ನಾನು ಮೆಚ್ಚಿದ ವಾಟ್ಸಪ್

Wednesday, November 11, 2020

ಇಂದಿನ ಇತಿಹಾಸ History Today ನವೆಂಬರ್ 11

 ಇಂದಿನ ಇತಿಹಾಸ History Today ನವೆಂಬರ್ 11

2020: ನವದೆಹಲಿ: ಅಶ್ಲೀಲ ವೀಡಿಯೋ, ಸುಳ್ಳು ಸುದ್ದಿಗಳ ಪ್ರಸಾರದಂತಹ ಡಿಜಿಟಲ್ ವಿಷಯಗಳನ್ನು ನಿಯಂತ್ರಿಸುವ ಮೊದಲ ಹಂತವಾಗಿ ಓವರ್ ದಿ ಟಾಪ್ (ಒಟಿಟಿ) ಮತ್ತು ಅಂತರ್ಜಾಲ ಸುದ್ದಿ (ಆನ್ ಲೈನ್ ನ್ಯೂಸ್) ಸುದ್ದಿಗಳಿಗೆ ಅಂಕುಶ ಹಾಕಲು ಸಾಧ್ಯವಾಗುವಂತೆ ಕೇಂದ್ರ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರವನ್ನು 2020 ನವೆಂಬರ್ 11ರ ಬುಧವಾರ ವಿಸ್ತರಿಸಿತು. ಒಟಿಟಿ ವೇದಿಕೆಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊಗಳು ಮತ್ತು ಹಾಟ್‌ಸ್ಟಾರ್ ಮತ್ತು ಆನ್‌ಲೈನ್ ಸುದ್ದಿ ಸೇರಿದಂತೆ ಇತರ ಡಿಜಿಟಲ್ ವಿಷಯಗಳಿಗೆ ತನ್ಮೂಲಕ ಸರ್ಕಾರ ಮೂಗುದಾರ ಹಾಕಲಿದೆ. ಬದಲಾವಣೆಯು ೧೮೬೭ರ ವಿಂಟೇಜ್ ಪ್ರೆಸ್ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆಯಡಿ ಅಪರಾಧಗಳನ್ನು ನಿರ್ಣಯಿಸುವ ಹೊಸ ಕಾನೂನನ್ನು ಜಾರಿಗೆ ತರಲು ಮತ್ತು ಸುದ್ದಿ ವೆಬ್‌ಸೈಟ್‌ಗಳು ತಮ್ಮನ್ನು ಭಾರತದ ಪತ್ರಿಕೆಗಳ ರಿಜಿಸ್ಟ್ರಾರ್‌ನಲ್ಲಿ (ಆರ್‌ಎನ್‌ಐ) ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಿದೆ. ಪ್ರಸ್ತಾವಿತ ಕಾನೂನನ್ನು ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಸುದ್ದಿ ಮೂಲಗಳು ತಿಳಿಸಿವೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರವನ್ನು ತಿದ್ದುಪಡಿ ಮಾಡುವ ರಾಷ್ಟ್ರಪತಿ ಆದೇಶವನ್ನು, ವಿಡಿಯೋ ಪ್ರಸಾರದದಲ್ಲಿ ವಿಷಯದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿ ಸುಪ್ರಿಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮಸೂದೆ ದಾಖಲಾದ ಕೆಲ ಸಮಯದ ಬಳಿಕ, ಸೋಮವಾg ಹೊರಡಿಸಲಾಗಿದೆ. ಆದೇಶವು ಆನ್‌ಲೈನ್ ವಿಷಯ ಪೂರೈಕೆದಾರರು ಮತ್ತು ಸುದ್ದಿ ಮತ್ತು ಪ್ರಸಕ್ತ ವಿದ್ಯಮಾನಗಳ ವಿಷಯವನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ  ಪ್ರಸಾರ ಮಾಡುವ ಆನ್‌ಲೈನ್ ವಿಷಯ, ಚಲನಚಿತ್ರಗಳು ಮತ್ತು ಆಡಿಯೋ -ದೃಶ್ಯ ಕಾರ್ಯಕ್ರಮಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಯ ಅಡಿಗೆ ತಂದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಪಾಟ್ನಾ: ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ರಂಗದ (ಎನ್‌ಡಿಎ) ವಿಜಯದ ಶ್ರೇಯಸ್ಸು ಮುಖ್ಯಮಂತ್ರಿ ನಿತೀಶ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಜೆಡಿಯು ಮುಖ್ಯಸ್ಥರೇ ಮುಂದಿನ ಮುಖ್ಯಮಂತ್ರಿ ಎಂಬ ಮತದಾನ ಪೂರ್ವದ ಭರವಸೆಗೆ ತಾನು ಬದ್ಧ ಎಂದು ಭಾರತೀಯ ಜನತಾ ಪಕ್ಷವು 2020 ನವೆಂಬರ್ 11ರ ಬುಧವಾರ ದೃಢಪಡಿಸಿತು. ಭಾರತೀಯ ಭಾರತೀಯ ಜನತಾ ಪಕ್ಷವು ಮಿತ್ರ ಜೆಡಿಯುಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿದ ಒಂದು ದಿನದ ನಂತರ, ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಮುಖ್ಯಮಂತ್ರಿ ನಿತೀಶ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಗೆಲುವಿನ ಶ್ರೇಯಸ್ಸನ್ನು ಅರ್ಪಿಸಿ, ನಿತೀಶ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟ ಪಡಿಸಿದರು. "ಶ್ರೇಯಸ್ಸು ಮೋದಿ, ನಿತೀಶ್ ಮತ್ತು ಬಿಹಾರದ ಜನರಿಗೆ ಸಲ್ಲುತ್ತದೆ. ಅವರು ಅಂತಹ ಸ್ಪಷ್ಟ ಬಹುಮತವನ್ನು ನೀಡಿದ್ದಾರೆ. ನಮಗೆ ಜನರಲ್ಲಿ ನಮ್ಮ ವಿರುದ್ಧ ಯಾವುದೇ ಕೋಪ ಕಾಣಲಿಲ್ಲ. ಪ್ರತಿಪಕ್ಷಗಳು ಇಂತಹ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ ಆದರೆ ಜನರು ಆಡಳಿತ ಪರ ಸರ್ಕಾರಕ್ಕೆ ಮತ ಹಾಕಿದ್ದಾರೆ. ನಿತೀಶ ಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿರುತ್ತಾರೆಎಂದು ಸುಶೀಲ್ ಮೋದಿ ಹೇಳಿದರು. ಚುನಾವಣೆಯಲ್ಲಿ ಬಿಜೆಪಿ ಮತ್ತು ವಿರೋಧೀ ಆರ್‌ಜೆಡಿ ತೀವ್ರ ಹಣಾಹಣಿ ನಡೆಸಿದ್ದು, ಆರ್‌ಜೆಡಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಜೆಡಿಯು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಆದಾಗ್ಯೂ, ಪಕ್ಷಗಳ ವೈಯಕ್ತಿಕ ಸಂಖ್ಯೆಯ ಹೊರತಾಗಿಯೂ, ಎನ್‌ಡಿಎ ಸಂಯೋಜನೆಯು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ. ಪಕ್ಷವು ಹೆಚ್ಚು ಕ್ಷೇತ್ರಗಳನ್ನು ಗೆದ್ದಿದ್ದರೂ ಮೈತ್ರಿಕೂಟದ ನಾಯಕ ಜೆಡಿಯು ಮುಖ್ಯಸ್ಥ ನಿತೀಶ ಕುಮಾರ್ ಅವರೇ ಮುಖ್ಯಮಂತ್ರಿ ಎಂದು ಬಿಜೆಪಿ ಸ್ಪಷ್ಟಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ೨೦೧೮ ಆತ್ಮಹತ್ಯೆ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸುಪ್ರೀಂ ಕೋರ್ಟ್ 2020 ನವೆಂಬರ್ 11ರ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅವರನ್ನು ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ತಮ್ಮ ನ್ಯಾಯವ್ಯಾಪ್ತಿಯನ್ನು ಚಲಾಯಿಸುವಂತೆ ಹೈಕೋರ್ಟ್ಗಳಿಗೆ ಸುಪ್ರೀಂಕೋರ್ಟ್ ಸೂಚಿಸಿತು. ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಆರೋಪಿಗಳಿಗೆ ೫೦,೦೦೦ ರೂಪಾಯಿಗಳ ಭದ್ರತಾ ಖಾತರಿ ಮೇಲೆ ಮಧ್ಯಂತರ ಜಾಮೀನು ಮಂಜೂರು ಮಾಡಿ, ಆದೇಶವನ್ನು ಕೂಡಲೇ ಪಾಲಿಸುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು. ನವೆಂಬರ್ ೪ರಂದು ಬಂಧನಕ್ಕೆ ಒಳಗಾಗಿದ್ದ ಅರ್ನಬ್ ಗೋಸ್ವಾಮಿ ಅವರು, ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದರು. ಅರ್ನಬ್ ಮೇಲೆ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಹೊರಿಸಲಾಗಿತ್ತು. ಗೋಸ್ವಾಮಿ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಹರೀಶ ಸಾಳ್ವೆ ಅವರುಮರು ತನಿಖೆ ನಡೆಸುವ ಅಧಿಕಾರವನ್ನು ತಪ್ಪಾಗಿ ಬಳಸಲಾಗುತ್ತಿದೆಎಂದು ನ್ಯಾಯಾಲಯದಲ್ಲಿ ವಾದಿಸಿದರು. "ನಾವು ಎಫ್‌ಐಆರ್ ಹಂತವನ್ನು ಮೀರಿದ್ದೇವೆ. ೨೦೧೮ರ ಮೇ ೫ರಂದು ಎಫ್‌ಐಆರ್ ದಾಖಲಾಗಿದ್ದು, ವಿಷಯದ ಬಗ್ಗೆ ತನಿಖೆ ನಡೆಸಿದ ನಂತರ, ಈಗ ಮರು ತನಿಖೆಯ ಅಧಿಕಾರವನ್ನು ತಪ್ಪಾಗಿ ಬಳಸಲಾಗಿದೆಎಂದು ಅವರು ಪ್ರತಿಪಾದಿಸಿದರು. ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಅವರ ಕುಟುಂಬದ ಹೊಸ ದೂರಿನ ಆಧಾರದ ಮೇಲೆ ಮರು ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಅನ್ವಯ್ ನಾಯಕ್ ಅವರು ತಾಯಿ ಕುಮುದ್ ಅವರೊಂದಿಗೆ ೨೦೧೮ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಟಿಪ್ಪಣಿಯಲ್ಲಿ ಆರೋಪಿಗಳ ಸಂಸ್ಥೆಗಳಿಂದ ತಮಗೆ ಬಾಕಿ ಪಾವತಿ ಆಗಲಿಲ್ಲ ಎಂದು ನಾಯಕ್ ಆರೋಪಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮಾಸ್ಕೋ: ಮಧ್ಯಂತರ ಪ್ರಯೋಗಗಳ ಫಲಿತಾಂಶ ಪ್ರಕಾರ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಕೋವಿಡ್-೧೯ ಸೋಂಕಿನಿಂದ  ಜನರನ್ನು ರಕ್ಷಿಸುವಲ್ಲಿ ಶೇಕಡಾ ೯೨ರಷ್ಟು ಪರಿಣಾಮಕಾರಿಯಾಗಿದೆ ಎಂದು ದೇಶದ ಸಾರ್ವಭೌಮ ಸಂಪತ್ತು ನಿಧಿ 2020 ನವೆಂಬರ್ 11ರ ಬುಧವಾರ ಪ್ರಕಟಿಸಿತು. ಸೋಂಕಿನ ವಿರುದ್ಧ ಲಸಿಕೆ ಕಂಡು ಹಿಡಿಯಲು ನಡೆಯುತ್ತಿರುವ ಜಾಗತಿಕ ಯತ್ನಗಳಿಗೆ ಸಂಬಂಧಿಸಿದಂತೆ ಕೊನೆಯ ಹಂತದ ಮಾನವ ಪ್ರಯೋಗದ ಬಳಿಕ ಪ್ರಕಟವಾದ ಎರಡನೇ ಲಸಿಕೆ ಇದಾಗಿದೆ. ಇದು . ದಶಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡು ವಿಶ್ವ ಆರ್ಥಿಕತೆಯನ್ನು ಧ್ವಂಸಗೊಳಿಸಿದ ಸಾಂಕ್ರಾಮಿಕ ರೋಗವನ್ನು ತಡೆಯುವಂತಹ ಲಸಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮನುಷ್ಯರ ಮೇಲೆ ಪ್ರಯೋಗಕ್ಕೆ ಅನುಮತಿ ನೀಡಿದರೂ, ರಷ್ಯಾವು ಸ್ಪುಟ್ನಿಕ್ ವಿಯನ್ನು ಸಾರ್ವಜನಿಕ ಬಳಕೆಗಾಗಿ ಆಗಸ್ಟ್ ತಿಂಗಳಲ್ಲೇ ನೋಂದಾಯಿಸಿತ್ತು. ಪ್ರಯೋಗದಲ್ಲಿ ಭಾಗವಹಿಸಿ ಎರಡು-ಡೋಸ್ ಲಸಿಕಾ ಚುಚ್ಚುಮದ್ದು ಸ್ವೀಕರಿಸಿದ ಮೊದಲ ೧೬,೦೦೦ ಮಂದಿಯ ದತ್ತಾಂಶವನ್ನು ಮಧ್ಯಂತರ ಫಲಿತಾಂಶಗಳು ಆಧರಿಸಿವೆ. ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್), ಲಸಿಕೆ ತಯಾರಿಯನ್ನು ಬೆಂಬಲಿಸುತ್ತಿದೆ ಮತ್ತು ಅದನ್ನು ಜಾಗತಿಕವಾಗಿ ಮಾರಾಟ ಮಾಡುತ್ತದೆ. ಗಮಲೇಯ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆಯ ಮೂರನೇ ಹಂತದ ಪ್ರಯೋಗವು ಮಾಸ್ಕೋದಾದ್ಯಂತ ೨೯ ಚಿಕಿತ್ಸಾಲಯಗಳಲ್ಲಿ ನಡೆಯುತ್ತಿದೆ ಮತ್ತು ಒಟ್ಟು ೪೦,೦೦೦ ಸ್ವಯಂಸೇವಕರನ್ನು ಒಳಗೊಂಡಿರುವ ಪ್ರಯೋಗದಲ್ಲಿ ಕಾಲು ಭಾಗದಷ್ಟು ಮಂದಿ ಪ್ಲೇಸ್‌ಬೊ ಚುಚ್ಚುಮದ್ದು ಪಡೆಯುತ್ತಾರೆ. ಪ್ಲೇಸ್‌ಬೊ ಪಡೆದವರಿಗಿಂತ ಸ್ಪುಟ್ನಿಕ್ ವಿ ಲಸಿಕೆ ಹಾಕಿದ ಜನರಲ್ಲಿ  ಕೋವಿಡ್-೧೯ ಸೋಂಕು ತಟ್ಟುವ    ಸಾಧ್ಯತೆಗಳು ಶೇಕಡಾ ೯೨ರಷ್ಟು ಕಡಿಮೆ ಎಂದು ಆರ್‌ಡಿಐಎಫ್ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವು ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯ ಕಡೆಗೆ ಚಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 11ರ ಬುಧವಾರ ಇಲ್ಲಿ ಹೇಳಿದರು. ಒಡಿಶಾದ ಕಟಕ್‌ನಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ಐಟಿಎಟಿ) ಕಚೇರಿ ಮತ್ತು ವಸತಿ ಸಮುಚ್ಚಯವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಪ್ರಧಾನಿ ಮಾತನಾಡಿದರುಉದ್ಘಾಟನಾ ಸಂದರ್ಭದಲ್ಲಿ ಮೋದಿ ಅವರು ಇತ್ತೀಚೆಗೆ ಪರಿಚಯಿಸಿದ ತೆರಿಗೆ ಸುಧಾರಣೆಗಳತ್ತ ಬೊಟ್ಟು ಮಾಡಿದರು ಮತ್ತು "ತೆರಿಗೆ ಸಂಗ್ರಹಿಸುವಾಗ ಸಾರ್ವಜನಿಕರನ್ನು ಅಸಮಾಧಾನಗೊಳಿಸಬಾರದುಎಂದು ಹೇಳಿದರು. "ತೆರಿಗೆ ಪಾವತಿದಾರನು ಈಗ ತೆರಿಗೆ ಮರುಪಾವತಿಗಾಗಿ ವರ್ಷಗಳವರೆಗೆ ಕಾಯಬೇಕಾಗಿಲ್ಲಎಂದು ಪ್ರಧಾನಿ ಹೇಳಿದರು. "ಭಾರತವು ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆ ಕಡೆಗೆ ಚಲಿಸುತ್ತಿದೆಎಂದು ಮೋದಿ ಅವರು ಖುದ್ದು ಹಾಜರಾಗಿ ಸಲ್ಲಿಸದ (ಮುಖರಹಿತ) ಮನವಿಗಳನ್ನು ಹಾಗೂ ವಿವಾದ ಪರಿಹಾರದ ಕಾರ್ಯವಿಧಾನವನ್ನು ಉಲ್ಲೇಖಿಸಿ ಹೇಳಿದರು. ತೆರಿಗೆ ಸುಧಾರಣೆಗಳನ್ನು ಒತ್ತಿಹೇಳುತ್ತಾ, " ಲಕ್ಷ ರೂ.ಗಳ ಆದಾಯದ ಮೇಲಿನ ತೆರಿಗೆ ಕಡಿಮೆ ಆದಾಯದ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿದೆಎಂದು ಪ್ರಧಾನಿ ಹೇಳಿದರು, "ಕಾರ್ಪೊರೇಟ್ ತೆರಿಗೆಯೂ ಐತಿಹಾಸಿಕ ಕಡಿತವನ್ನು ಕಂಡಿದೆ" ಎಂದು ಅವರು ನುಡಿದರು. "ತೆರಿಗೆದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಗುರುತಿಸುವ ಹಾಗೂ ತೆರಿಗೆ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಮೂಡಿಸುವತ್ತ ಹೆಜ್ಜೆ ಹಾಕಿರುವ ಆಯ್ದ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆಎಂದು ಅವರು ಉದ್ಘಾಟನೆಯ  ಸಂದರ್ಭದಲ್ಲಿ ಹೇಳಿದರು. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಟಕ್‌ನ ಐಟಿಎಟಿಯ ಹೊಸದಾಗಿ ನಿರ್ಮಿಸಲಾದ ಆಫೀಸ್-ಕಮ್-ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್, ಒಡಿಶಾ ಸರ್ಕಾರವು ೨೦೧೫ ರಲ್ಲಿ ಉಚಿತವಾಗಿ ನೀಡಿದ್ದ .೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ೧೦ ಪ್ರಮುಖ ವಲಯಗಳಿಗೆ .೪೬ ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ ಧನ (ಪ್ರೊಡಕ್ಷನ್ ಲಿಂಕ್ಡ್ ಇನ್‌ಸೆಂಟಿವ್- ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ 2020 ನವೆಂಬರ್ 11ರ ಬುಧವಾರ ಅನುಮೋದನೆ ನೀಡಿತು. ಈ ಯೋಜನೆಯು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ, ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ರಫ್ತು ಹೆಚ್ಚಿಸುತ್ತದೆ. ಸಚಿವ ಸಂಪುಟ ನಿರ್ಧಾರವನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಬಳಿಕ ಪ್ರಕಟಿಸಿದರು. ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್, ಬಿಳಿ ಸರಕುಗಳ ಉತ್ಪಾದನೆ, ಔಷಧೀಯ, ವಿಶೇಷ ಉಕ್ಕು, ವಾಹನಗಳು, ಟೆಲಿಕಾಂ, ಜವಳಿ, ಆಹಾರ ಉತ್ಪನ್ನಗಳು, ಸೌರ ದ್ಯುತಿವಿದ್ಯುಜ್ಜನಕ ಮತ್ತು ಸೆಲ್ ಬ್ಯಾಟರಿ (ಸೋಲಾರ್ ಫೊಟೋವೋಲ್ಟಿಕ್ ಮತ್ತು ಸೆಲ್ ಬ್ಯಾಟರಿ) ಮತ್ತಿತರ ಕ್ಷೇತ್ರಗಳಿಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. ಪಿಎಲ್‌ಐನಲ್ಲಿ ತೆಗೆದುಕೊಳ್ಳುತ್ತಿರುವ ನೀತಿಯ ಮೂಲಕ ತಯಾರಕರು ಭಾರತಕ್ಕೆ ಬರಬೇಕೆಂದು ನಾವು ಬಯಸುತ್ತೇವೆ, ನಮ್ಮ ಶಕ್ತಿಯನ್ನು ನಿರ್ಮಿಸಲು ನಾವು ಬಯಸುತ್ತೇವೆ ಆದರೆ ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಸ್ಪಷ್ಟವಾಗಿ ಹೇಳುವುದು ಯೋಜನೆಯ ಉದ್ದೇಶವಾಗಿದೆಎಂದು ಅವರು ನುಡಿದರು. ಭಾರತವು ಉತ್ಪಾದನಾ ಕೇಂದ್ರವಾಗಬೇಕು ಎಂಬುದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕರೆಎಂದು  ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ೧೦ ವಲಯಗಳ ಪೈಕಿ ಆಟೋಮೊಬೈಲ್ಸ್ ಮತ್ತು ಆಟೋ ಭಾಗಗಳು ಗರಿಷ್ಠ ೫೭,೦೪೨ ಕೋಟಿ ರೂ. ಮೊತ್ತವನ್ನು ಪಡೆದಿದ್ದು, ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿಯು ೧೮,೧೦೦ ಕೋಟಿ ರೂ.ಗಳ ಪ್ರೋತ್ಸಾಹವನ್ನು ಪಡೆದಿದೆ ಎಂದು ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯವನ್ನು ಕಾರ್ಯಕರ್ತರು ಆಚರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು 2020 ನವೆಂಬರ್ 11ರ ಬುಧವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡದ್ದಕ್ಕಾಗಿ ದೇಶದ ಜನತೆಗೆ ಧನ್ಯವಾದ ಅರ್ಪಿಸಿದರು. "ನಾನು ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಏಕೆಂದರೆ ಅವರು ರಾಜ್ಯಗಳಾದ್ಯಂತ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲುವಂತೆ ಮಾಡಿದರು ಎಂಬುದಕ್ಕಾಗಿ ಮಾತ್ರವಲ್ಲ, ನಾವೆಲ್ಲರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೇವೆ ಎಂಬುದಕ್ಕಾಗಿಎಂದು ಪ್ರಧಾನಿ ಹೇಳಿದರು.  ಕೆಲವೇ ಸ್ಥಾನಗಳು ಮತ್ತು ರಾಜ್ಯಗಳಲ್ಲಿ ಚುನಾವಣೆಗಳು ನಡೆದಿದ್ದರೂ, ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೆ, ಎಲ್ಲರ ಕಣ್ಣುಗಳು ಟಿವಿಗಳು, ಟ್ವಿಟರ್ ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್ ಮೇಲೆ ಕೇಂದ್ರೀಕೃತವಾಗಿತ್ತು. ಮೌನಿ ಮತದಾರರು ಬಿಜೆಪಿ ಕೈ ಹಿಡಿದರು ಎಂದು ಮೋದಿ ಹೇಳಿದರು.  ಚುನಾವಣೆಗಳಿಗೆ ದೊಡ್ಡ ಯಶಸ್ಸು ತಂದುಕೊಟ್ಟದ್ದಕ್ಕಾಗಿ ಇಡೀ ದೇಶವನ್ನು ನಾನು ಅಭಿನಂದಿಸುತ್ತೇನೆ, ಆದರೆ ಪ್ರಜಾಪ್ರಭುತ್ವವನ್ನು ಆಚರಿಸಿದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆಎಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.ಎನ್‌ಡಿಎಗೆ ನೀಡಿದ ಬಹುಮತಕ್ಕಾಗಿ ಸಾರ್ವಜನಿಕರಿಗೆ ನಮಸ್ಕರಿಸುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆಎಂದು ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ ಕುಮಾರ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 11 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment