ನಾನು ಮೆಚ್ಚಿದ ವಾಟ್ಸಪ್

Saturday, November 7, 2020

ಇಂದಿನ ಇತಿಹಾಸ History Today ನವೆಂಬರ್ 07

 ಇಂದಿನ ಇತಿಹಾಸ  History Today ನವೆಂಬರ್ 07

2020: ಬೆಂಗಳೂರು/ ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ)
ತನ್ನ ಇತ್ತೀಚಿನ ಭೂ ವೀಕ್ಷಣಾ ಉಪಗ್ರಹ (ಇಒಎಸ್ -೦೧) ಮತ್ತು ಗ್ರಾಹಕ ರಾಷ್ಟ್ರಗಳ ಒಂಬತ್ತು ಉಪಗ್ರಹಗಳನ್ನು (ಒಟ್ಟು ೧೦ ಉಪಗ್ರಹಗಳು) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿ-ಸಿ ೪೯ ಉಡಾವಣಾ ವಾಹನದಲ್ಲಿ ಶನಿವಾರ ಸಂಜೆ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಿತು. ಮಾರ್ಚ್ ೨೩ ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಕೊರೋನಾವೈರಸ್ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಿದ ಬಳಿಕ ಇದು ಬಾಹ್ಯಾಕಾಶ ಸಂಸ್ಥೆಯು ನಡೆಸಿದ ಮೊದಲ ಉಡಾವಣೆಯಾಗಿದೆ. ಜಿಎಸ್ಎಟಿ -೩೦ ದೂರಸಂಪರ್ಕ ಉಪಗ್ರಹದ ಹಿಂದಿನ ಉಡಾವಣೆಯನ್ನು ಜನವರಿಯಲ್ಲಿ ನಡೆಸಲಾಗಿತ್ತು, ಆದರೆ ಫ್ರೆಂಚ್ ಗಿನಿಯಾದ ನೆಲೆಯಿಂದ ಅದನ್ನು ಹಾರಿಸಲಾಗಿತ್ತು. ಉಡಾವಣೆಯು ೨೬ ಕ್ಷಣಗಣನೆ ಬಳಿಕ ಮಧ್ಯಾಹ್ನ .೧೨ ಕ್ಕೆ ನಡೆಯಿತು. ಪ್ರತಿಕೂಲ ಹವಾಮಾನ ಮತ್ತು ಹಾರಾಟದ ಹಾದಿಯಲ್ಲಿನ ಭಗ್ನಾವಶೇಷದಿಂದಾಗಿ ಉಡಾವಣೆಯು ೧೦ ನಿಮಿಷ ವಿಳಂಬವಾಗಿದೆ ಎಂದು ಇಸ್ರೋ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಮಧ್ಯಾಹ್ನ .೩೪ ಕ್ಕೆ ಇಸ್ರೋ ಗ್ರಾಹಕರ ಉಪಗ್ರಹಗಳು ಬೇರ್ಪಟ್ಟವು ಮತ್ತು ಅವುಗಳ ಉದ್ದೇಶಿತ ಕಕ್ಷೆಗಳಲ್ಲಿ ಸೇರ್ಪಡೆಗೊಂಡವು ಎಂದು ಹೇಳಿದರು. ಬಳಿಕ ಭಾರತದ ಇಒಎಸ್ -೦೧ ಉಪಗ್ರಹವು ಪಿಎಸ್ಎಲ್ವಿಯು (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ನಾಲ್ಕನೇ ಹಂತದಿಂದ ಬೇರ್ಪಟಿತು ಮತ್ತು ಕಕ್ಷೆಗೆ ಸೇರ್ಪಡೆಯಾಯಿತು ಎಂದು ಇಸ್ರೋ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವಸಂಸ್ಥೆಯ ಪ್ರಮುಖ ಸಮಿತಿಯೊಂದಕ್ಕೆ ನಡೆದ ನಿಕಟ ಸ್ಪರ್ಧೆಯಲ್ಲಿ ಭಾರತದ ಅಭ್ಯರ್ಥಿ ವಿದಿಶಾ ಮೈತ್ರಾ 2020ರ ನವೆಂಬರ್ 07ರ ಶನಿವಾರ ಆಯ್ಕೆಯಾದರು. ಇದರೊಂದಿಗೆ ಏಷ್ಯಾ ಫೆಸಿಫಿಕ್ ಭಾಗದಿಂದ ಈ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಪ್ರಜೆ ಎಂಬ ಹೆಗ್ಗಳಿಕೆ ಅವರದಾಯಿತು. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಹಣಕಾಸನ್ನು ನಿಯಂತ್ರಿಸುವ ಪ್ರಮುಖ ಸಮಿತಿ ಇದಾಗಿದ್ದು ಭಾರತಕ್ಕೆ ತೀವ್ರ ಸ್ಪರ್ಧೆ ಎದುರಾಗಿತ್ತು. ಪ್ರಸ್ತುತ ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಮಿಷನ್ ಪ್ರಥಮ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ವೃತ್ತಿ ರಾಜತಾಂತ್ರಿಕ ಮೈತ್ರಾ ಅವರು ಆಡಳಿತ ಮತ್ತು ಬಜೆಟ್ ಪ್ರಶ್ನೆಗಳ ಸಲಹಾ ಸಮಿತಿಗೆ (ಎಸಿಎಬಿಕ್ಯು) ೧೨೬ ಪರ ಹಾಗೂ ೬೪ ವಿರೋಧೀ ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಏಷ್ಯಾ ಪೆಸಿಫಿಕ್ ಸಮೂಹದ ಸಮಿತಿಯ ಏಕೈಕ ಹುದ್ದೆಗೆ ಮೈತ್ರಾ ಭಾರತದ ಅಭ್ಯರ್ಥಿಯಾಗಿದ್ದರು, ಮತ್ತು ಎದುರಾಳಿ ಅಭ್ಯರ್ಥಿ ಇರಾಕಿನವರಾಗಿದ್ದರು. ಭಾರತವು ೧೯೪೬ ರಲ್ಲಿ ವಿಶ್ವಸಂಸ್ಥೆಯು ಪ್ರಾರಂಭವಾದಾಗಿನಿಂದ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸಿದೆ. ಸಮಿತಿಯಲ್ಲಿ ಸ್ಥಾನವು ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಅತ್ಯಂತ ಅಪೇಕ್ಷಿತ ಸ್ಥಾನಗಳಲ್ಲಿ ಒಂದಾಗಿದೆ. ಮುಂದಿನ ವರ್ಷ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿ ಎರಡು ವರ್ಷಗಳ ಅವಧಿಯನ್ನು ಪ್ರಾರಂಭಿಸಲು ಭಾರತ ಸಜ್ಜಾಗಿರುವುದರಿಂದ ಚುನಾವಣೆಯಲ್ಲಿ ನವದೆಹಲಿಯ ಗೆಲುವು ಕೂಡ ನಿರ್ಣಾಯಕವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಲಸಿಕೆಯಾಗಿರಬಹುದಾದ ಕೊವಾಕ್ಸಿನ್ನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಭಾರತ್ ಬಯೋಟೆಕ್ ಹೊಂದಿರುವುದರಿಂದ, ಲಸಿಕೆಯನ್ನು ಮೊದಲು ಮತ್ತು ಉಚಿತವಾಗಿ ನೀಡಲು ಆದ್ಯತೆಯ ಗುಂಪುಗಳನ್ನು ಗುರುತಿಸುವುದು ಸೇರಿದಂತೆ ಲಸಿಕೆ ವಿತರಣಾ ವಿಧಾನವನ್ನು ಕೇಂದ್ರವು ಅಂತಿಮಗೊಳಿಸುತ್ತಿದೆ.   ವಿವರಗಳನ್ನು ಚರ್ಚಿಸುತ್ತಿರುವ ತಜ್ಞರ ಗುಂಪು ಬಗ್ಗೆ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಹಿಂದೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಆದ್ಯತೆಯ ಫಲಾನುಭವಿಗಳ ಗುಂಪನ್ನು ಗುರುತಿಸಲು ರಾಜ್ಯಗಳನ್ನು ಕೋರಲಾಗಿದೆ ಎಂದು ಹೇಳಿದ್ದರು. ಒಟ್ಟು ೩೦ ಕೋಟಿ ಆದ್ಯತೆಯ ಫಲಾನುಭವಿಗಳಿಗೆ ಆರಂಭಿಕ ಹಂತದಲ್ಲಿ ಲಸಿಕೆ ಪ್ರಮಾಣ ಸಿಗಲಿದೆ. ನಾಲ್ಕು ವಿಭಾಗಗಳನ್ನು ಇಲ್ಲಿಯವರೆಗೆ ವಿಶಾಲವಾಗಿ ಗುರುತಿಸಲಾಗಿ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ/ ವಾಷಿಂಗ್ಟನ್: ತೀವ್ರ ಹೋರಾಟದ ಅಮೆರಿನ್ ಅಧ್ಯಕ್ಷೀಯ ಚುನಾವಣೆಯಲ್ಲಿ 2020ರ ನವೆಂಬರ್ 07ರ ಶನಿವಾರ ಡೆಮಾಕ್ರಾಟ್ ಅಭ್ಯರ್ಥಿ ಜೋ ಬಿಡೆನ್ ಗೆಲುವಿನ ಹಾದಿಯಲ್ಲಿ ಸಾಗಿ, ಅಮೆರಿಕದ ನೂತನ ಅಧ್ಯಕ್ಷರಾಗಲು ಸಜ್ಜಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಜೋ ಬಿಡೆನ್- ಕಮಲಾ ಹ್ಯಾರಿಸ್ ಯುಗದಲ್ಲಿ ಸಹಭಾಗಿತ್ವ ಬಲವರ್ಧನೆಯ ನಿಟ್ಟಿನಲ್ಲಿ ಸಜ್ಜಾಗುತ್ತಿದೆ. ಅಮೆರಿಕ ಪ್ರಜೆಗಳ ಮನಸ್ಥಿತಿಯನ್ನು ಗ್ರಹಿಸಿದ ಭಾರತವು ಶ್ವೇತಭವನದಲ್ಲಿನ ಸಂಭವನೀಯ ಬದಲಾವಣೆಗೆ ಹೊಂದಿಕೊಳ್ಳಲು ತಯಾರಿ ನಡೆಸುತ್ತಿದೆ. ಅಮೆರಿಕದ ಭಾರತೀಯ ರಾಯಭಾರಿ ತರನ್ಜಿತ್ ಸಿಂಗ್ ಸಂಧು ಅವರು ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ಸಿಗರೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಭೆಗಳಲ್ಲಿ ಕೆಲವು ಬಹಿರಂಗ ಸಭೆಗಳಾಗಿದ್ದರೆ, ಕೆಲವು ತೆರೆಮರೆಯಲ್ಲಿ ನಡೆಯುತ್ತಿವೆ. ಅಮೆರಿಕದಲ್ಲಿ ಭಾರತದ ಮಿಷನ್ ಹಿಂದೆ ಒಬಾಮಾ ಆಡಳಿತದ ಭಾಗವಾಗಿದ್ದ ವಿವೇಕ್ ಎಚ್ ಮೂರ್ತಿ ಮತ್ತು ರಾಜ್ ಷಾ - ಇಬ್ಬರು ಭಾರತೀಯ ಮೂಲದ ಇಬ್ಬರು ನಿರ್ಣಾಯಕ ವ್ಯಕ್ತಿಗಳೊಂದಿಗೆ ತೊಡಗಿಸಿಕೊಂಡಿದೆ. ವಿವೇಕ ಎಚ್. ಮೂರ್ತಿ ಅವರು ಬಿಡೆನ್ ಅಭಿಯಾನದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಮತ್ತು ಅವರ ಆಡಳಿತದಲ್ಲೂ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮೂರ್ತಿ ಅವರು ೨೦೧೪ ರಲ್ಲಿ ಒಬಾಮಾ ಅವರ ಕಿರಿಯ ಶಸ್ತ್ರಚಿಕಿತ್ಸಕ ಜನರಲ್ ಆಗಿದ್ದರು. ರಾಜೀವ್ ರಾಜ್ ಷಾ ಕೂಡ ಒಬಾಮಾ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಗತ್ಯ ಬಿದ್ದಾಗ ಹೊಸ ಆಡಳಿತದೊಂದಿಗೆ ಭಾರತ ಕೇಂದ್ರಿತ ಉಪಕ್ರಮಗಳನ್ನು ಮುಂದಕ್ಕೆ ತಳ್ಳಬಲ್ಲಂತಹ ಸಮರ್ಥರಾಗಿದ್ದಾರೆ. ಅವರು ಸಂಶೋಧನೆ, ಶಿಕ್ಷಣ ಮತ್ತು ಅರ್ಥಶಾಸ್ತ್ರದ ಅಂಡರ್ ಸೆಕ್ರೆಟರಿ ಆಗಿ ಮತ್ತು ಅಮೆರಿಕದ ಕೃಷಿ ಇಲಾಖೆಯಲ್ಲಿ ಮುಖ್ಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. ಅವರು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ ಮೆಂಟ್ (ಯುಎಸ್ಐಐಡಿ) ೧೬ ನೇ ಆಡಳಿತಗಾರರಾಗಿ ೨೦೧೫ ರವರೆಗೆ ಸೇವೆ ಸಲ್ಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಹೆಚ್ಚಿನ ಮತಗಳೊಂದಿಗೆ ಒಟ್ಟು 273 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದ ಡೆಮಾಕ್ರಾಟ್ ಅಭ್ಯರ್ಥಿ ಜೋ ಬಿಡನ್ ಅವರು 2020ರ ನವೆಂಬರ್ 07ರ ಶನಿವಾರ ಅಮೆರಿಕದಚುನಾಯಿತ ಅಧ್ಯಕ್ಷ’ರಾದರು. ಅದೇ ರೀತಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕದ ಮೊತ್ತ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಸ್ಥಾನಕ್ಕೆ ಏರಿದ ಮೊದಲ ಕರಿಯ ಮಹಿಳೆ ಎನಿಸಿದ್ದಾರೆ.ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ನವೆಂಬರ್ 09 ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪ್ರಕರಣ ದಾಖಲಿಸುವುದಾಗಿ ಘೋಷಿಸಿದರು. ಬಿಡೆನ್ ವಿಜಯದ ಹಾದಿಯಲ್ಲಿದ್ದರೂ ಇನ್ನೂ ದೊಡ್ಡ ಪ್ರಮಾಣದ ಮತಗಳ ಎಣಿಕೆ ಬಾಕಿ ಇರುವುದರಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಪ್ರಕಟಣೆ ತಡವಾಗಿದೆ. ಇಡೀ ಜಗತ್ತೇ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಮೇಲೆ ದೃಷ್ಟಿ ನೆಟ್ಟಿದೆ. ೨೦೦೦ದ ನಂತರ ಇದೇ ಮೊದಲ ಬಾರಿಗೆ ಅಮೆರಿಕನ್ನರು ಅಧ್ಯಕ್ಷೀಯ ಚುನಾವಣಾ ಫಲಿತಾಂಶಕ್ಕಾಗಿ ಇಷ್ಟೊಂದು ದೀರ್ಘ ಕಾಲ ಕಾಯಬೇಕಾದ ಸ್ಥಿತಿ ಬಂದಿದೆ. ಈವರೆಗಿನ ಪ್ರಕ್ಷೇಪಗಳ (ಪ್ರೊಜೆಕ್ಷನ್) ಪ್ರಕಾರ ಜೋ ಬಿಡೆನ್ ೨೬೪ ಚುನಾವಣಾ ಮತಗಳನ್ನು (ಎಲೆಕ್ಟೋರಲ್ ಕಾಲೇಜ್) ಹೊಂದಿದ್ದರೆ ಮತ್ತು ಅಧ್ಯಕ್ಷ ಟ್ರಂಪ್ ೨೧೪ ಮತಗಳನ್ನು ಹೊಂದಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಸಣ್ಣ ಪುಟ್ಟ ಅಹಿತಕರ ಘಟನೆಗಳ ಮಧ್ಯೆ 2020ರ ನವೆಂಬರ್ 07ರ ಶನಿವಾರ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದಲ್ಲಿ ಸಂಜೆ ಗಂಟೆಯವರೆಗೆ ಶೇಕಡಾ ೫೫.೨೨ರಷ್ಟು ಮತದಾನವಾಗಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿತು. ಏತನ್ಮಧ್ಯೆ, ಮಧುಬಾನಿಯ ಬೆನಿಪಟ್ಟಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನೀರಜ್ ಕುಮಾರ್ ಝಾ ಅವರು ಶನಿವಾರ ಕೋವಿಡ್ -೧೯ ರೋಗಕ್ಕೆ ಬಲಿಯಾಗಿ ಅಸು ನೀಗಿದರು. ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದ ಅವರನ್ನು ಹತ್ತು ದಿನಗಳ ಹಿಂದೆ ಪಾಟ್ನಾದ ಏಮ್ಸ್ಗೆ ದಾಖಲಿಸಲಾಗಿತ್ತು. ಬಿಹಾರದ ಅಭಿವೃದ್ಧಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜನರಿಗೆ ಮನವಿ ಮಾಡಿದಂತೆ ರಾಜ್ಯದಲ್ಲಿ ಮಧ್ಯಾಹ್ನ ಗಂಟೆಯವೇಳೆಗೆ ಶೇಕಡಾ ೩೪.೮೨ರಷ್ಟು ಮತದಾನವಾಗಿತ್ತು. "ಬಿಹಾರ ವಿಧಾನಸಭಾ ಚುನಾವಣೆಗೆ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಬಿಹಾರದ ಅಭಿವೃದ್ಧಿಗೆ ಮತ ಚಲಾಯಿಸುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ. ಜನರು ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಜಾಪ್ರಭುತ್ವದ ಭವ್ಯ ಉತ್ಸವದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಡ್ಡಾ ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದರು. ಬಿಎಸ್ ಎಫ್ ಜೊತೆ ಘರ್ಷಣೆ: ಸ್ಥಳೀಯರು ಕಾಸ್ಬಾದಲ್ಲಿ ಬಿಎಸ್ಎಫ್ ಯೋಧರೊಂದಿಗೆ ಘರ್ಷಣೆ ನಡೆಸಿದ ಘಟನೆ ಘಟಿಸಿತು. ಪೂರ್ಣಿಯಾದ ಕಸ್ಬಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಯನ್ನು ಥಳಿಸಿದ ಬಿಎಸ್ಎಫ್ ಯೋಧರ ವಿರುದ್ಧ ಜನರು ಕೋಪಗೊಂಡು ಆಕ್ರೋಶ ವ್ಯಕ್ತ ಪಡಿಸಲು ಆರಂಭಿಸಿದರು. ಇದು ಮತದಾನದಲ್ಲಿ ಎರಡು ಗಂಟೆಗಳ ವಿಳಂಬಕ್ಕೆ ಕಾರಣವಾಯಿತು. ನಂತರ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳು ಸ್ಥಳಕ್ಕೆ ತಲುಪಿ ಪ್ರದೇಶದಲ್ಲಿ ಮತದಾನವನ್ನು ಪುನಾರಂಭಕ್ಕೆ ಅವಕಾಶ ಮಾಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಬಿಹಾರ ವಿಧಾನಸಭೆಯ ಮೂರನೇ ಹಾಗೂ ಕೊನೆಯ ಹಂತದ ಮತದಾನ 2020ರ ನವೆಂಬರ್ 07ರ ಶನಿವಾರ ಮುಕ್ತಾಯವಾಗುತ್ತಿದ್ದಂತೆಯೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಆಡಳಿತಾರೂಢ ಎನ್ಡಿಎಗೆ ಪ್ರಬಲ ಆಡಳಿತ ವಿರೋಧೀ ಅಲೆಯ ಪೆಟ್ಟಿನ ಹಾಗೂ ಅಸ್ಥಿರ ವಿಧಾನಸಭೆಯ ಮುನ್ಸೂಚನೆ ನೀಡಿತು. ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ಬಿಹಾರದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ಡಿಎ) ಸ್ಪಷ್ಟ ಬಹುಮತದ ಕೊರತೆಯನ್ನು ಎದುರಿಸಬಹುದು, ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾಘಟ ಬಂಧನ್ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ೨೪೩ ಸದಸ್ಯ ಬಲದ ವಿಧಾನಸಭೆಯಲ್ಲಿ ಸುಮಾರು ೧೨೦ ಸ್ಥಾನಗಳನ್ನು ಮತ್ತು ಎನ್ಡಿಎ ಸುಮಾರು ೧೧೬ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದು ಟೈಮ್ಸ್ ನೌ-ಸಿ ವೋಟರ್ ಹಾಗೂ ರಿಪಬ್ಲಿಕ್ ಟಿವಿ- ಜನ್ ಕಿ ಬಾತ್ ನಡೆಸಿದ ಮತದಾನೋತ್ತರ ಸಮೀಕ್ಷೆಗಳು ಹೇಳಿದವು. ಕೋವಿಡ್ -೧೯ ಅಸಮರ್ಪಕ ನಿರ್ವಹಣೆ ಮತ್ತು ಮತ್ತು ವಲಸೆ ಬಿಕ್ಕಟ್ಟಿನಿಂದಾಗಿ ಸಾರ್ವಜನಿಕರ ಭಾವನೆ ನಿತೀಶ ಕುಮಾರ್ ಅವರ ವಿರುದ್ಧ ತಿರುಗಿಬಿದ್ದಿದ್ದರಿಂದ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ ಎಂದು ಸಮೀಕ್ಷೆಗಳು ಹೇಳಿದವು. ರಿಪಬ್ಲಿಕ್ ಟಿವಿ-ಜಾನ್ ಕಿ ಬಾತ್ ಎನ್ಡಿಎಗೆ ೯೧ ರಿಂದ ೧೧೭ ಮತ್ತು ಆರ್ಜೆಡಿ ಮೈತ್ರಿಕೂಟಕ್ಕೆ ೧೧೮-೧೩೮, ಲೋಕ ಜನಶಕ್ತಿ ಪಕ್ಷಕ್ಕೆ (ಎಲ್ಜೆಪಿ) ರಿಂದ ಸ್ಥಾನಗಳನ್ನು ನಿರೀಕ್ಷಿಸಿದೆ, ಇತರರು ರಿಂದ ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿತು. ಅಕ್ಟೋಬರ್ ೨೮ ರಂದು ಪ್ರಾರಂಭವಾದ ಮತ್ತು ಶನಿವಾರ ಕೊನೆಗೊಂಡ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉಭಯ ಕಡೆಯ ಪ್ರಮುಖ ಪ್ರಚಾರಕರು ಕಟುವಾದ ಆರೋಪಗಳನ್ನು ಮಾಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ಟಾರ್ ಪ್ರಚಾರಕರನ್ನು ಕರೆತಂದಿದ್ದವು. ಸಹಸ್ರಾರು ಗಣಕೀಕೃತ ಯಂತ್ರಗಳಲ್ಲಿ ದಾಖಲಾಗಿರುವ  ಮತಗಳ ಎಣಿಕೆ ನವೆಂಬರ್ ೧೦ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ನಿರೀಕ್ಷಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment