Showing posts with label Education. Show all posts
Showing posts with label Education. Show all posts

Saturday, August 1, 2026

PARYAYA: ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

 ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ

ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದರೆ, ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಈ ವಿಡಿಯೋ ಡಿಜಿಟಲ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ 'ಡೀಪ್ ಫೇಕ್' (Deepfake) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB), 2026 ಆಗಸ್ಟ್‌ 01ರ ಶನಿವಾರ ಸ್ಪಷ್ಟಪಡಿಸಿದೆ.

1. ಪ್ರಧಾನಿ ಮೋದಿಯವರ ಹೆಸರಿನಲ್ಲಿದ್ದ ವಿಡಿಯೋ ಸಂಪೂರ್ಣ ನಕಲಿ

PIB ಫ್ಯಾಕ್ಟ್-ಚೆಕ್ ಘಟಕವು ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತಿರುಚಲಾಗಿದೆ ಎಂದು ತಿಳಿಸಿದೆ.

  • ವಿದ್ಯಾರ್ಥಿ ಪ್ರತಿಭಟನಾಕಾರರ ಕುರಿತು ಪ್ರಧಾನಿಯವರು ಇಂತಹ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
  • ಈ ನಕಲಿ ವಿಡಿಯೋವನ್ನು ಪಾಕಿಸ್ತಾನ ಮೂಲದ ಪ್ರೊಪಗಾಂಡಾ (ಪ್ರಚಾರ) ಖಾತೆಗಳ ಮೂಲಕ ಭಾರತದಲ್ಲಿ ಗೊಂದಲ ಸೃಷ್ಟಿಸಲು ಹರಡಲಾಗುತ್ತಿದೆ ಎಂದು PIB ಬಹಿರಂಗಪಡಿಸಿದೆ.

ಸಾರ್ವಜನಿಕರು ಅಸಲಿ ಮತ್ತು ನಕಲಿ ವಿಡಿಯೋದ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಲು PIB ಅಸಲಿ ವಿಡಿಯೋದ ಲಿಂಕ್ ಅನ್ನು (PIB Fact Check (@PIBFactCheck) / X ) ಸಹ ಹಂಚಿಕೊಂಡಿದೆ.

ಪಿಐಬಿ ಪ್ರಕಟಿಸಿರುವ ವಿಡಿಯೋ ಕೆಳಗಿದೆ.

2. ದೆಹಲಿ ಡಿಸಿಪಿ ರಾಜೀನಾಮೆ ನೀಡಿದರೆಂಬ ಸುದ್ದಿಯೂ ಸುಳ್ಳು!

ಇಷ್ಟೇ ಅಲ್ಲದೆ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ CJP ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒತ್ತಡ ಹೇರುತ್ತಿದ್ದರಿಂದ ದೆಹಲಿ ಪೊಲೀಸ್ ಡಿಸಿಪಿ ಸುಮಿತ್ ಝಾ ರಾಜೀನಾಮೆ ನೀಡಿದ್ದಾರೆ ಎಂಬ ಮತ್ತೊಂದು ವಿಡಿಯೋ ವೈರಲ್ ಆಗಿತ್ತು.

ಆದರೆ 'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (PTI) ನಡೆಸಿದ ತನಿಖೆಯಲ್ಲಿ, ಡಿಸಿಪಿ ಸುಮಿತ್ ಝಾ ಅವರ ಹಳೆಯ ವಿಡಿಯೋ ಒಂದಕ್ಕೆ AI ಮೂಲಕ ಬೇರೆ ಧ್ವನಿಯನ್ನು (Audio) ಸೇರಿಸಿ ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ದೆಹಲಿ ಪೊಲೀಸರ ಅಧಿಕೃತ ಖಾತೆಯಲ್ಲಿದ್ದ ಈ ಅಸಲಿ ವಿಡಿಯೋದಲ್ಲಿ ಡಿಸಿಪಿ ಅವರು ಪಾಕಿಸ್ತಾನ ಮೂಲದ ಖಾತೆಗಳು ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರು.

3. ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ನಕಲಿ ಖಾತೆಗಳ ಗುರುತು

ದೆಹಲಿ ಪೊಲೀಸರ ಪ್ರಕಾರ, ಜಂತರ್ ಮಂತರ್ ಪ್ರತಿಭಟನೆಯ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷಪೂರಿತ ವಿಷಯಗಳನ್ನು ಹರಡಲು ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ಖಾತೆಗಳು ಸಕ್ರಿಯವಾಗಿದ್ದವು. ಈ ಹಿಂದೆ 'ಆಪರೇಷನ್ ಸಿಂಧೂರ್' ಸಮಯದಲ್ಲೂ ಇದೇ ಖಾತೆಗಳು ಸುಳ್ಳು ಸುದ್ದಿ ಹರಡಲು ಬಳಕೆಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದು, ಪ್ರಸ್ತುತ ಆ ಎಲ್ಲ ಖಾತೆಗಳನ್ನು ಬ್ಲಾಕ್ (Block) ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಸರ್ಕಾರದ ಮನವಿ

ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಪರಿಶೀಲಿಸದ ಯಾವುದೇ ವಿಡಿಯೋ ಅಥವಾ ಸುದ್ದಿಗಳನ್ನು ತಕ್ಷಣವೇ ನಂಬಬೇಡಿ ಮತ್ತು ಇಂತಹ ವಿಷಯಗಳಿಗೆ ಅಧಿಕೃತ ಸರ್ಕಾರಿ ಮೂಲಗಳನ್ನೇ ಆಶ್ರಯಿಸಿ ಎಂದು PIB ನಾಗರಿಕರಲ್ಲಿ ವಿನಂತಿ ಮಾಡಿದೆ.

ಸಂದೇಹಾಸ್ಪದ ಸುದ್ದಿಗಳನ್ನು ವರದಿ ಮಾಡಲು:

ಭಾರತ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಕಲಿ ಅಥವಾ ಸಂದೇಹಾಸ್ಪದ ವಿಷಯಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಗಿನ ವಿವರಗಳ ಮೂಲಕ PIB ಗೆ ದೂರು ನೀಡಬಹುದು:

  • ವಾಟ್ಸಾಪ್/ಫೋನ್ ಸಂಖ್ಯೆ: +91 8799711259
  • ಇಮೇಲ್: factcheck@pib.gov.in
PARYAYA: ಜಂತರ್ ಮಂತರ್ ಪ್ರತಿಭಟನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ:   ಜಂತರ್ ಮಂತರ್ ಪ್ರತಿಭಟ ನೆ: ಪ್ರಧಾನಿ ಹೆಸರಿನಲ್ಲಿ ನಕಲಿ ವಿಡಿಯೋ ನ ವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ...

Saturday, December 27, 2025

PARYAYA: ವಿಬಿ-ಜಿ ರಾಮ್‌ ಜಿ: ಗಾಂಧೀಜಿ ಆಶಯಕ್ಕೆ ಧಕ್ಕೆಯೇ?

ಭಾರತೀಯ ಸಂಸತ್ತು ೨೦೨೫ರ ಡಿಸೆಂಬರ್‌ ೧೮ರಂದು ನೂತನ ʼವಿಬಿ-ಜಿ ರಾಮ್‌ ಜಿʼ ಅಂದರೆ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ವಿಕಸಿತ ಭಾರತ್ ಗ್ಯಾರಂಟಿ ಉದ್ಯೋಗ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) ಕಾಯ್ದೆ ೨೦೨೫ ಇದನ್ನು ಹಿಂದಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಸ್ಥಾನಕ್ಕೆ ತರಲು ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ.

ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ ಅದು ಕಾಯ್ದೆಯಾಗಿ ದೇಶದಲ್ಲಿ ಜಾರಿಗೆ ಬಂದಿದೆ. ವಿರೋಧ ಪಕ್ಷಗಳು ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿ ಇದು ಮಹಾತ್ಮ ಗಾಂಧಿಯವರನ್ನು ಮತ್ತೊಮ್ಮೆ ಕೊಂದಿದೆ ಎಂದು ಕಟುವಾಗಿ ಟೀಕಿಸಿವೆ.

ಹಾಗಿದ್ದರೆ ವಾಸ್ತವಾಂಶ ಏನು? ಈ ಎರಡೂ ಕಾಯ್ದೆ ಅಥವಾ ಯೋಜನೆಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಬಹುದೇ? ನಿಜವಾಗಿಯೂ ʼವಿಬಿ-ಜಿ ರಾಮ್‌ ಜಿʼ ಕಾಯ್ದೆಯು ಮಹಾತ್ಮ ಗಾಂಧಿ ಆಶಯಗಳಿಗೆ ವಿರುದ್ಧವಾಗಿದೆಯೇ ಅಥವಾ ಮನರೇಗಾ ಇಟ್ಟಿದ್ದ ಹೆಜ್ಜೆಯನ್ನು ಇನ್ನೂ ಎತ್ತರದ ಸ್ತರಕ್ಕೆ ಒಯ್ಯುತ್ತಿದೆಯೇ? ಹೊಸ ಕಾಯ್ದೆಯ ವಿಧಿಗಳನ್ನು ಗಮನಿಸಿ, ವಿಶ್ಲೇಷಿಸಿ ನೋಡೋಣ ಬನ್ನಿ. (ಮುಂದಕ್ಕೆ ಓದಿ) ಅಥವಾ ಪರ್ಯಾಯ ವೆಬ್‌ ಸೈಟಿನ SPARDHA ಪುಟಕ್ಕೆ ಭೇಟಿ ಕೊಡಿ. 

Wednesday, November 6, 2024

PARYAYA: ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹ...

 ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹಿತ ನೆರವು

ವದೆಹಲಿ: ಪ್ರಧಾನಿ  ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ೨೦೨೪ ನವೆಂಬರ್‌ ೬ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ʼಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿʼ ಎಂಬ ಇನ್ನೋಂದು ಕೇಂದ್ರೀಯ ಯೋಜನೆಗೆ ಅನುಮೋದನೆ ನೀಡಿದೆ. ೨೦೨೦ರ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ರೂಪುಗೊಂಡಿರುವ ಈ ಯೋಜನೆಯು ಯಾರೇ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ಹಣಕಾಸು ಅಡಚಣೆ ರಹಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿ ಕೊಡುತ್ತದೆ.

ಸರ್ಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಈ ಯೋಜನೆ ಮೂಲಕ ಹಣಕಾಸಿನ ನೆರವು ಲಭ್ಯವಾಗಲಿದೆ.

ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಯಾರೇ ವಿದ್ಯಾರ್ಥಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಶಿಕ್ಷಣ ಶುಲ್ಕ ಮತ್ತು ಕೋರ್ಸಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರಿ ಗ್ಯಾರಂಟಿಯ ಸಾಲದ ಮೂಲಕ ಪಡೆಯಲು ಅರ್ಹತೆಯನ್ನು ಒದಗಿಸುತ್ತದೆ.

ಯೋಜನೆಯು ಅತ್ಯಂತ ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹೀ ವ್ಯವಸ್ಥೆಯಾಗಿರಲಿದ್ದು, ಸಂಪೂರ್ಣ ಡಿಜಿಟಲ್‌ ಮತ್ತು ಆಂತರಿಕವಾಗಿ ಕಾರ್ಯನಿರ್ವಹಿಸುವಂತೆ ಇರುತ್ತದೆ.

ಎನ್‌ ಐ ಆರ್‌ ಎಫ್‌ ಶ್ರೇಯಾಂಕದಿಂದ ನಿರ್ಧರಿಸಲ್ಪಟ್ಟ ರಾಷ್ಟ್ರದ ಉನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳೀಗೆ ಯೋಜನೆ ಅನ್ವಯಿಸುತ್ತದೆ. ಅಗ್ರ ೧೦೦ ಸ್ಥಾನಗಳ ಒಳಗೆ ಬರುವ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಯೋಜನೆಯ ಲಾಭ ವಿದ್ಯಾರ್ಥಿಗಳಿಗೆ ಸಿಗಲಿದೆ.

೧೦೦ರಿಂದ ೨೦೦ ಸ್ಥಾನಗಳ ಒಳಗೆ ಬರುವ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೂಡಾ ಈ ಯೋಜನೆ ಅನ್ವಯವಾಗಲಿದೆ. ಎನ್‌ ಐ ಆರ್‌ ಎಫ್‌ ಶ್ರೇಯಾಂಕವನ್ನು ಆಧರಿಸಿ ಈ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಪ್ರತಿವರ್ಷವೂ ನವೀಕರಿಸಲಾಗುತ್ತದೆ. ಮೊದಲಿಗೆ ೮೬೦ ಶಿಕ್ಷಣ ಸಂಸ್ಥೆಗಳಲ್ಲಿ ಆರಂಭವಾಗಲಿರುವ ಈ ಯೋಜನೆಯಿಂದ ೨೨ ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

₹ 7.5 ಲಕ್ಷದವರೆಗಿನ ಸಾಲದ ಮೊತ್ತಕ್ಕೆವಿದ್ಯಾರ್ಥಿಯು ಬಾಕಿ ಉಳಿದಿರುವ ಡೀಫಾಲ್ಟ್‌ನ 75% ರಷ್ಟು ಕ್ರೆಡಿಟ್ ಗ್ಯಾರಂಟಿಗೆ ಅರ್ಹರಾಗಿರುತ್ತಾರೆ. ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳು ಲಭ್ಯವಾಗುವಂತೆ ಬ್ಯಾಂಕ್‌ಗಳಿಗೆ ಬೆಂಬಲವನ್ನು ನೀಡುತ್ತದೆ.

ಮೇಲಿನವುಗಳ ಜೊತೆಗೆವಾರ್ಷಿಕ ₹ 8 ಲಕ್ಷದವರೆಗಿನ ಕುಟುಂಬದ ಆದಾಯವನ್ನು ಹೊಂದಿರುವ ಮತ್ತು ಯಾವುದೇ ಸರ್ಕಾರಿ ವಿದ್ಯಾರ್ಥಿವೇತನ ಅಥವಾ ಬಡ್ಡಿ ರಿಯಾಯಿತಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಲ್ಲದ ವಿದ್ಯಾರ್ಥಿಗಳಿಗೆ  ₹ 10 ಲಕ್ಷದವರೆಗಿನ ಸಾಲಕ್ಕೆ ಪ್ರತಿಶತ ಬಡ್ಡಿ ರಿಯಾಯಿತಿಯನ್ನು ಸಹ ಒದಗಿಸಲಾಗುತ್ತದೆ.

ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬಡ್ಡಿ ಸಹಾಯಧನ ನೀಡಲಾಗುವುದು. ಸರ್ಕಾರಿ ಸಂಸ್ಥೆಗಳಿಂದ ಬಂದಿರುವ ಮತ್ತು ತಾಂತ್ರಿಕ/ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. 2024-25 ರಿಂದ 2030-31ರ ಅವಧಿಯಲ್ಲಿ ₹ 3,600 ಕೋಟಿ ವೆಚ್ಚ ಮಾಡಲಿದ್ದುಈ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.

ಉನ್ನತ ಶಿಕ್ಷಣ ಇಲಾಖೆಯು "ಪಿಎಂ-ವಿದ್ಯಾಲಕ್ಷ್ಮಿ" ಎಂಬ ಏಕೀಕೃತ ಪೋರ್ಟಲ್ (https://www.vidyalakshmi.co.in/Students/) ಅನ್ನು ಹೊಂದಿದ್ದುಎಲ್ಲಾ ಬ್ಯಾಂಕ್‌ಗಳು ಬಳಸಲು ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ವ್ಯಾಲೆಟ್‌ಗಳ ಮೂಲಕ ಬಡ್ಡಿ ಉಪದಾನದ ಪಾವತಿಯನ್ನು ಮಾಡಲಾಗುತ್ತದೆ.

PARYAYA: ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹ...:   ಪಿಎಂ ವಿದ್ಯಾಲಕ್ಷ್ಮಿ: ಉನ್ನತ ವಿದ್ಯಾಭ್ಯಾಸಕ್ಕೆ ಅಡಚಣೆ ರಹಿತ ನೆರವು ನ ವದೆಹಲಿ: ಪ್ರಧಾನಿ  ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ೨೦೨೪ ನವೆಂಬರ್‌ ೬ರ ಬುಧವಾರ ನಡೆದ ಕೇಂ...