ನಾನು ಮೆಚ್ಚಿದ ವಾಟ್ಸಪ್

Saturday, November 2, 2019

ಇಂದಿನ ಇತಿಹಾಸ History Today ನವೆಂಬರ್ 02

2019: ನವದೆಹಲಿ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 2019 ನವೆಂಬರ್ 02ರ ಶನಿವಾರ ರಾತ್ರಿ ಸ್ಪಷ್ಟಪಡಿಸಿದರು.  ಬಿಜೆಪಿ ಜತೆ ಸರ್ಕಾರ ರಚನೆಗೆ ಮುಂದಾಗದ ಶಿವಸೇನೆಗೆ ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ್ರ ಬೆಂಬಲ ನೀಡಲಿದೆ ಎನ್ನಲಾಗಿತ್ತು.  ಶಿವಸೇನೆ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸಬಹುದು ಎಂದು ಮಹಾರಾಷ್ಟ್ರದ ಕೆಲವು ಕಾಂಗ್ರೆಸ್ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶಿವಸೇನೆ ಜತೆಗಿನ ಮೈತ್ರಿ ಬಗ್ಗೆ ಸೋನಿಯಾ ಗಾಂಧಿ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದು ವೇಳೆಯಲ್ಲಿ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿರುವ ಹಾಗೂ ಬಿಜೆಪಿಯೊಂದಿಗೆ ಚುನಾವಣಾಪೂರ್ಣ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿದವು. ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ನೇತೃತ್ವದ ತಂಡ ಸೋನಿಯಾ ಗಾಂಧಿಯವರ ಮುಂದೆ ಶಿವಸೇನೆ ಜತೆಗಿನ ಮೈತ್ರಿ ಕುರಿತು ಪ್ರಸ್ತಾಪ ಮಾಡಿತ್ತು. ಬಾಳಾಸಾಹೇಬ್ ಥೋರಟ್ ಜತೆಗೆ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ವಿಜಯ್ ವಡೇಟ್ಟಿವಾರ್ ಮತ್ತು ಮಣಿಕ್ರಾವ್ ಠಾಕ್ರೆ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಮುಂಬೈ: ಮುಖ್ಯಮಂತ್ರಿ ಹುದ್ದೆ ಹಾಗೂ ಅಧಿಕಾರದ ಸಮಾನ ಹಂಚಿಕೆಯ ಪಟ್ಟು ಹಿಡಿದಿರುವ ಶಿವಸೇನೆ ತನ್ನ ಪಟ್ಟನ್ನು ಸ್ವಲ್ಪ ಸಡಿಸಿಲಿದ್ದರೂ ಸರ್ಕಾರ ರಚನೆಯ ತಿಕ್ಕಾಟವನ್ನು ಮುಂದುವರೆಸಿವೆ ಎಂಬ ವರದಿಗಳ ಮಧ್ಯೆಯೇ ನ್ಯಾಷನಲಿಸ್ಟ್  ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು 2019 ನವೆಂಬರ್ 02ರ ಶನಿವಾರ ಮಳೆಹಾನಿ ಪ್ರದೇಶಗಳ ತಮ್ಮ ಭೇಟಿಯನ್ನು ದಿಢೀರನೆ ರದ್ದುಪಡಿಸಿ ಮುಂಬೈಗೆ ವಾಪಸಾಗಿ, ಪಕ್ಷ ಪ್ರಮುಖರ ಸಭೆ ಕರೆದರು. ಶರದ್ ಪವಾರ್ ಅವರು ತಮ್ಮ ದೆಹಲಿ ಭೇಟಿಯನ್ನೂ ಹಿಂದೂಡಿದ್ದಾರೆ ಎಂದು ನಂಬಲಾಗಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿ ಅವರನ್ನು ಭೇಟಿಯಾಗಲು ತೆರಳುವ ಮುನ್ನವೇ ಮುಂಬೈಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ಕರೆದರು. ಶರದ್ ಪವಾರ್ ಅವರು ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ  ಕಾಂಗ್ರೆಸ್ ಮುಖ್ಯಸ್ಥೆ ಜೊತೆಗೆ ಚರ್ಚಿಸಲು ನವೆಂಬರ್ ೪ರ ಸೋಮವಾರ ದೆಹಲಿಗೆ ತೆರಳಬೇಕಾಗಿತ್ತು. ಈಗಿನ ವರದಿಗಳ ಪ್ರಕಾರ ಪವಾರ್ ಅವರು ಭಾನುವಾರವೇ ದೆಹಲಿಗೆ ತೆರಳಬಹುದು ಎಂದು ಹೇಳಲಾಯಿತು.ಬೆಳವಣಿಗೆಗಳ ಬಗ್ಗೆ ಅರಿವು ಇರುವ ವ್ಯಕ್ತಿಗಳ ಪ್ರಕಾರ ಶಿವಸೇನೆಯ ಜೊತೆಗೆ ಸರ್ಕಾರ ರಚಿಸಿ ಕಾಂಗ್ರೆಸ್ ಪಕ್ಷದಿಂದ ಪರೋಕ್ಷ ಬೆಂಬಲ ಪಡೆಯುವ ಸಾಧ್ಯತೆಗಳನ್ನು ಎನ್ಸಿಪಿಯು ಶೋಧಿಸುತ್ತಿದೆ ಎನ್ನಲಾಯಿತು. ಸೇನೆಯಪ್ಲಾನ್ ಬಿ’ ಎಂಬುದಾಗಿ ಬಣ್ಣಿಸಲಾಗಿರುವ ವ್ಯವಸ್ಥೆಯ ಪ್ರಕಾರ ಸಣ್ಣ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲದ ಜೊತೆಗೆ ಸರ್ಕಾರ ರಚನೆಯ ಹಂಚಿಕೆ ರೂಪುಗೊಳ್ಳುತ್ತಿದೆ  ಎಂದು ಹೇಳಲಾಯಿತು. ಪಕ್ಷದ ಕೆಲವು ವಲಯಗಳಲ್ಲಿ ಶಿವಸೇನೆ ಜೊತೆಗೆ ಸರ್ಕಾರ ರಚನೆಗೆ ವಿರೋಧ ಇರುವ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಬಯಸುತ್ತಿಲ್ಲ ಎಂದು ಹೇಳಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಜಮ್ಮು –ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ 2019 ಅಕ್ಟೋಬರ್ 31ರ ಗುರುವಾರ  ಅಸ್ತಿತ್ವಕ್ಕೆ ಬಂದಿವೆ. ಇದರೊಂದಿಗೆ ಭಾರತದ ನಕ್ಷೆಯೂ (ಮ್ಯಾಪ್) ಹೊಸದಾಗಿದೆಹೊಸ ನಕ್ಷೆಯನ್ನು ಕೇಂದ್ರ ಸರ್ಕಾರ 2019 ನವೆಂಬರ್ 02ರ ಶನಿವಾರ ಬಿಡುಗಡೆ ಮಾಡಿತು. ಉಭಯ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಾಗುವುದಕ್ಕೂ ಮುನ್ನ ದೇಶದ ಒಟ್ಟು ರಾಜ್ಯಗಳ ಸಂಖ್ಯೆ 29 ಆಗಿತ್ತು. ಇದರಲ್ಲಿ ಜಮ್ಮುಕಾಶ್ಮೀರ ಮತ್ತು ಲಡಾಖ್ಸಹ ಸೇರಿತ್ತು. ಒಟ್ಟು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 7 ಆಗಿತ್ತು. ಇದೀಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ತಲುಪಿದೆ. ಜಮ್ಮುಕಾಶ್ಮೀರ ಪುನರ್ವಿಂಗಡಣೆ ಕಾಯ್ದೆ 2019ನ್ನು  ಸಂಸತ್ತು ಮೂರು ತಿಂಗಳ ಹಿಂದೆ ಆಗಸ್ಟ್ 5ರಂದು ಅಂಗೀಕರಿಸಿತ್ತು. ಅದರ ಅನ್ವಯ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಕಾರ್ಯಾರಂಭ ಮಾಡಿದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಬ್ಯಾಂಕಾಕ್/ ನವದೆಹಲಿ:ಭಾರತದ ಮೌಲ್ಯಗಳು ಮುಂಬರುವ ವರ್ಷಗಳಲ್ಲಿ ವಿಶ್ವವನ್ನು ರೂಪಿಸುವುದರಲ್ಲಿ ಮಹತ್ವದ ಕಾಣಿಕೆ ಸಲ್ಲಿಸಲಿವೆಎಂದು ಥಾಯ್ಲೆಂಡ್ ಭೇಟಿಯ ತಮ್ಮ ಮೊದಲ ದಿನವೇ (2019 ನವೆಂಬರ್ 02ರ ಶನಿವಾರ) ಪ್ರತಿಪಾದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವವನ್ನು ಸಂಭ್ರಮಿಸಿದರು. ‘ಇದು ಥಾಯ್ಲೆಂಡಿಗೆ ನನ್ನ ಮೊದಲ ಅಧಿಕೃತ ಭೇಟಿ. ಇಲ್ಲಿ ಭಾರತೀಯತೆಯ ಅಗಾಧ ಅನುಭವ ನನಗೆ ಆಗುತ್ತಿದೆ. ಇಡೀ ವಿಶ್ವವೇ ಭಾರತದ ಜೊತೆಗೆ ದೀಪಾವಳಿಯನ್ನು ಆಚರಿಸಿದೆ, ಇಲ್ಲಿ ಕೂಡಾ ಅದೇ ಮರುಕಳಿಸಿರುವುದು ನನಗೆ ಕಾಣುತ್ತಿದೆಎಂದು ಬ್ಯಾಂಕಾಕಿನಲ್ಲಿಸ್ವಾಸ್ದೀ ಪಿಎಂ ಮೋದಿಸಮಾರಂಭದಲ್ಲಿ ಭಾರತೀಯ ಸಮುದಾಯದ ಸದಸ್ಯರ ಜೊತೆ ಸಂವಹನ ನಡೆಸುತ್ತಾ ಮೋದಿ ಹೇಳಿದರು. ಥಾಯ್ಲೆಂಡ್ ಜೊತೆಗೆ ಭಾರತವು ಪ್ರಬಲ ಬಾಂಧವ್ಯವನ್ನು ಹೊಂದಿದೆ. ರಾಣಿ ಮಹಾಚಕ್ರಿ ಸಿರಿಂಧೋರ್ನ್ ಅವರು ಕೂಡಾ ಸಂಸ್ಕೃತ ವಿದ್ವಾಂಸರಾಗಿದ್ದು ಭಾರತದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದರು ಎಂದು ಪ್ರಧಾನಿ ನುಡಿದರು. ‘ಗೆಳೆಯರೇ, ನಮ್ಮ ಬಾಂಧವ್ಯವು ಭಾರತದ ಜೊತೆಗೆ ಇಷ್ಟೊಂದು ಪ್ರಬಲವಾಗಿರುವುದು ಹೇಗೆ? ಇದಕ್ಕೆ ಕಾರಣವೇನು ಎಂದು ಯೋಚಿಸಿದ್ದೀರಾ? ಇದಕ್ಕೆ ಸರಳವಾದ ಉತ್ತರ ಇದೆ: ನಮ್ಮ ಬಾಂಧವ್ಯವು ಸರ್ಕಾರಗಳ ನಡುವೆ ಇರುವ ಬಾಂಧವ್ಯ ಅಲ್ಲ. ಇತಿಹಾಸದ ಮೂಲಕ ಬೆಸೆದಿರುವ ಬಾಂಧವ್ಯ ಅದು. ಏಕೆಂದರೆ ಪ್ರತಿಯೊಂದು ಚಾರಿತ್ರಿಕ ಘಟನೆಯೂ ನಮ್ಮ ಬಾಂಧವ್ಯಗಳನ್ನು ಹೊಸ ಎತ್ತರಕ್ಕೆ ಏರಿಸಿದೆ’ ಎಂದು ಪ್ರಧಾನಿ ಹೇಳುತ್ತಿದ್ದಂತೆಯೇ ಜನ ಸಮೂಹವುಮೋದಿ, ಮೋದಿಮಂತ್ರದೊಂದಿಗೆ ಸ್ಪಂದಿಸಿತು. ‘ನೀವು  ನನ್ನನ್ನು ಸ್ವಾಸ್ದೀ ಮೋದಿ  ಎಂಬುದಾಗಿ ಹರಸಿದಿರಿ. ಆದರೆ ಅದರ ಅರ್ಥ ಏನು ಎಂಬುದು ನಿಮಗೆ ಗೊತ್ತಿದೆಯೇ? ಇದು ಸಂಸ್ಕೃತ ಪದ- ಸು ಮತ್ತು ಅಸ್ತಿ ಪದಗಳ ಜೋಡಣೆ- ’ಸ್ವಸ್ತಿಇದರ ಅರ್ಥಕಲ್ಯಾಣಎಂಬುದಾಗಿ ಮೋದಿ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:  ರಾಷ್ಟ್ರದ ರಾಜಧಾನಿ ಪ್ರದೇಶದ ವಾಯುಮಾಲಿನ್ಯ ವಿಷಮ ಸ್ಥಿತಿಗೆ ತಲುಪಿದ ಸಂದರ್ಭದಲ್ಲೇ ಕಾಕತಾಳೀಯವಾಗಿ ದೆಹಲಿಗೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಅವರು ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಪರಿವರ್ತಿಸುವ ಮೂಲಕ ವಾಯುಮಾಲಿನ್ಯ ತಡೆಗಟ್ಟುವಂತೆ 2019 ನವೆಂಬರ್ 02ರ ಶನಿವಾರ ಇಲ್ಲಿ ಸಲಹೆ ಮಾಡಿದರು. ಜರ್ಮನಿ - ಭಾರತ ಸಹಭಾಗಿತ್ವ ಯೋಜನೆಗಳ ಅಂಗವಾಗಿ ಭಾರತದಲ್ಲಿ ಪರಿಸರ ಮಿತ್ರ ಹಸಿರು ಸಂಚಾರಕ್ಕೆ ಮುಂದಿನ ಐದು ವರ್ಷಗಳಲ್ಲಿ ಒಂದು ಬಿಲಿಯನ್ ಯೂರೋ ಅಂದರೆ ಪ್ರಸ್ತುತ ವಿನಿಮಯ ದರದಲ್ಲಿ ಸುಮಾರು  ೮೦೦೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವುದಾಗಿ ವಚನ ನೀಡಿದರು. ತಮಿಳುನಾಡಿನ ಬಸ್ಸುಗಳ ರಂಗದಲ್ಲಿ ಸುಧಾರಣೆಗಾಗಿಯೂ ನಾವು ೨೦೦ ಮಿಲಿಯನ್ ಯೂರೋಗಳನ್ನು ನಿಗದಿ ಪಡಿಸಿದ್ದೇವೆ. ದೆಹಲಿಯು ಶುಕ್ರವಾರ ಎದುರಿಸಿದ ವಾಯುಮಾಲಿನ್ಯವನ್ನು ಕಂಡ ಯಾರೇ ಆದರೂ ಡೀಸೆಲ್ ಚಾಲಿತ ಬಸ್ಸುಗಳನ್ನು ವಿದ್ಯುತ್ ಚಾಲಿತ ಬಸ್ಸುಗಳಾಗಿ ಮಾರ್ಪಡಿಸುವುದು ಅತ್ಯುತ್ತಮ ಎಂದು ಅರಿತುಕೊಳ್ಳಬಲ್ಲರು ಎಂದು ಮರ್ಕೆಲ್ ಹೇಳಿದರು. ರಾಷ್ಟ್ರೀಯ ರಾಜಧಾನಿ ಪ್ರದೇಶವು (ಎನ್ಸಿಆರ್) ಕಳೆದ ಎರಡು ವರ್ಷಗಳ ಅವಧಿಯಲ್ಲೇ ಅತ್ಯಂತ ಗರಿಷ್ಠ ವಾಯುಮಾಲಿನ್ಯವನ್ನು ಶುಕ್ರವಾರ ಅನುಭವಿಸಿತ್ತು. ವಾಯು ಗುಣಮಟ್ಟ ಸೂಚ್ಯಂಕವು ಸಂಜೆ ಗಂಟೆಯ ವೇಳೆಗೆ ೪೮೪ಕ್ಕೆ ತಲುಪಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ:  ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ನಡುವೆ 2019 ನವೆಂಬರ್ 02ರ ಶನಿವಾರ  ಘರ್ಷಣೆಯಲ್ಲಿ ಓರ್ವ ವಕೀಲ ತೀವ್ರ ಗಾಯಗೊಂಡರು. ಶನಿವಾರ ಮಧ್ಯಾಹ್ನ ನ್ಯಾಯಲಯದ ಆವರಣದಲ್ಲಿ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಮತ್ತು ವಕೀಲರ ನಡುವೆ ಘರ್ಷಣೆ ನಡೆದಿದ್ದು, ಗೋಲಿಬಾರ್ ಮಾಡಲಾಗಿದ್ದು, ಪೊಲೀಸರ ಗುಂಡೇಟಿಗೆ ವಕೀಲರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವರದಿ ತಿಳಿಸಿತು. ಕೋರ್ಟ್ ಆವರಣದೊಳಗೆ ಆಗಮಿಸುವಾಗ ಪೊಲೀಸರ ವಾಹನ ವಕೀಲರಿಗೆ  ಗುದ್ದಿತು. ವೇಳೆ ಪೊಲೀಸರ ವಿರುದ್ಧ ವಕೀಲರು ಕಿರುಚಾಡಿದರು. ಆಗ ಪೊಲೀಸರು ವಕೀಲರನ್ನು ವಾಹನದೊಳಗೆ ಹಾಕಿ ಹಿಗ್ಗಾಮುಗ್ಗಾ ಥಳಿಸಿದರು. ಒಟ್ಟು ಆರು ಮಂದಿ ಪೊಲೀಸರು ವಕೀಲರಿಗೆ ಮನಬಂದತೆ ಥಳಿಸಿದರು ಎಂದರು ತೀಸ್ ಹಜಾರಿ ಅಸೊಸಿಯೇಷನ್ ಪದಾಧಿಕಾರಿ ಜೈ ಬಿಸ್ವಾಲ್ ಆಪಾದಿಸಿದರು. ಘಟನಾ ಸ್ಥಳಕ್ಕೆ ಯಾರನ್ನೂ ಬಿಡುತ್ತಿಲ್ಲ. ಸ್ಥಳೀಯ ಪೊಲೀಸರು ನಮ್ಮನ್ನು ಕೋರ್ಟ್ ಆವರಣದೊಳಗೆ ಬಿಡದೇ ತಡೆಯುತ್ತಿದ್ದಾರೆ. ವಿಚಾರ ನಾವು ದೆಹಲಿ ಹೈಕೋರ್ಟಿಗೆ ತಿಳಿಸಿದ್ದೇವೆ. ಆರು ಮಂದಿ ವಕೀಲರನ್ನು ಒಳಗೊಂಡ  ನಿಯೋಗ ಹೈಕೋರ್ಟಿಗೆ ತೆರಳಿದೆ ಎಂದು ಜೈ ಬಿಸ್ವಾಲ್ ತಿಳಿಸಿದರು. ಇನ್ನೊಂದೆಡೆ ವಾಹನ ಪಾರ್ಕಿಂಗ್ ವಿಚಾರಕ್ಕೆ ಪೊಲೀಸರು ಮತ್ತು ವಕೀಲರ ಮಧ್ಯೆ ಕೋರ್ಟ್ ಆವರಣದಲ್ಲೇ ವಾಗ್ವಾದ ನಡೆದು, ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಮತ್ತು ವಕೀಲರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment