ಇಂದಿನ ಇತಿಹಾಸ History Today ನವೆಂಬರ್ 14
2020: ಜೈಸಲ್ಮೇರ್: ‘ವಿಸ್ತರಣಾವಾದಿ’ ಶಕ್ತಿಗಳಿಂದ ಇಡೀ ಜಗತ್ತು ತೊಂದರೆಗೀಡಾಗಿದೆ ಮತ್ತು ವಿಸ್ತರಣೆಯು ೧೮ ನೇ ಶತಮಾನಕ್ಕೆ ಸೇರಿದ "ವಿಕೃತ ಮನಸ್ಥಿತಿಯನ್ನು" ಇದು ತೋರಿಸುತ್ತದೆ. ಇಂತಹ ಪ್ರಚೋದನೆಯನ್ನು ತೋರಿಸಹೊರಟರೆ ಭಾರತ ಉಗ್ರ ಉತ್ತರವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 14ರ ಶನಿವಾರ ಚೀನಾಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ದೀಪಾವಳಿಯಂದು ಸೈನಿಕರೊಂದಿಗೆ ಸಮಯ ಕಳೆಯುವ ತಮ್ಮ ಪರಿಪಾಠದ ಭಾಗವಾಗಿ ಪ್ರಧಾನಿಯವರು ಆಯಕಟ್ಟಿನ ಲೋಂಗೆವಾಲಾ ನೆಲೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಅವರನ್ನು ಉದ್ದೇಶಿಸಿ ಮಾತನಾಡಿದರು. ‘ವಿಸ್ತರಣಾವಾದಿ ನೀತಿಯ ಮೂಲಕ ಪ್ರಚೋದಿಸಿದರೆ ಭಾರತವು "ಪ್ರಚಂಡ ಉತ್ತರ’ (ಪ್ರಚಂಡ್ ಜವಾಬ್) ನೀಡುತ್ತದೆ ಎಂದು ಅವರು ಹೇಳಿದರು. "ಭಾರತವು ಇತರರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿಗೆ ಅರ್ಥವಾಗುವಂತೆ ಮಾಡುವ ನೀತಿಯನ್ನು ನಂಬುತ್ತದೆ ಆದರೆ ನಮ್ಮ ಸಂಕಲ್ಪವನ್ನು ಪರೀಕ್ಷಿಸುವ ಪ್ರಯತ್ನ ನಡೆದರೆ ದೇಶವು ತೀವ್ರವಾದ ಉತ್ತರವನ್ನು ನೀಡುತ್ತದೆ’ ಎಂದು ಅವರು ಪ್ರತಿಪಾದಿಸಿದರು. ಲಡಾಖ್ ಗಡಿಯಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ನಿರಂತರ ಬಿಕ್ಕಟ್ಟಿನ ಮಧ್ಯೆ ಪ್ರಧಾನಿಯವರಿಂದ ಈ ನಿಸ್ಸಂದಿಗ್ಧ ಸಂದೇಶ ಬಂದಿತು. ‘ನಮ್ಮ ಗಡಿಗಳನ್ನು ರಕ್ಷಿಸುವುದರಿಂದ ನಮ್ಮ ಸೈನಿಕರು ತಡೆಯಲು ಜಗತ್ತಿನ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ‘ಭಾರತವು ತನ್ನ ಶಕ್ತಿಯನ್ನು ಹೊಂದಿದೆ ಮತ್ತು ಅದಕ್ಕೆ ಸವಾಲು ಹಾಕುವವರಿಗೆ ಸೂಕ್ತವಾದ ಉತ್ತರವನ್ನು ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿದೆ.. ಭಾರತವು ತನ್ನ ಹಿತಾಸಕ್ತಿಗಳೊಂದಿಗೆ ಒಂದಿಷ್ಟೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಈಗ ಇಡೀ ಜಗತ್ತಿಗೆ ತಿಳಿದಿದೆ’ ಎಂದು ಅವರು ಹೇಳಿದರು. ೨೦೧೪ ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ತಮ್ಮ ಪದ್ಧತಿಯನ್ನು ಉಲ್ಲೇಖಿಸಿದ ಮೋದಿ, ಅವರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವು ಬಲಗೊಳ್ಳುತ್ತದೆ’ ಎಂದು ಪ್ರಧಾನಿ ಹೇಳಿದರು. ಹೊಸತನ, ಯೋಗಾಭ್ಯಾಸ ಮತ್ತು ಸಹೋದ್ಯೋಗಿಗಳಿಂದ ತಮಗೆ ಗೊತ್ತಿಲ್ಲದ ಭಾರತೀಯ ಭಾಷೆಯನ್ನು ಕಲಿಯಬೇಕು ಎಂದು ಪ್ರಧಾನಿ ಸೈನಿಕರಿಗೆ ಕರೆ ನೀಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪಶ್ಚಿಮ ಗಡಿಯಲ್ಲಿರುವ ಆಯಕಟ್ಟಿನ ಲೋಂಗೆವಾಲಾ ನೆಲೆಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ 2020 ನವೆಂಬರ್ 14ರ ಶನಿವಾರ ಅರ್ಜುನ್ ಟ್ಯಾಂಕ್ ಸವಾರಿ ಮಾಡುವ ಮೂಲಕ ಪಾಕಿಸ್ತಾನ ಮತ್ತು ಚೀನಾಕ್ಕೆ ಸಂದೇಶ ರವಾನಿಸಿದರು. ಅರ್ಜುನ್ ಟ್ಯಾಂಕ್ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಭಾರತ ಸೇನೆಯ ಚೊಚ್ಚಲ ಸಮರ ಟ್ಯಾಂಕ್ ಆಗಿದ್ದು, ಅದರ ಮೇಲೆ ಪ್ರಧಾನಿ ಸವಾರಿಯು ಸ್ಥಳೀಯರಿಗೆ ಮತ್ತು ವಿದೇಶಗಳಿಗೆ ಪ್ರಧಾನಿಯ ಸ್ಪಷ್ಟ ಸಂದೇಶವಾಗಿದೆ. ಭಾರತೀಯ ಸೇನೆಯು ಅರ್ಜುನ್ ಎಂಕೆ ೧ ಎ (ಮಾರ್ಕ್ ೧ ಆಲ್ಫಾ) ನ ಎರಡು ರೆಜಿಮೆಂಟ್‌ಗಳನ್ನು ರಚಿಸಲಿದ್ದು, ಇದು ಮಾರ್ಕ್ ೧ ಟ್ಯಾಂಕ್‌ಗೆ ಹೋಲಿಸಿದರೆ ೭೨ ಸುಧಾರಣೆಗಳನ್ನು ಹೊಂದಿದೆ. ಈ ಪೈಕಿ ೧೪ ಪ್ರಮುಖ ಸುಧಾರಣೆಗಳಾಗಿದ್ದರೆ, ೫೮ ಸಣ್ಣ ಸುಧಾರಣೆಗಳಾಗಿವೆ. ಮುಂದಿನ ಆರು ತಿಂಗಳಲ್ಲಿ ಹೊಸ ರೆಜಿಮೆಂಟ್‌ಗಳನ್ನು ಸೇರಿಸಲಾಗುವುದು. "೧೧೮ ಅರ್ಜುನ್ ಎಂಬಿಟಿ ಎಂಕೆ ೧ ಎ ಖರೀದಿಗೆ ಅಗತ್ಯತೆಯ ಸ್ವೀಕಾರವು ಪ್ರಗತಿಯಲ್ಲಿದೆ. ನಾವು ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಇಂಡೆಂಟ್ ನಿರೀಕ್ಷಿಸುತ್ತಿದ್ದೇವೆ ”ಎಂದು ಹಿರಿಯ ಡಿಆರ್‌ಡಿಒ ಅಧಿಕಾರಿಯೊಬ್ಬರು ತಿಳಿಸಿದರು. ಎರಡು ರೆಜಿಮೆಂಟ್‌ಗಳಲ್ಲಿ ತಲಾ ೫೯ ಟ್ಯಾಂಕ್‌ಗಳಿವೆ. ವಿಹಂಗಮ ದೃಷ್ಟಿ ಥರ್ಮಲ್ ಇಮೇಜಿಂಗ್ ವೈಶಿಷ್ಟ್ಯದೊಂದಿಗೆ, ಟ್ಯಾಂಕ್‌ನ ಕಮಾಂಡರ್ ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ. ಹೆಲಿಕಾಪ್ಟರ್‌ಗಳಂತಹ ಕೆಳಗಿನಿಂದ ಹಾರುವ ವಸ್ತುಗಳನ್ನು ತಡೆಯಲು ಇದು ರಿಮೋಟ್ ಕಂಟ್ರೋಲ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸಹ ಹೊಂದಿದೆ. ಇದು ’ಅಗೆಯುವ ನೇಗಿಲು’ ವೈಶಿಷ್ಟ್ಯವನ್ನು ಸಹ ಹೊಂದಿದೆ, ಅದು ಒಂದು ಅಡಿಗಳಷ್ಟು ಆಳವನ್ನು ಹೊಂದಿರುತ್ತದೆ. ಇದು ಥರ್ಮೋಬಾರಿಕ್ ಮದ್ದುಗುಂಡು ಮತ್ತು ನುಗ್ಗುವ-ಹಾಗೂ ಸಿಡಿಯುವ ಮದ್ದುಗುಂಡುಗಳನ್ನು ಹಾರಿಸಬಹುದು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನದ ಸೈನಿಕರು ನಡೆಸಿದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ವಿರುದ್ಧ ತೀವ್ರ ಪ್ರತಿಭಟನೆ ಸಲ್ಲಿಸಲು ಭಾರತವು 2020 ನವೆಂಬರ್ 14ರ ಶನಿವಾರ ಪಾಕಿಸ್ತಾನದ ರಾಜತಾಂತ್ರಿಕರನ್ನು (ಚಾರ್ಜ್ ಡಿ ಅಫೈರ್) ಬುಲಾವ್ ನೀಡಿ ಕರೆಸಿಕೊಂಡು ಪ್ರತಿಭಟನೆ ವ್ಯಕ್ತ ಪಡಿಸಿತು. ಪಾಕ್ ಸೇನೆಯ ಕದನ ವಿರಾಮ ಉಲ್ಲಂಘನೆಯು ತೀವ್ರ ಗುಂಡಿನ ವಿನಿಮಯಕ್ಕೆ ಕಾರಣವಾದ ಒಂದು ದಿನದ ಬಳಿಕ ಪಾಕಿಸ್ತಾನ ಹೈಕಮಿಷನ್‌ನ ಕಾರ್ಯಕಾರಿ ಮುಖ್ಯಸ್ಥ ಅಫ್ತಾಬ್ ಹಸನ್ ಖಾನ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆಸಿತು. ಭಾರತ ನಡೆಸಿದ್ದ ಪ್ರತಿ ದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದರು ಮತ್ತು ಒಂದು ಡಜನ್ ಮಂದಿ ಗಾಯಗೊಂಡಿದ್ದರು. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಅನೇಕ ವಲಯಗಳಲ್ಲಿ ಪಾಕಿಸ್ತಾನೀ ಪಡೆಗಳು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದರ ಕುರಿತು ಪಾಕಿಸ್ತಾನದ ರಾಜತಾಂತ್ರಿಕರಿಗೆ ತೀವ್ರ ಪ್ರತಿಭಟನೆ ಸಲ್ಲಿಸಲಾಯಿತು. ’ಈ ಅಪ್ರಚೋದಿತ ಶೆಲ್ ದಾಳಿಯ ನಾಲ್ವರು ಮುಗ್ಧ ನಾಗರಿಕರು ಸಾವನ್ನಪ್ಪಿದರು ಮತ್ತು ೧೯ ಮಂದಿಗೆ ಗಂಭೀರ ಗಾಯಗಳಾಗಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. "ಪಾಕಿಸ್ತಾನದ ಪಡೆಗಳು ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಭಾರತವು ಖಂಡಿಸುತ್ತದೆ" ಎಂದು ಹೇಳಿಕೆ ತಿಳಿಸಿದೆ. "ಭಾರತೀಯ ನಾಗರಿಕರ ಮೇಲೆ ಫಿರಂಗಿ ದಾಳಿ ಸಹಿತವಾಗಿ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿ ನಿಯಂತ್ರಣ ರೇಖೆಯ ಉದ್ದಕ್ಕೂ ನಡೆಸಲಾದ ಸಂಘಟಿತ ಗುಂಡಿನ ದಾಳಿಯ ಮೂಲಕ ಶಾಂತಿ ಭಂಗಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಪಾಕಿಸ್ತಾನವು ಭಾರತದ ಹಬ್ಬದ ಸಂದರ್ಭವನ್ನು ಆರಿಸಿಕೊಂಡಿರುವುದು ಅತ್ಯಂತ ಶೋಚನೀಯವಾಗಿದೆ’ ಎಂದು ಹೇಳಿಕೆ ದೀಪಾವಳಿ ಹಬ್ಬವನ್ನು ಉಲ್ಲೇಖಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣೆಯಲ್ಲಿ ಸೋತಿರುವುದರ ಹೊರತಾಗಿಯೂ ಅವರಿಗೆ ಎರಡನೇ ಅವಧಿಗೆ ಸೇವೆ ಸಲ್ಲಿಸುವ ಅವಕಾಶ ಒದಗಿಸಲು ಶ್ವೇತಭವನ ಯೋಜಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು 2020 ನವೆಂಬರ್ 14ರ ಶನಿವಾರ ತಿಳಿಸಿದರು. "ಟ್ರಂಪ್ ಅವರಿಗೆ ಎರಡನೇ ಅವಧಿ ಇರುತ್ತದೆ’ ಎಂಬ ಊಹೆಯ ಮೇರೆಗೆ ನಾವು ಶ್ವೇತಭವನದಲ್ಲಿ ಮುಂದುವರೆಯುತ್ತಿದ್ದೇವೆ’ ಎಂದು ಹೊರಹೋಗುವ ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಫಾಕ್ಸ್ ಬಿಸಿನೆಸ್ ನೆಟ್‌ವರ್ಕ್‌ನಲ್ಲಿ ಮಾತನಾಡುತ್ತಾ ಹೇಳಿದರು. ನವೆಂಬರ್ ೩ ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಜೋ ಬಿಡೆನ್ ಅವರು ಸೋಲಿಸಿರುವುದಾಗಿ ಅಮೆರಿಕದ ಮಾಧ್ಯಮ ಘೋಷಿಸಿದ ಒಂದು ವಾರದ ಬಳಿಕವೂ ಟ್ರಂಪ್ ಅವರು ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣಾ ಫಲಿತಾಂಶ ಬಳಿಕ ಅಧ್ಯಕ್ಷರು ಕೆಲವು ಸಾರ್ವಜನಿಕ ಸಭೆಗಳಲ್ಲಿ ಹಾಜರಾಗಿದ್ದಾರೆ ಮತ್ತು ಹಲವಾರು ರಾಜ್ಯಗಳಲ್ಲಿ ಚುನಾವಣಾ ವಂಚನೆಯ ಆರೋಪ ಮಾಡಿ ಕಾನೂನು ಸಮರ ಪ್ರಾರಂಭಿಸಿದ್ದಾರೆ. ಆದರೆ ತಮ್ಮ ಆರೋಪಗಳಿಗೆ ಅವರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. "ನಾವು ಇಲ್ಲಿ ಕೋರುತ್ತಿರುವುದು ಪರಿಶೀಲಿಸಬಹುದಾದ ಮತಪತ್ರಗಳು, ಪ್ರಮಾಣೀಕರಿಸಬಹುದಾದ ಮತಪತ್ರಗಳು ಮತ್ತು ಸಾಕ್ಷಿಗಳು ಸಹಿ ಮಾಡಿದ ಅಫಿಡವಿಟ್‌ಗಳ ಅಡಿಯಲ್ಲಿ ಹೆಚ್ಚುತ್ತಿರುವ ವಂಚನೆ ಆರೋಪಗಳ ಬಗೆಗಿನ ತನಿಖೆ’ ಎಂದು ನವರೋ ಹೇಳಿದರು. ಟ್ರಂಪ್ ಬೆಂಬಲಿಗರ ಆಧಾರರಹಿತ ಪ್ರತಿಪಾದನೆಯನ್ನು ಅವರು ಪುನರಾವರ್ತಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಕೋಲ್ಕತ: ಕೋಲ್ಕತ ನ್ಯೂ ಟೌನಿನ ನಿವೇದಿತ ಪಾಲಿ ಕೊಳಚೆಗೇರಿಯಲ್ಲಿ 2020 ನವೆಂಬರ್ 14ರ ಶನಿವಾರ ರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು ಹಲವಾರು ಮನೆಗಳು ಬೆಂಕಿಯಲ್ಲಿ ಭಸ್ಮವಾಗಿವೆ ಎಂದು ವರದಿಗಳು ತಿಳಿಸಿದವು. ಕೋಲ್ಕತ ಹೊಸ ಪಟ್ಟಣದ ನಿವೇದಿತಾ ಪಾಲಿಯ ಕೊಳಚೆಗೇರಿ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪ್ರಕಾರ ಹಲವಾರು ಮನೆಗಳು ಅಗ್ನಿಗಾಹುತಿಯಾಗಿವೆ. ಐದು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ಸೇವಾ ಅಧಿಕಾರಿ ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment