ನಾನು ಮೆಚ್ಚಿದ ವಾಟ್ಸಪ್

Thursday, November 14, 2019

ಇಂದಿನ ಇತಿಹಾಸ History Today ನವೆಂಬರ್ 14

ಹುಬ್ಬಳ್ಳಿ: ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸ್ಕೇಟಿಂಗ್ ಮಾಡುತ್ತಾ  ೫೧.೨೫ ಸೆಕೆಂಡ್ ಗಳಲ್ಲಿ ೪೦೦ ಮೀಟರ್ಕ್ರಮಿಸುವ ಮೂಲಕ ಹುಬ್ಬಳ್ಳಿಯ ಓಜಲ್ ನಲವಡೆ (೧೪) ಮೊದಲ ಪ್ರಯತ್ನದಲ್ಲೇಗಿನ್ನೆಸ್ ವಿಶ್ವದಾಖಲೆಬರೆದರು. ಪ್ರಪಂಚದಲ್ಲೇ ಸ್ಕೇಟಿಂಗ್ನಲ್ಲಿ ದಾಖಲಾದ ಮೊತ್ತ ಮೊದಲಗಿನ್ನೆಸ್ ವಿಶ್ವದಾಖಲೆಇದು ಎಂಬ ಹೆಗ್ಗಳಿಕೆಗೂ ಸಾಧನೆ ಪಾತ್ರವಾಯಿತು. ಬಾಲಕಿ ಓಜಲ್ ನಲವಡೆ ಅವರು ಸುನಿಲ್ ನಲವಡೆ ಮತ್ತು ದೀಪಾ ನಲವಡೆ ದಂಪತಿಯ ಪುತ್ರಿ. ಹುಬ್ಬಳ್ಳಿಯ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯಲ್ಲಿ ನೇ ತರಗತಿ ಓದುತ್ತಿದ್ದಾರೆ. ಕಳೆದ ಎಂಟು ತಿಂಗಳಿಂದ ದಾಖಲೆಗಾಗಿ ಸತತ ಅಭ್ಯಾಸ ನಡೆಸಿದ್ದರು. ಶಿರೂರ ಪಾರ್ಕ್ಟೆಂಡರ್ ಶ್ಯೂರ್ ರಸ್ತೆಯಲ್ಲಿ ವಿಶ್ವದಾಖಲೆ ಸ್ಪರ್ಧೆ ನಡೆಯಿತುಬ್ರಿನ್ನಿನಿಂದ ಆಗಮಿಸಿದ್ದ ತೀರ್ಪುಗಾರ ವಿಕ್ಟರ್ ಫೆನಿಸ್ ಸಮಯ ಘೋಷಣೆ ಮಾಡಿದ್ದು ಬಾಲಕಿ ಓಜಲ್  ಮೂರನೇ ಪ್ರಯತ್ನದಲ್ಲಿ ೫೧. ೨೫ ಸೆಕೆಂಡುಗಳಲ್ಲಿ ೪೦೦ ಮೀಟರ್ ಕ್ರಮಿಸಿದರು. ಒಟ್ಟು ಮೂರು ಪ್ರಯತ್ನ  ನಡೆದಿತ್ತು. ಮೊದಲ ಪ್ರಯತ್ನ ೪೮ ಸೆಕೆಂಡ್ ಮತ್ತು ಎರಡನೇ ಪ್ರಯತ್ನ ತಾಂತ್ರಿಕ ಕಾರಣದಿಂದಾಗಿ ರದ್ದಾಗಿತ್ತು. ಹೀಗಾಗಿ ೫೧.೨೫ ಸೆಕೆಂಡ್ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಯಿತು.   ಹುಬ್ಬಳ್ಳಿಯ ಜನತೆ ಪುಟ್ಟ ಬಾಲಕಿಯ ಅಪೂರ್ವ ದಾಖಲೆಗೆ ಸಾಕ್ಷಿಯಾದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿ ತಾನು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ 2019 ನವೆಂಬರ್ 14ರ ಗುರುವಾರ ವಜಾಗೊಳಿಸಿತು. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ನಿರಾಳತೆ ಲಭಿಸಿತು. ಫ್ರಾನ್ಸ್ ಜೊತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಸಮರ್ಪಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಆದರೆ ಈ ತೀರ್ಪಿನ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಪುನರ್ ಪರಿಶೀಲನಾ ಅರ್ಜಿ ದಾಖಲಿಸಿದ್ದರು. "ಈ ಪ್ರಕರಣದಲ್ಲಿ ತನಿಖೆ ನಡೆಸಲು ಆದೇಶ ಹೊರಡಿಸುವ ಪೂರಕ ಅಂಶಗಳಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡುತ್ತಿದೇವೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್  ಪೀಠ ಹೇಳಿತು. ಈಗ ಎಫ್‌ಐಆರ್ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ರಫೇಲ್‌ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ೨೦೧೯ರ ಮೇ ೧೦ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಸಿಜೆಐ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಕೆ.ಎಂ. ಜೋಸೆಫ್ ಅವರಿದ್ದ ನ್ಯಾಯಪೀಠ  ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತು. ಈ ಮುನ್ನ, ರಫೇಲ್‌ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ೨೦೧೮ರ ಡಿಸೆಂಬರ್ ೧೪ರಂದು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ, ’ಚೌಕೀದಾರ್‌ಚೋರ್ ಹೈ ಎಂದು ನ್ಯಾಯಾಲಯವನ್ನೇ ಉಲ್ಲೇಖಿಸಿ ಮಾತನಾಡಿದ್ದ ರಾಹುಲ್ ಗಾಂದಿ ಅವರಿಗೆ, ಭವಿಷ್ಯದಲ್ಲಿಎಚ್ಚರಿಕೆಯಿಂದ ಮಾತನಾಡುವಂತೆ ಪೀಠವು ಎಚ್ಚರಿಕೆ ನೀಡಿ ಅವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಖಟ್ಲೆಯನ್ನೂ ಕೂಡಾ ಸುಪ್ರೀಂಕೋರ್ಟ್  2019 ನವೆಂಬರ್ 14ರ ಗುರುವಾರ ರದ್ದು ಪಡಿಸಿತು. ರಫೇಲ್‌ಯುದ್ಧ ವಿಮಾನಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ’ಚೌಕೀದಾರ್‌ಚೋರ್ ಹೈ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ ಎಂಬ ಕಾಂಗ್ರೆಸ್ ಹಿಂದಿನ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ವಿರುದ್ಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಸಲ್ಲಿಸಿದ್ದ ಕ್ಷಮೆಯಾಚನೆಯನ್ನು ಅಂಗೀಕರಿಸಿದ ಪೀಠ ನ್ಯಾಯಾಂಗ ನಿಂದನೆ ಪ್ರಕರಣಕೈ ಬಿಟ್ಟಿರುವುದಾಗಿ ತೀರ್ಪು ನೀಡಿತು. ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ತ್ರಿಸದಸ್ಯ ಪೀಠವು, ’ಚೌಕೀದಾರ್‌ಚೋರ್ ಹೈ ಎಂಬ ಹೇಳಿಕೆ ಕುರಿತು ರಾಹುಲ್‌ಗಾಂಧಿ ಸಲ್ಲಿಸಿದ್ದ ಕ್ಷಮೆಯಾಚನೆ ಪ್ರಮಾಣ ಪತ್ರವನ್ನು  ಸ್ವೀಕರಿಸಿ, ಮುಂದಕ್ಕೆ ಎಚ್ಚರಿಕೆಯಿಂದ ಹೇಳಿಕೆ ನೀಡುವಂತೆ ನಿರ್ದೇಶಿಸಿ ಮೊಕದ್ದಮೆಯನ್ನು ಕೈಬಿಟ್ಟಿರುವುದಾಗಿ ಹೇಳಿತು.  ರಫೇಲ್‌ಯುದ್ಧ ವಿಮಾ ಖರೀದಿ ವಿಚಾರದಲ್ಲಿ ಚೌಕೀದಾರ್ ಚೋರ್ ಹೈ ಎಂಬ ತನ್ನ ಹೇಳಿಕೆಯನ್ನು ಸುಪ್ರೀಂಕೋರ್ಟ್ ಒಪ್ಪಿದೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ನ್ಯಾಯಾಂಗ ನಿಂದನೆ ಖಟ್ಲೆ ದಾಖಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:  ರಫೇಲ್ ವ್ಯವಹಾರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ವ್ಯವಹಾರದ ಬಗ್ಗೆ ಜಂಟಿ ಸಂಸದೀಯ ತನಿಖೆಗೆ ತತ್ ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ನವೆಂಬರ್ 14ರ ಗುರುವಾರ ಆಗ್ರಹಿಸಿದರು. ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರು ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ತನಿಖೆಗೆಮಹಾದ್ವಾರವನ್ನುತೆರೆದಿದ್ದಾರೆಎಂದು ಹೇಳಿದರು. ಫ್ರಾನ್ಸಿನ ಡಸಾಲ್ಟ್ ಏವಿಯೇಶನ್ ಕಂಪೆನಿಯಿಂದ ೩೬ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದ ವಹಿವಾಟಿನ ಬಗ್ಗೆ ತನಿಖೆಗಾಗಿ ಎಫ್ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ಕೋರಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬಳಿಕ ಕಾಂಗ್ರೆಸ್ ನಾಯಕ ಆಗ್ರಹ ಮಾಡಿದರು. ೩೬ ಯುದ್ಧ ರಫೇಲ್ ವಿಮಾನಗಳ ಖರೀದಿ ಪ್ರಕ್ರಿಯೆಯ ನಿರ್ಣಯಕ್ಕೆ ಸಂಬಂಧಿಸಿಂತೆ ಸಂಶಯ ಪಡುವಂತಹುದೇನೂ ಇಲ್ಲ ಎಂಬುದಾಗಿ ೨೦೧೮ ಡಿಸೆಂಬರ್ ೧೪ರಂದು ನೀಡಿದ್ದ ತನ್ನ ತೀರ್ಪಿನ ಪುನರ್ ಪರಿಶೀಲನೆ ಕೋರಿ ದಾಖಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇದಕ್ಕೆ ಮುನ್ನ ವಜಾಗೊಳಿಸಿತ್ತು. ‘ಪುನರ್ ಪರಿಶೀಲನೆ ಅರ್ಜಿಗಳಲ್ಲಿ ಯಾವುದೇ ಅರ್ಹತೆ ನಮಗೆ ಕಾಣುತ್ತಿಲ್ಲಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರ ಪೀಠ ಹೇಳಿತ್ತು. ಆಪಾದನೆಗಳಿಗೆ ಸಂಬಂಧಿಸಿದಂತೆಸಂಚಾರೀ ತನಿಖೆಗೆ ಆದೇಶ ನೀಡಬೇಕಾದ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಮೂರ್ತಿಗಳು ಬಂದಿದ್ದಾರೆ ಎಂದು ತೀರ್ಪನ್ನು ಓದುತ್ತಾ ನ್ಯಾಯಮೂರ್ತಿ ಕೌಲ್ ಹೇಳಿದ್ದರು. ಪ್ರತ್ಯೇಕ ತೀರ್ಪು ನೀಡಿದ ನ್ಯಾಯಮೂರ್ತಿ ಜೋಸೆಫ್ ಅವರು, ತಾವು ಕಾರಣ ಕೊಟ್ಟಿರುವ ಕೆಲವು ಅಂಶಗಳಿಗೆ ಒಳಪಟ್ಟು ಮುಖ್ಯ ತೀರ್ಪನ್ನು ತಾವು ಒಪ್ಪಿರುವುದಾಗಿ ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂಬುದಾಗಿ ೨೦೧೮ರ ಸೆಪ್ಟೆಂಬರ್ ೨೮ರಂದು ನೀಡಲಾಗಿದ್ದ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಸುಮಾರು ೬೦ಕ್ಕೂ ಹೆಚ್ಚಿನ ಅರ್ಜಿಗಳ ವಿಚಾರಣೆಯನ್ನು  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು 2019 ನವೆಂಬರ್ 14ರ ಗುರುವಾರ ವಿಸೃತ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ  ವರ್ಗಾವಣೆ ಮಾಡಿತು.  ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ  ರೋಹಿಂಟನ್ ನಾರಿಮನ್, ಡಿ.ವೈ. ಚಂದ್ರಚೂಡ್, .ಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕರಣವನ್ನು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು. ಸಪ್ತ ಸದಸ್ಯ ಪೀಠವು ಮಸೀದಿಗಳಿಗೆ ಮಹಿಳಾ ಪ್ರವೇಶ ಮತ್ತು ದಾವೂದಿ ಬೊಹ್ರಾ ಸಮುದಾಯದಲ್ಲಿನ ಮಹಿಳಾ ಜನನಾಂಗ ಛೇದನ ಪದ್ಧತಿ ಸೇರಿದಂತೆ ವಿವಿಧ ಧಾರ್ಮಿಕ ವಿಷಯಗಳನ್ನೂ ಪುನರ್ ಪರಿಶೀಲನೆ ಮಾಡಲಿದೆ. ‘ದೇವಾಲಯ ಪ್ರವೇಶಕ್ಕೆ ಯಾರನ್ನೂ ನಿರ್ಬಂಧಿಸಲು ಸಾಧ್ಯವಿಲ್ಲ. ಇದು ಕೇವಲ ಹಿಂದೂ ಮಹಿಳೆಯರ ದೇವಾಲಯ ಪ್ರವೇಶ ವಿಚಾರವಷ್ಟೇ ಅಲ್ಲ. ಮುಸ್ಲಿಮರು, ಪಾರ್ಸಿಗಳ ವಿಚಾರವೂ ಇದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿದೆ. ಹೀಗಾಗಿ, ಬಗ್ಗೆ ವಿಸ್ತೃತವಾದ ಮತ್ತು ಚರ್ಚೆಯಾಗಬೇಕಾಗಿದೆ. ಆದ್ದರಂದ ಏಳು ನ್ಯಾಯಮೂರ್ತಿಗಳ ವಿಸ್ತೃತ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿದೆಎಂದು ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿತು.  ವಿಸ್ತೃತ ವಿಚಾರಣೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಾರಿಮನ್ ವಿರೋಧ ವ್ಯಕ್ತಪಡಿಸಿದರು.  ವಿಸ್ತೃತ ಪೀಠಕ್ಕೆ ಒಪ್ಪಿಸಲು ಪಂಚ ಸದಸ್ಯ ಪೀಠವು ಸರ್ವಾನುಮತಿಯ ಒಪ್ಪಿಗೆ ನೀಡಿದರೂ, ೨೦೧೮ರ ಸುಪ್ರೀಂಕೋರ್ಟ್ ನಿರ್ಣಯದ ಪುನರ್ ಪರಿಶೀಲನೆ ಕೋರಿದ ಅರ್ಜಿಗಳನ್ನು ಸಪ್ತ ಸದಸ್ಯ ಪೀಠಕ್ಕೆ ಒಪ್ಪಿಸುವ ಬಗ್ಗೆ ಪೀಠವು : ಬಹುಮತದ ಭಿನ್ನ ಅಭಿಪ್ರಾಯಗಳ ತೀರ್ಪು ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment