ನಾನು ಮೆಚ್ಚಿದ ವಾಟ್ಸಪ್

Wednesday, August 19, 2020

ಇಂದಿನ ಇತಿಹಾಸ History Today ಆಗಸ್ಟ್ 19

 ಇಂದಿನ ಇತಿಹಾಸ  History Today ಆಗಸ್ಟ್ 19

2020: ನವದೆಹಲಿ: ಉದ್ಯೋಗ ಅರಸುವವರಿಗೆ ಏಕೈಕ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸುವ ಸಲುವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು 2020 ಆಗಸ್ಟ್ 19ರ ಬುಧವಾರ ಅನುಮೋದನೆ ನೀಡಿತು. ಕೇಂದ್ರ ಸಚಿವ ಸಂಪುಟದ ಹೊಸ ನಿರ್ಧಾರದಿಂದ ದೇಶದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದ್ದು, ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇದು ನೆರವಾಗಲಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ಕೇಂದ್ರ ಸರ್ಕಾರದ ಅಡಿಯಲ್ಲಿ ೨೦ ಕ್ಕೂ ಹೆಚ್ಚು ನೇಮಕಾತಿ ಸಂಸ್ಥೆಗಳಿವೆ. "ನಾವು ಈಗ ಕೇವಲ ಮೂರು ಸಾಮಾನ್ಯ ಸಂಸ್ಥೆಗಳ ಮೂಲಕ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಕಾಲಾನುಕ್ರಮದಲ್ಲಿ ದೇಶದ ಎಲ್ಲ ನೇಮಕಾತಿ ಸಂಸ್ಥೆಗಳಿಗೆ ಒಂದು ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಕಾರ್ಯದರ್ಶಿ ಸಿ ಚಂದ್ರಮೌಳಿ ಹೇಳಿದರು. ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿವರ್ತನೆಯ ಸುಧಾರಣೆಯನ್ನು ತಂದು, ಯುವಜನರಿಗೆ ಅಂತಹ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್) ರಚಿಸುವುದಾಗಿ ಸಚಿವ ಸಂಪುಟ ಘೋಷಿಸಿದೆ. ರಾಷ್ಟ್ರೀಯ ನೇಮಕಾತಿ ಸಂಸ್ಥೆಯು (ಎನ್ಆರ್) ಬಹು-ಏಜೆನ್ಸಿ ಸಂಸ್ಥೆಯಾಗಿದ್ದು, ಇದು ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ), ರೈಲ್ವೆ ನೇಮಕಾತಿ ಮಂಡಳಿಗಳು (ಆರ್ಆರ್ಬಿ) ಮತ್ತು ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸರ್ವಿಸ್ ಪರ್ಸನಲ್ (ಐಬಿಪಿಎಸ್) ನಡೆಸುವ ಮೊದಲ ಹಂತದ ಪರೀಕ್ಷೆಯನ್ನು ಏಕತ್ರಗೊಳಿಸಲಿದೆ. ಎಸ್ಎಸ್ಸಿ, ಆರ್ಆರ್ಬಿ ಮತ್ತು ಐಬಿಪಿಎಸ್ಗಾಗಿ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಿಸಲು ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಯಲಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ  ಸುಪ್ರೀಂ ಕೋರ್ಟ್ 2020 ಆಗಸ್ಟ್ 19ರ ಬುಧವಾರ ಆದೇಶಿಸಿದ್ದು ನಿಟ್ಟಿನಲ್ಲಿ ಅಗತ್ಯ ನೆರವು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.ಇದರೊಂದಿಗೆ ವಿಚಾರದಲ್ಲಿ ಉಂಟಾಗಿದ್ದ ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳ ಜಗ್ಗಾಟಕ್ಕೆ ತೆರೆ ಬಿದ್ದಿತು.ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ನ್ಯಾಯಪೀಠ ಇದು ನ್ಯಾಯಾಲಯದ ಆದೇಶದ ಸಿಬಿಐ ತನಿಖೆಯಾಗಿದೆ ಮತ್ತು ಇದನ್ನು ಪ್ರಶ್ನಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಅವಕಾಶವಿಲ ಎಂದು ಸ್ಪಷ್ಟಪಡಿಸಿತು. ಪಾಟ್ನಾದಲ್ಲಿ ದಾಖಲಿಸಲಾಗಿರುವ ಎಫ್ಐಆರ್ ಕಾನೂನುಬದ್ಧವಾಗಿದ್ದು, ಅಪರಾಧ ದಂಡ ಸಂಹಿತೆಯ ವಿಧಿಗಳಿಗೆ ಅನುಗುಣವಾಗಿದೆ ಎಂದೂ ಪೀಠ ಸ್ಪಷ್ಟ ಪಡಿಸಿತು ಹಿನ್ನೆಲೆಯಲ್ಲಿ ಸಿಬಿಐ ತನಿಖೆಗಾಗಿ ಬಿಹಾರ ಸರ್ಕಾರ ಮಾಡಿದ ಶಿಫಾರಸು ಕೂಡ ಸರಿಯಾಗಿದೆ ಮತ್ತು ಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿತು. ೩೫ ಪುಟಗಳ ತೀರ್ಪಿನ ಆಪರೇಟಿವ್ ಭಾಗವನ್ನು ಓದಿದ ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರು, ಇದು ನ್ಯಾಯಾಲಯದ ಆದೇದ ತನಿಖೆಯಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರವು ಆದೇಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಮುಂಬೈ ಪೊಲೀಸರು ಈವರೆಗೆ ನಡೆಸಿದ ವಿಚಾರಣೆಯ ವಿವರಗಳು ಮತ್ತು ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ಪಾಟ್ನಾದಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಅವರ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ನವದೆಹಲಿಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿ ಪ್ರದೇಶದಿಂದ ಭದ್ರತಾ ಪಡೆಗಳ ೧೦೦ ಕಂಪೆನಿಗಳನ್ನು (10,000 ಯೋಧರು) ಹಿಂಪಡೆಯಲು ಕೇಂದ್ರ ಸರ್ಕಾರ 2020 ಆಗಸ್ಟ್ 19ರ ಬುಧವಾರ ನಿರ್ಧರಿಸಿತು.. ಗೃಹ ಸಚಿವಾಲಯದ (ಎಂಎಚ್) ಭದ್ರತಾ ಪರಿಶೀಲನೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಯಿತು. ಹಿಂತೆಗೆದುಕೊಳ್ಳಬೇಕಾದ ಅರೆಸೈನಿಕ ಸಿಬ್ಬಂದಿಯ ಕಂಪೆನಿಗಳಲ್ಲಿ ಸಿಆರ್ಪಿಎಫ್ ೪೦ ಕಂಪೆನಿಗಳು ಮತ್ತು ಕಾಶ್ಮೀರ ಕಣಿವೆಯ ತಲಾ ೨೦ ಬಿಎಸ್ಎಫ್, ಸಿಐಎಸ್ಎಫ್ ಮತ್ತು ಎಸ್ಎಸ್ಬಿ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (ಸಿಎಪಿಎಫ್) ಕೇಂದ್ರಾಡಳಿತ ಪ್ರದೇಶದಲ್ಲಿ ನಿಯೋಜಿಸುವುದನ್ನು ಗೃಹ ವ್ಯವಹಾರಗಳ ಸಚಿವಾಲಯವು ಪರಿಶೀಲಿಸಿದ ನಂತರ ನಿರ್ಧಾರವನ್ನು ಅಂತಿಮಗೊಳಿಸಲಾಯಿತು. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಂವಿಧಾನದ ೩೭೦ನೇ ಪರಿಚ್ಛೇದ ರದ್ದು ಪಡಿಸಿದ ಬಳಿಕ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ನಿಯೋಜಿತವಾಗಿದ್ದ ಒಟ್ಟು ೧೦೦ ಸಿಎಪಿಎಫ್ ಕಂಪೆನಿಗಳನ್ನು ತತ್ ಕ್ಷಣ ಹಿಂತೆಗೆದುಕೊಳ್ಳಲು ಮತ್ತು ದೇಶದಲ್ಲಿನ ತಮ್ಮ ಮೂಲ ಸ್ಥಳಗಳಿಗೆ ವಾಪಸಾಗಲು ಸೂಚಿಸಲಾಗಿದೆ ಎಂದು ಸುದ್ದಿ ಮೂಲಗಳು ಹೇಳಿದವು. ಸಿಎಪಿಎಫ್ ಕಂಪೆನಿಯು ಸಾಮಾನ್ಯವಾಗಿ ಸುಮಾರು ೧೦೦ ಭದ್ರತಾ ಸಿಬ್ಬಂದಿಯ ಕಾರ್ಯಾಚರಣಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಗೃಹ ಸಚಿವಾಲಯವು ಕೊನೆಯ ಬಾರಿಗೆ ಸುಮಾರು ೧೦ ಸಿಎಪಿಎಫ್ ಕಂಪೆನಿಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಮೇ ತಿಂಗಳಲ್ಲಿ ಹಿಂತೆಗೆದುಕೊಂಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ನವದೆಹಲಿ: ಕೋಟ್ಯಂತರ ಯುವಕರಿಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆ ವರದಾನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಆಗಸ್ಟ್ 19ರ ಬುಧವಾರ ಹೇಳಿದರು. ಇದು ಬಹು ಪರೀಕ್ಷೆಗಳನ್ನು ತೊಡೆದುಹಾಕುತ್ತದೆ ಮತ್ತು ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಟ್ವೀಟ್ನಲ್ಲಿ ತಿಳಿಸಿದರು. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ಆರ್) ರಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಮೂಲಕ ನೇಮಕಾತಿಯಲ್ಲಿ "ಹೆಗ್ಗುರುತು ಸುಧಾರಣೆ" ಯನ್ನು ಪ್ರಾರಂಭಿಸಿದೆ. ಕ್ರಮವು ಕೋಟ್ಯಂತರ ಯುವಕರಿಗೆ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯ ಮೂಲಕ ಇದು ಅನೇಕ ಪರೀಕ್ಷೆಗಳನ್ನು ತೊಡೆದುಹಾಕುತ್ತದೆ ಮತ್ತು ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ" ಎಂದು ಮೋದಿ ಟ್ವೀಟ್ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ರಿಯಾದ್: ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್) ಅವರ ಜೊತೆ  ಸೌಹಾರ್ದಯುತ ಭೇಟಿಯನ್ನು ಬಯಸಿ ಬಂದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕ್ಯುಮರ್ ಜಾವೇದ್ ಬಜ್ವಾ ಅವರಿಗೆ ತೀವ್ರ ನಿರಾಸೆಯಾಗಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 19ರ ಬುಧವಾರ ತಿಳಿಸಿದವು. ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ತಮ್ಮ ಭೇಟಿ ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಅವರ ಪರವಾಗಿ ತಿಳಿಸಿದ ಉಪ ರಕ್ಷಣಾ ಸಚಿವ ಮತ್ತು ಕಿರಿಯ ಸೋದರ ಶೇಖ್ ಖಾಲಿದ್ ಬಿನ್ ಸಲ್ಮಾನ್ ಅವರೊಂದಿಗಾದರೂ ಮಾತುಕತೆಗೆ ಅವಕಾಶ ನೀಡುವಂತೆ ಬಜ್ವಾ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಯುವರಾಜನ ಭೇಟಿಗೆ ಅವಕಾಶ ಲಭಿಸದ ಕಾರಣ ಇಮ್ರಾನ್ ಖಾನ್ ಅವರು ಕಳುಹಿಸಿದ್ದ ಕ್ಷಮೆಯಾಚನೆ ಸಂದೇಶವನ್ನು ಕೂಡ ಯುವರಾಜನಿಗೆ ನೇರವಾಗಿ ತಲುಪಿಸಲು ಬಜ್ವಾ ಅವರಿಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ಹೇಳಿವೆ. ಅಲ್ಲದೆ , ಬಜ್ವಾ ಜೊತೆ ಮಾತುಕತೆ ನಡೆಸಿದ ಸೌದಿ ಸಚಿವ ಶೇಖ್ ಖಾಲಿದ್ ಕೂಡ ಪಾಕಿಸ್ತಾನದ ಕ್ಷಮಾಯಾಚನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು ಎಂದು ಮೂಲಗಳು ಹೇಳಿವೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗಾಗಿ ತೈಲ ಉತ್ಪಾದಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವಂತೆ ಪಾಕಿಸ್ತಾನ ಸೌದಿ ಅರೇಬಿಯಾವನ್ನು ಒತ್ತಾಯಿಸಿತ್ತು. ಆದರೆ ಇದಕ್ಕೆ ಸೌದಿ ಅರೇಬಿಯಾ ಸಾಧ್ಯವಿಲ್ಲ ಎಂದು ಹೇಳಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ) 

2020: ವಾಷಿಂಗ್ಟನ್:  ಹಲವಾರು ವರ್ಷಗಳಿಂದ, ಮಾನವರು ಬಾಹ್ಯಾಕಾಶದಲ್ಲಿ ಇರುವ ಅಪಾರ ಪ್ರಮಾಣದ ಅಮೂಲ್ಯ ಲೋಹಗಳ ಬಗ್ಗೆ ಆಶ್ಚರ್ಯ ಮತ್ತು ಊಹಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ, , ಕ್ಷುದ್ರಗ್ರಹಗಳಲ್ಲಿ ಆಳವಾಗಿ ಹೂತುಹೋಗಿರುವ ಚಿನ್ನ, ಪ್ಲಾಟಿನಂ ವಜ್ರ, ಮತ್ತು ಬಾಹ್ಯಾಕಾಶ ಅವಶೇಷಗಳಂತಹ ಅಮೂಲ್ಯ ವಸ್ತುಗಳು ಶತಕೋಟಿ ಡಾಲರ್ ಮೌಲ್ಯದ್ದಾಗಿರಬಹುದು. ಈಗ, ಮಾನವರು ಅವುಗಳ ಪೈಕಿ ಕೆಲವು ಸಂಪತ್ತಿನ ಮೇಲೆ ಕಣ್ಣು ಹಾಕಿದ್ದು, ಅವುಗಳಿಗೆ ಕನ್ನ ಹಾಕುವ ಸಲುವಾಗಿ ಗಣಿಗಾರಿಕೆಯತ್ತ ಮುನ್ನುಗ್ಗುತ್ತಿದ್ದಾರೆ. ನಾಸಾವು ಇತ್ತೀಚೆಗೆ ಮಿಷನ್ ಸೈಕೆ ಎಂಬ ಯೋಜನೆ ಹಮ್ಮಿಕೊಂಡಿದ್ದು, ೧೬ ಸೈಕ್ಎಂಬ ಲೋಹ ಕಲ್ಲು ಭರಿತ ಕ್ಷುದ್ರಗ್ರಹವನ್ನು ಅಧ್ಯಯನ ಮಾಡಲು ಕಾರ್ಯಕ್ರಮ ರೂಪಿಸಿದೆ. ೨೨೬ ಕಿಲೋಮೀಟರ್ ಅಗಲವಿರುವ ಕ್ಷುದ್ರಗ್ರಹವು ಮಂಗಳ ಮತ್ತು ಗುರುಗಳ ನಡುವಿನ ಸೌರವ್ಯೂಹದ ಕ್ಷುದ್ರಗ್ರಹ ಸಮೂಹದಲ್ಲಿದೆ. ವಿಜ್ಞಾನಿಗಳಿಗೆ ನಿರ್ದಿಷ್ಟ ಕ್ಷುದ್ರಗ್ರಹದ ಬಗ್ಗೆ ಆಸಕ್ತಿ ಏಕೆ? ಏಕೆಂದರೆ ಕ್ಷುದ್ರಗ್ರಹವು ಇಡೀ ಜಾಗತಿಕ ಆರ್ಥಿಕತೆಯ ಒಟ್ಟು ವೆಚ್ಚವನ್ನು ಮೀರಿಸುವ ಸಂಭಾವ್ಯ ಸಂಪತ್ತನ್ನು ಒಳಗೊಂಡಿರಬಹುದು ಎಂಬ ಕಾರಣಕ್ಕಾಗಿ ಈ ಆಸಕ್ತಿ. ತಜ್ಞರ ಪ್ರಕಾರ, ಕ್ಷುದ್ರಗ್ರಹವು ಸಂಪೂರ್ಣವಾಗಿ ನಿಕ್ಕೆಲ್ ಮತ್ತು ಲೋಹೀಯ ಕಬ್ಬಿಣದಿಂದ ಘನ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಕ್ಷುದ್ರಗ್ರಹದ ಅಂದಾಜು ಮೌಲ್ಯವು ಡಾಲರ್  ೧೦,೦೦೦ ಕ್ವಾಡ್ರಿಲಿಯನ್ ಹತ್ತಿರವಿರಬಹುದು. ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯನ್ನು ಮಿಲಿಯನೇರ್ (ಲಕ್ಷಾಧೀಶರನ್ನಾಗಿ)  ಮಾಡಲು ಅದು ಸಾಕು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ) 

ಇಂದಿನ ಇತಿಹಾಸ  History Today ಆಗಸ್ಟ್ 19 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment