ನಾನು ಮೆಚ್ಚಿದ ವಾಟ್ಸಪ್

Saturday, November 16, 2019

ಇಂದಿನ ಇತಿಹಾಸ History Today ನವೆಂಬರ್ 16

2019: ಪತ್ತನಂತಿಟ್ಟ  (ಕೇರಳ): ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಹಸ್ರಾರು ಭಕ್ತರ ಚಾರಣದೊಂದಿಗೆ ೪೧ ದಿನಗಳ ವಾರ್ಷಿಕ ತೀರ್ಥಯಾತ್ರೆ 2019 ನವೆಂಬರ್ 16ರ ಶನಿವಾರ ಆರಂಭಗೊಂಡಿದ್ದು, ೧೦ ಮಂದಿ ಮಹಿಳೆಯರನ್ನು ವಾಪಸ್ ಕಳುಹಿಸಿದ ಬಳಿಕ ಸಂಜೆ  ’ಮಂಡಲ ಮಕರವಿಳಕ್ಕು ಪೂಜೆಗಾಗಿ ದೇವಾಲಯದ ಮಹಾದ್ವಾರವನ್ನು ತೆರೆಯಲಾಯಿತು. ಬೆಟ್ಟದ ಮೇಲಿನ ದೇವಾಲಯದ ಸುತ್ತಮುತ್ತಣ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಚಾರಣಕ್ಕೆ ಬಂದ ಹಿರಿಯ ಮಹಿಳೆಯರಿಗೆ ವಯಸ್ಸಿನ ದಾಖಲೆ ಒದಗಿಸುವಂತೆ ದೇವಾಲಯದಿಂದ ಕಿಮೀ ದೂರದಲ್ಲಿರುವ ಪಂಬಾ ತಳ ಶಿಬಿರದಲ್ಲೇ ಪೊಲೀಸ್ ಸೂಚನೆ ನೀಡಿದರು. ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪು ಹೊರಬಿದ್ದ ಎರಡು ದಿನಗಳ ಬಳಿಕ, ಕೆಲವು ಮಹಿಳಾ ಕಾರ್ಯಕರ್ತರು ಪೂಜೆ ಸಲ್ಲಿಸಲು ಬೆಟ್ಟದ ಮೇಲಿನ ದೇಗುಲವನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿರುವುದರ ಮಧ್ಯೆಯೇ ಶಬರಿಮಲೈ ದೇವಾಲಯದ ಮುಖ್ಯ ಅರ್ಚಕ ಅಥವಾ ತಂತ್ರಿಗಳು ಶನಿವಾರ ಸಂಜೆ ಗಂಟೆಗೆ ಮೂರು ತಿಂಗಳ ತೀರ್ಥಯಾತ್ರಾ ಋತುವಿಗಾಗಿ ಅಯ್ಯಪ್ಪ ಸ್ವಾಮಿ ದೇಗುಲದ ಮಹಾದ್ವಾರವನ್ನು ತೆರೆದರು. ಋತುಮತಿ ವಯೋಮಾನದ ಕನಿಷ್ಠ ೧೦ ಮಂದಿ ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದರು. ತಮ್ಮನ್ನು ದೇವಾಲಯದ ಮೆಟ್ಟಿಲು ಏರಲು ಬಿಡುವಂತೆ ಮಹಿಳೆಯರು ಆಗ್ರಹಿಸಿದಾಗ, ೧೦ರಿಂದ ೫೦ ವರ್ಷ ನಡುವಣ ವಯೋಮಾನದ ಮಹಿಳೆಯರನ್ನು ಬಿಡದಂತೆ ತಮಗೆ ಕಟ್ಟುನಿಟ್ಟಿನ ಆದೇಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಮಹಿಳಾ ಭಕ್ತರಿಗೆ ತಾನು ರಕ್ಷಣೆಗೆ ಒದಗಿಸಲಾಗದು ಎಂದು ರಾಜ್ಯ ಸರ್ಕಾರವು ಈಗಾಗಲೇ ಪ್ರಕಟಿಸಿದೆ. ಆದರೆ ಹಲವಾರು ಮಹಿಳಾ ಕಾರ್ಯಕರ್ತರು ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉನ್ನತ ಹಿಂದೂ ಸಂಘಟನೆ ಶಬರಿಮಲೈ ಕರ್ಮ ಸಮಿತಿಯು ದೇವಾಯ ಪ್ರವೇಶಿಸುವ ಮಹಿಳೆಯರನ್ನು ತಾನು ತಡೆಯುವುದಾಗಿ ಹೇಳಿದೆ. ಮೊದಲ ಒಂದು ಗಂಟೆಯ ಅವಧಿಯಲ್ಲಿ ೧೦,೦೦೦ಕ್ಕೂ ಹೆಚ್ಚು ಮಂದಿ ಭಕ್ತರು ಪೊಲೀಸ್ ಚೆಕ್ ಪೋಸ್ಟ್ ಮೂಲಕ ಹಾದು ಹೋಗಿದ್ದಾರೆ ಎಂದು ಪಂಬಾದಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ/ ನವದೆಹಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಜೊತೆಗೆ ನಿಗದಿಯಾಗಿದ್ದಮಹಾಮೈತ್ರಿ (ಶಿವಸೇನೆ-ಎನ್ಸಿಪಿ- ಕಾಂಗ್ರೆಸ್) ನಾಯಕರ ಭೇಟಿ 2019 ನವೆಂಬರ್ 16ರ ಶನಿವಾರ ದಿಢೀರನೆ ರದ್ದಾಯಿತು. ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇರುವುದರಿಂದ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿ ರದ್ದಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ  ಪ್ರಕಟಿಸಿತು. ನೂತನ ಮೈತ್ರಿಕೂಟದ ನಾಯಕರ ಜಂಟಿ ನಿಯೋಗವು ರಾಜ್ಯಪಾಲ ಕೋಶಿಯಾರಿ ಅವರನ್ನು ಸಂಜೆ .೩೦ ಗಂಟೆಗೆ ಭೇಟಿ ಮಾಡಬೇಕಾಗಿತ್ತು. ಮಧ್ಯೆ, ದೆಹಲಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಶಿವಸೇನಾ ಸಂಸತ್ ಸದಸ್ಯರ ಆಸನ ವ್ಯವಸ್ಥೆ ಬದಲಾಗಿದೆ. ಅವರು ಈಗ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುವರು ಎಂದು ಸಂಸತ್ ಮೂಲಗಳು ತಿಳಿಸಿದವು. ಶಿವಸೇನಾ ಮೂಲಗಳು ಮತ್ತು ಕಾಂಗ್ರೆಸ್ ವಕ್ತಾರರೊಬ್ಬರ ಪ್ರಕಾರ ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಬಹುತೇಕ ನಾಯಕರು ಲಭ್ಯರಿಲ್ಲವಾದ ಕಾರಣ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿಯನ್ನು ರದ್ದು ಪಡಿಸಲಾಯಿತು. ರಾಜ್ಯಪಾಲ ಕೋಶಿಯಾರಿ ಜೊತೆಗಿನ ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ನಾಯಕರ ಭೇಟಿ ಮುಂದೂಡಿಕೆಯಾಗಿದ್ದು, ಮುಂದಿನ ಭೇಟಿಗೆ ರಾಜ್ಯಪಾಲರಿಂದ ಇನ್ನೂ ಸಮಯ ಲಭಿಸಿಲ್ಲ ಎಂದು ಮೂಲಗಳು ಹೇಳಿದವು. ತಾವು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ರಾಜ್ಯದ ಗ್ರಾಮೀಣ ಸಂಕಷ್ಟಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹೊರತು ಸರ್ಕಾರ ರಚನೆಯ ಹಕ್ಕು ಮಂಡನೆಗಾಗಿ ಅಲ್ಲ ಎಂದು ಪಕ್ಷಗಳು ಪ್ರತಿಪಾದಿಸಿದ್ದವು. ‘ಮಳೆಯಿಂದ ತೊಂದರೆಗೆ ಒಳಗಾದ ರೈತರಿಗೆ ತುರ್ತು ನೆರವು ನೀಡಿಕೆ ಸಂಬಂಧವಾಗಿ ಚರ್ಚಿಸಲು ರಾಜ್ಯಪಾಲ ಕೋಶಿಯಾರಿ ಅವರನ್ನು ತಾವು ಭೇಟಿ ಮಾಡುತ್ತಿದ್ದೇವೆ ಹೊರತು ಸರ್ಕಾರ ರಚನೆಯ ವಿಷಯ ಮಾತನಾಡಲು ಅಲ್ಲಎಂದು ಮೈತ್ರಿಕೂಟದ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿ ರೈತರ ವಿಷಯಗಳ ಬಗ್ಗೆ ಚರ್ಚಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಪಣಜಿ: ಭಾರತೀಯ ನೌಕಾಪಡೆಯ ಮಿಗ್ 29ಕೆ ವಿಮಾನ 2019 ನವೆಂಬರ್ 16ರ ಶನಿವಾರ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ಗೋವಾದ ಡಾಬೋಲಿಮ್ನಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಇಬ್ಬರು ತರಬೇತಿ ಪಡೆಯುತ್ತಿದ್ದ  ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾದರು. ತರಬೇತಿಗಾಗಿ ಬಳಸುವ ಮಿಗ್ 29 ಕೆ ವಿಮಾನದಲ್ಲಿದ್ದ ಪೈಲಟ್ ಗಳಾದ ಕ್ಯಾಪ್ಟನ್ ಎಂ.ಶಿಯೋಖಂದ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೌಕದಳ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತು. ತರಬೇತಿಯ ಮಿಗ್ 29ಕೆ ಟೇಕ್ ಗಗನಕ್ಕೇರಿದ ಹೊತ್ತಿನಲ್ಲಿಯೇ ಹಕ್ಕಿಗಳ ಹಿಂಡು ಬಂದು ಬಡಿದ ಪರಿಣಾಮ ಬಲಭಾಗದ ಎಂಜಿನ್ನಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ನಂತರ ಎಡಭಾಗದ ಎಂಜಿನ್ ಸ್ಥಗಿತವಾಗಿರುವುದಾಗಿ ವರದಿ ವಿವರಿಸಿತು. ಗೋವಾದ ನೌಕಾನೆಲೆ ಡಾಬೋಲಿಮ್ ನಲ್ಲಿರುವ ಐಎನ್ ಎಸ್ ಹನ್ಸ್ ನಿಂದ ಮಿಗ್ 29ಕೆ ಗಗನಕ್ಕೆ ಏರಿದಾಗ  ಹಕ್ಕಿಗಳ ಹಿಂಡು ಬಡಿದಿತ್ತು. ಸಂದರ್ಭದಲ್ಲಿ ಎಂಜಿನ್ನಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ಗಳು  ಇಬ್ಬರು ಧೈರ್ಯಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದಾಗಿ ನೌಕಾದಳದ ಪ್ರಕಟಣೆ ವಿವರಿಸಿತು. ಬೆಂಕಿ ಹೊತ್ತಿಕೊಂಡ ಮಿಗ್ 29ಕೆ ಜನನಿಭಿಡ ಪ್ರದೇಶದಿಂದ ದೂರದಲ್ಲಿ ತೆರೆದ ಜಾಗದಲ್ಲಿ ಅಪಘಾತಕ್ಕೀಡಾಗಿತ್ತು ಎಂದು ವರದಿ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮ 2019 ನವೆಂಬರ್ 16ರ ಶನಿವಾರ ರಾಜೀನಾಮೆ ನೀಡಿದರು. ರಾಜೀನಾಮೆಯ ನಂತರ ಮಾತನಾಡಿದ ರಜತ್ ಶರ್ಮ, ಅಧ್ಯಕ್ಷನಾಗಿದ್ದ ವೇಳೆ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಿಕ್ಕ ಅವಕಾಶದಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ ಎಂದರು. ನಾನು ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಬೇಕೆಂದು ಬಂದವ. ಆದರೆ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳ ನಡುವೆ ಕೆಲಸ ಮಾಡುವುದು ಕಷ್ಟ ಎಂದು ಶರ್ಮ ಹೇಳಿದರು. ಹಿರಿಯ ಪತ್ರಕರ್ತರಾಗಿರುವ ರಜತ್ ಶರ್ಮಾ 20 ತಿಂಗಳ ಹಿಂದಷ್ಟೇ ದೆಹಲಿ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗಾದಿಗೇರಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಉಡುಪಿಮೊಬೈಲ್ಕವರಿನ  ಹಿಂದೆ ತುಳಸಿ ದಳಗಳನ್ನು ಇಟ್ಟುಕೊಂಡರೆ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂದು ಯೋಗಗುರು ಬಾಬಾ ರಾಮದೇವ್  2019 ನವೆಂಬರ್ 16 ಶನಿವಾರ ಇಲ್ಲಿ ಬಹಿರಂಗ ಪಡಿಸಿದರು. ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಬೃಹತ್ ಯೋಗ ಶಿಬಿರದಲ್ಲಿ, ವಿಕಿರಣದಿಂದ (ರೇಡಿಯೇಷನ್)  ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು ಮಠದ ಸಿಬ್ಬಂದಿಯೊಬ್ಬರ ಮೊಬೈಲ್ಪಡೆದುಕೊಂಡು ಪ್ರಾತ್ಯಕ್ಷಿಕೆ ಮೂಲಕ  ರಾಮದೇವ್ ತೋರಿಸಿದರು. ಮನೆಯಲ್ಲಿರುವ ಟಿವಿ, ಲ್ಯಾಪ್ಟಾಪ್‌, ಮೊಬೈಲ್ಹಾಗೂ ಎಲೆಕ್ಟ್ರಾನಿಕ್ವಸ್ತುಗಳು ವಿಕಿರಣಗಳನ್ನು ಹೊರಸೂಸುತ್ತವೆ. ಇದರಿಂದ ರಕ್ಷಣೆ ಪಡೆಯಬೇಕಾದರೆ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ತುಳಸಿ ದಳ ಬಳಸಿ ವಿಕಿರಣದಿಂದ ರಕ್ಷಣೆ ಪಡೆಯಬಹುದು ಎಂಬ ವಿಚಾರವನ್ನು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸುತ್ತಿರುವುದಾಗಿಯೂ ಬಾಬಾ ರಾಮದೇವ್ಹೇಳಿದರು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ರಿಲಯನ್ಸ್ಕಮ್ಯುನಿಕೇಷನ್ಸ್ ನಿರ್ದೇಶಕ ಹುದ್ದೆಗೆ ಉದ್ಯಮಿ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಮುಂಬೈ ಷೇರುಪೇಟೆ ಅಧಿಸೂಚನೆ  2019 ನವೆಂಬರ್ 16 ಶನಿವಾರ ಬಹಿರಂಗ ಪಡಿಸಿತು. ಅಂಬಾನಿ ಮಾತ್ರವಲ್ಲದೆ, ಛಾಯಾ ವೀರಾನಿ, ರಾನ್ಕರಾನಿ, ಮಂಜರಿ ಕೇಕರ್ಮತ್ತು ಸುರೇಶ್ರಂಗಾಚಾರ್ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮುಂಬೈ ಷೇರುಪೇಟೆ (ಬಿಎಸ್) ಅಧಿಸೂಚನೆ ತಿಳಿಸಿತು. ಅಂಬಾನಿಛಾಯಾ ವೀರಾನಿ, ಮಂಜರಿ ಕೇಕರ್ . 15ರಂದು, ರಾನ್ಕರಾನಿ . 14ರಂದು ಮತ್ತು ಸುರೇಶ್ ರಂಗಾಚಾರ್ . 13ರಂದು ರಾಜೀನಾಮೆ ನೀಡಿದ್ದಾರೆ. ಮಣಿಕಂಠನ್ ವಿ. ಅವರು ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಅಕ್ಟೋಬರ್ 4ರಂದೇ ರಾಜೀನಾಮೆ ನೀಡಿದ್ದರು. ಮಣಿಕಂಠನ್ ಅವರ ರಾಜೀನಾಮೆ ಮತ್ತು ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ಡಿ. ವಿಶ್ವನಾಥ್ ಅವರ ನೇಮಕಾತಿಗೆ ಸಾಲಗಾರರ ಸಮಿತಿಯ (ಸಿಒಸಿ) ಅನುಮೋದನೆ ದೊರೆಯಬೇಕಾಗಿದೆ.  ಅನುಮೋದನೆ ದೊರೆತ ಬಳಿಕ ಮುಂದಿನ ಪ್ರಕಟಣೆ ಹೊರಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಯಿತು. ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ಕಂಪನಿಯು ಜುಲೈಸೆಪ್ಟೆಂಬರ್ಅವಧಿಯಲ್ಲಿ 30,142 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)



No comments:

Post a Comment