ನಾನು ಮೆಚ್ಚಿದ ವಾಟ್ಸಪ್

Monday, November 2, 2020

ಇಂದಿನ ಇತಿಹಾಸ History Today ನವೆಂಬರ್ 02

 ಇಂದಿನ ಇತಿಹಾಸ  History Today ನವೆಂಬರ್ 02

2020: ನವದೆಹಲಿ: ಮುಂಬರುವ ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರತಾರಾ ಪ್ರಚಾರಕ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ಚುನಾವಣಾ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟ್ 2020 ನವೆಂಬರ್ 02ರ ಸೋಮವಾರ ತಡೆಹಿಡಿಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಸದರಿ ನಿರ್ಧಾರದ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿತು. "ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ ೭೭ ಅಡಿಯಲ್ಲಿ ಪಕ್ಷದ ನಾಯಕ ಯಾರು ಎಂದು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಎಲ್ಲಿದೆ?’ ಎಂದು ಪೀಠ ಕೇಳಿತು.  ಕಮಲನಾಥ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರುಅಕ್ಟೋಬರ್ ೨೬ ರಂದು ಆಯೋಗವು ಸಲಹೆಯನ್ನು ನೀಡಿತ್ತು. ನಂತರ ಅಕ್ಟೋಬರ್ ೧೩gಂದು ಕಾಂಗ್ರೆಸ್ ನಾಯಕ ಮಾಡಿದ ಭಾಷಣದ ಬಗ್ಗೆ ದೂರು ಬಂದಿದೆ ಎಂದು ಹೇಳಿ ಅಕ್ಟೋಬರ್ ೩೦ರಂದು ಆದೇಶ ಹೊರಡಿಸಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಿಂದ ಬಗ್ಗೆ ವಿವರಣೆ ಕೇಳಲಾಗಿಲ್ಲ ಎಂದು ವಾದಿಸಿದರು.  ಕಮಲನಾಥ್ ಅವರು ಅಕ್ಟೋಬರ್ ೧೩ ರಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಹೇಳಿಕೆ ಮತ್ತು ನಂತರ ಅಕ್ಟೋಬರ್ ೧೮ ರಂದು ಗ್ವಾಲಿಯರಿನಲ್ಲಿ  ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸರಳ ವ್ಯಕ್ತಿ, ಎದುರಾಳಿಯಂತೆಐಟಂ ಅಲ್ಲ ಎಂದು ಹೇಳಿದ್ದು ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕಮಲನಾಥ್ ವಿರುದ್ಧ ಆದೇಶ ಹೊರಡಿಸಿತ್ತು.  ಭಾರತೀಯ ಜನತಾ ಪಕ್ಷವು (ಬಿಜೆಪಿ) ಉಪ ಚುನಾವಣೆಯಲ್ಲಿ ಗ್ವಾಲಿಯರಿನ ದರ್ಬಾ ಸ್ಥಾನದಿಂದ ಸಚಿವೆ ಇಮಾರ್ತಿ ದೇವಿ ಅವರನ್ನು ಕಣಕ್ಕಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಜೈಪುರ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ಗುಜ್ಜರ್ ಸಮುದಾಯದ ಸದಸ್ಯರು, 2020 ನವೆಂಬರ್ 02ರ ಸೋಮವಾರ ರಾಜಸ್ಥಾನದ ವಿವಿಧ ಕಡೆ ರೈಲು ಸಂಚಾರವನ್ನು ನಿರ್ಬಂಧಿಸಿದ ಪರಿಣಾಮವಾಗಿ ರಾಜ್ಯದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಇದೇ ವೇಳೆಗೆ ವದಂತಿಗಳನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವು ಇಂಟರ್ನೆಟ್ ಸೌಲಭ್ಯವನ್ನು ಅಮಾನತುಗೊಳಿಸಿತು. ಚಳವಳಿಕಾರರು ಭರತಪುರದಲ್ಲಿ ರೈಲು ಮಾರ್ಗವನ್ನು ನಿರ್ಬಂಧಿಸಿದ್ದನ್ನು ಅನುಸರಿಸಿ, ದೆಹಲಿ-ಮುಂಬೈ ರೈಲ್ವೆ ಮಾರ್ಗದಲ್ಲಿ ಒಂದು ಡಜನ್‌ಗೂ ಹೆಚ್ಚು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಆಗ್ರಾ-ಜೈಪುರ ಮಾರ್ಗದಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ) ಸಮುದಾಯವಾಗಿ ಗುರುತಿಸಿ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸುತ್ತಿರುವ ಸಮುದಾಯದ ಸದಸ್ಯರು, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಆಂದೋಲನ ಮುಂದುವರಿಯುತ್ತದೆ ಎಂದು ಹೇಳಿದರು. "ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸರ್ಕಾರವು ಆದೇಶ ಹೊರಡಿಸುವವರೆಗೆ ನಾವು ನಮ್ಮ ಆಂದೋಲನವನ್ನು ಮುಂದುವರಿಸುತ್ತೇವೆ. ನಮ್ಮ ಸಮುದಾಯದ ಯುವಕರು ನಿರುದ್ಯೋಗಿಗಳಾಗಿದ್ದಾರೆ, ೨೫,೦೦೦ ಉದ್ಯೋಗಗಳು ತಡೆ ಹಿಡಿಯಲ್ಪಟ್ಟಿವೆ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ" ಎಂದು ಗುಜ್ಜರ್ ನಾಯಕ ವಿಜಯ್ ಬೈನ್ಸ್ಲಾ ಹೇಳಿದ್ದಾರೆ. ಹಿಂದೂನ್ ಸಿಟಿ-ಬಯಾನಾ ಮಾರ್ಗದಲ್ಲಿ ರೈಲ್ವೆ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಏಳು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು ಎಂದು ಪಶ್ಚಿಮ ರೈಲ್ವೆ ಭಾನುವಾರ ರಾತ್ರಿ ತಿಳಿಸಿದೆ. ಬೇರೆಡೆಗೆ ತಿರುಗಿಸಲಾದ ರೈಲುಗಳಲ್ಲಿ ಹಜರತ್ ನಿಜಾಮುದ್ದೀನ್-ಕೋಟಾ, ಬಾಂದ್ರಾ ಟರ್ಮಿನಸ್-ಮುಜಾಫ್ಫರಪುರ, ಕೋಟಾ-ಡೆಹ್ರಾಡೂನ್, ಇಂದೋರ್-ಹಜರತ್ ನಿಜಾಮುದ್ದೀನ್, ಹಜರತ್ ನಿಜಾಮುದ್ದೀನ್-ಇಂದೋರ್, ಹಜರತ್ ನಿಜಾಮುದ್ದೀನ್-ಉದಯಪುರ ಮತ್ತು ಉದಯಪುರ-ಹಜರತ್ ನಿಜಾಮುದ್ದೀನ್ ಸೇರಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ನೇಪಾಳಿ ಸೇನೆಯ ಗೌರವಾನ್ವಿತ ಜನರಲ್ ಗೌರವವನ್ನು ಪಡೆಯುವ ಸಲುವಾಗಿ ಭಾರತದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ ನರವಾಣೆ ಅವರು ವಾರ ನೇಪಾಳಕ್ಕೆ ತೆರಳುತ್ತಿದ್ದು, ನವೆಂಬರ್ ರಂದು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿ ನಿರ್ಣಾಯಕವಾಗಿದ್ದು, ವಿದೇಶೀ ಕಾರ್ಯದರ್ಶಿ ಮಟ್ಟದ ಸಂವಹನ ಪುನಾರಂಭಕ್ಕೆ ನಾಂದಿಯಾಗಬಹುದು ಎಂದು ವಿಶ್ವಸನೀಯ ಸುದ್ದಿ ಮೂಲಗಳು 2020 ನವೆಂಬರ್ 02ರ ಸೋಮವಾರ ತಿಳಿಸಿವೆ. ವರ್ಷದ ಜೂನ್‌ನಲ್ಲಿ ನೇಪಾಳೀ ಸಂಸತ್ತು ವಿವಾದಾತ್ಮಕವಾದ ಹೊಸ ನಕ್ಷೆಯನ್ನು ತೆರವುಗೊಳಿಸಿದ ನಂತರ ಭಾರತವು ಹಿಮಾಲಯನ್ ರಾಷ್ಟ್ರದ ಕಮ್ಯುನಿಸ್ಟ್ ಸರ್ಕಾರದೊಂದಿಗೆ ಮಾತುಕತೆ ಸ್ಥಗಿತಗೊಳಿಸಿತ್ತು. ಚೀನೀ  ಕಮ್ಯುನಿಸ್ಟ್ ಪಕ್ಷದ ಬೆಂಬಲವಿದೆ ಎಂದು ನಂಬಲಾದ ಕ್ರಮವನ್ನು ಪಕ್ಷ ಮತ್ತು ಸರ್ಕಾರದ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಲು ಮತ್ತು ನೇಪಾಳದಲ್ಲಿ ಅತಿರೇಕದ ರಾಷ್ಟವಾದಿ ಭಾವನೆಗಳನ್ನು ಹುಟ್ಟುಹಾಕುವ ಸಲುವಾಗಿ ಒಲಿ ಅವರು ಕೈಗೊಂಡಿದ್ದರು ಎಂದು ನಂಬಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಉಭಯ ನೆರೆಹೊರೆಯವರು ತಮ್ಮ ನಿಲುವುಗಳನ್ನು ಮೃದುಗೊಳಿಸಿದ್ದು, ಬಾಂಧವ್ಯ ಪುನಃಸ್ಥಾಪನೆಗೆ ಯತ್ನಿಸಿದ್ದಾರೆ. ಸೆಪ್ಟೆಂಬರಿನಲ್ಲಿ ದೇಶದ ಪರಿಷ್ಕೃತ ರಾಜಕೀಯ ನಕ್ಷೆಯೊಂದಿಗೆ ಪ್ರಕಟವಾದ ಮುಂದಿನ ಶಾಲಾ ಪಠ್ಯಪುಸ್ತಕಗಳ ವಿತರಣೆಯನ್ನು ನಿಲ್ಲಿಸಲು ಪ್ರಧಾನಿ ಒಲಿ ನಿರ್ಧರಿಸಿದ್ದರು. ಅಕ್ಟೋಬರ್‌ನಲ್ಲಿ, ಪ್ರಧಾನಿ ಒಲಿ ಅವರು ನವೆಂಬರ್ ರಿಂದ ಜನರಲ್ ನರವಾಣೆ ಅವರ ಮೂರು ದಿನಗಳ ಭೇಟಿಗೆ ಅನುಮತಿ ನೀಡಿದರು ಮತ್ತು ಉಪ ಪ್ರಧಾನಿ ಈಶ್ವರ್ ಪೋಖ್ರೆಲ್ ಅವರನ್ನು ರಕ್ಷಣಾ ಸಚಿವಾಲಯದಿಂದ ತೆಗೆದುಹಾಕಿದರು. ಭಾರತದ ತೀಕ್ಷ್ಣ ಮತ್ತು ಸ್ಥಿರ ವಿಮರ್ಶಕರಾಗಿ ಕಾಣುತ್ತಿದ್ದ ಪೋಖ್ರೆಲ್, ಆತಿಥೇಯ ಜನರಲ್ ನರವಾಣೆ ಅವರ ಭೇಟಿಗೆ ಹಿಂಜರಿದಿದ್ದರು ಎನ್ನಲಾಗಿತ್ತು. ಬಳಿಕ ಪ್ರಧಾನಿ ಒಲಿ ಅವರು ರಕ್ಷಣಾ ಸಚಿವಾಲಯದ ಉಸ್ತುವಾರಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ ಮತ್ತು ವಾರ ಜನರಲ್ ನರವಾಣೆ ಅವರನ್ನು ದೇಶದ ರಕ್ಷಣಾ ಸಚಿವರಾಗಿ ಭೇಟಿಯಾಗಲಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಪಂಚಾಯತ್ ಮತ್ತು ಪುರಸಭೆ ಚುನಾವಣೆಯ ದಿನಾಂಕಗಳನ್ನು ನವೆಂಬರ್ ಅಥವಾ ರಂದು ಪ್ರಕಟಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹ 2020 ನವೆಂಬರ್ 02ರ ಸೋಮವಾರ ಪ್ರಕಟಿಸಿದರು. ಸುದ್ದಿ ಸಂಸ್ಥೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿನ್ಹ ಅವರು ವಿಷಯವನ್ನು ಬಹಿರಂಗ ಪಡಿಸಿದರು. ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳು ಮೂರು ಹಂತದ ಪಂಚಾಯತ್ ವ್ಯವಸ್ಥೆಯನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿದೆ ಎಂದು ವರ್ಷದ ಆಗಸ್ಟ್ ರಂದು ಕೇಂದ್ರಾಡಳಿತ ಪ್ರಾಂತ್ಯದ ದ್ವಿತೀಯ ಲೆಪ್ಟಿನೆಂಟ್ ಜನರಲ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಸಿನ್ಹ ಹೇಳಿದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ೨೦೧೯ ಆಗಸ್ಟ್ ರಂದು ಮಹತ್ವದ ಬದಲಾವಣೆಗಳನ್ನು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ. ಕಳೆದ ವರ್ಷ ಆಗಸ್ಟ್ ೫ರಂದು ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.  ಪ್ರದೇಶದ ರಾಜಕೀಯ ಪ್ರಕ್ರಿಯೆಯನ್ನು ಪುನರಾರಂಭಿಸುವ ಪ್ರಯತ್ನವಾಗಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲಾಗುತ್ತಿದೆ ಎಂದು ಸುದ್ದಿ ಮೂಲಗಳು ಹೇಳಿವೆ. "ನಾವು ಮೂರು ಹಂತದ ವ್ಯವಸ್ಥೆಯನ್ನು ಬಲಪಡಿಸಿದ್ದೇವೆ. ೧೯೯೨ ರಲ್ಲಿ ಸಂಸತ್ತಿನಲ್ಲಿ ಜಾರಿಗೆ ಬಂದಾಗ ೭೩ ನೇ ತಿದ್ದುಪಡಿಯಲ್ಲಿ ದೇಶದಲ್ಲಿ ಮೂರು ಹಂತದ ಪಂಚಾಯಿತಿಗಳ ವ್ಯವಸ್ಥೆ ಇರಬೇಕೆಂದು ನಿರ್ಧರಿಸಲಾಯಿತು. ಈಗ ನವೆಂಬರ್ ಅಥವಾ ರಂದು ಚುನಾವಣೆ ( ನಿಟ್ಟಿನಲ್ಲಿ) ಘೋಷಿಸಲಾಗುವುದು ಎಂದು ಸಿನ್ಹ ಹೇಳಿದರು. ಮುಂಬರುವ ಮತದಾನ ಪ್ರಕ್ರಿಯೆಯಲ್ಲಿ ಪಂಚ, ಸರಪಂಚ, ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಸದಸ್ಯರು ಮತ್ತು ಅಧ್ಯಕ್ಷರು ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಸದಸ್ಯರು ಮತ್ತು ಅವರ ಮುಖ್ಯಸ್ಥರ ಆಯ್ಕೆ ನಡೆಯಲಿದೆ. ಇವರೆಲ್ಲರೂ ಭವಿಷ್ಯದಲ್ಲಿ ಒಟ್ಟಾಗಿ ಹೆಚ್ಚು ಪ್ರಮುಖ ಪಾತ್ರಗಳನ್ನು ವಹಿಸಲಿದ್ದಾರೆ ಎಂದು ಸಿನ್ಹ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ/ ಇಸ್ಲಾಮಾಬಾದ್: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದ ಒಂದು ಭಾಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಮ್ಮ ಸರ್ಕಾರವು ತಾತ್ಕಾಲಿಕ ಸ್ಥಾನಮಾನವನ್ನು ನೀಡಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಭಾರತವು ಇದನ್ನು ಅತ್ಯುಗ್ರವಾಗಿ ಖಂಡಿಸಿದೆ. ಖಾನ್ ಹೇಳಿಕೆಯು ಉಭಯ ರಾಷ್ಟ್ರಗಳ ಮಧ್ಯ ಹೊಸ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.  ಅಫ್ಘಾನಿಸ್ತಾನ ಮತ್ತು ಚೀನಾದ ಗಡಿಯಲ್ಲಿರುವ ಆಯಕಟ್ಟಿನ ಪ್ರಮುಖ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವು ಅಂದಾಜು ಎರಡು ದಶಲಕ್ಷ ಜನಸಂಖ್ಯೆಗೆ ನೆಲೆಯಾಗಿದೆ.  ಪಾಕಿಸ್ತಾನ ಮತ್ತು ಭಾರತ ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ನಡೆದ ಮೂರು ಸಮರಗಳಲ್ಲಿ ಎರಡು ಸಮರಗಳನ್ನು ಕಾಶ್ಮೀರದ ಪರ್ವತ ಪ್ರದೇಶಕ್ಕಾಗಿ ನಡೆಸಿವೆ. ಭಾನುವಾರ, ಖಾನ್ ಅವರು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ರಾಜಧಾನಿ ಗಿಲ್ಗಿಟ್ ನಗರದಲ್ಲಿ 2020 ನವೆಂಬರ್ 02ರ ಭಾನುವಾರ ರಾಜಕೀಯ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು.  "ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತೀಯ ಸ್ಥಾನಮಾನವನ್ನು ನೀಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ, ಇದು ಬಹಳ ಹಿಂದಿನ ಬೇಡಿಕೆಯಾಗಿದೆ" ಎಂದು ಖಾನ್ ಹೇಳಿದರು.  ಇಮ್ರಾನ್ ಖಾನ್ ಅವರ ಪ್ರಸ್ತಾಪಕ್ಕೆ ಪಾಕಿಸ್ತಾನದೊಳಗೆ ವಿರೋಧ ವ್ಯಕ್ತವಾಗುವ ಸಾಧ್ಯತೆಯಿಲ್ಲ, ಅಲ್ಲಿ ವಿರೋಧ ಪಕ್ಷಗಳು ಸೆಪ್ಟೆಂಬರ್‌ನಲ್ಲಿ ದೇಶದ ಸೇನೆ ಮತ್ತು ಗುಪ್ತಚರ ಮುಖ್ಯಸ್ಥರನ್ನು ರಹಸ್ಯವಾಗಿ ಭೇಟಿಯಾಗಿ ವಿಷಯದ ಬಗ್ಗೆ ಚರ್ಚಿಸಿ, ಗಿಲ್ಗಿಟ್-ಬಾಲ್ಟಿಸ್ತಾನ್ ಸ್ಥಾನಮಾನ ಹೆಚ್ಚಿಸಲು ಬೆಂಬಲ ನೀಡುವ ಭರವಸೆ ಕೊಟ್ಟಿರುವುದಾಗಿ ವಿರೋಧ ಪಕ್ಷಗಳ ಹಲವಾರು ನಾಯಕರು ಹೇಳಿದ್ದರು. ಭಾರತದ ಖಂಡನೆ: ಆದಾಗ್ಯೂ, ಭಾರತದಲ್ಲಿ, ಖಾನ್ ಅವರ ಘೋಷಣೆಗೆ ವಿದೇಶಾಂಗ ಸಚಿವಾಲಯದಿಂದ ತೀವ್ರ ಖಂಡನೆ ವ್ಯಕ್ತಪಡಿಸಲಾಗಿದೆ. ಪಾಕಿಸ್ತಾನ ಸರ್ಕಾರದ ಕ್ರಮವನ್ನು  "ದೃಢವಾಗಿ ತಿರಸ್ಕರಿಸುವುದಾಗಿ ಭಾರತ ಹೇಳಿದೆ. "ಗಿಲ್ಗಿಟ್-ಬಾಲ್ಟಿಸ್ತಾನ ಎಂದು ಕರೆಯಲ್ಪಡುವ ಪ್ರದೇಶವನ್ನು ಒಳಗೊಂಡಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ೧೯೪೭ರಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತ ಒಕ್ಕೂಟಕ್ಕೆ ಸೇರ್ಪಡೆ ಮಾಡಲಾಗಿದ್ದು, ಇದನ್ನು ಬದಲಿಸಲು ಸಾಧ್ಯವಿಲ್ಲ, ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿವೆ ಎಂದು ನಾನು ಪುನರುಚ್ಚರಿಸುತ್ತೇನೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಶ್ರೀ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಲಂಡನ್: ಬ್ಯಾಂಕ್ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದ ಆರೋಪಿ ವಜ್ರ ಉದ್ಯಮಿ ನೀರವ್ ಮೋದಿ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2020 ನವೆಂಬರ್ ೦೩ರ ಮಂಗಳವಾರ ಒಂದು ದಿನದ ವಿಚಾರಣೆ ನಡೆಸಲಿದೆ. ಅಕ್ಟೋಬರ್ ೨೬ ರಂದು ಆರನೇ ಬಾರಿಗೆ ನ್ಯಾಯಾಲಯ ನೀರವ್ ಮೋದಿಗೆ ಜಾಮೀನು ನಿರಾಕರಿಸಿತ್ತು.  ಮಂಗಳವಾರದ ವಿಚಾರಣೆಯು ಮೋದಿಯ ವಿರುದ್ಧ ಭಾರತ ಸರ್ಕಾರ ಮಂಡಿಸಿದ ಸಾಕ್ಷ್ಯಗಳ ಸ್ವೀಕಾರಾರ್ಹತೆ ಬಗ್ಗೆ ಇರುತ್ತದೆ ಎನ್ನಲಾಗಿದೆ. ಮೋದಿ ಪರ ವಕೀಲರ ತಂಡವು ಹಿಂದೆ ಇಂಗ್ಲೆಂಡಿನ ನ್ಯಾಯಾಲಯಗಳಲ್ಲಿ ಸ್ವೀಕಾರಾರ್ಹತೆಯ ಮಾನದಂಡಗಳನ್ನು ಸಾಕ್ಷ್ಯಗಳು ಪೂರೈಸುವುದಿಲ್ಲ ಎಂದು ವಾದಿಸಿತ್ತು. ಮೋದಿಯ ಪ್ರಮುಖ ವಕೀಲ ಕ್ಲೇರ್ ಮಾಂಟ್ಗೊಮೆರಿ ಅವರ ಪ್ರಕಾರ, ಭಾರತದ ವಿರುದ್ಧದ ಪ್ರಮುಖ ಹಣಕಾಸಿನ ಅಕ್ರಮಗಳ ಆರೋಪಗಳು ಬಹಳ ಸುದೀರ್ಘವಾಗಿವೆ. ಆದರೆ ಪುರಾವೆಗಳು ಇರುವುದು ಬಹಳ ಕಡಿಮೆ ಎಂದು ಹೇಳಿದ್ದರು. ಸೆಪ್ಟೆಂಬರಿ ಐದು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಭಯ್ ತಿಪ್ಸೆ ಅವರು ಮೋದಿಯವರ ಪರವಾಗಿ ಭಾರತದಿಂದ ವಿಡಿಯೋ ಲಿಂಕ್ ಮೂಲಕ ಸಾಕ್ಷ್ಯ ನೀಡಿದ್ದಾಗ  ಪ್ರಕರಣದ ವಿಚಾರಣೆ ನಡೆಯಿತು. ಭಾರತದ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸೇವೆ ಮತ್ತು ಮೋದಿ ತಂಡವು ಮುಕ್ತಾಯದ ಹೇಳಿಕೆಗಳನ್ನು ನೀಡುವ ನಿರೀಕ್ಷೆಯಿರುವಾಗ ಡಿಸೆಂಬರ್ ಆರಂಭದಲ್ಲಿ ಮತ್ತೊಂದು ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಮೋದಿಯನ್ನು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಹಸ್ತಾಂತರಿಸುವಂತೆ ಶಿಫಾರಸು ಮಾಡುವ ನ್ಯಾಯಾಲಯದ ತೀರ್ಪು ೨೦೨೧ ಆರಂಭದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.  ಮೋದಿ ಹಸ್ತಾಂತgವು  ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇಡಿ) ಮನವಿಗಳನ್ನು ಆಧರಿಸಿದೆ. ಮೋದಿ ವಿರುದ್ಧದ ಆರೋಪಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮುಂಬೈ ಶಾಖೆಗೆ ಸಂಬಂಧಿಸಿದೆ. ಅದು ತನ್ನ ಕಂಪೆನಿಗಳ ೧೧,೩೦೦ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡದೆ ವಂಚಿಸಿದ್ದಕ್ಕೆ ಸಂಬಂಧಿಸಿದೆ. ಸಿಬಿಐ ವಂಚನೆ ಬಗ್ಗೆ ತನಿಖೆ ನಡೆಸಿದ್ದರೆ, ವಂಚಿಸಿದ ಹಣವನ್ನು ವರ್ಗಾಯಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)
 
ಇಂದಿನ ಇತಿಹಾಸ  History Today ನವೆಂಬರ್ 02 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment