ನಾನು ಮೆಚ್ಚಿದ ವಾಟ್ಸಪ್

Monday, August 3, 2020

ಇಂದಿನ ಇತಿಹಾಸ History Today ಆಗಸ್ಟ್ 03

ಇಂದಿನ ಇತಿಹಾಸ History Today ಆಗಸ್ಟ್ 03  

2020: ಇಸ್ಲಾಮಾಬಾದ್: ಪಾಕಿಸ್ತಾನದ ಮುಂಚೂಣಿಯ ಸುದ್ದಿವಾಹಿನಿಯಾದಡಾನ್ ಟಿವಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದ ಘಟನೆ  2020 ಆಗಸ್ಟ್  02ರ ಭಾನುವಾರ ಘಟಿಸಿದೆ. ಭಾರತದ ವಿರುದ್ಧ ಸದಾ ಕಾಲ ಕತ್ತಿ ಮಸೆಯು ಪಾಕಿಸ್ತಾನದ  ಪ್ರಮುಖ ಟಿವಿವಾಹಿನಿಯಲ್ಲಿ  ತ್ರಿವರ್ಣ ಧ್ವಜ ಹಾರಾಡುವುದರ ಜೊತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ವಾಕ್ಯ ಕೂಡಾ ಕಂಡು ಬಂದದ್ದು ಎಲ್ಲರ ಹುಬ್ಬೇರಿಸಿತು. ಆದರೆ, ಇದು ತಾಂತ್ರಿಕ ತಪ್ಪಿನಿಂದ ಆಗಿರುವುದಲ್ಲ, ಭಾರತೀಯ ಹ್ಯಾಕರುಗಳು ಪ್ರದರ್ಶಿಸಿದ ಕೈಚಳಕ ಎಂಬುದು ಬೆಳಕಿಗೆ ಬಂದಿದೆ. ಭಾನುವಾರ ಮಧ್ಯಾಹ್ನ .೩೦ಕ್ಕೆ ಡಾನ್ ಸುದ್ದಿ ವಾಹಿನಿಯಲ್ಲಿ ಜಾಹೀರಾತು ಪ್ರಸಾರವಾಗುತ್ತಿದ್ದ ಸಂzರ್ಭದಲ್ಲಿ ಹಾರಾಡುವ ಭಾರತದ  ಧ್ವಜದೊಂದಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂಬ ಸಂದೇಶ ಕಂಡುಬಂದಿತು. ಸುಮಾರು ೪೫ ಸೆಕೆಂಡ್ ಕಾಲ ಡಾನ್ ಟಿವಿ ಪರದೆಯಲ್ಲಿ ಭಾರತದ ಧ್ವಜ ರಾರಾಜಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಘಟನೆಯ ಬಳಿಕ ಹೇಳಿಕೆಹ್ಯಾಕರುಗಳಿಂದ ಟಿವಿ ವಾಹಿನಿ ಹ್ಯಾಕ್ ಆಗಿದೆಎಂದು ಡಾನ್ ತನ್ನ ವೆಬ್ ಸೈಟಿನಲ್ಲಿ ಹೇಳಿಕೆ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಬೇಹುಗಾರಿಕೆ ಆರೋ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ರಕ್ಷಿಸುವ ಸಲುವಾಗಿ ವಕೀಲರನ್ನು ನೇಮಿಸಲು ಭಾರತಕ್ಕೆ ಅವಕಾಶ ನೀಡಬೇಕು ಎಂದು 2020 ಆಗಸ್ಟ್ 03ರ ಸೋಮವಾರ ಆಜ್ಞಾಪಿಸಿದ ಇಸ್ಲಾಮಾಬಾದ್ ಹೈಕೋರ್ಟ್ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆಯನ್ನು 2020 ಸೆಪ್ಟೆಂಬರ್ 3 ಕ್ಕೆ ಮುಂದೂಡಿತು. ವಕೀಲರು ಪಾಕಿಸ್ತಾನ ಪ್ರಜೆಯಾಗಿರಬೇಕು ಎಂದು ಷರತ್ತು ವಿಧಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಜಾಧವ್ ಪರ ಕಾನೂನು ಪ್ರತಿನಿಧಿಯನ್ನು ನೇಮಿಸಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ನೀಡಿತು. ಪಾಕಿಸ್ತಾನದಲ್ಲಿ ವಕಾಲತ್ತು ನಡೆಸಲು ಅರ್ಹರಾಗಿರುವ ವಕೀಲರನ್ನು ತೊಡಗಿಸಿಕೊಳ್ಳಲು ಭಾರತ ಸರ್ಕಾರವನ್ನು ಮತ್ತೊಮ್ಮೆ ಸಂಪರ್ಕಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ ಎಂದು ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಮಾಧ್ಯಮಗಳಿಗೆ ತಿಳಿಸಿದರು. ಪಾಕಿಸ್ತಾನಿ ಕಾನೂನು ತಂಡಕ್ಕೆ ಸಹಾಯ ಮಾಡಲು ಭಾರತೀಯ ವಕೀಲರಿಗೆ ಇಲ್ಲಿಯವರೆಗೆ ಯಾವುದೇ ಅವಕಾಶ ನೀಡಲಾಗಿಲ್ಲ ಎಂದುಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ದಿಗ್ಬಂಧನವನ್ನು (ಲಾಕ್‌ಡೌನ್) ತೆರವುಗೊಳಿಸುವ (ಅನ್ಲಾಕ್) ಮಾಡುವ ಮೂರನೇ ಹಂತದ ಅಡಿಯಲ್ಲಿ ಆಗಸ್ಟ್ ರಿಂದ ಜಿಮ್ನಾಷಿಯಂಗಳು ಮತ್ತು ಯೋಗ ಸಂಸ್ಥೆಗಳಿಗೆ ತೆರೆಯಲು ಕೇಂದ್ರ  ಸರ್ಕಾರ ಅನುಮತಿ ನೀಡಿದೆ. ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) 2020 ಆಗಸ್ಟ್ 03ರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ -೧೯ ಕಂಟೈನ್ ಮೆಂಟ್ (ಧಾರಕ ವಲಯ) ಪ್ರದೇಶಗಳಲ್ಲಿನ ಯೋಗ ಸಂಸ್ಥೆಗಳು ಮತ್ತು ವ್ಯಾಯಾಮಶಾಲೆಗಳಿಗೆ ಮಾತ್ರ ತೆರೆಯಲು ಅನುಮತಿ ನೀಡಲಾಗುವುದಿಲ್ಲ. ೬೫ ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಸಹ-ಅಸ್ವಸ್ಥತೆ ಹೊಂದಿರುವ ಜನರು, ಗರ್ಭಿಣಿಯರು ಮತ್ತು ೧೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮುಚ್ಚಿದ ಸ್ಥಳಗಳಲ್ಲಿ ಇರುವ ಜಿಮ್ನಾಷಿಯಂ ಅಥವಾ ಯೋಗ ಸಂಸ್ಥೆಗಳನ್ನು ಬಳಸದಂತೆ ನಿರ್ದೇಶನ ನೀಡಲಾಗಿದೆ. ಯೋಗ ಕ್ರಿಯೆಗಳನ್ನು ತೆರೆದ ಸ್ಥಳಗಳಲ್ಲಿ ನಡೆಸಬೇಕು. ಫಿಟ್‌ನೆಸ್ ಕೇಂದ್ರಕ್ಕೆ ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಜನಸಂದಣಿಯನ್ನು ತಪ್ಪಿಸಲು ಬಳಕೆದಾರರಿಗೆ ತಂಡಗಳಲ್ಲಿ ಪ್ರವೇಶ ನೀಡಬೇಕು ಮತ್ತು ಅವರಿಗೆ ಸಮಯಗಳನ್ನು ನಿಗದಿ ಪಡಿಸಬೇಕು. ಪ್ರತಿ ಎರಡು ತಂಡಗಳ ನಡುವೆ ೧೫-೩೦ ನಿಮಿಷಗಳ ಅಂತರವನ್ನು ಹೊಂದಿರಬೇಕು. ಅವಧಿಯಲ್ಲಿ ಸ್ವಚ್ಛತೆ ಮತ್ತು ಸೋಂಕು ನಿವಾರಣೆ ಪ್ರಕ್ರಿಯೆ ನಡೆಸಬೇಕು ಎಂದು ಮಾರ್ಗಸೂಚಿಸಿ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 2020 ಆಗಸ್ಟ್ 05 ರಂದು ನಡೆಯಲಿರುವ ಭವ್ಯ ರಾಮಮಂದಿರದ ಭೂಮಿ ಪೂಜಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಂದಿ ಮಾತ್ರ ವೇದಿಕೆಯಲ್ಲಿ ಇರುತ್ತಾರೆ. ಸಮಾರಂಭಕ್ಕೆ ಎರಡು ದಿನ ಮುಂಚಿತವಾಗಿ ಬಿಡುಗಡೆಯಾಗಿರುವ ಅತಿಥಿ ಪಟ್ಟಿ ಮತ್ತು ಕೇಸರಿ ಬಣ್ಣದ  ಆಮಂತ್ರಣ ಪತ್ರದಲ್ಲಿ ವಿವರ ನಮೂದಾಗಿದೆ. ಆಮಂತ್ರಣ ಪತ್ರದಲ್ಲಿ ಪ್ರಧಾನಿ ಮೋದಿ ಮತ್ತು ಇತರ ಮೂವರ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದ್ದು, ಕೋವಿಡ್ -೧೯ರ ಹಿನ್ನೆಲೆಯಲ್ಲಿ ಸಂಖ್ಯೆ ಮಿತಿಗೊಳಿಸಿದ್ದನ್ನು ಇದು ಸೂಚಿಸಿದೆ. ಪ್ರಧಾನಿ ಮೋದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಹಂತ ನೃತ್ಯ ಗೋಪಾಲದಾಸ್ ಐದು ಮಂದಿ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ. ಆಮಂತ್ರಣ ಪತ್ರವುರಾಮ ಲಲ್ಲಾಅಥವಾಬಾಲ ರಾಮ ವಿಗ್ರಹದ ಚಿತ್ರವನ್ನು ಹೊಂದಿದೆ. ಪ್ರತಿ ಆಮಂತ್ರಣ ಪತ್ರವೂ sದ್ರತಾ ಕೋಡ್‌ನ್ನು ಹೊಂದಿದ್ದು, ಅದು ಒಮ್ಮೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಅತಿಥಿ ಸ್ಥಳದಿಂದ ನಿರ್ಗಮಿಸಿದರೆ ಅವರನ್ನು ಮತ್ತೆ ಒಳಗೆ ಬರಲು ಅನುಮತಿ ನೀಡಲಾಗುವುದಿಲ್ಲ ಎಂದು ರಾಮ ಮಂದಿರ ಟ್ರಸ್ಟಿನ  ಚಂಪತ್ ರೈ ಹೇಳಿದರು. ರಾಷ್ಟ್ರವು ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ಹೋರಾಟದ ನಡೆಸುತ್ತಿರುವಾಗಲೇ ಆಯೋಜಿಸಲಾಗಿರುವ  ’ಭೂಮಿ ಪೂಜೆಸಮಾರಂಭದಲ್ಲಿ ಪಾಲ್ಗೊಳ್ಳಲು ಒಟ್ಟು ೧೭೫ ಜನರಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮಮಂದಿರವು ಕಬ್ಬಿಣ ಉಕ್ಕು ರಹಿತವಾದ ಸಂಪೂರ್ಣ ಶಿಲಾ ದೇವಾಲಯವಾಗಲಿದ್ದು, ಮಂದಿರದ ಭೂಮಿಪೂಜೆಗೆ ಬಂದಿರುವ ಉಡುಗೊರೆಗಳಲ್ಲಿ ವಾರಾಣಸಿಯಿಂದ ಬಂದಿರುವ ಬೆಳ್ಳಿಯ ಅಶ್ವತ್ಥ/ ವೀಳ್ಯದ ಎಲೆಗಳು ಸೇರಿವೆ.ಬೆಳ್ಳಿಯಿಂದ ಮಾಡಿದ ಐದು ಅಶ್ವತ್ಥ / ವೀಳ್ಯದ ಎಲೆಗಳನ್ನು ವಾರಾಣಸಿಯಿಂದ ಚೌರಾಸಿಯಾ ಸಮುದಾಯದ ಸದಸ್ಯರು ಅಯೋಧ್ಯೆಗೆ ಕಳುಹಿಸಿದ್ದಾರೆ. ಅಶ್ವತ್ಥ / ವೀಳ್ಯದ ಎಲೆಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಹಿಂದೂ ಧರ್ಮದಲ್ಲಿ ಅನೇಕ ಪೂಜೆಗಳಲ್ಲಿ ಬಳಸಲಾಗುತ್ತದೆ. ಅಯೋಧ್ಯೆಗೆ ಹೊರಟ ವೇದ, ಜ್ಯೋತಿಷ್ಯ, ಪಾಣಿನಿ ಮತ್ತು ಸಂಸ್ಕೃತ ವ್ಯಾಕರಣದ ವಿದ್ವಾಂಸರ ಸಂಘಟನೆಯಾದ ವಿದ್ವತ್ ಪರಿಷತ್ ಸದಸ್ಯರಿಗೆ ಬೆಳ್ಳಿ ಎಲೆಗಳಲ್ಲಿ ಕಾಶಿ ಚೌರಾಸಿಯಾ ಸಮುದಾಯದ ಅಧ್ಯಕ್ಷ ನಾಗೇಶ್ವರ ಚೌರಾಸಿಯಾ ನೀಡಿದರು. ಜ್ಯೋತಿಷ್ಯ ಮತ್ತು ವ್ಯಾಕರಣದ ಮೂವರು ವಿದ್ವಾಂಸರು ರಾಮಮಂದಿರದ ಅಡಿಪಾಯ ಹಾಕುವಭೂಮಿ ಪೂಜೆಸಮಾರಂಭದ ಆಚರಣೆಗಳನ್ನು ನೋಡಿಕೊಳ್ಳಲಿದ್ದಾರೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment