ನಾನು ಮೆಚ್ಚಿದ ವಾಟ್ಸಪ್

Saturday, August 1, 2020

ಇಂದಿನ ಇತಿಹಾಸ History Today ಆಗಸ್ಟ್ 01

ಇಂದಿನ ಇತಿಹಾಸ  History Today ಆಗಸ್ಟ್ 01

2020: ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಎಚ್‌ಎಸ್‌ಎಲ್) 2020 ಆಗಸ್ಟ್ 01ರ ಶನಿವಾರ ಕಾರ್‍ಯಾಚರಣೆಯಲ್ಲಿ ಕ್ರೇನ್ ಕುಸಿದು ಬಿದ್ದ ಪರಿಣಾಮವಾಗಿ ಹನ್ನೊಂದು ಕಾರ್ಮಿಕರು ಅಸು ನೀಗಿದರು. ತೀವ್ರವಾಗಿ ಗಾಯಗೊಂಡ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಅಪಘಾತದ ಸ್ಥಳಕ್ಕೆ ಧಾವಿಸಿದವು. ‘ಹೊಸ ಕ್ರೇನ್‌ನ್ನು ಅಳವಡಿಸಲಾಗಿದ್ದು, ಇದರ ಪೂರ್ಣ ಪ್ರಮಾಣದ ಕಾರ್ಯಾಚರಣೆ ಸಲುವಾಗಿ ತರಲು ಟ್ರಯಲ್ ರನ್ ನಡೆಸಲಾಗುತ್ತಿತ್ತು. ವೇಳೆಯಲ್ಲಿ ದುರಂತ ಸಂಭವಿಸಿದ್ದು, ಹಿಂದೂಸ್ತಾನ್ ಶಿಪ್‌ಯಾರ್ಡ್ ಮತ್ತು ಆಡಳಿತದ ಉನ್ನತ ಮಟ್ಟದ ಸಮಿತಿಯಿಂದ ವಿಚಾರಣೆ ನಡೆಯಲಿದೆಎಂದು ವೈಜಾಗ್ ಜಿಲ್ಲಾಧಿಕಾರಿ ವಿನಯ್ ಚಂದ್ ಹೇಳಿದರು. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ತುರ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದರು. ಕಾರ್ಮಿಕರು ಹಡಗು ನಿರ್ಮಾಣಕ್ಕೆ ಉಪಕರಣಗಳನ್ನು ಸಾಗಿಸಲು ಬಳಸಲಾಗುವ ಕ್ರೇನ್‌ನ ತಪಾಸಣೆ ನಡೆಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಬೃಹತ್ ಕ್ರೇನ್ ಇದ್ದಕ್ಕಿದ್ದಂತೆ ಮುರಿದು ಭಾರೀ ಸದ್ದಿನೊಂದಿಗೆ ನೆಲಕ್ಕೆ ಅಪ್ಪಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ/ ಲಕ್ನೋ: ಗಡಿಯಾರ ವೇಗವಾಗಿ ಓಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಭೂಮಿ ಪೂಜೆಯ ಭವ್ಯ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿವೆ. ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಮೌನ ಮುರಿದು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂಬ ಆಗ್ರಹಗಳು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರಲಾರಂಭಿಸಿವೆಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು ಮತ್ತು ಕೋವಿಡ್ -೧೯ ಸಾಂಕ್ರಾಮಿಕದ ನಡುವೆಯೇಭೂಮಿ ಪೂಜೆನಡೆಸುವ ನಿರ್ಧಾರವನ್ನು ಸಮರ್ಥಿಸಿದರು. ‘ನಾನು ಭೂಮಿ ಪೂಜೆಯನ್ನು ಸ್ವಾಗತಿಸುತ್ತೇನೆ. ಇದಕ್ಕಾಗಿ ಭಾರತೀಯರು ಕಾಯುತ್ತಿದ್ದಾರೆ ಮತ್ತು ನಾವೆಲ್ಲರೂ ಬಯಸುವುದು ಇದನ್ನೇ. ಇದು ಭಾರತದಲ್ಲಿ ಮಾತ್ರ ಸಾಧ್ಯಎಂದು ಆಗಸ್ಟ್ ಭವ್ಯ ಕಾರ್ಯಕ್ರಮವನ್ನು ಬೆಂಬಲಿಸಿ ಬಹಿರಂಗವಾಗಿ ಮಾತನಾಡಿದ ಕಾಂಗ್ರೆಸ್ಸಿನ ಮೊದಲ ಹಿರಿಯ ನಾಯಕ ಕಮಲನಾಥ್ ಹೇಳಿದರು. ಆರೋಗ್ಯ ಬಿಕ್ಕಟ್ಟಿನ ಮಧ್ಯೆ ಭೂಮಿ ಪೂಜೆ ಕಾರ್ಯದ ಅಗತ್ಯವನ್ನು ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರ ಪಕ್ಷಗಳ ನಾಯಕರಾದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರಂತಹ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿರುವ ಸಮಯದಲ್ಲಿ ಕಮಲನಾಥ್ ಹೇಳಿಕೆ ಅಚ್ಚರಿ ಮೂಡಿಸಿತು. ದೀಪೇಂದ್ರ ಹೂಡಾ ಮತ್ತು ಜಿತಿನ್ ಪ್ರಸಾದ ಅವರಂತಹ ಕಾಂಗ್ರೆಸ್ಸಿನ ಅನೇಕ ಕಿರಿಯ ನಾಯಕರು ವಿಷಯದ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ಕಮಲನಾಥ್ ಅವರ ನಿಲುವನ್ನು ಪಕ್ಷವು ಬೆಂಬಲಿಸಬೇಕು ಎಂದು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ವಿವರಗಳಿಗೆಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಹಾಗೂ ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರಸಿಂಗ್ (೬೪) 2020 ಆಗಸ್ಟ್ 01ರ ಶನಿವಾರ ನಿಧನರಾದರು. ಹಲವಾರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅಮರಸಿಂಗ್ ಕಳೆದ ಏಳು ತಿಂಗಳುಗಳಿಂದ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ ಅವರು ಶನಿವಾರ ಕೊನೆಯುಸಿರೆಳೆದರು. ಎರಡೂ ಮೂತ್ರಪಿಂಡಗಳ ಕಸಿ ಮಾಡಿಸಿಕೊಂಡಿದ್ದ ಅಮರಸಿಂಗ್ ಹಲವು ವರ್ಷಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಸಮಾಜವಾದಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಮರಸಿಂಗ್ ಅವರು ಮುಲಾಯಂ ಸಿಂಗ್ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಿನಿಮಾ ರಂಗ ಮತ್ತು ಉದ್ಯಮಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅಮರಸಿಂಗ್, ಸಮಾಜವಾದಿ ಪಕ್ಷವು ನವದೆಹಲಿಯಲ್ಲಿ ಹೆಚ್ಚು ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕೊನೆಯುಸಿರು ಎಳೆಯುವುದಕ್ಕೆ ಮುನ್ನ ಶನಿವಾರ ಅಮರಸಿಂಗ್ ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಬಾಲ ಗಂಗಾಧರ ತಿಲಕ ಅವರಿಗೆ ಪುಣ್ಯತಿಥಿಯ ಅಂಗವಾಗಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದರು. ಮತ್ತು ತಮ್ಮ ಎಲ್ಲ ಬೆಂಬಲಿಗರಿಗೆಈದ್ ಅಲ್ ಅಧಾಶುಭ ಹಾರೈಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಯುವ ಭಾರತವು ದೇಶದ ಸಮಸ್ಯೆಗಳಿಗೆ ನವೀನ ಮತ್ತು ಸೃಜನಶೀಲ ಪರಿಹಾರಗಳನ್ನು ನೀಡುವ ಪ್ರತಿಭೆಗಳ ಉಗ್ರಾಣವಾಗಿದೆ. ಸ್ವಲ್ಪ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಕೋವಿಡ್ -೧೯ ಸಾಂಕ್ರಾಮಿಕ ಆರೋಗ್ಯ ಬಿಕ್ಕಟ್ಟಿನ ನಂತರದ ಜಾಗತಿಕ ಸನ್ನಿವೇಶದಲ್ಲಿ ಭಾರತವನ್ನು ಮುಂದಕ್ಕೆ ಒಯ್ಯುವಲ್ಲಿ ಬಹುದೂರ ಸಾಗಬಲ್ಲರು ಎಂದು ಪ್ರಧಾನಿ ನರೇಂದ್ರ ಮೋದಿ 2020 ಆಗಸ್ಟ್ 01ರ ಶನಿವಾರ ಹೇಳಿದರು. ‘ಕೊರೋನಾವೈರಸ್ ಕಾಲದಲ್ಲಿ ಹ್ಯಾಕಥಾನ್ ನಡೆಸುವುದು ದೊಡ್ಡ ಸವಾಲಾಗಿತ್ತು. ತೀವ್ರ ಸವಾಲುಗಳ ನಡುವೆಯೂ ಅದು ನಡೆಯುತ್ತಿರುವುದು ಅದ್ಭುತವಾಗಿದೆ. ಸಂದರ್ಭಕ್ಕೆ ಸ್ಪಂದಿಸಿ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಪ್ರತಿನಿಧಿಗಳು ಮತ್ತು ಸಂಘಟಕರನ್ನು ನಾನು ಅಭಿನಂದಿಸುತ್ತೇನೆಎಂದು ಪ್ರಧಾನಿ ಮೋದಿ ನುಡಿದರು. ಪಂದ್ಯದ ಅಂತಿಮ ಹಂತಕ್ಕೆ ಬಂದಿರುವ ವಿದ್ಯಾರ್ಥಿಯೊಬ್ಬರು ಮಂಡಿಸಿದ ಮಳೆ ಮುನ್ಸೂಚನೆ ಮಾದರಿಯ ಪರಿಕಲ್ಪನೆಯನ್ನು ಪ್ರಧಾನಿ ಶ್ಲಾಘಿಸಿದರು ಮತ್ತು ಮೆಚ್ಚಿ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿದರು. ಆವಿಷ್ಕಾರ ಯಶಸ್ವಿಯಾದರೆ, ಭಾರತದಂತಹ ಕೃಷಿ ಪ್ರಧಾನ ದೇಶದ ರೈತರಿಗೆ ಅಪಾರ ಸಹಾಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ೨೦೨೦ ಗ್ರ್ಯಾಂಡ್ ಫಿನಾಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವರ್ಷ ಸುಮಾರು ೧೦,೦೦೦ ವಿದ್ಯಾರ್ಥಿಗಳು ಹ್ಯಾಕಥಾನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ೨೦೨೦ (ಸಾಫ್ಟ್‌ವೇರ್) ಗ್ರ್ಯಾಂಡ್ ಫಿನಾಲೆ ಆಗಸ್ಟ್ ರಿಂದ ರವರೆಗೆ ನಡೆಯಲಿದೆ. "ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆದರ್ಶ ಮತ್ತು ಹೊಸತನವನ್ನು ನೀಡುವ ರೋಮಾಂಚಕ ವೇದಿಕೆಯಾಗಿ ಹೊರಹೊಮ್ಮಿದೆ. ಸ್ವಾಭಾವಿಕವಾಗಿ, ಸಮಯದಲ್ಲಿ ನಮ್ಮ ಯುವಕರು ಕೋವಿಡ್ -೧೯ ನಂತರದ ಪ್ರಪಂಚವನ್ನು ತಮ್ಮ ಆವಿಷ್ಕಾರಗಳಲ್ಲಿ ಕೇಂದ್ರೀಕರಿಸುತ್ತಾರೆ, ಜೊತೆಗೆ ಆತ್ಮನಿರ್ಭರ ಭಾರತ ನಿರ್ಮಿಸುವ ಮಾರ್ಗಗಳತ್ತಲೂ ಗಮನ ಹರಿಸುತ್ತಾರೆಎಂದು ಪ್ರಧಾನಿ ಮೋದಿ ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಲಡಾಖ್ ವಲಯದ ಹೊರಗೆ ಕಳೆದ ಕೆಲವು ವಾರಗಳಿಂದ ಚಲನವಲನ ನಡೆಸಿದ್ದ ಚೀನಾದ ಪೀಪಲ್ಸ್ ಲಿಬರೇಶನ್ ಅರ್ಮಿಯ ಸೈನಿಕ ತುಕಡಿಗಳು ಇದೀಗ ಭಾರತದ ಉತ್ತರಾಖಂಡದ ಲಿಪುಲೇಖ ಕಣಿವೆಯ ಚಲನವಲನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸುದ್ದಿ ಮೂಲಗಳು 2020 ಆಗಸ್ಟ್ 01ರ ಶನಿವಾರ ತಿಳಿಸಿದವು. ಪೂರ್ವ ಲಡಾಕ್‌ನಲ್ಲಿ ಮೇ ಆರಂಭದಿಂದ ಜೂನ್ ೧೫ ರವರೆಗೆ ಭಾರತ ಮತ್ತು ಚೀನಾ ಮಧ್ಯೆ ಘರ್ಷಣೆ ಭುಗಿಲೆದ್ದಿದ್ದು, ೪೫ ವರ್ಷಗಳಲ್ಲೇ ಉಭಯ ದೇಶಗಳ ಸೈನಿಕರ ಮಧ್ಯೆ ಅತ್ಯಂತ ಭೀಕರವಾದ ರಕ್ತಪಾತದ ಘರ್ಷಣೆಗೆ ಕಾರಣವಾಗಿತ್ತು. ಮೂರು ವಾರಗಳ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ನಡುವಿನ ಸಂಭಾಷಣೆಯ ಬಳಿಕ ಸೇನಾ ವಾಪಸಾತಿ ಮತ್ತು ಪ್ರಕ್ಷುಬ್ಧತೆ ಶಮನಕ್ಕೆ ಎರಡೂ ಕಡೆಯವರು ಒಪಿದ್ದು, ಮುಖಾಮುಖಿ ಘರ್ಷಣೆಯ ಸ್ಥಳಗಳಲ್ಲಿ ಸೈನಿಕರ ಸಂಖ್ಯೆಯನ್ನು ವಿರಳಗೊಳಿಲಾಗುತ್ತಿದೆ. ಆದರೆ ಸೈನಿಕರ ಚಟುವಟಿಕೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.  ಇದೀಗ ಇದೇ ಸಮಯದಲ್ಲಿ, ಲಡಾಖ್‌ನ ಆಚೆಯ ಆಳ ಪ್ರದೇಶಗಳಲ್ಲಿ ಚೀನಾವು ತನ್ನ ಸೇನಾ ಶಕ್ತಿ ಹೆಚ್ಚಿಸುವ ಕಾರ್‍ಯದಲ್ಲಿ ಮಗ್ನವಾಗಿರುವುದು ಭಾರತದ ಮಿಲಿಟರಿ ಅಧಿಕಾರಗಳ ಗಮನಕ್ಕೆ ಬಂದಿತು. ಜೊತೆಗೇ ಅಲ್ಲಿ ಮೂಲ ಸೌಕರ್‍ಯ ಹೆಚ್ಚಳದ ಯೋಜನೆ ಭರದಿಂದ ಜಾರಿಯಾಗುತ್ತಿರುವುದು ಮತ್ತು ನೈಜ ನಿಯಂತ್ರಣ ರೇಖೆಯ ಆಚೆ ಬದಿಯಲ್ಲಿ ಚೀನೀ ಸೇನೆಯ ಅಸ್ತಿತ್ವ ಹೆಚ್ಚುತ್ತಿರುವುದೂ ಕಂಡು ಬಂದಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಒಂದೇ ದಿನ ೫೭,೧೧೮ ಪ್ರಕರಣಗಳ ದಾಖಲೆಯೊಂದಿಗೆ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 2020 ಆಗಸ್ಟ್ 01ರ ಶನಿವಾರ ೧೬,೯೫,೯೮೮ಕ್ಕೆ ತಲುಪಿತು. ಇದೇ ವೇಳೆಗೆ ರೋಗದಿಂದ ಗುಣಮುಖರಾಗಿ ಚೇತರಿಸಿದರ ಸಂಖ್ಯೆ ೧೦,೯೪,೩೭೪ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು. ಕೋವಿಡ್-೧೯ಕ್ಕೆ ಬಲಿಯಾದವರ ಸಂಖ್ಯೆ ೩೬,೫೧೧ ಕ್ಕೆ ಏರಿದ್ದು, ೨೪ ಗಂಟೆಗಳ ಅವಧಿಯಲ್ಲಿ ೭೬೪ ಜನರು ಕಾಯಿಲೆಗೆ ತುತ್ತಾಗಿದ್ದಾರೆ. ಪ್ರಸ್ತುತ, ದೇಶದಲ್ಲಿ ,೬೫,೧೦೩ ಸಕ್ರಿಯ ಪ್ರಕರಣಗಳಿವೆ. ಕೋವಿಡ್ -೧೯ ರೋಗಿಗಳಲ್ಲಿ ಚೇತರಿಕೆಯ ಪ್ರಮಾಣವು ಶೇಕಡಾ ೬೪.೫೩ಕ್ಕೆ ಏರಿದ್ದರೆ, ಸಾವಿನ ಪ್ರಮಾಣವು ಶೇಕಡಾ .೧೫ಕ್ಕೆ ಇಳಿದಿದೆ ಎಂದು ಅಂಕಿಸಂಖ್ಯೆಗಳು ತಿಳಿಸಿದವು. ಕೋವಿಡ್ -೧೯ ಪ್ರಕರಣಗಳು ಸತತ ಮೂರನೇ ದಿನ ೫೦,೦೦೦ ಕ್ಕಿಂತ ಹೆಚ್ಚು ದಾಖಲಾಗಿವೆ. ಐಸಿಎಂಆರ್ ಪ್ರಕಾರ, ಜುಲೈ ೩೧ ರವರೆಗೆ ಒಟ್ಟು ,೯೩,೫೮,೬೫೯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ,೨೫,೬೮೯ ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 01 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment