Showing posts with label video. Show all posts
Showing posts with label video. Show all posts

Saturday, August 1, 2026

PARYAYA: ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

 ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಡಿಯೋ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ 'ಡೀಪ್ ಫೇಕ್' (Deepfake) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), 2026 ಆಗಸ್ಟ್‌ 01ರ ಶನಿವಾರ ಸ್ಪಷ್ಟಪಡಿಸಿದೆ.

1. ಪ್ರಧಾನಿ ಮೋದಿಯವರ ಹೆಸರಿನಲ್ಲಿದ್ದ ವಿಡಿಯೋ ಸಂಪೂರ್ಣ ನಕಲಿ

PIB ಫ್ಯಾಕ್ಟ್-ಚೆಕ್ ಘಟಕವು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ತಿಳಿಸಿದೆ.

  • ವಿದ್ಯಾರ್ಥಿ ಪ್ರತಿಭಟನಾಕಾರರ ಕುರಿತು ಪ್ರಧಾನಿಯವರು ಇಂತಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
  • ಈ ನಕಲಿ ವಿಡಿಯೋವನ್ನು ಪಾಕಿಸ್ತಾನ ಮೂಲದ ಪ್ರೊಪಗಾಂಡಾ (ಪ್ರಚಾರ) ಖಾತೆಗಳ ಮೂಲಕ ಭಾರತದಲ್ಲಿ ಗೊಂದಲ ಸೃಷ್ಟಿಸಲು ಹರಡಲಾಗುತ್ತಿದೆ ಎಂದು PIB ಬಹಿರಂಗಪಡಿಸಿದೆ.

ಸಾರ್ವಜನಿಕರು ಅಸಲಿ ಮತ್ತು ನಕಲಿ ವಿಡಿಯೋದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು PIB ಅಸಲಿ ವಿಡಿಯೋದ ಲಿಂಕ್ ಅನ್ನು (PIB Fact Check (@PIBFactCheck) / X ) ಸಹ ಹಂಚಿಕೊಂಡಿದೆ.

ಪಿಐಬಿ ಪ್ರಕಟಿಸಿರುವ ವಿಡಿಯೋ ಕೆಳಗಿದೆ.

2. ದೆಹಲಿ ಡಿಸಿಪಿ ರಾಜೀನಾಮೆ ನೀಡಿದರೆಂಬ ಸುದ್ದಿಯೂ ಸುಳ್ಳು!

ಇಷ್ಟೇ ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ CJP ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒತ್ತಡ ಹೇರುತ್ತಿದ್ದರಿಂದ ದೆಹಲಿ ಪೊಲೀಸ್ ಡಿಸಿಪಿ ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂಬ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

ಆದರೆ 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (PTI) ನಡೆಸಿದ ತನಿಖೆಯಲ್ಲಿ, ಡಿಸಿಪಿ ಸುಮಿತ್ ಝಾ ಅವರ ಹಳೆಯ ವಿಡಿಯೋ ಒಂದಕ್ಕೆ AI ಮೂಲಕ ಬೇರೆ ಧ್ವನಿಯನ್ನು (Audio) ಸೇರಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ದೆಹಲಿ ಪೊಲೀಸರ ಅಧಿಕೃತ ಖಾತೆಯಲ್ಲಿದ್ದ ಈ ಅಸಲಿ ವಿಡಿಯೋದಲ್ಲಿ ಡಿಸಿಪಿ ಅವರು ಪಾಕಿಸ್ತಾನ ಮೂಲದ ಖಾತೆಗಳು ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.

3. ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ನಕಲಿ ಖಾತೆಗಳ ಗುರುತು

ದೆಹಲಿ ಪೊಲೀಸರ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನು ಹರಡಲು ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳು ಸಕ್ರಿಯವಾಗಿದ್ದವು. ಈ ಹಿಂದೆ 'ಆಪರೇಷನ್ ಸಿಂಧೂರ್' ಸಮಯದಲ್ಲೂ ಇದೇ ಖಾತೆಗಳು ಸುಳ್ಳು ಸುದ್ದಿ ಹರಡಲು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದು, ಪ್ರಸ್ತುತ ಆ ಎಲ್ಲ ಖಾತೆಗಳನ್ನು ಬ್ಲಾಕ್ (Block) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಸರ್ಕಾರದ ಮನವಿ

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪರಿಶೀಲಿಸದ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ತಕ್ಷಣವೇ ನಂಬಬೇಡಿ ಮತ್ತು ಇಂತಹ ವಿಷಯಗಳಿಗೆ ಅಧಿಕೃತ ಸರ್ಕಾರಿ ಮೂಲಗಳನ್ನೇ ಆಶ್ರಯಿಸಿ ಎಂದು PIB ನಾಗರಿಕರಲ್ಲಿ ವಿನಂತಿ ಮಾಡಿದೆ.

ಸಂದೇಹಾಸ್ಪದ ಸುದ್ದಿಗಳನ್ನು ವರದಿ ಮಾಡಲು:

ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಕಲಿ ಅಥವಾ ಸಂದೇಹಾಸ್ಪದ ವಿಷಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಗಿನ ವಿವರಗಳ ಮೂಲಕ PIB ಗೆ ದೂರು ನೀಡಬಹುದು:

  • ವಾಟ್ಸಾಪ್/ಫೋನ್ ಸಂಖ್ಯೆ: +91 8799711259
  • ಇಮೇಲ್: factcheck@pib.gov.in
PARYAYA: ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ:   ಜಂತರ್ ಮಂತರ್ ಪ್ರತಿಭಟ ನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ ನ ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ...

Wednesday, July 29, 2026

PARYAYA: ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ಸತ್ಯನಾರಾಯಣ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜುಲೈ ೨೯ರ ಬುಧವಾರ ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ:   ವೈಶಾಖ ಮಾಸದ ಶ್ರೀ ಸತ್ಯನಾರಾಯಣ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ಸತ್ಯನಾರಾಯಣ, ಅಭಯ ಆಂಜನೇಯ ಸ್ವಾಮಿ...

Tuesday, June 30, 2026

PARYAYA: ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

 ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ

ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂಬುಕೊಡುವ ಕಾರ್ಯಕ್ರಮಗಳು ದೇವಾಲಯಕ್ಕೆ ವಿಶೇಷ ಕಳೆಯನ್ನು ನೀಡುತ್ತವೆ.

ಗಣೇಶೋತ್ಸವ, ವಾರ್ಷಿಕೋತ್ಸವ, ಜಾತ್ರೆ ಇವುಗಳೆಲ್ಲ ದೇವಸ್ಥಾನಕ್ಕೆ ವಿಶೇಷ ಕಳೆಯನ್ನು ತಂದುಕೊಡುವ ವಿಶೇಷ ಸಂದರ್ಭಗಳು. ಹಾಗೆಯೇ ಇಂತಹ ಸಂದರ್ಭಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಶೇಷ ಸಂದರ್ಭಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡುತ್ತವೆ.

ದೇವಸ್ಥಾನಗಳಲ್ಲಿ ಇಂತಹ ಸಾಂಸ್ಕತಿಕ ಚಟುವಟಿಕೆಗೆ ಒದಗಿ ಬರುವ ಪ್ರೋತ್ಸಾಹ ಇನ್ನೂ ವಿಶೇಷವಾದದ್ದು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಈ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಿದೆ.

ಪ್ರತಿ ಮಾಸವೂ ಸತ್ಯ ನಾರಾಯಣ ಪೂಜೆ ಮತ್ತು ಸಂಕಷ್ಟಿ ಪೂಜೆಯನ್ನು ನಿರಂತರವಾಗಿ ನೆರವೇರಿಸುತ್ತಾ ಬಂದಿರುವುದರ ಜೊತೆಗೆ ಕಳೆದ ಎಂಟು ತಿಂಗಳುಗಳಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಆಸಕ್ತರಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕಲಿಸಿಕೊಡುವ ಕೈಕಂಕರ್ಯಕ್ಕೆ ನೀರೆಯುತ್ತಾ ಬಂದಿದೆ.

ಈ ತಂಡದ ಮೂಲಕ ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಈ ಅವಧಿಯಲ್ಲಿ ಮೂರು ಯಕ್ಷಗಾನ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೀಡಿದ್ದಾರೆ. ಇದೀಗ ತಂಡವು ಯಕ್ಷಗಾನ ಕಲಿಯಬಯಸಿರುವ ಎರಡನೇ ತಂಡಕ್ಕೆ ತರಗತಿಗಳನ್ನೂ ಆರಂಭಿಸಿದೆ.

೨೦೨೬ ಜೂನ್‌ ೨೮ರ ಭಾನುವಾರ ಎರಡನೇ ತಂಡದ ಯಕ್ಷಗಾನ ತರಗತಿಯ ಆರಂಭೋತ್ಸವ ʼಬಾಲಾಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಕಿರೀಟ ಪೂಜೆಯೊಂದಿಗೆ ಜರುಗಿತು. ಯಕ್ಷಗಾನ ವಿದ್ಯಾರ್ಥಿಗಳು, ಪೋಷಕರು, ಯಕ್ಷ ಕಲಾ ಕೌಸ್ತುಭ ಕುಟುಂಬದ ಸರ್ವ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮರುದಿನ ೨೦೨೬ ಜೂನ್‌ ೨೯ರ ಸೋಮವಾರ ದೇವಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಎರಡೂ ಕಾರ್ಯಕ್ರಮಗಳ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


PARYAYA: ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು:   ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ ಭ ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ...

Sunday, June 21, 2026

PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು:   ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಯ ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದ...

Thursday, June 18, 2026

PARYAYA: ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

 ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

ಬೆಂಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼಪಿರಮಿಡ್‌ʼ ಆಕಾರದ ವಿಶಿಷ್ಠ ವಿನ್ಯಾಸದಿಂದಲೇ ಗಮನ ಸೆಳೆಯುವ ಸ್ಥಳ. ಇಲ್ಲಿ ಇತ್ತೀಚೆಗೆ ʼಪವಿತ್ರ ಭಾರತʼ ಕಾರ್ಯಕ್ರಮ. ೨೦೨೬ ಜೂನ್‌ ೧೩ರಂದು ವೇದ ಕುರಿತ ಸಂವಾದ ಮತ್ತು ಭರತ ನಾಟ್ಯದ ಸೊಬಗು.

೨೦೨೬ ಜೂನ್‌ ೧೪ರಂದು ವೇದ ಕುರಿತು ಸಂವಾದ ಮತ್ತು ಯಕ್ಷಗಾನ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಹೆಗಡೆ ನಗರ ಸಮೀಪದ ಅಮೃತಹಳ್ಳಿಯ ಮಕ್ಕಳಿಂದ ಸೊಗಸಾದ ʼಕಂಸವಧೆʼ ಯಕ್ಷಗಾನ. ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಯಕ್ಷಗಾನ ಹೇಳಿಕೊಡುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನಿರ್ದೇಶನ.

ಭರತನಾಟ್ಯ ಕಲಿಯುತ್ತಿರುವ ಬಾಲಕಿಯರು ಮಂದಾರ್ತಿ ಅವರ ನಿರ್ದೇಶನದಲ್ಲಿ ಕೇವಲ ೧೦-೧೫ ದಿನಗಳ ಕಾಲ ನೀಡಿದ ತರಬೇತಿಯಲ್ಲಿ ಯಕ್ಷಗಾನ ಕಲಿತು ಯಶಸ್ವಿಯಾಗಿ ಅದ್ಭುತ ಪ್ರದರ್ಶನವನ್ನು ನೀಡಿದರು.


ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. ಯಕ್ಷಗಾನದ ಪೂರ್ಣ ಪ್ರಸಂಗವನ್ನು ವೀಕ್ಷಿಸಲು ಕೆಳಗಿನ ಚಿತ್ರಕ್ಲಿಕ್‌ ಮಾಡಿ.



PARYAYA: ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ:   ರಾಜರಾಜೇಶ್ವರಿ ನಗರದಲ್ಲಿ ʼ ಕಂಸವಧೆ ʼ ಬೆಂ ಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼ ಪಿರಮಿಡ್‌ ʼ ಆಕ...

Thursday, June 11, 2026

PARYAYA: ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

 ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜೂನ್‌ ೧೧ರ ಗುರುವಾರ ಅಧಿಕ ಮಾಸದ ಪರಮ ಏಕಾದಶಿಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು.

ದೇವಾಲಯದ ಭಕ್ತರು ವಿಷ್ಣು ಸಹಸ್ರನಾಮ, ಅಷ್ಟೋತ್ತರ, ಭಜನೆ, ಪ್ರಸಾದ ಸೇವೆಯೊಂದಿಗೆ ಈ ಸಂಭ್ರಮದಲ್ಲಿ ಪಾಲ್ಗೊಂಡರು.

ಇದೇ ಸಂದರ್ಭದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಿರಿಯ ಮಕ್ಕಳು, ಶಿಕ್ಷಕ ಮತ್ತಿತರ ಸಿಬ್ಬಂದಿ ದೇವಸ್ಥಾನಕ್ಕೆ ಆಗಮಿಸಿ, ಭಜನೆ, ಭಗವದ್ಗೀತೆ ಹಾಡುವ ಮೂಲಕ ಭಗವಂತನ ಸೇವಾ ಕೈಂಕರ್ಯ ನೆರವೇರಿಸಿದರು.

ಕಾಕತಾಳೀಯವಾಗಿ ಅಮೃತಹಳ್ಳಿಯ ಮಕ್ಕಳು ಯಕ್ಷಗುರು ಉಮೇಶರಾಜ್‌ ನೇತೃತ್ವದಲ್ಲಿ ಚೆಂಡೆ ಸಹಿತವಾಗಿ ʼಕಂಸವಧೆʼ ಯಕ್ಷಗಾನ ಅಭ್ಯಾಸ ಸೇವೆಯನ್ನು ಮಾಡಿದರು. ಭಕ್ತ ಸತೀಶ್‌ ಮತ್ತು ಕುಟುಂಬ ಸದಸ್ಯರು ಇದೇ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರನಿಗೆ ತೂಗುದೀಪವನ್ನು ಸಮರ್ಪಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ☝ ಇಲ್ಲಿವೆ. ಚಿತ್ರಗಳನ್ನು ಕ್ಲಿಕ್ಕಿಸುವ ಮೂಲಕ ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋಗಳನ್ನು ನೋಡಬಹುದು.👇

ಅಧಿಕಮಾಸದ ಕೊನೆಯವಾರದ ಪ್ರಯುಕ್ತ ಸಂಪಿಗೆಹಳ್ಳಿಯ ಕೋದಂಡರಾಮ ಭಜನಾ ಮಂಡಳಿಯ ಸದಸ್ಯರು ಶನಿವಾರ ಸಂಜೆ ದೇವಾಲಯದಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.





PARYAYA: ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ:   ಅಧಿಕ ಮಾಸದ ಪರಮ ಏಕಾದಶಿ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವ...

Saturday, June 6, 2026

PARYAYA: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ

ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ 


ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾಯಿತು. ಬ್ರಹ್ಮಾವರ ಜಯಂಟ್ಸ್‌ ಗ್ರೂಪ್‌ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಅನುಷಾ ಭಟ್‌ ನೆತ್ರಕೆರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಮತ್ತು ಗಿಡ ನೆಡುವಿಕೆಯ ಮಹತ್ವವನ್ನು ವಿವರಿಸಿದರು. ಬ್ರಹ್ಮಾವರ ಉಪ ತಹಶೀಲ್ದಾರ್‌ ಶ್ರೀ ಅಶೋಕ ಎನ್‌ ಭಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಹೇಗೆ ಮಹತ್ವ ಪೂರ್ಣ ಎಂದು ವಿವರಿಸಿದರು. ಈ ಸಂದರ್ಭದ ಚಿತ್ರಗಳು ಹಾಗೂ ಸ್ಥಳೀಯ PublicNext  ವೆಬ್‌ ಸೈಟ್‌ ಪುಟಗಳಲ್ಲಿ ಬಂದ ವರದಿ, ವಿಡಿಯೋ ಇಲ್ಲಿದೆ. 
ವರದಿಗಳ ಸಮೀಪ ನೋಟಕ್ಕೆ ಮೇಲಿನ ಬರಹ ಚಿತ್ರಗಳನ್ನು ಕ್ಲಿಕ್‌ ಮಾಡಿ.  ಪರ್ಯಾಯ.ಕಾಮ್ ವೆಬ್‌ ಸೈಟಿನ ʼವಾಟ್‌-ಸುದ್ದಿʼ ಪುಟ ಕ್ಲಿಕ್‌ ಮಾಡಿ.
PARYAYA: ವಿಶ್ವ ಪರಿಸರ ದಿನ: ಬ್ರಹ್ಮಾವರದಲ್ಲಿ ವಿಶ್ವ ಪರಿಸರ ದಿನ  ಉ ಡುಪಿ ಜಿಲ್ಲೆಯ ಬ್ರಹ್ಮಾವರದ ಮಿನಿ ವಿಧಾನಸೌಧದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ೨೦೨೬ ಜೂನ್‌ -೫ರ ಶುಕ್ರವಾರ ಆಚರಿಸಲಾ...

Monday, June 1, 2026

PARYAYA: ಕಥೆ ಹೇಳುವ ಕಲ್ಲುಗಳು…!

 ಕಥೆ ಹೇಳುವ ಕಲ್ಲುಗಳು…!

ಲ್ಲುಗಳು ಕಥೆ ಹೇಳುತ್ತವಾ? ಹೌದು ಅನ್ನುತ್ತಾರೆ ಈ ವ್ಯಕ್ತಿ. ಚಿತ್ರದುರ್ಗಕ್ಕೆ ಈ ಹೆಸರು ಬರಲು ಕಾರಣ ಏನು ಎಂಬುದನ್ನು ಇವರ ಬಾಯಿಯಿಂದಲೇ ಕೇಳಬೇಕು. ಇವರಿಗೆ ಇರುವ ಇತಿಹಾಸ ಜ್ಞಾನಕ್ಕೆ ಕೈ ಮುಗಿಯಬೇಕು. ತಿಳಿಯಲು  ಪರ್ಯಾಯ.ಕಾಮ್‌ ವೆಬ್‌ ಸೈಟಿನ ʼವಾಟ್‌ - ಸುದ್ದಿʼ ಪುಟಕ್ಕೆ ಭೇಟಿ ಕೊಡಿ.

PARYAYA: ಕಥೆ ಹೇಳುವ ಕಲ್ಲುಗಳು…!:   ಕಥೆ ಹೇಳುವ ಕಲ್ಲುಗಳು…! ಕ ಲ್ಲುಗಳು ಕಥೆ ಹೇಳುತ್ತವಾ? ಹೌದು ಅನ್ನುತ್ತಾರೆ ಈ ವ್ಯಕ್ತಿ. ಚಿತ್ರದುರ್ಗಕ್ಕೆ ಈ ಹೆಸರು ಬರಲು ಕಾರಣ ಏನು ಎಂಬುದನ್ನು ಇವರ ಬಾಯಿಯಿಂದಲೇ ಕೇ...

Sunday, May 31, 2026

PARYAYA: ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

 ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೩೦ರ ಶನಿವಾರ ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜೆಯನ್ನು ಭಕ್ತಿ ಭಾವದೊಂದಿಗೆ ನೆರವೇರಿಸಲಾಯಿತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಮಹಾಮಂಗಳಾರತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ದೇವಸ್ಥಾನದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿದೆ - ಹೊಸ ತಂಡಕ್ಕೆ ಯಕ್ಷಗಾನ ತರಬೇತಿ 

PARYAYA: ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ:   ಜ್ಯೇಷ್ಠ ಮಾಸದ ಶ್ರೀ ಸತ್ಯನಾರಾಯಣ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾ...

Tuesday, May 26, 2026

PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

 ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ, ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರುವ ಶ್ರೀ ಹನುಮಂತನ ಕೃಪೆಗೆ ಪಾತ್ರವಾಗಲು ನೆರವೇರಿಸುವ ಅತ್ಯಂತ ಪವಿತ್ರವಾದ ಒಂದು ಆಚರಣೆ.

ಜೀವನದ ಹಾದಿಯಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಅಡೆತಡೆಗಳನ್ನು ನಿವಾರಿಸಲು ಹಾಗೂ ಎಲ್ಲ ಬಗೆಯ ದುಃಖ-ಕಷ್ಟಗಳಿಂದ ಮುಕ್ತಿ ಪಡೆಯಲು ಈ ಹೋಮವನ್ನು ಮಾಡಲಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಹನುಮಂತನ ದಿವ್ಯ ರಕ್ಷಾಕವಚ ಮತ್ತು ಆಶೀರ್ವಾದವನ್ನು ಪಡೆಯುವುದೇ ಇದರ ಮುಖ್ಯ ಉದ್ದೇಶ.

ಆಂಜನೇಯ ಹೋಮದ ಆಚರಣೆಯು ಭಕ್ತರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನಲ್ಲಿದ್ದ ಭೀತಿಯನ್ನು ಹೋಗಲಾಡಿಸಿ, ಜೀವನದ ವಿವಿಧ ಮಜಲುಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಲು ದಾರಿಯಾಗುತ್ತದೆ.

ಈ ಪವಿತ್ರ ವಿಧಿಯಲ್ಲಿ ಹನುಮಂತನ ಮೂಲಮಂತ್ರ ಸಹಿತ ಶಕ್ತಿಶಾಲಿ ಮಂತ್ರಗಳನ್ನು ಪಠಿಸಲಾಗುತ್ತದೆ. ಹೋಮ ಕುಂಡದಲ್ಲಿ ಪವಿತ್ರ ಹವಿಸ್ಸನ್ನು ಅರ್ಪಿಸುವ ಮೂಲಕ, ಹನುಮದೇವನ ದಿವ್ಯ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಸಕಲ ಅಭೀಷ್ಟಗಳನ್ನು ಈಡೇರಿಸಿಕೊಳ್ಳುವ ಸುಂದರ ಪ್ರಕ್ರಿಯೆ ಇದು.

ಹನುಮ ಜಯಂತಿಯಂತಹ ಅತ್ಯಂತ ಮಂಗಳಕರ ಸಂದರ್ಭಗಳಲ್ಲಿ ಈ ಹೋಮವನ್ನು ನೆರವೇರಿಸುವುದರಿಂದ ವಿಶೇಷ ಫಲಗಳು ಲಭ್ಯವಾಗುತ್ತವೆ. ಇದು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಮತ್ತಷ್ಟು ಉನ್ನತಗೊಳಿಸಿ, ಭಗವಂತನ ಕೃಪೆಗೆ ಪಾತ್ರರನ್ನಾಗಿ ಮಾಡುತ್ತದೆ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಶಾಸ್ತ್ರಿ ಮತ್ತು ಅವರ ಸಹ ಋತ್ವಿಜರು ೨೦೨೬ ಮೇ ೨೬ರ ಮಂಗಳವಾರ ಅಭಯ ಆಂಜನೇಯನ ಸನ್ನಿಧಾನದಲ್ಲಿ ಕೌಟುಂಬಿಕ ಸಂಕಲ್ಪಕ್ಕೆ ಅನುಗುಣವಾಗಿ ದಶದ್ರವ್ಯ ಆಹುತಿಯೊಂದಿಗೆ ಈ ಆಂಜನೇಯ ಹೋಮವನ್ನು ನೆರವೇರಿಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ:   ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯ ಕ್ಕಾಗಿ ಹ ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ , ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರು...

Sunday, May 24, 2026

PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

 ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?

ಇದೊಂದು ಮನ ಕಲಕುವ ಸನ್ನಿವೇಶ

ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿತ್ತು. ಹಠಾತ್ತನೆ ಕೋತಿಯೊಂದು ಬಂದು ಬಸ್ಸಿನ ಮುಂದೆ ನಿಂತುಕೊಂಡಿತು.

ಚಾಲಕನಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಬಸ್ಸನ್ನು ನಿಲ್ಲಿಸಿದ. ಶ್..‌ ಶ್‌.. ಎಂದು ಬಾಯಿಯಲ್ಲೇ ಸದ್ದು ಮಾಡಿದ.

ಮಂಗ ಕದಲಲಿಲ್ಲ. ನಿಂತಲ್ಲೇ ನಿಂತುಕೊಂಡಿತ್ತು. ಇದೇನೋ ವಿಲಕ್ಷಣ ಪರಿಸ್ಥಿತಿ ಎಂದು ಬಸ್ಸಿನಲ್ಲಿದ್ದ ಕೆಲವರು ಕೆಳಕ್ಕೆ ಇಳಿದರು. ಆದರೂ ಕೋತಿ ಅಲ್ಲೇ ನಿಂತಿತ್ತು. ತನ್ನದೇ ಮೂಕಭಾಷೆಯಲ್ಲಿ ಕೈ ಅಲ್ಲಾಡಿಸುತ್ತಿತ್ತು.

ಅದಕ್ಕೆ ಬಹುಶಃ ನೀರು ಬೇಕಾಗಿರಬಹುದು ಎಂದು ಪ್ರಯಾಣಿಕರಲ್ಲಿ ಒಬ್ಬರಿಗೆ ಅನ್ನಿಸಿತು. ಅವರು ತತ್‌ ಕ್ಷಣವೇ ತನ್ನ ಬ್ಯಾಗಿನಲ್ಲಿದ್ದ ಪ್ಲಾಸ್ಟಿಕ್‌ ಬಾಟಲಿಯ ಮುಚ್ಚಳ ತೆಗೆದು ಮಂಗನ ಮುಂದೆ ಹಿಡಿದರು. ಮಂಗ ಬಾಯಿ ತೆರೆದು ಗಟಗಟನೆ ನೀರು ಕುಡಿಯಿತು.

ಅಷ್ಟರಲ್ಲಿ ಇನ್ನಷ್ಟು ಮಂಗಗಳು ಆಸು ಪಾಸಿನಿಂದ ಓಡಿ ಬಂದು ಕೈ ಚಾಚ ತೊಡಗಿದವು. ಬಸ್ಸಿನಲ್ಲಿದ್ದವರು ತಮ್ಮ ಬ್ಯಾಗುಗಳಿಂದ ನೀರಿನ ಬಾಟಲಿಗಳನ್ನು ತೆಗೆದು ಕೆಳಗಿದ್ದವರ ಕೈಗಳಿಗೆ ಕೊಟ್ಟರು. ಮಹಿಳೆಯರೂ ಹಿಂದು ಮುಂದು ನೋಡದೆ ತಮ್ಮ ನೀರಿನ ಬಾಟಲಿಗಳನ್ನು ನೀಡಿದರು.

ಮಂಗಗಳ ಹಿಂಡೇ ಬಾಟಲಿಗಳಿಂದ ನೀರು ಕುಡಿದು ಖುಷಿ ಪಟ್ಟವು.

ನೀರು ಸಿಗದೆ ಅದೆಷ್ಟು ದಿನಗಳಿಂದ ಬಾಯಾರಿದ್ದವೋ ಏನೋ. ಮಂಗಗಳಿಗೆ ಅಮೃತ ಸಿಕ್ಕಂತಾಗಿತ್ತು.

ಈ ಮನ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೇಲೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ.

ಮರೆಯಬೇಡಿ. ನಿಮ್ಮ ಮನೆ, ಕಚೇರಿಯ ಆಸುಪಾಸಿನಲ್ಲೂ ಪಶು ಪಕ್ಷಿಗಳು ಈ ಬೇಸಗೆಯಲ್ಲಿ ನೀರು ಸಿಗದೆ ಕಂಗಾಲಾಗಿರಬಹುದು. ಅವುಗಳಿಗೆ ಸಿಗುವಂತೆ ನೀರು ಸಿಗುವ ವ್ಯವಸ್ಥೆ ಮಾಡಿ. ಮೂಕ ಪ್ರಾಣಿ, ಪಕ್ಷಿಗಳ ದಾಹ ತಣಿಸಿ.PARYAYA: ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು?:   ಬಸ್ಸನ್ನು ತಡೆದ ಮಂಗ ಕೇಳಿದ್ದು ಏನನ್ನು? ಇದೊಂದು ಮನ ಕಲಕುವ ಸನ್ನಿವೇಶ ಮ ಹಾರಾಷ್ಟ್ರದ ವಿದರ್ಭದಲ್ಲಿ ಅದೊಂದು ಮನ ಕಲಕುವ ಸನ್ನಿವೇಶ. ಬಸ್ಸೊಂದು ರಸ್ತೆಯಲ್ಲಿ ಮುಂದಕ...

Thursday, May 14, 2026

PARYAYA: ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

 ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ

ರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬುಧವಾರ ರಾಜ್ಯದಾದ್ಯಂತ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಗೆ ಬರೋಬ್ಬರಿ 89 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರತೆಯ ನಡುವೆ, ಬರೇಲಿಯಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಾರಿ ಹೋದ ಎದೆನಡುಗಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

300 ಮೀಟರ್ ದೂರಕ್ಕೆ ಹಾರಿ ಬಿದ್ದ ವ್ಯಕ್ತಿ!

ಬರೇಲಿಯ ಭಮೋರಾ ಭಾಗದ ಬಾಬಿಯಾನಾ ಗ್ರಾಮದ ನಿವಾಸಿ ನನ್ಹೆ-ಮಿಯಾನ್ ಎಂಬುವವರು ಈ ಘೋರ ಘಟನೆಗೆ ಸಾಕ್ಷಿಯಾದವರು. ಬಿರುಗಾಳಿ ಶುರುವಾದಾಗ ರಕ್ಷಣೆಗಾಗಿ ಅವರು ಸಮೀಪದ ಕಲ್ಯಾಣ ಮಂಟಪವೊಂದರ ಒಳಗೆ ಆಶ್ರಯ ಪಡೆದಿದ್ದರು. ಗಾಳಿಯ ವೇಗ ಹೆಚ್ಚಾದಂತೆ, ಅಲ್ಲಿನ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕೆಳಗೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ:

 ಗಾಳಿಯ ರಭಸ ಎಷ್ಟಿತ್ತೆಂದರೆ:

  • ಬೃಹತ್ ಟಿನ್ ಶೆಡ್ ಅನ್ನೇ ಕಿತ್ತೆಸೆದ ಬಿರುಗಾಳಿ.
  • ಶೆಡ್ ಹಿಡಿದಿದ್ದ ನನ್ಹೆ-ಮಿಯಾನ್ ಅವರು ಸುಮಾರು 300 ಮೀಟರ್‌ಗಳಷ್ಟು ದೂರ ಗಾಳಿಯಲ್ಲೇ ತೇಲುತ್ತಾ ಹೋಗಿದ್ದಾರೆ.
  • ಅಂತಿಮವಾಗಿ ಸಮೀಪದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅವರ ಕೈಕಾಲುಗಳು ಮುರಿದಿವೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಾನಿಯ ಅಂಕಿ-ಅಂಶಗಳು

ಕೇವಲ ಜೀವಹಾನಿಯಲ್ಲದೆ, ಆಸ್ತಿಪಾಸ್ತಿಗೂ ಭಾರೀ ನಷ್ಟ ಉಂಟಾಗಿದೆ. ಸರ್ಕಾರದ ಅಧಿಕೃತ ವರದಿಯ ಪ್ರಕಾರ:

ವಿವರ

ಹಾನಿಯ ಪ್ರಮಾಣ

ಮೃತಪಟ್ಟವರು

89 ಜನರು

ಗಾಯಗೊಂಡವರು

53 ಜನರು

ಮೃತಪಟ್ಟ ಪ್ರಾಣಿಗಳು

114

ಕಾರಣಗಳು

ಗೋಡೆ ಕುಸಿತ, ಮರಗಳ ಉರುಳುವಿಕೆ, ಸಿಡಿಲು

 "ರಸ್ತೆಯೇ ಕಾಣಿಸುತ್ತಿರಲಿಲ್ಲ!"  ಪ್ರತ್ಯಕ್ಷದರ್ಶಿಗಳ ಹೇಳಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. "ನಾನು ಕಾರಿನಲ್ಲಿದ್ದಾಗ ಮರಗಳು ಬೀಳುತ್ತಿದ್ದವು, ಧೂಳಿನಿಂದಾಗಿ ರಸ್ತೆಯೇ ಕಾಣಿಸುತ್ತಿರಲಿಲ್ಲ. ಜೀವ ಭಯದಿಂದ ಕಾರನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿದೆ," ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಹವಾಮಾನ ಇಲಾಖೆ ಎಚ್ಚರಿಕೆ: ಪಶ್ಚಿಮದ ಮಾರುತಗಳ ಪ್ರಭಾವದಿಂದಾಗಿ ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮೊದಲೇ ಮುನ್ಸೂಚನೆ ನೀಡಿತ್ತು.

ಈ ಭೀಕರ ಬಿರುಗಾಳಿಯು ಉತ್ತರ ಪ್ರದೇಶದ ಮೂಲಸೌಕರ್ಯ ಹಾಗೂ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.

PARYAYA: ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!:   ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ! ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ ಬ ರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬ...

Tuesday, May 12, 2026

PARYAYA: ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

 ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಎಂಎಎಚ್‌ಇ ʼಮಾಹೆʼ) ಟಿಎ ಪೈ ಮ್ಯಾನೇಜ್‌ ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಬೆಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಸುಂದರವಾದ ಸಾಕ್ಷ್ಯಚಿತ್ರವೊಂದನ್ನು (ಡಾಕ್ಯಮೆಂಟರಿ) ಸಿದ್ಧ ಪಡಿಸಿದ್ದಾರೆ.

ಈ ಸಾಕ್ಷ್ಯ ಚಿತ್ರದಲ್ಲಿ ಯಕ್ಷಗಾನ, ಅದರ ಹಾಡುಗಾರಿಕೆ, ಬಣ್ಣಗಾರಿಕೆ ವೇಷಭೂಷಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಂಗ್ಲಿಷಿನಲ್ಲಿ  ವಿವರಿಸಿದ್ದಾರೆ. ಈ ಸಾಕ್ಷ್ಯ ಚಿತ್ರವನ್ನು ಇಲ್ಲಿ ನೋಡಬಹುದು.

ಎರಡನೇ ತಂಡ:
ಈ ಮಧ್ಯೆ, ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರಂದು ಪ್ರಾರಂಭವಾದ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡವು ತನ್ನ ಎರಡನೇ ತಂಡಕ್ಕೆ ತರಬೇತಿ ಆರಂಭಿಸಲು ಸಜ್ಜಾಗಿದೆ. (ಚಿತ್ರಗಳ   ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ).

ಕೇವಲ ಆರು ತಿಂಗಳ ಅವಧಿಯಲ್ಲಿ ಯಕ್ಷಗುರು ಉಮೇಶ ರಾಜ್‌ ಅವರಿಂದ ಯಕ್ಷಗಾನ ಕಲಿತ ಮಕ್ಕಳು ಜಕ್ಕೂರಿನ ʼಸುಗಿ-ಹುಗ್ಗಿʼಯಲ್ಲಿ ನೀಡಿದ ಪ್ರದರ್ಶನವೂ ಸೇರಿದಂತೆ ಐದು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ʼಅಭಿಮನ್ಯು ಕಾಳಗʼ, ʼಭಾರ್ಗವ ವಿಜಯʼ ಮತ್ತು ʼಲವ ಕುಶ ಕಾಳಗʼ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.

ಇದೀಗ ಜೂನ್‌ ಮೊದಲ ವಾರದಿಂದ ಆರಂಭವಾಗಲಿರುವ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡಕ್ಕೆ ಸೇರ್ಪಡೆಯಾಗಬಯಸುವವರು ಯಕ್ಷಗುರು ಉಮೇಶರಾಜ್‌ ಅವರನ್ನು ದೂರವಾಣಿ ಸಂಖ್ಯೆ 9663671591 ಅಥವಾ 9606981591 ಮೂಲಕ ಸಂಪರ್ಕಿಸಬಹುದು ಎಂದು ಹೇಳಿಕೆ ತಿಳಿಸಿದೆ.



ಯಕ್ಷಗಾನ ಕುರಿತ ವಿವರಗಳಿಗೆ ನೋಡಿ:  ಪರ್ಯಾಯ ವೆಬ್‌ ಸೈಟಿನ ʼಯಕ್ಷಗಾನ/ತಾಳಮದ್ದಳೆʼ ಪುಟ.

PARYAYA: ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ:   ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ ಬೆಂ ಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜು...

Sunday, April 26, 2026

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

 ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ

ಬೆಂಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು.

ಶ್ರೀ ರಾಮಚಂದ್ರಾಪುರ ಮಠದ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಶ್ರೀ ಮಹಾಗಣಪತಿ ಜಾತ್ರೆಯ ಪ್ರಯುಕ್ತ ಏಪ್ರಿಲ್‌ ೨೨ರಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೨ರಂದು ನವಗ್ರಹ ಶಾಂತಿ ಹೋಮ, ಅಥರ್ವ ಶೀರ್ಷ ಹೋಮ, ಏಪ್ರಿಲ್‌ ೨೩ರಂದು ಅಥರ್ವ ಶೀರ್ಷ ಹೋಮ, ದುರ್ಗಾ ದೀಪ ನಮಸ್ಕಾರ, ಏಪ್ರಿಲ್‌ ೨೪ರಂದು ಸುಬ್ರಹ್ಮಣ್ಯ ಹೋಮ, ರಂಗಪೂಜೆ, ಏಪ್ರಿಲ್‌ ೨೫ರಂದು ನಾಗಮೂಲಮಂತ್ರ ಹೋಮ, ಆಶ್ಲೇಷಬಲಿ, ಪಲ್ಲಕ್ಕಿ ಉತ್ಸವ ನಡೆದವು.

ಏಪ್ರಿಲ್‌ ೨೬ರಂದು ಅಥರ್ವಶೀರ್ಷ ಹೋಮ, ರಥೋತ್ಸವ, ದೇವನೃತ್ಯ ಕಾರ್ಯಕ್ರಮಗಳು ನಡೆದವು. ಏಪ್ರಿಲ್‌ ೨೭ರಂದು ಸಹಸ್ರಮೋದಕ ಅಥರ್ವಶೀರ್ಷ ಹವನ ಹಾಗೂ ಅವಭೃತದೊಂದಿಗೆ ಜಾತ್ರೆ ಮುಕ್ತಾಯ.

ಭಾನುವಾರ ನಡೆದ ಸಂಭ್ರಮದ ರಥೋತ್ಸವದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸಂದರ್ಭದ ಕೆಲವು ವಿಡಿಯೋಗಳು ಹಾಗೂ ಚಿತ್ರಗಳು ಇಲ್ಲಿವೆ.

PARYAYA: ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ:   ಗಿರಿನಗರ ಶ್ರೀ ಮಹಾಗಣಪತಿ ರಥೋತ್ಸವ ಬೆಂ ಗಳೂರು ಗಿರಿನಗರದ ಒಡೆಯ ಶ್ರೀ ಮಹಾಗಣಪತಿಯ ರಥೋತ್ಸವವು ೨೦೨೬ ಏಪ್ರಿಲ್‌ ೨೬ರ ಭಾನುವಾರ ಸಡಗರದೊಂದಿಗೆ ನೆರವೇರಿತು. ಶ್ರೀ ರಾಮ...