ನಾನು ಮೆಚ್ಚಿದ ವಾಟ್ಸಪ್

Monday, November 11, 2019

ಇಂದಿನ ಇತಿಹಾಸ History Today ನವೆಂಬರ್ 11

2019: ನವದೆಹಲಿ/ ಮುಂಬೈ: ರಾಜಕೀಯ ಕಗ್ಗಂಟಿನಲ್ಲಿ ಸಿಲುಕಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಬೆಂಬಲಪತ್ರ ಸಲ್ಲಿಸಲು ವಿಫಲಗೊಂಡ ಶಿವಸೇನೆಗೆ ಇನ್ನೂ ಮೂರು ದಿನಗಳ ಕಾಲಾವಕಾಶ ನೀಡಲು ನಿರಾಕರಿಸಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ೨೮೮ ಸದಸ್ಯಬಲದ ವಿಧಾನಸಭೆಯಲ್ಲಿ ೩ನೇ ದೊಡ್ಡ ಪಕ್ಷವಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ  (ಎನ್ಸಿಪಿ) ಸರ್ಕಾರ ರಚಿಸುವಂತೆ 2019 ನವೆಂಬರ್ 11ರ ಸೋಮವಾರ ಆಹ್ವಾನ ನೀಡಿದರು. ಸರ್ಕಾರ ರಚನೆಯ ಹಕ್ಕು ಮಂಡಿಸಲು ಮಂಗಳವಾರ ರಾತ್ರಿ .೩೦ರವರೆಗೆ ರಾಜ್ಯಪಾಲರು ಕಾಲಾವಕಾಶ ನೀಡಿದ್ದಾರೆ ಎಂದು ಎನ್ಸಿಪಿ ನಾಯಕ ಜಯಂತ್ ಪಾಟೀಲ್ ತಿಳಿಸಿದರು.  ‘ಶಿವಸೇನಾ ನಾಯಕರ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ತಮ್ಮ ಇಚ್ಛೆಯನ್ನು ವ್ಯಕ್ತ ಪಡಿಸಿತು. ಆದಾಗ್ಯೂ, ಅವರು ಅಗತ್ಯವಾದ ಬೆಂಬಲದ ಪತ್ರವನ್ನು ಸಲ್ಲಿಸಲಿಲ್ಲ. ಅಲ್ಲದೆ, ಬೆಂಬಲ ಪತ್ರಗಳನ್ನು ಸಲ್ಲಿಸುವ ಸಲುವಾಗಿ ಗಡುವನ್ನು ಮೂರು ದಿನಗಳ ಅವಧಿಗೆ ವಿಸ್ತರಿಸುವಂತೆ ಕೋರಿ ಪತ್ರ ಸಲ್ಲಿಸಿದರು. ಗಡುವನ್ನು ಇನ್ನಷ್ಟು ವಿಸ್ತರಿಸುವಲ್ಲಿ ತಮ್ಮ ಅಸಹಾಯಕತೆಯನ್ನು ರಾಜ್ಯಪಾಲರು ವ್ಯಕ್ತ ಪಡಿಸಿದರು ಎಂದು ರಾಜಭವನದ ಪ್ರಕಟಣೆ ತಿಳಿಸಿತು. ಇದರೊಂದಿಗೆ ಉದ್ಧವ್ ಠಾಕ್ರೆ ಅವರ ‘ಮುಖ್ಯಮಂತ್ರಿ ಸ್ಥಾನ’ದ ಕನಸಿಗೆ ಹಿನ್ನಡೆಯಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರನ್ನು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈಯ ಬಾಂದ್ರಾದಲ್ಲಿ ಇರುವ ಲೀಲಾವತಿ ಆಸ್ಪತೆಗೆ ದಾಖಲಿಸಲಾಯಿತು. ಇದೇ ವೇಳೆಗೆ 2019 ನವೆಂಬರ್ 11ರ ಸೋಮವಾರ ಬೆಳಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿನ ಏಕೈಕ ಶಿವಸೇನಾ ಸಚಿವ ಅರವಿಂದ ಸಾವಂತ್ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರುಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ಶಿವಸೇನೆಯ ಬಿಜೆಪಿ ವಿರೋಧಿ ದಾಳಿಯಲ್ಲಿ ಮುಂಚೂಣಿಯಲ್ಲಿದ್ದ ಸಂಜಯ್ ರಾವತ್ ಅವರಿಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಹೇಳಿದವು.  ‘ಕಳೆದ ಕೆಲವು ದಿನಗಳಿಂದ ಎದೆ ನೋವು ಕಾಣಿಸುತ್ತಿರುವುದಾಗಿ ರಾವತ್ ಅವರು ಹೇಳಿಕೊಂಡಿದ್ದರು. ಅವರು ಸೋಮವಾರ ವೈದ್ಯಕೀಯ ತಪಾಸಣೆಗಾಗಿ ಹೋಗಿದ್ದರು. ವೈದ್ಯರು ಅವರಿಗೆ ಒಂದು ಅಥವಾ ಎರಡು ದಿನಗಳ ವಿಶ್ರಾಂತಿಗೆ ಸಲಹೆ ಮಾಡಿದ್ದಾರೆ. ನಾಳೆ (ಮಂಗಳವಾರ) ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಬಹುದು. ಗಂಭೀರವಾದ್ದೇನೂ ಇಲ್ಲಎಂದು ಸಂಜಯ್ ಅವರ ಸಹೋದರ ಸುನಿಲ್ ರಾವತ್ ಹೇಳಿದರು. ಸುನಿಲ್ ರಾವತ್ ಅವರು ಕೂಡಾ ವಿಖ್ರೋಲಿಯಿಂದ  ಶಾಸಕರಾಗಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು 2019 ನವೆಂಬರ್ 10ರ ಭಾನುವಾರ ೨೮೮ ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ೫೬ ಶಾಸಕರೊಂದಿಗೆ ಎರಡನೇ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ಸರ್ಕಾರ ರಚಿಸುವಂತೆ ಆಹ್ವಾನಿಸಿ ಪ್ರತಿಕ್ರಿಯಿಸಲು ೨೪ ಗಂಟೆಗಳ ಕಾಲಾವಕಾಶ ನೀಡಿದ ಬಳಿಕ ಬೆಳವಣಿಗೆಯಾಯಿತು. ಸರ್ಕಾರ ರಚನೆಯ ಆಹ್ವಾನಕ್ಕೆ ಪ್ರತಿಕ್ರಿಯಿಸಲು 2019 ನವೆಂಬರ್ 11ರ ಸೋಮವಾರ ಸಂಜೆ .೩೦ರವರೆಗಿನ ಗಡುವನ್ನು ರಾಜ್ಯಪಾಲರು ನೀಡಿದ್ದರು.  ವಿಧಾನಸಭೆಯಲ್ಲಿ ೧೦೫ ಸದಸ್ಯ ಬಲದೊಂದಿಗೆ ದೊಡ್ಡ ಪಕ್ಷವಾಗಿರುವ  ಭಾರತೀಯ ಜನತಾ ಪಕ್ಷವು ಸಂಖ್ಯಾ ಬಲ ಇಲ್ಲದೆ ಕಾರಣಕ್ಕಾಗಿ ಸರ್ಕಾರ ರಚನೆಗೆ ನಿರಾಕರಿಸಿದ ಬಳಿಕ ರಾಜ್ಯಪಾಲರು ಶಿವಸೇನೆಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ನಿಟ್ಟಿನಲ್ಲಿ ತಿಳುವಳಿಕೆಯೊಂದಕ್ಕೆ ಬರಲು ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ತೀವ್ರ ಮಾತುಕತೆ ನಡೆಸಿದ್ದವು. ಕಾಂಗ್ರೆಸ್ ಪಕ್ಷವು ಮೈತ್ರಿಕೂಟ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಬಹುದು ಎಂಬ ವರದಿಗಳಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಸಂಗೀತ ಕ್ಷೇತ್ರದ ದಂತಕತೆಯಾಗಿರುವ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (೯೦) ಅವರು ಅಸ್ವಸ್ಥರಾಗಿದ್ದು, ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ 2019 ನವೆಂಬರ್ 11ರ ಸೋಮವಾರ ದಾಖಲು ಮಾಡಲಾಯಿತು. ನಸುಕಿನಲ್ಲಿ ಆಸ್ಪತ್ರೆಗೆ ದಾಖಲಾದ ಲತಾ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಸ್ಪತ್ರೆ ಮೂಲಗಳು ತಿಳಿಸಿದವು. ಲತಾ ಮಂಗೇಶ್ಕರ್ ಅವರನ್ನು ಉಸಿರಾಟದ ಸಮಸ್ಯೆ ಕಾಣಿಕೊಂಡ ಬಳಿಕ ನಸುವಿನ ಗಂಟೆಗೆ ಆಸ್ಪತ್ರೆಗೆ ಕರೆತರಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದೆ ಎಂದು ಮೂಲಗಳು ಹೇಳಿದವು. ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಂಸ್ಲೆ ಅವರು ಬಳಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ‘ಲತಾ ಮಂಗೇಶ್ಕರ್ ಅವರು ತೀವ್ರವಾದ ವೈರಲ್ ಸೋಂಕಿಗೆ ತುತ್ತಾಗಿದ್ದರು. ಆದರೆ ಈಗ ಚೇತರಿಸುತ್ತಿದ್ದಾರೆ ಎಂದು ಹಿರಿಯ ಗಾಯಕಿಯ ಸೋದರ ಸೊಸೆ ರಚನಾ ಶಾ ಹೇಳಿದರುಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ. ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರನ್ನು ಸಂಸತ್ತಿನ ಹಣಕಾಸು ಸ್ಥಾಯೀ ಸಮಿತಿಗೆ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು 2019 ನವೆಂಬರ್ 11ರ ಸೋಮವಾರ ನಾಮನಿರ್ದೇಶನ ಮಾಡಿದರು. ಪಕ್ಷ ಸಹೋದ್ಯೋಗಿ ದಿಗ್ವಿಜಯ್ ಸಿಂಗ್ ಬದಲಿಗೆ ಮನಮೋಹನ್ ಸಿಂಗ್ ಅವgನ್ನು ನಾಮನಿರ್ದೇಶನ ಮಾಡಲಾಯಿತು.  ರಾಜ್ಯಸಭಾ ಬುಲೆಟಿನ್ ಪ್ರಕಾರ ದಿಗ್ವಿಜಯ್ ಸಿಂಗ್ ಅವರನ್ನು ಈಗ ನಗರಾಭಿವೃದ್ಧಿ ಸಂಸದೀಯ ಸ್ಥಾಯೀ ಸಮಿತಿಗೆ ಮೇಲ್ಮನೆ ಸಭಾಪತಿಯವರು ನಾಮನಿರ್ದೇಶನ ಮಾಡಿದ್ದಾರೆ. ರಾಜ್ಯಸಭಾ ಸಭಾಪತಿಯವರು ರಾಜ್ಯಸಭೆಯ ಸದಸ್ಯ ಮನಮೋಹನ್ ಸಿಂಗ್ ಅವರನ್ನು ಸಂಸದೀಯ ಸ್ಥಾಯಿ ಸಮಿತಿಗೆ ದಿಗ್ವಿಜಯ್ ಸಿಂಗ್ ಅವರ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ದಿಗ್ವಿಜಯ್ ಸಿಂಗ್ ಅವರನ್ನು ಕೂಡಾ ನಗರಾಭಿವೃದ್ಧಿ ಸ್ಥಾಯಿ ಸಮಿತಿಗೆ ಸಭಾಪತಿಯವರು ನಾಮನಿರ್ದೇಶನ ಮಾಡಿದ್ದಾರೆಎಂದು ಬುಲೆಟಿನ್ ಹೇಳಿತು.  ಮೂಲಗಳ ಪ್ರಕಾರ, ಮಾಜಿ ಪ್ರಧಾನಿ ಹಾಗೂ ೧೯೯೧-೧೯೯೬ರಲ್ಲಿ ಹಣಕಾಸು ಸಚಿವರೂ, ೨೦೧೪ ಸೆಪ್ಟೆಂಬರ್ನಿಂದ ೨೦೧೯ ಮೇವರೆಗೆ ಸಮಿತಿಯ ಸದಸ್ಯರೂ ಆಗಿದ್ದ ಮನಮೋಹನ್ ಸಿಂಗ್ ಅವರನ್ನು ನಾಮನಿರ್ದೇಶನ ಮಾಡಲು ಅನುವಾಗುವಂತೆ ದಿಗ್ವಿಜಯ್ ಸಿಂಗ್ ಅವರು ಹಣಕಾಸು ಸ್ಥಾಯೀ ಸಮಿತಿಗೆ ರಾಜೀನಾಮೆ ನೀಡಿದ್ದರು. ೨೦೧೯ರ ಜೂನ್ ತಿಂಗಳಲ್ಲಿ ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದಿದ್ದ ಮನಮೋಹನ್ ಸಿಂಗ್ ಅವರನ್ನು ಆಗಸ್ಟ್ ತಿಂಗಳಲ್ಲಿ ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಮತ್ಸ್ಯ ಕನ್ಯೆಯರ ಬಗೆಗಿನ ದಂತ ಕತೆಗಳು ಜನಜನಿತ. ಆದರೆ ಅವುಗಳ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಿಲ್ಲ. ಈಗ ಮಾನವನ ಮುಖದಂತೆ ತಲೆಯನ್ನು ಹೊಂದಿರುವ ಮೀನೊಂದು ಚೀನಾದಲ್ಲಿ ಕಂಡು ಬಂದಿದ್ದು, ಅದರ ವಿಡಿಯೋ ಇದೀಗ ವೈರಲ್ ಆಯಿತು.. ಚೀನದ ಮಿಯಾವೋ ಗ್ರಾಮಕ್ಕೆ ಭೇಟಿ ನೀಡಿದ್ದ ಮಹಿಳೆಯೋರ್ವರು ಸಮೀಪ ತೊರೆಯಲ್ಲಿ ಈಜಾಡುತ್ತಿದ್ದ ಮೀನನ್ನು ಕುತೂಹಲದಿಂದ ಗಮನಿಸಿದಾಗ ಮಾನವನ ಮುಖ ಹೋಲುವ ಮೀನು ಕಂಡುಬಂದಿತು ಎನ್ನಲಾಯಿತು. ತತ್ ಕ್ಷಣ  ಆ ಮಹಿಳೆ ಅದನ್ನು ಅವರು, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ಮಾಡಿದರು. ಕೆಲವೇ ಕ್ಷಣಗಳಲ್ಲಿ ಅದು ಜಗತ್ತಿನಾದ್ಯಂತ ವೈರಲ್ಆಯಿತು. 14 ಸೆಕೆಂಡ್ಗಳ ಈ ವೀಡಿಯೋ ಈಗ ಚೀನ ಸಹಿತ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕುತೂಹಲ ನಿರ್ಮಿಸಿತು. ಇದೊಂದು ಭಯ ಹುಟ್ಟಿಸುವ ವೀಡಿಯೋ ಎಂದು ಹಲವರು ಬರೆದುಕೊಂಡರೆ, ಇನ್ನಿತರರು ಅದ್ಭುತ ಎಂದು ಬಣ್ಣಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment