ನಾನು ಮೆಚ್ಚಿದ ವಾಟ್ಸಪ್

Monday, November 16, 2020

ಇಂದಿನ ಇತಿಹಾಸ History Today ನವೆಂಬರ್ 16

 ಇಂದಿನ ಇತಿಹಾಸ  History Today ನವೆಂಬರ್ 16

2020: ಪಾಟ್ನಾ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ ಕುಮಾರ್ ಅವರು 2020 ನವೆಂಬರ್ 2020ರ ಸೋಮವಾರ ಸತತ ನಾಲ್ಕನೇ ಅವಧಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ೭ನೇ ಬಾರಿ ಪ್ರಮಾಣವಚನ ಸ್ವೀಕಾರದೊಂದಿಗೆ ಅವರು ಅಪರೂಪದ ದಾಖಲೆ ನಿರ್ಮಿಸಿದರು. ನಿತೀಶ ಕುಮಾರ್ ಜೊತೆಗೆ ಎನ್ಡಿಎ ಮೈತ್ರಿಕೂಟದ ಅಂಗ ಪಕ್ಷಗಳ ಹಲವು ನಾಯಕರೂ ಸೇರಿದಂತೆ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮುಖ್ಯಮಂತ್ರಿಗಳಾಗಿ ತಾರಕಿಶೋರ ಪ್ರಸಾದ್ ಮತ್ತು ರೇಣು ದೇವಿ ಕೂಡ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.  ಕೋವಿಡ್ -೧೯ ನಿರ್ಬಂಧಗಳ ಕಾರಣ ನಡೆದ ಸಣ್ಣ-ಪ್ರಮಾಣದ ಸಮಾರಂಭದಲ್ಲಿ ನಿತೀಶ ಕುಮಾರ್ ಅವರ ಹಿಂದಿನ ಪ್ರಮಾಣವಚನ ಸಮಾರಂಭಗಳಿಗಿಂತ ಭಿನ್ನವಾಗಿ ಅಮಿತ್ ಷಾ ಅವರ ಉಪಸ್ಥಿತಿಯು ಪ್ರಮುಖವಾಗಿ ಎದ್ದು ಕಂಡಿತು. ಹಿಂದೂಸ್ತಾನಿ ಅವಮ್ ಮೋರ್ಚಾ (ಎಚ್ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರ ಪುತ್ರ ಸಂತೋಷ ಕುಮಾರ ಸುಮನ್, ವಿಕಾಸಶೀಲ ಇನ್ಸಾನ್ ಪಾರ್ಟಿಯ (ವಿಐಪಿ) ಮುಖೇಶ ಸಾಹ್ನಿ, ಜೆಡಿಯುನ ವಿಜಯ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಅಶೋಕ್ ಚೌಧರಿ ಮತ್ತು ಮೇವಾ ಲೌಲ್ ಸೈನ್ ಇನ್ ಅವರೂ ಸಂಪುಟಕ್ಕೆ ಸೇರ್ಪಡೆಯಾದರು. ಕಳೆದ ಅವಧಿಯಲ್ಲಿ ಬಿಹಾರ ವಿಧಾನಸಭೆಯ ಅಧ್ಯಕ್ಷರಾಗಿದ್ದ ವಿಜಯ ಕುಮಾರ್ ಚೌಧರಿ ಅವರು ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ವಿಧಾನಸಭಾ ಅಧ್ಯಕ್ಷ ಸ್ಥಾನವು ಬಿಜೆಪಿಗೆ ಹೋಗುತ್ತಿದೆ ಎಂಬುದನ್ನು ಸೂಚಿಸಿತು. ೨೦೦೫ ರಿಂದ ಗರಿಷ್ಠ ಸಮಯದವರೆಗೆ ಬಿಹಾರ ಸರ್ಕಾರದಲ್ಲಿ ಇದ್ದ ಸುಶೀಲ ಕುಮಾರ್ ಮೋದಿ ಹೊಸ ಸಂಪುಟದಲ್ಲಿ ಯಾವುದೇ ಸ್ಥಾನವನ್ನು ಪಡೆದಿಲ್ಲ. ವರದಿಗಳ ಪ್ರಕಾರ, ಅವರು ಕೇಂದ್ರದಲ್ಲಿ ಸ್ಥಾನ ಪಡೆಯಬಹುದು. ಸೋಮವಾರ ಪ್ರಮಾಣವಚನ ಸ್ವೀಕರಿಸಿದ ಸಚಿವರೊಂದಿಗೆ ಮಧ್ಯಂತರ ಸಂಪುಟ ರಚನೆಯಾಗಿದ್ದು, ಮುಂದಕ್ಕೆ ಹೆಚ್ಚಿನ ಸಚಿವರ ಸೇರ್ಪಡೆ ಆಗಲಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಜಮ್ಮು: ಗುಪ್ಕರ್ ಒಕ್ಕೂಟದ ಘಟಕಗಳನ್ನು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕವು 2020 ನವೆಂಬರ್ 2020ರ ಸೋಮವಾರ  ಅವಕಾಶವಾದಿ ಗುಂಪು ಎಂದು ಕರೆಯಿತು. ಗುಪ್ಕರ್ ಮೈತ್ರಿಯ ಏಕೈಕ ಗುರಿ ಶತಾಯಗತಾಯ ಅಧಿಕಾರಕ್ಕೆ ಬರುವುದು ಮತ್ತು ತಮ್ಮ  ದುಷ್ಕೃತ್ಯಗಳನ್ನು ಮರೆಮಾಚುವುದು ಎಂದು ಬಿಜೆಪಿ ಹೇಳಿತು. "ಪಾಕ್ ಪರ ಮತ್ತು ಚೀನಾ ಪರ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದಗುಪ್ಕರ್ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿತು. ಗುಪ್ಕರ್ ಮೈತ್ರಿ ರಾಜಕೀಯ ಸಂಘಟನೆಯಲ್ಲ ಆದರೆ ಅವಕಾಶವಾದಿ ಗುಂಪು. ಗುಂಪಿನ ಏಕೈಕ ಗುರಿ ಅಧಿಕಾರಕ್ಕೆ ಬರುವುದು ಮತ್ತು ಅದೇ ಸಮಯದಲ್ಲಿ ಅಕ್ರಮವಾಗಿ ಭೂಮಿಯ ಅತಿಕ್ರಮಣ, ಅವುಗಳನ್ನು ಕ್ರಮಬದ್ಧಗೊಳಿಸುವುದು, ಭ್ರಷ್ಟಾಚಾರ ಪ್ರಕರಣಗಳು ಮತ್ತು ಮುಖ್ಯಮಂತ್ರಿ ನಿವಾಸದಲ್ಲಿನ ಕೊಲೆಗಳನ್ನು ತನಿಖೆಯಾಗದಂತೆ ಮರೆ ಮಾಚುವುದು ಇತ್ಯಾದಿ ಕೃತ್ಯಕ್ಕಾಗಿ ಗುಂಪು ಪರಸ್ಪರ ಕೈಜೋಡಿಸಿದೆ ಎಂದು  ಬಿಜೆಪಿಯ ಮುಖ್ಯ ವಕ್ತಾರ ವಕೀಲ ಸುನಿಲ್ ಸೇಥಿ ಸುದ್ದಿಗಾರರಿಗೆ ತಿಳಿಸಿದರು. ಗುಪ್ಕರ್ ಮೈತ್ರಿಕೂಟಕ್ಕಾಗಿ ಕೈಜೋಡಿಸಿದ್ದರೂ, ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವ ಬಗ್ಗೆ ಘಟಕಗಳಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿವೆ ಎಂದು ಸೇಥಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಶೇಕಡಾ ೨೬ಕ್ಕಿಂತ ಹೆಚ್ಚು ವಿದೇಶಿ ಹೂಡಿಕೆಯನ್ನು ಹೊಂದಿರುವ ಡಿಜಿಟಲ್ ಮೀಡಿಯಾ ಕಂಪೆನಿಗಳು ಒಂದು ವರ್ಷದ ಒಳಗಾಗಿ ತಮ್ಮ ವಿದೇಶೀ ಪಾಲನ್ನು ತಗ್ಗಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ 2020 ನವೆಂಬರ್ 2020ರ ಸೋಮವಾರ ನಿರ್ದೇಶನ ನೀಡಿತು. ಭಾರತದ ವಿದೇಶೀ ಧನ ಸಹಾಯ ನಿಯಮಗಳ ಅನುಸರಣೆ ಬಗೆಗಿನ ವಿಧಾನವನ್ನು ಬಹಿರಂಗ ಪಡಿಸಿರುವ  ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶೇಕಡಾ ೨೬ಕ್ಕಿಂತ ಕಡಿಮೆ ವಿದೇಶಿ ಹೂಡಿಕೆ ಹೊಂದಿರುವ ಡಿಜಿಟಲ್ ಮೀಡಿಯಾ ಗುಂಪುಗಳು ಒಂದು ತಿಂಗಳೊಳಗೆ ತಮ್ಮ ಷೇರುದಾರರ ಮಾದರಿಯ ಬಗ್ಗೆ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು, ಅವರು ನಿರ್ದೇಶಕರು, ಪ್ರವರ್ತಕರು ಮತ್ತು ಷೇರುದಾರರ ಬಗ್ಗೆ ವಿವರಗಳನ್ನು ಸಹ ನೀಡಬೇಕಾಗುತ್ತದೆ ಎಂದು ಹೇಳಿತು. "ಪ್ರಸ್ತುತ, ಶೇಕಡಾ ೨೬ ಕ್ಕಿಂತ ಹೆಚ್ಚಿನ ವಿದೇಶಿ ಹೂಡಿಕೆಯೊಂದಿಗೆ ಈಕ್ವಿಟಿ ರಚನೆಯನ್ನು ಹೊಂದಿರುವ ಘಟಕಗಳು ಇದೇ ರೀತಿಯ ವಿವರಗಳನ್ನು ನೀಡುತ್ತವೆ ... ಒಂದು ತಿಂಗಳೊಳಗೆ ಮತ್ತು ೨೦೨೧ ಅಕ್ಟೋಬರ್ ೧೫ ರೊಳಗೆ ವಿದೇಶಿ ಹೂಡಿಕೆಯನ್ನು ಶೇಕಡಾ ೨೬ಕ್ಕೆ ಇಳಿಸಲು ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮೋದನೆ ಪಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವಾಲಯದ ಆಧೀನ ಕಾರ್ಯದರ್ಶಿ ಅಮರೇಂದ್ರ ಸಿಂಗ್ ಅವರು ಸರ್ಕಾರದ ಆದೇಶದಲ್ಲಿ ಸೂಚಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳನ್ನು ನವೀಕರಿಸುವ ಅಥವಾ ಸ್ಟ್ರೀಮಿಂಗ್ ಮಾಡುವ ಕಾಯಕದಲ್ಲಿ ತೊಡಗಿರುವ ಘಟಕಗಳಿಗೆ ಶೇಕಡಾ ೨೬ರ ವಿದೇಶಿ ಹೂಡಿಕೆ ಮಿತಿಯನ್ನು ವಿವರಿಸಿದ ಒಂದು ವರ್ಷದ ನಂತರ ಸರ್ಕಾರದ ಸಾರ್ವಜನಿಕ ಸೂಚನೆ ಬಂದಿತು. ದೇಶದಲ್ಲಿ ಹೊಸ ವಿದೇಶಿ ಹೂಡಿಕೆಯನ್ನು ತರಲು ಉದ್ದೇಶಿಸಿರುವ ಯಾವುದೇ ಘಟಕವು ಡಿಪಿಐಐಟಿಯ ವಿದೇಶಿ ಹೂಡಿಕೆ ಸೌಲಭ್ಯ ಪೋರ್ಟಲ್ ಮೂಲಕ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಕಂಪೆನಿಗಳು "ನಿರ್ದೇಶಕರ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪೌರತ್ವದ ಅವಶ್ಯಕತೆಗಳನ್ನು (ಯಾವುದೇ ಹೆಸರಿನಿಂದ) ಅನುಸರಿಸಬೇಕು" ಎಂದು ಸಚಿವಾಲಯವು ಷರತ್ತು ವಿಧಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ವಾಷಿಂಗ್ಟನ್: ವಿಶ್ವಾದ್ಯಂತ ಮತ್ತೆ ತಲೆಎತ್ತಿಕೊಂಡು ದಿನಕ್ಕೆ ಅಂದಾಜು ೮೦೦೦ ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೋನಾವೈರಸ್ (ಕೋವಿಡ್-೧೯) ಸೋಂಕನ್ನು ಹಣಿಯುವಲ್ಲಿ ತನ್ನ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮೊಡೆರ್ನಾ 2020 ನವೆಂಬರ್ 2020ರ ಸೋಮವಾರ ಪ್ರತಿಪಾದಿಸಿತು. ಮಹತ್ವದ ಪ್ರಯೋಗದಲ್ಲಿ ತನ್ನ ಕೋವಿಡ್-೧೯ ಲಸಿಕೆಯು ಶೇಕಡಾ ೯೪.೫ರಷ್ಟು ಪರಿಣಾಮಕಾರಿಯಾಗಿದೆ ಎಂದು ಮಾಡೆರ್ನಾ ಕಂಪೆನಿ ಹೇಳಿತು. ಮಾಡೆರ್ನಾ ನಡೆಸುತ್ತಿರುವ ಅಧ್ಯಯನದ ಪ್ರಾಥಮಿಕ ಮಾಹಿತಿಯ ಪ್ರಕಾರ, ಅದರ ಲಸಿಕೆಯು ಶೇಕಡಾ ೯೪.೫ರಷ್ಟು  ಪರಿಣಾಮಕಾರಿಯಾಗಿರುವುದು ಶ್ರುತಪಟ್ಟಿದೆ ಎಂದು ಕಂಪೆನಿ ಹೇಳಿತು. ಒಂದು ವಾರದ ಹಿಂದೆ, ಪ್ರತಿಸ್ಪರ್ಧಿ ಫಿಜರ್ ಇಂಕ್ ತನ್ನ ಕೋವಿಡ್-೧೯ ಲಸಿಕೆ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿತ್ತು. ಅಮೆರಿಕದಲ್ಲಿ ತುರ್ತು ಬಳಕೆಗಾಗಿ ಅನುಪತಿ ಪಡೆಯಲು ಉಭಯ ಕಂಪೆನಿಗಳೂ ಯತ್ನಿಸುತ್ತಿವೆ.  ಅಮೆರಿಕದಲಿ ಕಳೆದ ವಾರಾಂತ್ಯಕ್ಕೆ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ೧೧ ಮಿಲಿಯನ್ಗೆ (.೧೦ ಕೋಟಿ) ಏರಿಕೆಯಾಗಿದ್ದು ವೇಗದಲ್ಲಿ ಲಸಿಕೆ ಸಂಶೋಧನೆ ಸಾಧ್ಯವಾಗುತ್ತಿಲ್ಲ. ಇದರಲ್ಲಿ ಮಿಲಿಯನ್ ಪ್ರಕರಣಗಳು ಕಳೆದ ಒಂದೇ ವಾರದಲ್ಲಿ ದಾಖಲಾಗಿವೆ. ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ . ದಶಲಕ್ಷಕ್ಕೂ (. ಕೋಟಿ) ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಪೈಕಿ ಅಮೆರಿಕ ಒಂದರಲ್ಲೇ ಸಾವನ್ನಪ್ಪಿದವರ ಸಂಖ್ಯೆ ,೪೫,೦೦೦ ಕ್ಕೂ ಹೆಚ್ಚು. ಕಂಪೆನಿಯು ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವುದನ್ನು ಮಾಡೆರ್ನಾಸ್ ಅಧ್ಯಕ್ಷ ಡಾ. ಸ್ಟೀಫನ್ ಹೊಗೆ ಸ್ವಾಗತಿಸಿದರು. ಜೊತೆಗೆ, ಎರಡು ವಿಭಿನ್ನ ಕಂಪೆನಿಗಳಿಂದಲೂ ಇದೇ ರೀತಿಯ ಫಲಿತಾಂಶ ಬಂದಿರುವುದು ಹೆಚ್ಚು ಧೈರ್ಯ ತುಂಬುತ್ತದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 16 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment