ನಾನು ಮೆಚ್ಚಿದ ವಾಟ್ಸಪ್

Wednesday, August 12, 2020

ಇಂದಿನ ಇತಿಹಾಸ History Today ಆಗಸ್ಟ್ 12

 ಇಂದಿನ ಇತಿಹಾಸ  History Today ಆಗಸ್ಟ್ 12

2020: ನವದೆಹಲಿ: ಚೀನಾ ಜೊತೆಗೆ ನೈಜ ನಿಯಂತ್ರಣ ರೇಖೆಯಲ್ಲಿನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದ ಎರಡು ಹಗುರ ಸಮರ ಹೆಲಿಕಾಪ್ಟರ್ಗಳನ್ನು (ಎಲ್ಸಿಎಚ್) ಲಡಾಖ್ ವಲಯದಲ್ಲಿ ಭಾರತೀಯ ವಾಯುಪಡೆಗೆ ಬೆಂಬಲವಾಗಿ ಕ್ಷಿಪ್ರ ಅವಧಿಯ ನೋಟಿಸ್ ನೀಡಿ ನಿಯೋಜಿಸಲಾಗಿದೆ. ಹೇಳಿಕೆ  ಒಂದರಲ್ಲಿ ಬುಧವಾರ ವಿಚಾರವನ್ನು ಎಚ್ಎಎಲ್  2020 ಆಗಸ್ಟ್  12ರ ಬುಧವಾರ ತಿಳಿಸಿತು. ಭಾರತದ ಸಶಸ್ತ್ರ ಪಡೆಗಳ ವಿಶಿಷ್ಟ ಹಾಗೂ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದ ವಿಶ್ವದಲ್ಲೇ ಅತ್ಯಂತ ಹಗುರವಾದ ದಾಳಿ ಹೆಲಿಕಾಪ್ಟರ್ ಇದಾಗಿದ್ದು, ಸ್ವಾವಲಂಬಿ ಭಾರತದಲ್ಲಿ (ಆತ್ಮ ನಿರ್ಭರ ಭಾರತ) ಎಚ್ಎಎಲ್ ವಹಿಸಿರುವ ನಿರ್ಣಾಯಕ ಪಾತ್ರವನ್ನು ಇದು ಪ್ರತಿಬಿಂಬಿಸಿದೆ ಎಂದು ಎಚ್ ಎಎಲ್ ಅಧ್ಯಕ್ಷ ಆರ್. ಮಾಧವನ್ ಇಲ್ಲಿ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ೧೦೧ ವಿವಿಧ ರೀತಿಯ ಶಸ್ತ್ರಾಸ್ತ್ರಗಳು, ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳ ಆಮದನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ಋಣಾತ್ಮಕ ಆಮದು ಪಟ್ಟಿಯಲ್ಲಿ ಲಘು ಸಮರ ಹೆಲಿಕಾಪ್ಟರ್ ಸೇರಿದೆ. ಸರ್ಕಾರಿ ವಿಮಾನ ತಯಾರಕರು ವರ್ಷಾಂತ್ಯದ ವೇಳೆಗೆ ಭಾರತೀಯ ವಾಯುಪಡೆದ (ಐಎಎಫ್) ೧೦ ಮತ್ತು ಸೈನ್ಯಕ್ಕೆ ಐದು ಹೀಗೆ ಒಟ್ಟು ೧೫ ಎಲ್ಸಿಎಚ್ಗಳಿಗೆ ಆದೇಶವನ್ನು ನಿರೀಕ್ಷಿಸುತ್ತಿದ್ದಾರೆ. ಐಎಎಫ್ ಮತ್ತು ಸೈನ್ಯಕ್ಕೆ ಒಟ್ಟಾಗಿ ೧೬೦ ಎಲ್ಸಿಎಚ್ಗಳು ಬೇಕಾಗುತ್ತವೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ:  ಧರ್ಮ ಪ್ರೊಡಕ್ಷನ್ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಗುಂಜನ್ ಸಕ್ಸೇನಾ- ದಿ ಕಾರ್ಗಿಲ್ ಗರ್ಲ್ ಚಿತ್ರದಲ್ಲಿ ತನ್ನ ಕೆಲಸದ ಸಂಸ್ಕೃತಿಯ ಬಗೆಗಿನ ನಕಾತಾತ್ಮಕ ಚಿತ್ರಣಕ್ಕೆ ಭಾರತೀಯ ವಾಯುಪಡೆ (ಐಎಎಫ್) 2020 ಆಗಸ್ಟ್  12ರ ಬುಧವಾರ ಆಕ್ಷೇಪ ವ್ಯಕ್ತಪಡಿಸಿತು. ಧರ್ಮ ಪ್ರೊಡಕ್ಷನ್, ನೆಟ್ಫ್ಲಿಕ್ಸ್ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಗೆ (ಸಿಬಿಎಫ್ಸಿ) ಬರೆದಿರುವ ಪತ್ರದಲ್ಲಿ, ಐಎಎಫ್ ಚಲನಚಿತ್ರ ಮತ್ತು ಟ್ರೈಲರ್ನಲ್ಲಿನ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ವೀಕ್ಷಣೆಗಾಗಿ ಒದಗಿಸಲಾಗಿದ್ದು, ’ಭಾರತೀಯ ವಾಯುಪಡೆಯನ್ನು ಅನಗತ್ಯವಾಗಿ ಋಣಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ತಿಳಿಸಿತು. ಆರಂಭಿಕ ತಿಳುವಳಿಕೆಯ ಪ್ರಕಾರ, ಭಾರತೀಯ ವಾಯುಪಡೆಯನ್ನು ಅಧಿಕೃತವಾಗಿ ಪ್ರತಿನಿಧಿಸಲು ಮತ್ತು ಚಿತ್ರವು ಮುಂದಿನ ತಲೆಮಾರಿನ ಐಎಎಫ್ ಅಧಿಕಾರಿಗಳಿಗೆ ಸ್ಫೂರ್ತಿ ನೀಡುವಂತೆ ಚಿತ್ರೀಕರಿಸಲು ಧರ್ಮ ಪ್ರೊಡಕ್ಷನ್ ಒಪ್ಪಿಕೊಂಡಿತ್ತು.   ಚಲನಚಿತ್ರದ ಟ್ರೈಲರ್ರನ್ನು ಓವರ್ ಟಾಪ್ (ಒಟಿಟಿ) ಪ್ಲಾಟ್ಫಾರ್ಮ್ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ ಎಂದು ಐಎಎಫ್ ತನ್ನ ಪತ್ರದಲ್ಲಿ ತಿಳಿಸಿದೆ. ಐಎಎಫ್ ತನ್ನ ಮಾಹಿತಿಯ ಪ್ರಕಾರ, ಚಿತ್ರವನ್ನು ಬುಧವಾರ ಬಿಡುಗಡೆ ಮಾಡಲಾಗುತ್ತಿದೆ. "ಎಕ್ಸ್-ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಸಿನಿ ಪಾತ್ರವನ್ನು ವೈಭವೀಕರಿಸುವ ಉದ್ದೇಶದಿಂದ, ಧರ್ಮ ಪ್ರೊಡಕ್ಷನ್ಸ್ ಜನರನ್ನು ತಪ್ಪುದಾರಿಗೆಳೆಯುವ ಮತ್ತು ಅಸಮರ್ಪಕವಾದ ಕೆಲಸದ ಸಂಸ್ಕೃತಿಯನ್ನು ಚಿತ್ರಿಸುವ, ವಿಶೇಷವಾಗಿ ಭಾರತೀಯ ವಾಯುಪಡೆಯಲ್ಲಿ ಮಹಿಳೆಯರ ವಿರುದ್ಧದ ಕೆಲವು ಸನ್ನಿವೇಶಗಳನ್ನು  ಪ್ರಸ್ತುತಪಡಿಸಿದೆ ಎಂದು ಪತ್ರ ವಿವರಿಸಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ನ್ಯಾಯಾಲಯದಲ್ಲಿ ಎಲೆಕ್ಟ್ರಾನಿಕ್ ಪುರಾವೆಗಳನ್ನು ನೀಡುವ ಮೊದಲು ಪ್ರತಿ ಬಾರಿಯೂ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ 2020 ಆಗಸ್ಟ್  12ರ ಬುಧವಾರ ತೀರ್ಪು ನೀಡಿತು. ಮೂಲ ಸಾಧನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ಸಾಧ್ಯವಿದ್ದರೆ, ಡಿಸ್ಕ್, ಪೆನ್ ಡ್ರೈವ್ ಮುಂತಾದ ಎಲೆಕ್ಟ್ರಾನಿಕ್ ಪುರಾವೆಗಳನ್ನು ಒದಗಿಸಲು ಯಾವುದೇ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಅದು ಕೋರ್ಟ್ ಹೇಳಿತು. ಸಾಕ್ಷ್ಯ ಕಾಯ್ದೆಯ (ಎವಿಡೆನ್ಸ್ ಆಕ್ಟ್) ಸೆಕ್ಷನ್ ೬೫ ಬಗ್ಗೆ ಕಾನೂನನ್ನು ಸ್ಪಷ್ಟಪಡಿಸಿದ ನ್ಯಾಯಮೂರ್ತಿ ರೋಹಿಂಟನ್ ಎಫ್ ನಾರಿಮನ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ನ್ಯಾಯಾಲಯದಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಹಾಜರುಪಡಿಸುವ ಮೊದಲು ಪ್ರತಿಯೊಂದು ಪ್ರಕರಣದಲ್ಲೂ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಹೇಳಿದರು. ಲ್ಯಾಪ್ಟಾಪ್ ಅಥವಾ ಫೋನ್ನಂತಹ ಮೂಲ ಸಾಧನದೊಂದಿಗೆ ಒಬ್ಬ ವ್ಯಕ್ತಿಯು ಸಾಕ್ಷಿ ಪೆಟ್ಟಿಗೆಗೆ ಹೆಜ್ಜೆ ಹಾಕಲು ಸಾಧ್ಯವಾದರೆ, ಕಾಯಿದೆಯ ಸೆಕ್ಷನ್ ೬೫ ಬಿ () ಅಡಿಯಲ್ಲಿ ಪ್ರಮಾಣಪತ್ರದ ಪೂರ್ವ ಅವಶ್ಯಕತೆಯಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಅಧಿಕೃತತೆಯನ್ನು ಉಪಕರಣದ ನಿರ್ಮಾಪಕನನ್ನು ಕರೆಸಿ ಸಾಕ್ಷಿ ಪೆಟ್ಟಿಗೆಯಲ್ಲಿ ಸಾಬೀತು ಪಡಿಸಬಹುದು ಎಂದು ಪೀಠ ಹೇಳಿತು. ಅಂತಹ ಪುರಾವೆಗಳನ್ನು ನೆಟ್ವರ್ಕ್ನಲ್ಲಿ ಅಥವಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗದ ಸರ್ವರ್ನಲ್ಲಿ ಸಂಗ್ರಹಿಸಲಾಗಿದ್ದರೆ, ಅಂತಹ ಪ್ರಕರಣಗಳಲ್ಲಿ ಪ್ರಮಾಣಪತ್ರದ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ ೬೦,೯೬೩ ಹೊಸ ಪ್ರಕರಣಗಳೊಂದಿಗೆ ಕೋವಿಡ್-೧೯ ಸೋಂಕು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 12ರ ಬುಧವಾರ ೨೩ ಲಕ್ಷ ದಾಟಿತು. ಇದೇ ವೇಳೆಗೆ ಗುಣಮುಖರಾಗಿ ಚೇತರಿಸಿದ ಪ್ರಕರಣಗಳ ಸಂಖ್ಯೆ ಒಟ್ಟು ೧೬,೩೯,೫೯೯ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು. ದೇಶದ ಒಟ್ಟು ಕೊರೋನಾವೈರಸ್ ಪ್ರಕರಣಗಳು ೨೩,೨೯,೬೩೮ಕ್ಕೆ ಏರಿವೆ, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೮೩೦ ಮಂದಿ ಸಾವನ್ನಪ್ಪುವುದರೊಂದಿಗೆ ಕೊರೋನಾ ಸಾವಿನ ಸಂಖ್ಯೆ ೪೬,೦೯೧ಕ್ಕೆ ಏರಿದೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತಿಳಿಸಿದೆ. ಆಗಸ್ಟ್ ರಂದು ಭಾರತದಲ್ಲಿ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ೨೦ ಲಕ್ಷದ ಗಡಿ ದಾಟಿತ್ತು. ದೇಶದಲ್ಲಿ ಪ್ರಸ್ತುತ ,೪೩,೯೪೮ ಸಕ್ರಿಯ ಕೊರೋನಾವೈರಸ್ ಸೋಂಕಿನ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ  ಶೇಕಡಾ ೨೭.೬೪ ರಷ್ಟಾಗಿದೆ ಎಂದು ಅಂಕಿ ಅಂಶಗಳು ಹೇಳಿವೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಅಂತಿಮ ಎಚ್ಚರಿಕೆ ನೀಡಿದ ಬಳಿಕ ಕೆಂಡಾಮಂಡಲ ಸಿಟ್ಟಿಗೆದ್ದಿರುವ ಸೌದಿ ಅರೇಬಿಯಾದ ಕೋಪ ಶಮನಗೊಳಿಸಲು ಯತ್ನಿಸುವ ಸಲುವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಅಹ್ಮದ್ ಬಜ್ವಾ ಮುಂದಿನ ವಾರ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಾಕಿಸ್ತಾನ ಪತ್ರಿಕೆದಿ ನ್ಯೂಸ್2020 ಆಗಸ್ಟ್ 12ರ ಬುಧವಾರ ವರದಿ ಮಾಡಿತು. ಕಳೆದ ವಾರ ಸಂದರ್ಶನವೊಂದರಲ್ಲಿ ವಿದೇಶಾಂಗ ಸಚಿವರು ಸೌದಿ ನೇತೃತ್ವದ ಇಸ್ಲಾಮಿಕ್ ಸಮ್ಮೇಳನದ ಸಂಘಟನೆಯ ವಿದೇಶಾಂಗ ಮಂತ್ರಿಗಳ ಸಭೆ ಕರೆಯುವಂತೆ ಆಗ್ರಹಿಸಿದ್ದರು. "ನೀವು ಸಭೆ ಕರೆಯಲು ಸಾಧ್ಯವಾಗದಿದ್ದರೆ, ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿಲ್ಲಲು ಮತ್ತು ತುಳಿತಕ್ಕೊಳಗಾದ ಕಾಶ್ಮೀರಿಗಳನ್ನು ಬೆಂಬಲಿಸಲು ಸಿದ್ಧವಾಗಿರುವ ಇಸ್ಲಾಮಿಕ್ ರಾಷ್ಟ್ರಗಳ ಸಭೆಯನ್ನು ಕರೆಯಲು ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೇಳಿಕೊಳ್ಳುತ್ತೇನೆ" ಎಂದು ಖುರೇಷಿ ಟಿವಿ ಮಾಧ್ಯಮಕ್ಕೆ ತಿಳಿಸಿದ್ದರು. ವಿದೇಶಾಂಗ ಸಚಿವಾಲಯವು ನಂತರ ಸಚಿವರ ಅಂತಿಮ ಎಚ್ಚರಿಕೆಯನ್ನು ಅನುಸರಿಸಿ, ಇದು ಬಾಯ್ತಪ್ಪಿನ ಹೇಳಿಕೆಯಲ್ಲ ಎಂಬುದನ್ನು ಸಂಕೇತಿಸಿತ್ತು. ವಿದೇಶಾಂಗ ಸಚಿವರ ಹೇಳಿಕೆ ರಾಜತಾಂತ್ರಿಕ ಮಾನದಂಡಗಳಿಗೆ ವಿರುದ್ಧವಾಗಿದೆ ಎಂಬ ಸಲಹೆಗಳನ್ನು ವಿದೇಶಾಂಗ ಕಚೇರಿ ತಿರಸ್ಕರಿಸಿತ್ತು. ಬಳಿಕ ವಿದೇಶಾಂಗ ಸಚಿವ ಖುರೇಷಿ ಸ್ಪಷ್ಟೀಕರಣ ನೀಡಲು ಎರಡು ಬಾರಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಆದರೆ ನಂತರ ಆಹ್ವಾನಗಳನ್ನು ರದ್ದುಪಡಿಸಿದ್ದರು. ಇಸ್ಲಾಮಾಬಾದಿನಲ್ಲಿ ರದ್ದಾದ ಸುದ್ದಿಗೋಷ್ಠಿಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಸುಸ್ಥಿತಿಗೆ ತರಲು ಕೇವಲ ಸ್ಪಷ್ಟೀಕರಣವು ಸಾಕಾಗುವುದಿಲ್ಲ ಎಂಬ ಸರ್ಕಾರದ ನಿರ್ಣಯವನ್ನು ಪ್ರತಿಬಿಂಬಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 12 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment