ನಾನು ಮೆಚ್ಚಿದ ವಾಟ್ಸಪ್

Friday, August 7, 2020

ಇಂದಿನ ಇತಿಹಾಸ History Today ಆಗಸ್ಟ್ 07

 ಇಂದಿನ ಇತಿಹಾಸ  History Today ಆಗಸ್ಟ್ 07

2020: ನವದೆಹಲಿ/ ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ 2020 ಆಗಸ್ಟ್  07ರ ಶುಕ್ರವಾರ ಭೀಕರ ಮಳೆಯಿಂದಾಗಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ ೧೫ ಮಂದಿ ಸಾವನ್ನಪ್ಪಿದ್ದು, ಇತರ ೭೦ಕ್ಕೂ ಹೆಚ್ಚು ಮಂದಿ ಮಣ್ಣಿನ ಅವಶೇಷಗಳ ಅಡಿ ಸಿಕ್ಕಿ ಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿದವು. ಘಟನೆಯ ಬಗ್ಗೆ ತೀವ್ರ ಆತಂಕ ಮತ್ತು ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಇಡುಕ್ಕಿಯ ರಾಜಮಲೈಯಲ್ಲಿನ ಚಹಾ ಎಸ್ಟೇಟ್ ಕಾರ್ಮಿಕರ ವಸಾಹತು ಶುಕ್ರವಾರ ಮುಂಜಾನೆ ಭೂಕುಸಿvದಲ್ಲಿ ಸಿಕ್ಕಿಹಾಕಿಕೊಂಡಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು. ರಕ್ಷಣಾ ಕಾರ್ಯದಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಇಡುಕ್ಕಿಯ ರಾಜಮಲೈ ಭೂಕುಸಿತ ಸಂತ್ರಸ್ತರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪೊಲೀಸ್, ಅಗ್ನಿಶಾಮಕ, ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತ್ರಿಶ್ಯೂರ್ ಮೂಲದ ಎನ್‌ಡಿಆರ್‌ಎಫ್‌ನ ಮತ್ತೊಂದು ತಂಡ ಶೀಘ್ರದಲ್ಲೇ ಇಡುಕಿಯನ್ನು ತಲುಪಲಿದೆಎಂದು ವಿಜಯನ್ ಟ್ವೀಟ್ ಮಾಡಿದ್ದಾರೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಚೀನಾವು ಏಪ್ರಿಲ್ ೨೦ರ ಪೂರ್ವದ ಯಥಾಸ್ಥಿತಿ ಪುನಃಸ್ಥಾಪನೆ ಮಾಡುವವರೆಗೆ ಭಾರತೀಯ ಸೇನೆಯು ,೫೯೭ ಕಿಮೀ ಉದ್ಧದ ನೈಜ ನಿಯಂತ್ರಣ ರೇಖೆಯಿಂದ ಕದಲುವುದಿಲ್ಲ ಎಂದು ಭಾರತವು ಚೀನಾಕ್ಕೆ ಖಡಕ್ ಉತ್ತರ ನೀಡಿದೆ.  ಹಾಲಿ ಸ್ಥಿತಿಗತಿಯ ಆಧಾರದಲ್ಲೇ ಮಾತುಕತೆ ಮುಂದುವರೆಸಲು ಚೀನಾದ ಪೀಪಲ್ಸ್ ಲಿಬರೇಶಷನ್ ಆರ್ಮಿಯು ಪ್ರಸ್ತಾಪ ಮುಂದಿಟ್ಟಾಗ ಭಾರತೀಯ ಸೇನೆಯು ತನ್ನ ನಿಲುವನ್ನು ಖಡಕ್ ಶಬ್ದದಲ್ಲಿ ಹೇಳಿದೆ ಎಂದು ವಿಶ್ವಸನೀಯ ಮೂಲಗಳು  2020 ಆಗಸ್ಟ್  07ರ ಶುಕ್ರವಾರ ಹೇಳಿದವು. ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಪೂರ್ವ ಲಡಾಖ್‌ನ ಘರ್ಷಣೆಯ ಸ್ಥಳಗಳಲ್ಲಿ ಏಪ್ರಿಲ್ ೨೦ಕ್ಕೆ ಪೂರ್ವದ ಸ್ಥಿತಿಯನ್ನು ಪುನಃಸ್ಥಾಪಿಸುವುದು ಭಾರತದ ಪೂರ್ವ ಷರತ್ತು ಆಗಿದೆ ಎಂಬುದಾಗಿ ಭಾರತವು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಚೀನಾಕ್ಕೆ ತಿಳಿಸಿದೆ. ಆದರೆ ಚೀನಾ ಇದಕ್ಕೆ ಒಪ್ಪಿಲ್ಲ ಎಂದು ಮೂಲಗಳು ಹೇಳಿವೆ.  ‘ಪಿಎಲ್‌ಎ ಇದನ್ನು ದೃಷ್ಟಿಯುದ್ಧವನ್ನಾಗಿ ಮಾಡಿದ್ದು, ಭಾರತವು ಕಣ್ಣು ಮಿಟುಕಿಸಬೇಕು ಎಂದು ಬಯಸಿದೆ. ನಾವು ಕಾಯಲು ಸಿದ್ದರಿದ್ದೇವೆ ಮತ್ತು ಗಡಿ ವಿವಾದವು ದ್ವಿಪಕ್ಷೀಯ ಸಂಬಂಧದ ಮೇಲೆ ಬೀರುವ ದುಷ್ಪರಿಣಾಮವನ್ನು ಬೀಜಿಂಗ್ ಅರಿತುಕೊಳ್ಳುವಂತೆ ಮಾಡಲು ಇತರ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.  ಭಾರತವು ಈಗಾಗಲೇ ೧೦೦ ಕ್ಕೂ ಹೆಚ್ಚು ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮತ್ತು ಅದರ ತದ್ರೂಪುಗಳನ್ನು ನಿಷೇಧಿಸಿದೆ, ಚೀನಾದ ಸಂಸ್ಥೆಗಳಿಗೆ ಸರ್ಕಾರಿ ಒಪ್ಪಂದಗಳನ್ನು ಪಡೆಯುವುದನ್ನು ತಡೆಯಲು ನಿಯಮಗಳನ್ನು ಬದಲಾಯಿಸಿದೆ ಮತ್ತು ಚೀನಾದ ವಿಶ್ವವಿದ್ಯಾನಿಲಯಗಳೊಂದಿಗೆ ಅಸ್ತಿತ್ವದಲ್ಲಿರುವ ನಿಯಮಗಳನ್ನು ಅನುಸರಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸುತ್ತಿದೆ. ಕಮಾಂಡರ್-ಇನ್-ಚೀಫ್ ಕ್ಸಿ ಜಿನ್‌ಪಿಂಗ್ ನೇತೃತ್ವದ ಪಿಎಲ್‌ಎ ಗಡಿಯಿಂದ ಸೇನೆ ವಾಪಸಾತಿ ಮಾಡಿ, ಹಿಂದಿನ ಯಥಾಸ್ಥಿತಿ ಪುನಃಸ್ಥಾಪನೆಯನ್ನು ವಿಳಂಬಗೊಳಿಸಿದಷ್ಟೂ, ಅದು ಭಾರತ-ಚೀನಾ ಸಂಬಂಧಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ ಎಂಬ ಸಂದೇಶವನ್ನು ಸ್ಪಷ್ಟ ಶಬ್ದಗಳಲ್ಲಿ ಅಲ್ಲದೇ ಹೋದರೂ ಸೂಚ್ಯವಾಗಿ ಭಾರತ ಚೀನಾಕ್ಕೆ ರವಾನಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತ ಮತ್ತು ಇತರರಿಗಾಗಿ ೧೦೦ ದಶಲಕ್ಷ (ಮಿಲಿಯನ್) ಡೋಸ್‌ನಷ್ಟು ಕೋವಿಡ್ -೧೯ ಲಸಿಕೆ ಉತ್ಪಾದನೆಯನ್ನು ತ್ವರಿತಗೊಳಿಸಲು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ಗವಿ ಮತ್ತು ಬಿಲ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ಜೊತೆಗೆ 2020 ಆಗಸ್ಟ್ 07ರ ಶುಕ್ರವಾರ ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಯ ಹೊಸ ಪಾಲುದಾರಿಕೆ ಒಪ್ಪಂದವನ್ನು ಮಾಡಿಕೊಂಡಿತು.  ಭಾರತ ಮತ್ತು ಇತರ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗ್ಕಿ ೧೦೦ ದಶಲಕ್ಷ (ಮಿಲಿಯನ್) ಡೋಸ್ ಕೋವಿಡ್ -೧೯ ಲಸಿಕೆಗಳ ಉತ್ಪಾದನೆ ಮತ್ತು ವಿತರಣೆಯನ್ನು ವೇಗಗೊಳಿಸುವುದಾಗಿಯೂ ಸಂಸ್ಥೆ ಹೇಳಿತು.  "ಸದರಿ ಸಹಯೋಗವು ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಸ್‌ಐಐಗೆ ಮುಂಗಡ ಬಂಡವಾಳವನ್ನು ಒದಗಿಸುತ್ತದೆ, ಇದರಿಂದಾಗಿ ಒಮ್ಮೆ ಲಸಿಕೆ, ಅಥವಾ ಲಸಿಕೆಗಳು ನಿಯಂತ್ರಕ ಅನುಮೋದನೆ ಮತ್ತು ಡಬ್ಲ್ಯುಎಚ್‌ಒ ಪೂರ್ವಭಾವಿತ್ವವನ್ನು ಪಡೆದುಕೊಂಡರೆ, ಗವಿಯ ಭಾಗವಾಗಿ ಭಾರತ ಮತ್ತು ಎಲ್‌ಎಂಐಸಿಗಳಿಗೆ ವಿತರಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದುಎಂದು ಎಸ್‌ಐಐ ಹೇಳಿಕೆಯಲ್ಲಿ ತಿಳಿಸಿತು. ಪ್ರತಿ ಡೋಸ್‌ಗೆ  ಡಾಲರ್‌ಗಳ (ಸುಮಾರು ೨೨೫ ರೂ.) ಕೈಗೆಟುಕುವ ಸೀಲಿಂಗ್ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ಅಸ್ಟ್ರಾಜೆನೆಕಾ ಮತ್ತು ನೊವಾವಾಕ್ಸ್‌ನ ಲಸಿಕೆಗಳನ್ನು ಎಸ್‌ಐಐನಿಂದ ತುರ್ತು  ಉತ್ಪಾದನೆ ಮಾಡಲು ಹಣವು ಸಹಾಯ ಮಾಡುತ್ತದೆ, ಇದು ಪೂರ್ಣ ಪರವಾನಗಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರೆ ಸಂಗ್ರಹಣೆಗೆ ಲಭ್ಯವಿರುತ್ತದೆ ಎಂದು ಹೇಳಿಕೆ ತಿಳಿಸಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: : ದೇಶದಲ್ಲಿ ಇದೇ ಬಾರಿಗೆ ಕಳೆದ ೨೪ ಗಂಟೆಗಳಲ್ಲಿ ೬೦,೦೦೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಭಾರತದ ಒಟ್ಟು ಕೋವಿಡ್-೧೯ ಪ್ರಕರಣಗಳು 2020 ಆಗಸ್ಟ್ 07ರ ಶುಕ್ರವಾರ ೨೦ ಲಕ್ಷವನ್ನು ದಾಟಿದೆ, ಆಶಾದಾಯಕ ಬೆಳವಣಿಗೆಯಲ್ಲಿ ಇದೇ ವೇಳೆಗೆ ಚೇತರಿಸಿದವರ ಸಂಖ್ಯೆ ೧೩.೭೮ ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು.  ಕೊರೋನಾವೈರಸ್ ಸೋಂಕಿನ ಪ್ರಮಾಣವು ಕೇವಲ ಎರಡು ದಿನಗಳ ಹಿಂದೆ ೧೯ ಲಕ್ಷ ದಾಟಿತ್ತು.  ದೇಶದಲ್ಲಿ ಕೋವಿಡ್ -೧೯ ಪ್ರಕರಣಗಳು ಒಂದು ಲಕ್ಷ ತಲುಪಲು ೧೧೦ ದಿನಗಳು ಮತ್ತು ೧೦ ಲಕ್ಷ ದಾಟಲು ೫೯ ದಿನಗಳು ಬೇಕಾದವು. ಅದರ ನಂತರ ೨೦ ಲಕ್ಷ ದಾಟಲು ಕೇವಲ ೨೧ ದಿನಗಳು ಬೇಕಾದವು.  ಪ್ರತಿದಿನ ೫೦,೦೦೦ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದು ಶುಕ್ರವಾರ ಸತತ ೯ನೇ ದಿನವಾಗಿದೆ.  ಬೆಳಗ್ಗೆ ಗಂಟೆಗೆ ನವೀಕರಿಸಿದ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಒಂದು ದಿನದಲ್ಲಿ ೬೨,೫೩೮ ಪ್ರಕರಣಗಳನ್ನು ಸೇರ್ಪಡೆಯಾಗಿದ್ದು, ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ೨೦,೨೭,೦೭೪ ಕ್ಕೆ ಏರಿದೆ.  ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ೪೧,೫೮೫ ಕ್ಕೆ ಏರಿದ್ದು, ಕಳೆದ ೨೪ ಗಂಟೆಗಳಲ್ಲಿ ೮೮೬ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಅಂಕಿಸಂಖ್ಯೆಗಳು ತೋರಿಸಿದೆ.  ಇದೇ ವೇಳೆಯಲ್ಲಿ ರೋಗದಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ಶುಕ್ರವಾರ ೧೩,೭೮,೧೦೫ ಕ್ಕೆ ಏರಿತು, ಇದರಿಂದಾಗಿ ಚೇತರಿಕೆಯ ಪ್ರಮಾಣವನ್ನು ಶೇಕಡಾ ೬೭.೯೮ ಕ್ಕೆ ಏರಿದೆ. ದೇಶದಲ್ಲಿ ಪ್ರಸ್ತುತ ,೦೭,೩೮೪ ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ ೨೯.೯೬ ರಷ್ಟಿದೆ. ಪ್ರಕರಣಗಳ ಸಾವಿನ ಪ್ರಮಾಣ ಇನ್ನೂ ಕಡಿಮೆಯಾಗಿದ್ದು ಶೇಕಡಾ .೦೭ ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಲಕ್ನೋ: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (೮೦) ಅವರು ಅಸ್ವಸ್ಥರಾಗಿದ್ದು ಅವರನ್ನು ಲಕ್ನೋದ ಮೇಡಂಟ ಆಸ್ಪತ್ರೆಗೆ 2020 ಆಗಸ್ಟ್  06ರ ಗುರುವಾರ ರಾತ್ರಿ ದಾಖಲಿಸಲಾಗಿದೆ. ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಮೂಲಗಳು  2020 ಆಗಸ್ಟ್ 07ರ ಶುಕ್ರವಾರ ತಿಳಿಸಿದವು. ಮುಲಾಯಂ ಸಿಂಗ್ ಅವರಿಗೆ ಹೊಟ್ಟೆ ನೋವು ಇತ್ತು ಮತ್ತು ಹೊಟ್ಟೆ ಸಮಸ್ಯೆಯ ಕಾರಣದಿಂದ ಅವರು ಸಮರ್ಪಕವಾಗಿ ಆಹಾರ ತೆಗೆದುಕೊಳ್ಳಲು ಆಗುತ್ತಿರಲಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ರಾಕೇಶ್ ಕಪೂರ್ ಹೇಳಿದರು. ಸಿಂಗ್ ಅವರ ಒಟ್ಟಾರೆ ಆರೋಗ್ಯ ಸ್ಥಿರವಾಗಿದೆ ಎಂದು ಕಪೂರ್ ಹೇಳಿದರು.  ಹಿರಿಯ ರಾಜಕಾರಣಿಯ ಪುತ್ರ ಅಖಿಲೇಶ್ ಯಾದವ್, ಸೊಸೆ ಡಿಂಪಲ್ ಯಾದವ್ ಸೇರಿದಂತೆ ಸಮಾಜವಾದಿ ಪಕ್ಷದ ಹಲವಾರು ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು. ಇದಕ್ಕೆ ಮುನ್ನ ಮೇ ತಿಂಗಳಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆಗಾಗಿ ಹಿರಿಯ ನಾಯಕನನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 

No comments:

Post a Comment