲಿಲ್ಲ ಎಂದು ಅವರು ಹೇಳಿದ್ದರುಲಿಂಗ ನ್ಯಾಯಕ್ಕೆ ವಿಜಯಪ್ರಧಾನಿ ಮೋದಿ: ರಾಜ್ಯಸಭೆಯು ತ್ರಿವಳಿ ತಲಾಖ್ ಮಸೂದೆಯನ್ನು ಅನುಮೋದಿಸಿದ ಬೆನ್ನಲ್ಲೇ ’ಭಾರತದಲ್ಲಿ ಮುಸ್ಲಿಮ್ ಸಮುದಯದ ಮಹಿಳೆಯರನ್ನು ಕಾಡುತ್ತಿದ್ದ ಪುರಾತನ ಮತ್ತು ಮಧ್ಯಯುಗದ ಪದ್ಧತಿಯನ್ನು ನಿರ್ಮೂಲನಗೊಳಿಸಿದ’ ಸಂಭ್ರಮವನ್ನು ಹಂಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಹ್ಯಾಂಡಲ್ ಕೈಗೆತ್ತಿಕೊಂಡರು.   ‘ಪುರಾತನ ಮತ್ತು ಮಧ್ಯಯುಗದ ಪದ್ಧತಿ ಕೊನೆಗೂ ಇತಿಹಾಸದ ಕಸದ ಬುಟ್ಟಿ ಸೇರಿತುಸಂಸತ್ತು ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದು ಪಡಿಸಿತು ಮತ್ತು ಮುಸ್ಲಿಮ್ ಮಹಿಳೆಯರ ಬಗೆಗಿನ ಚಾರಿತ್ರಿಕ ತಪ್ಪನ್ನು ಸರಿಪಡಿಸಿತುಇದು ಲಿಂಗ ನ್ಯಾಯದ ಜಯ ಮತ್ತು ಸಮಾಜವನ್ನು ಇನ್ನಷ್ಟು ಸಮಾನತೆಯತ್ತ ಒಯ್ಯುವುದುಭಾರತವು ಇಂದು ಸಂತಸ ಪಡುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.  ವಿವಾದಾತ್ಮಕ ಮಸೂದೆಯನ್ನು ಮೇಲ್ಮನೆಯಲ್ಲಿ ಅಂಗೀಕರಿಸುವ ನಿಟ್ಟಿನಲ್ಲಿ ನೆರವಾದ ಎಲ್ಲರಿಗೂ ಪ್ರದಾನಿ ಕೃತಜ್ಞತೆ ಸಲ್ಲಿಸಿದರು. ’ಮುಸ್ಲಿಮ್ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆಮಸೂದೆ -೨೦೧೯ ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕಾರಗೊಳ್ಳಲು ಬೆಂಬಲ ನೀಡಿದ ಎಲ್ಲ ಪಕ್ಷಗಳು ಮತ್ತು ಸಂಸತ್ ಸದಸ್ಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ’ ಎಂದು ಪ್ರಧಾನಿ ಟ್ವೀಟ್ ಮಾಡಿದರು.

2019: ಮಂಗಳೂರು/ಚಿಕ್ಕಮಗಳೂರುಮಾಜಿ ಮುಖ್ಯಮಂತ್ರಿ ಎಸ್ಎಂಕೃಷ್ಣ ಅವರ ಅಳಿಯಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರು ನಾಪತ್ತೆಯಾದರು. ಉಳ್ಳಾಲ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದ್ದು,  ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. 
ರಾತ್ರಿಯೂ ಕಾರ್ಯಾಚರಣೆ ಮುಂದುವರೆಯಿತು. ಹೊಸ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಯಿತು.  ಸಿದ್ದಾರ್ಥ್ ಅವರು ಕೊನೆಯದಾಗಿ ಮೊಬೈಲ್ ಬಳಕೆ ಮಾಡಿದ್ದ ಲೊಕೇಷನ್ ಪತ್ತೆಯಾಗಿದ್ದು ನೇತ್ರಾವತಿ ಸೇತುವೆ ಸಮೀಪದ ಜಪ್ಪಿನಮೊಗರು ಟವರ್ ಲೊಕೇಷನ್ನಲ್ಲಿ ಕೊನೆಯ ಬಾರಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದಾರ್ಥ್ ಪತ್ತೆಗಾಗಿ ಆಂಧ್ರದಿಂದ ಸೋನಾರ್ ಸ್ಕ್ಯಾನರ್ ಯಂತ್ರ ತರಿಸಲಾಗುತ್ತಿದ್ದುಇದು ನೀರಿನ ತಳಭಾಗದಲ್ಲಿನ ಫೋಟೋ ತೆಗೆಯುವುದು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. 


2019: ಬೆಂಗಳೂರುಕೆ.ಆರ್‌. ರಮೇಶ್‌ ಕುಮಾರ್‌ ರಾಜೀನಾಮೆ ನೀಡಿದ ನಂತರ ಬಿಜೆಪಿ ಸರ್ಕಾರದಲ್ಲಿ  ವಿಧಾನಸಭಾಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿತು.
ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸ್ಪೀಕರ್ ಆಗಿ ಆಯ್ಕೆಯಾದರು. ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಸಲು ರಾಜ್ಯಪಾಲರು ಸೂಚಿಸಿದ್ದರುಇದರನ್ವಯ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪೀಕರ್ ಚುನಾವಣೆಯಿಂದ ಹಿಂದೆ ಸರಿದವು. ಹೀಗಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಸ್ಪೀಕರ್‌ ಆಗಿ ಆಯ್ಕೆಯಾದರು.
ಅಧಿಕೃತವಾಗಿ ಬುಧವಾರ  ಕುರಿತು ಘೋಷಣೆ ಮಾಡಲಾಗುತ್ತದೆಎಂದು ಮೂಲಗಳು ಹೇಳಿದವು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರಬನಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಭಾರೀ ಗುಂಡಿನ ದಾಳಿಯಲ್ಲಿ ೩೪ರ ಹರೆಯದ ಯೋಧ ನಾಯ್ಕ್ ಕೃಷ್ಣನ್ ಲಾಲ್ ಹುತಾತ್ಮರಾದರು. ತತ್ ಕ್ಷಣವೇ ಸೇಡಿನ ದಾಳಿ ನಡೆಸಿದ ಭಾರತೀಯ ಸೇನೆ ತಂಗ್ಧರ್-ಕೇರನ್ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಕೊಂದು ಹಾಕಿತು. ಅಖ್ನೂರಿನ ಘಾಗ್ರೀಯ ಗ್ರಾಮದ ನಿವಾಸಿಯಾದ ನಾಯ್ಕ್ ಅವರು  ಈದಿನ ಮಧ್ಯಾಹ್ನ ಪಾಕಿಸ್ತಾನವು ದಿಢೀರನೆ ಭಾರೀ ಗುಂಡಿನ ದಾಳಿ ಆರಂಭಿಸಿದಾಗ ಗುಂಡೇಟಿಗೆ ಬಲಿಯಾದರು. ಮಧ್ಯಾಹ್ನ ೧.೩೦ ಗಂಟೆಗೆ ಈ ಭಾರೀ ಗುಂಡಿನ ದಾಳಿ ನಡೆಯಿತು ಎಂದು ವರದಿಗಳು ತಿಳಿಸಿದವು. ಪಾಕಿಸ್ತಾನವು  ಹಿಂದಿನ ದಿನ  ಮಧ್ಯಾಹ್ನ  ೧೨.೧೫ರ ವೇಳೆಗೆ ಪೂಂಚ್‌ನ ಶಾಹಪುರದಲ್ಲಿ ಕೂಡಾ ಕದನ ವಿರಾಮ ಉಲ್ಲಂಘನೆ ನಡೆಸಿತ್ತು. ಸಣ್ಣ ಶಸ್ತ್ರಾಸ್ತಗಳ ಜೊತೆಗೆ ಸಣ್ಣ ಫಿರಂಗಿ ಮೂಲಕ ಪಾಕಿಸ್ತಾನಿ ಸೈನಿಕರು ಶೆಲ್ ದಾಳಿ ನಡೆಸಿದ್ದು ಭಾರತೀಯ ಯೋಧರು ಈ ಅಪ್ರಚೋದಿತ ಗುಂಡಿನ ದಾಳಿಗೆ ತಕ್ಕ ಉತ್ತರ ನೀಡಿದ್ದರು.  ಹಿಂದಿನ ದಿನ ಪೂಂಚ್ ವಿಭಾಗದಲ್ಲಿ ಸಂಜೆ ೫ರಿಂದ ರಾತ್ರಿ ೧೦ರವರೆಗೆ ಪಾಕಿಸ್ತಾನಿ ಪಡೆಗಳು ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ೧೫ ತಿಂಗಳ ಒಂದು ಶಿಶು ಮತ್ತು  ಒಬ್ಬ ಯೋಧ ಗಾಯಗೊಂಡಿದ್ದರು. ಮಗು ಹಿಂದಿನ ದಿನ  ತಡರಾತ್ರಿಯಲ್ಲಿ ಗಾಯಗಳ ಪರಿಣಾಮವಾಗಿ ಪೂಂಚ್ ಆಸ್ಪತ್ರೆಯಲ್ಲಿ ಅಸು ನೀಗಿತ್ತು. ಪಾಕಿಸ್ತಾನದಿಂದ ನಡೆದ ಈ ಗುಂಡಿನ ದಾಳಿಯಲ್ಲಿ ಮಗುವಿನ ಜೊತೆಗೆ ತಾಯಿ ಫಾತಿಮಾ ಜಾನ್ (೩೫) ಮತ್ತು ಇನ್ನೊಬ್ಬ ನಾಗರಿಕ ಮೊಹಮ್ಮದ್ ಆರಿಫ್ (೪೦) ಕೂಡಾ ಗಾಯಗೊಂಡಿದ್ದರು. ಸೌಜಿಯಾನ್ ವಿಭಾಗದಲ್ಲಿ  ಗಡಿಯಾಚೆಯಿಂದ ಗುಂಡಿನ ದಾಳಿ ನಡೆದಿದ್ದು,  ರಾತ್ರಿ ೧೦ರ ಸುಮಾರಿಗೆ ಮೆಂಧರ್ ವಿಭಾಗದ ಮನಕೋಟೆಯಲ್ಲೂ  ತೀವ್ರ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ನಾಗರಿಕರ ಕೆಲವು ಮನೆಗಳಿಗೂ ಹಾನಿಯಾಗಿತ್ತು. ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿ, ಪಾಕಿಸ್ತಾನಿ ಕೋವಿಗಳ ಸದ್ದಡಗಿಸಿತು ಎಂದು ರಕ್ಷಣಾ ವಕ್ತಾರರು ನುಡಿದರು.

2019: ನವದೆಹಲಿಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಉನ್ನಾವೋ ಅತ್ಯಾಚಾರ ಸಂತ್ರಸ್ತೆ  ಅಪಘಾತ ಸಂಭವಿಸುವುದಕ್ಕೆ ಸ್ವಲ್ಪದಿನ ಮುಂಚಿತವಾಗಿ ಕೆಲವು ವ್ಯಕ್ತಿಗಳು ತನ್ನಮನೆಗೆ ಬಂದು ತನಗೆ ಬೆದರಿಕೆ ಹಾಕಿರುವುದಾಗಿ ಕೆಲ ದಿನಗಳ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಗೆ ಪತ್ರ ಬರೆದಿದ್ದರು.  ‘ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿಜನರು ನನ್ನ ಮನೆಗೆ ಬಂದು ಪ್ರಕರಣ ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆ,  ಪ್ರಕರಣ ಹಿಂತೆಗೆದುಕೊಳ್ಳದೇ ಇದ್ದಲ್ಲಿ ಇಡೀ ಕುಟುಂಬವನ್ನೇ ನಕಲಿ ಪ್ರಕರಣಗಳಲ್ಲಿ ಸಿಲುಕಿಸಿ ಸೆರೆಮನೆಗೆ ಅಟ್ಟಲಾಗುವುದು ಬೆದರಿಸಿದ್ದಾರೆ’ ಎಂದು ಅತ್ಯಾಚಾರ ಸಂತ್ತಸ್ಥೆ ಜುಲೈ ೧೨ರಂದು ಬರೆದ ಪತ್ರದಲ್ಲಿ ತಿಳಿಸಿದ್ದರುಭಾರತೀಯ ಜನತಾ ಪಕ್ಷದ (ಬಿಜೆಪಿಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು  ಮುನ್ನ ಮಹಿಳೆ ಆಪಾದಿಸಿದ್ದರು ಸಂಬಂಧದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇವೆಶಾಸಕರನ್ನು ಸೆರೆಮನೆಯಲ್ಲಿ ಇಡಲಾಗಿತ್ತು. ಸಂತ್ರಸ್ಥೆಯ ತಾಯಿ ಕೂಡಾ ಉತ್ತರ ಪ್ರದೇಶ ಪೊಲೀಸರಿಗೆ ಜುಲೈ ೧೩ರಂದು ದೂರು ನೀಡಿದ್ದರುಉನ್ನವೋ ಪೊಲೀಸರಿಗೆ ಕಳುಹಿಸಿದ ರಿಜಿಸ್ಟರ್ಡ್ ಪತ್ರದಲ್ಲಿ ಸಂತ್ರಸ್ಥೆಯ ತಾಯಿ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕಿದ ಎರಡು ಘಟನೆಗಳನ್ನು ಉಲ್ಲೇಖಿಸಿದ್ದರುಕುಟುಂಬದ ಭದ್ರತೆ ಬಗೆ ತನಗೆ ಭೀತಿ ಇದೆ ಎಂದು ಅವರು ತಿಳಿಸಿದ್ದರುಸೆರೆಮನೆಯಲ್ಲಿ ಇದ್ದರೂ ತನ್ನ ಪ್ರಭಾವವನ್ನು ಬಳಸಿಕೊಂಡು ಶಾಸಕರ ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆಪಾದಿಸಿದ್ದರು.  ನಿಖಾ ದಳವು (ಸಿಬಿಐಶಾಸಕ ಮತ್ತು ಅವರಿಗೆ ಸಂಬಂಧಿಸಿದ ಹಲವಾರು ಮಂದಿ ಸಂತ್ರಸ್ಥೆಯ ಕುಟುಂಬದ ಮೇಲೆ ಒತ್ತಡ ತಂದು ಈಪ್ರಕರಣವನ್ನು ಕೈಬಿಡುವಂತೆ ಮಾಡುವ ಯತ್ನಗಳನ್ನು ನಡೆಸಿದ್ದುದಾಗಿ ದೋಷಾರೋಪ ಮಾಡಿತ್ತು. ಹಲ್ಲೆ ಪ್ರಕರಣದ ಸಾಕ್ಷಿದಾರ ಮೊಹಮ್ಮದ್ ಯೂನಸ್ ಕೆಲವು ತಿಂಗಳುಗಳ ಬಳಿಕ ಸಾವನ್ನಪ್ಪಿದ್ದುಸೆಂಗರ್ ಸೆರೆಮನೆಯಲ್ಲಿದ್ದಾರೆ.

2019: ನವದೆಹಲಿ: ಅಮೇಥಿ ರಾಜಕುಟುಂಬಕ್ಕೆ ಸೇರಿದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಕಾಂಗ್ರೆಸ್ ಪಕ್ಷ ಮತ್ತು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು  ಮತ್ತು  ಜುಲೈ 31ರ ಬುಧವಾರ ತಾವು ಬಿಜೆಪಿ ಸೇರುವುದಾಗಿ ಪ್ರಕಟಿಸಿದರು. ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ’ಕಾಂಗ್ರೆಸ್ ಪಕ್ಷವು ಇನ್ನೂ ಭೂತಕಾಲದಲ್ಲಿದೆಭವಿಷ್ಯದ ಬಗ್ಗೆ ಅದಕ್ಕೇ ಎನೂ ಅರಿವಿಲ್ಲ’ ಎಂದು ಹೇಳಿದರು.  ‘ರಾಷ್ಟ್ರವು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಇದೆರಾಷ್ಟ್ರವು ಅವರ ಜೊತೆಗಿದ್ದರೆನಾನೂ ಅವರ ಜೊತೆಗೆ ಇರುತ್ತೇನೆನಾನು ಈದಿನ ಪಕ್ಷಕ್ಕೆ ಮತ್ತು ನನ್ನ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಸಿಂಗ್ ಹೇಳಿದರು.  ಅಸ್ಸಾಮಿನಿಂದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ಸಂಸತ್ತಿನ ಮೇಲ್ಮನೆಗೂ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆರಾಜ್ಯಸಭೆಯ ಸಭಾಪತಿ ಎಂವೆಂಕಯ್ಯ ನಾಯ್ಡು ಅವರು ಸಿಂಗ್ ರಾಜೀನಾಮೆಯನ್ನು ಅಂಗೀಕರಿಸಿದರು. ಸಿಂಗ್ ಅವರು  ಮುನ್ನ ಬಿಜೆಪಿಯಲ್ಲಿ ಇದ್ದರು ಮತ್ತು ಲೋಕಸಭೆಗೆ ೯೦ರ ದಶಕದಲ್ಲಿ ಬಿಜೆಪಿ ಟಿಕೆಟಿನಿಂದಲೇ ಆಯ್ಕೆಯಾಗಿದ್ದರುಅವರು ಉತ್ತರ ಪ್ರದೇಶದ ಅಮೇಥಿ ಪ್ರದೇಶದಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದ್ದಾರೆಸಂಜಯ್ ಸಿಂಗ್ ಅವರು ಸುಲ್ತಾನಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರುಆದರೆ ಯಶಸ್ಸು ಸಿಕ್ಕಿರಲಿಲ್ಲಬಿಜೆಪಿಯ ಮೇನಕಾ ಗಾಂಧಿ ಅವರು  ಕ್ಷೇತ್ರದಲ್ಲಿ ವಿಜಯ ಗಳಿಸಿದ್ದರು.

2019: ನವದೆಹಲಿದೋಸ್ತಿ ಸರ್ಕಾರದ  ವಿರುದ್ಧ ಬಂಡಾಯದ ಕಹಳೆ ಊದಿದ್ದ ಹಾಗೂ ನಂತರ ಅನರ್ಹಗೊಂಡಿದ್ದ ಕಾಂಗ್ರೆಸ್‌ ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಐಸಿಸಿ ಆದೇಶ ಹೊರಡಿಸಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಫಾರಸಿನ ಮೇರೆಗೆ ಅನರ್ಹಗೊಂಡ ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಚಾಟನೆ ಮಾಡಲಾಯಿತು. 
 ಸಂಬಂಧ ಎಐಸಿಸಿ ಅಧಿಕೃತ ಆದೇಶ ಹೊರಡಿಸಿತು. 

2018: ಹೊಸದಿಲ್ಲಿ: ದೇಶಾದ್ಯಂತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ತೀವ್ರಗೊಂಡ ಜನಾಕ್ರೋಶದ ನಡುವೆಯೇಅಪರಾಧಿಗಳನ್ನು ಗಲ್ಲಿಗೇರಿಸಲು ಸರಕಾರ ರೂಪಿಸಿರುವ ಹೊಸ ಕಾನೂನು ತಿದ್ದುಪಡಿಗೆ ಲೋಕಸಭೆಯ ಅಂಗೀಕಾರ ದೊರಕಿತು. 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಶಿಕ್ಷೆಗೊಳಗಾಗುವವರಿಗೆ ಮರಣದಂಡನೆ ವಿಧಿಸುವ ಸಂಬಂಧ 'ಕ್ರಿಮಿನಲ್‌ ಕಾನೂನು ತಿದ್ದುಪಡಿ ವಿಧೇಯಕ-2018' ಲೋಕಸಭೆಯಲ್ಲಿ ಅನುಮೋದನೆ ಪಡೆಯಿತುಜಮ್ಮು-ಕಾಶ್ಮೀರದ ಕಠುವಾ ಹಾಗೂ ಉತ್ತರ ಪ್ರದೇಶದ ಉನ್ನಾವೋದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳ ಬಳಿಕ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಆಗ್ರಹ ದೇಶಾದ್ಯಂತ ಕೇಳಿಬಂದಿತ್ತು.  ಕೇಂದ್ರ ಸರಕಾರ  ನಿಟ್ಟಿನಲ್ಲಿ ಕ್ರಿಮಿನಲ್‌ ಕಾನೂನು ತಿದ್ದುಪಡಿಗೆ ಏಪ್ರಿಲ್‌ 21ರಂದು ಸುಗ್ರೀವಾಜ್ಞೆ ಹೊರಡಿಸಿತ್ತು

2018: 
ನವದೆಹಲಿ:  ಅಸ್ಸಾಂ ರಾಜ್ಯದಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆದೇಶದನ್ವಯ ಕಾನೂನುಬದ್ಧ ಅಸ್ಸಾಂ ನಾಗರಿಕರ ಪರಿಷ್ಕೃತ ರಿಜಿಸ್ಟರ್ ಕರಡನ್ನು ಎನ್ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿಬಿಡುಗಡೆ ಮಾಡಿತು.  ಕರಡಿನಲ್ಲಿ ೪೦ ಲಕ್ಷ ಮಂದಿ ಅಕ್ರಮ ವಲಸಿಗರಾಗಿದ್ದಾರೆ ಎಂದು ತಿಳಿಸಲಾಗಿದ್ದು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತುಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳೀಯರನ್ನು ಗುರಿಯಾಗಿಟ್ಟುಕೊಂಡು  ವರದಿ ತಯಾರಿಸಲಾಗಿದೆ ಎಂದು ಆಪಾದಿಸಿದ್ದರೆಲೋಕಸಭೆಯ ಕಾಂಗ್ರೆಸ್ ನಾಯಕ  ವರದಿ ರಾಜ್ಯದ ಜನರನ್ನು ವಿಭಜಿಸುತ್ತಿದೆ ಎಂದು ದೂರಿದರು


2018: ನವದೆಹಲಿ: ಕೋಟ್ಯಧಿಪತಿ ವಜ್ರ ವ್ಯಾಪಾರಿ ಮೆಹುಲ್ ಚೊಕ್ಸಿ ಜಗತ್ತಿನಾದ್ಯಂತ ಪ್ರವಾಸ ಮಾಡುವುದನ್ನು ತಡೆಯಲು ಆಂಟಿಗುವಾ ಮತ್ತು ಬಾರ್ಬುಡಗಳಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದೆ ಎಂದು ಮೂಲಗಳು ಇಲ್ಲಿ ತಿಳಿಸಿದವು. ‘ಆಂಟಿಗುವಾದಲ್ಲಿ ಮೆಹುಲ್ ಚೊಕ್ಸಿ ಇರುವ ಸಾಧ್ಯತೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಲಭಿಸಿದ ತತ್ ಕ್ಷಣವೇ ಜಾರ್ಜ್ಟೌನಿನಲ್ಲಿ ನಮ್ಮ ರಾಜತಾಂತ್ರಿಕ ಕಚೇರಿಗೆ ಸೂಚನೆ ನೀಡಲಾಯಿತು ಮತ್ತು ಆಂಟುಗುವಾ ಮತ್ತು ಬಾರ್ಬುಡ ಸರ್ಕಾರಗಳಿಗೆ ಲಿಖಿತ ಹಾಗೂ ಮೌಖಿಕ ಮನವಿ ಸಲ್ಲಿಸಿ ಅವರ ನೆಲದಲ್ಲಿ ಚೊಕ್ಸಿ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಬಂಧಿಸಲು ಮತ್ತು ನೆಲವಾಯು ಇಲ್ಲವೇ ಸಮುದ್ರ ಮೂಲಕ ಮುಂದಕ್ಕೆ ಪಯಣಿಸದಂತೆ ತಡೆಯಲು ಕೋರಲಾಯಿತು ಎಂದು ಮೂಲಗಳು ಹೇಳಿದವು


2018: ಪುಣೆ: ಶಿಕ್ಷಣ ಮತ್ತು ನೌಕರಿಯಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಪುಣೆಯಲ್ಲಿ ಮತ್ತೆ ಹಿಂಸಾತ್ಮಕ ಚಳವಳಿ ಭುಗಿಲೆದ್ದಿತು.  ಚಳವಳಿಕಾರರು ಕನಿಷ್ಠ ೪೦ ಬಸ್ಸುಗಳಿಗೆ ಬೆಂಕಿ ಹಚ್ಚಿಇತರ ೫೦ ಬಸ್ಸುಗಳನ್ನು ಹಾನಿಗೊಳಿಸಿದರುಮಹಾರಾಷ್ಟ್ರದಲ್ಲಿ ಕಳೆದವಾರ ಮರಾಠಾ ಮೀಸಲು ಚಳವಳಿಯ ನೇತೃತ್ವ ಮರಾಠಾ ಕ್ರಾಂತಿ ಮೋರ್ಚಾ ಗುಂಪು ಈದಿನದ ಹಿಂಸಾಚಾರದ ಹಿಂದಿದೆ ಎಂದು ಪೊಲೀಸರು ಶಂಕಿಸಿದರುನಗರ ಹೊರವಲಯದ ಪುಣೆ-ನಾಸಿಕ್ ಹೆದ್ದಾರಿಯಲ್ಲಿರುವ ಚಾಕನ್ ಕೈಗಾರಿಕಾ ಪ್ರದೇಶದಲ್ಲಿ ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದೆಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು ಜೊತೆಗೆ ಗಾಳಿಯಲ್ಲೂ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರುಹಠಾತ್ ಹಿಂಸಾಚಾರದ ಪರಿಣಾಮವಾಗಿ ಪ್ರದೇಶದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದುನೂರಾರು ಮಂದಿ ಪ್ರಯಾಣಿಕರು ಮಾರ್ಗಮಧ್ಯದಲ್ಲೇ ಉಳಿಯಬೇಕಾಯಿತುಕೆಲವು ಸಮೀಪದ ಸರ್ಕಾರಿ ಕಟ್ಟಡಗಳಿಗೆ ಹೋಗಿ ಆಶ್ರಯ ಪಡೆದರುಪರಿಸ್ಥಿತಿಯನ್ನು ನಿಯಂತ್ರಿಸಲು ಅಧಿಕಾರಿಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದುನಾಲ್ಕಕ್ಕಿಂತ ಹೆಚ್ಚು ಜನ ಜಮಾಯಿಸದಂತೆ ನಿರ್ಬಂಧಿಸಿದ್ದಾರೆಹೆಚ್ಚುವರಿ ಪಡೆಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಯಿತುಈದಿನ ಬೆಳಗ್ಗೆ ಮರಾಠಾ ಮೀಸಲಾತಿಗೆ ಆಗ್ರಹಿಸಿ ಇಬ್ಬರು ವ್ಯಕ್ತಿಗಳು ಆತ್ಯಹತ್ಯೆಮಾಡಿಕೊಂಡ ಬಳಿಕ ಹಿಂಸಾಚಾರ ಭುಗಿಲೆದ್ದಿತುಒಬ್ಬ ವ್ಯಕ್ತಿ ನಾಂದೇಡ್ ನಲ್ಲಿ ನೇಣು ಹಾಕಿಕೊಂಡರೆಇನ್ನೊಬ್ಬ ವ್ಯಕ್ತಿ ಔರಂಗಾಬಾದಿನಲ್ಲಿ ರೈಲುಗಾಡಿಯ ಮುಂಭಾಗಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಮರಾಠಾ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ನೌಕರಿಗಳಲ್ಲಿ ಶೇಕಡಾ ೧೬ರಷ್ಟು ಮೀಸಲಾಗಿ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯವ್ಯಾಪಿ ಚಳವಳಿ ನಡೆದ ಕೆಲವೇ ದಿನಗಳ ಬಳಿಕ ಈದಿನ ಎರಡು ಆತ್ಮಹತ್ಯೆಗಳು ಮತ್ತು ಪುಣೆ ಹಿಂಸಾಚಾರ ಘಟಿಸಿತು.

2016: ಮುಂಬೈ87 ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಪಾರ್ಲೆ ಜಿ ಕಂಪನಿ ತನ್ನ ಕದ ಮುಚ್ಚಿತುಇದರಿಂದಾಗಿ ಜನಪ್ರಿಯ ಬಿಸ್ಕತ್ ಇತಿಹಾಸ ಸೇರಿದಂತಾಗಿದೆ ಮುಂಬೈ87 ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಪಾರ್ಲೆ ಜಿ ಕಂಪನಿ ತನ್ನ ಕದ ಮುಚ್ಚಿತುಇದರಿಂದಾಗಿ ಜನಪ್ರಿಯ ಬಿಸ್ಕತ್ ಇತಿಹಾಸ ಸೇರಿದಂತಾಗಿದೆ. 929ರಿಂದ ಕಾರ್ಯ ನಿರ್ವಹಿಸುತ್ತಿದ್ದ ಪಾರ್ಲೆ ಇನ್ನು ಮುಂದೆ ನೆನಪು ಮಾತ್ರಪಾರ್ಲೆ ಗ್ಲೂಕೊ ಹೆಸರಿನಲ್ಲಿ ಬಿಸ್ಕತ್ ಉತ್ಪಾದಿಸುತ್ತಿದ್ದ ಕಂಪನಿ 1980ರಲ್ಲಿ ಪಾರ್ಲೆ ಜಿ ಎಂಬ ಹೆಸರಿನಲ್ಲಿ ಉತ್ಪಾದನೆ ಆರಂಭಿಸಿತುದೇಶದ ಮೂಲೆ ಮೂಲೆಗಳಲ್ಲಿ ಬಹು ಬೇಗನೆ ಹಸ್ತ ಚಾಚಿದ  ಕಂಪನಿ ಪ್ರತಿನಿತ್ಯ 40 ಕೋಟಿ ಬಿಸ್ಕತ್ ಉತ್ಪಾದನೆ ಮಾಡುತಿತ್ತುಪ್ರಾರಂಭದಲ್ಲಿ ಮಿಠಾಯಿಗಳನ್ನು ಉತ್ಪಾದಿಸುತ್ತಿದ್ದ  ಕಂಪನಿ 1939ರಲ್ಲಿ ಬಿಸ್ಕತ್ ಉತ್ಪಾದನೆಗೆ ಕೈ ಹಾಕಿತುಇದರಿಂದಾಗಿ ಕಂಪನಿ ಮಾರುಕಟ್ಟೆಯಲ್ಲಿ ಉತ್ತಮ ಹೆಸರುಗಳಿಸುವ ಜತೆಗೆ ಅಧಿಕ ಲಾಭಗಳಿಸಿತುಆದರೆ ಇತ್ತೀಚಿನ ವರ್ಷದಲ್ಲಿ ಪ್ರಬಲ ಪೈಪೋಟಿ ಎದುರಿಸಲು ವಿಫಲವಾದ ಕಂಪನಿ ನಷ್ಟಕ್ಕೆ ಸಿಲುಕಿ ನಲುಗಿತು.  ಇದರಿಂದಾಗಿ 87 ವರ್ಷ ಇತಿಹಾಸ ಹೊಂದಿರುವ ಪಾರ್ಲೆ ಕಂಪನಿಯನ್ನು ಮುಚ್ಚುವ ನಿರ್ಧಾರವನ್ನು ಚೌಹಾನ್ ಕುಟುಂಬ ತೆಗೆದು ಕೊಂಡಿತುದೇಶದಲ್ಲಿನ 60 ಲಕ್ಷ ಚಿಲ್ಲರೆ ಮಳಿಗೆಗಳಲ್ಲಿ ಪಾರ್ಲೆ ಜಿ ಬಿಸ್ಕತ್ತು ಸಿಗುತ್ತಿತ್ತು ಎಂದು ಸಮೀಕ್ಷೆಯೊಂದು ತಿಳಿಸಿತ್ತು.  ಹಲವು ವರ್ಷಗಳಿಂದ ಪಾರ್ಲೆ ಬಿಸ್ಕತ್ಗೆ ಒಗ್ಗಿಕೊಂಡವರಿಗೆ ಕಂಪನಿಯ  ನಿರ್ಧಾರ ಆಘಾತ ತಂದಿತು.


2016: ಬೆಂಗಳೂರು/ಬ್ರುಸೆಲ್ಸ್: ಬಹು ಅಂಗಾಗ ವೈಫಲ್ಯದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರು ಬೆಲ್ಜಿಯಂನ  ಬ್ರುಸೆಲ್ಸ್ನಲ್ಲಿ ನಿಧನರಾದರುತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಕೇಶ್ ಅವರಿಗೆ ಬೆಲ್ಜಿಯಂನ ಬ್ರುಸೆಲ್ಸ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತುಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1ಗಂಟೆ ಸುಮಾರಿಗೆ ನಿಧನರಾದರುಸ್ನೇಹಿತರ ಜೊತೆಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ರಾಕೇಶ್ ಅವರು ಅನಾರೋಗ್ಯದಿಂದ ಕಳೆದ  ಜುಲೈ 23 ಶನಿವಾರ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರುರಾಕೇಶ್ ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಜುಲೈ 28ರಂದು  ಬೆಲ್ಜಿಯಂಗೆ ತಲುಪಿದ್ದರುರಾಕೇಶ್ ಅವರಿಗೆ ಮೊದಲಿನಿಂದಲೂ ಯಕೃತ್ತಿನ ಸಮಸ್ಯೆ ಇತ್ತುಪ್ರವಾಸದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರು.. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಜುಲೈ 29ರಂದು ಸಂಜೆ ತಮ್ಮ ಸಂಬಂಧಿಯ ಜತೆ ಬ್ರುಸೆಲ್ಸ್ಗೆ ತಲುಪಿದ್ದರುರಾಕೇಶ್ಗೆ ಇಬ್ಬರು ಮಕ್ಕಳಿದ್ದುರಾಕೇಶ್ ಅವರ ಪತ್ನಿಯೂ ಕಳೆದ ಬೆಲ್ಜಿಯಂಗೆ ತೆರಳಿದ್ದರು.

2016: ಭುವನೇಶ್ವರಗುಡುಗು – ಸಿಡಿಲು ಸಹಿತ ಧಾರಾಕಾರ ಮಳೆಗೆ ಓಡಿಶಾ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದು, 30ಕ್ಕೂ ಅಧಿಕ ಜನರು ಈದಿನ ಸಾವನ್ನಪ್ಪಿದರುಸಿಡಿಲಿನ ಅಬ್ಬರಕ್ಕೆ ಮಹಿಳೆಮಕ್ಕಳು ಹಾಗೂ ವೃದ್ಧರು ಸಾವನ್ನಪ್ಪಿದರು. 36 ಜನರು ಗಂಭೀರವಾಗಿ ಗಾಯಗೊಂಡಿದ್ದುಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರುಭದ್ರಕ್ನಲ್ಲಿ 8, ಬಾಲಾಸೋರ್ನಲ್ಲಿ 7, ಖುದ್ರಾದಲ್ಲಿ 6, ಜೈಪುರದಲ್ಲಿ 3, ನಯಾಗರ್ನಲ್ಲಿ 2 ಹಾಗೂ ಸಂಬಲಪುರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದ ವರದಿಯಾಯಿತುಮೃತರ ಕುಟುಂಬಕಕೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಲಾ 50 ಸಾವಿರ ರೂಪರಿಹಾರ ಘೋಷಿಸಿದರು.. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದರು

2016: ಹುಬ್ಬಳ್ಳಿಕಾಶ್ಮೀರದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ನವಲಗುಂದ ತಾಲೂಕಿನ ಸೈದಾಪುರ ಗ್ರಾಮದ ಹಸನಸಾಬ್ ಖುದಾವಂದ್ ಈದಿನ ವೀರಮರಣ ಹೊಂದಿದರುಇಪ್ಪತ್ನಾಲ್ಕರ ಹರೆಯಯ ಹಸನ್ ಸಾಬ್ ಅವರ ಸಾವಿನ ಸುದ್ದಿ ಕುಟುಂಬದ ಸದಸ್ಯರಿಗೆ ಆಘಾತ ನೀಡಿತು.
.
2016: ಕ್ಯಾಂಡಿ: ಹದಿನೇಳು ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಜಯಸಿದ
ಸಾಧನೆಯನ್ನು ಈದಿನ ಶ್ರೀಲಂಕಾ ಮಾಡಿತುಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 106 ರನ್ಗಳ ಜಯ ದಾಖಲಿಸುವ ಮೂಲಕ ಶ್ರೀಲಂಕಾ 1-0 ಅಂತರದಲ್ಲಿ ಮುನ್ನಡೆ ಕಂಡಿತು ಮೂಲಕ ಸ್ಮಿತ್ ಪಡೆಗೆ ಸಿಂಹಳಿಯರು ಆಘಾತ ನೀಡಿದರುಎರಡನೇ ಇನಿಂಗ್ಸ್ನಲ್ಲಿ 268 ರನ್ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾ 161 ರನ್ಗೆ ಸರ್ವಪತನಗೊಂಡಿತುನಾಯಕ ಸ್ಟಿವನ್ ಸ್ಮಿತ್ಗಳಿಸಿದ 55 ರನ್ ವಯಕ್ತಿಕ ಗರಿಷ್ಠವಾಯಿತುಶ್ರೀಲಂಕಾ ಸ್ಪಿನ್ನರ್ ರಂಗನ ಹೆರಾತ್ ಎರಡನೇ ಇನಿಂಗ್ಸ್ನಲ್ಲಿ ಕೂಡ ಕಮಾಲ್ ಮಾಡಿದರುಐದು ವಿಕೆಟ್ ಪಡೆಯುವ ಮೂಲಕ ಕಾಂಗರೂಗಳಿಗೆ ಆಘಾತ ನೀಡಿದರುಪ್ರಥಮ ಇನಿಂಗ್ಸ್ನಲ್ಲಿ ಕೂಡ ನಾಲ್ಕು ವಿಕೆಟ್ ಪಡೆದುಆಸ್ಟ್ರೇಲಿಯಾ ಕುಸಿತಕ್ಕೆ ಕಾರಣರಾಗಿದ್ದರುದ್ವಿತೀಯ ಇನಿಂಗ್ಸ್ನಲ್ಲಿ ಯುವ ಬ್ಯಾಟ್ಸ್ಮನ್ ಕುಶಾಲ್ ಮೆಂಡೀಸ್ ಸಿಡಿಸಿದ 176 ರನ್ಗಳ ನೆರವಿನಿಂದ ಶ್ರೀಲಂಕಾ 353 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು.

2016: ಜೌನ್ಪುರ: 2005 ಜುಲೈ 28ರಂದು 14 ಜನರ ಸಾವು ಮತ್ತು 90 ಜನ ಗಾಯಗೊಳ್ಳಲು ಕಾರಣವಾದ ಶ್ರಮಜೀವಿ 
ಎಕ್ಸ್​ ಪ್ರೆಸ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುದೀರ್ಘ 11 ವರ್ಷಗಳ ಬಳಿಕ ಇಲ್ಲಿನ ಸ್ಥಳೀಯ ನ್ಯಾಯಾಲಯವು  ಈದಿನ ಇಬ್ಬರು ಆರೋಪಿಗಳ ಪೈಕಿ ಒಬ್ಬ ಆರೋಪಿಗೆ ಮರಣದಂಡನೆ ವಿಧಿಸಿತುಪ್ರಕರಣದ ಸುದೀರ್ಘ ವಿಚಾರಣೆ ಬಳಿಕ ಹಿಂದಿನ ದಿನ ನೀಡಿದ್ದ ತನ್ನ ತೀರ್ಪಿನಲ್ಲಿ ಪ್ರಕರಣದಲ್ಲಿ ಮೊಹಮ್ಮದ್ ಆಲಂಗೀರ್ ಯಾನೆ ರೋನಿ ಎಂಬ ಆರೋಪಿಯನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತುಇನ್ನೊಬ್ಬ ಆರೋಪಿ ಒಬೇದುರ್ರಹಮಾನ್ ಯಾನೆ ಬಾಬು ಭಾಯ್ ಕುರಿತ ತೀರ್ಪನ್ನು ಆಗಸ್ಟ್ 2ಕ್ಕೆ ಮುಂದೂಡಿತ್ತುಬಿಗಿ ಭದ್ರತೆಯ ನಡುವೆ ನಡೆದ ಕೋರ್ಟ್ ಕಲಾಪದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ ನ್ಯಾಯಾಧೀಶ (ಪ್ರಥಮಬುಧಿರಾಮ್ ಯಾದವ್ ಅವರು ರೋನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದರು.


2016: ನವದೆಹಲಿ: ಉತ್ತರಾಖಂಡದ ಪಿತೋರ್ಗಢ ಜಿಲ್ಲೆಯ 12,000 ಅಡಿ ಎತ್ತರದ ಹಿಮ ಪರ್ವತದ ಮೇಲೆ ಹುಲಿ ಪತ್ತೆಯಾದುದನ್ನು ವನ್ಯಜಿವಿ ತಜ್ಞರು ಪ್ರಕಟಿಸಿದರು.. 2009 ರಲ್ಲಿ ರಾಯಲ್ ಬೆಂಗಾಲ್ ಟೈಗರ್ 10 ಸಾವಿರ ಅಡಿ ಎತ್ತರದ ಪೂರ್ವಾಂಚಲ ಸಿಕ್ಕಿಂನ ಹಿಮಪರ್ವತದಲ್ಲಿ ವಾಸವಾಗಿರುವುದು ಪತ್ತೆಯಾಗಿದ್ದನ್ನು ಬಿಟ್ಟರೆ ಇದು ಹೊಸ ದಾಖಲೆವನ್ಯಜೀವಿ ತಜ್ಞರು ನೀಡಿದ ಮಾಹಿತಿ ಪ್ರಕಾರಸಾಮಾನ್ಯವಾಗಿ ಹಿಮ ಚಿರತೆಗಳು ಇಷ್ಟು ಎತ್ತರದ ಪ್ರದೇಶದಲ್ಲಿ ವಾಸ ಮಾಡುತ್ತವೆಆದರೆ ಮೊಟ್ಟ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಹುಲಿ ಸೆರೆ ಸಿಕ್ಕಿರುವುದು ವಿಶೇಷ ಎಂದು ಭಾರತ ವನ್ಯಜೀವಿ ಸಂಸ್ಥೆಯ ಪ್ರಾಣಿ ವಿಜ್ಞಾನಿ ಬಿಲಾಲ್ ಹಬೀಬ್ ಹೇಳಿದರುಹಲವು ವರ್ಷದಿಂದ ಪ್ರಾಣಿ ಜೀವವೈವಿಧ್ಯ ರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರುದೇಶದಲ್ಲೇ ಇದು ಅತಿ ಎತ್ತರದ ಹುಲಿ ಆವಾಸ ಎಂದು ಘೋಷಿಸಿದರು.

2016: ನವದೆಹಲಿಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಎದುರಿಸುತ್ತಿದ್ದ ಜನಪ್ರಿಯ ಬಾಲಿವುಡ್ ಸಿನಿಮಾ ಪಿಪ್ಲಿ ಲೈವ್ ಸಹ ನಿರ್ದೇಶಕ ಮೊಹಮ್ಮದ್ ಫಾರೂಕಿ ಅವರನ್ನು ಅಪರಾಧಿ ಎಂದು ದಿಲ್ಲಿ ಹೈ ಕೋರ್ಟ್ ತೀರ್ಪು ನೀಡಿತು. 2 ರಂದು ಶಿಕ್ಷೆಯ ಪ್ರಮಾಣ ಮತ್ತು ಅವಧಿ ಪ್ರಕಟಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿತುಮಾಹಿತಿ ಸಂಗ್ರಹಕ್ಕೆ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಸುಖದೇವ್ ವಿಹಾರದಲ್ಲಿ ಕಳೆದ ವರ್ಷ ಮಾರ್ಚ್ 28 ರಂದು ಫಾರೂಕಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆಪಾದಿಸಿ ನ್ಯೂರ್ಯಾನ ಕೊಲಂಬಿಯಾ ವಿವಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ದೂರು ನೀಡಿದ್ದರುತಮ್ಮಿಂದ ಆದ ಅಚಾತುರ್ಯಕ್ಕೆ ನ್ಯಾಯ ಪೀಠದ ಎದುರು ಫಾರೂಕಿ ಕ್ಷಮೆ ಯಾಚಿಸಿದ್ದರೂ ನೊಂದ ಯುವತಿ ಪ್ರಕರಣ ಹಿಂದೆ ಪಡೆದಿರಲಿಲ್ಲಕಳೆದ ಜೂನ್ 22 ರಿಂದ ಫಾರೂಕಿ ನ್ಯಾಯಾಂಗ ಬಂಧನದಲ್ಲಿದ್ದರು.
 
2016: ಮುಂಬೈಅನುರಾಗ್ ಕಶ್ಯಪ್ ಅವರ ಸರಣಿ ಕೊಲೆಗಳ ಕಥಾ ಹಂದರದ ‘ಸೈಕೋ ರಾಮನ್’ (ರಾಮನ್ ರಾಘವ್ 2.0) ಚಿತ್ರವು ಕೊರಿಯಾದಲ್ಲಿ ನಡೆದ ಬೈಫಾನ್ (ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿತುದೀಪಕ್ ಸಂಪತ್ ಅವರು ರೋಹಿತ್ ಮಿತ್ತಲ್ ಅವರ ‘ಆಟೋ ಹೆಡ್’ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರುಕಶ್ಯಪ್ (43) ಅವರು ‘ಸೈಕೋ ರಾಮನ್’ ಪ್ರಶಸ್ತಿ ಪಡೆದ ಕುಶಿಯ ಸುದ್ದಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡರು.  ‘ಸೈಕೋ ರಾಮನ್’ ಬೈಫಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಏಷ್ಯಾ ಪ್ರಶಸ್ತಿಯನ್ನು ಗಳಿಸಿದೆ ಮತ್ತು ರೋಹಿತ್ ಮಿತ್ತಲ್ ಅವರ ‘ಆಟೋ ಹೆಡ್ನಲ್ಲಿನ ನಟನೆಗಾಗಿ ದೀಪಕ್ ಸಂಪತ್ ಅವರು ’ಅತ್ಯುತ್ತಮ ನಟ’ ಪ್ರಶಸ್ತಿ ಗಳಿಸಿದ್ದಾರೆ’ ಎಂದು ಅವರು ಟ್ವೀಟ್ ಮಾಡಿದರುನವಾಜುದ್ದೀನ್ ಸಿದ್ದಿಕಿ ಮತ್ತು ವಿಕಿ ಕೌಶಾಲ್ ನಟಿಸಿರುವ ಚಿತ್ರವು 1960ರಲ್ಲಿ ಮುಂಬೈಯಲ್ಲಿ ಸರಣಿ ಕೊಲೆಗಳನ್ನು ನಡೆಸಿದ್ದ ರಾಮನ್ ರಾಘವ್ ಸರಣಿ ಹಂತಕನ ನೈಜ ಜೀವನದಿಂದ ಪ್ರೇರಣೆ ಪಡೆದ ಚಿತ್ರವಾಗಿದ್ದು, ‘ರಾಮನ್ ರಾಘವ್ 2.0’ ಹೆಸರಿನಲ್ಲಿ ಹಿಂದಿ ಚಲನಚಿತ್ರವಾಗಿ ಬಿಡುಗಡೆಯಾಗಿತ್ತು.

2016: ನವದೆಹಲಿಬಿಜೆಪಿ ಮುಖಂಡ ಹಾಗೂ ಮಾಜಿ ಉತ್ತರಾಖಂಡ ಕೃಷಿ ಸಚಿವ ಹರಕ್ ಸಿಂಗ್ ರಾವತ್ ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾಗಿದ್ದುಪಕ್ಷಕ್ಕೆ ಭಾರಿ ಮುಜುಗರದ ಪರಿಸ್ಥಿತಿ ಎದುರಾಯಿತು.
2014ರಲ್ಲಿ ಮಹಿಳೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತುಇದಕ್ಕೂ ಮುನ್ನ 2013ರಲ್ಲೇ ಮೀರತ್ ಮೂಲದ ಮಹಿಳೆಯೊಬ್ಬಳು ತನಗೆ ಹರಕ್ ಸಿಂಗ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಫ್ತರ್ಜಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳುಉತ್ತರಾಖಂಡ ಕೃಷಿ ಸಚಿವರಾಗಿದ್ದ ಹರಕ್ ಸಿಂಗ್ ಅವರು ಹರೀಶ್ ರಾವತ್ ಸರ್ಕಾರದ ವಿರುದ್ಧ ಸಚಿವರು ದಂಗೆ ಎದ್ದ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
2016: ನವದೆಹಲಿ: ಪಠಾಣಕೋಟ್ ವಾಯುನೆಲೆ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಶ್--ಮೊಹಮದ್ ಉಗ್ರ ಸಂಘಟನೆಯ ಕೈವಾಡದ ಬಗ್ಗೆ 1000 ಪುಟಗಳ ಪೂರಕ ದಾಖಲೆಗಳನ್ನು ಅಮೆರಿಕ ಭಾರತದ ಎನ್ಐಎಗೆ (ರಾಷ್ಟ್ರೀಯ ಭದ್ರತಾ ಪಡೆಒದಗಿಸಿತುದಾಳಿ ನಡೆಸಿ ಹತರಾದ ನಾಲ್ವರು ಉಗ್ರರಾದ ಪಂಜಾಬ ಪ್ರಾಂತ್ಯದ ನಾಸಿರ್ ಹುಸೇನ್ಗುಜ್ರನ್ವಾಲಾ ನಿವಾಸಿ ಅಬು ಬಕರ್ಸಿಂಧ್ ಪ್ರಾಂತ್ಯದ ಉಮರ್ ಫಾರೂಕ್ ಮತ್ತು ಅಬ್ದುಲ್ ಕೈಯ್ಯಮ್ ಜೆಇಎಮ್ ಕಾಸಿಫ್ ಜಾನ್ ಜತೆ ನಡೆಸಿದ ಸಂದೇಶ ವಿಲೇವಾರಿ ಹಾಗೂ ಮಾತುಕತೆ ವಿವರವನ್ನು ಕಡತದಲ್ಲಿ ಭಾರತಕ್ಕೆ ನೀಡಿತು.  ದಾಳಿಯ ಸಂಚನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು ಎಂಬದು  ಇದರಿಂದ ಮತ್ತೊಮ್ಮೆ ದೃಢಪಟ್ಟಿತುಸಂಚುಕೋರ ಕಾಸಿಫ್ ಜಾನ್ ಜೆಇಎಮ್ ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಕೂಡ ದಾಖಲೆಯಲ್ಲಿ ಲಭ್ಯವಿದೆ ಎಂದು ಅಮೆರಿಕ ಹೇಳಿತುಕಾಸಿಫ್ ಫೇಸ್ಬುಕ್ ಅಕೌಂಟ್ನಲ್ಲಿರುವ ನಂಬರಿನಿಂದಲೇ ಉಗ್ರರ ಜತೆ ಮಾತುಕತೆ ನಡೆಸಿ ದಾಳಿಯ ಮಾರ್ಗದರ್ಶನ ನೀಡಿದ್ದಅಲ್ಲದೇ ವಾಟ್ಸ್ ಆಪ್ನಿಂದಲೂ ಸಂದೇಶ ರವಾನಿಸಿದ್ದ ಎಂದು ಕಡತದಲ್ಲಿ ನಮೂದಿಸಲಾಗಿದೆಎನ್ಐಎ ದಾಖಲೆ ಒದಗಿಸುವಂತೆ ಕೋರಿ ಅಮೆರಿಕಕ್ಕೆ ಶಂಕಿತರ ಫೋನ್ ನಂಬರ್ ಹಾಗೂ ಎಲ್ಲ ರೀತಿಯ ವ್ಯವಹಾರ ತಿಳಿಸುವಂತೆ ಕೇಳಿಕೊಂಡಿತ್ತುಪಠಾಣಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರು 7 ಮಂದಿ ಯೋಧರನ್ನು ಹತ್ಯೆ ಮಾಡಿದ್ದರುದಾಳಿ ಹಿಂದೆ ಜೆಇಎಮ್ ಮುಖ್ಯಸ್ಥ ಮಸೂದ್ ಅಜರ್ ಕೈವಾಡವಿದೆ ಎಂದು ಭಾರತ ದೂರಿತ್ತು.

2016: ಶ್ರೀನಗರಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾಂವ ವಿಭಾಗದ ಗಡಿ ನಿಯಂತ್ರಣಾ ರೇಖೆಯಲ್ಲಿ ಜುಲೈ 29-30 ರಾತ್ರಿ ನಡೆದ ನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿತು ಸಂದರ್ಭದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆಒಬ್ಬ ಯೋಧ ಗಾಯಗೊಂಡಿದ್ದಾನೆ  ಎಂದು ಸೇನಾ ವಕ್ತಾರರು ತಿಳಿಸಿದರುಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಗೆ ನಡೆದ ಯತ್ನದ ಸಂದರ್ಭದಲ್ಲಿ ಸಂಭವಿಸಿದ  ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿದ್ದುಇಬ್ಬರು ಯೋಧರು ಹುತಾತ್ಮರಾದರುಒಬ್ಬ ಯೋಧನಿಗೆ ಗಾಯವಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದರುಘಟನಾ ಸ್ಥಳದಲ್ಲಿ ಹತರಾದ ನುಸುಳುಕೋರರಿಂದ ಎರಡು ಎಕೆ ರೈಫಲ್ಗಳು ಮತ್ತು ಒಂದು ಯುಬಿಜಿಎಲ್ ವಶಪಡಿಸಿಕೊಳ್ಳಲಾಯಿತು.  ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ವಕ್ತಾರರು ನುಡಿದರುಶಂಕಿತ ಪಾಕಿಸ್ತಾನಿ ಒಬ್ಬನನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎಪ್ರಕಟಿಸಿದ ಕೆಲವು ದಿನಗಳ ಬಳಿಕ ಪಾಕ್ ಕಡೆಯಿಂದ ಗಡಿಯಲ್ಲಿ  ನುಸುಳುವಿಕೆ ಯತ್ನ ನಡೆಯಿತು.

2015: ರಾಮೇಶ್ವರಂ: 27 ಜುಲೈ 2015 ಸೋಮವಾರ ನಿಧನರಾಗಿದ್ದ ಮಾಜಿ ರಾಷ್ಟ್ರಪತಿ .ಪಿ.ಜೆಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ 30-07-2015 ಗುರುವಾರ 11.30 ಸುಮಾರಿಗೆ ಮುಸ್ಲಿಮ್ ವಿಧಿ ವಿಧಾನದಂತೆ ನೆರವೇರಿಸಲಾಯಿತುರಾಮೇಶ್ವರಂನ ಪೇಯಿಕರುಂಬು ಎಂಬ ಸ್ಥಳದಲ್ಲಿ 1.5 ಎಕರೆ ಸ್ಥಳವನ್ನು ಗುರುತಿಸಿದ್ದುಅಲ್ಲಿ ಕಲಾಂ ಅವರ ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದರುಮುಸ್ಲಿಂ ವಿಧಿ ವಿಧಾನದಂತೆ ಬೆಳಗ್ಗೆ ಕಲಾಂ ಪಾರ್ಥಿವ ಶರೀರವನ್ನು ಸ್ಥಳೀಯ ಮಸೀದಿಗೆ ಕೊಂಡೊಯ್ದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತುನಂತರ ನಿಗದಿ ಪಡಿಸಿದ ಸ್ಥಳಕ್ಕೆ ಪಾರ್ಥಿವ ಶರೀರವನ್ನು ತರಲಾಯಿತುಪ್ರಧಾನಿ ನರೇಂದ್ರ ಮೋದಿಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಕಲಾಂ ಅವರಿಗೆ ಅಂತಿಮ ನಮನ ಸಲ್ಲಿಸಿದರುಭೂಸೇನೆವಾಯು ಪಡೆನೌಕಾ ಪಡೆಯ ಮುಖ್ಯಸ್ಥರು ಗೌರವಾರ್ಪಣೆ ಸಲ್ಲಿಸಿದರುನಂತರ ಸೇನಾ ಪಡೆಯ ಯೋಧರು ವಿಶೇಷ ಗೌರವಾರ್ಪಣೆ ಸಲ್ಲಿಸಿದ ನಂತರ ಕುಟುಂಬ ಸದಸ್ಯರು ಕಲಾಂ ಅವರ ಅಂತ್ಯಕ್ರಿಯೆ ನೆರವೇರಿಸಿದರು ಸಂದರ್ಭದಲ್ಲಿ ಸ್ಥಳದಲ್ಲಿಸಮಾಧಿ ಸ್ಥಳದ ಆಸುಪಾಸಿನ ಕಟ್ಟಡಗಳುಮರ-ಗಿಡಗಳ ಮೇಲೆ ಕುಳಿತಿದ್ದ ಸಾವಿರಾರು ಜನರು ‘ಭಾರತ್ ಮಾತಾಕಿ ಜೈ’ ಎಂಬ ಘೊಷಣೆಯನ್ನು ಕೂಡಿ ತಮ್ಮ ಪ್ರೀತಿಯ ‘ಜನತೆಯ ರಾಷ್ಟ್ರಪತಿಗೆ ಅಂತಿಮ ವಿದಾಯ ಹೇಳಿದರು.



2015:  ನವದೆಹಲಿದೇಶದ ನ್ಯಾಯಾಂಗ ಇತಿಹಾಸದಲ್ಲಿ ನಸುಕಿನ ಜಾವ 3 ಸುಮಾರಿಗೆ ಸುಪ್ರೀಂಕೋರ್ಟ್ ಕಲಾಪ ಆರಂಭಿಸುವ ಮೂಲಕ ಸುಪ್ರೀಂಕೋರ್ಟ್ 30-07-2015r ಗುರುವಾರ ಇತಿಹಾಸ ಸೃಷ್ಟಿಸಿತುಸಾವಿನ ಕುಣಿಕೆಯಿಂದ ಪಾರಾಗುವ ಅಂತಿಮ ಯತ್ನವಾಗಿ ಯಾಕುಬ್ ಮೆಮನ್ ಹಿಂದಿನ ರಾತ್ರಿ ಮಹಾರಾಷ್ಟ್ರ ರಾಜ್ಯಪಾಲರು ಹಾಗೂ ಬಳಿಕ ರಾಷ್ಟ್ರಪತಿಯವರು ತನ್ನ ಕ್ಷಮಾದಾನ ಅರ್ಜಿ ತಿರಸ್ಕರಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಅಭೂತಪೂರ್ವ ವಿಚಾರಣೆ ಮೂಲಕ  ಇತಿಹಾಸ ಸೃಷ್ಟಿಯಾಯಿತುರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ರಾತ್ರಿ 10.45ಕ್ಕೆ ಯಾಕುಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರುಇದಾದ ಬೆನ್ನಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ದತ್ತು ಅವರ ಮನೆಗೆ ತೆರಳಿದ ವಕೀಲರ ಗುಂಪೊಂದು ಯಾಕೂಬ್ ಪರ ಅರ್ಜಿ ಸಲ್ಲಿಸಿ ಅದರ ತುರ್ತು ವಿಚಾರಣೆಗೆ ಮನವಿ ಮಾಡಿದರುಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಲು ಅನುಕೂಲವಾಗುವಂತೆ ಯಾಕುಬ್ ಮೆಮನ್ಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯ ಜಾರಿಗೆ 14 ದಿನಗಳ ತಡೆ ನೀಡುವಂತೆ ವಕೀಲರು ಕೋರಿದರುಸಮಾಲೋಚನೆಗಳ ಬಳಿಕ ಮುಖ್ಯನ್ಯಾಯಮೂರ್ತಿಯವರು ಬುಧವಾರ ಯಾಕುಬ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದಲ್ಲಿ ತ್ರಿಸದಸ್ಯ ಪೀಠವನ್ನು ಅರ್ಜಿಯ ವಿಚಾರಣೆಗಾಗಿ ರಚಿಸಿದರುಮುಖ್ಯ ನ್ಯಾಯಮೂರ್ತಿಯವರ ಮನೆಯಿಂದ ತುಗ್ಲಕ್ ರಸ್ತೆಯಲ್ಲಿದ್ದ ಹಿರಿಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಮನೆಗೂ ತೆರಳಿದ ವಕೀಲರು ಅಂತಿಮವಾಗಿ ಕೆಲವು ಕಿ.ಮೀದೂರದಲ್ಲಿದ್ದ ಸುಪ್ರೀಂಕೋರ್ಟ್ಗೆ ತೆರಳಿದರುರಾತ್ರಿ 1.35 ವೇಳೆಗೆ ನ್ಯಾಯಮೂರ್ತಿಗಳಾದ ಮಿಶ್ರಾಪ್ರಫುಲ್ಲ ಚಂದ್ರ ಪಂತ್ ಮತ್ತು ಅಮಿತ್ ರಾಯ್ ಅವರು ಅರ್ಜಿಯ ವಿಚಾರಣೆಗಾಗಿ 2.30 ವೇಳೆಗೆ ನ್ಯಾಯಾಲಯಕ್ಕೆ ಬರಲು ಒಪ್ಪಿದರುಮೂವರೂ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ಗೆ 2.30ಕ್ಕೆ ಆಗಮಿಸಿದರೂಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಬರುವುದು ತಡವಾದ್ದರಿಂದ ನಸುಕಿನ 3.20ಕ್ಕೆ ಮರುವಿಮರ್ಶಾ ಅರ್ಜಿಯ ವಿಚಾರಣೆ ಆರಂಭವಾಯಿತುನಸುಕಿನ ವೇಳೆಯಲ್ಲಿ ನಡೆದ ಸುಮಾರು 90 ನಿಮಿಷಗಳ ಕಲಾಪಗಳ ಬಳಿಕ 4.50ಕ್ಕೆ ಸುಪ್ರೀಂಕೋರ್ಟ್ ಯಾಕುಬ್ ಅರ್ಜಿಯನ್ನು ಪುನಃ ತಿರಸ್ಕರಿಸಿತುಇದರೊಂದಿಗೆ ಯಾಕುಬ್ ಗಲ್ಲು ಜಾರಿ ಅಂತಿಮವಾಗಿ ಖಚಿತಗೊಳ್ಳುವುದರ ಜೊತೆಗೇ ಸುಪ್ರೀಂಕೋರ್ಟ್ ಕಲಾಪದಲ್ಲಿ ಇತಿಹಾಸ ಸೃಷ್ಟಿಯಾಯಿತು.
 

2015: ನಾಗಪುರ:  1993 ಮುಂಬೈ ಸರಣಿ ಸ್ಪೋಟದ ಅಪರಾಧಿಉಗ್ರ ಯಾಕುಬ್ ಮೆಮನ್ಗೆ 30-07-2015  ಗುರುವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ನಾಗಪುರದ ಕೇಂದ್ರ ಕಾರಾಗೃಹದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು.  ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಯಾಕುಬ್ ನಡೆಸಿದ ಕೊನೆಯ ಕ್ಷಣದ ಪ್ರಯತ್ನಗಳೆಲ್ಲವೂ ಫಲ ನೀಡದ ಕಾರಣ ಈದಿನ ಆತನನ್ನು ಗಲ್ಲಿಗೇರಿಸಲಾಯಿತುಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಯಾಕುಬ್ ಸುಪ್ರೀಂ ಕೋರ್ಟಿಗೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸದಲ್ಲಿ ಅರ್ಜಿ ಸಲ್ಲಿಸಲಾಗಿತ್ತುನಂತರ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಕೊಠಡಿ ಸಂಖ್ಯ 4 ರಲ್ಲಿ ಸುಮಾರು 90 ನಿಮಿಷ ವಿಚಾರಣೆ ನಡೆಸಲಾಯಿತು. 3.20 ಕ್ಕೆ ವಿಚಾರಣೆ ಪೂರ್ಣಗೊಳಿಸಿದ ಪೀಠ ಗಲ್ಲು ಶಿಕ್ಷೆಯನ್ನು ಕಾಯಂ ಗೊಳಿಸಿತುಬುಧವಾರ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಯಾಕುಬ್ ಕ್ಯುರೇಟಿವ್ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಗಲ್ಲು ಶಿಕ್ಷೆಯನ್ನು ವಿಧಿಸುವಂತೆ ತಿಳಿಸಿತ್ತುಉಗ್ರ ಯಾಕುಬ್ ಮೆಮನ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕಳೆದ ವರ್ಷ ಮೇನಲ್ಲೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರುಆದರೆ ಬುಧವಾರ ಸುಪ್ರೀಂಕೋರ್ಟ್ನಲ್ಲಿ ತನಗೆ ಗಲ್ಲು ಶಿಕ್ಷೆ ಆಗಬಹುದು ಎಂಬ ಆತಂಕದಿಂದ ಯಾಕುಬ್ ಎರಡನೇ ಬಾರಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದಸುಪ್ರೀಂ ಗಲ್ಲು ಶಿಕ್ಷೆ ಎತ್ತಿಹಿಡಿದರೂ ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವ ವರೆಗೆ ಮರಣದಂಡನೆ ಮುಂದೂಡಬಹುದು ಎಂಬುದೇ ಇದರ ಹಿಂದಿರುವ ಉದ್ದೇಶವಾಗಿತ್ತುಆದರೆ ಸುಪ್ರೀಂ ತೀರ್ಪ ಹೊರಬೀಳುತ್ತಿದ್ದಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಕ್ಷಮಾದಾನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿದರು.

2008: ಬಹುವಿವಾದ ಸೃಷ್ಟಿಸಿರುವ ರಾಮ ಸೇತುವೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿತುಸೇತುಸಮುದ್ರಂ ಕುರಿತು ಸುಪ್ರೀಂ ಕೋರ್ಟಿನಲ್ಲಿ ಹಿರಿಯ ನ್ಯಾಯವಾದಿ ಫಾಲಿ ಎಸ್ನಾರಿಮನ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸುತ್ತಾ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪೀಠಕ್ಕೆ  ವಿಚಾರ ತಿಳಿಸಿದರುರಾಮೇಶ್ವರಂ ದ್ವೀಪ ಮತ್ತು ಧನುಷ್ಕೋಡಿ ನಡುವೆ ರಾಮಸೇತುವೆಗೆ ಪರ್ಯಾಯ ಮಾರ್ಗ ಕಂಡುಹಿಡಿಯುವಂತೆ ಸುಪ್ರೀಂಕೋರ್ಟ್ ನೀಡಿದ್ದ ಸಲಹೆ ಮೇರೆಗೆ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದುಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಾರಿಮನ್ ತಿಳಿಸಿದರು.

2007: ಭಾರತದಲ್ಲಿ ಆಗಸ್ಟ್ 3ರಂದು ಬಿಡುಗಡೆಯಾಗುವುದಕ್ಕೆ ಒಂದು ದಿನ ಮೊದಲೇ (ಈದಿನಜೋಹಾನ್ಸ್ ಬರ್ಗಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ `ಗಾಂಧಿ ಮೈ ಫಾದರ್ಚಿತ್ರದ ಚೊಚ್ಚಲ ಪ್ರದರ್ಶನ (ಪ್ರೀಮಿಯರ್ ಶೋನಡೆಯಿತುದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ದಕ್ಷಿಣ ಆಫ್ರಿಕಾದ ಇಡೀ ಸಚಿವ ಸಂಪುಟವೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಲನಚಿತ್ರವನ್ನು ವೀಕ್ಷಿಸಿತುಮಹಾತ್ಮ ಗಾಂಧಿ ಅವರು ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ರಾಷ್ಟ್ರದಲ್ಲಿ `ಗಾಂಧಿ ಮೈ ಫಾದರ್ಚಿತ್ರದ ಜಾಗತಿಕ ಮಟ್ಟದ ಪ್ರದರ್ಶನದ ಉದ್ಘಾಟನೆ ಮಾಡುತ್ತಿರುವುದು ನನಗೆ ಅತ್ಯಂತ ಖುಷಿಯ ವಿಷಯಭಾರತವು ನಮಗೆ `ಬ್ಯಾರಿಸ್ಟರ್ ಗಾಂಧಿ'ಯನ್ನು ನೀಡಿತುಪ್ರತಿಯಾಗಿ ದಕ್ಷಿಣ ಆಫ್ರಿಕವು `ಮಹಾತ್ಮ ಗಾಂಧಿ'ಯನ್ನು ಹಿಂದಿರುಗಿಸಿತುಎಂದು ಮಂಡೇಲಾ ತಮ್ಮ ಸಂದೇಶದಲ್ಲಿ ನುಡಿದರುಗಾಂಧೀಜಿಯವರ ಹಿರಿಯ ಪುತ್ರ ಹರಿಲಾಲ್ ಜೊತೆಗಿನ ಸಂಕೀರ್ಣ ಸಂಬಂಧದ ಸುತ್ತ ಹೆಣೆಯಲಾಗಿರುವ ಕಥೆಯನ್ನು ಹೊಂದಿರುವ  ಚಿತ್ರ ಜಗತ್ತಿನಾದ್ಯಂತ 2007 ಆಗಸ್ಟ್ 3ರಂದು ಬಿಡುಗಡೆಯಾಯಿತು.

2007: ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರು ಈದಿನ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದರುಬಹುಮತ ಕಳೆದುಕೊಂಡಿದ್ದ ಅವರು ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ನಾಟಕೀಯ ಬೆಳವಣಿಗೆ ನಡೆಯಿತುವಿಧಾನಸಭಾಧ್ಯಕ್ಷ ಪ್ರತಾಪ್ ಸಿಂಗ್ ರಾಣೆ ಅವರು ಎಂಜಿಪಿಯ ಸುದೀನ್ ಮತ್ತು ದೀಪಕ್ ಧವಳೀಕರ್ ಹಾಗೂ ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿದ ವಿಕ್ಟೋರಿಯಾ ಫರ್ನಾಂಡಿಸ್  ಮೂವರು ಶಾಸಕರನ್ನು ಮತದಾನದಿಂದ ನಿರ್ಬಂಧಿಸಿತಾವೇ ಕಾಂಗ್ರೆಸ್ ನೇತೃತ್ವ ಸಮ್ಮಿಶ್ರ ಸರ್ಕಾರದ ಪರವಾಗಿ ಮತ ಹಾಕಿದ್ದರಿಂದ ಕಾಮತ್ ಬಹುಮತ ಪಡೆದರುಇದರಿಂದ ಆಕ್ರೋಶಗೊಂಡ ಬಿಜೆಪಿ ನೇತೃತ್ವದ ವಿರೋಧಿ ಗೋವಾ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸದಸ್ಯರು (ಜಿಡಿಎ), ಸರ್ಕಾರ ರಾಜ್ಯಪಾಲರ ಆದೇಶವನ್ನು ಉಲ್ಲಂಘಿಸಿರುವುದಾಗಿ ತೀವ್ರ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

2007: ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಹಾಗೂ ಕುಟುಂಬದ ಇತರ ಆರು ಸದಸ್ಯರ ವಿರುದ್ಧ ಉತ್ತರಪ್ರದೇಶ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಮೊಕದ್ದಮೆ ದಾಖಲಿಸಿದರುಮೊರಾದಾಬಾದ್ ಜಿಲ್ಲೆಯ ಚಾಂದೌಸಿ ಪೊಲೀಸ್ ಠಾಣೆಯಲ್ಲಿ ಹಿಂದಿನ ದಿನ ರಾತ್ರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಐಪಿಸಿ 323, 234, 235, 498(), 506 ಹಾಗೂ 304 ಸೆಕ್ಷನ್ ಅಡಿ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಯಿತುಅರ್ಜುನ್ ಸಿಂಗ್ ಮೊಮ್ಮಗ ಅಭಿಜಿತ್ ಅವರ ಮಾವ ನೌರಲಿಯ ರಾಜಾ ಮಣ್ವಿಂದರ್ ಸಿಂಗ್ ಅವರು ನೀಡಿದ ದೂರಿನ ಮೇರೆಗೆ  ಮೊಕದ್ದಮೆ ದಾಖಲಿಸಲಾಯಿತುಅಭಿಜಿತ್ ಪತ್ನಿ ಪ್ರಿಯಾಂಕಾ ಸಿಂಗ್ ಆರೋಪದ ಆಧಾರದಲ್ಲಿಅರ್ಜುನ್ ಸಿಂಗ್ ಮತ್ತು ಪತ್ನಿ ಬೀನಾ ಸಿಂಗ್ಪುತ್ರ ಅಭಿಮನ್ಯು ಸಿಂಗ್ಮೊಮ್ಮಗ ಅಭಿಜಿತ್ ಸೇರಿದಂತೆ ಕುಟುಂಬದ ಒಟ್ಟು ಏಳು ಜನರ ವಿರುದ್ಧ ಅಪರಾಧ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಮೊರಾದಾಬಾದ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರು ಪೊಲೀಸರಿಗೆ ಆದೇಶಿಸಿದ್ದರು.

2007: ಸಿಕ್ಕಿಮಿನ ಪ್ರಥಮ ಮುಖ್ಯಮಂತ್ರಿ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಾಪಕರಾದ ಹೆಂಡುಪ್ ದೋರ್ಜಿ ಖಂಗಸರ್ಪಾ ಅವರು ಈದಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರುವಿಧುರರಾಗಿದ್ದ ಅವರಿಗೆ 103 ವರ್ಷ ವಯಸಾಗಿತ್ತುಕಾಜಿ ಸಾಬ್ ಎಂದೇ ಖ್ಯಾತರಾಗಿದ್ದ ಅವರು ಉತ್ತರ ಬಂಗಾಳದ ಕಲಿಪಾಂಗಿನಲ್ಲಿ ವಾಸವಾಗಿದ್ದರುಕಳೆದ ಕೆಲವು ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರುಭಾರತದ ಒಕ್ಕೂಟದಲ್ಲಿ ಸಿಕ್ಕಿಮ್ ರಾಜ್ಯದ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ 2002ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತುಸಿಕ್ಕಿಮ್ ಸರ್ಕಾರವು 2004ರಲ್ಲಿ ಅವರಿಗೆ ಸಿಕ್ಕಿಮ್ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.

2007: ಭಯೋತ್ಪಾದನೆ ಸಂಚಿನಲ್ಲಿ ಭಾಗಿಯಾಗಿದ್ದ ಆರೋಪ ಹೊರಿಸಿ ಭಾರತೀಯ ಮೂಲದ ವೈದ್ಯ ಡಾಮೊಹಮ್ಮದ್ ಹನೀಫನನ್ನು ನಾಲ್ಕು ವಾರಗಳ ಕಾಲ ಬಂಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಲು ಆಸ್ಟ್ರೇಲಿಯಾ ಪ್ರಧಾನಿ ಜಾನ್ ಹೋ ವರ್ಡ್ ನಿರಾಕರಿಸಿದರು.

2007: ಸ್ವೀಡನ್ನಿನ ಖ್ಯಾತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಇಂಗ್ಮಾರ್ ಬರ್ಗ್ ಮನ್ (89) ಅವರು ಈದಿನ ಸ್ಟಾಕ್ ಹೋಮಿನಲ್ಲಿ ನಿಧನರಾದರುಬರ್ಗ್ ಮನ್ ಅವರು ಅರ್ಧ ಶತಮಾನದಲ್ಲಿ 50 ಚಿತ್ರಗಳು ಹಾಗೂ 125 ನಾಟಕಗಳನ್ನು ನಿರ್ಮಿಸಿ ಸ್ಕಾಂಡಿನೇವಿಯಾದ ಸಾಂಸ್ಕೃತಿಕ ಲೋಕದಲ್ಲಿ ಖ್ಯಾತರಾಗಿದ್ದರುಅವರ ಖಾಸಗಿ ಬದುಕು ಸಹ ವರ್ಣರಂಜಿತವಾಗಿತ್ತುಸುಂದರ ಹಾಗೂ ಬುದ್ಧಿವಂತರಾಗಿದ್ದ ಐವರು ಮಹಿಳೆಯರನ್ನು ವಿವಾಹವಾಗಿದ್ದ ಅವರು ಅನೇಕ ನಟಿಯರ ಜತೆ ಸಂಬಂಧವಿಟ್ಟುಕೊಂಡು ವಿವಾದಕ್ಕೂ ಒಳಗಾಗಿದ್ದರುವೈಲ್ಡ್ ಸ್ಟ್ರೀವ್ ಬ್ಯಾರಿಸ್ಸೀನ್ಸ್ ಫ್ರಾಮ್ ಮ್ಯಾರೇಜ್ ನಂತಹ ಚಿತ್ರಗಳು ಅವರಿಗೆ ಜಗತ್ತಿನಾದ್ಯಂತ ಖ್ಯಾತಿ ತಂದುಕೊಟ್ಟಿದ್ದವು.

2007: ಪಾಕಿಸ್ಥಾನದ ಈಶಾನ್ಯ ಪ್ರಾಂತ್ಯದಲ್ಲಿನ ಮಸೀದಿಯೊಂದನ್ನು ನೂರಾರು ಉಗ್ರರು ತಮ್ಮ ವಶಕ್ಕೆ ತೆಗೆದುಕೊಂಡುಅದಕ್ಕೆ `ಲಾಲ್ ಮಸೀದಿಎಂದು ಹೆಸರಿಸಿ ತಿಂಗಳು ಇಸ್ಲಾಮಾಬಾದಿನಲ್ಲಿ ಹತನಾದ ಉಗ್ರರ ನೇತಾರ ಅಬ್ದುಲ್ ರಶೀದ್ ಘಾಜಿಯ `ಆದರ್ಶ'ಗಳನ್ನು ಪಾಲಿಸುವುದಾಗಿ ಘೋಷಿಸಿದರು.ಇಸ್ಲಾಮಾಬಾದಿನ ಲಾಲ್ ಮಸೀದಿಯ ಪಕ್ಕಕ್ಕೆ ಇದ್ದ ಬಾಲಕಿಯರ ಮದರಸಾ `ಜಾಮಿಯಾ ಹಫ್ಸಾಮಾದರಿಯಲ್ಲೇ ಬಾಲಕಿಯರಿಗೆ ತರಬೇತಿ ಶಾಲೆಯನ್ನು ಇಲ್ಲಿಯೂ ಆರಂಭಿಸುವುದಾಗಿ ಉಗ್ರರು ಸಾರಿದರುಲಾಲ್ ಮಸೀದಿಯನ್ನು ತೆರವುಗೊಳಿಸಿದ ನಂತರ `ಜಾಮಿಯಾ ಹಫ್ಸಾ'ವನ್ನು ಪಾಕ್ ಸೈನಿಕರು ಧ್ವಂಸಗೊಳಿಸಿದ್ದರು.

2007: ಮಾಜಿ ಸಚಿವ ಮೊಹಮ್ಮದ್ ಮೊಯಿನುದ್ದೀನ್ ಅವರು ಜುಲೈ 29 ಈದಿನ ಬೆಂಗಳೂರಿನಲ್ಲಿ ನಿಧನರಾದರು. 1985ರಲ್ಲಿ ಚಾಮರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರುರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ವಸತಿ ಖಾತೆಯ ರಾಜ್ಯ ಸಚಿವರಾಗಿದ್ದರು.ಭದ್ರಾವತಿಯಲ್ಲಿ ಜನಿಸಿದ್ದ ಇವರು ಬಿ.ಎಸ್ಸಿ ಪದವೀಧರರಾಗಿದ್ದರುಕರ್ನಾಟಕ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರುಗಂಜಾಂನಲ್ಲಿರುವ ಟಿಪ್ಪು ಸುಲ್ತಾನ್ ವಕ್ಫ್ಸ್ ಎಸ್ಟೇಟ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರುಶ್ರೀರಂಗಪಟ್ಟಣದ ಟಿಪ್ತು ಸುಲ್ತಾನ್ ಸಂಶೋಧನಾ ಸಂಸ್ಥೆ ಹಾಗೂ ವಸ್ತು ಸಂಗ್ರಹಾಲಯದ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

2007: ಸ್ಯಾನ್ ಫೋರ್ಡಿನಲ್ಲಿ ಮುಕ್ತಾಯವಾದ ಆರು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲ್ಯಾಸಿಕ್ ಡಬ್ಲ್ಯುಟಿಎ ಟೂರ್ನಿಯಲ್ಲಿ ಶ್ರೇಯಾಂಕಿತ ಆಟಗಾರ್ತಿಯರನ್ನು ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಸಾನಿಯಾ ಮಿರ್ಜಾ ಫೈನಲಿನಲ್ಲಿ ಮುಗ್ಗರಿಸಿದರುಸಾನಿಯಾ ಮಿರ್ಜಾ ಅವರು 3-6, 2-6 ನೇರ ಸೆಟ್ ಗಳಲ್ಲಿ ರಷ್ಯಾದ ಅನ್ನಾ ಚಕ್ವೆಟಾಜ್ ಅವರ ಕೈಯಲ್ಲಿ ಪರಾಭವಗೊಂಡರು.


2007: ಉದ್ಯಮಿ ಡಾ.ವಿಜಯ್ ಮಲ್ಯ ಅವರು ರಾಜಾಜಿನಗರದ ಸೆಲೆಕ್ಟ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕರ್ನಾಟಕ ರಾಜ್ಯ ಕ್ರಿಕೆಟ್ ಕಡೆಗೆ ಹೆಜ್ಜೆಯಿಟ್ಟರು.

2006: ಮೂವತ್ತೈದು ವರ್ಷಗಳ ಅವಧಿಯಲ್ಲಿ 8000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ 2400 ಮೆ.ವಾಸಾಮರ್ಥ್ಯದ ಅತಿ ವಿವಾದಿತ ತೆಹ್ರಿ ಜಲ ವಿದ್ಯುತ್ ಸ್ಥಾವರವು ಕಡೆಗೂ ಈದಿನ ಕಾರ್ಯಾರಂಭ ಮಾಡಿತುಉತ್ತರದ ಗ್ರಿಡ್ ಜಾಲಕ್ಕೆ ಬೆಸೆದಿರುವ ಸ್ಥಾವರದ 250 ಮೆಗಾವ್ಯಾಟ್ ಸಾಮರ್ಥ್ಯದ ಮೊದಲ ಘಟಕದ ಕಾರ್ಯಾರಂಭಕ್ಕೆ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಚಾಲನೆ ನೀಡಿದರು. 1657 ಕೋಟಿ ರೂಪಾಯಿ ವೆಚ್ಚದ ತೆಹ್ರಿ ಪಂಪ್ ಸ್ಟೋರೇಜ್ ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರುಏಷ್ಯದಲ್ಲೇ ಅತ್ಯಂತ ಎತ್ತರದ `ರಾಕ್ ಫಿಲ್ ಡ್ಯಾಮ್ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ  ಅಣೆಕಟ್ಟು ವಿದ್ಯುತ್ ಯೋಜನೆಯಿಂದ ಉತ್ತರ ಭಾರತದ 9 ರಾಜ್ಯಗಳ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಎಂದು ನಿರೀಕ್ಷಿಸಲಾಯಿತು. 35 ವರ್ಷಗಳ ಹಿಂದೆ ಯೋಜನೆಗೆ ಅಡಿಗಲ್ಲು ಹಾಕಿದಾಗ ಅದರ ವೆಚ್ಚ 200 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು.

2006: ಬಹರೇನಿನಲ್ಲಿ ಮೂರು ಮಹಡಿಯ ಕಟ್ಟಡವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಭಾರತೀಯ ಕಾರ್ಮಿಕರು ಮೃತರಾದರು.

1995: ಜಾರ್ಖಂಡ್ ಸ್ವಾಯತ್ತ ಜಿಲ್ಲಾ ಮಂಡಳಿ ರಚನೆಗೆ ಅಧಿಸೂಚನೆ ಪ್ರಕಟಗೊಂಡಿತು.

1960: ಕರ್ನಾಟಕದ ಸಿಂಹಶ್ರೇಷ್ಠ ಸೇನಾನಿ ಗಂಗಾಧರ ಬಾಲಕೃಷ್ಣ ದೇಶಪಾಂಡೆ ನಿಧನ.

1951: ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಜನನ.

1947: ಕಾಶ್ಮೀರದ ಭಾಗವಾದ ನೈಋತ್ಯ ಗಡಿ ಪ್ರದೇಶವನ್ನು (ಎನ್ ಡಬ್ಲ್ಯೂ ಎಫ್ ಸಿಪಾಕಿಸ್ಥಾನ ಕೈವಶಪಡಿಸಿಕೊಂಡಿತುನವೆಂಬರಿನಲ್ಲಿ ಇಲ್ಲಿ ಪಾಕಿಸ್ಥಾನದ ಧ್ವಜಾರೋಹಣ ಮಾಡಲಾಯಿತು.

1928: ಜಾರ್ಜ್ ಈಸ್ಟ್ ಮನ್ ಅವರಿಂದ ಮೊದಲ ಬಣ್ಣದ ಸಿನಿಮಾ ಪ್ರಾತ್ಯಕ್ಷಿಕೆ.

1923: ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ ಖ್ಯಾತ ವಿದ್ವಾಂಸ ಡಾಕೆಕೃಷ್ಣಮೂರ್ತಿ (30-7-
1923ರಿಂದ 18-7-1997) ಅವರು ಎನ್ವೆಂಕಟಸುಬ್ಬಯ್ಯಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಕೇರಳಾಪುರದಲ್ಲಿ ಜನಿಸಿದರುಅವರು ರಚಿಸಿದ ಒಟ್ಟು ಗ್ರಂಥಗಳು 54.

1913: ದ್ವಿತೀಯ ಬಾಲ್ಕನ್ ಯುದ್ಧ ಸಮಾಪ್ತಿಗೊಂಡಿತು.

1883: ಕೈಗಾರಿಕೋದ್ಯಮಿ ಬದ್ರಿದಾಸ್ ಜನನ.

1622: ಶ್ರೇಷ್ಠ ಕವಿಸಂತ ತುಳಸೀದಾಸರ ಪುಣ್ಯದಿನ.


No comments:

Post a Comment