ನಾನು ಮೆಚ್ಚಿದ ವಾಟ್ಸಪ್

Thursday, November 28, 2024

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

 ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಈದಿನ (೨೮.೧೧.೨೦೨೪ ಗುರುವಾರ) ಮಿಂಚಿನ ಕಾರ್ಯಾಚರಣೆ ನಡೆಸಿದ ಬಡಾವಣೆ ನಿವಾಸಿಗಳು ಹಲವರನ್ನು ಪತ್ತೆ ಹಚ್ಚಿ ಝಾಡಿಸಿದ ಘಟನೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದಿದೆ.

ಪ್ರತಿನಿತ್ಯ ಬಡಾವಣೆಯಲ್ಲಿ ಸಂಚರಿಸುವ ಬಿಬಿಎಂಪಿ ಕಸದ ಗಾಡಿಗೆ ಕಸವನ್ನು ಕೊಡದೇ ಬೆಳ್ಳಂ ಬೆಳಗಿನ ಹೊತ್ತಿನಲ್ಲಿ ಇಲ್ಲವೇ ನಡುರಾತ್ರಿಯ ರಾತ್ರಿಯ ವೇಳೆಯಲ್ಲಿ ಬಡಾವಣೆಯ ಮುಖ್ಯ ರಸ್ತೆಯಲ್ಲೇ ಕಸ ಎಸೆಯುತ್ತಿದ್ದ ಇಂತಹ ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್‌ ಗಳೂ ಝಾಡಿಸಿ ದಂಡ ವಸೂಲು ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ಸ್ಕೂಟರಿನಲ್ಲಿ, ರಿಕ್ಷಾದಲ್ಲಿ ಅಕ್ಕ ಪಕ್ಕದ ಬಡಾವಣೆಗಳಿಂದ ಬಂದು ಕಸ ಎಸೆಯುತ್ತಿದ್ದ್ದುದೂ ಪತ್ತೆಯಾಗಿದ್ದು ಅವರನ್ನು ಕೂಡಾ ಬಡಾವಣೆಯ ನಿವಾಸಿಗಳು ಹಿಡಿದು ಝಾಡಿಸಿದರು.

ದಿನದ ಹಿಂದೆ ಕಸ ಎಸೆಯುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮನ್ನು ಪ್ರಶ್ನಿಸಿದ ಬಡಾವಣೆಯ ಪ್ರಜ್ಞಾವಂತ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬಳಿಕ ಬಡಾವಣೆಯ ನಿವಾಸಿಗಳು, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಜೊತೆಗೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದರು.

ತನ್ನನ್ನು ಪ್ರಶ್ನಿಸಿದ ಪ್ರಜ್ಞಾವಂತ ನಿವಾಸಿಯ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಕೂಡಾ ಗುರುತು ಹಿಡಿದ ಮಾರ್ಷಲ್‌ ಗಳು ಆತನಿಗೂ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ವಿಡಿಯೊ ನೋಡಲು ಮೊದಲ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ:   ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ಬೆಂ ಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗ...

Tuesday, November 26, 2024

PARYAYA: ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ

 ಗೌತಮ್ ಅದಾನಿಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ


US ಆರೋಪಗಳ ಬಗ್ಗೆ ಅದಾನಿ ಸಮೂಹ ಸ್ಪಷ್ಟನೆ

ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಲಂಚದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಅದಾನಿ ಗ್ರೂಪ್ ಇಂದು  (೨೦೨೪ ನವೆಂಬರ್‌ ೨೭ ಬುಧವಾರ) ಹೇಳಿದೆ.

ಅದಾನಿ ಸಮೂಹದ ಅಡಿಯಲ್ಲಿರುವ ಅದಾನಿ ಗ್ರೀನ್ ಸಂಸ್ಥೆಯು ತನ್ನ ಇತ್ತೀಚಿನ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಈ ಕುರಿತು ವಿವರ ನೀಡಿದ್ದು, ಮಾಧ್ಯಮ ವರದಿಗಳನ್ನು "ತಪ್ಪು" ಎಂದು ಕರೆದಿದೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳಲ್ಲಿ ರಂಧ್ರಗಳನ್ನು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಗುರುತಿಸಿದ್ದಾರೆ.

ಸಮೂಹದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು US ನಲ್ಲಿ ಲಂಚ ಅಥವಾ ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಹೊಂದಿಲ್ಲ. ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಕುರಿತ ವರದಿಗಳು ತಪ್ಪಾಗಿವೆ ಎಂದು ರೋಹ್ಟಗಿ ಹೇಳಿದ್ದಾರೆ.

ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

"ಮೊದಲಿಗೇ ಹೇಳಿಬಿಡುತ್ತೇನೆ. ಇದು ನನ್ನ ವೈಯಕ್ತಿಕ ಕಾನೂನು ದೃಷ್ಟಿಕೋನ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಅದಾನಿ ಸಮೂಹದ ವಕ್ತಾರನಲ್ಲ. ನಾನು ವಕೀಲ. ನಾನು ಹಲವಾರು ಪ್ರಕರಣಗಳಲ್ಲಿ ಅದಾನಿ ಸಮೂಹದ ಪರವಾಗಿ ಹಾಜರಾಗಿದ್ದೇನೆ. ದೋಷಾರೋಪಣೆಯನ್ನು ನಾನು ಪರಿಶೀಲಿಸಿದ್ದೇನೆ.

US ನ್ಯಾಯಾಲಯದ ದೋಷಾರೋಪಣೆಯಲ್ಲಿ ಮೊದಲ ಮತ್ತು ೫ನೇ ಆಪಾದನೆ ಇತರವುಗಳಿಗಿಂತ ಹೆಚ್ಚು ಮುಖ್ಯವಾದುದು ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ದೋಷಾರೋಪ ಪಟ್ಟಿಯು ಕೆಲವು ಅಧಿಕಾರಿಗಳು ಮತ್ತು ವಿದೇಶೀ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದೆ. ಅದರಲ್ಲಿ ಅದಾನಿ ಮತ್ತು ಸೋದರಳಿಯನ ಹೆಸರಿಲ್ಲ ಎಂದು ಹಿರಿಯ ವಕೀಲರು ಹೇಳಿದರು.

ಯುಎಸ್‌ ನ್ಯಾಯಾಂಗ ಇಲಾಖೆಯ ದೋಷಾರೋಪಣೆ ಪಟ್ಟಿಯು ಲಂಚಗಳ ಕುರಿತು ನಡೆಸಲಾದ ಚರ್ಚೆಗಳು ಅಥವಾ ಭರವಸೆಗಳ ಪ್ರತಿಪಾದನೆಗಳನ್ನು ಮಾತ್ರ ಆಧರಿಸಿದೆ. ಅದು ಭಾರತ ಸರ್ಕಾರದ ಅಧಿಕಾರಿಗಳು ಅದನಿ ಕಾರ್ಯ ನಿರ್ವಾಹಕರಿಂದ ಪಡೆದ ಲಂಚಕ್ಕೆ ಯಾವುದೇ ಸಾಕ್ಷ್ಯಾಧಾರವನ್ನೂ ನೀಡಿಲ್ಲ ಎಂದು ಸಮೂಹ ಹೇಳಿದೆ.

ದೋಷಾರೋಪ ಪಟ್ಟಿಯಲ್ಲಿ ಯಾರಿಗೆ ಲಂಚ ನೀಡಲಾಗಿದೆ ಎಂಬ ಯಾವುದೇ ವಿವರ ಕೂಡಾ ಇಲ್ಲ ಎಂದು ವಕೀಲ ರೋಹ್ಟಗಿ ನುಡಿದರು.

https://youtu.be/wE_dvjPG1NE

ಕಾಂಗ್ರೆಸಿನಿಂದ ʼಅತಿರಂಜಿತʼ

ಈ ಮಧ್ಯೆ, ಹಿರಿಯ ವಕೀಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಹೇಶ ಜೇಠ್ಮಲಾನಿ ಅವರು ʼಅಮೆರಿಕದಲ್ಲಿ ಅದನಿ ಸಮೂಹದ ವಿರುದ್ಧ ಮಾಡಲಾಗಿರುವ ದೋಷಾರೋಪ ಪಟ್ಟಿಯ ವಿಷಯವನ್ನು ಸ್ಪಷ್ಟವಾದ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್‌ ʼಅತಿರಂಜಿತʼಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಸಂಸದೀಯ ತನಿಖೆಗಾಗಿ ಒತ್ತಾಯಿಸುವ ಮುನ್ನ ವಿರೋಧ ಪಕ್ಷವು ವಿಶ್ವಾಸಾರ್ಹ ಸಾಕ್ಷ್ಯವನ್ನುನೀಡಲೇಬೇಕು ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕ ಉನ್ನತಿಯನ್ನು ಅಸ್ಥಿರಗೊಳಿಸಲು ಅಮೆರಿಕದ ನ್ಯಾಯಾಲಯಗಳನ್ನು “ಆಳವಾದ ಪ್ರಜಾಪ್ರಭುತ್ವ ರಾಷ್ಟ್ರʼ   ಶಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದೂ ಅವರ ಟೀಕಿಸಿದ್ದಾರೆ.

ಮಹೇಶ ಜೇಠ್ಮಲಾನಿ ಅವರು ಪಿಟಿಐಗೆ ನೀಡಿದ ಅಭಿಪ್ರಾಯ ಟ್ವಿಟ್ಟರಿನಲ್ಲಿ  (ಹಿಂದಿನ ಎಕ್ಸ್)‌ ಪ್ರಕಟವಾಗಿದೆ.

ಮಹೇಶ ಜೇಠ್ಮಲಾನಿ ಅಭಿಪ್ರಾಯ ಕೇಳಲು ಈ ಕೊಂಡಿಯನ್ನು ಕ್ಲಿಕ್‌ ಮಾಡಿ:

 https://twitter.com/i/status/1861660163272282118

PARYAYA: ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ:   ಗೌತಮ್ ಅದಾನಿ , ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ US ಆರೋಪಗಳ ಬಗ್ಗೆ ಅದಾನಿ ಸಮೂಹ ಸ್ಪಷ್ಟನೆ ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ...

Saturday, November 23, 2024

PARYAYA: ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿ...

  ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು

ಯಾರೆಂದುಕೊಂಡಿದ್ದೀರಿ?


ಭಾರತದಲ್ಲಿ ನಡೆದ
 ವಿವಿಧ ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಚುನಾವಣೆಗಳ ಫಲಿತಾಂಶಗಳು ಇಲ್ಲಿ ಕ್ಷಣ ಕ್ಷಣಕ್ಕೂ ಪ್ರತಿಫಲಿಸುತ್ತವೆ. ಮೇಲಿನ ಚಿತ್ರದ ಕಿರೀಟವನ್ನು ಕ್ಲಿಕ್‌ ಮಾಡಿ ತಿಳಿದುಕೊಳ್ಳಿ.

ಕ್ಲಿಕ್‌ ಮಾಡಿರಿ: http://www.paryaya.com/p/blog-page_3.html
PARYAYA: ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿ...:     ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿದ್ದೀರಿ? ಭಾ ರತದಲ್ಲಿ ನಡೆದ   ವಿವಿಧ ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ...

Thursday, November 21, 2024

PARYAYA: ಜನ್ಮದಿನವನ್ನು ಹೀಗೂ ಆಚರಿಸಬಹುದು

ಜನ್ಮದಿನವನ್ನು ಹೀಗೂ ಆಚರಿಸಬಹುದು


ಬೆಂ
ಗಳೂರು: ಮಕ್ಕಳ ಜನ್ಮದಿನವನ್ನು ಹೀಗೂ 
ಆಚರಿಸಬಹುದು. 
ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ
ಶ್ರೀ ಬಾಲಾಜಿ ಕೃಪಾಬಡಾವಣೆಯ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ
 
ಬಾಲಕ ಮೌಲ್ವಿತ್‌
ಜನ್ಮದಿನಾಚರಣೆಯನ್ನು ಆಚರಿಸಿದ ಬಗೆ ಇದು.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

PARYAYA: ಜನ್ಮದಿನವನ್ನು ಹೀಗೂ ಆಚರಿಸಬಹುದು: ಜನ್ಮದಿನವನ್ನು   ಹೀಗೂ   ಆಚರಿಸಬಹುದು ಬೆಂ ಗಳೂರು:   ಮಕ್ಕಳ   ಜನ್ಮದಿನವನ್ನು   ಹೀಗೂ   ಆಚರಿಸಬಹುದು.   ಬೆಂಗಳೂರಿನ   ರಾಮಕೃಷ್ಣ   ಹೆಗಡೆ   ನಗರದ ಶ್ರೀ   ಬಾಲಾಜ...

Tuesday, November 19, 2024

PARYAYA: ಅಂಗಾರಕ ಸಂಕಷ್ಟಿ ಪೂಜಾ

ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೯ರ ಮಂಗಳವಾರ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ. 










ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

ಇದನ್ನೂ ಓದಿರಿ:
PARYAYA: ಅಂಗಾರಕ ಸಂಕಷ್ಟಿ ಪೂಜಾ: ಅಂಗಾರಕ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೯ರ ಮಂಗಳವಾರ ಅಂಗಾರಕ ಸಂಕಷ...

Sunday, November 17, 2024

PARYAYA: ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ

 ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ

ಬೆಂಗಳೂರು: ಬ್ರೆಜಿಲ್‌ ನ ರಿಯೋ ಡಿ ಜನೈರೋಗೆ ಜಿ೨೦ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈದಿನ  (೨೦೨೪ ನವೆಂಬರ್‌ ೧೮) ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಲಭಿಸಿತು.

ಈ ಸಂದರ್ಭದಲ್ಲಿ ಅಲ್ಲಿ ಭಾರತದ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಅಲ್ಲಿನ ಭಾರತೀಯರಿಗೆ ಪ್ರಧಾನಿ ಕೃತಜ್ಞತಾ ಪೂರ್ವಕವಾಗಿ ವಂದಿಸಿದರು.

ಈ ಸಂದರ್ಭದ ಪುಟ್ಟ ವಿಡಿಯೋ ಒಂದನ್ನು ಪ್ರಧಾನಿಯವರು ಟ್ವಿಟ್ಟರಿನಲ್ಲಿ (ಎಕ್ಸ್)‌ ಹಂಚಿಕೊಂಡಿದ್ದು ಅದನ್ನು ಇಲ್ಲಿ ನೋಡಬಹುದು.


ವಿಡಿಯೋವನ್ನು ಎಕ್ಸ್‌ನಲ್ಲಿ ನೋಡಲು ಈ ಕೊಂಡಿಯನ್ನು ಕ್ಲಿಕ್‌ ಮಾಡಿರಿ.

 https://x.com/i/status/1858352856312787150

PARYAYA: ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ:   ಬ್ರೆಜಿಲ್‌ನಲ್ಲಿ ಅನಾವರಣಗೊಂಡ ಭಾರತದ ಸಂಸ್ಕೃತಿ ಬೆಂ ಗಳೂರು: ಬ್ರೆಜಿಲ್‌ ನ ರಿಯೋ ಡಿ ಜನೈರೋಗೆ ಜಿ೨೦ ಶೃಂಗದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈದಿನ   (೨೦೨೪ ನವೆಂಬರ್‌ ೧...

Friday, November 15, 2024

PARYAYA: ಎಂಟನೇ ಸತ್ಯನಾರಾಯಣ ಪೂಜಾ

 ಎಂಟನೇ ಸತ್ಯನಾರಾಯಣ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೫ರ ಶುಕ್ರವಾರ ಎಂಟನೇ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು. 
ಈ ಸಂದರ್ಭದ  ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

PARYAYA: ಎಂಟನೇ ಸತ್ಯನಾರಾಯಣ ಪೂಜಾ:  ಎಂಟನೇ ಸತ್ಯನಾರಾಯಣ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೫ರ ಶುಕ್ರವಾರ ಎಂಟನೇ ಸ...

Thursday, November 14, 2024

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರ ಬುಡಕ್ಕೇ ಬತ್ತಿ ಇಡಲು ಹೊರಟಿದ್ದಾರೆ. ಕೆನಡಾದ ಸ್ಥಳೀಯರನ್ನೇ ಇಂಗ್ಲೆಂಡಿಗೆ ಅಟ್ಟುವ ಯೋಚನೆ ಮಾಡಹೊರಟಿದ್ದಾರೆ.

ʼತಲೆಗೆ ಹಾಕಿಕೊಂಡ ನೀರು ಬೇರೆ ಎಲ್ಲಿಗೂ ಹೋಗುವುದಿಲ್ಲ, ತನ್ನ ಕಾಲ ಬುಡಕ್ಕೇ ಇಳಿಯುತ್ತದೆʼ ಎಂಬ ಸತ್ಯ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೋ ಅರಿವಿಗೆ ಈಗಲಾದರೂ ಬರಲಾರಂಭ ಆಗಿರಬಹುದು.

ಏನಿದು ವಿಚಾರ ಎಂಬ ಪ್ರಶ್ನೆ ಎದ್ದಿರಬಹುದಲ್ಲವೇ?

ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರನ್ನೇ ಆಕ್ರಮಣಕಾರರು ಎಂಬುದಾಗಿ ಕರೆದು 'ಇಂಗ್ಲೆಂಡ್ಯುರೋಪಿಗೆ ವಾಪಸಾಗಿʼ ಎಂದು ಹೇಳಲು ಹೊರಟಿದ್ದಾರೆ.

ಖಲಿಸ್ಥಾನಿ ಉಗ್ರಗಾಮಿಗಳ ಹೊರ ವರಸೆ ಇದೀಗ ಅಲ್ಲಿ ನಡೆದ ʼನಗರ ಕೀರ್ತನ್‌ʼ ಕಾರ್ಯಕ್ರಮದ ಎರಡು ನಿಮಿಷಗಳ ವಿಡಿಯೋ ಒಂದರಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಖಲಿಸ್ಥಾನಿ ಉಗ್ರಗಾಮಿಗಳು ತಮ್ಮ ಧ್ವಜಗಳನ್ನು ಪ್ರದರ್ಶಿಸುತ್ತಾ ʼ “ಇದು ಕೆನಡಾನಮ್ಮದೇ ದೇಶ. ನೀವು [ಕೆನಡಿಯನ್ನರು] ಹಿಂತಿರುಗಿ, ಇಂಗ್ಲೆಂಡಿಗೆ, ಯುರೋಪಿಗೆ ಹೋಗಿ" ಎಂದು ಧ್ವನಿವರ್ಧಕದಲ್ಲಿ ಕೂಗಿ ಹೋಗಿ ಹೇಳುತ್ತಿರುವ ದೃಶ್ಯದ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಭಾರತೀಯ ಗುಪ್ತಚರ ಮೂಲಗಳು ಈ ಘಟನೆಯನ್ನು ಕೆನಡಾದ "ಹೊಸ ಸಾಮಾನ್ಯ ಸ್ಥಿತಿ" ಎಂದು ಕರೆದಿವೆ. ಖಲಿಸ್ಥಾನಿಗಳು ನಿಧಾನವಾಗಿ ದೇಶದ ಎಲ್ಲಾ ಕ್ಷೇತ್ರಗಳನ್ನೂ "ವಶಪಡಿಸಿಕೊಳ್ಳುತ್ತಿದ್ದಾರೆಸರಿಯಾದ ಕಣ್ಗಾವಲು ಇಲ್ಲ. ಹೀಗಾಗಿ ಈ ಗುಂಪುಗಳು ಸ್ಥಳೀಯ ಕೆನಡಿಯನ್ನರಿಂದಲೂ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿವೆ. ಹಿಂದೂಗಳಿಂದ ರಕ್ಷಣೆ ಒದಗಿಸಲು ಹಣ ಕೀಳಲಾಗುತ್ತದೆ. ಈಗ ಸ್ಥಳೀಯ ಕೆನಡಿಯನ್ನರಿಗೆ ಅವರ ಕಾಲೋನಿಗಳಲ್ಲೇ ಬೆದರಿಕೆ ಇದೆʼ ಎಂದು ಭಾರತೀಯ ಗುಪ್ತಚರ ಮೂಲಗಳು ಹೇಳಿವೆ.

ಕಳೆದ ವರ್ಷ ಭಾರತವು ʼಭಯೋತ್ಪಾದಕʼ ಎಂಬುದಾಗಿ ಘೋಷಿಸಿದ್ದ ಖಲಿಸ್ಥಾನಿ ಸಹಾನುಭೂತಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಜೂನ್ 2023 ರಲ್ಲಿ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಮತ್ತು ಭಾರತ ಸರ್ಕಾರದ ನೇರ ಪಾತ್ರವಿದೆ ಎಂದು ಆಪಾದಿಸಿ ಆ ಕುರಿತು ತನಿಖೆಗೆ ಆಜ್ಞಾಪಿಸಿದ್ದರು. ಈ ಘಟನೆಯ ಬಳಿಕ ಉಭಯ ದೇಶಗಳೂ ಪರಸ್ಪರರ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದ್ದವು.

ಭಾರತವು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ.  ಟ್ರೂಡೊ ಭಾರತದ ವಿರುದ್ಧ ಸಂಚು ಹೂಡುತ್ತಿರುವಖಲಿಸ್ಥಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ.

ಇದೇ ವೇಳೆಯಲ್ಲಿ ಕೆನಡಾ ನೆಲದಲ್ಲಿ ಹಿಂದೂಗಳ ಮೇಲೆ ಖಲಿಸ್ಥಾನಿಗಳಿಂದ ಹಲ್ಲೆ ನಡೆಯುತ್ತಿದೆ. ಇತ್ತೀಚಿಗೆಕೆನಡಾದಲ್ಲಿ ಹಿಂದೂಗಳ ಮೇಲೆ ದಾಳಿ ಘಟನೆಗಳೂ ನಡೆದಿವೆ. ದೇವಸ್ಥಾನದಲ್ಲಿ ಹಿಂದೂ  ಭಕ್ತರ ಮೇಲೆ ಹಲ್ಲೆ ನಡೆದಿದೆ. ದೇವಾಲಯಗಳಲ್ಲಿ ಹಿಂದೂ ಭಕರ ಮೇಲಿನ "ಉದ್ದೇಶಪೂರ್ವಕ ದಾಳಿ"ಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನೂ ನೀಡಿದ್ದಾರೆ.

ಕೆನಡಾದಲ್ಲಿ ನಡೆಯಲಿರುವ ಮುಂದಿನ ವರ್ಷದ ಚುನಾವಣೆಯಲ್ಲಿ ಸಂಸದ ಜಗ್ಮೀತ್ ಸಿಂಗ್ ಅವರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಟ್ರೂಡೊ ಖಲಿಸ್ತಾನಿ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಮತ್ತು ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ತನ್ನ ಜನಪ್ರಿಯತೆಯ ಶ್ರೇಯಾಂಕದಲ್ಲಿ ಕುಸಿತವಾಗಿರುವುದನ್ನು ಕಂಡಿರುವ ಟ್ರೂಡೋ, ತನ್ನ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಿವೆ. ಆ ಬಳಿಕ ತನ್ನ ಭಾರತ ವಿರೋಧೀ ಆರೋಪಗಳು ಕೇವಲ ಗುಪ್ತಚರ ಮಾಹಿತಿ ಮಾತ್ರ ಅದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ" ಎಂದು ಟ್ರೂಡೋ ಒಪ್ಪಿಕೊಂಡಿದ್ದರು.

 “ಟ್ರೂಡೊ ಅವರು ತಾನು ಹೇಗೆ ಐಎಸ್‌ಐ ಮತ್ತು ಖಲಿಸ್ಥಾನಿಗಳ ಕೈಗೊಂಬೆಯಾಟ  ಗೊಂಬೆಯಾಟ ಆಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಎಲ್ಲದಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಮೂಲಕ ಬಾಲಿಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಆರೋಪಗಳು ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡುತ್ತಿವೆ ಮತ್ತು ಅವರ ವೈಯಕ್ತಿಕ ಇಮೇಜ್ ಅನ್ನು ಹಾಳುಮಾಡುತ್ತಿವೆ ಎಂದು ಗುಪ್ತಚರ ಮೂಲಗಳು ಹೇಳಿದ್ದವು.

ಕೆನಡಾದಲ್ಲಿನ ಖಲಿಸ್ತಾನಿಗಳ ಹೊಸ ಹುನ್ನಾರವನ್ನು ತೋರಿಸುವ ವಿಡಿಯೋ ಇಲ್ಲಿದೆ.


ವಿಡಿಯೋದ ʼಎಕ್ಸ್‌ʼ ಕೊಂಡಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ:
https://twitter.com/i/status/1856837451697844720

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...! ತ ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿ...

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

 ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

“‘ಪ್ನಾ ಘರ್ ಹೋಅಪ್ನಾ ಅಂಗನ್ ಹೋಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈಇನ್ಸಾನ್ ಕೆ ದಿಲ್ ಕಿ ಯೇ ಚಾಹತ್ ಹೈ ಕಿ ಏಕ್ ಘರ್ ಕಾ ಸಪ್ನಾ ಕಭಿ ನಾ ಚೂಟೇ' (ಸ್ವಂತ ಮನೆ ಇರಲಿಸ್ವಂತ ಅಂಗಳ ಇರಲಿ ಎಂಬ ಕನಸು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲೂ ವಾಸವಾಗಿರುತ್ತದೆ. ಎಂದಿಗೂ ಕಳೆದುಹೋಗದ ಮನೆಯ ಕನಸು- ಇದು ಎಂದಿಗೂ ಮರೆಯಾಗದ ಹಂಬಲ).

“‘Apna ghar ho, apna aangan ho, is khawab mein har koi jeeta hai; Insaan ke dil ki ye chahat hai ki ek ghar ka sapna kabhi naa choote’ (To have one’s own home, one’s own courtyard – this dream lives in every heart. It’s a longing that never fades, to never lose the dream of a home)."

೨೦೨೪ ನವೆಂಬರ್‌ ೧೩ರ ಬುಧವಾರ ಬುಲ್‌ ಡೋಜರ್‌ ಓಡಿಸಿ ಮನೆ ಕೆಡವಿ ಹಾಕುವ ಸರ್ಕಾರಿ ಸಿಬ್ಬಂದಿಯ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್‌ ತೀರ್ಪಿನ ಪೀಠಿಕೆ ಭಾಗದಲ್ಲಿ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ಉಲ್ಲೇಖಿಸಿರುವ ಹಿಂದಿ ಕವಿ ಪ್ರದೀಪ್‌ ಅವರ ಕವನದ ಸಾಲುಗಳಿವು.

ಆದರೆ, ಸ್ವಂತ ಸೂರು, ಸ್ವಂತ ಮನೆ, ಸ್ವಂತ ಆಸ್ತಿ ಹೊಂದುವ ಅದಕ್ಕಾಗಿ ಅವುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ ಸಹಸ್ರಾರು ಮಂದಿಯ ಕನಸು ಕರ್ನಾಟಕದಲ್ಲಿ ಮುರುಟಿಹೋಗುತ್ತಿದೆಯೇ? ಎಂಬ ಪ್ರಶ್ನೆ ರಾಜ್ಯದ ಹಲವರ ಮನಸ್ಸಿನಲ್ಲಿ ಮೂಡಿದ್ದರೆ ವಿಶೇಷವೇನೂ ಅಲ್ಲ. ಏಕೆಂದರೆ ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಮನೆ, ಆಸ್ತಿ ಖರೀದಿಸಬಯಸಿದವರ ಕನಸುಗಳು ಈಡೇರುತ್ತಿಲ್ಲ, ಅವರ ಕ್ರಯಪತ್ರಗಳು ನೋಂದಣಿ ಆಗುತ್ತಿಲ್ಲ.

ಪತ್ರಿಕಾ ವರದಿಗಳ ಪ್ರಕಾರ ಇದಕ್ಕೆ ಕಾರಣ ಸರ್ಕಾರ ಜಾರಿಗೊಳಿಸಿರುವ ನೀತಿ. ಯಾವುದೇ ಆಸ್ತಿ ಖರೀದಿ, ಮಾರಾಟಕ್ಕೆ ಇ-ಖಾತೆ ಕಡ್ಡಾಯ ಎಂಬ ನಿಯಮ. ಮಾರಾಟ- ಖರೀದಿ ಕ್ರಯಪತ್ರ ನೋಂದಣಿ ದಿನಾಂಕದವರೆಗಿನ ಇ-ಖಾತೆ ಇರಲೇಬೇಕು ಎಂಬ ಆದೇಶ.

ಆದರೆ ಬೆಂಗಳೂರಿನ ಬಿಬಿಎಂಪಿಯಿಂದ ಹಿಡಿದು, ಹಳ್ಳಿಗಳ ಗ್ರಾಮ ಪಂಚಾಯಿತಿ, ಪುಟ್ಟ ಪಟ್ಟಣ, ನಗರಗಳ ನಗರಸಭೆಯವರೆಗೂ ಇ-ಖಾತೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿಯ ಅಳಲು. ಅದಕ್ಕೆ ಅವರು ನೀಡುತ್ತಿರುವ ಕಾರಣ – ಹಿಂದೆ ಭೂಮಿ ತಂತ್ರಾಂಶ ಇತ್ತು. ಆಗ ಎಲ್ಲವೂ ಸರಳವಾಗಿತ್ತು. ಸರ್ಕಾರ ಈಗ ಹೊಸದಾಗಿ ಕಾವೇರಿ ತಂತ್ರಾಂಶವನ್ನು ಅಳವಡಿಸಿದೆ. ಈ ತಂತ್ರಾಂಶದ ಜೊತೆಗೆ ನಮ್ಮ ಕಂಪ್ಯೂಟರ್‌ ವ್ಯವಸ್ಥೆ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂಬುದು ಅವರ ಅಳಲು.

ಹೀಗೇಕೆ? ಎಂಬ ಪ್ರಶ್ನೆಗೆ ಲಭಿಸುವ ಉತ್ತರ – ಹಿಂದೆ ಖಾತೆಗಳನ್ನು ಕೈಗಳಲ್ಲೇ ಬರೆದು ಸಹಿ, ಮೊಹರು ಹಾಕಿ ಕೊಟ್ಟರೆ ಸಾಕಿತ್ತು. ಆದರೆ ಈಗ ಖಾತೆಗಳನ್ನು ಇ-ಸ್ವತ್ತು ಇಲ್ಲವೇ ಇ-ಆಸ್ತಿ ತಂತ್ರಾಂಶದ ಮೂಲಕವೇ ಪಡೆಯಬೇಕು. ಆದರೆ ಇ-ಸ್ವತ್ತು ಇಲ್ಲವೇ ಇ-ಆಸ್ತಿ ಮೂಲಕ ಖಾತೆ ಪಡೆಯಲು ಅದಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ನೀಡಲಾಗುವ ಋಣಭಾರ ಪತ್ರ ಲಗತ್ತಿಸಲ್ಪಡಬೇಕು. ಆದರೆ ಅದು ಕಾವೇರಿ ತಂತ್ರಾಂಶ ಮೂಲಕ ತಾನೇ ತಾನಾಗಿ ಇ-ಸ್ವತ್ತು ಇಲ್ಲವೇ ಇ-ಆಸ್ತಿ ದಾಖಲೆಗಳ ಜೊತೆಗೆ ಸಂಯೋಜನೆಯಾಗಬೇಕು. ಆದರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕಾವೇರಿ ತಂತ್ರಾಂಶದ ಜೊತೆಗೆ ನಮ್ಮ ತಂತ್ರಾಂಶಗಳನ್ನು ಜೋಡಿಸಲು ನೀಡಬೇಕಾದ ಕೋಡ್‌ ಈವರೆಗೂ ಸರಿಯಾಗಿ ಎಲ್ಲ ಪಂಚಾಯತ್‌, ನಗರಸಭೆಗಳಿಗೆ ಸಿಕ್ಕಿಲ್ಲ ಎಂಬುದು ಉಡುಪಿಯ ನಗರಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆ.

ಕಳೆದೆರಡು ತಿಂಗಳುಗಳಲ್ಲಿ ಈ ಸಂಯೋಜನೆಯ ಅಭಾವದ ಪರಿಣಾಮವಾಗಿ ಸಹಸ್ರಾರು ಕ್ರಯಪತ್ರಗಳು ನೋಂದಣಿಯಾಗದೆ ಸರ್ಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ನಷ್ಟವಾಗಿರುವ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ.

ಕಾವೇರಿ ತಂತ್ರಾಂಶವು ಕೇಂದ್ರ ಸರ್ಕಾರದ ಎನ್‌ ಐಸಿ ರೂಪಿಸಿದ ತಂತ್ರಾಂಶಗಳ ಜೊತೆಗೂ ಹೊಂದಾಣಿಕೆಯಾಗದ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ ಅನುದಾನ ಕೂಡಾ ಕೂಡಾ ರಾಜ್ಯಕ್ಕೆ ಬಂದಿಲ್ಲ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಕೆಲ ಸಮಯದ ಹಿಂದೆ ಹೇಳಿದ್ದರು.

ಅಂದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಂತ್ರಾಂಶಗಳು ರಾಜ್ಯದಲ್ಲೇ ಬಿಬಿಎಂಪಿ, ನಗರಸಭೆ, ಪಂಚಾಯತಿಗಳ ಜೊತೆಷ್ಟೇ ಅಲ್ಲ, ಕೇಂದ್ರ ಸರ್ಕಾರದ ತಂತ್ರಾಂಶಗಳ ಜೊತೆಗೂ ಸಮರ್ಪಕವಾಗಿ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂದಾಯಿತು. ಇದರಿಂದಾಗಿಯೇ ಇ-ಖಾತೆ ನೀಡಲು ಸಮಸ್ಯೆಯಾಗುತ್ತಿದೆ, ಪರಿಣಾಮವಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಆಸ್ತಿ ವಿಕ್ರಯ, ಖರೀದಿ ಕ್ರಯಪತ್ರಗಳ ನೋಂದಣಿ ಆಗುತ್ತಿಲ್ಲ ಎಂದಾಯಿತು.

ಆದರೆ ಇದೇ ವೇಳೆಯಲ್ಲಿ ಇನ್ನೊಂದು ವಿದ್ಯಮಾನವೂ ಇದರ ಜೊತೆಗೆ ತಳಕು ಹಾಕಿಕೊಂಡಂತೆ ಕಾಣುತ್ತಿದೆ. ವರ್ಷದ ಹಿಂದೆ ನಕಲಿ ದಾಖಲೆಗಳ ನೋಂದಣಿಗೆ ತಡೆ ಹಾಕಲು ರಾಜ್ಯ ಸರ್ಕಾರವು ನೋಂದಣಿ ಕಾಯ್ದೆಗೆ ಮಹತ್ವದ ತಿದ್ದುಪಡಿಯೊಂದನ್ನು ಮಾಡಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರು ಇತ್ತೀಚೆಗೆ ತಮ್ಮ ಅನುಮೋದನೆ ನೀಡಿದ್ದರು. ಈ ಅನುಮೋದನೆ ಬಳಿಕ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದ್ದು ಅದೀಗ ಕಾನೂನಾಗಿ ಜಾರಿಗೊಂಡಿದೆ.

ಈ ಕಾನೂನನ್ನು ವಿರೋಧಿಸಿ ಸಬ್‌ ರಿಜಿಸ್ಟ್ರಾರ್‌ ಗಳು ರಾಜ್ಯವಾಪಿ ಮುಷ್ಕರ ಆರಂಭಿಸಿದ್ದರು. ಈ ಮುಷ್ಕರದ ಸ್ಥಿತಿ ಏನಾಗಿದೆ ಎಂಬುದು ಆ ನಂತರ ಪತ್ರಿಕೆಗಳಲ್ಲಿ ವರದಿ ಬಂದಿಲ್ಲ. ಈ ಮುಷ್ಕರ ಕೂಡಾ ಕ್ರಯಪತ್ರಗಳ ನೋಂದಣಿ ಸ್ಥಗಿತದ ಹಿಂದೆ ಕೆಲಸ ಮಾಡಿರಬಹುದೇ ಎಂಬ ಅನುಮಾನವೂ ಇದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಎಂಬ ಗಾದೆಯಂತೆ, ಕಾರಣ ಏನೇ ಇದ್ದರೂ ಸ್ವಂತ ಮನೆ, ಸ್ವಂತ ನಿವೇಶನ, ಸ್ವಂತ ಆಸ್ತಿ ಹೊಂದುವ ಹಲವರ ಕನಸಿಗೆ ಮಾತ್ರ ನಿತ್ಯ ತಣ್ಣೀರು ಅಭಿಷೇಕವಾಗುತ್ತಿದೆ.

ಸರ್ಕಾರ ಈ ಸಮಸ್ಯೆ ಬಗೆ ಹರಿಸಲು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ʼಜಂಟಿ ಕಾರ್ಯಪಡೆʼ ರಚಿಸುವ ನಿರ್ಧಾರವನ್ನು ಬುಧವಾರ (೧೩.೧೧.೨೦೨೪) ಕೈಗೊಂಡಿದೆ. ವರದಿ ಕೊಡಲು ಕಾರ್ಯಪಡೆಗೆ ಎರಡು ತಿಂಗಳ ಗಡುವು ನೀಡಲಾಗಿವೆ ಎನ್ನುತ್ತಿವೆ ವರದಿಗಳು.

ಆದರೆ ಜ್ವಲಂತ ಪ್ರಶ್ನೆ ಇದಲ್ಲ. ಈಗಾಲೇ ಕ್ರಯಪತ್ರಗಳನ್ನು ಸಿದ್ಧ ಪಡಿಸಿಕೊಂಡು, ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಸಿಕೊಂಡು ಕ್ರಯಪತ್ರಗಳ ನೋಂದಣಿಗಾಗಿ ಕಾದುಕುಳಿತಿರುವ ಸಹಸ್ರಾರು ಮಂದಿ ಈಗ ಏನು ಮಾಡಬೇಕು? ಕಾರ್ಯಪಡೆಯ ವರದಿ ಬರುವವರೆಗೆ, ಅದನ್ನು ಸರ್ಕಾರ ಪರಿಶೀಲಿಸುವವರೆಗೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವವರೆಗೆ ʼಚಾತಕ ಪಕ್ಷಿಗಳಂತೆʼ ಕಾಯುತ್ತಾ ಕೂರಬೇಕೇ?

ಅಥವಾ ತುರ್ತಾಗಿ ಅಂತಹ ಮಂದಿಗೆ ನಗರಸಭೆ/ ಪುರಸಭೆಗಳಿಂದ ʼತಾತ್ಕಲಿಕ ಖಾತೆʼ ನೀಡಿ ನಂತರ ಅದಕ್ಕೆ ಇ-ಖಾತೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತದೆಯೇ?

ಈ ಪ್ರಶ್ನೆ/ ಸಮಸ್ಯೆಯನ್ನು ಬಗೆ ಹರಿಸಬೇಕಾದದ್ದು ಈಗಿನ ತುರ್ತು ಅಗತ್ಯ.

(ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.  ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.)

-ನೆತ್ರಕೆರೆ ಉದಯಶಂಕರ

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?:   ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ? “‘ ಅ ಪ್ನಾ ಘರ್ ಹೋ , ಅಪ್ನಾ ಅಂಗನ್ ಹೋ , ಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈ ; ಇನ್ಸಾನ್ ಕೆ ದಿಲ್ ಕಿ ಯೇ ...

Wednesday, November 13, 2024

PARYAYA: ತುಳಸೀ ಪೂಜಾ

 ತುಳಸೀ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೩ರ ಬುಧವಾರ ತುಳಸೀ ಪೂಜಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದ ವಿಡಿಯೋ ಇಲ್ಲಿದೆ: ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ತುಳಸೀ ಪೂಜಾ:  ತುಳಸೀ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೩ರ ಬುಧವಾರ ತುಳಸೀ ಪೂಜಾ ಕಾರ್ಯಕ್ರಮ...

Tuesday, November 12, 2024

PARYAYA: 50 ಪೈಸೆಗೆ ದಂಡ 15,000 ರೂಪಾಯಿ!

 50 ಪೈಸೆಗೆ ದಂಡ 15,000 ರೂಪಾಯಿ!

ಕೇವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸದೇ, ಅದನ್ನು 'ರೌಂಡ್ ಆಫ್ಮಾಡಿದ್ದು ಇಂಡಿಯಾ ಪೋಸ್ಟ್‌ಗೆ ದುಬಾರಿಯಾಗಿ ಪರಿಣಮಿಸಿದೆ.

ಈ ಐವತ್ತು ಪೈಸೆಯನ್ನು 10,000 ರೂಪಾಯಿಗಳ ಪರಿಹಾರ ಮತ್ತು 5000 ರೂಪಾಯಿಗಳ ಖಟ್ಲೆ ವೆಚ್ಚ ಸೇರಿಸಿ ಪಾವತಿ ಮಾಡಿ ಎಂದು ಗ್ರಾಹಕ ನ್ಯಾಯಾಲಯವು ಅಂಚೆ ಇಲಾಖೆಗೆ ಆದೇಶ ನೀಡಿದೆ.

50 ಪೈಸೆ ಪಾವತಿ ಮಾಡದೆ ಅದನ್ನು ರೌಂಡ್‌ ಆಫ್‌ ಮಾಡಿದ್ದು ಅನ್ಯಾಯದ ವ್ಯಾಪಾರೀ ಅಭ್ಯಾಸ ಮತ್ತು ಸೇವಾಲೋಪ ಆಗುತ್ತದೆ ಎಂದು ಕಾಂಚೀಪುರಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ದೂರು ಕೊಟ್ಟವರು ಎ ಮಾನಶಾ. ಅವರು 2023ರ ಡಿಸೆಂಬರ್ 13ರಂದು ಕಾಂಚೀಪುರಂಗೆ ಸಮೀಪದ ಪೊಜಿಚಲೂರು ಅಂಚೆ ಕಛೇರಿಯಲ್ಲಿ ನೋಂದಾಯಿತ ಪತ್ರಕ್ಕಾಗಿ 30 ರೂಪಾಯಿ ನಗದು ಪಾವತಿಸಿದ್ದರು. ಆದರೆ ರಶೀದಿಯಲ್ಲಿ ಕೇವಲ 29.50 ರೂಪಾಯಿ ನಮೂದಿಸಲಾಗಿತ್ತು. ಯುಪಿಐ ಮೂಲಕ ನಿಖರವಾದ ಮೊತ್ತವನ್ನು ಪಾವತಿ ಮಾಡ್ತೇನೆ ಅಂತ ಅವರು ಹೇಳಿದರು. ಆದರೆ ʼತಾಂತ್ರಿಕ ಸಮಸ್ಯೆಗಳಿವೆ, ಅದು ಸಾಧ್ಯವಿಲ್ಲ. ಆದ್ದರಿಂದ 30 ರೂಪಾಯಿಗೆ ರೌಂಡ್‌ ಆಫ್‌ ಮಾಡಿದ್ದೇವೆʼ ಅಂತ ಸಿಬ್ಬಂದಿ ಉತ್ತರ ಕೊಟ್ಟರು.

ಮಾನಶಾ ಅವರಿಗೆ ಇದು ಸಣ್ಣ ಸಮಸ್ಯೆಯಲ್ಲ, ಗಹನವಾದ ಸಮಸ್ಯೆ ಅಂತ ಅನಿಸಿತು. ಪ್ರತಿನಿತ್ಯ ಲಕ್ಷಗಟ್ಟಲೆ ವಹಿವಾಟುಗಳು ನಡೆಯುತ್ತವೆ. ಅವುಗಳನ್ನು ಸರಿಯಾಗಿ ಲೆಕ್ಕ ಹಾಕದಿದ್ದರೆ ಸರ್ಕಾರಕ್ಕೆ, ಸಾರ್ವಜನಿಕರಿಗೆ ನಷ್ಟವಾಗುವುದರ ಸಹಿತ ಅನೇಕ ಪರಿಣಾಮಗಳಾಗುತ್ತವೆ ಅಂತ ಅವರು ಭಾವಿಸಿದರು.

ಈ ಪ್ರಕರಣವನ್ನು ಸುಮ್ಮನೇ ಬಿಡಬಾರದು ಎಂದುಕೊಂಡ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಗ್ರಾಹಕ ನ್ಯಾಯಾಲಯಕ್ಕೆ ಉತ್ತರ ನೀಡಿದ ಅಂಚೆ ಇಲಾಖೆ ತಾಂತ್ರಿಕ ಸಮಸ್ಯೆಗಳಿಂದಾಗಿ ಡಿಜಿಟಲ್ ಮೋಡ್ ಮೂಲಕ ಪಾವತಿಯನ್ನು ಪಡೆಯಲು ಆಗಲಿಲ್ಲ ಎಂದು ಹೇಳಿತು.

ಈ ಹೊತ್ತಿನಲ್ಲಿ ಗ್ರಾಹಕರಿಂದ ನಗದು ಸಂಗ್ರಹಿಸಲಾಗಿದೆ. ಅಲ್ಲದೆ, 50 ಪೈಸೆಗಳನ್ನು 'ಸಂಯೋಜಿತ ಅಂಚೆ ಸಾಫ್ಟ್‌ವೇರ್ನಲ್ಲಿ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಾಗುತ್ತದೆ ಅಂದರೆ ರೌಂಡ್‌ ಆಫ್‌ ಮಾಡಲಾಗುತ್ತದೆ ಮತ್ತು ಅಂಚೆ ಖಾತೆಗಳಲ್ಲಿ ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಎಂದು ಅದು ಸಮಜಾಯಿಷಿ ನೀಡಿತು.

'ಸ್ವಯಂಚಾಲಿತವಾಗಿ ಪೂರ್ಣಗೊಳ್ಳುವ ಮೊತ್ತ' ಅಂದರೆ ರೌಂಡ್‌ ಆಫ್‌ ಮಾಡುವ ಮೊತ್ತವು 'ಕೌಂಟರ್ ಖಾತೆಗಳ ಸಲ್ಲಿಕೆ'ಯಲ್ಲಿ ಪ್ರತ್ಯೇಕವಾಗಿ ಪ್ರತಿಫಲಿಸುತ್ತದೆ. ಹೀಗಾಗಿ ಈ ದೂರು ಸ್ವೀಕಾರಕ್ಕೆ ಅರ್ಹವಲ್ಲʼ ಎಂದು ಅಂಚೆ ಇಲಾಖೆ ವಾದಿಸಿತು.

"50 ಪೈಸೆಗಿಂತ ಕಡಿಮೆ ಭಾಗದ ಮೊತ್ತವನ್ನು ಒಳಗೊಂಡಿರುವ ಮೊತ್ತಕ್ಕೆ, ವಸ್ತು/ ಪತ್ರವನ್ನು ಬುಕ್ ಮಾಡಿದ್ದರೆಭಿನ್ನರಾಶಿ ಮೊತ್ತವನ್ನು ಅಂದರೆ ಐವತ್ತು ಪೈಸೆಗಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ ಮತ್ತು ಗ್ರಾಹಕರಿಂದ ಸಂಗ್ರಹಿಸಲಾಗುವುದಿಲ್ಲಅಂತಹ ಭಿನ್ನರಾಶಿ ಮೊತ್ತವನ್ನು ಪೂರ್ಣಗೊಳಿಸುವುದು ಒಟ್ಟು ಮೌಲ್ಯವನ್ನು ಅವಲಂಬಿಸಿರುತ್ತದೆ” ಎಂದೂ ಅಂಚೆ ಇಲಾಖೆ ಪ್ರತಿಪಾದನೆ ಮಾಡಿತು.

 ಉಭಯರ ವಾದವನ್ನು ಆಲಿಸಿದ ನಂತರಗ್ರಾಹಕ ನ್ಯಾಯಾಲಯವು ʼತಂತ್ರಾಂಶ ಸಮಸ್ಯೆಯಿಂದ ಅಥವಾ ಸಾಫ್ಟ್‌ವೇರ್ ಸಮಸ್ಯೆಯಿಂದ 50 ಪೈಸೆಯನ್ನು ಹೆಚ್ಚುವರಿಯಾಗಿ ಸಂಗ್ರಹಿಸಿರುವ ಅಂಚೆ ಕಚೇರಿಯ ಕ್ರಮವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಅನ್ಯಾಯದ ವ್ಯಾಪಾರ ಅಭ್ಯಾಸ ಆಗುತ್ತದೆʼ ಎಂದು ಅಭಿಪ್ರಾಯ ಪಟ್ಟಿತು.

ಹೀಗಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ದೂರುದಾರರಿಗೆ ಐವತ್ತು ಪೈಸೆ ಮರುಪಾವತಿ ಮಾಡಬೇಕು ಮತ್ತು ಮಾನಸಿಕ ಸಂಕಟಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಸೇವೆಯಲ್ಲಿನ ಕೊರತೆಗೆ ಪರಿಹಾರವಾಗಿ 10,000 ರೂಪಾಯಿಗಳನ್ನು ಈ ಆದೇಶ ಸ್ವೀಕರಿಸಿದ ದಿನದಿಂದ (ಸೆಪ್ಟೆಂಬರ್ 11, 2024ಎರಡು ತಿಂಗಳ ಒಳಗೆ ಪಾವತಿ ಮಾಡಬೇಕು ಅಂತ ಆದೇಶ ನೀಡಿತು. ಜೊತೆಗೆ ದೂರುದಾರರಿಗೆ 5,000 ರೂಪಾಯಿಗಳನ್ನು ಖಟ್ಲೆ ವೆಚ್ಚಕ್ಕಾಗಿಯೂ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತು.

ದೂರುದಾರರು ತಮ್ಮ ದೂರಿನಲ್ಲಿ ತಮಗೆ 50 ಪೈಸೆಯ ಬಾಕಿ ಹಣದ ಜೊತೆಗೆ 'ಮಾನಸಿಕ ಸಂಕಟ'ಕ್ಕೆ ರೂ 2.50 ಲಕ್ಷ ಪರಿಹಾರ ಮತ್ತು ಖಟ್ಲೆ ವೆಚ್ಚವಾಗಿ 10,000 ರೂಪಾಯಿ ಪಾವತಿಸಲು ನಿರ್ದೇಶನ ನೀಡಬೇಕು ಎಂದೂ ಕೋರಿದ್ದರು. ಈ ಕೋರಿಕೆಗೆ ಅರ್ಹತೆ ಇಲ್ಲ ಅಂತ ಹೇಳಿದ ಗ್ರಾಹಕ ನ್ಯಾಯಾಲಯ ಅದನ್ನು ತಳ್ಳಿ ಹಾಕಿತು.

-ನೆತ್ರಕೆರೆ ಉದಯಶಂಕರ

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಸಮುದ್ರದಲ್ಲಿ ಮುಳುಗಿದ ದೋಣಿ ಭಟ್ಕಳದಲ್ಲಿ ತೇಲಿತೇ?

ಅಪಘಾತ ಪರಿಹಾರ ಪಡೆಯಲು ಚಾಲನಾ ಲೈಸೆನ್ಸ್ ಬೇಕೇ?

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?

ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!

ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!

ನಮೂದು ದರ ಒಂದುಮಾರುವ ದರ ಇನ್ನೊಂದು..!

ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!

35 ರೂಪಾಯಿ ಚಿಪ್ಸ್ರೂ. 50,000 ಪರಿಹಾರ..! (ಗ್ರಾಹಕ ಜಾಗೃತಿ)

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Farmers Won The Battle

wake up Consumer

When your telephone rings till you fed up...!

Don't know homeopathy, prescribes allopathic medicine!

How to win in Consumer Court?

PARYAYA: 50 ಪೈಸೆಗೆ ದಂಡ 15,000 ರೂಪಾಯಿ!:   50 ಪೈಸೆ ಗೆ ದಂಡ 15,000 ರೂಪಾಯಿ! ಕೇ ವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸ...

Wednesday, November 6, 2024

PARYAYA: ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹ...

 ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹಿತ ನೆರವು

ವದೆಹಲಿ: ಪ್ರಧಾನಿ  ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ೨೦೨೪ ನವೆಂಬರ್‌ ೬ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ʼಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿʼ ಎಂಬ ಇನ್ನೋಂದು ಕೇಂದ್ರೀಯ ಯೋಜನೆಗೆ ಅನುಮೋದನೆ ನೀಡಿದೆ. ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರೂಪುಗೊಂಡಿರುವ ಈ ಯೋಜನೆಯು ಯಾರೇ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ಹಣಕಾಸು ಅಡಚಣೆ ರಹಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿ ಕೊಡುತ್ತದೆ.

ಸರ್ಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಈ ಯೋಜನೆ ಮೂಲಕ ಹಣಕಾಸಿನ ನೆರವು ಲಭ್ಯವಾಗಲಿದೆ.

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಯಾರೇ ವಿದ್ಯಾರ್ಥಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಶಿಕ್ಷಣ ಶುಲ್ಕ ಮತ್ತು ಕೋರ್ಸಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರಿ ಗ್ಯಾರಂಟಿಯ ಸಾಲದ ಮೂಲಕ ಪಡೆಯಲು ಅರ್ಹತೆಯನ್ನು ಒದಗಿಸುತ್ತದೆ.

ಯೋಜನೆಯು ಅತ್ಯಂತ ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹೀ ವ್ಯವಸ್ಥೆಯಾಗಿರಲಿದ್ದು, ಸಂಪೂರ್ಣ ಡಿಜಿಟಲ್‌ ಮತ್ತು ಆಂತರಿಕವಾಗಿ ಕಾರ್ಯನಿರ್ವಹಿಸುವಂತೆ ಇರುತ್ತದೆ.

ಎನ್‌ ಐ ಆರ್‌ ಎಫ್‌ ಶ್ರೇಯಾಂಕದಿಂದ ನಿರ್ಧರಿಸಲ್ಪಟ್ಟ ರಾಷ್ಟ್ರದ ಉನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳೀಗೆ ಯೋಜನೆ ಅನ್ವಯಿಸುತ್ತದೆ. ಅಗ್ರ ೧೦೦ ಸ್ಥಾನಗಳ ಒಳಗೆ ಬರುವ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆಯ ಲಾಭ ವಿದ್ಯಾರ್ಥಿಗಳಿಗೆ ಸಿಗಲಿದೆ.

೧೦೦ರಿಂದ ೨೦೦ ಸ್ಥಾನಗಳ ಒಳಗೆ ಬರುವ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಈ ಯೋಜನೆ ಅನ್ವಯವಾಗಲಿದೆ. ಎನ್‌ ಐ ಆರ್‌ ಎಫ್‌ ಶ್ರೇಯಾಂಕವನ್ನು ಆಧರಿಸಿ ಈ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರತಿವರ್ಷವೂ ನವೀಕರಿಸಲಾಗುತ್ತದೆ. ಮೊದಲಿಗೆ ೮೬೦ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭವಾಗಲಿರುವ ಈ ಯೋಜನೆಯಿಂದ ೨೨ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

₹ 7.5 ಲಕ್ಷದವರೆಗಿನ ಸಾಲದ ಮೊತ್ತಕ್ಕೆವಿದ್ಯಾರ್ಥಿಯು ಬಾಕಿ ಉಳಿದಿರುವ ಡೀಫಾಲ್ಟ್‌ನ 75% ರಷ್ಟು ಕ್ರೆಡಿಟ್ ಗ್ಯಾರಂಟಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳು ಲಭ್ಯವಾಗುವಂತೆ ಬ್ಯಾಂಕ್‌ಗಳಿಗೆ ಬೆಂಬಲವನ್ನು ನೀಡುತ್ತದೆ.

ಮೇಲಿನವುಗಳ ಜೊತೆಗೆವಾರ್ಷಿಕ ₹ 8 ಲಕ್ಷದವರೆಗಿನ ಕುಟುಂಬದ ಆದಾಯವನ್ನು ಹೊಂದಿರುವ ಮತ್ತು ಯಾವುದೇ ಸರ್ಕಾರಿ ವಿದ್ಯಾರ್ಥಿವೇತನ ಅಥವಾ ಬಡ್ಡಿ ರಿಯಾಯಿತಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲದ ವಿದ್ಯಾರ್ಥಿಗಳಿಗೆ  ₹ 10 ಲಕ್ಷದವರೆಗಿನ ಸಾಲಕ್ಕೆ ಪ್ರತಿಶತ ಬಡ್ಡಿ ರಿಯಾಯಿತಿಯನ್ನು ಸಹ ಒದಗಿಸಲಾಗುತ್ತದೆ.

ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬಡ್ಡಿ ಸಹಾಯಧನ ನೀಡಲಾಗುವುದು. ಸರ್ಕಾರಿ ಸಂಸ್ಥೆಗಳಿಂದ ಬಂದಿರುವ ಮತ್ತು ತಾಂತ್ರಿಕ/ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. 2024-25 ರಿಂದ 2030-31ರ ಅವಧಿಯಲ್ಲಿ ₹ 3,600 ಕೋಟಿ ವೆಚ್ಚ ಮಾಡಲಿದ್ದುಈ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.

ಉನ್ನತ ಶಿಕ್ಷಣ ಇಲಾಖೆಯು "ಪಿಎಂ-ವಿದ್ಯಾಲಕ್ಷ್ಮಿ" ಎಂಬ ಏಕೀಕೃತ ಪೋರ್ಟಲ್ (https://www.vidyalakshmi.co.in/Students/) ಅನ್ನು ಹೊಂದಿದ್ದುಎಲ್ಲಾ ಬ್ಯಾಂಕ್‌ಗಳು ಬಳಸಲು ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ವ್ಯಾಲೆಟ್‌ಗಳ ಮೂಲಕ ಬಡ್ಡಿ ಉಪದಾನದ ಪಾವತಿಯನ್ನು ಮಾಡಲಾಗುತ್ತದೆ.

PARYAYA: ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹ...:   ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹಿತ ನೆರವು ನ ವದೆಹಲಿ: ಪ್ರಧಾನಿ  ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ೨೦೨೪ ನವೆಂಬರ್‌ ೬ರ ಬುಧವಾರ ನಡೆದ ಕೇಂ...