Showing posts with label ರಾಮಕೃಷ್ಣ ಹೆಗಡೆ ನಗರ. Show all posts
Showing posts with label ರಾಮಕೃಷ್ಣ ಹೆಗಡೆ ನಗರ. Show all posts

Wednesday, November 13, 2024

PARYAYA: ತುಳಸೀ ಪೂಜಾ

 ತುಳಸೀ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೩ರ ಬುಧವಾರ ತುಳಸೀ ಪೂಜಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದ ವಿಡಿಯೋ ಇಲ್ಲಿದೆ: ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ತುಳಸೀ ಪೂಜಾ:  ತುಳಸೀ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ನವೆಂಬರ್‌ ೧೩ರ ಬುಧವಾರ ತುಳಸೀ ಪೂಜಾ ಕಾರ್ಯಕ್ರಮ...

Sunday, September 8, 2024

PARYAYA: ವಿನಾಯಕ ಚತುರ್ಥಿ ಆಚರಣೆ

 ವಿನಾಯಕ ಚತುರ್ಥಿ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೪ ಸೆಪ್ಟೆಂಬರ್‌ ೭ರ ಶನಿವಾರ ಶ್ರೀ ವಿನಾಯಕ ಚತುರ್ಥಿ ವಿಶೇಷ ಪೂಜೆ ನಡೆಯಿತು.

 ಈ ಸಂದರ್ಭದ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


ಇದನ್ನೂ ಓದಿರಿ:

PARYAYA: ವಿನಾಯಕ ಚತುರ್ಥಿ ಆಚರಣೆ:   ವಿನಾಯಕ ಚತುರ್ಥಿ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨...

Friday, March 1, 2024

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

  ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಭಾನುವಾರ ಲೋಕಾರ್ಪಣೆ, ಅಯೋಧ್ಯೆಯ ನಂಟೂ ಉಂಟು..

ಬೆಂಗಳೂರು: ಇದು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಂಡ ಕಲ್ಲಿನ ದೇಗುಲ. ಅಷ್ಟೇ ಅಲ್ಲ ಅಯೋಧ್ಯೆಯ ಬಾಲರಾಮನ ಜೊತೆ ನಂಟು ಹೊಂದಿರುವ ದೇವಾಲಯ. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಕೇವಲ 30 ದಿನಗಳ ಅವಧಿಯಲ್ಲಿ ನಿರ್ಮಾಣಗೊಳ್ಳುವುದರೊಂದಿಗೆ ಇತಿಹಾಸ ಸೃಷಿಸಿದೆ.

ವಾಸ್ತವವಾಗಿ ಈ ಬಡಾವಣೆಯಲ್ಲಿ ದೇವಾಲಯದ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಿವಾಸಿಗಳ ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅವಧಿಯ ಕನಸು. ಸುಮಾರು 20 ವರ್ಷಗಳ ಹಿಂದೆ ಇಲ್ಲಿ ಬಡಾವಣೆ ನಿರ್ಮಾಣ ಮಾಡುವ ಸಮಯದಲ್ಲೇ ಬಡಾವಣೆಯ ನಿರ್ಮಾಪಕರು ಇಲ್ಲಿ ದೇವಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟದ್ದಲ್ಲದೆ ಅದಕ್ಕಾಗಿ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು.

ಆದರೆ ಕಾರಣಾಂತರಗಳಿಂದ ದೇವಾಲಯ ನಿರ್ಮಾಣ ಕಾರ್ಯ ಮುಂದಕ್ಕೆ ಹೋಗುತ್ತಲೇ ಬಂದಿತ್ತು. ಒಂದು ವರ್ಷದ ಹಿಂದೆ ಬಡಾವಣೆಯ ಹಿರಿಯ ಸದಸ್ಯರು ದೇವಾಲಯ ನಿರ್ಮಾಣ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್‌ ರಚಿಸಿಕೊಂಡು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಬಡಾವಣೆಯ ನಿರ್ಮಾಪಕರೂ ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಹಸ್ತ ನೀಡುವ ಭರವಸೆ ಕೊಟ್ಟರು.

ಆದರೂ ದೇವಾಲಯ ನಿರ್ಮಾಣ ಕಾರ್ಯಕ್ಕೆ ವೇಗ ಲಭಿಸಲಿಲ್ಲ. ಮತ್ತೆ ಮತ್ತೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಬಂದವು. ಕೊನೆಗೆ ಸಾದಹಳ್ಳಿಯ ಸಾಲಿಗ್ರಾಮ ಭೂ ವರಾಹ ಸ್ವಾಮಿ ಸನ್ನಿಧಿಗೆ ತೆರಳಿ ದೇವಾಲಯ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡ ಸಮಿತಿಯ ಸದಸ್ಯರು ಅಲ್ಲಿನ ಆನಂದ ಗುರೂಜಿ ಮಾರ್ಗದರ್ಶನದಂತೆ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು.

2024 ಜನವರಿ 11ರ ನಸುಕಿನಲ್ಲಿ ಅತ್ಯಂತ ಶ್ರೇಷ್ಠ ಮುಹೂರ್ತ ಎಂಬುದಾಗಿ ಪರಿಗಣಿಸಲಾಗಿರುವ ಬ್ರಾಹ್ಮೀ ಮುಹೂರ್ತದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿ ದೇವಾಲಯದ ಪಾಯ ನಿರ್ಮಾಣದ ಕೆಲಸ ಆರಂಭಿಸಿದರು. ಸಮಿತಿಯ ಒಂದು ತಂಡವು ತಮಿಳುನಾಡಿನ ಮಹಾಬಲಿಪುರಂಗೆ ತೆರಳಿ ಇಡೀ ದಿನ ಹುಡುಕಾಡಿ ಶ್ರೀ ವೆಂಕಟೇಶ್ವರ (ಬಾಲಾಜಿ) ಮತ್ತು ಅಭಯ ಆಂಜನೇಯ ಸ್ವಾಮಿಯ ವಿಗ್ರಹಗಳನ್ನು ಆಯ್ಕೆ ಮಾಡಿಕೊಂಡು ಬಂದಿತು.

ಅಯೋಧ್ಯೆಯ ಸಂಬಂಧ!

ಬಡಾವಣೆಯ ಶಿಲ್ಪಿ ಎನ್.‌ ಎಂ. ಬಡಿಗೇರ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ಮೈಸೂರಿನ ಹೆಗ್ಗಡದೇವನ ಕೋಟೆಯಿಂದ ಕೆಲವು ಕಪ್ಪು ಶಿಲೆ ಅಥವಾ ಕೃಷ್ಣ ಶಿಲೆಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನ ತಮ್ಮ ನಿವಾಸಕ್ಕೆ ವಿಗ್ರಹಗಳನ್ನು ಕೆತ್ತಲೆಂದೇ ತಂದಿದ್ದರು. ಈ ಬಂಡೆಗಳಲ್ಲಿ ಅವರು ಮಹಾಗಣಪತಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ವಿಶೇಷವೆಂದರೆ ಈ ವರ್ಷ ಲೋಕಾರ್ಪಣೆಗೊಂಡಿರುವ ಅಯೋಧ್ಯೆಯ ಚಾರಿತ್ರಿಕ ರಾಮ ಮಂದಿರದಲ್ಲಿ ಈಗ ಪ್ರತಿಷ್ಠಾಪನೆಗೊಂಡಿರುವ ಬಾಲರಾಮ ಕೂಡಾ ಇದೇ ಪ್ರದೇಶದ ಕೃಷ್ಣಶಿಲೆಯಿಂದ ನಿರ್ಮಾಣಗೊಂಡಿರುವ ವಿಗ್ರಹ.

ಬಡಾವಣೆಯಲ್ಲಿ ದೇವಾಲಯ ನಿರ್ಮಾಣದ ಪ್ರಸ್ತಾಪ ಬರುತ್ತಿದ್ದಂತೆಯೇ ಬಡಿಗೇರ ಅವರು ತಾವು ನಾಲ್ಕು ವರ್ಷಗಳ ಶ್ರಮದಲ್ಲಿ ನಿರ್ಮಿಸಿದ ಇದೇ ಕೃಷ್ಣ ಶಿಲೆಯ ಶ್ರೀ ಮಹಾಗಣಪತಿ ವಿಗ್ರಹವನ್ನು ದೇವಾಲಯಕ್ಕೆ ನೀಡುವುದಾಗಿ ಘೋಷಿಸಿದರು.


ಅತ್ತ ಮಹಾಬಲಿಪುರಂನಲ್ಲಿ ಬಾಲಾಜಿ ಮತ್ತು ಅಭಯ ಆಂಜನೇಯ ವಿಗ್ರಹದ ಹುಡುಕಾಟಕ್ಕಾಗಿ ತೆರಳಿದ್ದ ತಂಡಕ್ಕೆ ಇಡೀ ದಿನ ಹುಡುಕಾಡಿದರೂ ಯಾವುದೇ ವಿಗ್ರಹ ಮನಸ್ಸಿಗೆ ತೃಪ್ತಿ ನೀಡಿರಲಿಲ್ಲ. ಕೊನೆಗೆ ವಾಪಸಾಗಬೇಕೆಂದು ಯೋಚಿಸಿ ಹೊರಟಾಗ ವಿಗ್ರಹಗಳಿದ್ದ ಪುಟ್ಟ ಅಂಗಡಿಯೊಂದು ಕಂಡಿತು. ಅಲ್ಲಿದ್ದ ವೆಂಕಟೇಶ್ವರ ವಿಗ್ರಹ ಎಲ್ಲರಿಗೂ ತೃಪ್ತಿ ನೀಡಿತು. ಬೆಂಗಳೂರಿನ ದಿಕ್ಕಿಗೆ ಮುಖ ಮಾಡಿ ನಿಂತಿದ್ದ ಈ ವಿಗ್ರಹ ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ಮಾರಾಟವಾಗದೆ ಹಾಗೆಯೇ ಉಳಿದಿತ್ತು ಎಂಬುದು ಅಂಗಡಿಕಾರರ ಜೊತೆಗೆ ಮಾತನಾಡಿದಾಗ ತಿಳಿಯಿತು.

ಈ ಬಾಲಾಜಿ ವಿಗ್ರಹದ ಎದುರಿನಲ್ಲೇ ಇದ್ದ ಅಭಯ ಆಂಜನೇಯ ಸ್ವಾಮಿಯ ವಿಗ್ರಹವೂ ತಂಡದ ಗಮನ ಸೆಳೆಯಿತು. ವಿಗ್ರಹ ಆಯ್ಕೆಯ ತಂಡ ಈ ಎರಡೂ ವಿಗ್ರಹಗಳನ್ನು ದೇವಾಲಯದ ಸಲುವಾಗಿ ಆಯ್ಕೆ ಮಾಡಿತು. ಮರುದಿನವೇ ಎರಡೂ ವಿಗ್ರಹಗಳು ಬಡಾವಣೆಗೆ ಬಂದಿಳಿದವು.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ದಿನವೇ ಬಡಾವಣೆಯ ಮಂದಿರದ ಉದ್ಘಾಟನೆಯೂ ನೆರವೇರಬೇಕು ಎಂಬುದು ಸಮಿತಿಯ ಸದಸ್ಯರ ಆಶಯವಾಗಿತ್ತು. ಆದರೆ ಮತ್ತೆ ವಿಘ್ನಗಳು ಎದುರಾಗಿ ಸುಮಾರು ಜನವರಿ 16ಕ್ಕೆ ದೇವಾಲಯ ನಿರ್ಮಾಣ ಕಾಮಗಾರಿ ನಿಂತಿತು.

ಛಲ ಬಿಡದ ತ್ರಿವಿಕ್ರಮನಂತೆ ಸಮಿತಿ ಸದಸ್ಯರು ಫೆಬ್ರುವರಿ ಮೊದಲ ವಾರದಲ್ಲಿ ಮತ್ತೆ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಕ್ರಿಯರಾದರು. ಫೆಬ್ರುವರಿ 3ಕ್ಕೆ ದೇವಾಲಯ ನಿರ್ಮಾಣ ಕಾರ್ಯ ಪುನರಾರಂಭ ಮಾಡಿ, ಫೆಬ್ರುವರಿ 29ರ ವೇಳೆಗೆ ಅದನ್ನು ಪೂರ್ಣಗೊಳಿಸಿದರು.

ಇದೀಗ ಭವ್ಯವಾಗಿ ಎದ್ದು ನಿಂತಿರುವ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಲೋಕಾರ್ಪಣೆ ಹಾಗೂ ಶ್ರೀ ದೇವರುಗಳ ಪ್ರಾಣ ಪ್ರತಿಷ್ಠಾಪನೆ 2024ರ ಭಾನುವಾರ ಮಾಘ ಬಹುಳ ಸಪ್ತಮೀ ಅನೂರಾಧ ನಕ್ಷತ್ರ ಪ್ರಾತಃಕಾಲ 9.15ರಿಂದ 10.30ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ನೆರವೇರಲಿದೆ.

ಅದಕ್ಕೆ ಪೂರ್ವಭಾವಿಯಾಗಿ ಶನಿವಾರ ಸಂಜೆಯಿಂದಲೇ ಗಂಗಾಪೂಜೆ ಮತ್ತಿತರ ಧಾರ್ಮಿಕ ವಿಧಿಗಳು ಆರಂಭವಾಗಲಿದೆ.


ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

Tuesday, August 15, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ

ಬೆಂಗಳೂರುಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೩ ಆಗಸ್ಟ್‌ ೧೫ರ ಮಂಗಳವಾರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೭೭ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. 

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೇನಾ ಅಧಿಕಾರಿ ಥಾಮಸ್‌ ದೇವಸ್ಸಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಹಿರಿಯ ನ್ಯಾಯವಾದಿ ವಿ. ಮುನಿರಾಜು ಅವರು ಅತಿಥಿಯಾಗಿದ್ದರು.

ಸಮಾರಂಭದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಸ್‌ಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ಬಡಾವಣೆಯ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಗೌರವಕ್ಕೆ ಅರ್ಹರಾದ ರೋಷನ್‌ ಅವರು ೫೮೮ ಅಂಕಗಳೊಂದಿಗೆ ಉನ್ನತ ಸಾಧನೆ ಮಾಡಿದ್ದರೆ, ಪಿಯುಸಿಯಲ್ಲಿ ೫೪೬ ಅಂಕಗಳನ್ನು ಪಡೆದ ರಕ್ಷಿತಾ ಆರ್.‌ ಚಿತ್ರಗಾರ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಬಡಾವಣೆಗೆ ಕೀರ್ತಿಯನ್ನು ತಂದಿದ್ದಾರೆ.

ಸಮಾರಂಭದ ಕೆಲವು ನೋಟಗಳ ವಿಡಿಯೋಗಳು ಇಲ್ಲಿವೆ:

ಮುಖ್ಯ ಅತಿಥಿ ಥಾಮಸ್‌ ದೇವಸ್ಸಿ ಅವರ ಭಾಷಣ:

ಸಂಘದ ಅಧ್ಯಕ್ಷ ರಾಜೇಶ ಕೆ. ಹೆಗಡೆ ಅವರಿಂದ ಅಧ್ಯಕ್ಷೀಯ ಭಾಷಣ:

ಸಮಾರಂಭದ ಸಂದರ್ಭದಲ್ಲಿ ಬಡಾವಣೆಯ ಹಿರಿಯ ಸದಸ್ಯ, ನ್ಯಾಯವಾದಿ ವಿ. ಮುನಿರಾಜು ಅವರು ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು.

ಹೆಚ್ಚಿನ ಅಂಕಗಳೊಂದಿಗೆ ಗೌರವಕ್ಕೆ ಪಾತ್ರರಾದ ರೋಷನ್‌ ಮತ್ತು ರಕ್ಷಿತಾ ಆರ್‌ ಚಿತ್ರಗಾರ:


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ ಬೆಂಗಳೂರು : ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೩ ಆಗಸ್ಟ್‌ ೧೫ರ ಮಂಗಳವಾರ ...

Friday, October 15, 2021

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ


ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗವಾಗಿ ಬಾಲಾಜಿ ಕೃಪಾ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಡಾವಣೆಯ ಕೊಳವೆ ಬಾವಿಗಳಿಗೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು.

ವಿಡಿಯೋ ನೋಡಲು ಮೇಲಿನ / ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗ...

Wednesday, July 14, 2021

ಕಡೆಗೂ ಹಾರಿತು ಹದ್ದಿನ ಮರಿ ….!

 ಕಡೆಗೂ ಹಾರಿತು ಹದ್ದಿನ ಮರಿ ….!


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆ. 2021 ಜುಲೈ 13ರ ಮಂಗಳವಾರ ಬೆಳಗ್ಗೆ 9.36ರ ಸಮಯ. ಬಡಾವಣೆಯ ವಾಟ್ಸಪ್ ಗುಂಪಿನಲ್ಲಿ ಮರವೊಂದರಲ್ಲಿ ಹಕ್ಕಿ ನೇತಾಡುತ್ತಿರುವ ಚಿತ್ರದ ಸಹಿತ ಸಂದೇಶ ಒಂದು ಪ್ರಕಟವಾಯಿತು. ಆರೋನ್ ಎಂಬವರು ಪ್ರಕಟಿಸಿದ ಚಿತ್ರದ ಮರದಲ್ಲಿ ಬಾವಲಿಯಂತೆ ಹಕ್ಕಿಯೊಂದು ನೇತಾಡುತ್ತಿತ್ತು.

‘ಈ ಬಡಪಾಯಿ ಹಕ್ಕಿಗೆ (ಈಗಲ್ - ಹದ್ದು) ಹಾರಲು ಯಾರಾದರೂ ನೆರವಾಗುತ್ತೀರಾ? ಇದರ ರೆಕ್ಕೆಗೆ  ಗಾಳಪಟದ ನೂಲು ಸಿಕ್ಕಿ ಹಾಕಿಕೊಂಡಿದೆ. ಅದರಿಂದ ತಪ್ಪಿಸಿಕೊಳ್ಳಲು ನಡೆಸಿದ ಯತ್ನದಲ್ಲಿ ಅದು ನೂಲಿನಲ್ಲಿ ಇನ್ನಷ್ಟು ಸಿಕ್ಕಿ ಹಾಕಿಕೊಂಡಿದೆ. ಅದಕ್ಕೆ ತಾನಾಗಿಯೇ ಹಾರಲು ಸಾಧ್ಯವಾಗುತ್ತಿಲ್ಲ. ಈ ಹಕ್ಕಿ ಸಿಕ್ಕಿಹಾಕಿಕೊಂಡಿರುವ ಜಾಗ ಬಡಾವಣೆಯ 2ನೇ ಕ್ರಾಸಿನ ದಕ್ಷಿಣ ಬದಿ’ ಎಂದು ಆರೋನ್ ಬರೆದಿದ್ದರು.


ಅಗ್ನಿಶಾಮಕ ದಳದ ಮಂದಿ ಈ ಪ್ರಕರಣದಲ್ಲಿ ನೆರವಾಗಬಹುದೇನೋ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅವರ ಬಳಿ ದೊಡ್ಡ ಏಣಿಗಳು ಇರುತ್ತವೆ. ಈ ಏಣಿಗಳೂ ಈ ಎತ್ತರವನ್ನು ತಲುಪಬಹುದು. ಕೆಲವು ವರ್ಷಗಳ ಹಿಂದೆ ನನ್ನ ಕಚೇರಿಯ ಸಮೀಪ ಪಾರಿವಾಳವೊಂದು ಗಗನಚುಂಬಿ ಕಟ್ಟಡದಲ್ಲಿ ಹೀಗೆ ಸಿಕ್ಕಿಹಾಕಿಕೊಂಡಿತ್ತು. ಅಗ್ನಿಶಾಮಕ ದಳದವರು ಅಲ್ಲಿಗೆ ಬಂದು ತಮ್ಮ  ಎತ್ತರದ ಏಣಿಗಳನ್ನು ಬಳಸಿ ರಕ್ಷಿಸಿದ್ದರು’ ಕಾರ್ತಿಕ್ ಅದಕ್ಕೆ ಪ್ರತಿಕ್ರಿಯಿಸಿದರು.

‘ಹೌದು ನೀವು ಅವರನ್ನ ಕರೆಯಬಹುದು’  ಬಡಾವಣೆಯ ಸಂಘದ ಸಹಕಾರ್ಯದರ್ಶಿ ರಾಘವೇಂದ್ರ ಕಾಮತ್  ಸೂಚಿಸಿದರು. ‘ಹೌದು’ ಇದು ಈಗಲ್ ಮರಿ’ ಎಂದೂ ಹಕ್ಕಿಯ ಚಿತ್ರವನ್ನು ಹಿರಿದುಗೊಳಿಸಿ ಅವರು ವಿವರಿಸಿದರು.

‘ಹತ್ತಿರದಲ್ಲೇ ಪ್ರಾಣಿ ರಕ್ಷಣಾ ಕೇಂದ್ರದವರಿದ್ದಾರೆಯೇ ಎಂದು ನೀವು ಪರಿಶೀಲಿಸಬಹುದು. ಅವರು ನೆರವು ನೀಡಬಹುದು’ ಎಂದು ಸೂಚನೆ ಸೈಯದ್ ವಾಸೀಮ್ ಅವರಿಂದ ಬಂತು. ಹಕ್ಕಿ ಸಂರಕ್ಷಣಾ ಕೇಂದ್ರದ ನಂಬರ್ 944964222 ಇದನ್ನೂ ಅವರು ನಮೂದಿಸಿದರು.  ‘ಸಂಪರ್ಕಿಸಲು ಯತ್ನಿಸುತ್ತಿದ್ದೇನೆ ಬಿಜಿ ಬರುತ್ತಿದೆ’ ಎಂದು ವಾಸೀಮ್ ಬರೆದರು.

‘ಬೆಸ್ಕಾಮ್ ಅಥವಾ ಬಿಬಿಎಂಪಿಯವರನ್ನು ಕರೆಯಿರಿ. ಅವರ ಬಳಿಯೂ  ದೊಡ್ಡ ದೊಡ್ಡ ಏಣಿಗಳಿವೆ. ಅವರು ನೆರವಾಗಬಹುದು’ ಎಂದರು ಮಂಜುಳಾ.

‘ಅವರನ್ನು ಕೂಡಾ ಕರೆಯಲು ಯತ್ನಿಸುತ್ತೇನೆ’ ಉತ್ತಿಸಿದರು ವಾಸೀಮ್. ‘ಪೀಪಲ್ ಫಾರ್ ಎನಿಮಲ್ಸ್’ನವರನ್ನು ಕರೆಯಿರಿ. ಇದು ಅವರ ನಂಬರ್  9900025370. ನಾನು ಈಗಷ್ಟೇ  ಅವರ ಬಳಿ ಮಾತನಾಡಿದೆ. ಅವರಿಗೆ ಲೊಕೇಷನ್ ಮತ್ತು ವಿಡಿಯೋ ಬೇಕಂತೆ’ ಸುಧೀರ್ ತಮ್ಮ ಸಂದೇಶವನ್ನು ಪ್ರಕಟಿಸಿದರು.


‘ಹಿಂದೊಮ್ಮೆ ಕಾಗೆ ಮರಿಯೊಂದು ಈ ಬಡಾವಣೆಯ 3ನೇ ಕ್ರಾಸಿನಲ್ಲಿ ಹೀಗೆ ಸಿಕ್ಕಿ ಹಾಕಿಕೊಂಡಿತ್ತು. ನಾನು ಅದನ್ನು ಉದ್ದವಾದ ಕೋಲಿನ ನೆರವಿನಿಂದ ಬಿಡಿಸಿದ್ದೆ’ ಮಧು ನಾಯರ್ ಅವರಿಗೆ ಹಿಂದಿನ ಘಟನೆ ನೆನಪಾಯಿತು.

‘ಇದು ಪೀಪಲ್ ಫಾರ್ ಎನಿಮಲ್ಸ್’ನವರ  ಸ್ಥಿರ ದೂರವಾಣಿ ಸಂಖ್ಯೆ ‘080-28611986’ ಇದಕ್ಕೂ ಕರೆ ಮಾಡಿ’ ಸುಧೀರ್ ಮತ್ತೆ ಸೂಚಿಸಿದರು.

‘ಈಗಾಗಲೇ ತಿಳಿಸಿ ಆಗಿದೆ. ಅವರು ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡು ಬರುತ್ತಾರಂತೆ. ಆದರೆ ಅದು ತಡವಾಗಬಹುದೇನೋ?’ ನಾನು ಗಾಳಿಪಟದ ನೂಲನ್ನು ಕತ್ತರಿಸಿದೆ. ಆದರೆ ನೂಲು ರೆಕ್ಕೆಗಳಿಗೆ ಸುತ್ತಿಕೊಂಡು ಕೊಂಬೆಗೆ ಸಿಕ್ಕಿ ಹಾಕಿಕೊಂಡಿದೆ’ ರಾಘವೇಂದ್ರ ಕಾಮತ್ ಆತಂಕ ವ್ಯಕ್ತ ಪಡಿಸಿದರು. ‘ಹೌದಾ’ ಮಧು ನಾಯರ್ ಅವರಿಂದ  ಅಸಹಾಯಕತೆಯ  ಭಾವ ವ್ಯಕ್ತವಾಯಿತು.

‘ಉದಯಶಂಕರ್ ಅವರು ಬೀದಿ ದೀಪ ಸರಿ ಪಡಿಸುವವರನ್ನು ಕರೆದಿದ್ದಾರೆ. ಬಹುಶ ಅವರು ನೆರವಿಗೆ ಬರಬಹುದುರಾಘವೇಂದ್ರ ಕಾಮತ್ ಆಶಾಭಾವನೆ ವ್ಯಕ್ತ ಪಡಿಸಿದರು.

‘ಇದು ಹೊರಮಾವು ಘಟಕದ ನಂಬರ್ 9449642222’ ಸುಧೀರ್ ಇನ್ನೊಂದು ಮೊಬೈಲ್ ನಂಬರ್  ನೀಡಿದರು.


‘ನಾನೂ ಪ್ರಯತ್ನಿಸಿದೆ. ನಾವು ಕೊಂಬೆ ಕಡಿಯಬೇಕಾಗಬಹುದು. ಆದರೆ ಅದು ತುಂಬಾ ಎತ್ತರದಲ್ಲಿದೆ. ಅಲ್ಲಿಗೆ ಏರುವುದು ಕಷ್ಟ. ಮೇಲಿನ ಯಾವುದಾದರೂ ತಂಡ ಬರಬಹುದು ಎಂದು ಆಶಿಸೋಣ’ ಮಧು ನಾಯರ್  ಆಸೆ. ‘ಹಕ್ಕಿಈಗ ಸದ್ದಿಲ್ಲದೆ ನೇತಾಡುತ್ತಿದೆ. ಹೀಗೆ ಸದ್ದಿಲ್ಲದೆ ನೇತಾಡುತ್ತಿದ್ದರೆ, ಸ್ವಲ್ಪ  ತಡವಾದರೂ ಅದಕ್ಕೆ ಹಾನಿ ಆಗದೇ ಇರಬಹುದು  ನಾಯರ್ ಸಂದೇಶಕ್ಕೆ  ಸ್ವಲ್ಪ ನಿರಾಳತೆಯ ವಾಕ್ಯ ಸೇರಿತ್ತು.

‘ಈಗ ಬರಬಹುದು. ನನಗೆ ಉದ್ದವಾದ ಪೈಪ್ ಸಿಕ್ಕಿದೆ’ ನಾಯರ್, ಕಾಮತ್ ಸಂದೇಶಕ್ಕೆ  ಸಂಘದ ಆಂತರಿಕ ಲೆಕ್ಕ ಪರಿಶೋಧಕ ಮೊಹ್ಸಿನ್  ಪ್ರತಿಕ್ರಿಯಿಸಿದರು.

 ‘ಪ್ರಯತ್ನಿಸಿದೆ, ಅದೂ ಸಾಲುತ್ತಿಲ್ಲ’ ಮೊಹ್ಸಿನ್ ನಿರಾಶೆ.

‘ಇರಲಿ, ಹೇಗಿದ್ದರೂ ಅವರು ಬರುತ್ತಿದ್ದಾರಲ್ಲ. ಕಾಯೋಣ’ ಮಧು ನಾಯರ್.

ಗಂಟೆ 11.31 ಆಗಿತ್ತು. ಹಕ್ಕಿ ಸಿಕ್ಕಿ ಹಾಕಿಕೊಂಡು ಅದಾಗಲೇ ಸುಮಾರು 2 ಗಂಟೆಗಳಾಗಿತ್ತು. ಹಕ್ಕಿಯಿಂದ ಯಾವ ಸದ್ದೂ ಇರಲಿಲ್ಲ.

‘ಓಹ್ ಬಂದರು’ ಮೊಹ್ಸಿನ್ ಖುಷಿಯ ಸಂದೇಶ. ಮಧು ನಾಯರ್ ಅವರಿಂದಲೂ ಖುಷಿಯ ಸಂಕೇತ.


ಬೆಳಗ್ಗೆ 11.31ರಿಂದ 11.51ರವರೆಗೆ  ಸ್ಮಶಾನ ಮೌನ. ಹಕ್ಕಿಗೆ ಏನಾಗಿದೆಯೋ ಏನೋ ಎಂಬ ಆತಂಕ.

ಸುಮಾರು 20  ನಿಮಿಷಗಳ ಬಳಿಕ ರಾಘವೇಂದ್ರ ಕಾಮತ್ ಸಂದೇಶ  ಪ್ರಕಟವಾಯಿತು: ‘ಹಕ್ಕಿಯ ರಕ್ಷಣೆಯಾಯಿತು. ಧನ್ಯವಾದಗಳು ಎಆರ್ ಆರ್ ಸಿ  ಹಕ್ಕಿ ರಕ್ಷಣಾ ತಂಡಕ್ಕೆ’

ಸಂದೇಶದ ಜೊತೆಗೆ ಎಆರ್ ಆರ್ ಸಿ ತಂಡದ ಕಾರು, ಏಣಿ, ನೂಲಿನ ಜೊತೆಗೆ ತಂಡದ ಕಾರ್ಯಾಚರಣೆಯ ವಿಡಿಯೋವನ್ನೂ ಕಾಮತ್  ಸಂದೇಶ ಹಂಚಿಕೊಂಡಿತ್ತು.

‘ಓಹ್. ನಿಮಗೆ ಇಡೀ ತಂಡಕ್ಕೆ ಧನ್ಯವಾದಗಳು’ ಆರೋನ್  ಕೃತಜ್ಞತೆ ಸಲ್ಲಿಸಿದರು. ‘ ಎಆರ್ ಆರ್ ಸಿ ತಂಡಕ್ಕೆ ಧನ್ಯವಾದಗಳು’ ಸೈಯದ್ ವಾಸೀಮ್  ಸಂದೇಶ  ಅದಕ್ಕೆ ಜೋಡಿಯಾಯಿತು. ಮಂಜುಳಾ, ಮಧು ನಾಯರ್  ಅವರಿಂದಲೂ ಖುಷಿಯ ಸಂದೇಶ ಹೊರ ಹೊಮ್ಮಿತು.

‘ಎಆರ್ ಆರ್ ಸಿ ತಂಡದಿಂದ ಅತ್ಯಂತ ಅದ್ಭತ ಕೆಲಸ. ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ’-ಇಡೀ ಬಡಾವಣೆಯ ಪರವಾಗಿ ತಮ್ಮ ಕೃತಜ್ಞತೆ ಸಲ್ಲಿಸಿದರು ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್. ‘ಉತ್ತಮ ಕೆಲಸ’  ಎಂದು ದನಿ ಗೂಡಿಸಿದರು ವಿಕಾಸ್ ವರ್ಮಾ.

ಸುಮಾರು ಎರಡು ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಪುಟ್ಟ ಹಕ್ಕಿ ಮರಿ ಕಡೆಗೂ ಸ್ವಚ್ಚಂದವಾಗಿ ಬಾನಿನಲ್ಲಿ ಹಾರಿತ್ತು. ಗಾಳಿಪಟದ  ನೂಲು ಎಂಬ ‘ಮೃತ್ಯು ಪಾಶ’ದಿಂದ ಪಾರಾಗಿತ್ತು.

ಹಾಗಾದರೆ ಎ ಆರ್ ಆರ್ ಸಿ ತಂಡದವರು ಮಾಡಿದ್ದೇನು?

ಈ ಪುಟ್ಟ ವಿಡಿಯೋ ನೋಡಿ:





-ನೆತ್ರಕೆರೆ ಉದಯಶಂಕರ