ನಾನು ಮೆಚ್ಚಿದ ವಾಟ್ಸಪ್

Wednesday, November 25, 2020

ಇಂದಿನ ಇತಿಹಾಸ History Today ನವೆಂಬರ್ 25

 ಇಂದಿನ ಇತಿಹಾಸ  History Today ನವೆಂಬರ್  25

2020: ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖ್ಯಟ್ರಬಲ್ ಶೂಟರ್ ಎಂಬುದಾಗಿಯೇ ಗುರುತಿಸಲ್ಪಟ್ಟಿದ್ದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಅನೇಕ ಅಂಗಾಂಗ ವೈಫಲ್ಯಗಳ ಪರಿಣಾಮವಾಗಿ  2020 ನವೆಂಬರ 25ರ ಬುಧವಾರ ನಿಧನರಾಗಿದ್ದಾರೆ. ಅವರಿಗೆ ೭೧ ವರ್ಷ ವಯಸ್ಸಾಗಿತ್ತು.  ಕಳೆದ ತಿಂಗಳು ಕೊರೋನಾವೈರಸ್ ಸೋಂಕಿಗೆ ಒಳಗಾದ ಬಳಿಕ ಉಂಟಾದ ಹಲವಾರು ಅಂಗಾಂಗ ವೈಫಲ್ಯಗಳಿಂದಾಗಿ ಅಹ್ಮದ್ ಪಟೇಲ್ ಅವರು ನಿಧನರಾಗಿರುವುದಾಗಿ ಅವರ ಪುತ್ರ ಫೈಸಲ್ ಪಟೇಲ್ ಟ್ವೀಟ್ ಮಾಡಿದ್ದಾರೆ. ರಾಜಕೀಯ ವಲಯಗಳಲ್ಲಿಬಾಬು ಭಾಯ್, ’ಅಹ್ಮದ್ ಭಾಯ್ ಮತ್ತುಎಪಿ ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ಪಟೇಲ್ ಪಕ್ಷದ ಮುಖ್ಯ ಬಿಕ್ಕಟ್ಟು ವ್ಯವಸ್ಥಾಪಕ, ಪ್ರಮುಖ ತೊಂದರೆ ಶೂಟರ್, ತುರ್ತು ಸಂದರ್ಭಗಳಲ್ಲಿ ಧಾವಿಸಬೇಕಾದ ವ್ಯಕ್ತಿ ಮತ್ತು ದಶಕಗಳಿಂದ ಕಾಂಗ್ರೆಸ್ಸಿನಮಾಸ್ಟರ್ ಸ್ಟ್ರಾಟಜಿಸ್ಟ್ ಆಗಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ತವರು ರಾಜ್ಯವಾದ ಗುಜರಾತಿನ ಭರೂಚ್ ಬಳಿಯ ಪಿರಮಾನ್ ಗ್ರಾಮದಲ್ಲಿ ೧೯೪೯ರ ಆಗಸ್ಟ್ ೨೧ರಂದು ಜನಿಸಿದ ಅವರು ಸಂಸತ್ತಿನಲ್ಲಿ ಎಂಟು ಬಾರಿ ರಾಜ್ಯವನ್ನು ಪ್ರತಿನಿಧಿಸಿದರು. ಭರೂಚ್‌ನಿಂದ ಲೋಕಸಭಾ ಸದಸ್ಯರಾಗಿ ಮೂರು ಬಾರಿ ಮತ್ತು ರಾಜ್ಯಸಭಾ ಸದಸ್ಯರಾಗಿ ಐದು ಬಾರಿ ಅವರು ರಾಜ್ಯವನ್ನು ಪ್ರತಿನಿಧಿಸಿದ್ದರು. ಗಾಂಧಿ ಕುಟುಂಬದ ನಿಷ್ಠಾವಂತ ಪಟೇಲ್ ಅವರು ಕಾಂಗ್ರೆಸ್‌ನ ಅತ್ಯಂತ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದರು ಮತ್ತು ಪಕ್ಷ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರಕ್ಕೆ ಸೇರುವ ಪ್ರಸ್ತಾಪಗಳನ್ನು ಪದೇ ಪದೇ ತಿರಸ್ಕರಿಸಿದ್ದರು. ೨೦೦೧ ರಿಂದ ೨೦೧೭ ರವರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್, ಸೋನಿಯಾ ಅವರು ನಾಯಕತ್ವವನ್ನು ತಮ್ಮ ಪುತ್ರ ರಾಹುಲ್ ಗಾಂಧಿಗೆ ಹಸ್ತಾಂತರಿಸಿದಾಗ, ಪಕ್ಷದ ಹೈಕಮಾಂಡ್, ನಾಯಕರು, ಪಕ್ಷದ ಕಾರ್ಯಕರ್ತರ ನಡುವೆ ಮಾತ್ರವಲ್ಲ ಸರ್ಕಾರದ ಮಿತ್ರ ಪಕ್ಷಗಳ ಜೊತೆಗೂ ಪ್ರಮುಖ ಕೊಂಡಿಯಾಗಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಮುಂದಿನ ವರ್ಷದ ಜುಲೈ ವೇಳೆಗೆ ಕೊರೊನಾವೈರಸ್ ಕಾಯಿಲೆ (ಕೋವಿಡ್ -೧೯) ವಿರುದ್ಧ ಸುಮಾರು ಕೋಟಿ (೩೦ ಮಿಲಿಯನ್) ಆರೋಗ್ಯ ರಕ್ಷಣಾ ಸಿಬ್ಬಂದಿ ಮತ್ತು ಮುಂಚೂಣಿ ಕಾರ್‍ಯಕರ್ತರು ಸೇರಿದಂತೆ ಕನಿಷ್ಠ ೨೫-೩೦ ಕೋಟಿ (೨೫೦-೩೦೦ ಮಿಲಿಯನ್) ಜನರಿಗೆ ಲಸಿಕೆ ನೀಡಲು ಭಾರತ ಸಜ್ಜಾಗಿದೆ. ಇದಕ್ಕಾಗಿ ಸುಮಾರು ೫೦-೬೦ ಕೋಟಿ (೫೦೦-೬೦೦ ಮಿಲಿಯನ್) ಲಸಿಕೆ ಪ್ರಮಾಣವನ್ನು ಸಂಗ್ರಹಿಸಲು ಸಿದ್ಧತೆ ನಡೆಸಿದೆ.  ಮುಂದಿನ ವರ್ಷ ಮೊದಲ ತ್ರೈಮಾಸಿಕದಲ್ಲಿ ಲಸಿಕೆ ಬಳಕೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಕೋವಿಡ್ -೧೯ ಚುಚ್ಚುಮದ್ದು ಅಭಿಯಾನವನ್ನು (ವ್ಯಾಕ್ಸಿನೇಷನ್ ಡ್ರೈವ್) ಯಶಸ್ವಿಯಾಗಿ ಪ್ರಾರಂಭಿಸಲು ಕೇಂದ್ರವು  ನಿಯಮಿತವಾಗಿ ರಾಜ್ಯಗಳೊಂದಿಗೆ ಸಂಪರ್ಕ ಇರಿಸಿಕೊಂಡಿದೆ.  ಆರಂಭದಲ್ಲಿ, ತಯಾರಕರಿಗೆ ತುರ್ತು ಬಳಕೆಯ ದೃಢೀಕರಣದ ಅಡಿಯಲ್ಲಿ ಅನುಮೋದನೆ, ನಂತರ ಪೂರ್ಣ ಹಂತ - ಕ್ಲಿನಿಕಲ್ ಟ್ರಯಲ್ಸ್ ಡೇಟಾವನ್ನು ವಿಶ್ಲೇಷಿಸಿದ ನಂತರ, ಸಾಮಾನ್ಯ ಜನರ ಬಳಕೆಗೆ ಮಾರ್ಕೆಟಿಂಗ್ ಅನುಮೋದನೆಗಳನ್ನು ನೀಡಿಬೇಕಾಗಿದೆ. "ಕಾರ್ಯತಂತ್ರದ ಒಂದು ನಿರ್ಣಾಯಕ ಭಾಗವೆಂದರೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕಾದ ಜನರ ನಿಖರವಾದ ಪಟ್ಟಿಯನ್ನು ಪಡೆಯುವುದು. ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವ ಜನರ ಗುಂಪುಗಳ ಪಟ್ಟಿಯನ್ನು ರೂಪಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಮೊದಲಿಗೆ, ನಾವು ಸುಮಾರು ಕೋಟಿ (೩೦ ಮಿಲಿಯನ್) ಮುಂಚೂಣಿ ಕಾರ್‍ಯಕರ್ತರಿಗೆ ಲಸಿಕೆ ಹಾಕುವತ್ತ ಗಮನಿಸಿದ್ದೇವೆ. ವೈರಸ್‌ಗೆ ಒಡ್ಡಿಕೊಳ್ಳುವ ಅಪಾಯವಿರುವ ಕಾರಣ ಅದು ನಮ್ಮ ಆದ್ಯತೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕೋವಿಡ್ -೧೯ ಕುರಿತ ಕೇಂದ್ರದ ರಾಷ್ಟ್ರೀಯ ಲಸಿಕೆ ಸಮಿತಿಯು ಆದ್ಯತೆಯ ಮೇರೆಗೆ ಲಸಿಕೆ ನಿರ್ವಹಣೆಗಾಗಿ ವಿವಿಧ ವಿಭಾಗಗಳನ್ನು ಮಾಡಲಾಗಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಕೆಲವು ರಾಜ್ಯಗಳಲ್ಲಿ ಕೊರೋನವೈರಸ್ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರಕ (ಕಂಟೈನ್‌ಮೆಂಟ್) ವಲಯಗಳಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಸ್ಥಳೀಯ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡುವ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಸಚಿವಾಲಯವು 2020 ನವೆಂಬರ 25ರ ಬುಧವಾರ ಪ್ರಕಟಿಸಿತು.  ಹೊಸ ಮಾರ್ಗಸೂಚಿಯ ಪ್ರಕಾರ ರಾಜ್ಯಗಳು ಕೇಂದ್ರ ಸರ್ಕಾರದ ಜೊತೆ ಸಮಾಲೋಚಿಸಿ ಧಾರಕವಲಯಗಳಲ್ಲಿ ರಾತ್ರಿ ಕರ್ಫ್ಯೂನಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಧಾರಕವಲಯಗಳಿಂದ ಹೊರಗೆ ನಿರ್ಬಂಧಗಳನ್ನು ವಿಧಿಸುವಂತಿಲ್ಲ.  (ಕೋವಿಡ್ -೧೯) ವಿರುದ್ಧ ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಗಾಗಿ ಕೇಂದ್ರ ಗೃಹ ಸಚಿವಾಲಯ  ಬಿಡುಗಡೆ ಮಾಡಿದ ಹೊಸ ಮಾರ್ಗಸೂಚಿ ಮಾನದಂಡಗಳು ೨೦೨೦ ಡಿಸೆಂಬರ್ ಡಿಸೆಂಬರ್ ೧ರಿಂದ ಜಾರಿಗೆ ಬರಲಿದ್ದು, ಡಿಸೆಂಬರ್ ೩೧ ರವರೆಗೆ ಜಾರಿಯಲ್ಲಿರುತ್ತದೆ. ದೇಶದ ಕೋವಿಡ್ -೧೯ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫರೆನ್ಸಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ "ಡೈನಾಮಿಕ್ ಕಂಟೈನ್‌ಮೆಂಟ್ ವಲಯಗಳು" ಎಂಬ ಕರೆಗೆ ಅನುಗುಣವಾಗಿ, ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಧಾರಕ (ಕಂಟೈನ್‌ಮೆಂಟ್) ವಲಯಗಳ ಗಡಿರೇಖೆಯನ್ನು ಸೂಕ್ಷ್ಮ ಮಟ್ಟದಲ್ಲಿ ಜಿಲ್ಲಾ ಅಧಿಕಾರಿಗಳು ಖಚಿತಪಡಿಸಿಕೊಬೇಕು ಎಂದು ಸೂಚಿಸಿದೆ. ಆರೋಗ್ಯ ಸಚಿವಾಲಯವು ಸೂಚಿಸಿರುವ ಕೋವಿಡ್ -೧೯ ನಿಯಂತ್ರಣ ಕ್ರಮಗಳನ್ನು ಗಡಿರೇಖೆ ಹೊಂದಿರುವ ಕಂಟೈನ್‌ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು. ವೈದ್ಯಕೀಯ ತುರ್ತುಸ್ಥಿತಿ ಮತ್ತು  ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಓಡಾಟ ನಡೆಸುವುದರ ಹೊರತಾಗಿ ವಲಯಗಳಲ್ಲಿ ಒಳಕ್ಕೆ ಅಥವಾ ಹೊರಕ್ಕೆ ಜನರ ಚಲನವಲನ ನಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣ ಇರಬೇಕು ಎಂದು ಗೃಹ ವ್ಯವಹಾರಗಳ ಇಲಾಖೆ ಹೇಳಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಕಾಯಿಲೆ (ಕೋವಿಡ್ -೧೯) ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು  2020 ನವೆಂಬರ 25ರ ಬುಧವಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಕಂಟೈನ್‌ಮೆಂಟ್ ವಲಯಗಳ ಹೊರಗೆ ಇತರ ಎಲ್ಲ ಅನಿವಾರ್ಯ ಚಟುವಟಿಕೆಗಳನ್ನು ನಡೆಸಲು ಸಚಿವಾಲಯ ಅನುಮತಿ ನೀಡಿದೆ.  ಆದಾಗ್ಯೂ, ಕೆಲವು ಚಟುವಟಿಕೆಗಳಿಗೆ ಕೆಳಗಿನ ನಿರ್ಬಂಧಗಳೊಂದಿಗೆ ಮಾತ್ರ ಅನುಮತಿ ನೀಡಲಾಗಿದೆ. . ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಅನುಮತಿ ನೀಡಿರುವಂತೆ ಪ್ರಯಾಣಿಕರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ.  . ಶೇಕಡಾ ೫೦ ರಷ್ಟು ಸಾಮರ್ಥ್ಯದೊಂದಿಗೆ ಸಿನೆಮಾ ಹಾಲ್‌ಗಳು ಮತ್ತು ಚಿತ್ರಮಂದಿರಗಳು. . ಈಜುಕೊಳಗಳು, ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ. . ಪ್ರದರ್ಶನ ಸಭಾಂಗಣಗಳು, ವ್ಯವಹಾರದಿಂದ ವ್ಯವಹಾರಕ್ಕೆ (ಬಿ ಬಿ) ಉದ್ದೇಶಗಳಿಗಾಗಿ ಮಾತ್ರ. . ಸಾಮಾಜಿಕ, ಧಾರ್ಮಿಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕೂಟಗಳಿಗೆ ಸಭಾಂಗಣದ ಸಾಮರ್ಥ್ಯದ ಗರಿಷ್ಠ ಶೇಕಡಾ ೫೦ರಷ್ಟು, ಮುಚ್ಚಿದ ಸ್ಥಳಗಳಲ್ಲಿ ೨೦೦ ಜನರ ಮಿತಿ ಮತ್ತು ತೆರೆದ ಸ್ಥಳಗಳ ಸಂದರ್ಭದಲ್ಲಿ ಆವರಣದ ಗಾತ್ರವನ್ನು ಗಮನದಲ್ಲಿರಿಸಿಕೊಂಡು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಚ್ಚಿದ ಸ್ಥಳಗಳಲ್ಲಿ ಮಿತಿಯನ್ನು ೧೦೦ ಜನರಿಗೆ ಅಥವಾ ಅದಕ್ಕಿಂತ ಕಡಿಮೆ ಜನರಿಗೆ ನಿಗದಿ ಪಡಿಸಬಹುದು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಶ್ರೀನಗರ: ಭಯೋತ್ಪಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಪಿ ಯುವ ವಿಭಾಗದ ಅಧ್ಯಕ್ಷ ವಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2020 ನವೆಂಬರ 25ರ ಬುಧವಾರ ಬಂಧಿಸಿತು. ಅಮಾನತುಗೊಂಡ ಉಪ ಪೊಲೀಸ್ ವರಿಷ್ಠಾಧಿಕಾರಿ ದವಿಂದರ್ ಸಿಂಗ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಪರ್ರಾ ಅವರನ್ನು ನವದೆಹಲಿ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದ್ದು ಬಳಿಕ ಪರ್ರಾ ಅವರನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೊದಲ ರಾಜಕಾರಣಿ ಇವರಾಗಿದ್ದಾರೆ. ಇತರ ಆರೋಪಿತ ವ್ಯಕ್ತಿಗಳೊಂದಿಗೆ ಪಿತೂರಿ ನಡೆಸುವಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಬಂಧಿಸಲ್ಪಟ್ಟಿರುವ ನವೀದ್ ಬಾಬು-ದವಿಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಯುವ ವಿಭಾಗದ ನಾಯಕ ವಹೀದ್ ಉರ್ ರೆಹಮಾನ್ ಪರ್ರಾ ಅವರನ್ನು ಎನ್‌ಐಎ ಬಂಧಿಸಿದೆ ಎಂದು ಎನ್ ಐಎ ವಕ್ತಾರರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.  ಏತನ್ಮಧ್ಯೆ, ಪಿಡಿಪಿ ಅಧ್ಯಕ್ಷ ಮೆಹಬೂಬಾ ಮುಫ್ತಿ ಬಂಧನವನ್ನು ಬ್ಲ್ಯಾಕ್ ಮೇಲ್ ಎಂದು ಕರೆದರು ಮತ್ತು ಯುವ ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿದರು. "ಬಿಜೆಪಿ ೩೭೦ ನೇ ವಿಧಿಯನ್ನು ಅಕ್ರಮವಾಗಿ ರದ್ದುಪಡಿಸಿದ್ದಕ್ಕಾಗಿ ದೇಶದ ಮೂಲೆ ಮೂಲೆಯಲ್ಲೂ ಲಾಭ ಪಡೆಯಲು ಯತ್ನಿಸುತ್ತಿದೆ. ಆದರೆ ಕಾಶ್ಮೀರಿಗಳು z ರದ್ದತಿಯನ್ನು ಪ್ರಶ್ನಿಸಿದಾಗ ಅವರನ್ನು ಬಂಧಿಸಿ ಶಿಕ್ಷಿಸಲಾಗುತ್ತದೆ. ದವಿಂದರ್ ಸಿಂಗ್ ಯಾರ ಆಜ್ಞೆಯ ಮೇರೆಗೆ ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಇತರರನ್ನು ದೂಷಿಸುವ ಪಿತ್ತ ಅವರ ನೆತ್ತಿಗೆ ಏರಿರುವುದು ವಿಪರ್ಯಾಸ ಎಂದು ಮೆಹಬೂಬಾ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ‘ಅತ್ಯಂತ ತೀವ್ರವಾದ ಚಂಡಮಾರುತನಿವಾರ್ ತಮಿಳುನಾಡು ಕರಾವಳಿಯತ್ತ ಮುನ್ನುಗ್ಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಪುದುಚೆರಿಯಲ್ಲಿ ೧೦೦೦ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.  2020 ನವೆಂಬರ 25ರ ಬುಧವಾರ ಚೆನ್ನೈ ವಿಮಾನ ನಿಲ್ದಾಣದ ಎಲ್ಲ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಡಜನ್‌ಗೂ ಹೆಚ್ಚು ರೈಲುಗಾಡಿಗಳ ಸಂಚಾರ ನಿಲ್ಲಿಸಲಾಯಿತು. ಚಂಡಮಾರುತವು ನವೆಂಬರ್ ೨೬ರ ನಸುಕಿನಲ್ಲಿ ಗಂಟೆಯ ವೇಳೆಗೆ ನೆಲಕ್ಕೆ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಸಂಸ್ಥೆ ತಿಳಿಸಿದ್ದು, ’ಅತ್ಯಂತ ನಿಕೃಷ್ಟ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) 2020 ನವೆಂಬರ 25ರ ಬುಧವಾರ ಹೇಳಿತು.  ರೈಲ್ವೆಯು ಡಜನ್ ವಿಶೇಷ ರೈಲುಗಳನ್ನು ನವೆಂಬರ್ ೨೫ ಮತ್ತು ೨೬ ರಂದು ರದ್ದುಗೊಳಿಸಿದೆ.  ನಿವಾರ್ ಚಂಡಮಾರುತವು ನವೆಂಬರ್ ೨೬ ರಂದು ಮುಂಜಾನೆ ಗಂಟೆಯ ನಂತರ ನೆಲಕ್ಕೆ ಅಪ್ಪಳಿಸಬಹುದು ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಹೇಳಿದರು. ನಿವಾರ್ ಚಂಡಮಾರುತದ ಕಾರಣ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬುಧವಾರ ಸಂಜೆ ರಿಂದ ಗುರುವಾರ ಬೆಳಿಗ್ಗೆ ರವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ನಿವಾರ್ ಚಂಡಮಾರುತದ ತಯಾರಿಗಾಗಿ ತಮಿಳುನಾಡು ಸಾರ್ವಜನಿಕ ರಜಾದಿನವನ್ನು ಘೋಷಿಸಿದೆ ನಿವಾರ್ ಚಂಡಮಾರುತವನ್ನು  ಅತ್ಯಂತ ತೀವ್ರ ಎಂಬುದಾಗಿ ವರ್ಗೀಕರಿಸಲಾಗಿದೆ. ಹಿನ್ನೆಲೆಯಲ್ಲಿ ನಾವು ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸಲು ತಯಾರಿ ಮಾಡುತ್ತಿದ್ದೇವೆ. ನಮ್ಮ ತಂಡಗಳು ಕಳೆದ ಎರಡು ದಿನಗಳಿಂದ ಮೈದಾನದಲ್ಲಿವೆ. ಇಲ್ಲಿಯವರೆಗೆ, ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಮೂಲಕ ೨೫ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ  2020 ನವೆಂಬರ್ 25ರ ಬುಧವಾರ ಸಂಜೆ ನಿಧನರಾದರು.  ಅವರಿಗೆ ೬೦ ವರ್ಷ ವಯಸ್ಸಾಗಿತ್ತು .  ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡು ವಾರಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಇವರಿಗೆ ವಿಥ್ಡ್ರಾವಲ್ ಸಿಂಡ್ರೋಮ್ ಕಾಣಿಸಿಕೊಂಡಿತ್ತು. ಬ್ಯೂನಸ್ ಐರಿಸ್  ಗಲ್ಲಿಗಳಿಂದ ಫುಟ್ಬಾಲ್ ಜಗತ್ತಿನಕಿರೀಟವಿಲ್ಲದ ಮಹಾರಾಜ ಎಂಬ ಗರಿಮೆಯ ಡಿಯಾಗೊ ಮರಡೋನಾ ಅವರ ಪ್ರತಿಭೆಯಿಂದಲೇ ೧೯೮೬ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು. ೧೯೮೬ರ ವಿಶ್ವಕಪ್ ಟೂರ್ನಿಯಲ್ಲಿ ಮರಡೋನಾ ನಾಯಕತ್ವದ ತಂಡವು ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಮೆಕ್ಸಿಕೊದಲ್ಲಿ ಟೂರ್ನಿ ನಡೆದಿತ್ತು.  ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದೇವರ  ಕೈ (ಎಂದೇ ಅರಿಯಲ್ಪಡುವ ವಿವಾದಿತ ಗೋಲು ಸೇರಿದಂತೆ  ಗೋಲುಗಳು ಜಗತ್ಪ್ರಸಿದ್ಧವಾದುದು. ವಿರುದ್ಧ  ತಂಡದ ಆಟಗಾರರನ್ನು ಹಿಂದೆ ತಳ್ಳಿ  ೬೦ ಮೀಟರ್ ದೂರದಿಂದ ಹೊಡೆದ ಒಂದು ಗೋಲುಶತಮಾನದ ಗೋಲು ಎಂದೇ ಕರೆಯಲ್ಪಡುತ್ತದೆ. ಫುಟ್ಬಾಲ್ ಮಾತ್ರವಲ್ಲದೆ ವಿವಾದಗಳು, ಮಾದಕ ವಸ್ತುಸೇವನೆಗಳಿಂದ ಮರಡೋನಾ ಸದಾ ಸುದ್ದಿಯಲ್ಲಿರುತ್ತಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 

ಇಂದಿನ ಇತಿಹಾಸ  History Today ನವೆಂಬರ್  25 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment