ನಾನು ಮೆಚ್ಚಿದ ವಾಟ್ಸಪ್

Tuesday, November 12, 2019

ಇಂದಿನ ಇತಿಹಾಸ History Today ನವೆಂಬರ್ 12

2019: ನವದೆಹಲಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯೊಂದಿಗೆ ವಿಧಾನಸಭೆಗೆ ನಡೆದ ಚುನಾವಣೆಯ ಬಳಿಕ ಉದ್ಭವಿಸಿದ ಸರ್ಕಾರ ರಚನೆಯ ೧೯ ದಿನಗಳಮಹಾಬಿಕ್ಕಟ್ಟಿಗೆ2019 ನವೆಂಬರ್ 12ರ ಮಂಗಳವಾರ ತೆರೆಬಿದ್ದಿತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಂಪುಟ ಸಭೆಯು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವರದಿಯನ್ನು ಆಧರಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಮಾಡಿದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದರು. ಇದರೊಂದಿಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ‘ಮಹಾರಾಷ್ಟ್ರದಲ್ಲಿ ಸಂವಿಧಾನದ ವಿಧಿಗಳಿಗೆ ಅನುಗುಣವಾಗಿ ಸ್ಥಿರ ರಾಜ್ಯ ಸರ್ಕಾರದ ರಚನೆ ಸಾಧ್ಯವಿಲ್ಲಎಂಬುದಾಗಿ ರಾಜ್ಯಪಾಲ ಕೋಶಿಯಾರಿ ಅವರು ಇದಕ್ಕೆ ಮುನ್ನ ಕೇಂದ್ರಕ್ಕೆ ವರದಿ ಕಳುಹಿಸಿದ್ದರು. ಬಿಜೆಪಿಯು ಸರ್ಕಾರ ರಚನೆಗೆ ಹೆಚ್ಚಿನ ಕಾಲಾವಕಾಶ ಕೋರಿತ್ತು. ಆದರೆ ಅದಕ್ಕೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರು ಕೇವಲ ೪೮ ಗಂಟೆಗಳ ಕಾಲಾವಕಾಶ ನೀಡಿದ್ದರು. ಇದನ್ನು ೨೪ ಗಂಟೆಗಳ ಒಳಗಾಗಿ ನಿರಾಕರಿಸಿದ ಬಿಜೆಪಿ ಸರ್ಕಾರ ರಚನೆ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಬಳಿಕ ಶಿವಸೇನೆಯು ಮೂರು ದಿನಗಳ ಕಾಲಾವಕಾಶ ಕೋರಿತು. ಅದನ್ನು ಕೂಡಾ ನಿರಾಕರಿಸಲಾಯಿತು. ಈದಿನ  ಬೆಳಗ್ಗೆ ೧೧.೩೦ರ ವೇಳೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ತನಗೆ ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಕೋರಿತು. ಆದರೆ ಅದನ್ನು ಕೂಡಾ ನಿರಾಕರಿಸಲಾಯಿತು ಎಂದು ಉನ್ನತ ಮೂಲಗಳು ಹೇಳಿವೆ. ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಸೆಣಸಿದ್ದ ಶಿವಸೇನೆಯು , ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬ ತನ್ನ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿದ ಬಳಿಕ ಮೈತ್ರಿಕೂಟದಿಂದ ಹೊರನಡೆದಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ)

2019: ನವದೆಹಲಿ: ಮಹಾರಾಷ್ಟ್ರದಲ್ಲಿ 2019 ನವೆಂಬರ್ 12ರ ಮಂಗಳವಾರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿದ್ದಂತೆಯೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯುಕಾಲಾವಕಾಶ ನಿರಾಕರಿಸಿದರಾಜ್ಯಪಾಲರ ನಡೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲನ್ನು ಏರಿದ್ದು, ಅರ್ಜಿಯು 2019 ನವೆಂಬರ್ 13ರ ಬುಧವಾರ ಬೆಳಗ್ಗೆ ೧೦.೩೦ ಗಂಟೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರ ಮುಂದೆ ವಿಚಾರಣೆಗೆ ಬರಲಿದೆ. ಸುಪ್ರೀಂಕೋರ್ಟ್ ರಿಜಿಸ್ಟ್ರಿಯು ಬುಧವಾರ ಬೆಳಗ್ಗೆ ಸಿಜೆಐ ಅವರ ಎದುರು ಅರ್ಜಿಯನ್ನು ಪ್ರಸ್ತಾಪಿಸುವಂತೆ ಶಿವಸೇನಾ ವಕೀಲರಿಗೆ ಈದಿನ ಸೂಚಿಸಿತು. ಮುಂದಿನ ಸರ್ಕಾರ ರಚನೆಯ ಸಂಬಂಧವಾಗಿ ಬೆಂಬಲ ಪತ್ರಗಳನ್ನು ಸಲ್ಲಿಸಲು ಮಾಡಲಾದ ಹೆಚ್ಚಿನ ಕಾಲಾವಕಾಶದ ಕೋರಿಕೆಯನ್ನು 2019 ನವೆಂಬರ್ 11ರ ಸೋಮವಾರ ರಾತ್ರಿ  ತಿರಸ್ಕರಿಸಿದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಡೆಯನ್ನು ಪ್ರಶ್ನಿಸಿ ಪಕ್ಷವು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತು. ಈದಿನವೇ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಸಲುವಾಗಿ ಪೀಠ ರಚಿಸಲು ಸಾಧ್ಯವಿಲ್ಲ ಎಂಬುದಾಗಿ ಶಿವಸೇನಾ ವಕೀಲರಿಗೆ ತಿಳಿಸಿದ ಸುಪ್ರೀಂಕೋರ್ಟ್ ರಿಜಿಸ್ಟ್ರಿಯು ಬುಧವಾರ ಬೆಳಗ್ಗೆ ಸಿಜೆಐ ಅವರ ಪೀಠದ ಮುಂದೆ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿ ಮಾಡಿದ್ದ ಟೀಕೆಗಾಗಿ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ್ರ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು 2019 ನವೆಂಬರ್ 12ರ ಮಂಗಳವಾರ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ನ್ನು ಜಾರಿಗೊಳಿಸಿತು. ಬಿಜೆಪಿ ನಾಯಕ ರಾಜೀವ್ ಬಬ್ಬರ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. ಇದೇ ವೇಳೆಗೆ ನ್ಯಾಯಾಲಯದಲ್ಲಿ ಹಾಜರಿರದೇ ಇದ್ದುದಕ್ಕಾಗಿ ನ್ಯಾಯಾಧೀಶರು ಬಬ್ಬರ್ ಅವರಿಗೂ ೫೦೦ ರೂಪಾಯಿಗಳ ದಂಡವನ್ನೂ ವಿಧಿಸಿದರು. ಪ್ರಕರಣದ ವಿಚಾರಣೆಯನ್ನು ನವೆಂಬರ್ ೨೭ಕ್ಕೆ ಮುಂದೂಡಲಾಯಿತು. ಉದಾರ ದೃಷ್ಟಿಯಿಂದ ಆರೋಪಿಯ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಜಾರಿಗೊಳಿಸಲಾಗಿದ್ದು ೫೦೦೦ ರೂಪಾಯಿಗಳ ಭದ್ರತೆ ಒದಗಿಸುವಂತೆಯೂ ಜಾರಿಗೊಳಿಸಲಾದ ನೋಟಿಸಿನಲ್ಲಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಿಳಿಸಿದರು. ಕಾಂಗ್ರೆಸ್ ನಾಯಕನ ಹೇಳಿಕೆಯಿಂದ ತನ್ನ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ ಎಂಬುದಾಗಿ ಹೇಳಿ ಬಬ್ಬರ್ ಅವರು ತರೂರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಖಟ್ಲೆ ದಾಖಲಿಸಿದ್ದರು. ೨೦೧೮ರ ಅಕ್ಟೋಬರ್ ೨೮ರಂದು, ತರೂರ್ ಅವರು ಅನಾಮಧೇಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್)  ಮೂಲವನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಮೋದಿ ಅವರನ್ನುಶಿವಲಿಂಗದ ಮೇಲೆ ಕುಳಿತ ಚೇಳುಎಂದು ಅವರು ತಮ್ಮ ಟೀಕೆಯಲ್ಲಿ ಹೋಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment