ನಾನು ಮೆಚ್ಚಿದ ವಾಟ್ಸಪ್

Sunday, November 10, 2019

ಇಂದಿನ ಇತಿಹಾಸ History Today ನವೆಂಬರ್ 10

2019: ಚೆನ್ನೈ (ತಮಿಳುನಾಡು): ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ತಿರುನೆಲ್ಲಿ ನಾರಾಯಣ ಅಯ್ಯರ್ ಶೇಷನ್ (87) ಅವರು 2019 ನವೆಂಬರ್ 10ರ ಭಾನುವಾರ ಸಂಜೆ ಚೆನ್ನೈಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಶೇಷನ್ ಅವರಿಗೆ 87 ವರ್ಷ ವಯಸ್ಸಾಗಿತ್ತು. 1990 ಡಿಸೆಂಬರ್ 12 ರಿಂದ 1996 ಡಿಸೆಂಬರ್ 11ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿ ಟಿ.ಎನ್. ಶೇಷನ್ ಅವರು ಕಾರ್ಯನಿರ್ವಹಿಸಿದ್ದರು. ಶೇಷನ್ ಅವರು 10ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು. ಶೇಷನ್ ಅವರ ನಿಧನದ ಸುದ್ದಿಯನ್ನು ಇನ್ನೋರ್ವ ಮಾಜಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಸ್. ವೈ. ಖುರೇಷಿ ಅವರು ಮಾಧ್ಯಮಗಳಿಗೆ ಖಚಿತಪಡಿಸಿದರು. ‘ದೇಶದ ಮಾಜಿ ಚುನಾವಣಾ ಆಯುಕ್ತರಾಗಿದ್ದ ಟಿ. ಎನ್. ಶೇಷನ್ ಅವರು ಈಗ ಕೆಲವೇ ಸಮಯಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿಸಲು ನನಗೆ ಬೇಸರವಾಗುತ್ತಿದೆಎಂದು ಖುರೇಷಿ ಅವರು ಪ್ರಕಟಿಸಿದರು. 1955ನೇ ತಂಡದ ತಮಿಳುನಾಡು ಕೆಡೇರ್ ..ಎಸ್. ಅಧಿಕಾರಿಯಾಗಿದ್ದ ಟಿ.ಎನ್. ಶೇಷನ್ ಅವರು 1989ರಲ್ಲಿ ಭಾರತ ಸರ್ಕಾರದ 18ನೇ ಕ್ಯಾಬಿನೆಟ್ ಸೆಕ್ರೆಟರಿ ಆಗಿ ಕಾರ್ಯ ನಿರ್ವಹಿಸಿದ್ದರು. ಭಾರತ ಸರ್ಕಾರಕ್ಕೆ ಶೇಷನ್ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 1996ರಲ್ಲಿ ಅವರಿಗೆ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸ್ಸೇ ಪ್ರಶಸ್ತಿಯನ್ನು ನೀಡಲಾಗಿತ್ತು. ನಾಗರಿಕ ಸೇವಾ ವಿಭಾಗದಲ್ಲಿಯೇ ಅತ್ಯುನ್ನತ ಸ್ಥಾನವಾಗಿರುವ ಸಂಪುಟ ಕಾರ್ಯದರ್ಶಿ ಹುದ್ದೆಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಶೇಷನ್ ಅವರನ್ನು ನೇಮಿಸಿಕೊಂಡಿದ್ದುದು ಅವರ ಕಾರ್ಯದಕ್ಷತೆಗೆ ಒಂದು ಉತ್ತಮ ನಿದರ್ಶನವಾಗಿತ್ತು. ಭಾರತದ ಸಾಂಪ್ರದಾಯಿಕ ಚುನಾವಣಾ ಪದ್ಧತಿಯಲ್ಲಿ ಗಮನಾರ್ಹ ಸುಧಾರಣೆಯನ್ನು ತರುವಲ್ಲಿ ಶೇಷನ್ ಅವರ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಶೇಷನ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ತಮ್ಮ ಸುಮಾರು 06 ವರ್ಷಗಳ ಅಧಿಕಾರಾವಧಿಯಲ್ಲಿ ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದರು. ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ ಶೇಷನ್ ಅವರ ಕಾರ್ಯ ವೈಖರಿ ಹಲವು ರಾಜಕೀಯ ಪಕ್ಷಗಳ ಮತ್ತು ಮುಖಂಡರ ಕಣ್ಣು ಕೆಂಪಾಗಿಸಿತ್ತು.1997ರಲ್ಲಿ ಶೇಷನ್ ಅವರು ಕೆ.ಆರ್. ನಾರಾಯಣನ್ ಅವರಿಗೆ ಎದುರಾಳಿಯಾಗಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು1932ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ತಿರುನೆಲ್ಲೈ ಎಂಬಲ್ಲಿ ಜನಿಸಿದ ಟಿ.ಎನ್. ಶೇಷನ್ ಅವರು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಸಂದರ್ಭದಲ್ಲಿಯೇ ಅವರು ..ಎಸ್. ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದರು.ಎಡ್ವರ್ಡ್ ಎಸ್, ಮ್ಯಾಸನ್ ಫೆಲೋಶಿಪ್ ಪಡೆದುಕೊಂಡು ಶೇಷನ್ ಅವರು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಚಾರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಹ ಪಡೆದುಕೊಂಡಿದ್ದರು.(ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2019: ಮುಂಬೈ: ಭಾರತೀಯ ಜನತಾ ಪಕ್ಷವು (ಬಿಜೆಪಿ) ಸರ್ಕಾರ ರಚಿಸಲು ನಿರಾಕರಿಸಿದ ಬಳಿಕ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸರ್ಕಾರ ರಚಿಸುವಂತೆ ಎರಡನೇ ದೊಡ್ಡ ಪಕ್ಷವಾಗಿರುವ ಶಿವಸೇನೆಗೆ  2019 ನವೆಂಬರ್ 10ರ ಭಾನುವಾರ ಆಹ್ವಾನ ನೀಡಿದರು. ಸೋಮವಾರ ಸಂಜೆ .೩೦ರ ಒಳಗಾಗಿ ತನ್ನ ಪ್ರತಿಕ್ರಿಯೆ ನೀಡುವಂತೆ ರಾಜ್ಯಪಾಲರು ಶಿವಸೇನೆಗೆ ಸೂಚಿಸಿದರು. ಈ ಮಧ್ಯೆ ಶಿವಸೇನೆಯು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ಡಿಎ) ಹೊರಬಂದರೆ ಸರ್ಕಾರ ರಚಿಸಲು ತಾನು ಅದಕ್ಕೆ ಬೆಂಬಲ ನೀಡುವುದಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ಪ್ರಕಟಿಸಿತು. ನಾವು ನವೆಂಬರ್ ೧೨ರಂದು ನಮ್ಮ ಶಾಸಕರ ಸಭೆ ಕರೆದಿದ್ದೇವೆ. ಶಿವಸೇನೆಯು ನಮ್ಮ ಬೆಂಬಲವನ್ನು ಬಯಸುವುದಾದರೆ ಅವರು ತಮಗೆ ಬಿಜೆಪಿ ಜೊತೆಗೆ ಯಾವುದೇ ಬಾಂಧವ್ಯ ಇಲ್ಲ ಮತ್ತು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ ಡಿಎ) ಹೊರಬರುತ್ತೇವೆ ಎಂದು ಘೋಷಿಸಬೇಕು ಎಂದು ಎನ್ಸಿಪಿ ನಾಯಕ ನವಾಬ್ ಮಲಿಕ್ ಹೇಳಿದರು. ಅವರ ಎಲ್ಲ ಸಚಿವರೂ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕು ಎಂದೂ ಮಲಿಕ್ ಹೇಳಿದರು. ಇದಕ್ಕೆ ಮುನ್ನ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರು ತಮ್ಮ ನಾಯಕ ಉದ್ಧವ್ ಠಾಕ್ರೆ ಅವರು ಪಕ್ಷದಿಂದ ಯಾರಾದರೂ ಒಬ್ಬರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ ಎಂಬುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದರು. ಏನೇ ಆದರೂ ಶಿವಸೇನೆಯವರೇ ಮುಖ್ಯಮಂತ್ರಿ ಆಗುತ್ತಾರೆ ಎಂದೂ ಅವರು ತಿಳಿಸಿದ್ದರು.

2019: ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ನಿರಾಕರಿಸುವುದರೊಂದಿಗೆ 2019  ನವೆಂಬರ್  10ರ ಭಾನುವಾರ ಸಂಜೆ ರಾಜ್ಯದಲ್ಲಿ ಉನ್ನತ ಮಟ್ಟದ ನಾಟಕ ಅನಾವರಣಗೊಂಡಿತು.. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಕಾಂಗೆಸ್ ಜೊತೆಗೆ  ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವಂತೆ ಅದು ಮಿತ್ರ ಪಕ್ಷ ಶಿವಸೇನೆಗೆ ಸವಾಲು ಹಾಕಿತು. ಪಕ್ಷದ ಕೋರ್ ಕಮಿಟಿಯು ಎರಡು ಸುತ್ತಿನ ಸಭೆ ನಡೆಸಿದ ಬಳಿಕ ಪಕ್ಷದ ರಾಜ್ಯ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ತನ್ನ ಬಳಿ ಇಲ್ಲ ಎಂಬುದಾಗಿ ಪಕ್ಷವು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ತಿಳಿಸಿರುವುದಾಗಿ ಪ್ರಕಟಿಸಿದರು. ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಜನರ ಆದೇಶಕ್ಕೆ ಅವಮಾನ ಮಾಡುತ್ತಿದೆ ಎಂದೂ ಚಂದ್ರಕಾಂತ ಪಾಟೀಲ್ ಅವರು ಪತ್ರಿಕಾಗೋಷ್ಠಿಯಲ್ಲಿ ದೂಷಿಸಿದರು. ರಾಜ್ಯಪಾಲರ ಜೊತೆಗಿನ ಸಭೆಯ ಬಳಿಕ ವರದಿಗಾರರ ಜೊತೆ ಮಾತನಾಡಿದ ಪಾಟೀಲ್ ಅವರುಜನಾದೇಶ ಇದ್ದದ್ದು ಶಿವಸೇನಾ-ಬಿಜೆಪಿ ಮೈತ್ರಿಕೂಟಕ್ಕೆ. ನಾವು ನಮ್ಮ ಸ್ವಂತ ಬಲದಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ. ಜನರ ಆದೇಶಕ್ಕೆ ಅವಮಾನ ಮಾಡಲು ಬಯಸುವುದಿದ್ದರೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಲಿ. ಅವರಿಗೆ ನಮ್ಮ ಶುಭಹಾರೈಕೆಗಳಿವೆಎಂದು ಹೇಳಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮಿತ್ರ ಪಕ್ಷಗಳ ಮಧ್ಯೆ ಅಧಿಕಾರ ಹಂಚಿಕೆಯ ಕಚ್ಚಾಟ ಆರಂಭವಾದ ಎರಡು ವಾರಗಳ ಬಳಿಕ ಶನಿವಾರ ಸರ್ಕಾರ ರಚಿಸುವಂತೆ ಏಕೈಕ ದೊಡ್ಡ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಶಾಸನಸಭೆಯ ಅವಧಿ ಶನಿವಾರ ಮಧ್ಯರಾತ್ರಿಯವೇಳೆಗೆ ಮುಕ್ತಾಯಗೊಂಡಿತ್ತು. ಸಚಿವ ಸಂಪುಟ ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ನೀಡಬೇಕು ಮತ್ತು ಮುಖ್ಯಮಂತ್ರಿ ಸ್ಥಾನವನ್ನು ತಲಾ ಎರಡೂವರೆ ವರ್ಷಗಳ ಅವಧಿಗೆ ಹಂಚಿಕೊಳ್ಳಬೇಕು ಎಂಬುದಾಗಿ ಸೇನೆಯು ಪಟ್ಟು ಹಿಡಿದಿತ್ತು. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಸ್ಪಷ್ಟ ಪಡಿಸಿತ್ತು.

2019: ನವದೆಹಲಿ:ಕ್ಯಾರ್ಮತ್ತುಮಹಾಚಂಡಮಾರುತಗಳ ಬೆನ್ನಲ್ಲೇ ಈಗಬುಲ್ಬುಲ್ಚಂಡಮಾರುತ ಭಾರತವನ್ನು ಪ್ರವೇಶಿಸಿದ್ದು,  ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅದರ ತೀವ್ರತೆ, ಭಾರೀ ಮಳೆಗೆ ಭೂ ಕುಸಿತಗಳು ಉಂಟಾಗಿದ್ದು, ಕನಿಷ್ಠ ೧೦ ಜನ ಸಾವನ್ನಪ್ಪಿದರು. ಚಂಡಮಾರುತ ಅಪ್ಪಳಿಸಿ ಭಾರೀ ಹಾನಿಯ ವರದಿ ಬರುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡಿ ಅಗತ್ಯ ನೆರವಿನ ಭರವಸೆ ನೀಡಿದರು. ‘ಬುಲ್ ಬುಲ್ಚಂಡಮಾರುತದ ಪರಿಣಾಮವಾಗಿ ಕೊಲ್ಕತಾದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕನಿಷ್ಠ ೧೦ ಮಂದಿ  ಸಾವನ್ನಪ್ಪಿದ್ದಾರೆ. ಕೋಲ್ಕತ  ಕ್ರಿಕೆಟ್ ಮತ್ತು ಪುಟ್ಬಾಲ್ ಕ್ಲಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಮರ ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ಧಾರೆ ಎಂದು ವರದಿಗಳು ತಿಳಿಸಿವೆ. ಚಂಡಮಾರುತದಿಂದಾಗಿ ಕೋಲ್ಕತದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ೪೮ ಗಂಟೆಗಳಲ್ಲಿ ೧೦೪ ಮಿಲಿಮೀಟರ್ ಮಳೆಯಾಗಿದ್ದು, ೫೦-೭೦ ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಭಾರೀ ಪ್ರಮಾಣದ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಜಗತ್ಸಿಂಗ್ಪುರ, ಕೇಂದ್ರಪಾರ, ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಸಾರ್ವಜನಿಕರ ಆಸ್ತಿ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಮರಗಳು ಧರೆಗೆ ಉರುಳಿದ್ದು, ಬಹುತೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿತು. ದೀದಿಗೆ ಪ್ರಧಾನಿ ಕರೆ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಬುಲ್ಬುಲ್ ಚಂಡಮಾರುತ ಪಶ್ಚಿಮ ಬಂಗಾಳದ ೨೪ ನಾರ್ತ್ ಪರಿಗಣಾ ಜಿಲ್ಲೆಯ ಭಾಗಗಳ ಮೇಲೆ ಅಪ್ಪಳಿಸಿದ್ದು, ಸಾವು-ನೋವು ಸಂಭವಿಸುತ್ತಿದ್ದಂತೆಯೇ ಪ್ರಕೃತಿ ವಿಕೋಪದಿಂದ ತಲ್ಲಣಗೊಂಡಿರುವ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಅಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದರು. ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ದೀದಿ ಅವರಿಗೆ  ಪ್ರಧಾನಿ ಭರವಸೆ ನೀಡಿದರು.

2019: ನವದೆಹಲಿ: ಜೈಪುರದ ಮಾಜಿ ರಾಜಕುಟುಂಬದ ಸದಸ್ಯೆ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ಅವರು ಅಯೋಧ್ಯೆಯ ಶ್ರೀರಾಮಚಂದ್ರನ ಪುತ್ರ ಕುಶನ ವಂಶಸ್ಥರು ತಾವು ಎಂಬುದಾಗಿ ಪ್ರತಿಪಾದಿಸಿದ ಬಳಿಕ, ಮೇವಾಡ ರಾಜಮನೆತನದ ಲಕ್ಷ್ಯ ರಾಜ್ ಸಿಂಗ್ ಮತ್ತು  ರಾಜಸ್ಥಾನದ ಕರ್ಣಿಸೇನಾ ಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಅವರು ತಮ್ಮದು ಶ್ರೀರಾಮನ ಪುತ್ರ ಲವನ ವಂಶ ಎಂಬುದಾಗಿ ಪ್ರತಿಪಾದಿಸಿದರು. ಅಯೋಧ್ಯಾ  ಭೂ ವಿವಾದಕ್ಕೆ ಸಂಬಂಧಿಸಿದಂತೆ ದೈನಂದಿನ ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿ ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವುರಘುವಂಶದವರು ಯಾರಾದರೂ ಇದ್ದಾರೆಯೇ? ಅಥವಾ ಎಲ್ಲಿಯಾದರೂ ವಾಸಿಸುತ್ತಿದ್ದಾರೆಯೇ ಎಂದು ತಿಳಿಯಲು ಪ್ರಯತ್ನಿಸಿತ್ತು. ಇದಾದ ಕೆಲವೇ ದಿನಗಳ ನಂತರ ಇವರುನಾವು ಶ್ರೀರಾಮನ ವಂಶಸ್ಥರುಎಂಬುದಾಗಿ ಪ್ರತಿಪಾದಿಸಿದ್ದರು.  ಪ್ರತಿಪಾದನೆಗಳ ಪ್ರಕಾರ, ಹಿಂದಿನ ಮೇವಾಡ ರಾಜಮನೆತನದ ಲಕ್ಷ್ಯರಾಜ್ ಸಿಂಗ್ ಅವರು ಅಯೋಧ್ಯೆಯ ಶ್ರೀರಾಮಚಂದ್ರನ ಹಿರಿಯ ಪುತ್ರ ಲವನ ವಂಶಸ್ಥರು. ಅವರು ಪ್ರಾಚೀನ ಕಾಲದಲ್ಲಿ ಲುವ್ಕೋಟೆ (ಲಾಹೋರ್) ಅನ್ನು ಸ್ಥಾಪಿಸಿದ್ದರು ಎಂದು ಹೇಳಿಕೊಂಡಿದ್ದು. ಲವನ ಪೂರ್ವಜರು ಅಹಾದ್ (ಮೇವಾರ್) ಗೆ ಬಂದು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಮೇವಾಡ ರಾಜಮನೆತನದ ಸಂಪ್ರದಾಯಗಳು ಮತ್ತು ಪದ್ಧತಿಗಳು, ಶಿವಭಕ್ತರು ಮತ್ತು ಸೂರ್ಯವಂಶಿ ಅವರು ಅಯೋಧ್ಯೆಯ ಶ್ರೀರಾಮನಿಂದ ಬಂದವರು ಎಂಬುದಕ್ಕೆ ಸಾಕ್ಷಿ ಎಂದು ಇತಿಹಾಸಕಾರರು ಬರೆದಿದ್ದಾರೆ ಎಂಬುದಾಗಿ ಲಕ್ಷ್ಯರಾಜ್ ಸಿಂಗ್ ಹೇಳಿದ್ದಾರೆ.ಕರ್ನಲ್ ಜೇಮ್ಸ್ ಟಾಡ್ ಅವರ ಪುಸ್ತಕವನ್ನು ಉಲ್ಲೇಖಿಸಿರುವ ಸಿಂಗ್ ಅವರು ಪುಸ್ತಕದಲ್ಲಿಅನ್ನಲ್ಸ್ ಅಂಡ್ ಆಂಟಿಕ್ವಿಟೀಸ್ ಆಫ್ ರಾಜಸ್ಥಾನ್ಗ್ರಂಥದಲ್ಲಿ ಶ್ರೀರಾಮನ ರಾಜಧಾನಿ ಅಯೋಧ್ಯೆ ಎಂದು ಬರೆಯಲಾಗಿದೆ. ಲವನ ಪೂರ್ವಜರು ಪ್ರಾಚೀನ ಕಾಲದಲ್ಲಿ ಗುಜರಾತಿಗೆ ತೆರಳಿದ್ದರು ಮತ್ತು ಅಲ್ಲಿಂದ ಅಹಾದ್ಗೆ (ಮೇವಾಡ) ಬಂದು ಅಲ್ಲಿ ಅವರು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಿದರು. ಆರಂಭದಲ್ಲಿ ಅವರ ರಾಜಧಾನಿ ಚಿತ್ತೋಡವಾಗಿತ್ತು ಮತ್ತು ನಂತರ ಅದನ್ನು ಉದಯಪುರಕ್ಕೆ ಸ್ಥಳಾಂತರಿಸಲಾಯಿತು. ಶ್ರೀರಾಮನು ಶಿವನನ್ನು ಆರಾಧಿಸುತ್ತಿದ್ದನು ಮತ್ತು ಮೇವಾಡದ ರಾಯರು ಪೂಜಿಸುತ್ತಾರೆ ಎಂಬುದಾಗಿ ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಅಯೋಧ್ಯಾ ಭೂವಿವಾದದ ಕುರಿತು ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಧಾರ್ಮಿಕ ಸಮನ್ವಯತೆ ಸಲುವಾಗಿ ಕೇಂದ್ರವು ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಮ್ಮ ನಿವಾಸದಲ್ಲಿ 2019 ನವೆಂಬರ್ 10ರ ಭಾನುವಾರ ಸರ್ವ ಧರ್ಮ ಗುರುಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಯೋಗಗುರು ಬಾಬಾ ರಾಮದೇವ್, ಸ್ವಾಮಿ ಪರಮಾತ್ಮಾನಂದ, ಶಿಯಾ ಧರ್ಮಗುರು ಮೌಲಾನಾ ಕಲ್ಬೆ ಜವಾದ್, ಪೇಜಾವರ ಶ್ರೀ, ಸ್ವಾಮಿ ಚಿದಾನಂದ ಸರಸ್ವತಿ ಸೇರಿದಂತೆ ಅನೇಕರು ಪಾಲ್ಗೊಂಡರು.  ಅಂತರ್ ಧರ್ಮೀಯ ನಂಬಿಕೆಗಳು, ಧಾರ್ಮಿಕ ಸಮನ್ವಯ, ಸೌಹಾರ್ದತೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲಿ ಸಮಾಲೋಚನೆ ನಡೆಸಲಾಯಿತು ಎಂದು ವರದಿಗಳು ಹೇಳಿದವು. ಜಮ್ಮು ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಈಗಾಗಲೇ ಪದೇ ಪದೇ ಭಾರತದ ವಿರುದ್ಧ ಕುತಂತ್ರ ಹೆಣೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮತ್ತೆ ಮುಖಭಂಗ ಅನುಭವಿಸುತ್ತಲೇ ಬಂದಿದೆ. ಇದೀಗ ಅಯೋಧ್ಯೆ ಕುರಿತ ತೀರ್ಪು ಪ್ರಕಟವಾಗಿದ್ದು, ವಿಚಾರದಲ್ಲಿ ಪಾಕ್ ತನ್ನ ಕಿತಾಪತಿ ಮುಂದುವರೆಸಬಾರದು ಎಂಬ ನಿಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ನೇತೃತ್ವದಲ್ಲಿ ಸರ್ವ ಧರ್ಮ ಗುರುಗಳ ಸಭೆ ನಡೆಯಿತು ಎಂದು ವರದಿ ತಿಳಿಸಿತು. ಧಾರ್ಮಿಕ ಸಮನ್ವಯತೆ ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಚರ್ಚಿಸಿ, ಸಮುದಾಯಗಳ ನಡುವೆ ಸಹೋದರತ್ವ ಕಾಪಾಡಿಕೊಂಡು ಹೋಗಲು, ದೇಶವಿರೋಧಿ ಶಕ್ತಿಗಳು ಸನ್ನಿವೇಶದ ದುರ್ಬಳಕೆಗೆ ಕುತಂತ್ರ ನಡೆಸುತ್ತಿದ್ದು ಇದಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ಇರಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿತು.

2019: ನವದೆಹಲಿ : ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮಸೀದಿ ನಿರ್ಮಾಣಕ್ಕೆ ಬೇರೆಡೆ ಐದು ಎಕರೆ ಭೂಮಿ ನೀಡುವಂತೆ ತಿಳಿಸಿದೆ, ಐದು ಎಕರೆ ಜಾಗದಲ್ಲಿ ಮಸೀದಿಯ ಬದಲು ಮುಸ್ಲಿಂ ಸಮುದಾಯದವರಿಗೆ ಶಾಲೆಯನ್ನು ಕಟ್ಟಿಸುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮನವಿ ಮಾಡಿದರು. ವಿವಾದಿತ ಜಾಗವನ್ನು ಹೊರತುಪಡಿಸಿ ಅಯೋಧ್ಯೆಯ ಬೇರೆ ಸ್ಥಳದಲ್ಲಿ ಐದು ಎಕರೆ ಜಾಗವನ್ನು ನೀಡಲು ಸೂಚಿಸಲಾಗಿತ್ತು. ಎಕರೆ ಜಾಗದಲ್ಲಿ ಮಸೀದಿಯ ಬದಲು ಮುಸ್ಲಿಂ ಸಮುದಾಯದವರಿಗಾಗಿ ಶಾಲೆಯನ್ನು ಕಟ್ಟಿಸಿ ಎಂದು  ಚಿತ್ರ ಸಾಹಿತಿ ಸಲೀಂ ಖಾನ್ ಕೋರಿದರು. ‘ನಮ್ಮ ದೇಶದಲ್ಲಿ ಮಸೀದಿ, ದೇವಸ್ಥಾನಗಳಿಗಿಂತ ಹೆಚ್ಚಾಗಿ ಶಾಲೆಗಳ ಅಗತ್ಯವಿದೆ. ಹೀಗಾಗಿ, ಸರ್ಕಾರದಿಂದ ನೀಡಲಾಗುವ ಜಾಗದಲ್ಲಿ ಶಾಲೆಯನ್ನು ಕಟ್ಟಿಸಿದರೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದಂತಾಗುತ್ತದೆ. ಹಳೆಯ ಘಟನೆಗಳನ್ನು ನೆನೆದು ಯಾರೊಂದಿಗೂ ದ್ವೇಷ ಸಾಧಿಸುವುದು ಬೇಡ ಎಂದು ಅವರು ಹೇಳಿದರು. ‘ಪ್ರತಿವರ್ಷ ಶಾಲೆಯಿಂದ ನೂರಾರು ವಿದ್ಯಾರ್ಥಿಗಳು ಉಪಯೋಗ ಪಡೆಯುತ್ತಾರೆಎಂದು ಸಲೀಂ ಖಾನ್ ಅಭಿಪ್ರಾಯ ಪಟ್ಟರು.



No comments:

Post a Comment