ಗೌತಮ್ ಅದಾನಿ, ಸೋದರಳಿಯ ವಿರುದ್ಧ ಯಾವುದೇ ಲಂಚ ಆರೋಪಗಳಿಲ್ಲ
ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಹಿರಿಯ ಕಾರ್ಯನಿರ್ವಾಹಕ ವನೀತ್ ಜೈನ್ ಅವರು ಲಂಚದ ಆರೋಪಗಳಿಂದ ಮುಕ್ತರಾಗಿದ್ದಾರೆ ಎಂದು ಅದಾನಿ ಗ್ರೂಪ್ ಇಂದು (೨೦೨೪ ನವೆಂಬರ್ ೨೭ ಬುಧವಾರ) ಹೇಳಿದೆ.
ಅದಾನಿ ಸಮೂಹದ ಅಡಿಯಲ್ಲಿರುವ ಅದಾನಿ ಗ್ರೀನ್ ಸಂಸ್ಥೆಯು ತನ್ನ ಇತ್ತೀಚಿನ ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಈ ಕುರಿತು ವಿವರ ನೀಡಿದ್ದು, ಮಾಧ್ಯಮ ವರದಿಗಳನ್ನು "ತಪ್ಪು" ಎಂದು ಕರೆದಿದೆ.
ಅದಾನಿ ಗ್ರೂಪ್ ವಿರುದ್ಧದ ಆರೋಪಗಳಲ್ಲಿನ ರಂಧ್ರಗಳನ್ನು ಎಂದು ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಗುರುತಿಸಿದ್ದಾರೆ.
ಸಮೂಹದ ಸಂಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು US ನಲ್ಲಿ ಲಂಚ ಅಥವಾ ನ್ಯಾಯಕ್ಕೆ ಅಡ್ಡಿಪಡಿಸಿದ ಆರೋಪವನ್ನು ಹೊಂದಿಲ್ಲ. ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆಯ ಕುರಿತ ವರದಿಗಳು ತಪ್ಪಾಗಿವೆ ಎಂದು ರೋಹ್ಟಗಿ ಹೇಳಿದ್ದಾರೆ.
ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಮೊದಲಿಗೇ ಹೇಳಿಬಿಡುತ್ತೇನೆ. ಇದು ನನ್ನ ವೈಯಕ್ತಿಕ ಕಾನೂನು ದೃಷ್ಟಿಕೋನ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾನು ಅದಾನಿ ಸಮೂಹದ ವಕ್ತಾರನಲ್ಲ. ನಾನು ವಕೀಲ. ನಾನು ಹಲವಾರು ಪ್ರಕರಣಗಳಲ್ಲಿ ಅದಾನಿ ಸಮೂಹದ ಪರವಾಗಿ ಹಾಜರಾಗಿದ್ದೇನೆ. ದೋಷಾರೋಪಣೆಯನ್ನು ನಾನು ಪರಿಶೀಲಿಸಿದ್ದೇನೆ.
US ನ್ಯಾಯಾಲಯದ ದೋಷಾರೋಪಣೆಯಲ್ಲಿ ಮೊದಲ ಮತ್ತು ೫ನೇ ಆಪಾದನೆ ಇತರವುಗಳಿಗಿಂತ ಹೆಚ್ಚು ಮುಖ್ಯವಾದುದು ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ದೋಷಾರೋಪ ಪಟ್ಟಿಯು ಕೆಲವು ಅಧಿಕಾರಿಗಳು ಮತ್ತು ವಿದೇಶೀ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದೆ. ಅದರಲ್ಲಿ ಅದಾನಿ ಮತ್ತು ಸೋದರಳಿಯನ ಹೆಸರಿಲ್ಲ ಎಂದು ಹಿರಿಯ ವಕೀಲರು ಹೇಳಿದರು.
ಯುಎಸ್ ನ್ಯಾಯಾಂಗ ಇಲಾಖೆಯ ದೋಷಾರೋಪಣೆ
ಪಟ್ಟಿಯು ಲಂಚಗಳ ಕುರಿತು ನಡೆಸಲಾದ ಚರ್ಚೆಗಳು ಅಥವಾ ಭರವಸೆಗಳ ಪ್ರತಿಪಾದನೆಗಳನ್ನು ಮಾತ್ರ ಆಧರಿಸಿದೆ.
ಅದು ಭಾರತ ಸರ್ಕಾರದ ಅಧಿಕಾರಿಗಳು ಅದನಿ ಕಾರ್ಯ ನಿರ್ವಾಹಕರಿಂದ ಪಡೆದ ಲಂಚಕ್ಕೆ ಯಾವುದೇ ಸಾಕ್ಷ್ಯಾಧಾರವನ್ನೂ
ನೀಡಿಲ್ಲ ಎಂದು ಸಮೂಹ ಹೇಳಿದೆ.
ದೋಷಾರೋಪ ಪಟ್ಟಿಯಲ್ಲಿ ಯಾರಿಗೆ ಲಂಚ
ನೀಡಲಾಗಿದೆ ಎಂಬ ಯಾವುದೇ ವಿವರ ಕೂಡಾ ಇಲ್ಲ ಎಂದು ವಕೀಲ ರೋಹ್ಟಗಿ ನುಡಿದರು.
ಕಾಂಗ್ರೆಸಿನಿಂದ ʼಅತಿರಂಜಿತʼ
ಈ ಮಧ್ಯೆ, ಹಿರಿಯ ವಕೀಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಹೇಶ ಜೇಠ್ಮಲಾನಿ ಅವರು ʼಅಮೆರಿಕದಲ್ಲಿ ಅದನಿ ಸಮೂಹದ ವಿರುದ್ಧ ಮಾಡಲಾಗಿರುವ ದೋಷಾರೋಪ ಪಟ್ಟಿಯ ವಿಷಯವನ್ನು ಸ್ಪಷ್ಟವಾದ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ʼಅತಿರಂಜಿತʼಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಸಂಸದೀಯ ತನಿಖೆಗಾಗಿ ಒತ್ತಾಯಿಸುವ ಮುನ್ನ ವಿರೋಧ ಪಕ್ಷವು ವಿಶ್ವಾಸಾರ್ಹ ಸಾಕ್ಷ್ಯವನ್ನುನೀಡಲೇಬೇಕು ಎಂದು ಅವರು ಹೇಳಿದ್ದಾರೆ.
ಭಾರತದ ಆರ್ಥಿಕ ಉನ್ನತಿಯನ್ನು ಅಸ್ಥಿರಗೊಳಿಸಲು ಅಮೆರಿಕದ ನ್ಯಾಯಾಲಯಗಳನ್ನು “ಆಳವಾದ ಪ್ರಜಾಪ್ರಭುತ್ವ ರಾಷ್ಟ್ರʼ ಶಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದೂ ಅವರ ಟೀಕಿಸಿದ್ದಾರೆ.
ಮಹೇಶ ಜೇಠ್ಮಲಾನಿ ಅವರು ಪಿಟಿಐಗೆ ನೀಡಿದ ಅಭಿಪ್ರಾಯ ಟ್ವಿಟ್ಟರಿನಲ್ಲಿ (ಹಿಂದಿನ ಎಕ್ಸ್) ಪ್ರಕಟವಾಗಿದೆ.
ಮಹೇಶ ಜೇಠ್ಮಲಾನಿ ಅಭಿಪ್ರಾಯ ಕೇಳಲು ಈ ಕೊಂಡಿಯನ್ನು ಕ್ಲಿಕ್ ಮಾಡಿ:
https://twitter.com/i/status/1861660163272282118
No comments:
Post a Comment