ನಾನು ಮೆಚ್ಚಿದ ವಾಟ್ಸಪ್

Saturday, August 8, 2020

ಇಂದಿನ ಇತಿಹಾಸ History Today ಆಗಸ್ಟ್ 08

 ಇಂದಿನ ಇತಿಹಾಸ  History Today ಆಗಸ್ಟ್ 08

2020: ಕೋಯಿಕ್ಕೋಡ್ (ಕೇರಳ)/: ಕೇರಳದ ಕೋಯಿಕ್ಕೋಡ್ ಸಮೀಪದ ಕಾರಿಪುರ ವಿಮಾನ ನಿಲ್ದಾಣದಲ್ಲಿ 2020 ಆಗಸ್ಟ್ 07ರ ಶುಕ್ರವಾರ ರಾತ್ರಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗಾಯಗೊಂಡಿದ್ದ ಒಬ್ಬ ಪ್ರಯಾಣಿಕ ಸಾವನ್ನಪ್ಪುವುದರೊಂದಿಗೆ ದುರಂತದಲ್ಲಿ ಮೃತರಾದವರ ಸಂಖ್ಯೆ 2020  ಆಗಸ್ಟ್  08ರ ಶನಿವಾರ ೧೮ಕ್ಕೆ ಏರಿತು. ಈ ಮಧ್ಯೆ, ಅಪಘಾತಕ್ಕೀಡಾದ ವಿಮಾನದ ಅವಶೇಷಗಳ ಜಾಗದಲ್ಲಿ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನ್ನು ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ಸಂಸ್ಥೆ, ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ವಶಪಡಿಸಿಕೊಂಡಿದೆ. ವಿಮಾನದ ಕಪ್ಪು ಪೆಟ್ಟಿಗೆಯ ಭಾಗಗಳಾದ ಇವುಗಳು ದುರಂತದ ಕಾರಣ ತಿಳಿಯಲು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಹೆಚ್ಚಿನ ತನಿಖೆಗಾಗಿ ಉಪಕರಣಗಳನ್ನು ದೆಹಲಿಗೆ ತರಲಾಗುವುದು ಎಂದು ವರದಿಗಳು ಹೇಳಿದವು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಐಎಕ್ಸ್ ೧೩೪೪ ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಆಚೆಗೆ ಕಣಿವೆಗೆ ಜಾರಿ ಬಿದ್ದು ಎರಡು ಹೋಳುಗಳಾಗಿ ಒಡೆದ ಪರಿಣಾಮವಾಗಿ ವಿಮಾನದ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ ಕನಿಷ್ಠ ೧೮ ಜನರು ಸಾವನ್ನಪ್ಪಿ, ೨೩ ಮಂದಿ ಗಾಯಗೊಂಡಿದ್ದಾರೆ, ವಿಮಾನವು ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ರೋಗದ ಮಧ್ಯೆ ದುಬೈಯಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರನ್ನು ವಾಪಸ್ ಕರೆತಂದಿತ್ತು. ಆಗಸ್ಟ್ ೦೭ರ ಶುಕ್ರವಾರ ರಾತ್ರಿ : ೪೧ ಸುಮಾರಿಗೆ ದುಬೈಯಿಂದ ೧೯೦ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯೊಂದಿಗೆ ಬಂದ ಏರ್ ಇಂಡಿಯಾ ವಿಮಾನ ಕೋಯಿಕ್ಕೋಡಿನಲ್ಲಿ ಇಳಿಯುತ್ತಿದ್ದಾಗ ದುರಂತ ಸಂಭವಿಸಿತ್ತು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ:  ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಗಾಳಿ ಮಳೆ ಪರಿಸ್ಥಿತಿಯಲ್ಲಿ ರನ್‌ವೇ ೧೦ ರಲ್ಲಿ ಇಳಿಯುವ ವಿಮಾನಗಳು ವಿಮಾನಗಳಲ್ಲಿರುವ ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಲ್ಲವು ಎಂಬುದಾಗಿ ನಾಗರಿಕ ವಿಮಾನಯಾನ ತಜ್ಞರು ೨೦೧೧ ರಲ್ಲಿ ಎಚ್ಚರಿಸಿದ್ದರು. ಆದರೆ ಅದು ಡಿಜಿಸಿಎಯ ಕಿವುಡು ಕಿವಿಗಳಿಗೆ ಬಿದ್ದಿರಲಿಲ್ಲ ಎಂದು ಸುದ್ದಿ ಮೂಲಗಳು  2020 ಆಗಸ್ಟ್ 08ರ ಶನಿವಾರ ತಿಳಿಸಿದವು. ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಜೂನ್ ೨೦೧೧ ರಲ್ಲಿ ಅಂದಿನ ನಾಗರಿಕ ವಿಮಾನಯಾನ ಕಾರ್ಯದರ್ಶಿ ನಾಸಿಮ್ ಜೈದಿ ಅವರಿಗೆ ನೀಡಿದ ಸಂವಹನದಲ್ಲಿ ರನ್ ವೇ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.  ರಂಗನಾಥನ್ ಆಗ ನಾಗರಿಕ ವಿಮಾನಯಾನ ಸುರಕ್ಷತಾ ಸಲಹಾ ಸಮಿತಿಯ (ಸಿಎಎಸ್‌ಎಸಿ) ಕಾರ್ಯಾಚರಣೆಯ ಗುಂಪಿನ ಸದಸ್ಯರಾಗಿದ್ದರು.  ಗಾಳಿಮಳೆಯ ಪರಿಸ್ಥಿತಿಯಲ್ಲಿ ವಿಮಾನವನ್ನು ಕೋಯಿಕ್ಕೋಡಿನಿಂದ ಕೊಯಮತ್ತೂರಿಗೆ ತಿರುಗಿಸಬೇಕಾಗಿತ್ತು. ವಿಮಾನ ನಿಲ್ದಾಣ ದೊಡ್ಡ ವಿಮಾನಗಳು ಬೋಯಿಂಗ್ ೭೩೭ ಹೊರತಾಗಿ ದೊಡ್ಡ ಗಾತ್ರದ ವಿಮಾನಗಳನ್ನು ಇಂತಹ ಸಂದರ್ಭಗಳಲ್ಲಿ ಇಳಿಸಲು ಸೂಕ್ತವಾದದ್ದೇ ಅಲ್ಲ ಎಂದು ರಂಗನಾಥನ್ ಹೇಳಿದರು. ತಾವು ಇದ್ದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ೨೦೧೧ರಲ್ಲಿ ತಾವು ನೀಡಿದ್ದ ಎಚ್ಚರಿಕೆ ಸಂದರ್ಭಕ್ಕೂ ಪ್ರಸ್ತುತವೇ ಎಂದು ನುಡಿದ ಅವರು ಟೇಬಲ್ ಟಾಪ್ ರನ್ ವೇಗಳು ಇರುವ ಎಲ್ಲ ವಿಮಾನ ನಿಲ್ದಾಣಗಳೂ ಮಾದರಿಯ ಅಪಾಯದಿಂದ ಹೊರತಾಗಿರುವುದಿಲ್ಲ ಎಂದು ಹೇಳಿದರು. ೨೪೦ ಮೀಟರ್  ರೇಸಾವನ್ನು ತಕ್ಷಣ ಪರಿಚಯಿಸಬೇಕು ಮತ್ತು ವಿಮಾನ ಕಾರ್ಯಾಚರಣೆಯನ್ನು ಸುರಕ್ಷಿತವಾಗಿಸಲು ರನ್ ವೇ ಉದ್ದವನ್ನು ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ಕೊರೋನಾವೈರಸ್ ಸೋಂಕಿನ ೬೧,೫೩೭ ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ  2020 ಆಗಸ್ಟ್ 08ರ ಶನಿವಾರ ೨೦,೮೮,೬೧೧ ಕ್ಕೆ ತಲುಪಿತು. ಇದೇ ವೇಳೆಗೆ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ೧೪,೨೭,೦೦೫ಕ್ಕೆ ಏರಿದ್ದು, ಚೇತರಿಕೆ ಪ್ರಮಾಣ ಶೇಕಡಾ ೬೮.೩೨ಕ್ಕೆ ಏರಿತು. ಒಂದೇ ದಿನದಲ್ಲಿ ೯೩೩ ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ ೪೨,೫೧೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು. ದೇಶದಲ್ಲಿ ಪ್ರಸ್ತುತ ಕೊರೋನವೈರಸ್ ಕಾಯಿಲೆಯ (ಕೋವಿಡ್ -೧೯) ,೧೯,೦೮೮ ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡಾ ೨೯.೬೪ ರಷ್ಟು ಇದೆ. ಒಂದು ದಿನದಲ್ಲಿ ಒಟ್ಟು ೬೧,೫೩೭ ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಕೋರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೨೦,೮೮,೬೧೧ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತು. ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಸತತ ೧೦ ನೇ ದಿನ ೫೦,೦೦೦ವನ್ನು ದಾಟಿದೆ. ಶುಕ್ರವಾರ ,೯೮,೭೭೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ ಒಟ್ಟು ಮಾದರಿ ಪರೀಕ್ಷಾ ಸಂಖ್ಯೆ ,೩೩,೮೭,೧೭೧ಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು 2020 ಆಗಸ್ಟ್ 08ರ ಶನಿವಾರ ಇಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನೈರ್ಮಲ್ಯ ಬದುಕಿನ ಮಾರ್ಗವನ್ನು ಅಳವಡಿಕೊಳ್ಳುವಂತೆ ಶಾಲಾ ಮಕ್ಕಳಿಗೆ ಸೂಚಿಸಿದರು. ಕೊರೋನಾವೈರಸ್ ಸೋಂಕು ಮತ್ತು ಸ್ವಚ್ಚತೆಗೆ ಸಂಬಂಧ ಕಲ್ಪಿಸಿದ ಪ್ರಧಾನಿ, ಸೋಂಕನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸ್ವಚ್ಛ ಪರಿಸರ ಅತ್ಯಂತ ಅಗತ್ಯ ಎಂದು ಹೇಳಿದರು. ದೆಹಲಿಯಲ್ಲಿ ಸ್ಥಾಪನೆಗೊಂಡಿರುವ ಸ್ವಚ್ಛ ಭಾರತ ಮಿಷನ್ ಕುರಿತ ಸಂವಹನ ಅನುಭವಕ್ಕಾಗಿ ರಾಷ್ಟ್ರೀಯ ಸ್ವಚ್ಚತಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ೨೦೧೪-೨೦೧೯ರ ನಡುವಣ ಮೊದಲ ಅವಧಿಯಲ್ಲಿ ಸಾಮಾಜಿಕ ಬದಲಾವಣೆಗಾಗಿ ಎನ್‌ಡಿಎ ಸರ್ಕಾರ ಹಮ್ಮಿಕೊಂಡ ಪ್ರಮುಖ ದಿಕ್ಸೂಚಿ ಕಾರ್ಯಕ್ರಮ ಇದಾಗಿತ್ತು.  ಸ್ವಚ್ಚತೆಯ ವಿಷಯಗಳಲ್ಲಿ ನೀವು ಆಸಕ್ತರಾಗಿರುವುದು ಕಂಡು ನನಗೆ ಸಂತಸವಾಗಿದೆ ಎಂದು ೩೬ ಮಂದಿ ಶಾಲಾ ಮಕ್ಕಳ ತಂಡವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು. ಭಾರತ ಒಕ್ಕೂಟದ ೩೬ ರಾಜ್ಯಗಳು ಮತ್ತು ಕೇಂದ್ರಾಡಳಿತಗಳನ್ನು ಪ್ರತಿನಿಧಿಸಿ ೩೬ ಮಕ್ಕಳ ತಂಡವನ್ನು ಆಯ್ಕೆ ಮಾಡಲಾಗಿತ್ತು. ‘ಕೊರೋನಾದಿಂದ ನಾವು ರಕ್ಷಣೆ ಪಡೆಯುವವರೆಗೂ ನಾವು ಹೊರಕ್ಕೆ ಬಂದು ನಮ್ಮ ಕೆಲಸವನ್ನು ಮಾಡಬೇಕು. ಇದಕ್ಕಾಗಿ ನಾವು ಮುಖಗವಸುಗಳನ್ನು (ಮಾಸ್ಕ್) ಧರಿಸಬೇಕು, ಸದಾಕಾಲವೂ ಪರಸ್ಪರ ಅಡಿಗಳ ಅಂತರವನ್ನು ಪಾಲಿಸಬೇಕು ಮತ್ತು ಬಹಿರಂಗವಾಗಿ ಉಗುಳುವುದನ್ನು ನಿವಾರಿಸಬೇಕು ಎಂದು ಮೋದಿ ಮಕ್ಕಳಿಗೆ ಹೇಳಿದರು.  ಇದಕ್ಕೆ ಮುನ್ನ ಪ್ರಧಾನಿಯವರು ರಾಷ್ಟ್ರೀಯ ಸ್ವಚ್ಛ ಕೇಂದ್ರದಲ್ಲಿಸ್ವಚ್ಛ ಭಾರತ ಮಿಷನ್ ಕುರಿತ ಪುಟ್ಟ ವಿಡಿಯೋ ಒಂದನ್ನು ವೀಕ್ಷಿಸಿದರು. ಕಥೆಯ ರೂಪದಲ್ಲಿ ಸ್ವಚ್ಛತಾ ಯಾನವನ್ನು ವಿವರಿಸಿದ ೩೬೦ ಡಿಗ್ರಿ ಆಡಿಯೋ ವಿಶುವಲ್ ಪ್ರದರ್ಶನವನ್ನು ಪ್ರಧಾನಿ ಪೂರ್ತಿಯಾಗಿ ನೋಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಆಗ್ರಾ: ಕೇರಳದಲ್ಲಿ  2020 ಆಗಸ್ಟ್  08ರ ಶುಕ್ರವಾರ ಸಂಜೆ ಸಂಭವಿಸಿದ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ವಿಮಾನದ ಸಹ ಪೈಲಟ್ ೩೨ ವರ್ಷದ ಅಖಿಲೇಶ್ ಶರ್ಮಾ ಅವರ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಗೊಂಡಿದೆ. ಆದರೆ ಹದಿನೈದು ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಶರ್ಮಾ ಅವರ ಪತ್ನಿ ಮೇಘಾ (೨೯), ಅವರಿಗೆ ತನ್ನ ಗಂಡನ ಸಾವಿನ ಬಗ್ಗೆ ಇನ್ನೂ ತಿಳಿಸಲಾಗಿಲ್ಲ. ಕುಟುಂಬವು ಉತ್ತರ ಪ್ರದೇಶದ ಮಥುರಾದ ಗೋವಿಂದ್ ನಗರ ಪ್ರದೇಶದಲ್ಲಿ ವಾಸವಾಗಿದೆ.  "ವಿಮಾನ ಅಪಘಾತದ ನಂತರ ಭೈಯಾ (ಅಖಿಲೇಶ್) ಸ್ಥತಿ ಗಂಭೀರವಾಗಿದ್ದು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಮಗೆ ಸಿಕ್ಕಿತು. ಆದರೆ ಶುಕ್ರವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಸಲಾಯಿತು. ನನ್ನ ಸಹೋದರ ಭುವನೇಶ್ ಮತ್ತು ಸೋದರ ಮಾವ ಸಂಜೀವ್ ಶರ್ಮಾ ದೆಹಲಿ ಮೂಲಕ ಕೋಯಿಕ್ಕೋಡಿಗೆ  ತೆರಳಿದ್ದಾರೆ ಎಂದು ಮಥುರಾದಲ್ಲಿ ವಾಸಿಸುವ ಲೋಕೇಶ್ ಶರ್ಮಾ  2020 ಆಗಸ್ಟ್ 08ರ ಶನಿವಾರ (೨೪) ಹೇಳಿದ್ದಾರೆ. ಲೋಕೇಶ್ ಕೂಡ ವಾಣಿಜ್ಯ ಪೈಲಟ್ ಆಗಲು ಬಯಸಿದ್ದಾರೆ.  "ಇಂದಿನಿಂದ ಕೆಲವೇ ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವುದರಿಂದ ಪತಿ ಸಾವಿನ ಬಗ್ಗೆ ನಾವು ಭಾಭಿಗೆ (ಮೇಘಾ ಶರ್ಮಾ) ಹೇಳಿಲ್ಲ. ವಿಮಾನ ಅಪಘಾತದ ಬಗ್ಗೆ ಆಕೆಗೆ ತಿಳಿದಿz’ ಎಂದು ಲೋಕೇಶ್ ಶನಿವಾರ ಹೇಳಿದರು. ಅಖಿಲೇಶ್ ಶರ್ಮಾ  ಅವರು ಭುವನೇಶ್ ಶರ್ಮಾ (೨೮) ಮತ್ತು ಲೋಕೇಶ್ ಶರ್ಮಾ (೨೪) ಅವರ ಹಿರಿಯ ಸಹೋದರರಾಗಿದ್ದರು ಮತ್ತು ಅವರಿಗೆ ಒಬ್ಬ ಅಕ್ಕ ಕೂಡ ಇದ್ದು ಅವರ ಮದುವೆಯಾಗಿದೆ. ಅವರ ತಂದೆ ತುಳಸಿ ರಾಮ್ ಶರ್ಮಾ ಮಥುರಾದಲ್ಲಿ ವ್ಯವಹಾರಸ್ಥರಾಗಿದ್ದು, ಅವರು ಮಥುರಾ ಜಿಲ್ಲೆಯ ತಮ್ಮ ಪಿತೃ ಗ್ರಾಮದಿಂದ ಮಥುರಾ ನಗರದ ಗೋವಿಂದ್ ನಗರಕ್ಕೆ ಬಂದಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 08 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment