ನಾನು ಮೆಚ್ಚಿದ ವಾಟ್ಸಪ್

Thursday, August 20, 2020

ಇಂದಿನ ಇತಿಹಾಸ History Today ಆಗಸ್ಟ್ 20

 ಇಂದಿನ ಇತಿಹಾಸ  History Today ಆಗಸ್ಟ್ 20

2020: ಅಯೋಧ್ಯೆ: ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಆರಂಭವಾಗಿದ್ದು, ೩೬-೪೦ ತಿಂಗಳಲ್ಲಿ ಮಂದಿರ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್2020 ಆಗಸ್ಟ್ 20ರ ಗುರುವಾರ ತಿಳಿಸಿತು. ಟ್ರಸ್ಟಿನ ಅಧಿಕೃತ ಟ್ವಿಟರ್ ಖಾತೆಯೂ ದೇಗುಲ ನಿರ್ಮಾಣ ಆರಂಭದ ಕುರಿತು ಮಾಹಿತಿ ನೀಡಿತು. ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಪ್ರಾರಂಭವಾಗಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಅಧ್ಯಯನ ಸಂಸ್ಥೆ (ಸಿಬಿಆರ್), ಚೆನ್ನೈಯ ಐಐಟಿ ಮತ್ತು ಎಲ್ ಅಂಡ್ ಟಿ (ಲಾರ್ಸೆನ್ ಮತ್ತು ಟೂಬ್ರೊ) ಎಂಜಿನಿಯರುಗಳು ಮಂದಿರದ ಸ್ಥಳದಲ್ಲಿ ಮಣ್ಣು ಪರೀಕ್ಷೆಯಲ್ಲಿ ತೊಡಗಿದ್ದಾರೆ. ನಿರ್ಮಾಣ ಕಾರ್ಯವು ೩೬-೪೦ ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ, ಎಂದು ಟ್ವೀಟ್ ತಿಳಿಸಿತು. ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸಿ ಮಂದಿರದ ನಿರ್ಮಾಣ ಮಾಡಲಾಗುವುದು. ಭೂಕಂಪ, ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ತಾಳಿಕೊಳ್ಳುವಂತೆ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸದೇ ಇರಲು ನಿರ್ಧರಿಸಲಾಗಿದೆ, ಎಂದು ಟ್ರಸ್ಟ್ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನೂರು ಒಳ್ಳೆಯ ಕೆಲಸಗಳನ್ನು ಮಾಡಿದ ಕಾರಣಕ್ಕಾಗಿ ಯಾರೇ ಒಬ್ಬ ವ್ಯಕ್ತಿಗೆ ಹತ್ತು ಅಪರಾಧಗಳನ್ನು ಮಾಡಲು ಪರವಾನಗಿ ನೀಡಲು ಸಾಧ್ಯವಿಲ್ಲಎಂದು 2020 ಆಗಸ್ಟ್ 20ರ ಗುರುವಾರ ಹೇಳಿದ ಸುಪ್ರೀಂಕೋರ್ಟ್ ಹೇಳಿಕೆ ಮರುಪರಿಶೀಲನೆಗೆ ವಕೀಲ ಪ್ರಶಾಂತ ಭೂಷಣ್ ಅವರಿಗೆ ಎರಡು ದಿನಗಳ ಗಡುವು ನೀಡಿತು. ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಯಾವುದೇ ದಂಡನೆಯನ್ನು ಹರ್ಷಚಿತ್ತದಿಂದ ಸ್ವೀಕರಿಸುವೆಎಂಬುದಾಗಿ ಪ್ರಶಾಂತ ಭೂಷಣ್ ಅವರು ನೀಡಿದ ಹೇಳಿಕೆಗೆ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ನೀಡಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರ ನ್ಯಾಯಪೀಠವು ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದಾಗಿ ಘೋಷಿತರಾಗಿರುವ ಪ್ರಶಾಂತ ಭೂಷಣ್ ಅವರಿಗೆ ವಿಧಿಸಬೇಕಾದ ಶಿಕ್ಷೆಯ ಬಗ್ಗೆ ಅಹವಾಲು ಆಲಿಸುತ್ತಿದ್ದ ಸಂದರ್ಭದಲ್ಲಿ, ಭೂಷಣ್ ಪರ ವಕೀಲರು ಭೂಷಣ್ ಹೇಳಿಕೆಯನ್ನು ಓದಿ ಹೇಳಿದರು. ಕ್ಷಮೆ ಯಾಚಿಸಲು ನಿರಾಕರಿಸಿದ ಭೂಷಣ್, ಎರಡು ವಿವಾದಾತ್ಮಕ ಟ್ವೀಟ್ಗಳು ತಮ್ಮ ನಿಷ್ಠಾವಂತ ನಂಬಿಕೆಯನ್ನು ಆಧರಿಸಿವೆ ಮತ್ತು ನಾಗರಿಕನಾಗಿ ಹಾಗೂ ನ್ಯಾಯಾಲಯದ ಅಧಿಕಾರಿಯಾಗಿ ಇದು ತಮ್ಮ ಕರ್ತವ್ಯದ ಭಾಗವಾಗಿದೆ ಎಂದು ಸಮರ್ಥಿಸಿದರು. ಹೇಳಿಕೆಯನ್ನು ಮರುಪರಿಶೀಲಿಸುವಂತೆ ನ್ಯಾಯಪೀಠ ಭೂಷಣ್ ಅವರಿಗೆ ಸೂಚಿಸಿತು. ಸಂಬಂಧಪಟ್ಟ ವ್ಯಕ್ತಿಯು ಹೃತ್ಪೂರ್ವಕವಾಗಿ ಪಶ್ಚಾತ್ತಾಪದ ಭಾವವನ್ನು ತೋರಿಸಿದರೆ ಮಾತ್ರ ನ್ಯಾಯಪೀಠವು "ಅತ್ಯಂತ  ಮೃದುವಾಗಿರುತ್ತದೆ" ಎಂದು ನ್ಯಾಯಮೂರ್ತಿಗಳು ಹೇಳಿದರು. "ಕ್ರಿಮಿನಲ್ ನ್ಯಾಯಾಂಗ ನಿಂದನೆಯು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಆದದ್ದು ಆಗಿ ಹೋಗಿದೆ. ಆದರೆ ಸಂಬಂಧಪಟ್ಟ ವ್ಯಕ್ತಿಯು ಪಶ್ಚಾತ್ತಾ ಪಡಬೇಕು ನಾವು ಬಯಸುತ್ತೇವೆ. ವ್ಯಕ್ತಿಯು ಮರುಪರಿಶೀಲಿಸಬೇಕುಎಂದು ನ್ಯಾಯಮೂರ್ತಿ ಮಿಶ್ರ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಹೊಸದಾಗಿ ೫೩,೮೬೬ ಪ್ರಕರಣಗಳು ದಾಖಲಾಗುವುದರೊಂದಿಗೆ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ  2020 ಆಗಸ್ಟ್ 20ರ ಗುರುವಾರ ೨೮ ಲಕ್ಷವನ್ನು ದಾಟಿತು. ಇದೇ ವೇಳೆಗೆ ಚೇತರಿಸಿಕೊಂಡವರ ಸಂಖ್ಯೆ ೨೧ ಲಕ್ಷಕ್ಕೆ ಏರಿತು. ಮರಣ ಪ್ರಮಾಣ ಶೇ.1.90ಕ್ಕೆ ಇಳಿಯಿತು. ಕೊರೋನಾವೈರಸ್ ಸೋಂಕಿನ ಒಟ್ಟು ಪ್ರಕರಣಗಳು ೨೮,೩೬,೯೨೫ ಕ್ಕೆ ಏರಿದರೆ, ಸಾವಿನ ಸಂಖ್ಯೆ ೫೩,೮೬೬ ಕ್ಕೆ ಏರಿದೆ. ಒಂದು ದಿನದಲ್ಲಿ ೯೭೭ ಹೊಸ ಸಾವುಗಳು ವರದಿಯಾಗಿವೆ ಎಂದು ಗುರುವಾರ ಬೆಳಗ್ಗೆ ಗಂಟೆಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು. ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಪರಿಣಾಮವಾಗಿ ಸಂಭವಿಸುತ್ತಿರುವ ಸಾವಿನ ಪ್ರಮಾಣ ಶೇಕಡಾ .೯೦ ಕ್ಕೆ ಇಳಿದಿದೆ ಎಂದು ಮಾಹಿತಿ ಹೇಳಿತು. ದೇಶದಲ್ಲಿ ಪ್ರಸ್ತುತ ಕೊರೋನಾವೈರಸ್ ಸೋಂಕಿನ ,೮೬,೩೯೫ ಸಕ್ರಿಯ ಪ್ರಕರಣಗಳಿವೆ. ಇದು ಒಟ್ಟು ಪ್ರಕರಣಗಳ ಶೇಕಡಾ ೨೪.೨೦ ರಷ್ಟಿದೆ ಎಂದು ಮಾಹಿತಿ ತಿಳಿಸಿತು. ಭಾರತದ ಕೋವಿಡ್-೧೯ ಪ್ರಕರಣಗಳ ಸಂಖ್ಯೆಯು ಆಗಸ್ಟ್ ರಂದು ೨೦ ಲಕ್ಷ ದಾಟಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ) 

2020: ನವದೆಹಲಿ: ಸೆಪ್ಟೆಂಬರ್ ೧೦ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷವು ಚೀನಾ ಗಡಿ ಬಿಕ್ಕಟ್ಟು, ಫೇಸ್ ಬುಕ್ ವಿವಾದ ಮತ್ತು ಕೋವಿಡ್-೧೯ ನಿರ್ವಹಣೆ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಅಧಿವೇಶನಲ್ಲಿ ಬಿರುಗಾಳಿ ಎಬ್ಬಿಸುವ ಸಂಭವ ಇದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಲಡಾಖ್ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗೆ ಫೇಸ್ಬುಕ್ ಸಂಬಂಧದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಕೋವಿಡ್ -೧೯ ಸಾಂಕ್ರಾಮಿಕ ರೋಗದ ನಿಭಾವಣೆ, ಸಾಂಕ್ರಾಮಿಕದ ಪರಿಣಾಮವಾಗಿ ಉಲ್ಬಣಗೊಂಡಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ಮತ್ತು ಕೃಷಿ ಯಾತನೆ ಕುರಿತು ಕಾಂಗ್ರೆಸ್ ಸರ್ಕಾರವನ್ನು ವಾಕ್ ಪ್ರಹಾರಕ್ಕೆ ಗುರಿಯಾಗಿಸುವ ಸಾಧ್ಯತೆಯಿದೆ. ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಾಗಿ ಪಕ್ಷವು ಒತ್ತಾಯಿಸಲಿದೆ ಎಂದು  ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರೊಬ್ಬರು ಹೇಳಿದ್ದಾರೆ. ವಿಶೇಷವಾಗಿ ಜೂನ್ ೧೯ರ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಲಡಾಖ್ನಲ್ಲಿ ಭಾರತೀಯ ಭೂಪ್ರದೇಶದಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಹೇಳಿದ್ದು ವಿವಾದ ಎಬ್ಬಿಸುವ ನಿರೀಕ್ಷೆ ಇದೆ. ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಚೀನಾವನ್ನು ಹೆಸರಿಸದೇ ಇದ್ದುದಕ್ಕಾಗಿ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರ ಮೇಲೆ ದಾಳಿ ಮಾಡಿತ್ತು. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಚೀನೀ ಪಡೆಗಳನ್ನು ಹಿಂದಕ್ಕೆ ಅಟ್ಟಲು ಏನು ಮಾಡಬೇಕೆಂದು ಸರ್ಕಾರ ಪ್ರಸ್ತಾಪಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಲಡಾಖ್ ವಿವಾದಿತ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಸೇನಾ ಮಾತುಕತೆಗಳ ಮಾರ್ಗಕ್ಕೆ ತಡೆ ಬಿದ್ದಿದ್ದು, ಯಥಾಸ್ಥಿತಿಯನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ಭಾರತವು ಕಠಿಣ ಮಾರ್ಗವನ್ನು ಅನುಸರಿಸಿದೆ. ಜೂನ್ ತಿಂಗಳಲ್ಲಿ ಚೀನೀ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಉದ್ವಿಗ್ನತೆ ಹೆಚ್ಚಾಗಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಫೇಸ್ಬುಕ್ ಇಂಡಿಯಾದದುವರ್ತನೆಬಗ್ಗೆ ಚರ್ಚಿಸಲು ಸ್ಥಾಯಿ ಸಮಿತಿ ಸಭೆ ಕರೆಯುವುದಾಗಿ ಪ್ರಕಟಿಸಿದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿ ಅಧ್ಯಕ್ಷ ಶಶಿ ತರೂರ್ ಮತ್ತು ಬಿಜೆಪಿ ಮಧ್ಯೆ ಕದನತೀವ್ರಗೊಂಡಿದ್ದು, ತರೂರ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷತೆಯಿಂದ ಕಿತ್ತು ಹಾಕುವಂತೆ ಬಿಜೆಪಿಯ ಇಬ್ಬರು ಸಂಸತ್ ಸದಸ್ಯರು ಲೋಕಸಭಾಧ್ಯಕ್ಷ ಬಿರ್ಲಾ ಅವರಿಗೆ 2020 ಆಗಸ್ಟ್ 20ರ ಗುರುವಾರ ದೂರು ನೀಡಿ ಆಗ್ರಹಿಸಿದರು. ಶಶಿ ತರೂರ್ ಮತ್ತು ಬಿಜೆಪಿಯ ನಿಶಿಕಾಂತ್ ದುಬೆ ಅವರು ಪರಸ್ಪರರ ವಿರುದ್ಧ ತಮ್ಮ ಸವಲತ್ತುಗಳ ಉಲ್ಲಂಘನೆಯ ಆರೋಪ ಮಾಡಿ, ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ ನಂತರ, ಕೇಸರಿ ಪಕ್ಷದ ಸಂಸದರು ಕಾಂಗ್ರೆಸ್ ನಾಯಕನನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಬಿರ್ಲಾ ಅವರಿಗೆ ಮತ್ತೊಂದು ಮನವಿ ಸಲ್ಲಿಸಿದರು. ‘ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಇನ್ನೊಬ್ಬ ಸದಸ್ಯರನ್ನು ಆಯ್ಕೆ ಮಾಡಲು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ ೨೫೮ ()ಕ್ಕೆ ಸಂಬಂಧಿಸಿದಂತೆ ನಿಯಮ ೨೮೩ನ್ನು ಬಳಸಿದ್ದಕ್ಕಾಗಿತರೂರ್ ಅವರನ್ನು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಅಧ್ಯಕ್ಷತೆಯಿಂದ ಕಿತ್ತು ಹಾಕಬೇಕು ಎಂದು ನಿಶಿಕಾಂತ ದುಬೆ ಅವರು ಲೋಕಸಭಾಧ್ಯಕ್ಷರಿಗೆ ಮನವಿ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಸ್ವಚ್ಛ ಸರ್ವೇಕ್ಷಣ - ೨೦೨೦ರ ಫಲಿತಾಂಶ 2020 ಆಗಸ್ಟ್ 20ರ ಗುರುವಾರ ಪ್ರಕಟವಾಗಿದ್ದು, ಸತತ ನಾಲ್ಕನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ದೇಶದಲ್ಲಿ ಅತಿ ಸ್ವಚ್ಛ ನಗರ ಎಂಬ ಖ್ಯಾತಿ ಪಡೆಯಿತು. ಅತಿ ಸ್ವಚ್ಛ ರಾಜ್ಯದ ಖ್ಯಾತಿಗೆ ಛತ್ತಿಸ್ಗಢ  ಸತತ ಎರಡನೇ ಬಾರಿ ಪಾತ್ರವಾಯಿತು. ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದ ರಿಂದ ೧೦ ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ನಗರ ಪ್ರಥಮ ಸ್ಥಾನ ಪಡೆಯಿತು. ಸತತ ಎರಡು ಬಾರಿ ದೇಶದ ಸ್ವಚ್ಛ ನಗರಿ ಎಂಬ ಬಿರುದು ಪಡೆದ ಮೈಸೂರು ನಗರ ಇದೀಗ ಮತ್ತೆ ವರ್ಷವೂ ಅಗ್ರಸ್ಥಾನಕ್ಕೇರಿತು. ಸಮಗ್ರ ವಿಭಾಗದಲ್ಲಿ ಮೈಸೂರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 20 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment