ಇಂದಿನ ಇತಿಹಾಸ History Today ಆಗಸ್ಟ್ 16
2020: ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದ ಸಚಿವ ಚೇತನ್ ಚೌಹಾಣ್ ಅವರು ಕೊರೋನಾ ಸೋಂಕಿನ ಪರಿಣಾಮವಾಗಿ 2020 ಆಗಸ್ಟ್ 16ರ ಭಾನುವಾರ ನಿಧನರಾದರು. ಈ ವಿಚಾರವನ್ನು ಚೇತನ್ ಅವರ ಸಹೋದರ ಪುಷ್ಪೇಂದ್ರ ಚೌಹಾಣ್ ತಿಳಿಸಿದರು. ೭೨ ವರ್ಷದ ಚೌಹಾಣ್ ಅವರಿಗೆ ಕೋವಿಡ್ ಇರುವುದು ಕಳೆದ ಶುಕ್ರವಾರ ದೃಢಪಟ್ಟಿತ್ತು. ಅವರು ಲಕ್ನೋದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚೌಹಾಣ್ ಅವರನ್ನು ಆರಂಭದಲ್ಲಿ ಲಖನೌದ ಎಸ್ಜಿಪಿಜಿಐನಲ್ಲಿ ದಾಖಲಿಸಲಾಗಿತ್ತು. ನಂತರ ಗುರುಗ್ರಾಮದ ಮೇದಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.ಚೇತನ್ ಚೌಹಾಣ್ ಅವರು ೧೯೬೯ ಮತ್ತು ೧೯೭೮ರ ನಡುವೆ ೪೦ ಟೆಸ್ಟ್ ಪಂದ್ಯಗಳಲ್ಲಿ ಆಡಿ, ೨೦೮೪ ರನ್ ಗಳಿಸಿದ್ದರು. ಉತ್ತರ ಪ್ರದೇಶ ಸರ್ಕಾರದಲ್ಲಿ ಚೇತನ್ ಚೌಹಾಣ್ ಅವರು ಸೈನಿಕ ಕಲ್ಯಾಣ, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಖಾತೆಗಳ ಸಚಿವರಾಗಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment