ನಾನು ಮೆಚ್ಚಿದ ವಾಟ್ಸಪ್

Thursday, November 19, 2020

ಇಂದಿನ ಇತಿಹಾಸ History Today ನವೆಂಬರ್ 19

 ಇಂದಿನ ಇತಿಹಾಸ  History Today ನವೆಂಬರ್ 19

2020: ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕೋವಿಡ್ -೧೯ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು (ಮಾಸ್ಕ್) ಧರಿದ ವ್ಯಕ್ತಿಗಳಿಗೆ ವಿಧಿಸಲಾಗುವ ದಂಡವನ್ನು ೫೦೦ ರೂಪಾಯಿಗಳಿಂದ ,೦೦೦ ರೂಪಾಯಿಗಳಿಗೆ ಏರಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  2020 ನವೆಂಬರ್ 19ರ  ಗುರುವಾರ ಪ್ರಕಟಿಸಿದರು.  ಎಲ್ಲ ಖಾಸಗಿ ಆಸ್ಪತ್ರೆಗಳಿಗೆ, ತಮ್ಮ ಐಸಿಯು ಹಾಸಿಗೆಗಳಲ್ಲಿ ಶೇಕಡಾ ೮೦ ಮತ್ತು ಐಸಿಯು ಅಲ್ಲದ ಶೇಕಡಾ ೬೦ರಷ್ಟು ಹಾಸಿಗೆಗಳನ್ನು ಕೋವಿಡ್ -೧೯ ರೋಗಿಗಳಿಗೆ ಕಾಯ್ದಿರಿಸಲು ಮತ್ತು ನಿರ್ಣಾಯಕವಲ್ಲದ ಶಸ್ತ್ರಚಿಕಿತ್ಸೆಗಳ ದಿನಾಂಕಗಳನ್ನು ಮುಂದೂಡಲು ಕೂಡಾ ಸರ್ಕಾರ ನಿರ್ದೇಶನಗಳನ್ನು ನೀಡಿದೆ ಎಂದು ಕೇಜ್ರಿವಾಲ್ ಹೇಳಿದರು. ನಾನು ಈದಿನ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ಕೋವಿಡ್ -೧೯ ಪರಿಸ್ಥಿತಿಯ ಬಗ್ಗೆ ವಿವರಿಸಿದೆ. ಬಹಳಷ್ಟು ಜನರು ಮುಖಗವಸುಗಳನ್ನು ಧರಿಸುವುದಿಲ್ಲ ಎಂದು ನಾವು ಒಪ್ಪಿದ್ದೇವೆ ಆದ್ದರಿಂದ ಮುಖಗವಸುಗಳನ್ನು ಧರಿಸದಿರುವವರಿಗೆ ವಿಧಿಸಲಾಗುವ ದಂಡವನ್ನು ೫೦೦ ರೂಪಾಯಿಗಳಿಂದ ,೦೦೦ ರೂಪಾಯಿಗಳಿಗೆ ಹೆಚ್ಚಿಸಲಾಗುವುದು.  ಮುಖಗವಸುಗಳನ್ನು ವಿತರಿಸಲು ಮತ್ತು ಮುಖಗವಸುಗಳನ್ನು ಧರಿಸಲು ಜನರನ್ನು ಒತ್ತಾಯಿಸುವಂತೆ ನಾನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಕೋವಿಡ್ -೧೯ ವಿರುದ್ಧ ಮುಖಗವಸುಗಳು ಪ್ರಮುಖ ರಕ್ಷಕವಾಗಿವೆಎಂದು ಕೇಜ್ರಿವಾಲ್ ಹೇಳಿದರು. ಕೋವಿಡ್ -೧೯ ಪರಿಸ್ಥಿತಿಯನ್ನು ಚರ್ಚಿಸಲು ರಾಜಕೀಯ ಮುಖಂಡರೊಂದಿಗೆ ಸರ್ವಪಕ್ಷ ಸಭೆ ಕರೆದ ನಂತರ ಕೇಜ್ರಿವಾಲ್ ವಿಡಿಯೋ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಪಾಟ್ನಾ: ಬಿಹಾ ೧೭ನೇ ವಿಧಾನಸಭೆಯ ಅಧಿವೇಶನವನ್ನು ನವೆಂಬರ್ ೨೩ಕ್ಕೆ ಕರೆಯಲಾಗಿದ್ದು, ಹಂಗಾಮೀ ಸಭಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ರಾಜ್ಯಪಾಲ ಫಾಗು ಚೌಹಾಣ್ ಅವರಿಂದ  2020 ನವೆಂಬರ್ 19ರ  ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಇಮಾಮ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಮಾಂಝಿ ಅವರನ್ನು ಬಿಹಾರ ವಿಧಾನಸಭೆಯ ಸಭಾಧ್ಯಕ್ಷರ ಆಯ್ಕೆ ಮಾಡುವವರೆಗೆ ಎರಡು ದಿನಗಳ ಅವಧಿಗೆ (ನವೆಂಬರ್ ೨೩ ಮತ್ತು ೨೪) ಹಂಗಾಮೀ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪಯಣ ಆರಂಭಿಸಿದ್ದ ಮಾಂಝಿ ೧೯೮೦ರಿಂದ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಅವರು ೨೦೧೫ರಲ್ಲಿ ತಮ್ಮದೇ ಪಕ್ಷವಾದ ಹಿಂದೂಸ್ತಾನಿ ಅವಮ್ ಮೋರ್ಚಾ-ಜಾತ್ಯತೀತ (ಎಚ್ಎಎಂ) ಹುಟ್ಟು ಹಾಕುವವರೆಗೂ ರಾಜ್ಯದ ಎಲ್ಲಾ ಮುಖ್ಯವಾಹಿನಿಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದರು. ೨೦೧೪ರ ಮೇ ೨೦ರಿಂದ ೨೦೧೫ರ ಫೆಬ್ರುವರಿ ೨೦ರವರೆಗೆ ಅವರು ಬಿಹಾರದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ೧೬ ನೇ ಬಿಹಾರ ವಿಧಾನಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸದಾನಂದ್ ಸಿಂಗ್ ಅವರಿಗೆ ಅಂದಿನ ರಾಜ್ಯಪಾಲರು ಮತ್ತು ಭಾರತದ ಹಾಲಿ ರಾಷ್ಟ್ರಪತ್ಷಿ ರಾಮನಾಥ್ ಕೋವಿಂದ್ ಅವರು ಹಂಗಾಮೀ ರಾಜ್ಯಪಾಲರಾಗಿ ಪ್ರಮಾಣವಚನ ಬೋಧಿಸಿದ್ದರು. ವಿಧಾನಸಭೆಯ ಹಿರಿಯ ಸದಸ್ಯgನ್ನು ಹಂಗಾಮೀ ಸಭಾಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಪಾಟ್ನಾ: ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಬಿಹಾರ ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ಅವರು ಮುಖ್ಯಮಂತ್ರಿ ನಿತೀ ಕುಮಾರ್ ಅವರ ಸಂಪುಟ ಪ್ರಮಾಣ ವಚನ ಸ್ವೀಕರಿಸಿದ ಮೂರು ದಿನಗಳ ನಂತರ 2020 ನವೆಂಬರ್ 19ರ  ಗುರುವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಮಂಗಳವಾರ ಶಿಕ್ಷಣ ಖಾತೆಯನ್ನು ಪಡೆದ ಚೌಧರಿ ಅವರು  ಮಧ್ಯಾಹ್ನ ಗಂಟೆಗೆ ಅಧಿಕಾರ ವಹಿಸಿಕೊಂಡ ಕೂಡಲೇ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಸುದ್ದಿ  ಮೂಲಗಳು ತಿಳಿಸಿವೆ. ರಾಜೀನಾಮೆಗೆ ಮುನ್ನ ಚೌಧರಿ ಮುಖ್ಯಮಂತ್ರಿ ನಿತೀಶ ಕುಮಾರ್ ಜೊತೆಗೆ ಮಾತನಾಡಿದ್ದರು.  ಮುಖ್ಯಮಂತ್ರಿ ನಿತೀಶ ಕುಮಾರ್ ನೇತೃತ್ವದ ಜೆಡಿಯುಗೆ ಸೇರಿದ ಚೌಧರಿ ಅವರನ್ನು, ಭಾಗಲ್ಪುರದ ಬಿಹಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರು ಮತ್ತು ತಂತ್ರಜ್ಞರನ್ನು ನೇಮಕ ಮಾಡುವಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಐದು ವರ್ಷಗಳಷ್ಟು ಹಿಂದಿನ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಹೆಸರಿಸಲಾಗಿತ್ತು. ಆಗ ಚೌಧರಿಯವರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. "ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದಾಗ ಅಥವಾ ನ್ಯಾಯಾಲಯವು ಆದೇಶ ನೀಡಿದಾಗ ಮಾತ್ರ ಆರೋಪ ಸಾಬೀತಾಗುತ್ತದೆ ಮತ್ತು ನನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಇವೆರಡರಲ್ಲಿ ಯಾವುದು ಕೂಡಾ ಇಲ್ಲಎಂದು ಚೌಧರಿ ಅವರು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ಬುಧವಾರ ವರದಿ ಮಾಡಿತ್ತು. ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದುದಲ್ಲದೆ, ಇದೇ ವಿಷಯದಲ್ಲಿ ಪಕ್ಷದಿಂದ ಅಮಾನತುಗೊಂಡಿದ್ದರೂ ಸಹ ಚೌಧರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿದ್ದಕ್ಕಾಗಿ ಬಿಹಾರದ ಪ್ರಮುಖ ಪ್ರತಿಪಕ್ಷ ಆರ್ಜೆಡಿ ಮತ್ತು ಅದರ ಮಿತ್ರಪಕ್ಷಗಳು ನಿತೀಶ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದವು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

 2020: ನವದೆಹಲಿ/ ಇಸ್ಲಾಮಾಬಾದ್: ಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿಯಮಾಸ್ಟರ್ ಮೈಂಡ್ಮತ್ತು ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ಗೆ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಎರಡು ಪ್ರಕರಣಗಳಲ್ಲಿ ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ  2020 ನವೆಂಬರ್ 19ರ  ಗುರುವಾರ ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಿತು.  ಪ್ರಸ್ತುತ ವರ್ಷದ ಫೆಬ್ರುವರಿಯಿಂದ ಸಯೀದ್ ಸೆರೆಮನೆಯಲ್ಲಿದ್ದಾನೆ. ಇತರ ಎರಡು ಭಯೋತ್ಪಾದಕ-ಹಣಕಾಸು ಪ್ರಕರಣಗಳಲ್ಲಿ ೧೧ ವರ್ಷಗಳ ಜೈಲು ಶಿಕ್ಷೆಯನ್ನು ಆತನಿಗೆ ಮೊದಲೇ ವಿಧಿಸಲಾಗಿತ್ತು. ಪ್ರಸ್ತುತ ಸಯೀದನನ್ನು  ಲಾಹೋರಿನ ಅತಿ ಭದ್ರತೆಯ ಕೋಟ್ ಲಖ್ಪತ್ ಜೈಲಿನಲ್ಲಿ ಇರಿಸಲಾಗಿದೆ. "ಲಾಹೋರಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) 2020 ನವೆಂಬರ್ 19ರ  ಗುರುವಾರ ಜಮಾತ್-ಉದ್-ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಸೇರಿದಂತೆ ಸಂಘಟನೆಯ ನಾಲ್ವರು ನಾಯಕರಿಗೆ ಇನ್ನೂ ಎರಡು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದೆ" ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಸಯೀದ್ ಮತ್ತು ಆತನ ಇಬ್ಬರು ಆಪ್ತ ಸಹಾಯಕರಾದ ಜಾಫರ್ ಇಕ್ಬಾಲ್ ಮತ್ತು ಯಾಹ್ಯಾ ಮುಜಾಹಿದ್ ಅವರಿಗೆ ತಲಾ ೧೦ ಮತ್ತು ಒಂದೂವರೆ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದ್ದು, ಜೆಯುಡಿ ಮುಖ್ಯಸ್ಥನ ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. "ಎಟಿಸಿ ಕೋರ್ಟ್ ನಂ ನ್ಯಾಯಾಧೀಶ ಅರ್ಷದ್ ಹುಸೇನ್ ಭುಟ್ಟಾ ಅವರು ಭಯೋತ್ಪಾದನಾ ನಿಗ್ರಹ ಇಲಾಖೆ ಸಲ್ಲಿಸಿದ ಪ್ರಕರಣ ಸಂಖ್ಯೆ ೧೬/೧೯ ಮತ್ತು ೨೫/೧೯ ಗಳ ವಿಚಾರಣೆ ನಡೆಸಿದರು. ಇದರಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ವಕೀಲರಾದ ನಸೀರುದ್ದೀನ್ ನಯ್ಯರ್ ಮತ್ತು ಮೊಹಮ್ಮದ್ ಇಮ್ರಾನ್ ಫಜಲ್ ಗುಲ್ ಅವರು ಅಡ್ಡಪರಿಶೀಲನೆ ಮಾಡಿದ ಬಳಿಕ ತೀರ್ಪು ಪ್ರಕಟಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಜೆಯುಡಿ ನಾಯಕರ ವಿರುದ್ಧ ಒಟ್ಟು ೪೧ ಪ್ರಕರಣಗಳನ್ನು ಸಿಟಿಡಿ ದಾಖಲಿಸಿದ್ದು, ಪೈಕಿ ೨೪ ಪ್ರಕರಣಗಳನ್ನು ನಿರ್ಧರಿಸಲಾಗಿದೆ. ಉಳಿದ ಪ್ರಕರಣಗಳು ಎಟಿಸಿ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಸಯೀದ್ ವಿರುದ್ಧ ಈವರೆಗೆ ನಾಲ್ಕು ಪ್ರಕರಣಗಳನ್ನು ನಿರ್ಧರಿಸಲಾಗಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಹಾಸ್ಯನಟ ಕುನಾಲ್ ಕಮ್ರಾ ಅವರು ಪ್ರಕಟಿಸಿದ ಟ್ವೀಟ್ಗಳ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಡೇಟಾ ಸಂರಕ್ಷಣೆಗೆ ಸಂಬಂಧಿಸಿದ  ಸಂಸತ್ತಿನ ಜಂಟಿ ಸಮಿತಿಯು 2020 ನವೆಂಬರ್ 19ರ  ಗುರುವಾರ ಟ್ವಿಟ್ಟರ್ ಮೈಕ್ರೋ ಬ್ಲಾಗಿಂಗ್ ಸಂಸ್ಥೆಯನ್ನು ಪ್ರಶ್ನಿಸಿತು.  ಟ್ವಿಟ್ಟರಿನ ನೀತಿ ಮುಖ್ಯಸ್ಥರನ್ನು ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಮತ್ತು ಕಾಂಗ್ರೆಸ್ ಸಂಸದ ವಿವೇಕ್ ತಂಖ ವಿಚಾರಣೆ ನಡೆಸಿ, ಕುನಾಲ್ ಕಮ್ರಾ ಟ್ವೀಟ್ಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟ್ಟರನ್ನು ಕೇಳಿದ್ದಾರೆ ಎಂದು ಸುದ್ದಿ ಸಂಸ್ಥೆಯ ವರದಿಯೊಂದು ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಮ್ರಾ, "ವೈಯಕ್ತಿಕ ಸ್ವಾತಂತ್ರ್ಯವು ಕಾರ್ಪೊರೇಟ್ ಭಾರತದಲ್ಲಿ ಪ್ರಚಾರಗಳಂತಿದೆ ..." ಎಂದು ಹೇಳಿದ್ದಾರೆ. ಏತನ್ಮಧ್ಯೆ, ನ್ಯಾಯಾಲಯವು ಅಂತಹ ಆದೇಶಗಳನ್ನು ನೀಡದ ಹೊರತು ಪೋಸ್ಟ್ನ್ನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂಬುದಾಗಿ ಟ್ವಿಟ್ಟರ್ ಹೇಳಿದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ. ನಾವು ದಿನಗಳಲ್ಲಿ ಉತ್ತರ ನೀಡುವಂತೆ ಕೇಳಿದ್ದೇವೆ. ಇವುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲದ ಕಾರಣ, ನಾವು ಅಂತಹ ಸೇವಾ ಪೂರೈಕೆದಾರರ ಉನ್ನತ ಅಧಿಕಾರಿಗಳೊಂದಿಗೆ ನಾವು ಮಾತನಾಡಬೇಕಾಗಿದೆಎಂದು ಮೀನಾಕ್ಷಿ ಲೇಖಿ ಹೇಳಿದರು. ನವೆಂಬರ್ ೧೨ ರಂದು, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ತಮ್ಮ ಟ್ವೀಟ್ಗಳಿಗಾಗಿ ಸ್ಟ್ಯಾಂಡ್-ಅಪ್ ಕಾಮಿಕ್ ಕಲಾವಿದ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಲಯ ನಿಂದನೆ ಖಟ್ಲೆ ಹೂಡಲು ಒಪ್ಪಿಗೆ ನೀಡಿದ್ದರು. ‘ನಾನು ಕೆಳಗೆ ತೋರಿಸಿರುವ  ಟ್ವೀಟ್ಗಳು ಕೆಟ್ಟ ಅಭಿರುಚಿಯಲ್ಲಿರುವುದು  ಮಾತ್ರವಲ್ಲದೆ ಹಾಸ್ಯ ಮತ್ತು ನ್ಯಾಯಾಲಯ ನಿಂದನೆಯ ನಡುವಿನ ಗಡಿಯನ್ನು ಸ್ಪಷ್ಟವಾಗಿ ದಾಟುತ್ತವೆಎಂದು ವೇಣುಗೋಪಾಲ್ ಹೇಳಿದ್ದರು. ಒಂದು ದಿನದ ನಂತರ, ನವೆಂಬರ್ ೧೩ ರಂದು, ಶುಕ್ರವಾರ, ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ ೧೧ ರಂದು ನಡೆಸುತ್ತಿದ್ದಾಗ, ಕಮ್ರಾ ಟ್ವೀಟ್ ಪ್ರಕಟಿಸಲು ಪ್ರಾರಂಭಿಸಿದ್ದರು ಎಂದು ಕಾನೂನು ವಿದ್ಯಾರ್ಥಿ ಶ್ರೀರಂಗ್ ಕಾಟ್ನೇಶ್ವರ್ಕರ್ ಸೇರಿದಂತೆ ಐವರು ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ. ೨೦೧೮ರ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಬಂಧಿತರಾದ ಅರ್ನಬ್ ಗೋಸ್ವಾಮಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ತಿರುವಂತಪುರಂ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ತನ್ನನ್ನು ಅಪ್ರೂವರ್ ಆಗಿ ಮಾಡುವ ಸಲುವಾಗಿ ಜಾರಿ ನಿರ್ದೆಶನಾಲಯವು (ಇಡಿ) ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ದಂಧೆಯಲ್ಲಿ ಷಾಮೀಲಾಗಿದ್ದಾರೆ ಎಂಬುದಾಗಿ ಹೇಳಲು ಒತ್ತಡ ಹೇರುತ್ತಿದೆ  ಎಂದು ಹೇಳಿದ್ದಾರೆ ಎನ್ನಲಾಗಿರುವವಾಯ್ಸ್ ಮೇಲ್ಬಹಿರಂಗಗೊಂಡ ಬಳಿಕ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸರು 2020 ನವೆಂಬರ್ 19ರ  ಗುರುವಾರ ಆಜ್ಞಾಪಿಸಿದರು.  ವಾಯ್ಸ್ ಮೇಲ್ನ್ನು  2020 ನವೆಂಬರ್ 19ರ  ಗುರುವಾರ ಬೆಳಗ್ಗೆ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ತತ್ ಕ್ಷಣವೇ ಅದು ವೈರಲ್ ಆಗಿದೆಜಾರಿ ನಿರ್ದೇಶನಾಲಯವು ಹೇಳಿಕೆಗೆ ಸಹಿ ಹಾಕುವಂತೆ ತನ್ನನ್ನು ಒತ್ತಾಯಿಸಿತು ಮತ್ತು ಅದನ್ನು ಓದಲು ಕೂಡಾ ಅನುಮತಿ ನೀಡಲಿಲ್ಲ ಎಂದು ಸ್ವಪ್ನಾ ಸುರೇಶ್  ಈ ವಾಯ್ಸ್ ಮೇಲ್ ನಲ್ಲಿ ಆರೋಪಿಸಿದ್ದಾರೆವಾಯ್ಸ್ ಮೇಲ್ ಟ್ರೆಂಡಿಂಗ್ ಪ್ರಾರಂಭಿಸಿ ವಿವಾದಕ್ಕೆ ನಾಂದಿ ಹಾಡಿದ ಸ್ವಲ್ಪ ಸಮಯದ ನಂತರ, ಪೊಲೀಸ್ ಮಹಾನಿರ್ದೇಶಕ (ಜೈಲು) ರಿಷಿರಾಜ್ ಸಿಂಗ್ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶಿಸಿದರು. ಹೊಸ ಬೆಳವಣಿಗೆಯ ಬಗ್ಗೆ ತನಿಖೆ ನಡೆಸುತ್ತಿರುವ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಅಜಯ್ ಕುಮಾರ್, ಸ್ವಪ್ನಾ ಸುರೇಶ್ ಇದು ತಮ್ಮ ಧ್ವನಿಯೆಂದು ಒಪ್ಪಿಕೊಂಡಿದ್ದಾರೆ, ಆದರೆ ಅದನ್ನು ಜೈಲಿನಿಂದ ಕಳುಹಿಸಲಾಗಿಲ್ಲ ಎಂದು ಹೇಳಿರುವುದಾಗಿ ತಿಳಿಸಿದರುಇದನ್ನು ಹೇಳಿದ್ದು ತನಗೆ ನಿಖರವಾಗಿ ನೆನಪಿಲ್ಲ ಎಂದು ತನಿಖಾಧಿಕಾರಿಗೆ ಆಕೆ ಪ್ರಶ್ನಿಸಿದಾಗ ಉತ್ತರಿಸಿದರುಕೋಫೆಪೊಸಾ (ವಿದೇಶಿ ವಿನಿಮಯದ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ) ಅಡಿಯಲ್ಲಿ ಪ್ರಕರಣವನ್ನು  ಈಗ ತಿರುವನಂತಪುರಂನ ಮಹಿಳಾ ಜೈಲಿನಲ್ಲಿ ದಾಖಲಿಸಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಶ್ರೀನಗರ: ಜಮ್ಮು -ಕಾಶ್ಮೀರ ಕಣಿವೆಯಲ್ಲಿ  2020 ನವೆಂಬರ್ 19ರ  ಗುರುವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿತು. ನಾಲ್ವರು ಉಗ್ರರನ್ನು ಭಾರತೀಯ ಸೇನೆ ಯಮಲೋಕಕ್ಕೆ ಅಟ್ಟಿತು.  ಜಮ್ಮುವಿನ ನಾಗ್ರೋಟಾದ ಬಾನ್ ಟೋಲ್ ಪ್ಲಾಜಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ  ಜೈಶ್--ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಕೊಲ್ಲಲಾಯಿತು.  ಉಗ್ರರು ಟ್ರಕ್ ಮೂಲಕ ದೇಶದೊಳಗೆ ನುಗ್ಗುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಪೊಲೀಸರು ಬಾನ್ ಟೋಲ್ ಪ್ಲಾಜಾದಲ್ಲಿ ಮುಂಜಾನೆ ತಪಾಸಣೆಗೆ ಮುಂದಾಗಿದ್ದರು. ತಪಾಸಣೆ ನಡೆಸುತ್ತಿದ್ದಂತೆ ಒಂದು ಟ್ರಕ್ಕಿನಿಂದ  ಏಕಾಏಕಿ ಗುಂಡು ಹಾರಿತು.  ಇದಕ್ಕೆ ಭಾರತೀಯ ಸೇನೆ ಕೂಡ ಗುಂಡಿನ ಮೂಲಕವೇ ಪ್ರತ್ಯುತ್ತರ ನೀಡಿತು.  ಸುಮಾರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯುತ್ತಿದ್ದಂತೆ, ಟ್ರಕ್ಕಿನಲ್ಲಿದ್ದ ಕೆಲ ಉಗ್ರರು ಸ್ಥಳದಿಂದ ಕಾಲ್ಕಿತ್ತುಕೊಂಡು ಅಲ್ಲೇ ಪಕ್ಕದಲ್ಲಿದ್ದ ಕಾಡಿಗೆ ನುಗ್ಗಿದರು. ಭಾರತೀಯ ಸೇನೆಯ ಯೋಧರು ತಮ್ಮ ಪರಿಶ್ರಮದ ಮೂಲಕ ಟ್ರಕ್ಕಿನಲ್ಲಿದ್ದ ಹಾಗೂ ಕಾಡಿಗೆ ಓಡಿ ಹೋಗಿದ್ದ ನಾಲ್ವರು ಉಗ್ರರನ್ನು ಕೊನೆಗೂ ಕೊಂದು ಹಾಕಿದರು.  ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ಎಲ್ಲಾ ಉಗ್ರರರನ್ನು ಗುಂಡಿನ ಘರ್ಷಣೆಯಲ್ಲಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ) 

2020: ಬೆಂಗಳೂರು:  ’ಟೆಕ್ನಾಲಜಿ ಫಸ್ಟ್(ತಂತ್ರಜ್ಞಾನ ಮೊದಲು) ಕೇಂದ್ರ ಸರ್ಕಾರದ ಪ್ರಮುಖ ನೀತಿಯಾಗಿದ್ದು, ಡಿಜಿಟಲ್ ಹಾಗೂ ಟೆಕ್ ಸಮಸ್ಯೆ ಪರಿಹಾರಗಳಿಗಾಗಿ ನಾವು ಯಶಸ್ವಿ ಮಾರುಕಟ್ಟೆಗಳನ್ನು ರೂಪಿಸಿದ್ದೇವೆ ಎಂದು ಪ್ರಧಾನಿ ಮೋದಿ  2020 ನವೆಂಬರ್ 19ರ  ಗುರುವಾರ ಹೇಳಿದರು.  ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ ಉದ್ಘಾಟಿಸಿದ ಪ್ರಧಾನಿ, ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡುವ ನಮ್ಮ ಉದ್ದೇಶ ಈಡೇರುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದರು. ತಂತ್ರಜ್ಞಾನದ ಮೂಲಕ ನಾವು ಮಾನವ ಘನತೆಯನ್ನು ಹೆಚ್ಚಿಸಿದ್ದೇವೆ. ಇದೇ ತಂತ್ರಜ್ಞಾನದ ಸಹಾಯದಿಂದ ನಮ್ಮ ಲಕ್ಷಾಂತರ ರೈತರು ಕೇಂದ್ರ ಸರ್ಕಾರ ನೀಡಿದ ಆರ್ಥಿಕ ನೆರವನ್ನು ಪಡೆದಿದ್ದಾರೆ ಎಂದು ಮೋದಿ ನುಡಿದರು. ಬೆಂಗಳೂರು ತಂತ್ರಜ್ಞಾನ ಮೇಳದ ೨೩ನೇ ಆವೃತ್ತಿ ಇದಾಗಿದೆ. ಇದಕ್ಕೆ ಮುನ್ನ ೨೨ ಮೇಳಗಳು ಭೌತಿಕ ಪಾಲ್ಗೊಳ್ಳುವಿಕೆಯಿಂದ ನಡೆದು ಪ್ರಪಂಚಾದ್ಯಂತ ಗಮನ ಸೆಳೆದಿದ್ದವು. ಆದರೆ ಬಾರಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ವರ್ಚ್ಯುಯಲ್ ಆಗಿ ಮೇಳ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದನೆ ಹೇಗಿರುತ್ತದೋ ಎಂಬ ಅಂಜಿಕೆ ಆರಂಭದಲ್ಲಿ ಇತ್ತು. ಆದರೆ ದೇಶ ವಿದೇಶಗಳಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿರುವುದು ವಿಶೇಷವಾಗಿ ಗಮನ ಸೆಳೆದಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ನವೆಂಬರ್ 19 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment