ನಾನು ಮೆಚ್ಚಿದ ವಾಟ್ಸಪ್

Friday, November 15, 2019

ಇಂದಿನ ಇತಿಹಾಸ History Today ನವೆಂಬರ್ 15

ನವದೆಹಲಿ:  ಹರಿಯಾಣದ ಗುರುಗಾಮದ ಏಳು ವರ್ಷದ ಬಾಲಕಿಯೊಬ್ಬಳು ೨೦೧೯ರ  ಗೂಗಲ್ ಪ್ರಶಸ್ತಿಗಾಗಿಡೂಡಲ್ಗೆದ್ದಿದ್ದಾಳೆ. ಬಾಲಕಿ ಚಿತ್ರಿಸಿದ "ವಾಕಿಂಗ್ ಟ್ರೀಸ್" (ನಡೆದಾಡುವ ವೃಕ್ಷಗಳು) ಡೂಡಲ್ ಗೆದ್ದಿತು. ಎರಡನೇ ತರಗತಿಯ ವಿದ್ಯಾರ್ಥಿನಿ ದಿವ್ಯಾಂಶಿ ಸಿಂಘಾಲ್ ಭವಿಷ್ಯದಲ್ಲಿ ಮರಗಳು ನಡೆದಾಡಬಹುದು ಎಂಬುದಾಗಿ  ಕಲ್ಪಿಸಿಕೊಂಡು ರೇಖಾಚಿತ್ರವನ್ನು ರಚಿಸಿದ್ದಳು. ಗೂಗಲ್ ಭಾರತದಲ್ಲಿ ಸ್ಪರ್ಧೆಯನ್ನು ನಡೆಸಿತ್ತು. ಗೆದ್ದಡೂಡಲ್ನ್ನು ನವೆಂಬರ್ ೧೪ ರಂದು ಗೂಗಲ್ ಇಂಡಿಯಾದ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ನವೆಂಬರ್ ೧೪   ಪ್ರಾಸಂಗಿಕವಾಗಿ ಭಾರತದ ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನವಾಗಿದ್ದು, ಇದನ್ನು ದೇಶದಲ್ಲಿಮಕ್ಕಳ ದಿನವಾಗಿ ಆಚರಿಸಲಾಗುತ್ತದೆ. ಮರಗಳನ್ನು ಕಡಿಯುವುದನ್ನು ನೋಡಿನಡೆದಾಡುವ ವೃಕ್ಷಗಳನ್ನುಕಲ್ಪಿಸಿಕೊಂಡೆ. ಅದೇ ರೇಖಾಚಿತ್ರ ಬರೆಯಲು ಸ್ಫೂರ್ತಿಯಾಯಿತು ಪುಟ್ಟ ಬಾಲಕಿ ದಿವ್ಯಾಂಶಿ ಹೇಳಿದಳು. "ಬೇಸಿಗೆ ರಜೆಯ ಸಮಯದಲ್ಲಿ ನಾನು ನನ್ನ ಅಜ್ಜಿಯ ಮನೆಗೆ ಹೋಗಿದ್ದೆ. ಆಗ ಮರಗಳನ್ನು ಕಡಿಯುವುದನ್ನು ನೋಡಿದೆ. ಬೇಸರವಾಯಿತು. ಮರಗಳಿಗೆ ನಡೆಯಲು ಸಾಧ್ಯವಾದರೆ ಕೊಡಲಿಯಿಂದ ಅವುಗಳು ತಪ್ಪಿಸಿಕೊಳ್ಳಬಹುದು ಎಂದು ನಾನು ಭಾವಿಸಿದೆ" ಎಂದು ದೆಹಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದಳು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನಾಗಪುರ: ಶಿವಸೇನೆ, ಎನ್ಸಿಪಿ  ಮತ್ತು ಕಾಂಗ್ರೆಸ್ ಜಂಟಿಯಾಗಿ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ರಚಿಸಲಿವೆ ಎಂದು 2019 ನವೆಂಬರ್ 15ರ ಶುಕ್ರವಾರ ಇಲ್ಲಿ ದೃಢ ಪಡಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್  ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕಿದರು. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಕೊಡುವ ವಿಚಾರವೂ ಪರಿಗಣನೆಯಲಿದೆ ಎಂದು ಅವರು ಸುಳಿವು ನೀಡಿದರು. ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಆಗಿರುವ ಹಾನಿಯನ್ನು ಅಂದಾಜು ಮಾಡುವ ಸಲುವಾಗಿ ನಾಗಪುರಕ್ಕೆ ಭೇಟಿ ನೀಡಿದ ಶರದ್ ಪವಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡಿಸಲು ವಿಫಲವಾದ ಬಳಿಕ ನೂತನ ರಾಜಕೀಯ ಮೈತ್ರಿಕೂಟಕ್ಕೆ ಬೆದರಿಕೆ ಉಂಟಾಗಿದೆ ಎಂಬುದನ್ನು ಅಲ್ಲಗಳೆದರು. ‘ಸ್ತುತ ಪ್ರಕ್ರಿಯೆ ನಡೆಯುತ್ತಿದೆ. ಇವತ್ತು ಅಥವಾ ನಾಳೆ ಸರ್ಕಾರ ರಚನೆಯಾಗಲಿದೆ. ಸರ್ಕಾರವು ಐದು ವರ್ಷಗಳ ಅವಧಿಯನ್ನು ಪೂರೈಸುತ್ತದೆ ಎಂದು ನಾವು ಖಚಿತ ಪಡಿಸುತ್ತೇವೆ. ನಮ್ಮ ಮಾತುಕತೆಗಳು ನಡೆಯುತ್ತಿವೆಎಂದು ಅವರು ಹೇಳಿದರು. ರಾಷ್ಟ್ರಪತಿ ಆಳ್ವಿಕೆ ದೀರ್ಘ ಕಾಲ ಇರುವುದಿಲ್ಲ ಮತ್ತು ಹೊಸ ಚುನಾವಣೆಗಳೂ ನಡೆಯುವುದಿಲ್ಲಎಂದು ಹಿರಿಯ ನಾಯಕ ನುಡಿದರು.  ‘ಸರ್ಕಾರವು ಸ್ಥಿರವೂ, ಅಭಿವೃದ್ಧಿ ಆಧಾರಿತವೂ ಆಗಲಿದ್ದು, ಜನರ ಸಮಸ್ಯೆಗಳನ್ನು ಬಗೆ ಹರಿಸಲಿದೆ. ನಾವೆಲ್ಲರೂ ಇದು ಆಗಬೇಕೆಂದು ಬಯಸುತ್ತಿದ್ದೇವೆಎಂದು ಅವರು ಹೇಳಿದರು. ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿರುವ ಶಿವಸೇನೆಯ ಬೇಡಿಕೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದೂ ಪವಾರ ಸುಳಿವು ನೀಡಿದರು. ’ಯಾರಾದರೂ ಮುಖ್ಯಮಂತ್ರಿ ಸ್ಥಾನವನ್ನು ಕೇಳುತ್ತಿದ್ದರೆ, ಅದನ್ನು ಪರಿಗಣಿಸಲಾಗುವುದುಎಂದು ಎನ್ಸಿಪಿ ಮುಖ್ಯಸ್ಥ ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು. ಇದಕ್ಕೆ ಮುನ್ನ ಎನ್ಸಿಪಿಯ ಮುಂಬೈ ಘಟಕದ ಮುಖ್ಯಸ್ಥ ನವಾಬ್ ಮಲಿಕ್ ಅವರು ಮುಂದಿನ ಮುಖ್ಯಮಂತ್ರಿ ಶಿವಸೇನೆಯಿಂದ ಆಗಲಿದ್ದಾರೆ ಎಂದು ಹೇಳಿದ್ದರು. ‘ಮುಂದಿನ ಮುಖ್ಯಮಂತ್ರಿ ಸೇನೆಯಿಂದ ಆಗಲಿದ್ದಾರೆ. ಏಕೆಂದರೆ, ಹಳೆ ಮೈತ್ರಿಕೂಟವನ್ನು ಬಿಟ್ಟು ಬಂದ ಪಕ್ಷದ (ಶಿವಸೇನೆ) ಆತ್ಮಗೌರವದ ರಕ್ಷಣೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭಾಗಿಯಾಗುವುದೇ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದುಎಂದು ನವಾಬ್ ಮಲಿಕ್ ಹೇಳಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ/ ಮುಂಬೈ: ಬದ್ಧ ರಾಜಕೀಯ ಹಾಗೂ ಸೈದ್ಧಾಂತಿಕ ವಿರೋಧಿಯಾದ ಶಿವಸೇನೆಯ ಜೊತೆ ಸೇರಿ ಸರ್ಕಾರ ರಚಿಸುವ ಮಾತುಕತೆ ಪ್ರಕ್ಷುಬ್ಧ ಪರಿಸರವನ್ನು ನಿರ್ಮಿಸಿತ್ತು. ಮಹಾರಾಷ್ಟ್ರದ ಕಾಂಗ್ರೆಸಿನ ಒಂದು ವರ್ಗ ಮತ್ತು ಹೊರಗಿನ ಇನ್ನೊಂದು ವರ್ಗ ಶಿವಸೇನೆ ಜೊತೆಗೆ ಮೈತ್ರಿಗೆ ಕಡುವಿರೋಧ ವ್ಯಕ್ತ ಪಡಿಸಿದ್ದವು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಯ್ಲೂಸಿ) ಕೇರಳದ ನಾಯಕರು ಹೊಸ ಮೈತ್ರಿಕೂಟವು ಮುಂದಿನ ಕೇರಳ ವಿಧಾನಸಭಾ ಚುನಾವಣೆ ಕಾಲದಲ್ಲಿ ಎಡಪಕ್ಷದ ಜೊತೆಗೆ ಸ್ಪರ್ಧೆಗೆ ಇಳಿಯಲು ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿ ಮಾಡಬಹುದು ಎಂದು ಆತಂಕ ವ್ಯಕ್ತ ಪಡಿಸಿದ್ದರು.  ನಿಧಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪ್ರತಿಯೊಂದು ಹಂತದಲ್ಲೂ ಅತ್ಯಂತ ಆಳವಾದ ವಿಶ್ಲೇಷಣೆಯಲ್ಲಿ ತೊಡಗಿದ್ದಾಗ ಮಹಾರಾಷ್ಟ್ರದ ನಾಯಕರು ತಮ್ಮ ಚಿಂತನೆಗೆ ಹೆಚ್ಚಿನ ತೂಕ ನೀಡಿದರು. ಅದಕ್ಕೂ ತೀವ್ರವಾದ ವಿರೋಧ ವ್ಯಕ್ತವಾಯಿತು. ಎಲ್ಲರಲ್ಲೂ ಚುನಾವಣಾ ರಾಜಕೀಯದ ಚಿಂತೆ ಪ್ರಬಲವಾಗಿತ್ತು. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಸರ್ಕಾರ ರಚನೆಗೆ ಬೇಕಾದ ಅಗತ್ಯ ಸಂಖ್ಯಾಬಲ ತನ್ನ ಬಳಿ ಇದೆ ಎಂದು ಸಾಬೀತು ಪಡಿಸಲು ಶಿವಸೇನೆಗೆ ರಾತ್ರಿ .೩೦ರವರೆಗೆ ಸಮಯ ನೀಡಿದ್ದರು. ಗಡುವು ಸಮೀಪಿಸಿದರೂ ಬಿಕ್ಕಟ್ಟು ಇತ್ಯರ್ಥ ಇನ್ನೂ ದೂರದಲ್ಲಿಯೇ ಇತ್ತು. ಆದರೆ ವೇಳೆಯಲ್ಲಿ ಪಕ್ಷದ ಹಿರಿಯ ನಾಯಕರೊಬ್ಬರು ಸರ್ಕಾರ ರಚನೆಯ ಪರವಾಗಿ ವಾದಿಸುತ್ತಾ ಉಲ್ಲೇಖಿಸಿದ ಉದಾಹರಣೆಯೊಂದು ಕಾಂಗ್ರೆಸ್ ಪಕ್ಷದ ಚರ್ಚೆಯ ದಿಕ್ಕನ್ನು ಬದಲಿಸಿತು. ಕಾಂಗ್ರೆಸ್ಸಿನ ಮಾಜಿ ಶಾಸಕ ಮತ್ತು ಸಚಿವರೊಬ್ಬರು ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಪಕ್ಷವನ್ನು ತ್ಯಜಿಸಿ ಶಿವಸೇನೆ ಸೇರಿ ಉತ್ತಮ ಅಂತರದೊಂದಿಗೆ ತನ್ನ ಕ್ಷೇತ್ರದಲ್ಲಿ ವಿಜಯಗಳಿಸಿದ್ದ ವ್ಯಕ್ತಿಯ ಉದಾಹರಣೆ ಅದಾಗಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ: ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ನವೆಂಬರ್೨ರಂದು ಪೊಲೀಸರ ಜೊತೆಗೆ ಸಂಭವಿಸಿದ ಘರ್ಷಣೆಯನ್ನು ಅನುಸರಿಸಿ ನಡೆಸುತ್ತಿದ್ದ  ತಮ್ಮ  ೧೩ ದಿನಗಳ ಮುಷ್ಕರವನ್ನು ದೆಹಲಿಯ ಜಿಲ್ಲಾ ನ್ಯಾಯಾಲಯಗಳ ವಕೀಲರು 2019 ನವೆಂಬರ್ 15ರ ಶುಕ್ರವಾರ ಹಿಂತೆಗೆದುಕೊಂಡರು. ಮುಷ್ಕರ ಹಿಂತೆಗೆದುಕೊಂಡ ವಿಷಯವನ್ನು ದೆಹಲಿಯ ಎಲ್ಲ ಜಿಲ್ಲಾ ನ್ಯಾಯಾಲಯಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ  ಧೀರ್ ಸಿಂಗ್ ಕಸನಾ ಪ್ರಕಟಿಸಿದರು. ಗೌರವಾನ್ವಿತ ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಮತ್ತು ಮುಷ್ಕರವನ್ನು  ಅಮಾನತುಗೊಳಿಸುತ್ತಿದ್ದೇವೆ. 2019 ನವೆಂಬರ್ 16ರ ಶನಿವಾರ ಎಲ್ಲ ನ್ಯಾಯಾಲಯಗಳಲ್ಲೂ ಕೆಲಸ ಪುನಾರಂಭಗೊಳ್ಳಲಿದೆ. ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ವಕೀಲರ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರೆಯುವುದು ಎಂದು ಧೀರ್ ಸಿಂಗ್ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)

2019: ತಿರುವನಂತಪುರಂ: ಶಬರಿಮಲೈಯು ಹೋರಾಟದ ತಾಣವಲ್ಲ ಮತ್ತು ಎಡ ಪ್ರಜಾತಾಂತ್ರಿಕ ರಂಗ (ಎಲ್ಡಿಎಫ್) ಸರ್ಕಾರವು ಪ್ರಚಾರ ಪಡೆಯುವುದಕ್ಕಾಗಿ ಶಬರಿಮಲೈ ದೇವಾಲಯ ಪ್ರವೇಶಿಸುವುದಾಗಿ ಪ್ರಕಟಣೆ ನೀಡುವವರಿಗೆ ಯಾವುದೇ ಬೆಂಬಲ, ರಕ್ಷಣೆ ಒದಗಿಸುವುದಿಲ್ಲ ಎಂದು ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು 2019 ನವೆಂಬರ್ 15ರ ಶುಕ್ರವಾರ ಸ್ಪಷ್ಟಪಡಿಸಿದರು. ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಯತ್ನಿಸುವ ಮಹಿಳಾ ಕಾರ್ಯಕರ್ತರಿಗೆ ಪೊಲೀಸರು ಭದ್ರತೆ ಒದಗಿಸಲಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಚಿವರುಇತ್ತೀಚೆಗಿನ ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಗೊಂದಲಗಳಿವೆ. ಆದ್ದರಿಂದ ಶಬರಿಮಲೈಗೆ ಹೋಗಲು ಇಚ್ಛಿಸುವ ಮಹಿಳೆಯರುನ್ಯಾಯಾಲಯದ ಆದೇಶಪಡೆದುಕೊಳ್ಳಬೇಕುಎಂದು ಹೇಳಿದರುಶಬರಿಮಲೈ ದೇವಾಲಯ ಪ್ರವೇಶಕ್ಕೆ ಋತುಮತಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ರದ್ದು ಪಡಿಸಿದ ತನ್ನ ಹಿಂದಿನ ಆದೇಶದ ಹಿನ್ನೆಲೆಯಲ್ಲಿ ಉದ್ಭವಿಸಿದ ಧಾರ್ಮಿಕ ವಿಷಯಗಳು ಸೇರಿದಂತೆ ವಿವಿಧ ವಿಚಾರಗಳ ಮರುಪರಿಶೀಲನೆಗೆ ಏಳು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠ ರಚನೆಗೆ ಸುಪ್ರೀಂಕೋರ್ಟ್ ನವೆಂಬರ್ ೧೪ರ ಗುರುವಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡುತ್ತಿದ್ದರು.  ‘ಶಬರಿಮಲೈಯು ಕಾರ್ಯಕರ್ತರಿಗೆ ತಮ್ಮ ಹೋರಾಟ ಪ್ರದರ್ಶನದ ತಾಣವಲ್ಲ. ಕೆಲವು ವ್ಯಕ್ತಿಗಳು ಪತ್ರಿಕಾಗೋಷ್ಠಿ ಕರೆದು ತಾವು ದೇವಾಲಯ ಪ್ರವೇಶಿಸುವುದಾಗಿ ಪ್ರಕಟಣೆ ನೀಡುತ್ತಾರೆ. ಅವರು ಕೇವಲ ಪ್ರಚಾರಕ್ಕಾಗಿ ಇದನ್ನು ಮಾಡುತ್ತಾರೆ. ಸರ್ಕಾರ ಇಂತಹ ಪ್ರವೃತ್ತಿಗಳಿಗೆ ಬೆಂಬಲ ನೀಡುವುದಿಲ್ಲಎಂದು ಕಡಕಂಪಲ್ಲಿ ಹೇಳಿದರು. ಎಲ್ಲ ವಯೋಮಾನದ ಮಹಿಳೆಯರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟಿನ ೨೦೧೮ ಸೆಪ್ಟೆಂಬರ್ ೨೮ರ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇಲ್ಲದ ಕಾರಣ ತಾವು ದೇವಾಲಯವನ್ನು ಪ್ರವೇಶಿಸುವುದಾಗಿ ಕೆಲವು ಕಾರ್ಯಕರ್ತೆಯರು ಹೇಳಿರುವ ಬಗ್ಗೆ ಗಮನ ಸೆಳೆದಾಗ, ’ಅವರು ಸುಪ್ರೀಂಕೋರ್ಟನ್ನು ಸಂಪರ್ಕಿಸಿ ಆದೇಶ ಪಡೆದುಕೊಂಡು ಬರಬಹುದುಎಂದು ಸಚಿವರು ನುಡಿದರು. ‘ಸುಪ್ರೀಂಕೋರ್ಟಿನ ಆದೇಶಕ್ಕೆ ಸಂಬಂಧಿಸಿದಂತೆ ಇನ್ನೂ ಗೊಂದಲಗಳಿವೆ. ಸರ್ಕಾರವು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಿದೆಎಂದು ಅವರು ಹೇಳಿದರು. ಶಬರಿಮಲೈ ದೇಗುಲ ಪ್ರವೇಶ ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ಒಪ್ಪಿಸಲು ನವೆಂಬರ್ ೧೪ರ ಗುರುವಾರ : ಬಹುಮತದ ತೀರ್ಪು ನೀಡಿದ ಪಂಚ ಸದಸ್ಯ ಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಬಹುಮತದ ತೀರ್ಪಿಗೆ ಭಿನ್ನಮತ ವ್ಯಕ್ತ ಪಡಿಸಿ ಅಲ್ಪಮತದ ತೀರ್ಪು ನೀಡಿದ್ದರು. (ವಿವರಗಳಿಗೆ  ಇಲ್ಲಿ  ಕ್ಲಿಕ್ಕಿಸಿ)



No comments:

Post a Comment