ನಾನು ಮೆಚ್ಚಿದ ವಾಟ್ಸಪ್

Wednesday, August 5, 2020

ಇಂದಿನ ಇತಿಹಾಸ History Today ಆಗಸ್ಟ್ 05

ಇಂದಿನ ಇತಿಹಾಸ  History Today ಆಗಸ್ಟ್ 05

2020: ಅಯೋಧ್ಯಾ: ಬೆಳ್ಳಿಯ ಇಟ್ಟಿಗೆಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸುವ ಮೂಲಕ ಇಲ್ಲಿನ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 2020  ಆಗಸ್ಟ್  05ರ ಬುಧವಾರ ಅಡಿಪಾಯ ಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರುಆಗಸ್ಟ್ 05 ಭಾರತದ ಇತಿಹಾಸದಲ್ಲಿಸುವರ್ಣ ದಿನ ಎಂದು ಘೋಷಿಸಿದರು.  ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಅಭಿಜಿನ್ ಮುಹೂರ್ತ, ಭೂಮಿ ಕರಣ, ಶತಭಿಷ ನಕ್ಷತ್ರದಲ್ಲಿ ಭೂಮಿಪೂಜೆ ನೆರವೇರಿತು. ಶಿಲಾನ್ಯಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು ೨೨. ಕೆಜಿ ತೂಕದ ಐದು ಇಟ್ಟಿಗೆಗಳನ್ನು ಬಳಸಿದರು. ವೇದಘೋಷಗಳ ಮಧ್ಯೆ ಸಂಭ್ರಮೋತ್ಸಾಹದೊಂದಿಗೆ ನಡೆದ ಸರಳ ಸಮಾರಂಭದಲ್ಲಿ ಪ್ರಧಾನಿಯವರು ಐದು ಬೆಳ್ಳಿಯ ಇಟ್ಟಿಗೆ ಮತ್ತು ಭೂಮಿ ಅಗೆಯುವ ಸಲಕರಣೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಭೂಮಿ ಪೂಜೆಯ ಕೊನೆಗೆ ದೇಶದ ಸರ್ವಜನರೂ ಕೊರೋನಾವೈರಸ್ ಸಾಂಕ್ರಾಮಿಕದಿಂದ ಮುಕ್ತರಾಗಲಿ ಎಂದೂ ಪ್ರಾರ್ಥಿಸಿದರು. ‘ಶತಮಾನಗಳ ಕಾಯುವಿಕೆ ಕೊನೆಗೊಳ್ಳುತ್ತಿದೆ. ದಿನದೊಂದಿಗೆ ಭಾರತದ ಇತಿಹಾಸದ ಹೊಸ ಅಧ್ಯಾಯ ಆರಂಭಗೊಳ್ಳುತ್ತಿದೆ.. ಕೆಡಹುವ ಮತ್ತು ಕಟ್ಟುವ ಪ್ರಕ್ರಿಯೆಯಿಂದ ರಾಮ ಮುಕ್ತನಾಗಲಿದ್ದಾನೆ’ ಎಂದು ಪ್ರಧಾನಿ ಭೂಮಿ ಪೂಜೆಯ ಬಳಿಕ ನಡೆದ ಸಮಾರಂಭದಲ್ಲಿ ಹೇಳಿದರು. ರಾಮಮಂದಿರ ಆಂದೋಳನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ೯೨ರ ಹರೆಯದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಪಕ್ಷದ ಹಿರಿಯ ನಾಯಕ ೮೬ರ ಹರೆಯದ ಮುರಳಿ ಮನೋಹರ ಜೋಶಿ ಅವರು ತಮ್ಮ ಮನೆಗಳಿಂದಲೇ ನೇರ ಪ್ರಸಾರವನ್ನು ವೀಕ್ಷಿಸಿ ಸಮಾರಂಭವನ್ನು ಕಣ್ತುಂಬಿಕೊಂಡರು. ಕೊರೊನಾವೈರಸ್ ಸೋಂಕಿದ ಹಿನ್ನೆಲೆಯಲ್ಲಿ ಗುರುಗ್ರಾಮದ ಆಸ್ಪತ್ರೆಗೆ ದಾಖಲಾಗಿರುವ ಗೃಹ ಸಚಿವ ಅಮಿತ್ ಶಾ ಅವರು ಆಸ್ಪತ್ರೆಯಲ್ಲಿನ ತಮ್ಮ ಹಾಸಿಗೆಯಿಂದಲ್ಲೇ ಸಮಾರಂಭಕ್ಕೆ ಸಾಕ್ಷಿಯಾದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಅಯೋಧ್ಯೆ: ದಶಕಗಳ ಹೋರಾಟದ ಬಳಿಕ ನಡೆದ ಈದಿನದ ರಾಮಮಂದಿರದ ಶಿಲಾನ್ಯಾಸ ಸಮಾರಂದ ಕ್ಷಣವು ತೃಪ್ತಿಯನ್ನು ತಂದಿದ್ದು, ನಾವು ಸಂಕಲ್ಪವನ್ನು ಪೂರೈಸಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ 2020  ಆಗಸ್ಟ್ 05ರ ಬುಧವಾರ ಇಲ್ಲಿ ಹೇಳಿದರು. ಭೂಮಿ ಪೂಜೆಯ ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ದೇವಾಲಯವನ್ನು ನಿರ್ಮಿಸುವ ಸಂಕಲ್ಪದ ನೆರವೇರಿಕೆಗಾಗಿ ಸಂಸ್ಥೆಯು ಸುಮಾರು ೩೦ ವರ್ಷ ಕೆಲಸ ಮಾಡಿದೆ ಎಂದು ನುಡಿದರು. "ನಾವು ನಿರ್ಣಯವನ್ನು ತೆಗೆದುಕೊಂಡಿದ್ದೆವು. ಆಗಿನ ಆರ್ಎಸ್ಎಸ್ ಮುಖ್ಯಸ್ಥ ಬಾಲಾಸಾಹೇಬ್ ದೇವರಸ್ ಅವರು ೨೦ ರಿಂದ ೩೦ ವರ್ಷಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಹೇಳಿದ್ದು ನನಗೆ ನೆನಪಿದೆ, ಆಗ ಮಾತ್ರ ಇದು ನೆರವೇರುತ್ತದೆ. ನಾವು ಪ್ರಯಾಸಪಟ್ಟಿದ್ದೇವೆ ಮತ್ತು ೩೦ ನೇ ವರ್ಷದ ಆರಂಭದಲ್ಲಿ, ನಮ್ಮ ನಿರ್ಣಯವನ್ನು ಈಡೇರಿಸಿದ ಸಂತೋಷವನ್ನು ಪಡೆದುಕೊಂಡಿದ್ದೇವೆ ಎಂದು ಭಾಗವತ್ ಹೇಳಿದರು. ಮೂರು ದಶಕಗಳ ಕಾಲ ತನ್ನ ರಾಜಕೀಯವನ್ನು ವ್ಯಾಖ್ಯಾನಿಸಿದ ಬಿಜೆಪಿಯ ಚಳವಳಿಯನ್ನು ಫಲಪ್ರದಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಮ ಮಂದಿರದ  ಭೂಮಿ ಪೂಜೆಯನ್ನು ನಡೆಸಿದ ನಂತರ ಅವರು ಮಾತನಾಡಿದರು. ಇಂದು ಇಡೀ ದೇಶದಲ್ಲಿ ಸಂತೋಷದ ಅಲೆಯಿದೆ. ಶತಮಾನಗಳ ಭರವಸೆಯ ನೆರವೇರಿಕೆಯ ಬಗ್ಗೆ ಒಂದು ಸಂತೋಷವಿದೆ. ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೊರತೆಯಿದ್ದ ಆತ್ಮವಿಶ್ವಾಸವನ್ನು ಇಂದು ಸ್ಥಾಪಿಸಿದ್ದರಿಂದ ಅತ್ಯಂತ ಸಂತೋಷವಾಗಿದೆ ಎಂದು ಅವರು ಹೇಳಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರಕ್ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿರುವುದು ಹೊಸ ಯುಗದ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ 2020  ಆಗಸ್ಟ್ 05ರ ಬುಧವಾರ ಹೇಳಿದರು. ಕೋವಿಡ್-೧೯ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಇರುವ ಶಾ, ಭೂಮಿ ಪೂಜೆ ಸಮಾರಂಭ ನಡೆದ ದಿನವನ್ನುಐತಿಹಾಸಿಕ ದಿನ ಎಂದು ಬಣ್ಣಿಸಿದರು. ಇಂದು ಭಾರತಕ್ಕೆ ಐತಿಹಾಸಿಕ ಮತ್ತು ಹೆಮ್ಮೆಯ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನಡೆಸಿದರು ಮತ್ತು ಭವ್ಯ ರಾಮ ಮಂದಿರಕ್ಕೆ ಅಡಿಪಾಯ ಹಾಕಿದರು, ಇದು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಸುವರ್ಣ ಅಧ್ಯಾಯವನ್ನು ಸೂಚಿಸುತ್ತದೆ ಮತ್ತು ಹೊಸ ಯುಗವನ್ನು ಪ್ರಾರಂಭಿಸಿದೆ ಎಂದು ಅವರು ಟ್ವೀಟಿನಲ್ಲಿ ಬರೆದರು. ರಾಮ ಮಂದಿರ ಶಿಲಾನ್ಯಾಸ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಿದ ಅವರು, ಮೋದಿಯವರ ನಿರ್ಣಾಯಕ ನಾಯಕತ್ವದಿಂದಾಗಿ ದೇವಾಲಯದ ನಿರ್ಮಾಣ ಸಾಧ್ಯವಾಗಿದೆ ಎಂದರು. ‘ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮೋದಿ ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ’ ಎಂದೂ ಅವರು ಹೇಳಿದರು. ಮತ್ತೊಂದು ಟ್ವೀಟ್ನಲ್ಲಿ ಅವರು, ‘ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣವು ಶತಮಾನಗಳಿಂದಲೂ ವಿಶ್ವಾದ್ಯಂತ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಭೂಮಿ ಪೂಜೆ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೋಟ್ಯಂತರ ಜನರ ನಂಬಿಕೆಯನ್ನು ಗೌರವಿಸಿದ್ದಾರೆ ಮತ್ತು ಇದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಬರೆದರು. ಶ್ರೀರಾಮನ ಪಾತ್ರ ಮತ್ತು ಜೀವನದ ತತ್ತ್ವವು ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದೆ ಮತ್ತು ದೇವಾಲಯವು ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಶಾ ಹೇಳಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಮುಂಬೈ: ಮಂಗಳವಾರ ರಾತ್ರಿಯಿಂದ ಆರ್ಥಿಕ ರಾಜಧಾನಿ ಮುಂಬೈ ಮತ್ತು ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಘ್ಘಾರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ರೈಲ್ವೆ ಹಳಿಗಳು ಮತ್ತು ರಸ್ತೆಗಳಲ್ಲಿ ನೀರು ಪ್ರವೇಶಿಸಿದ್ದರಿಂದ ಸ್ಥಳೀಯ ರೈಲು ಮತ್ತು ಬಸ್ ಸೇವೆಗಳು 2020  ಆಗಸ್ಟ್ 05ರ ಬುಧವಾರ ಸ್ಥಗಿತಗೊಂಡವು.  ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ನಗರ ಮತ್ತು ಅದರ ಉಪನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಮನೆಯೊಳಗೆ ಇರಲು ಜನರಿಗೆ ಎಚ್ಚರಿಕೆ ನೀಡಿದೆ. ಮುಂಬೈ ಮತ್ತು ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯ ಜೀವನವು ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ಹೇಳಿದರು. ಇಂದು ಮುಂಬಯಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆಯಿದೆ. ಕಳೆದ ೧೨ ಗಂಟೆಗಳಲ್ಲಿ ನಗರದ ಹಲವೆಡೆ ಭಾರೀ ಮಳೆಯಾಗಿದೆ. ಪಶ್ಚಿಮ ಉಪನಗರಗಳಲ್ಲಿ ೧೫೦ ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ಬುಧವಾರ ತಿಳಿಸಿತು. ಮಹಾರಾಷ್ಟ್ರದ ಮುಂಬೈ, ಥಾಣೆ, ಪಾಲ್ಘಾರ್, ರಾಯಗಢ, ಪುಣೆ, ಅಹ್ಮದನಗರ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಮುಂಬೈಗೆ ಹವಾಮಾನ ಏಜೆನ್ಸಿಯ ಎಚ್ಚರಿಕೆ ಕೇವಲ ಬುಧವಾರಕ್ಕೆ ಸೀಮಿತವಾಗಿದ್ದರೆ, ಥಾಣೆ, ಪಾಲ್ಘ್ಘಾರ್ ಮತ್ತು ನಾಸಿಕ್ನಲ್ಲಿ ಬುಧವಾರ ಮತ್ತು ಗುರುವಾರ ಎರಡೂ ದಿನಕ್ಕೆ ಎಚ್ಚರಿಕೆ ನೀಡಲಾಯಿತು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನವದೆಹಲಿಯಿಂದ ಚೀನಾದ ಗುವಾಂಗ್ ಝೊವುಗೆ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ರಾಜತಾಂತ್ರಿಕರ ಕುಟುಂಬಗಳು, ಬಹುರಾಷ್ಟ್ರೀಯ ಬ್ಯಾಂಕುಗಳ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ಸುಮಾರು ೧೫೦ ಭಾರತೀಯರು ಚೀನಾಕ್ಕೆ ಮರಳುವ ನಿರೀಕ್ಷೆಯಿದ್ದು, ಅವರ ಯಾನಕ್ಕೆ 2020  ಆಗಸ್ಟ್ 05ರ ಬುಧವಾರ ಒಪ್ಪಿಗೆ ನೀಡಿರುವ ಚೀನಾ ಕಟ್ಟುನಿಟ್ಟಿನ ಕೋವಿಡ್-೧೯ ವೈದ್ಯಕೀಯ ಶಿಷ್ಟಾಚಾರ ಪಾಲನೆಯ ಷರತ್ತು ವಿಧಿಸಿತು. ಜೂನ್ ೨೯ ರಂದು ನಡೆಸಲಾಗಿದ್ದ ಕೊನೆಯ ವಿಶೇಷ ಹಾರಾಟದಲ್ಲಿ ಬೀಜಿಂಗ್, ಭಾರತೀಯರಿಗೆ  ಚೀನಾ ಪ್ರವೇಶಕ್ಕೆ  ಅನುಮತಿ ನೀಡದ ಹಿನ್ನೆಲೆಯಲ್ಲಿ ಭಾರತೀಯ ಮತ್ತು ಚೀನಾದ ಅಧಿಕಾರಿಗಳ ನಡುವೆ ತೀವ್ರ ಚರ್ಚೆಗಳು ನಡೆದಿದ್ದವು. ಪ್ರತಿಯೊಬ್ಬ ವ್ಯಕ್ತಿಯು ಐದು ದಿನಗಳಲ್ಲಿ (ಬೋರ್ಡಿಂಗ್ ಮೊದಲು) ಸೀರಮ್ ಆಂಟಿಬಾಡಿ ಪತ್ತೆ ಮತ್ತು ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ಮಾಡಿದ್ದರೆ ಮತ್ತು ಅವರ ವೈಯಕ್ತಿಕ ಆರೋಗ್ಯ ಫಾರಂಗಳನ್ನು ನವದೆಹಲಿಯ ಚೀನೀ ರಾಯಭಾರ ಕಚೇರಿಯಿಂದ ಅನುಮೋದಿಸಿದ್ದರೆ ಮಾತ್ರ ಭಾರತೀಯರಿಗೆ ಗುರುವಾರ ಹಾರಾಟದಲ್ಲಿ ಅವಕಾಶ ನೀಡಲಾಗುವುದು ಎಂದು ಚೀನಾದ ಅಧಿಕಾರಿಗಳು ಸ್ಪಷ್ಟಪಡಿಸಿದರು. ಪ್ರಯಾಣಿಕರು ಗುವಾಂಗ್ ಝೊವುನಲ್ಲಿ ಇಳಿದ ನಂತರ ಹೊಸ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಯನ್ನು  ಎದುರಿಸಬೇಕಾಗುತ್ತದೆ. ಸಕಾರಾತ್ಮಕವಾಗಿದ್ದರೆ, ಪ್ರಯಾಣಿಕರು ಅದೇ ವಿಮಾನದಲ್ಲಿ ನವದೆಹಲಿಗೆ ಮರಳಬೇಕಾಗುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 05 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment