ನಾನು ಮೆಚ್ಚಿದ ವಾಟ್ಸಪ್

Thursday, August 27, 2020

ಇಂದಿನ ಇತಿಹಾಸ History Today ಆಗಸ್ಟ್ 27

 ಇಂದಿನ ಇತಿಹಾಸ  History Today ಆಗಸ್ಟ್ 27

2020: ನವದೆಹಲಿ: ದೇಶಾದ್ಯಂತ ಮೊಹರಂ ಮೆರವಣಿಗೆಗಳನ್ನು ನಡೆಸಲು ಅನುಮತಿ ನೀಡಲು ಸುಪ್ರೀಂ ಕೋರ್ಟ್ 2020 ಆಗಸ್ಟ್ 27ರ ಗುರುವಾರ ನಿರಾಕರಿಸಿತು. ’ಇದು ಅವ್ಯವಸ್ಥೆಗೆ ಕಾರಣವಾಗಬಹುದು ಮತ್ತು ಕೋವಿಡ್ -೧೯ರ ಹರಡುವಿಕೆಗೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಬಹುದು. ಸಂವಿಧಾನದ ೩೨ ನೇ ಪರಿಚ್ಛೇದದ ಪ್ರಕಾರ ಇಂತಹ ಸಾಮಾನ್ಯ ನಿರ್ದೇಶನಗಳನ್ನು ನೀಡಲಾಗದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ಪೀಠವು ಸ್ಪಷ್ಟ ಪಡಿಸಿತು. " ಸಮುದಾಯದ ಸಲುವಾಗಿ ನೀವು ಇಡೀ ದೇಶಕ್ಕೆ ಅಸ್ಪಷ್ಟ ನಿರ್ದೇಶನಗಳನ್ನು ಕೇಳುತ್ತಿದ್ದೀರಿಎಂದು ಪೀಠವು ಶಿಯಾ ನಾಯಕ ಲಕ್ನೋ ಮೂಲದ ಅರ್ಜಿದಾರ ಸೈಯದ್ ಕಲ್ಬೆ ಜವಾದ್ ಅವರಿಗೆ ತಿಳಿಸಿತು. ಮನವಿಯನ್ನು ಅಲಹಾಬಾದ್ ಹೈಕೋರ್ಟಿಗೆ ಸಲ್ಲಿಸುವಂತೆಯೂ ಪೀಠವು ಅರ್ಜಿದಾರರಿಗೆ ನಿರ್ದೇಶನ ನೀಡಿತು. ಅರ್ಜಿದಾರರ ವಕೀಲರು ಜಗನ್ನಾಥ ಪುರಿ ರಥಯಾತ್ರೆಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಲು ಯತ್ನಿಸುತ್ತಿದ್ದಂತೆಯೇ  ಪ್ರಕರಣವು ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಪೀಠ ಹೇಳಿತು."ಜಗನ್ನಾಥ ಪುರಿ ಪ್ರಕರಣವು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ರಥವು ಹೋಗಬೇಕಾದ ಒಂದು ನಿರ್ದಿಷ್ಟ ಸ್ಥಳವಾಗಿತ್ತು. ಹೀಗಾಗಿ ನಮಗೆ ಅಪಾಯವನ್ನು ನಿರ್ಣಯಿಸಲು ಸಾಧ್ಯವಿತ್ತು ಮತ್ತು ಆದೇಶ ನೀಡಿದ್ದೇವೆ. ಇದು ಅಂತಹ ಪ್ರಕರಣವಲ್ಲಎಂದು ಸಿಜೆಐ ಬೋಬ್ಡೆ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಸಲುವಾಗಿ ದೇಶದಲ್ಲಿ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಆಗಸ್ಟ್ 27ರ ಗುರುವಾರ ಹೇಳಿದರು. "ಅನೇಕ ವರ್ಷಗಳಿಂದ, ಭಾರತವು ಅತಿದೊಡ್ಡ ರಕ್ಷಣಾ ಆಮದುದಾರರಲ್ಲಿ ಒಂದಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ, ಅದು ರಕ್ಷಣಾ ಉತ್ಪಾದನೆಯಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿತ್ತು ಮತ್ತು ೧೦೦ ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಿತ್ತು. ಆದರೆ, ದುರದೃಷ್ಟವಶಾತ್, ವಿಷಯವು ಬಳಿಕ ಅಗತ್ಯವಾದ ಗಮನವನ್ನು ಸೆಳೆಯಲಿಲ್ಲಎಂದು ಪ್ರಧಾನಿಯವರುಆತ್ಮ ನಿರ್ಭರ ಭಾರತ ರಕ್ಷಣಾ ಉದ್ಯಮಕುರಿತ ವೆಬಿನಾರ್ ಕಾರ್ಯಕ್ರಮದಲ್ಲಿ ಹೇಳಿದರು. ಸ್ವಯಂಚಾಲಿತ ಮಾರ್ಗದ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ಶೇಕಡಾ ೭೪ರಷ್ಟು ಎಫ್ಡಿಐಗೆ (ವಿದೇಶಿ ನೇರ ಹೂಡಿಕೆ) ಅನುಮತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆಎಂದು ಪ್ರಧಾನಿ ಹೇಳಿದರು. "ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಲು, ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆದಾರರಿಗೆ ದೊಡ್ಡ ಪಾತ್ರವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ" ಎಂದು ಮೋದಿ ಹೇಳಿದರು. ಭಾರತೀಯ ರಕ್ಷಣಾ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕೆಲವು ರಕ್ಷಣಾ ಸಾಧನಗಳಿಗೆ ಆಮದು ನಿರ್ಬಂಧ ಹೇರಲಾಗಿದೆ ಎಂದು ಪ್ರಧಾನಿ ನುಡಿದರು. "ನಾವು ಇತ್ತೀಚೆಗೆ ಕಾರ್ಮಿಕ ಸುಧಾರಣೆಗಳನ್ನೂ ನೋಡಿದ್ದೇವೆ; ಸುಧಾರಣಾ ಕಸರತ್ತು ಈಗ ನಿಲ್ಲುವುದಿಲ್ಲಎಂದು  ಮೋದಿ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು 2020 ಆಗಸ್ಟ್ 27ರ ಗುರುವಾರ ಪ್ರಬಲವಾಗಿ ಸಮರ್ಥಿಸಿಕೊಂಡರು. ಮೌನವಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳು ಪರೀಕ್ಷೆಗಳು ನಡೆಯಬೇಕೆಂದು ಬಯಸುತ್ತಾರೆ ಎಂದು ಸಚಿವರು ನುಡಿದರು. "ಜೆಟಿಇಯ .೫೮ ಲಕ್ಷ ಅಭ್ಯರ್ಥಿಗಳಲ್ಲಿ . ಲಕ್ಷ ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಎನ್ಟಿಎ ಡಿಜಿ ಹೇಳಿದೆ. ನೀಟ್ಗಾಗಿ ೧೫.೯೭ ಲಕ್ಷ ಅಭ್ಯರ್ಥಿಗಳ ಪೈಕಿ ೧೦ ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಕೇವಲ ೨೪ ಗಂಟೆಗಳಲ್ಲಿ ಡೌನ್ಲೋಡ್ ಮಾಡಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಪರೀಕ್ಷೆಗಳನ್ನು ನಡೆಸಬೇಕೆಂದು ವಿದ್ಯಾರ್ಥಿಗಳು ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆಎಂದು ಪೋಖ್ರಿಯಾಲ್ ಹೇಳಿದರು. "ಜೆಇಇ ಪರೀಕ್ಷಾ ಕೇಂದ್ರಗಳನ್ನು ೫೭೦ ರಿಂದ ೬೬೦ಕ್ಕೆ ಹೆಚ್ಚಿಸಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಟ್ ಕೇಂದ್ರಗಳನ್ನು ,೫೪೬ ರಿಂದ ಈಗ ,೮೪೨ಕ್ಕೆ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ಪರೀಕ್ಷಾ ಕೇಂದ್ರಗಳನ್ನು ಸಹ ನೀಡಲಾಗಿದೆ" ಎಂದು ಸಚಿವರು ನುಡಿದರು. ವಿದ್ಯಾರ್ಥಿಗಳ ದೇಶವ್ಯಾಪಿ ಪ್ರತಿಭಟನೆಯ ಜೊತೆಗೆ ವಿರೋಧ ಪಕ್ಷಗಳು ಕೈಜೋಡಿಸುತ್ತಿದ್ದಂತೆಯೇ, ’ಶಿಕ್ಷಣದ ರಾಜಕೀಯಕರಣವನ್ನುಖಂಡಿಸಿದ ಪೋಖ್ರಿಯಾಲ್  ಸುಪ್ರೀಂ ಕೋರ್ಟಿನ ಆದೇಶಗಳಿಗೆ ಬದ್ಧರಾಗಿರುವಂತೆ ಎಲ್ಲರಿಗೂ ಮನವಿ ಮಾಡಿದರು. ಶೂನ್ಯ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳಿಗೆ ಅಪಾರ ನಷ್ಟವನ್ನುಂಟು ಮಾಡುತ್ತದೆ ಮತ್ತು ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸುವಂತೆ ತಮಗೆ ಅಭ್ಯರ್ಥಿಗಳು ಮತ್ತು ಅವರ ಪೋಷಕರಿಂದ ಹಲವಾರು -ಮೇಲ್ಗಳ ಮೂಲಕ ಮನವಿ ಮಾಡಿದ್ದಾರೆ ಎಂದುನಿಶಾಂಕ್ಪೋಖ್ರಿಯಾಲ್ ಸಂದರ್ಶನ ಒಂದರಲ್ಲಿ ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಬಿಡುಗಡೆ ಮಾಡಲಾದ ಮತ್ತು ಮಾರಾಟವಾಗುತ್ತಿರುವ ಯೋಗಿ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆಯ ರೋಗ ನಿರೋಧಕ ಶಕ್ತಿ ವರ್ಧಕಕೊರೋನಿಲ್ಕುರಿತ ಟ್ರೇಡ್ ಮಾರ್ಕ್ ವಿವಾದವನ್ನು ಸುಪ್ರೀಂಕೋರ್ಟ್ 2020 ಆಗಸ್ಟ್ 27ರ ಗುರುವಾರ ಬಗೆ ಹರಿಸಿದ್ದು, ಟ್ರೇಡ್ ಮಾರ್ಕ್ (ಮಾರಾಟ ಗುರುತು) ಬಳಸದಂತೆ ಸಂಸ್ಥೆಯನ್ನು ನಿರ್ಬಂಧಿಸಲು ನಿರಾಕರಿಸಿತು. ಟ್ರೇಡ್ಮಾರ್ಕ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ಬ್ರ್ಯಾಂಡಿಂಗ್ ಅರ್ಹತೆಗಳಿಗೆ ಅಥವಾಕೊರೊನಿಲ್ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳ ಸೂತ್ರೀಕರಣದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟಿನ  ವಿಭಾಗೀಯ ಪೀಠವು ನೀಡಿದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠವು ಆಗಸ್ಟ್ ೧೪ರಂದು ಏಕಸದಸ್ಯ ಪೀಠವು ನೀಡಿದ್ದ ಹಿಂದಿನ ಆದೇಶವನ್ನು ತಡೆ ಹಿಡಿಯುವ ಮೂಲಕ ಪತಂಜಲಿ ಸಂಸ್ಥೆಗೆ ಮಧ್ಯಂತರ ಪರಿಹಾರವನ್ನು ಒದಗಿಸಿತ್ತು. ಏಕ ಸದಸ್ಯ ಪೀಠವು ಆಗಸ್ಟ್ ರಂದುಕೊರೊನಿಲ್ಎಂಬ ಟ್ರೇಡ್ಮಾರ್ಕ್ ಬಳಸದಂತೆ ಪತಂಜಲಿ ಸಂಸ್ಥೆಯನ್ನು ನಿರ್ಬಂಧಿಸಿತ್ತು. ಮತ್ತು ಅರುದ್ರ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ದಾಖಲಿಸಿದ್ದ ಟ್ರೇಡ್ಮಾರ್ಕ್ ಉಲ್ಲಂಘನೆ ಖಟ್ಲೆಯಲ್ಲಿ ಪತಂಜಲಿ ಸಂಸ್ಥೆಯ ಮೇಲೆ ೧೦ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತ್ತು. " ಕೋವಿಡ್ ಕಾಲದಲ್ಲಿ, ನಾವು ಕೊರೊನಿಲ್ ಪದದ ಬಳಕೆಯನ್ನು ತಡೆದರೆ, ಅದು (ಪತಂಜಲಿಯ) ಉತ್ಪನ್ನಕ್ಕೆ ಭಯಾನಕವಾಗಿರುತ್ತದೆಎಂದು ಸಿಜೆಐ ಬಾಬ್ಡೆ ಅವರು ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರುದ್ರ ಸಲ್ಲಿಸಿದ್ದ ಮೇಲ್ಮನವಿ ಗುರುವಾರ ವಿಚಾರಣೆಗೆ ಬಂದಾಗ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಬೀಜಿಂಗ್: ಭಾರತವು ದ್ವಿಪಕ್ಷೀಯ ಸಂಬಂಧಗಳದೊಡ್ಡ ಚಿತ್ರವನ್ನು ನೋಡಬೇಕು ಮತ್ತು ಬಾಂಧವ್ಯವನ್ನು  ಮತ್ತೆ ಹಾದಿಗೆ ತರಲು ಚೀನಾದೊಂದಿಗೆ ಕೆಲಸ ಮಾಡಬೇಕು, ಅದು ತಪ್ಪು ನಿರ್ಣಯಗಳನ್ನು ತಪ್ಪಿಸಬೇಕುಎಂದು ಚೀನಾದ ರಕ್ಷಣಾ ಸಚಿವಾಲಯ 2020 ಆಗಸ್ಟ್ 27ರ ಗುರುವಾರ ಭಾರತಕ್ಕೆ ಬೋಧನೆ ಮಾಡಿತು. ಗಡಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಬೇಕಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವೂ ಕಿಯಾನ್ ಹೇಳಿದ್ದು, ಕಳೆದ ವಾರ ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದಂತೆ ಪೂರ್ವ ಲಡಾಕ್ ಘರ್ಷಣೆಯ ಸ್ಥಳಗಳ ಕುರಿತ ಭಿನ್ನಾಭಿಪ್ರಾಯಗಳನ್ನು ಇನ್ನೂ ಬಗೆಹರಿಲಾಗಿಲ್ಲ ಎಂಬುದನ್ನು ಸೂಚಿಸಿತು. ರಕ್ಷಣಾ ಸಚಿವಾಲಯದ ತಮ್ಮ ಮಾಸಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೂ, ಉಭಯ ದೇಶಗಳ ನಡುವಣ ವಾಸ್ತವಿಕ ಗಡಿಯಾದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ (ಎಲ್ಎಸಿ) ಪರಿಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಅಧಿಕೃತ ಮಿಲಿಟರಿ ವೆಬ್ಸೈಟ್ನಲ್ಲಿ ಪ್ರಕಟವಾದ ವೂ ಅವರ ಹೇಳಿಕೆಯು ಚೀನಾದ ವಿದೇಶಾಂಗ ಸಚಿವಾಲಯದಂತೆಯೇ, ಪ್ರಸ್ತುತ ಪಾತಾಳಕ್ಕೆ ಮುಟ್ಟಿರುವ ಸಂಬಂಧಗಳನ್ನು ಮರುಹೊಂದಿಸುವ ಹೊಣೆಗಾರಿಕೆಯನ್ನು ಭಾರತದ ಮೇಲೆ ಹೊರಿಸಿತು.  ಗಡಿ ಪಡೆಗಳ ನಡುವಿನ ಮುಖಾಮುಖಿ ಘರ್ಷಣೆಯು ಜೂನ್ ೧೫ ರಂದು ಗಲ್ವಾನ್ ಕಣಿವೆಯಲ್ಲಿ ೨೦ ಭಾರತೀಯ ಸೈನಿಕರನ್ನು ಹುತಾತ್ಮರನ್ನಾಗಿಸಿದ ಮಾರಣಾಂತಿಕ ಘರ್ಷಣೆಗೆ ಕಾರಣವಾಗುವುದಕ್ಕೆ ಮುಂಚೆ ಏಪ್ರಿಲ್ ತಿಂಗಳಲ್ಲಿ ಇದ್ದ ಪರಿಸ್ಥಿತಿಗೆ ಮರಳಲು ನಡೆದ ಹಲವಾರು ಸುತ್ತಿನ ಸೇನಾ ಮತ್ತು ರಾಜತಾಂತ್ರಿಕ ಮಾತುಕತೆಗಳು ಯಥಾಸ್ಥಿತಿ ಪುನಃಸ್ಥಾಪಿಸುವಲ್ಲಿ ಯಶಸ್ಸು ಗಳಿಸಿಲ್ಲ. ’ದ್ವಿಪಕ್ಷೀಯ ಸಂಬಂಧಗಳ ದೊಡ್ಡ ಚಿತ್ರವನ್ನು ಗಮನದಲ್ಲಿಟ್ಟುಕೊಂಡು ಗಡಿ ಸಮಸ್ಯೆಯನ್ನು ದೊಡ್ಡ ಚಿತ್ರದಲ್ಲಿ ಸೂಕ್ತ ಸ್ಥಾನದಲ್ಲಿ ಇರಿಸುವ ಮೂಲಕ, ತಪ್ಪು ನಿರ್ಣಯವನ್ನು ತಪ್ಪಿಸಿ. ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಿ ಮತ್ತು ಸಾಮಾನ್ಯ ಅಭಿವೃದ್ಧಿಗಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಸರಿಯಾದ ಹಾದಿಗೆ ತರಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಿಎಂದು ವೂ ಹೇಳಿಕೆ ಭಾರತಕ್ಕೆ ಬೋಧನೆ ಮಾಡಿದೆ. ಚೀನಾದ ರಾಜತಾಂತ್ರಿಕ ನಿರೂಪಣೆಯಲ್ಲಿ ಭಾರತಕ್ಕೆದೊಡ್ಡ ಚಿತ್ರಸಲಹೆಯು, ಗಡಿಯಲ್ಲಿನ ಉದ್ವೇಗವು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಆರ್ಥಿಕ ಸಹಕಾರದಂತಹ ಉಳಿದ ಘಟಕಗಳ ಮೇಲೆ ಪರಿಣಾಮ ಬೀರಬಾರದು ಎಂದು ಸೂಚಿಸುತ್ತದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 27 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ