ನಾನು ಮೆಚ್ಚಿದ ವಾಟ್ಸಪ್

Wednesday, November 4, 2020

ಇಂದಿನ ಇತಿಹಾಸ History Today ನವೆಂಬರ್ 04

 ಇಂದಿನ ಇತಿಹಾಸ  History Today ನವೆಂಬರ್ 04

2020: ನವದೆಹಲಿ: ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಸಿಸ್ಟಮ್ (ಎಂಆರ್ಎಲ್ಎಸ್) ಸುಧಾರಿತ ಆವೃತ್ತಿಯ ಪರೀಕ್ಷಾ ಹಾರಾಟವನ್ನು ಭಾರತ 2020 ನವೆಂಬರ್ 04ರ ಬುಧವಾರ ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ, ಸುಧಾರಿತ ಪಿನಾಕಾ ಮತ್ತು ಮಾರ್ಗದರ್ಶಕ ಪಿನಾಕಾ ೬೦ ರಿಂದ ೯೦ ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ಭಾರತೀಯ ಸೇನೆಗೆ ನಿಯೋಜಿಸಲಾಗುತ್ತದೆ. ಒಡಿಶಾ ಕರಾವಳಿಯ ಚಂಡೀಪುರದ ಸಮಗ್ರ ಪರೀಕ್ಷಾ ವಲಯದಿಂದ ಪರೀಕ್ಷಾ ಹಾರಾಟವನ್ನು ನಡೆಸಲಾಯಿತು. ಹೊಸ ರಾಕೆಟ್ ವ್ಯವಸ್ಥೆಯು ಹಿಂದಿನ ರೂಪಾಂತರಕ್ಕೆ (ಎಂಕೆ -) ಹೋಲಿಸಿದರೆ ಕಡಿಮೆ ಉದ್ದದೊಂದಿಗೆ ದೀರ್ಘ ಶ್ರೇಣಿಯನ್ನು ಹೊಂದಿದೆ ಎಂದು ಡಿಆರ್ಡಿಒ ಹೇಳಿದೆ, ಇದನ್ನು ಈಗ ಹಂತಹಂತವಾಗಿ ಹೊರ ಬಿಡಲಾಗುವುದು. ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಪುಣೆ ಮೂಲದ ಡಿಆರ್ಡಿಒ, ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ಎಆರ್ಡಿಇ) ಮತ್ತು ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿ (ಎಚ್ಇಎಂಆರ್ಎಲ್) ಪ್ರಯೋಗಾಲಯಗಳು ನಿರ್ವಹಿಸಿವೆ. "ಒಟ್ಟು ಆರು ರಾಕೆಟ್ಗಳನ್ನು ತ್ವರಿತವಾಗಿ ಉಡಾಯಿಸಲಾಯಿತು ಮತ್ತು ಪರೀಕ್ಷೆಗಳು ಸಂಪೂರ್ಣ ಯೋಜನೆ ಉದ್ದೇಶಗಳನ್ನು ಪೂರೈಸಿದವು ಎಂದು ಪರೀಕ್ಷಾ ಹಾರಾಟದ ನಂತರ ಡಿಆರ್ಡಿಒ ತಿಳಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಜ್ಯzಲ್ಲಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತನಿಖೆ ನಡೆಸಲು ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಕೇರಳ ಸರ್ಕಾರವು 2020 ನವೆಂಬರ್ 04ರ ಬುಧವಾರ ಹಿಂಪಡೆದುಕೊಂಡಿತು. ಇದರೊಂದಿಗೆ ಇಂತಹುದೇ ಕ್ರಮ ಕೈಗೊಂಡ ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್ ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳ ಪಟ್ಟಿಗೆ ಕೇರಳವೂ ಸೇರ್ಪಡೆಯಾಯಿತು. ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ತನಿಖಾ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಹಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಬುಧವಾರ ತೆರೆ ಎಳೆಯಲಾಗಿದ್ದು, ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಕುರಿತ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ರಾಜ್ಯ ಸಚಿವ ಸಂಪುಟದ ನಿರ್ಧಾರದಂತೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸುವ ಮುನ್ನ ಕೇಂದ್ರೀಯ ತನಿಖಾ ಸಂಸ್ಥೆಯು ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕು. ಇತ್ತೀಚೆಗೆ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಸಿಬಿಐಯನ್ನು ರಾಜ್ಯದಲ್ಲಿ ನಿರ್ಬಂಧಿಸಲು  ನಿರ್ಧರಿಸಿತ್ತು. ಮಹಾರಾಷ್ಟ್ರದಲ್ಲಿ ಟಿಆರ್ಪಿ ಹಗರಣವನ್ನು ಸಿಬಿಐ ಮೂಲಕ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ ಮರುದಿನವೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರದ ವಿರುದ್ಧ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಹೋರಾಟಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಬಿಐಯನ್ನು ನಿರ್ಬಂಧಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಒಂದು ಬಾಣದಂತೆ ಕಂಡುಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗೆಗಿನ ಮುಂಬಯಿ ಪೊಲೀಸ್ ತನಿಖೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ ಕೇಂದ್ರ ಸಿಬಿಐ ಮೂಲಕ ಪ್ರಕರಣದ ತನಿಖೆಗೆ ನಿರ್ಧರಿಸುತ್ತಿದ್ದಂತೆಯೇ ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಗೆ ಸಮ್ಮತಿ ಹಿಂತೆಗೆದುಕೊಳ್ಳುವ ಮೂಲಕ ತನ್ನ ಪ್ರತ್ಯಸ್ತ್ರವನ್ನು ಬಿಟ್ಟಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನವೈರಸ್ ಕಾಯಿಲೆಯ (ಕೋವಿಡ್-೧೯) ಮೂರನೇ ಅಲೆ  ವರದಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2020 ನವೆಂಬರ್ 04ರ ಬುಧವಾರ ಹೇಳಿದರು. ೩೩ ಖಾಸಗಿ ಆಸ್ಪತ್ರೆಗಳಲ್ಲಿ ಶೇ.೮೦ರಷ್ಟು ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳನ್ನು ಕಾಯ್ದಿರಿಸಿರುವ ನಗರ ಆಡಳಿತದ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ವಿರುದ್ಧ ದೆಹಲಿ ಸರ್ಕಾರವು ಸುಪ್ರೀಂಕೋರ್ಟಿಗೆ  ಮೇಲ್ಮನವಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಮೂರನೇ ಅಲೆ ಅಪ್ಪಳಿಸಿದೆಯೇ ಎಂಬುದನ್ನು ನಿರ್ಧರಿಸಲು ಒಂದು ವಾರ ಕಾಲ ಕಾಯುತ್ತೇವೆ ಎಂದು ದೆಹಲಿ ಸರ್ಕಾರ ಹಿಂದೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಘೋಷಣೆ ಮಹತ್ವ ಪಡೆದಿದೆ. ಮಂಗಳವಾರ ದೆಹಲಿಯಲ್ಲಿ ,೭೨೫ ಹೊಸ ಕೋವಿಡ್-೧೯ ಪ್ರಕರಣಗಳು ದಾಖಲಾದ ಬಳಿಕ ಮುಖ್ಯಮಂತ್ರಿಯವರು ಹೇಳಿಕೆ ನೀಡಿದ್ದು, ರಾಜಧಾನಿಯಲ್ಲಿ ಒಟ್ಟಾರೆ ೪೦೦,೦೦೦ ಕ್ಕೂ ಹೆಚ್ಚು ಕೊರೋನಾವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ. ಕೋವಿಡ್-೧೯ ನಿರ್ವಹಣೆಯನ್ನು ಪರಿಶೀಲಿಸಲು ಗುರುವಾರ ಸಭೆ ನಡೆಸುವುದಾಗಿ ಕೇಜ್ರಿವಾಲ್ ನುಡಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಲಂಡನ್ನಿಗೆ ಗುರುವಾರ ತೆರಳಬೇಕಾಗಿರುವ ಎರಡು ಏರ್ ಇಂಡಿಯಾ ವಿಮಾನಗಳಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020 ನವೆಂಬರ್ 04ರ ಬುಧವಾರ ಭದ್ರತೆ ಬಿಗಿಗೊಳಿಸಲಾಯಿತು. ಎರಡು ಏರ್ ಇಂಡಿಯಾ ವಿಮಾನಗಳು ಗುರುವಾರ ಲಂಡನ್ನಿಗೆ ಪಯಣ ಬೆಳೆಸಬೇಕಾಗಿದ್ದು, ಅವುಗಳ ಹಾರಾಟಕ್ಕೆ ಅಡ್ಡಿ ಪಡಿಸುವುದಾಗಿ ಎರಡು ಕರೆಗಳು ವಿಮಾನ ನಿಲ್ದಾಣಕ್ಕೆ ಬಂದಿವೆ. ಪೊಲೀಸರ ಪ್ರಕಾರ, ಅಮೆರಿಕ ಮೂಲದ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ವಿಮಾನಗಳು ಕಾರ್ಯಾಚರಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೊಂಡಿದೆ. ಗುರುವಾರ ಲಂಡನ್ ಗೆ ಹೊರಡುವ ಎರಡು ಏರ್ ಇಂಡಿಯಾ ವಿಮಾನಗಳಿಗೆ ಹಾರಾಟಕ್ಕೆ ಅನುಮತಿ ನೀಡುವುದಿಲ ಎಂದು ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಬೆದರಿಕೆ ಒಡ್ಡಿರುವ ಬಗ್ಗೆ ನಮಗೆ ವರದಿಗಳು ಲಭಿಸಿವೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಸಿಪಿ ರಾಜೀವ್ ರಂಜನ್ ಹೇಳಿದರು. ಬೆದರಿಕೆ ಕರೆಗಳು ಬಂದ ಬೆನ್ನಲ್ಲೇ ಎಲ್ಲ ಪಾಲುದಾರರ ಸಭೆ ನಡೆಸಿ, ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ಕಟ್ಟೆಚ್ಚg ವಹಿಸಲಾಯಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣಾ sಲಿತಾಂಶವು ಭಾರತ ಮತ್ತು ಅಮೆರಿಕ ದೇಶಗಳ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ 2020 ನವೆಂಬರ್ 04ರ ಬುಧವಾರ ಇಲ್ಲಿ ಹೇಳಿದರು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಉಭಯಪಕ್ಷೀಯ ಬೆಂಬಲವನ್ನು ಆಧರಿಸಿರುವುದರಿಂದ ಅಮೆರಿಕದೊಂದಿಗಿನ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಶ್ರೀಂಗ್ಲಾ ಹೇಳಿದರು. ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ "ಅವರು ಬಲವಾದ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಗೌರವಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದು ಬಿಡೆನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಬ್ಬರ ಸಾಮಾನ್ಯ ನಿಲುವು ಆಗಿದೆ ಎಂದು ಶ್ರೀಂಗ್ಲಾ ಅವರ ಸುದ್ದಿ ಜಾಲ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. "ಅಮೆರಿಕದ ಜೊತೆಗಿನ ನಮ್ಮ ಸಂಬಂಧಗಳು ನಿಜವಾಗಿಯೂ ಉಭಯಪಕ್ಷೀಯ ಬೆಂಬಲವನ್ನು ಆಧರಿಸಿವೆ, ನೀವು ಅದನ್ನು ಕಾಂಗ್ರೆಸ್ಸಿನಲ್ಲಿ ನೋಡುತ್ತೀರಿ, ನೀವು ಅದನ್ನು ಸಾರ್ವಜನಿಕ ಮಟ್ಟದಲ್ಲಿ ನೋಡುತ್ತೀರಿ. ನಾವು ಪ್ರಸ್ತುತ ಕಾಲದ ಪರೀಕ್ಷೆಯನ್ನು ಗೆದ್ದಿರುವ ಸಂಬಂಧವನ್ನು ರೂಪಿಸಿದ್ದೇವೆ, ಅದು ಬಹಳ ವಿಸ್ತಾರವಾಗಿದೆ ಮತ್ತು ಬಹುಮುಖಿಯಾಗಿದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು. "ನಾವು ಒಂದೇ ಮೌಲ್ಯಗಳು ಮತ್ತು ತತ್ವಗಳನ್ನು  ಮಾತ್ರವೇ ಹಂಚಿಕೊಳ್ಳುವುದಲ್ಲ, ದ್ವಿಪಕ್ಷೀಯ, ಪ್ರಾದೇಶಿಕ ಅಥವಾ ಬಹುಪಕ್ಷೀಯ ಸಂಬಂಧಗಳ ಬಗ್ಗೆ ಒಂದೇ ರೀತಿಯ ಕಾರ್ಯತಂತ್ರದ ದೃಷ್ಟಿಯನ್ನು ಹೊಂದಿದ್ದೇವೆ" ಎಂದು ಅವರು ನುಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರ ಸಂಬಂಧಗಳು ವಿಶೇಷವಾದವು ಎಂದು ಶ್ರೀಂಗ್ಲಾ ಹೇಳಿದರು, ಮೋದಿಯವರ ಮತ್ತು [ಮಾಜಿ ಅಧ್ಯಕ್ಷ ಬರಾಕ್] ಒಬಾಮ ಅವರೊಂದಿಗಿನ ಸಂಬಂಧವೂ ಬಹಳ ವಿಶೇಷವಾದದ್ದು ಎಂದು ಅವರು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ಮುಂಬೈ: ೨೦೧೮ ರಲ್ಲಿ ೫೩ ವರ್ಷದ ಒಳಾಂಗಣ ವಿನ್ಯಾಸಕಾರ (ಇಂಟೀರಿಯರ್ ಡಿಸೈನರ್) ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್  ಗೋಸ್ವಾಮಿ ಮತ್ತು ಇತರ ಇಬ್ಬರನ್ನು ರಾಯಗಡ ಪೊಲೀಸರು 2020 ನವೆಂಬರ್ 04ರ ಬುಧವಾರ ಮುಂಜಾನೆ ಬಂಧಿಸಿದರು. ಬಂಧಿತರಾದ ಇನ್ನಿಬ್ಬರನ್ನು ಫಿರೋಜ್ ಶೇಖ್ ಮತ್ತು ನಿತೇಶ್ ಸರ್ದಾ ಎಂದು ಗುರುತಿಸಲಾಗಿದೆ. ವರ್ಲಿಯಲ್ಲಿ ಗೋಸ್ವಾಮಿ, ಕಂಡಿವಾಲಿಯಲ್ಲಿ ಫಿರೋಜ್ ಶೇಖ್ ಮತ್ತು ಜೋಗೇಶ್ವರಿಯಲ್ಲಿ ನಿತೇಶ್ ಸರ್ದಾ ಅವರನ್ನು ಬಂಧಿಸಲಾಯಿತು. ರಾಯಗಡ ಪೊಲೀಸರು ಮತ್ತು ಮುಂಬೈ ಪೊಲೀಸರು ರಹಸ್ಯ ಜಂಟಿ ಕಾರ್ಯಾಚರಣೆಯಲ್ಲಿ ಅರ್ನಬ್ ಅವರನ್ನು ಬಂಧಿಸಿದ್ದಾರೆ. ಎಪಿಐ ಸಚಿನ್ ವೇಜ್ ನೇತೃತ್ವದ ತಂಡವು ಅರ್ನಾಬ್ ಅವರನ್ನು ಅವರ ನಿವಾಸದಿಂದ ಬಂಧಿಸಿ ಕರೆದುಕೊಂಡು ಹೋಯಿತು ಎಂದು ವರದಿಗಳು ತಿಳಿಸಿವೆ. "ಅಲಿಬಾಗ್ ಪೊಲೀಸರು ಗೋಸ್ವಾಮಿಯವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೦೬ (ಆತ್ಮಹತ್ಯೆ), ಮತ್ತು ೩೪ (ಸಾಮಾನ್ಯ ಉದ್ದೇಶದ ಉದ್ದೇಶದಿಂದ ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಬಂಧಿಸಿದ್ದಾರೆ. ೨೦೧೮ gಲ್ಲಿ ವ್ಯಕ್ತಿ ಮತ್ತು ಅವನ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇದು ಸಂಬಂಧಿಸಿದೆ ನಮ್ಮ ಬಳಿ ಪುರಾವೆಗಳಿವೆ (ಗೋಸ್ವಾಮಿ ವಿರುದ್ಧ) ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಬುಧವಾರ ಬೆಳಗ್ಗೆ ಮುಂಬೈಯ ಅರ್ನಬ್ ನಿವಾಸಕ್ಕೆ ಪೊಲೀಸ್ ತಂಡ ತಲುಪಿದಾಗ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2020: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಕುತೂಹಲಕಾರೀ ಘಟ್ಟ ತಲುಪಿದೆ. ಡೆಮಾಕ್ರಟಿಕ್ ಪಕ್ಷದ ಜೊ ಬಿಡೆನ್ ಹಾಗೂ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದ್ದು, ಚುನಾವಣೆಯ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಲಕ್ಷಣಗಳು ಕಂಡು ಬಂದವು. ಒಂದು ಹಂತದಲ್ಲಿ ತಾವು ಚುನಾವಣೆಯಲ್ಲಿ ಜಯಗಳಿಸಿರುವುದಾಗಿ ಡೊನಾಲ್ಟ್ ಟ್ರಂಪ್ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದು, ಎಣಿಕೆಯಲ್ಲಿನ ವಂಚನೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಇದು ಒಟ್ಟಾರೆ ಫಲಿತಾಂಶದ ಬಗ್ಗೆ ಆತಂಕಭರಿತ ಕುತೂಹಲವನ್ನು ಮೂಡಿಸಿತು. ಫಲಿತಾಂಶಗಳ ಪ್ರಕಾರ ಜೊ ಬಿಡೆನ್ ಅವರು ಟ್ರಂಪ್ ಅವರಿಗಿಂತ ಮುಂದಿದ್ದು, ಮ್ಯಾಜಿಕ್ ನಂಬರ್ ತಲುಪುವ ಉತ್ಸಾಹದಲ್ಲಿ ಇದ್ದಾರೆ. ಬಿಡೆನ್ ಅವರು ಕೂಡಾ ಟ್ರಂಪ್ ಭಾಷಣಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮ ವಕೀಲರ ತಂಡಗಳನ್ನು ಅಗತ್ಯ ಬಿದ್ದಲ್ಲಿ ಸುಪ್ರೀಂಕೋರ್ಟಿನಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಮತಗಳ ಸಂಪೂರ್ಣ ಎಣಿಕೆ ನಡೆಯುವವರೆಗೂ ಕಾಯಬೇಕು ಎಂದು ಜೋ ಬಿಡೆನ್ ಅವರು ಹೇಳಿದ್ದಾರೆ. ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಹು ನಿರೀಕ್ಷಿತ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಮಂಗಳವಾರ ನಡೆದಿದ್ದು, ಬುಧವಾರ ಮತ ಎಣಿಕೆ ಪ್ರಾರಂಭವಾಗಿದೆ. ಮತ ಎಣಿಕೆಯಲ್ಲಿ ಜೋ ಬಿಡೆನ್ ಮುಂಚೂಣಿಯಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ವರದಿಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).

2020: ನವದೆಹಲಿ: ಭಾರತೀಯ ವಾಯುಪಡೆಯ ಮೂರು ರಫೇಲ್  ಫೈಟರ್ ಜೆಟ್ಗಳ ಎರಡನೇ ತಂಡವು 2020 ನವೆಂಬರ್ 04ರ ಬುಧವಾರ ಫ್ರಾನ್ಸಿನಿಂದ ನೇರವಾಗಿ ಭಾರತಕ್ಕೆ ಬಂದಿತು. "ಐಎಎಫ್ # ರಫೇಲ್ ವಿಮಾನದ ಎರಡನೇ ತಂಡವು ಪ್ರಾನ್ಸಿನಿಂದ ತಡೆರಹಿತವಾಗಿ ಹಾರಿದ ನಂತರ ೦೪ ನವೆಂಬರ್ ೨೦ ರಂದು ರಾತ್ರಿ :೧೪ ಕ್ಕೆ ಭಾರತಕ್ಕೆ ಬಂದಿತು" ಎಂದು ಭಾರತೀಯ ವಾಯುಪಡೆಯು ಟ್ವೀಟ್ ಮಾಡಿತು.  ‘ಮೂರು ಜೆಟ್ಗಳು ತಮ್ಮ ದಾರಿಯಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಪ್ರಯಾಣದ ಸಮಯದಲ್ಲಿ ಅವುಗಳಿಗೆ ಫ್ರೆಂಚ್ ಮತ್ತು ಭಾರತೀಯ ಟ್ಯಾಂಕರ್ಗಳು ಇಂಧನ ತುಂಬಿಸಲಿವೆ. ಜಾಮ್ನಗರದಲ್ಲಿ ಒಂದು ದಿನದ ವಿರಾಮದ ನಂತರ ಜೆಟ್ಗಳು ಅಂಬಾಲಾ ತಲುಪುವ ನಿರೀಕ್ಷೆಯಿದೆ’ ಎಂದು ಅಧಿಕಾರಿಗಳು ತಿಳಿಸಿದ್ದರು. ಭಾರತೀಯ ವಾಯುಪಡೆಯು ಆದೇಶ ನೀಡಿದ್ದ  ೩೬ ರಫೇಲ್ ವಿಮಾನಗಳ ಪೈಕಿ ಐದು ರಫೇಲ್  ಜೆಟ್ಗಳ ಮೊದಲ ತಂಡವು ಜುಲೈ ೨೯ ರಂದು ಅಬುಧಾಬಿ ಬಳಿಯ ಅಲ್ ದಫ್ರಾ ವಾಯುನೆಲೆಯಲ್ಲಿ ನಿಲುಗಡೆ ಮಾಡಿದ ನಂತರ ಅಂಬಾಲಾ ವಾಯುನೆಲೆಗೆ ತಲುಪಿತ್ತು. ಆದರೆ ಸೆಪ್ಟೆಂಬರ್ ೧೦ ರಂದು ಔಪಚಾರಿಕ ಸೇರ್ಪಡೆ ಸಮಾರಂಭ ನಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 04 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment