ನಾನು ಮೆಚ್ಚಿದ ವಾಟ್ಸಪ್

Monday, July 29, 2019

ಬಹುಮತ ಗೆದ್ದ ಯಡಿಯೂರಪ್ಪ, ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ

ಬಹುಮತ ಗೆದ್ದ ಯಡಿಯೂರಪ್ಪ,
ಸ್ಪೀಕರ್ ರಮೇಶ ಕುಮಾರ್ ರಾಜೀನಾಮೆ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2019 ಜುಲೈ 29ರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಿ ಯಶಸ್ವಿಯಾಗಿ ಬಹುಮತ ಸಾಬೀತು ಪಡಿಸಿದರು.
ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ವಿಶ್ವಾಸಮತವನ್ನು ಧ್ವನಿಮತಕ್ಕೆ ಹಾಕಿ ಅದು ಅಂಗೀಕೃತವಾಗಿದೆ ಎಂದು ಘೋಷಿಸಿದರು.

ವಿಶ್ವಾಸಮತ ನಿರ್ಣಯದ ಅಂಗೀಕಾರ ಬಳಿಕ ಮುಖ್ಯಮಂತ್ರಿಯವರು ಪೂರಕ ಧನ ವಿನಿಯೋಗ ಗೊತ್ತುವಳಿಯನ್ನು ಮಂಡಿಸಿದರು. ಹೆಚ್ಚಿನ ಚರ್ಚೆ ಇಲ್ಲದೆ ಸದನವು ಮೂರು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಸರ್ವಾನುಮತದ ಅನುಮೋದನೆ ನೀಡಿತು.

ಎಚ್.ಡಿ. ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್- ಜನತಾದಳ (ಎಸ್) ಮೈತ್ರಿ ಸರ್ಕಾರವು ವಿಶ್ವಾಸಮತದಲ್ಲಿ ಸೋಲು ಅನುಭವಿಸಿ ಪತನಗೊಂಡ ಬಳಿಕ ಯಡಿಯೂರಪ್ಪ 2019 ಜುಲೈ 26 ಶುಕ್ರವಾರ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಯಡಿಯೂರಪ್ಪ ವಿಶ್ವಾಸಮತ ಯಾಚನೆಗೆ ಒಂದು ದಿನ ಮುಂಚಿತವಾಗಿ ಸಭಾಧ್ಯಕ್ಷ ರಮೇಶ ಕುಮಾರ್ ಅವರು 14 ಮಂದಿ ಬಂಡಾಯ ಶಾಸಕರನ್ನು ಶಾಸಕತ್ವದಿಂದ ಅನರ್ಹಗೊಳಿಸಿದ್ದರು.

ವಿಶ್ವಾಸ ಮತ ಯಾಚನೆ ಮತ್ತು ಧನ ವಿನಿಯೋಗ ಗೊತ್ತುವಳಿ ನಿರ್ಣಯದ ಬಳಿಕ ಸದನ್ನು ಉದ್ದೇಶಿಸಿ ಸಂಕ್ಷಿಪ್ತ  ವಿದಾಯ ಭಾಷಣ ಮಾಡಿದ ಸಭಾಧ್ಯಕ್ಷ ಕೆ.ಆರ್.ರಮೇಶ ಕುಮಾರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ: 


No comments:

Post a Comment