ನಾನು ಮೆಚ್ಚಿದ ವಾಟ್ಸಪ್

Sunday, November 3, 2019

ಇಂದಿನ ಇತಿಹಾಸ History Today ನವೆಂಬರ್ 03

2019: ಬ್ಯಾಂಕಾಕ್: ಚೀನಾದಿಂದ ಅಗ್ಗದ ವಸ್ತುಗಳು ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು ಎಂಬ ಹಿನ್ನೆಲೆಯಲ್ಲಿ ಭಾರತವು ಹೊಸ ಬೇಡಿಕೆಗಳನ್ನು ಮುಂದಿಟ್ಟ ಪರಿಣಾಮವಾಗಿ ೧೬ ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್ಸಿಇಪಿ) ಒಪ್ಪಂದಕ್ಕೆ ಸಹಿ ಬೀಳುವುದು ೨೦೨೦ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಆಗ್ನೇಯ ಏಷ್ಯಾ ನಾಯಕರ ಕರಡು ಹೇಳಿಕೆಯು 2019 ನವೆಂಬರ್ 03ರ ಭಾನುವಾರ ತಿಳಿಸಿತು. ಭಾರತದಿಂದ ನ್ಯೂಜಿಲೆಂಡ್ವರೆಗಿನ ದೇಶಗಳನ್ನು ಒಳಗೊಳ್ಳುವ ಆರ್ಸಿಇಪಿ ವಾಣಿಜ್ಯ ಒಪ್ಪಂದವು ಜಾಗತಿಕ ಜಿಡಿಪಿಯ ಶೇಕಡಾ ೩೦ರಷ್ಟು ಮತ್ತು ವಿಶ್ವದ ಜನರ ಅರ್ಧದಷ್ಟು ಜನರಿಗೆ ಅನ್ವಯವಾಗಲಿದೆ. ಭಾರತದ ಆಕ್ಷೇಪಗಳ ಪರಿಣಾಮವಾಗಿ ಬ್ಯಾಂಕಾಕಿಲ್ಲಿ ನಡೆಯುವ ಅಸಿಯಾನ್ ಶೃಂಘಸಭೆಯಲ್ಲಿ ಒಪ್ಪಂದಕ್ಕೆ ಅಂತಿಮ ರೂಪ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಒಪ್ಪಂದದ ಪರಿಣಾಮವಾಗಿ ಚೀನಾದ ಅಗ್ಗದ ವಸ್ತುಗಳು ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಹರಿದು ಬರಬಹುದು. ಇದರಿಂದಾಗಿ ದೇಶದ ಸಣ್ಣ ಉದ್ಯಮಕ್ಕೆ ಭಾರೀ ಧಕ್ಕೆ ಆಗಬಲ್ಲುದು ಎಂದು ಭಾರತ ಚಿಂತೆ ವ್ಯಕ್ತಪಡಿಸಿತು.  ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸಿಯಾನ್ ನಾಯಕರ ಸಭೆಯಲ್ಲಿ ತಮ್ಮ ದೇಶದ ಕಳವಳವನ್ನು ಪುನರಾವರ್ತನೆ ಮಾಡಿದರು ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮುಂಬೈ: ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಮಿತ್ರ ಪಕ್ಷ ಬಿಜೆಪಿ ಜೊತೆಗಿನ ತನ್ನ ಪಟ್ಟನ್ನು 2019 ನವೆಂಬರ್ 3ರ ಭಾನುವಾರ ಇನ್ನಷ್ಟು ಬಿಗಿಗೊಳಿಸಿದ ಶಿವಸೇನೆಯು, ಇದೇ ಮೊದಲನೇ ಬಾರಿಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರಿಗೆಮೊಬೈಲ್ ಸಂದೇಶಕಳುಹಿಸಿತು.  ಇದೇ ವೇಳೆಗೆ ಶಿವಸೇನೆಯು ಮೊದಲು ಸರ್ಕಾರ ರಚಿಸುವುದಿಲ್ಲ ಎಂದು ಸೇನಾ ಮುಖವಾಣಿಸಾಮ್ನಾಸಂಪಾದಕೀಯದಲ್ಲಿ ಬರೆಯಿತು. ಶಿವಸೇನೆಯಿಂದ ತನಗೆ ಮೊತ್ತ ಮೊದಲ ಸಂದೇಶ ಬಂದಿರುವುದನ್ನು ಅಜಿತ್ ಪವಾರ್ ಅವರು ದೃಢ ಪಡಿಸಿದ್ದು, ಸಂಜಯ್ ರಾವತ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದರು.  ಮುಖ್ಯಮಂತ್ರಿ ಸ್ಥಾನ ಮತ್ತು ಅಧಿಕಾರದ ಸಮಾನ ಹಂಚಿಕೆಗಾಗಿ ಬಿಜೆಪಿ-ಶಿವಸೇನೆ ನಡುವಣ ಹಗ್ಗ ಜಗ್ಗಾಟವು ಈದಿನ ೧೦ನೇ ದಿನಕ್ಕೆ ಕಾಲಿರಿಸಿದ್ದು, ತನ್ನ ಬೇಡಿಕೆ ಈಡೇರಿಕೆಗೆ ಬಿಜೆಪಿ ಸಿದ್ಧವಿಲ್ಲವಾದರೆ ಬೇರೆ ಆಯ್ಕೆಗಳನ್ನು ತಾನು ಪರಿಶೀಲಿಸುವುದಾಗಿ ಹೇಳಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಹಾಗೂ ಕೆಲವು ಪಕ್ಷೇತರರ ಜೊತೆಗೆ ಬಹುಮತ ಗಳಿಸಲು ತಾನು ಹೊಂದಬಹುದಾದ ಸಂಖ್ಯಾಬಲವನ್ನು ಉಲ್ಲೇಖಿಸಿದ ಸೇನೆಯ ಮುಖವಾಣಿಸಾಮ್ನಾ, ಆದರೆ ಸೇನೆಯು ಮೊದಲ ಸರ್ಕಾರ ರಚಿಸುವುದಿಲ್ಲ ಎಂದು ಸಂಪಾದಕೀಯದಲ್ಲಿ ಘೋಷಿಸಿತು. ರಾಷ್ಟ್ರಪತಿ ಆಳ್ವಿಕೆ ಹೇರುವ ಧೈರ್ಯ ಮಾಡಿ, ಅಥವಾ ಸದನದಲ್ಲಿ ಬಹುಮತ ಸಾಬೀತು ಪಡಿಸಿಎಂದು ಸೇನೆಯು ತನ್ನ ಮುಖವಾಣಿಯ ಸಂಪಾದಕೀಯದಲ್ಲಿ ಬಿಜೆಪಿಗೆ ಸವಾಲು ಹಾಕಿತು.ಬಿಜೆಪಿಯು ಸದನದಲ್ಲಿ ಬಹುಮತ ಸಾಬೀತು ಪಡಿಸಲು ವಿಫಲವಾದರೆ ಅಗ ಸೇನೆಯು ಎರಡನೇ ದೊಡ್ಡ ಪಕ್ಷವಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದುಎಂದು ಸಂಪಾದಕೀಯ ಹೇಳಿತು.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಬಳಕೆದಾರರ ಮೇಲೆ ಬೇಹುಗಾರಿಕೆ ನಡೆಸುವ ಉದ್ದೇಶಕ್ಕಾಗಿ ನಡೆದ ಫೋನ್ ಕನ್ನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನೂ ಗುರಿಮಾಡಲಾಗಿತ್ತು ಎಂದು ಕಾಂಗ್ರೆಸ್ ಪಕ್ಷವು 2019 ನವೆಂಬರ್ 03ರ ಭಾನುವಾರ ಗಂಭೀರ ಆರೋಪ ಮಾಡಿತು. ’ಇದು ಇಲ್ಲದೇ ಇದ್ದುದರ ಕಲ್ಪನೆ ಮಾತ್ರಎಂದು ಬಿಜೆಪಿ ಇದಕ್ಕೆ ಪ್ರತಿಕ್ರಿಯಿಸಿತುಪ್ರಿಯಾಂಕಾ ಗಾಂಧಿ ಅವರಿಗೆ ವಾಟ್ಸಪ್ನಿಂದ ಆಕೆಯ ಫೋನ್ ಹ್ಯಾಕ್ ಬಗ್ಗೆಸಂದೇಶ (ಮೆಸ್ಸೇಜ್) ಬಂದಿತ್ತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದರು.  ‘ನಿಮ್ಮ ಫೋನ್ಗಳು ಹ್ಯಾಕ್ ಆಗಿವೆ ಎಂಬುದಾಗಿ ವಾಟ್ಸಪ್ ಸಂದೇಶಗಳನ್ನು ಕಳಿಸಿತ್ತು. ಪ್ರಿಯಾಂಕಾ ಗಾಂಧಿ ಅವರ ಫೋನಿಗೂ ಅಂತಹ ಒಂದು ಸಂದೇಶ ಬಂದಿತ್ತುಎಂದು ಸುರ್ಜೆವಾಲ ನುಡಿದರು. ಹ್ಯಾಕ್ಗೆ ಗುರಿಯಾದವರ ಪಟ್ಟಿಯಲ್ಲಿ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್ ಮತ್ತು ಮಾಜಿ ಲೋಕಸಭಾ ಸದಸ್ಯ ಸಂತೋಷ ಭಾರತೀಯ ಅವರೂ ಇದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಇಸ್ರೇಲ್ ಸಂಸ್ಥೆಯೊಂದು ವಿಶ್ವಾದ್ಯಂತ ಸುಮಾರು ೧೪೦೦ ಜನರ ಮೇ ಬೇಹುಗಾರಿಕೆ ನಡೆಸುವ ಸಲುವಾಗಿ ತನ್ನ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ವಾಟ್ಸಪ್ ಆಪಾದಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಫೋನಿಗೂ ಕನ್ನ ಹಾಕಲಾಗಿದ್ದು ಇದಕ್ಕೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದರು. ‘ಇದು ಅತ್ಯಂತ ಗಂಭೀರ ವಿಷಯ. ಇಬ್ಬರು ರಾಜಕಾರಣಿಗಳು ಈವರೆಗೆ ತಮ್ಮ ಫೋನುಗಳು ಹ್ಯಾಕ್ ಆಗಿರುವ ಬಗ್ಗೆ ಹೇಳಿದ್ದಾರೆಎಂದು ಕಾಂಗ್ರೆಸ್ ನಾಯಕ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ಸ್ಥಿತಿ 2019 ನವೆಂಬರ್ 3ರ ಭಾನುವಾರ ಗಂಭೀರ ಮಟ್ಟಕ್ಕೆ ಹೋಗಿದ್ದು, ಅತಿಯಾದ ಹೊಗೆ, ದೂಳಿನ ಮಬ್ಬು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ೩೭ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಯಿತು. ರಾಜಧಾನಿಯ ಹಾನಿಕಾರ ಅಂಶಗಳ ಪ್ರಮಾಣ ವಾತಾವರಣದಲ್ಲಿ ಹೆಚ್ಚಿದ್ದರಿಂದ ಗಾಳಿಯಲ್ಲಿನ ಆಮ್ಲಜನಕದ ಪ್ರಮಾಣ ತಗ್ಗಿದ್ದು, ಉಸಿರಾಟಕ್ಕೆ ಕಷ್ಟಕರವಾಗುವ ಭೀತಿ ಉದ್ಭವವಾಯಿತು. ದಟ್ಟ ಹೊಗೆಯಿಂದಾಗಿ ಅಂದಾಜು ೩೭ ವಿಮಾನಗಳ ಹಾರಾಟ ಮಾರ್ಗವನ್ನು ಬದಲಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು. ನಗರದ ಹಲವು ಭಾಗಗಳಲ್ಲಿ ಹೊಗೆಯ ಪದರ ಆವರಿಸಿಕೊಂಡು, ಏನೂ ಕಾಣದಂತಹ ಸ್ಥಿತಿ ನಿರ್ಮಾಣಗೊಂಡಿತು. ಈದಿನ  ಮಧ್ಯಾಹ್ನದ ವೇಳೆಗೆ ದೆಹಲಿಯ ಹಲವು ಪ್ರದೇಶಗಳಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ ಸಿಆರ್) ಮಾಲಿನ್ಯ ಸ್ಥಿತಿ ಸೂಚ್ಯಂಕವು ೧೬೦೦ ಅಂಕಗಳನ್ನು ದಾಟಿದ್ದು ಇದು ಗಂಭೀರ ಅಪಾಯದ ಸೂಚನೆಯಾಗಿದೆ ಎಂದು ವರದಿಗಳು ಹೇಳಿದವು. ಜಹಾಂಗೀರಪುರಿಯಲ್ಲಿ ವಾಯು ಗುಣಮಟ್ಟ ಮಾಪನದಲ್ಲಿ ಸೂಚ್ಯಂಕವು ೧೬೯೦, ದೆಹಲಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ೧೧೨೦, ಗುಡಗಾಂವ್ನಲ್ಲಿ  ೯೯೦ ಮತ್ತು ನೋಯ್ಡಾದಲ್ಲಿ ೧೯೭೪ ಅಂಕಗಳು ದಾಖಲಾದವು. ದೀಪಾವಳಿ ಆಚರಣೆಯ ಬಳಿಕ ದೆಹಲಿ ನಗರ ಪರಿಸರದಲ್ಲಿ ವಾಯು ಗುಣಮಟ್ಟ ಪಾತಾಳಕ್ಕೆ ಇಳಿದಿದೆ. ಇದು ಕಳೆದ ಐದು ವರ್ಷಗಳಲ್ಲೇ ಅತೀ ಕಳಪೆ ಗುಣಮಟ್ಟವಾಗಿದೆ. ವಿಚಾರದಲ್ಲಿ ಕೇಂದ್ರ ಸರ್ಕಾರ ತತ್ ಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ರಾಷ್ಟ್ಟೀಯ ರಾಜಧಾನಿ ಪ್ರದೇಶ ಮತ್ತು ದೆಹಲಿ ಸುತ್ತು ಮುತ್ತಣ ಉಪನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆಯಲ್ಲಿ 2019 ನವೆಂಬರ್ 3ರ ಭಾನುವಾರ ತುರ್ತು ಸಭೆ ನಡೆಸಿದ ಕೇಂದ್ರ ಸರ್ಕಾರವು ಸುಡುವಿಕೆಯನ್ನು ಕಡಿಮೆಗೊಳಿಸಿ, ದೂಳು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೂಚನೆ ನೀಡಿತು. ಪ್ರಧಾನ ಮಂತ್ರಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿಯವರು ಉನ್ನತ ಮಟ್ಟದ ಸಭೆ ನಡೆಸಿ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು. ದೆಹಲಿಯ ಅಧಿಕಾರಿಗಳಲ್ಲದೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಪ್ರತಿನಿಧಿಗಳು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಭೆಗೆ ಹಾಜರಾದರು. ಪ್ರಧಾನಿಯವರ ಪ್ರಿನ್ಸಿಪಲ್ ಕಾರ್ಯದರ್ಶಿ ಪಿ.ಕೆ. ಮಿಶ್ರ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸಭೆಯನ್ನು ನಡೆಸಿದರು. ಸಂಪುಟ ಕಾರ್ಯದರ್ಶಿಯವರು ರಾಜ್ಯಗಳಲ್ಲಿನ ಪರಿಸ್ಥಿತಿಯ ಮೇಲೆ ಪ್ರತಿದಿನವೂ ನಿಗಾ ಇಡಬೇಕು ಎಂದು ಸಭೆಯು ನಿರ್ಧರಿಸಿತು. ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ತಮ್ಮ ತಮ್ಮ ರಾಜ್ಯಗಳ ವಿವಿಧ ಜಿಲ್ಲೆಗಳ ಪರಿಸ್ಥಿತಿ ಮೇಲೆ ಪ್ರತಿದಿನವೂ ನಿರಂತರ ನಿಗಾ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಇಸ್ಲಾಮಾಬಾದ್:  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಜಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ ವಿಭಜನೆ ಅಕ್ಟೋಬರ್ ೩೧ರಂದು ಕಾರ್ಯಗತವಾದ ಬಳಿಕ, ಕೇಂದ್ರ ಸರ್ಕಾರವು ಹಿಂದಿನ ದಿನ  ಬಿಡುಗಡೆ ಮಾಡಿದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಭಾರತದ ಭೂಪಟವು ಪಾಕಿಸ್ತಾನದ ನಿದ್ದೆಗೆಡಿಸಿತು. ಕಾಶ್ಮೀರದ ಸಂಪೂರ್ಣ ಭೂಭಾಗವು ಭಾರತಕ್ಕೇ ಸೇರಿದ್ದು ಎಂದು ಭೂಪಟದಲ್ಲಿ ಚಿತ್ರಿಸಿದ್ದಕ್ಕೆ ಪಾಕಿಸ್ತಾನ 2019 ನವೆಂಬರ್ 3ರ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತು. ‘ಇದೊಂದು ಅಸಮರ್ಪಕ ಮತ್ತು ಕಾನೂನುಬದ್ಧವಾಗಿ ಒಪ್ಪಲಾಗದ ನಕ್ಷೆಎಂದು ಪಾಕಿಸ್ತಾನ ಹೇಳಿತು. ಭಾರತ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಹೊಸ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದೊಳಗೆ ಹಾಗೂ ಗಿಲ್ಗಿಟ್ -ಬಾಲ್ಟಿಸ್ತಾನವನ್ನು ಲಡಾಖ್ ಒಳಗೆ ಸೇರಿಸಿ ಚಿತ್ರಿಸಿದ್ದು, ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಇಲಾಖೆ, ಇದೊಂದು ಕಾನೂನುಬಾಹಿರ ಕೃತ್ಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿತು. ಅಲ್ಲದೆ, ಭೂಪಟವನ್ನು ಪಾಕಿಸ್ತಾನವು ನಿರಾಕರಿಸುತ್ತದೆ ಎಂದೂ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


No comments:

Post a Comment