Showing posts with label consumer. Show all posts
Showing posts with label consumer. Show all posts

Saturday, July 5, 2025

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...

 ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ

ತಿರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯವು (ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ) ಒಂದು ಮಹತ್ವದ ಆದೇಶ ಹೊರಡಿಸಿದೆ. ಚಿಕಿತ್ಸೆಯಲ್ಲಿ ವಿಳಂಬವಾದುದನ್ನು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ ಸರ್ಕಾರಿ ವೈದ್ಯರೊಬ್ಬರ ತಂದೆಯ ಸಾವಿಗೆ ಕಾರಣರಾದುದಕ್ಕಾಗಿ ₹20 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವೈದ್ಯರೊಬ್ಬರಿಗೆ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ

ಈ ಪ್ರಕರಣವು 2022ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಸರ್ಕಾರಿ ವೈದ್ಯರ ತಂದೆ, 67 ವರ್ಷದವರಾಗಿದ್ದುಅವರಿಗೆ ಕ್ಷಯ ರೋಗಕ್ಕೆ ಚಿಕಿತ್ಸೆಯಾಗಿ 2022ರ ಜುಲೈನಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಆದ ಕೆಲವೇ ವಾರಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಆಗ ಅವರ ಮಗ 2022ರ ಆಗಸ್ಟ್ 8ರಂದು ರಕ್ತದ ಮಾದರಿಗಳನ್ನು ತಿರುವಾರೂರಿನ ಖಾಸಗಿ ಲ್ಯಾಬೋರೇಟರಿಗೆ ಕಳುಹಿಸಿದ್ದರು.

ಚಿಕಿತ್ಸೆಯಲ್ಲಿ ವಿಳಂಬ ಮತ್ತು ಸಾವು

ಪರೀಕ್ಷಾ ವರದಿಗಳಲ್ಲಿ ಅವರಿಗೆ ಕಾಮಾಲೆ (jaundice) ಇರುವುದು ದೃಢಪಟ್ಟಿತು. ಕೂಡಲೇ, 2022ರ ಆಗಸ್ಟ್ 9ರಂದು ಬೆಗ್ಗೆ ಸುಮಾರು 9:30ಕ್ಕೆ ತಿರುವಾರೂರಿನ ಕಮಲಾಲಯಂ ಟ್ಯಾಂಕ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದಾಖಲಾದ ನಂತರರೋಗಿಯ ರಕ್ತದ ಮಾದರಿಗಳನ್ನು ಮತ್ತೆ ಸಂಗ್ರಹಿಸಿ ಅದೇ ಲ್ಯಾಬೋರೇಟರಿಗೆ ಮಧ್ಯಾಹ್ನ 3:30ರ ವೇಳೆಗೆ ಕಳುಹಿಸಲಾಯಿತು.

ಈ ನಡುವೆರೋಗಿಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಖಾಸಗಿ ವೈದ್ಯರು ಆಗಸ್ಟ್ 9ರ ರಾತ್ರಿ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ತಕ್ಷಣ ತಿರುಚಿಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಸಲಹೆ ನೀಡಿದರು.

ರೋಗಿಯನ್ನು ತಕ್ಷಣ ತಿರುಚಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆದುರದೃಷ್ಟವಶಾತ್ ಆಗಸ್ಟ್ 14ರಂದು ಅವರು ಮೃತರಾದರು.

ಗ್ರಾಹಕ ನ್ಯಾಯಾಲಯದ ಮೊರೆ

ತಿರುವಾರೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ಆದ 'ವಿಳಂಬ'ದಿಂದ ಅಸಮಾಧಾನಗೊಂಡ ಸರ್ಕಾರಿ ವೈದ್ಯರುಈ ವರ್ಷದ ಜನವರಿಯಲ್ಲಿ ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಖಾಸಗಿ ವೈದ್ಯರ 'ಸೇವಾ ನ್ಯೂನತೆ'ಯಿಂದ ತಮಗೆ ಉಂಟಾದ ಮಾನಸಿಕ ತೊಂದರೆ ಮತ್ತು ಒತ್ತಡಕ್ಕೆ ಪರಿಹಾರ ನೀಡುವಂತೆ ಕೋರಿದರು.

ಗ್ರಾಹಕ ನ್ಯಾಯಾಲಯವು ಚೆನ್ನೈ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಹೆಪಟಾಲಜಿಸ್ಟ್‌ಗಳ (ಯಕೃತ್ ತಜ್ಞರು) ತಂಡದಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿತು. ತಜ್ಞರ ವರದಿಗಳು ಮತ್ತು 2022ರ ಆಗಸ್ಟ್‌ 14ರಂದು ರೋಗಿಯ ಮರಣಕ್ಕೆ ಕಾರಣವಾದ ಘಟನೆಗಳ ವಿವರಗಳನ್ನು ಪರಿಶೀಲಿಸಿದ ನಂತರಅಧ್ಯಕ್ಷರಾದ ಮೋಹನ್‌ದಾಸ್ ಮತ್ತು ಸದಸ್ಯರಾದ ಬಾಲು ನೇತೃತ್ವದ ನ್ಯಾಯಾಲಯವುಖಾಸಗಿ ವೈದ್ಯರಿಂದ 'ಸೇವಾ ನ್ಯೂನತೆಆಗಿದೆ ಎಂದು ತೀರ್ಮಾನಿಸಿತು.

ನ್ಯಾಯಾಲಯದ ಆದೇಶ

ಆದ್ದರಿಂದನ್ಯಾಯಾಲಯವು ಸರ್ಕಾರಿ ವೈದ್ಯರಿಗೆ ₹20 ಲಕ್ಷ ಪರಿಹಾರದ ಜೊತೆಗೆವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿ ಮಾಡುವಂತೆ ಖಾಸಗಿ ಆ ವೈದ್ಯರಿಗೆ ಆಜ್ಞಾಪಿಸಿತು. 

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...:   ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ ತಿ ರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ವು ( ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹ...

Tuesday, November 12, 2024

PARYAYA: 50 ಪೈಸೆಗೆ ದಂಡ 15,000 ರೂಪಾಯಿ!

 50 ಪೈಸೆಗೆ ದಂಡ 15,000 ರೂಪಾಯಿ!

ಕೇವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸದೇ, ಅದನ್ನು 'ರೌಂಡ್ ಆಫ್ಮಾಡಿದ್ದು ಇಂಡಿಯಾ ಪೋಸ್ಟ್‌ಗೆ ದುಬಾರಿಯಾಗಿ ಪರಿಣಮಿಸಿದೆ.

ಈ ಐವತ್ತು ಪೈಸೆಯನ್ನು 10,000 ರೂಪಾಯಿಗಳ ಪರಿಹಾರ ಮತ್ತು 5000 ರೂಪಾಯಿಗಳ ಖಟ್ಲೆ ವೆಚ್ಚ ಸೇರಿಸಿ ಪಾವತಿ ಮಾಡಿ ಎಂದು ಗ್ರಾಹಕ ನ್ಯಾಯಾಲಯವು ಅಂಚೆ ಇಲಾಖೆಗೆ ಆದೇಶ ನೀಡಿದೆ.

50 ಪೈಸೆ ಪಾವತಿ ಮಾಡದೆ ಅದನ್ನು ರೌಂಡ್‌ ಆಫ್‌ ಮಾಡಿದ್ದು ಅನ್ಯಾಯದ ವ್ಯಾಪಾರೀ ಅಭ್ಯಾಸ ಮತ್ತು ಸೇವಾಲೋಪ ಆಗುತ್ತದೆ ಎಂದು ಕಾಂಚೀಪುರಂ ಜಿಲ್ಲಾ ಗ್ರಾಹಕ ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ದೂರು ಕೊಟ್ಟವರು ಎ ಮಾನಶಾ. ಅವರು 2023ರ ಡಿಸೆಂಬರ್ 13ರಂದು ಕಾಂಚೀಪುರಂಗೆ ಸಮೀಪದ ಪೊಜಿಚಲೂರು ಅಂಚೆ ಕಛೇರಿಯಲ್ಲಿ ನೋಂದಾಯಿತ ಪತ್ರಕ್ಕಾಗಿ 30 ರೂಪಾಯಿ ನಗದು ಪಾವತಿಸಿದ್ದರು. ಆದರೆ ರಶೀದಿಯಲ್ಲಿ ಕೇವಲ 29.50 ರೂಪಾಯಿ ನಮೂದಿಸಲಾಗಿತ್ತು. ಯುಪಿಐ ಮೂಲಕ ನಿಖರವಾದ ಮೊತ್ತವನ್ನು ಪಾವತಿ ಮಾಡ್ತೇನೆ ಅಂತ ಅವರು ಹೇಳಿದರು. ಆದರೆ ʼತಾಂತ್ರಿಕ ಸಮಸ್ಯೆಗಳಿವೆ, ಅದು ಸಾಧ್ಯವಿಲ್ಲ. ಆದ್ದರಿಂದ 30 ರೂಪಾಯಿಗೆ ರೌಂಡ್‌ ಆಫ್‌ ಮಾಡಿದ್ದೇವೆʼ ಅಂತ ಸಿಬ್ಬಂದಿ ಉತ್ತರ ಕೊಟ್ಟರು.

ಮಾನಶಾ ಅವರಿಗೆ ಇದು ಸಣ್ಣ ಸಮಸ್ಯೆಯಲ್ಲ, ಗಹನವಾದ ಸಮಸ್ಯೆ ಅಂತ ಅನಿಸಿತು. ಪ್ರತಿನಿತ್ಯ ಲಕ್ಷಗಟ್ಟಲೆ ವಹಿವಾಟುಗಳು ನಡೆಯುತ್ತವೆ. ಅವುಗಳನ್ನು ಸರಿಯಾಗಿ ಲೆಕ್ಕ ಹಾಕದಿದ್ದರೆ ಸರ್ಕಾರಕ್ಕೆ, ಸಾರ್ವಜನಿಕರಿಗೆ ನಷ್ಟವಾಗುವುದರ ಸಹಿತ ಅನೇಕ ಪರಿಣಾಮಗಳಾಗುತ್ತವೆ ಅಂತ ಅವರು ಭಾವಿಸಿದರು.

ಈ ಪ್ರಕರಣವನ್ನು ಸುಮ್ಮನೇ ಬಿಡಬಾರದು ಎಂದುಕೊಂಡ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು.

ಗ್ರಾಹಕ ನ್ಯಾಯಾಲಯಕ್ಕೆ ಉತ್ತರ ನೀಡಿದ ಅಂಚೆ ಇಲಾಖೆ ತಾಂತ್ರಿಕ ಸಮಸ್ಯೆಗಳಿಂದಾಗಿ ಡಿಜಿಟಲ್ ಮೋಡ್ ಮೂಲಕ ಪಾವತಿಯನ್ನು ಪಡೆಯಲು ಆಗಲಿಲ್ಲ ಎಂದು ಹೇಳಿತು.

ಈ ಹೊತ್ತಿನಲ್ಲಿ ಗ್ರಾಹಕರಿಂದ ನಗದು ಸಂಗ್ರಹಿಸಲಾಗಿದೆ. ಅಲ್ಲದೆ, 50 ಪೈಸೆಗಳನ್ನು 'ಸಂಯೋಜಿತ ಅಂಚೆ ಸಾಫ್ಟ್‌ವೇರ್ನಲ್ಲಿ ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಾಗುತ್ತದೆ ಅಂದರೆ ರೌಂಡ್‌ ಆಫ್‌ ಮಾಡಲಾಗುತ್ತದೆ ಮತ್ತು ಅಂಚೆ ಖಾತೆಗಳಲ್ಲಿ ಸರಿಯಾಗಿ ಲೆಕ್ಕ ಹಾಕಲಾಗುತ್ತದೆ ಎಂದು ಅದು ಸಮಜಾಯಿಷಿ ನೀಡಿತು.

'ಸ್ವಯಂಚಾಲಿತವಾಗಿ ಪೂರ್ಣಗೊಳ್ಳುವ ಮೊತ್ತ' ಅಂದರೆ ರೌಂಡ್‌ ಆಫ್‌ ಮಾಡುವ ಮೊತ್ತವು 'ಕೌಂಟರ್ ಖಾತೆಗಳ ಸಲ್ಲಿಕೆ'ಯಲ್ಲಿ ಪ್ರತ್ಯೇಕವಾಗಿ ಪ್ರತಿಫಲಿಸುತ್ತದೆ. ಹೀಗಾಗಿ ಈ ದೂರು ಸ್ವೀಕಾರಕ್ಕೆ ಅರ್ಹವಲ್ಲʼ ಎಂದು ಅಂಚೆ ಇಲಾಖೆ ವಾದಿಸಿತು.

"50 ಪೈಸೆಗಿಂತ ಕಡಿಮೆ ಭಾಗದ ಮೊತ್ತವನ್ನು ಒಳಗೊಂಡಿರುವ ಮೊತ್ತಕ್ಕೆ, ವಸ್ತು/ ಪತ್ರವನ್ನು ಬುಕ್ ಮಾಡಿದ್ದರೆಭಿನ್ನರಾಶಿ ಮೊತ್ತವನ್ನು ಅಂದರೆ ಐವತ್ತು ಪೈಸೆಗಿಂತ ಕಡಿಮೆ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ ಮತ್ತು ಗ್ರಾಹಕರಿಂದ ಸಂಗ್ರಹಿಸಲಾಗುವುದಿಲ್ಲಅಂತಹ ಭಿನ್ನರಾಶಿ ಮೊತ್ತವನ್ನು ಪೂರ್ಣಗೊಳಿಸುವುದು ಒಟ್ಟು ಮೌಲ್ಯವನ್ನು ಅವಲಂಬಿಸಿರುತ್ತದೆ” ಎಂದೂ ಅಂಚೆ ಇಲಾಖೆ ಪ್ರತಿಪಾದನೆ ಮಾಡಿತು.

 ಉಭಯರ ವಾದವನ್ನು ಆಲಿಸಿದ ನಂತರಗ್ರಾಹಕ ನ್ಯಾಯಾಲಯವು ʼತಂತ್ರಾಂಶ ಸಮಸ್ಯೆಯಿಂದ ಅಥವಾ ಸಾಫ್ಟ್‌ವೇರ್ ಸಮಸ್ಯೆಯಿಂದ 50 ಪೈಸೆಯನ್ನು ಹೆಚ್ಚುವರಿಯಾಗಿ ಸಂಗ್ರಹಿಸಿರುವ ಅಂಚೆ ಕಚೇರಿಯ ಕ್ರಮವು ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಅನ್ಯಾಯದ ವ್ಯಾಪಾರ ಅಭ್ಯಾಸ ಆಗುತ್ತದೆʼ ಎಂದು ಅಭಿಪ್ರಾಯ ಪಟ್ಟಿತು.

ಹೀಗಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ದೂರುದಾರರಿಗೆ ಐವತ್ತು ಪೈಸೆ ಮರುಪಾವತಿ ಮಾಡಬೇಕು ಮತ್ತು ಮಾನಸಿಕ ಸಂಕಟಅನ್ಯಾಯದ ವ್ಯಾಪಾರ ಅಭ್ಯಾಸ ಮತ್ತು ಸೇವೆಯಲ್ಲಿನ ಕೊರತೆಗೆ ಪರಿಹಾರವಾಗಿ 10,000 ರೂಪಾಯಿಗಳನ್ನು ಈ ಆದೇಶ ಸ್ವೀಕರಿಸಿದ ದಿನದಿಂದ (ಸೆಪ್ಟೆಂಬರ್ 11, 2024ಎರಡು ತಿಂಗಳ ಒಳಗೆ ಪಾವತಿ ಮಾಡಬೇಕು ಅಂತ ಆದೇಶ ನೀಡಿತು. ಜೊತೆಗೆ ದೂರುದಾರರಿಗೆ 5,000 ರೂಪಾಯಿಗಳನ್ನು ಖಟ್ಲೆ ವೆಚ್ಚಕ್ಕಾಗಿಯೂ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತು.

ದೂರುದಾರರು ತಮ್ಮ ದೂರಿನಲ್ಲಿ ತಮಗೆ 50 ಪೈಸೆಯ ಬಾಕಿ ಹಣದ ಜೊತೆಗೆ 'ಮಾನಸಿಕ ಸಂಕಟ'ಕ್ಕೆ ರೂ 2.50 ಲಕ್ಷ ಪರಿಹಾರ ಮತ್ತು ಖಟ್ಲೆ ವೆಚ್ಚವಾಗಿ 10,000 ರೂಪಾಯಿ ಪಾವತಿಸಲು ನಿರ್ದೇಶನ ನೀಡಬೇಕು ಎಂದೂ ಕೋರಿದ್ದರು. ಈ ಕೋರಿಕೆಗೆ ಅರ್ಹತೆ ಇಲ್ಲ ಅಂತ ಹೇಳಿದ ಗ್ರಾಹಕ ನ್ಯಾಯಾಲಯ ಅದನ್ನು ತಳ್ಳಿ ಹಾಕಿತು.

-ನೆತ್ರಕೆರೆ ಉದಯಶಂಕರ

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಸಮುದ್ರದಲ್ಲಿ ಮುಳುಗಿದ ದೋಣಿ ಭಟ್ಕಳದಲ್ಲಿ ತೇಲಿತೇ?

ಅಪಘಾತ ಪರಿಹಾರ ಪಡೆಯಲು ಚಾಲನಾ ಲೈಸೆನ್ಸ್ ಬೇಕೇ?

ಚಿಟ್ ಫಂಡ್ ಹಣ ಪಡೆಯಲು ಬೇಕೆಷ್ಟು ಭದ್ರತೆ?

ಉಭಯರಿಗೂ ಚುಚ್ಚಿದ 'ಸೊಳ್ಳೆ ನಿವಾರಕ'..!

ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!

ಬೇಡದಿದ್ದರೂ ಸಾಲಕೊಟ್ಟ ಬ್ಯಾಂಕ್...!

ನಮೂದು ದರ ಒಂದುಮಾರುವ ದರ ಇನ್ನೊಂದು..!

ಮಂಜೂರು ಮಾಡಿದ ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕು..!

35 ರೂಪಾಯಿ ಚಿಪ್ಸ್ರೂ. 50,000 ಪರಿಹಾರ..! (ಗ್ರಾಹಕ ಜಾಗೃತಿ)

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Farmers Won The Battle

wake up Consumer

When your telephone rings till you fed up...!

Don't know homeopathy, prescribes allopathic medicine!

How to win in Consumer Court?

PARYAYA: 50 ಪೈಸೆಗೆ ದಂಡ 15,000 ರೂಪಾಯಿ!:   50 ಪೈಸೆ ಗೆ ದಂಡ 15,000 ರೂಪಾಯಿ! ಕೇ ವಲ 50 ಪೈಸೆ. ಕೊಡದಿದ್ದರೆ ಏನಾಗುತ್ತದೆ? ಅಂತ ನಿರ್ಲಕ್ಷಿಸುವವರು ಬಹಳ ಮಂದಿ. ಆದರೆ ಗ್ರಾಹಕರಿಗೆ 50 ಪೈಸೆಯನ್ನು ಹಿಂತಿರುಗಿಸ...

Monday, October 3, 2022

PARYAYA: ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ

 ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ

 ಬೆಂಗಳೂರು: ಮಹತ್ವದ ತೀರ್ಪೊಂದರಲ್ಲಿ ಗ್ರಾಹಕ ನ್ಯಾಯಾಲಯವು (ಗ್ರಾಹಕ ವೇದಿಕೆ) ಬಹುಶಃ ಇದೇ ಮೊದಲ ಬಾರಿಗೆ, ಮಾರಾಟಗಾರನು ಉತ್ಪನ್ನದ "ಮೂಲ ದೇಶ" ವನ್ನು ಉಲ್ಲೇಖಿಸದೇ ಇದ್ದುದಕ್ಕಾಗಿ ಇ-ಕಾಮರ್ಸ್ ವೇದಿಕೆಯನ್ನು ಹೊಣೆಗಾರರನ್ನಾಗಿ ಮಾಡಿ ತೀರ್ಪು ನೀಡಿದೆ. ಇಂತಹ ವರ್ತನೆ ಸೇವಾ ಲೋಪವಾಗುತ್ತದೆ ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.

ಗ್ರಾಹಕರ ರಕ್ಷಣೆ (ಇ-ಕಾಮರ್ಸ್ ನಿಯಮಗಳು) 2020 ರ ಅಡಿಯಲ್ಲಿಉತ್ಪನ್ನದ ಮೂಲ ದೇಶದ ಬಗ್ಗೆ ಮಾಹಿತಿಯನ್ನು ಒದಗಿಸಲು ಮಾರಾಟಗಾರನು ನಿರ್ಬಂಧಿತನಾಗಿರುತ್ತಾನೆ ಮತ್ತು ಇ-ಕಾಮರ್ಸ್ ಮಾರುಕಟ್ಟೆ ಸ್ಥಳವು ಅಗತ್ಯ ಮಾಹಿತಿಯನ್ನು ಪ್ರದರ್ಶಿಸುವುದನ್ನು ಖಚಿತಪಡಿಸಿಕೊಳ್ಳಬೇಕುಇದರಿಂದ ಗ್ರಾಹಕರು ತಿಳುವಳಿಕೆಯುಕ್ತ ಆಯ್ಕೆ ಮಾಡಿಕೊಳ್ಳಬಹುದು ಎಂದು ಶ್ರೀಮತಿ ಉಮಾ ವೆಂಕಟ ಸುಬ್ಬ ಲಕ್ಷ್ಮಿ (ಅಧ್ಯಕ್ಷರು)ಶ್ರೀಮತಿ ಸಿ ಲಕ್ಷ್ಮೀ ಪ್ರಸನ್ನ (ಸದಸ್ಯರು) ಮತ್ತು ಶ್ರೀಮತಿ ಮಾಧವಿ ಸಾಸನಕೋಟ (ಸದಸ್ಯರು) ಅವರನ್ನು ಒಳಗೊಂಡ ಹೈದರಾಬಾದಿನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸ್ಪಷ್ಟ ಪಡಿಸಿದೆ.

ಇ-ಕಾಮರ್ಸ್ ನಿಯಮಗಳ ಯಾವುದೇ ಉಲ್ಲಂಘನೆಯಾಗಿದ್ದರೆಇ-ಕಾಮರ್ಸ್ ಮಾರುಕಟ್ಟೆ ಸ್ಥಳವು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ಲಭ್ಯವಿರುವ "ಸುರಕ್ಷಿತ ಸ್ಥಳ" ವಿನಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು  ಆಯೋಗ ಹೇಳಿದೆ.

ಈ ಸೇವಾ ಲೋಪಕ್ಕಾಗಿಆಯೋಗವು ಪೇಟಿಎಂ (ಇ-ಕಾಮರ್ಸ್ ಮಾರುಕಟ್ಟೆ ಸ್ಥಳ) ಮತ್ತು ಯುನಿ ಒನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಮಾರಾಟಗಾರ) ಇಬ್ಬರನ್ನೂ ಹೊಣೆಗಾರರನ್ನಾಗಿ ಮಾಡಿತು ಮತ್ತು ಪ್ರಕರಣದ ದೂರುದಾರರಾದ ವಕೀಲ ಬಾಗ್ಲೇಕರ್ ಆಕಾಶ್ ಕುಮಾರ್ ಅವರಿಗೆ ರೂ.15,000 ಪರಿಹಾರವನ್ನು ನೀಡುವಂತೆ ಆದೇಶ ಮಾಡಿದೆ.

ಪ್ರಕರಣ ಏನು?

ಆಕಾಶ್ ಕುಮಾರ್ ಅವರು ಆಗಸ್ಟ್ 2020 ರಲ್ಲಿ ಪೇಟಿಎಂ (Paytm) ಮೂಲಕ 13,440 ರೂಪಾಯಿಗಳಿಗೆ ಖರೀದಿಸಿದ ಉಷಾ ಹೊಲಿಗೆ ಯಂತ್ರಕ್ಕೆ ಸಂಬಂಧಿಸಿದ ದೂರಿನ ಪ್ರಕರಣ ಇದು. ತಾವು ಆರ್ಡರ್‌ ಮಾಡಿದ್ದ ಉತ್ಪನ್ನವು ತಲುಪಿಸಿದಾಗದೂರುದಾರರಿಗೆ ಯಂತ್ರವು ಥೈಲ್ಯಾಂಡಿನಲ್ಲಿ ತಯಾರಿಸಲ್ಪಟ್ಟಿದೆ ಎಂಬುದು ತಿಳಿಯಿತು.

ಗ್ರಾಹಕ ಸಂರಕ್ಷಣಾ (ಇ-ಕಾಮರ್ಸ್) ನಿಯಮಗಳು, 2020 ರ ನಿಯಮ 6(5)(ಡಿ) ಅಡಿಯಲ್ಲಿ ಕಡ್ಡಾಯಗೊಳಿಸಿದ ಪ್ರಕಾರ ತಯಾರಕರು ಸೈಟ್‌ನಲ್ಲಿ ಮೂಲದ ದೇಶವನ್ನು ಪ್ರದರ್ಶಿಸಿರಲಿಲ್ಲ. ಯಾವುದೇ ಮಾಹಿತಿಯನ್ನು ನೀಡದ ಕಾರಣದೂರುದಾರರು ಉತ್ಪನ್ನವನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಭಾವಿಸಿದರು. ಆನ್‌ಲೈನ್ ಪೋರ್ಟಲ್‌ನಲ್ಲಿ ಮೂಲದ ದೇಶವನ್ನು ನಮೂದಿಸಿದ್ದರೆ ತಾನು ಹೊಲಿಗೆ ಯಂತ್ರವನ್ನು ಖರೀದಿಸುತ್ತಿರಲಿಲ್ಲ ಎಂದು ದೂರುದಾರರು ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದರು.

ದೂರನ್ನು ವಿರೋಧಿಸಿದ ಪೇಟಿಎಂ (Paytm)  ತಾನು ವಿಭಿನ್ನ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆಯನ್ನು ಒದಗಿಸುವ ಆನ್‌ಲೈನ್ ಮಾರುಕಟ್ಟೆ ಸ್ಥಳವಾಗಿದ್ದು, ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಮಾರಾಟ ವಹಿವಾಟುಗಳನ್ನು ಸುಗಮಗೊಳಿಸಲು ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ಪನ್ನದ ಮಾರಾಟದಲ್ಲಿ ಯಾವುದೇ ನೇರ ಪಾಲ್ಗೊಳ್ಳುವಿಕೆ ಹೊಂದಿಲ್ಲ ಎಂದು ವಾದಿಸಿತು.

ಸಂಬಂಧಪಟ್ಟ ಇತರ ಎಲ್ಲ ಮಾಹಿತಿಯನ್ನು ಒದಗಿಸಿದಾಗ ಕೇವಲ ಮೂಲದ ದೇಶಕ್ಕೆ ಸಂಬಂಧಿಸಿದ ಮಾಹಿತಿಯ ಲೋಪವು ಅಕ್ರಮ ವ್ಯಾಪಾರ ಅಭ್ಯಾಸಕ್ಕೆ ಸಮವಲ್ಲ ಎಂದು ತಯಾರಕರು ವಾದಿಸಿದರು. ತಯಾರಕರಿಂದ ಸ್ಪಷ್ಟೀಕರಣವನ್ನು ಪಡೆಯುವ ಆಯ್ಕೆಯನ್ನು ಹೊಂದಿರುವುದರಿಂದ ದೂರುದಾರನು ಊಹೆಯ ಮೇಲೆ ತನ್ನ ನಿರ್ಧಾರವನ್ನು ಆಧರಿಸಿರುವ ಅಗತ್ಯವಿಲ್ಲ ಎಂದು ಅದು ಅಹವಾಲು ಸಲ್ಲಿಸಿತು. ಉದ್ದೇಶಪೂರ್ವಕವಲ್ಲದ ಲೋಪದಿಂದಾಗಿ ದೂರುದಾರರಿಗೆ ಯಾವುದೇ ಹಾನಿನಷ್ಟಮಾನಸಿಕ ಯಾತನೆ ಅಥವಾ ಆಘಾತ ಉಂಟಾಗುವುದಿಲ್ಲ ಎಂದು ಅದು ಪ್ರತಿಪಾದಿಸಿತು.

ಆದರೆ, ಮೂಲದ ದೇಶವನ್ನು ಮರೆಮಾಚುವುದು ಮೋಸಗೊಳಿಸುವ ವ್ಯಾಪಾರೀ ಅಭ್ಯಾಸಕ್ಕೆ ಸಮ ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಭಿಪ್ರಾಯಪಟ್ಟಿತು.

 "ದೇಶದ ಮೂಲವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೆ ನಿರ್ದಿಷ್ಟ ಉತ್ಪನ್ನವನ್ನು ಖರೀದಿಸಲು ಗ್ರಾಹಕರನ್ನು ಪ್ರೇರೇಪಿಸುವುದನ್ನು ಇ-ಕಾಮರ್ಸ್ ನಿಯಮಗಳು 2020 ರ ಅಡಿಯಲ್ಲಿ ಒದಗಿಸಬೇಕಾದ ಕಡ್ಡಾಯ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಿಲ್ಲ ಎಂಬುದಾಗಿ  ಅರ್ಥೈಸಿಕೊಳ್ಳಬಹುದು" ಎಂದು ವೇದಿಕೆ ಅಭಿಪ್ರಾಯಪಟ್ಟಿತು.

"ಪ್ರಕರಣವು ಸಂಬಂಧಿತ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆಮಾರಾಟಗಾರನು ತನ್ನ ಪ್ಲಾಟ್‌ಫಾರ್ಮ್ ಅಥವಾ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಇ-ಕಾಮರ್ಸ್ ಘಟಕಕ್ಕೆ ಎಲ್ಲ ಮಾಹಿತಿಯನ್ನು ಒದಗಿಸಬೇಕು ಎಂದು ನಿರ್ದಿಷ್ಟಪಡಿಸುತ್ತದೆಅಂದರೆಉತ್ಪನ್ನದ ಮೂಲ ದೇಶದ ಮಾಹಿತಿ ಸೇರಿದಂತೆ ಖರೀದಿಯ ಪೂರ್ವ ಹಂತದಲ್ಲಿ ಗ್ರಾಹಕರು ತಿಳುವಳಿಕೆಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಮಾರಾಟಕ್ಕೆ ನೀಡಲಾಗುವ ಸರಕುಗಳು ಮತ್ತು ಸೇವೆಗಳ ಬಗ್ಗೆ ಅಗತ್ಯವಿರುವ ಎಲ್ಲ ಸಂಬಂಧಿತ ವಿವರಗಳನ್ನು ಮಾರಾಟಗಾರ ಕಡ್ಡಾಯವಾಗಿ ಒದಗಿಸಬೇಕು. ಕಡ್ಡಾಯ ಮಾಹಿತಿಯನ್ನು ಒದಗಿಸದಿರುವುದು ಗ್ರಾಹಕರ ಆಯ್ಕೆಯನ್ನು ವಿರೂಪಗೊಳಿಸುವ ಮೋಸಗೊಳಿಸುವ ಅಭ್ಯಾಸವಾಗುತ್ತದೆ" ಎಂದು ವೇದಿಕೆ ಸ್ಪಷ್ಟ ಪಡಿಸಿತು.

ಕಡ್ಡಾಯ ಮಾಹಿತಿ ಒದಗಿಸದೇ ಇರುವ ಮಾರಾಟಗಾರರ ನಿರ್ಲಕ್ಷ್ಯ ವರ್ತನೆಗೆ ಇ-ಕಾಮರ್ಸ್ ಘಟಕವು ಜವಾಬ್ದಾರವಾಗಿದೆ ಎಂದೂ ಆಯೋಗ ಹೇಳಿತು.

ಈ ಹಿನ್ನೆಲೆಯಲ್ಲಿ, ಗ್ರಾಹಕರ ವೇದಿಕೆಯು ಪೇಟಿಎಂನ (Paytm) ವಾದಗಳನ್ನು ತಿರಸ್ಕರಿಸಿತು.

"ಆನ್‌ಲೈನ್ ವ್ಯಾಪಾರಿಗಳ ಹೊಣೆಗಾರಿಕೆಯಲ್ಲಿ ಮಾದರಿ ಬದಲಾವಣೆಯಾಗಿದೆಅವರು ಇಲ್ಲಿಯವರೆಗೆ ಮುಖ್ಯವಾಗಿ ಮಧ್ಯವರ್ತಿಗಳ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ". ಇ-ಕಾಮರ್ಸ್ ನಿಯಮಗಳು ಜಾರಿಗೆ ಬರುವುದರೊಂದಿಗೆಗ್ರಾಹಕರಿಗೆ ಮಾರಾಟಗಾರರಿಂದ ಉಂಟಾದ ಹಾನಿಗೆ ಆನ್‌ಲೈನ್ ವ್ಯಾಪಾರಿಗಳು ನೇರವಾಗಿ ಮತ್ತು ಜವಾಬ್ದಾರಿಯುತವಾಗಿ ಹೊಣೆಗಾರರಾಗುತ್ತಾರೆ. ಮಾರಾಟಗಾರರಿಂದ ನಿರ್ಲಕ್ಷ್ಯದ ನಡವಳಿಕೆಯ ಸಂದರ್ಭಗಳಲ್ಲಿ ಸಹಅಂತಿಮ ಗ್ರಾಹಕರು ಯಾವುದೇ ನಷ್ಟವನ್ನು ಅನುಭವಿಸಿದರೆಹೊಣೆಗಾರಿಕೆಯ ಜವಾಬ್ದಾರಿಯು ಇ-ಕಾಮರ್ಸ್ ಘಟಕದ ಮೇಲೆ ಬೀಳುತ್ತದೆ ಎಂಬುದನ್ನು ಇದು ಸೂಚಿಸುತ್ತದೆ” ಎಂದು ಆಯೋಗ ಹೇಳಿತು.

"ಇ-ಕಾಮರ್ಸ್ ನಿಯಮಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಇ-ಕಾಮರ್ಸ್ ಘಟಕಗಳ ದೋಷಪೂರಿತ ಹೊಣೆಗಾರಿಕೆಯನ್ನು ನಿರ್ದಿಷ್ಟವಾಗಿ ವಿವರಿಸುತ್ತದೆ. ತಮ್ಮನ್ನು ತಾವು ಕೇವಲ ಮಧ್ಯವರ್ತಿಗಳಾಗಿ ಪ್ರಸ್ತುತಪಡಿಸುವ ಮೂಲಕ ಮತ್ತು ಐಟಿ ಕಾಯಿದೆಯ ಸೆಕ್ಷನ್ 79 ರ ಅಡಿಯಲ್ಲಿ ಹೊಣೆಗಾರಿಕೆ ವಿನಾಯಿತಿಯನ್ನು ಕೋರುವ ಮಾಡುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು” ಎಂದು ಆಯೋಗ ಹೇಳಿತು.

ಮಾರಾಟಕ್ಕೆ ನೀಡಲಾಗುವ  ಉತ್ಪನ್ನಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಂಡಾಗಮೂಲದ ದೇಶವನ್ನು ಉಲ್ಲೇಖಿಸದಿರುವುದು ಇ-ಕಾಮರ್ಸ್ ನಿಯಮಗಳ ಉಲ್ಲಂಘನೆಯಾಗಿದೆ ಎಂದೂ ಅದು ಹೇಳಿತು.

"ಇ-ಕಾಮರ್ಸ್ ವೆಬ್‌ಸೈಟ್‌ಗಳ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆಭಾರತದಲ್ಲಿ ಇ-ಕಾಮರ್ಸ್ ವ್ಯವಹಾರವು ಗ್ರಾಹಕರ ಶಾಪಿಂಗ್ ಅಭ್ಯಾಸಗಳಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿದೆ. ಗ್ರಾಹಕರು ಉತ್ಪನ್ನವನ್ನು ಖರೀದಿಸಲು ನಿರ್ಧರಿಸಿದಾಗಅವರು ಪ್ರಾಥಮಿಕವಾಗಿ ತಮ್ಮ ಉತ್ಪನ್ನದ ಜಾಹೀರಾತಿನಲ್ಲಿ ಕಂಪನಿಗಳು ಒದಗಿಸಿದ ಮಾಹಿತಿಯನ್ನು ಅವಲಂಬಿಸಿರುತ್ತಾರೆ. ಈ ಓಟವು ಅಗ್ರಸ್ಥಾನದಲ್ಲಿರಲು ಸುಳ್ಳು ಹಕ್ಕುಗಳ ದುಷ್ಕೃತ್ಯಗಳು ಮತ್ತು ಮರೆಮಾಚುವ ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹೆಚ್ಚಿಸಲು ಕಾರಣವಾಗಿದೆ. ಸದರಿ ಪ್ರಕರಣದಲ್ಲಿಉತ್ಪನ್ನದ ಮೇಲೆ ಮೂಲದ ದೇಶವನ್ನು ನಮೂದಿಸದಿರುವ ಕ್ರಿಯೆಯು ಸಂಬಂಧಿತ ಇ- ವಾಣಿಜ್ಯ ನಿಯಮಗಳ ಉಲ್ಲಂಘನೆಯಾಗಿದೆ.” ಎಂದು ವೇದಿಕೆ ತೀರ್ಪಿನಲ್ಲಿ ಹೇಳಿತು.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳನ್ನು ಅನುಸರಿಸಲು ಇ ಕಾಮರ್ಸ್‌ ವೇದಿಕೆ ಮತ್ತು ಮಾರಾಟಗಾರ ಇಬ್ಬರಿಗೂ ವೇದಿಕೆ ನಿರ್ದೇಶಿಸಿತು.

ಸೇವಾ ಲೋಪಕ್ಕಾಗಿ 15,000 ರೂಪಾಯಿಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡುವಂತೆ ಪೇಟಿಎಂ ಮತ್ತು ಮಾರಾಟಗಾರ ಸಂಸ್ಥೆಗೆ ಆಜ್ಞಾಪಿಸಿತು.

PARYAYA: ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ:   ಉತ್ಪನ್ನದ "ಮೂಲ ದೇಶ" ಉಲ್ಲೇಖಿಸದಿದ್ದರೆ ಸೇವಾ ಲೋಪ  ಬೆಂಗಳೂರು:   ಮಹತ್ವದ ತೀರ್ಪೊಂದರಲ್ಲಿ ಗ್ರಾಹಕ ನ್ಯಾಯಾಲಯವು (ಗ್ರಾಹಕ ವೇದಿಕೆ) ಬಹುಶಃ ಇದೇ ಮೊದಲ ಬ...

Monday, October 21, 2019

ರವಾನೆಯಲ್ಲಿ ಚೆಕ್ ಕಳೆದುಕೊಂಡ ಬ್ಯಾಂಕ್..!


ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಹಣ ವರ್ಗಾವಣೆಗೆ ಬ್ಯಾಂಕುಗಳಲ್ಲಿ  ಬಳಸುವ ಸುಲಭ ವಿಧಾನ ಚೆಕ್ ಇಲವೇ ಡಿಡಿ. ಬ್ಯಾಂಕಿಗೆ ಸ್ಲಲಿಸಲಾದ ಇಂತಹ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದರೆ ಹೊಣೆಗಾರರು ಯಾರು? ಗ್ರಾಹಕರು ಇಂತಹ ಸಂದರ್ಭದಲ್ಲಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯ್ಲಲಿ ಅವರಿಗೆ ಪರಿಹಾರ ದೊರೆಯುವುದೇ?

ಹೌದು. ಆದರೆ ಗ್ರಾಹಕ ಅಪೇಕ್ಷಿಸಿದಷ್ಟು ಪರಿಹಾರ ದೊರೆಯಬಹುದು ಎಂದೇನೂ ಇಲ್ಲ. ತಮ್ಮ ಮುಂದೆ ಬಂದ ಇಂತಹ ಪ್ರಕರಣದ್ಲಲಿ ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ಭಾಗಶಃ ಪರಿಹಾರ ನೀಡಿದ ಪ್ರಕರಣ ಇದು.

ಪ್ರಕರಣದ ಅರ್ಜಿದಾರರು: ಬೆಂಗಳೂರು ಹುಳಿಮಾವು ನಿವಾಸಿ ಎಸ್.ಸಿ.ಬಿ. ಪಾಟೀಲ್. ಪ್ರತಿವಾದಿ: ಶಾಖಾ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಳಿಮಾವು ಶಾಖೆ, ಬೆಂಗಳೂರು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನಲ್ಲಿ  ಚಾಲ್ತಿ ಖಾತೆಯೊಂದನ್ನು ೨೦೦೬ರ ಆಗಸ್ಟ್ ೨೮ರಂದು ತೆರೆದಿದ್ದರು. ೨೦೦೭ರ ಮಾರ್ಚ್ ೮ರಂದು ಅವರು ಖಾತೆಗೆ ೨೬,೦೦೦ ರೂಪಾಯಿಗಳ ಚೆಕ್ ಒಂದನ್ನು ನಗದೀಕರಣದ ಸಲುವಾಗಿ ಹಾಕಿದರು. ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇಂದಿರಾನಗರ ಶಾಖೆ, ಬೆಂಗಳೂರು ಇಲ್ಲಿನ ಚೆಕ್.

ಕೆಲವು ದಿನಗಳ ಬಳಿಕ ವಿಚಾರಿಸಿದಾಗ ಚೆಕ್ ನೀಡಿದಾತನ ಖಾತೆಯಲ್ಲಿ ಸಾಕಷ್ಟು ಹಣ ಇಲದ ಕಾರಣ ಚೆಕ್ ಪಾಸ್ ಆಗದೆ ವಾಪಸಾದುದು ಅರ್ಜಿದಾರರಿಗೆ ಗೊತ್ತಾಯಿತು. ಮಾಹಿತಿ ಲಭಿಸುವಷ್ಟರಲ್ಲಿ ಎರಡು ತಿಂಗಳುಗಳು ಕಳೆದುಹೋಗಿದ್ದವು. ಅವರು ತತ್ಕ್ಷಣವೇ ಚೆಕ್ ನೀಡಿದ್ದ ಅಶೋಕನ್ ಅವರನ್ನು ಸಂಪರ್ಕಿಸಿ ವಿಚಾರಿಸಿದರು. ಅಶೋಕನ್ ಅವರು ೧೩--೨೦೦೭ರಂದು ಅದೇ ಚೆಕ್ಕನ್ನು ಮತ್ತೆ ಬ್ಯಾಂಕಿನಲ್ಲಿ  ಹಾಜರು ಪಡಿಸುವಂತೆ ಕೋರಿದರು. ಒಪ್ಪಿದ ಅರ್ಜಿದಾರರು ೧೩--೨೦೦೭ರಂದು ಮತ್ತೆ ಅದೇ ಚೆಕ್ಕನ್ನು ಬ್ಯಾಂಕಿಗೆ ಹಾಕಿದರು.

ಬಳಿಕ ಖಾತೆಗೆ ಹಣ ಜಮಾ ಆಗಬಹುದು ಎಂದು ಅರ್ಜಿದಾರರು ಒಂದೆರಡು ತಿಂಗಳ ಕಾಲ ಸಹನೆಯಿಂದ ಕಾದರು. ಎರಡು ತಿಂಗಳ ಬಳಿಕ ೧೬--೨೦೦೭ರಂದು ಅರ್ಜಿದಾರರಿಗೆ ಬ್ಯಾಂಕಿನಿಂದ ಒಂದು ಪತ್ರ ಬಂತು. ಅದರಲ್ಲಿ ಅವರು ನೀಡಿದ್ದ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋಗಿದೆ ಎಂದು ತಿಳಿಸಲಾಗಿತ್ತು.

ಇದು ಪ್ರತಿವಾದಿ ಪಾಲಿನ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂಬುದಾಗಿ ಭಾವಿಸಿದ ಅರ್ಜಿದಾರರು ತಮಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಯಾತನೆಗಾಗಿ ಪರಿಹಾರ ನೀಡುವಂತೆ ಪ್ರತಿವಾದಿ ಬ್ಯಾಂಕಿಗೆ ಲೀಗಲ್ ನೋಟಿಸ್ ಕಳುಹಿಸಿದರು. ಅದಕ್ಕೆ ಸೂಕ್ತ ಉತ್ತರ ಬರದೇ ಹೋದಾಗ ಅರ್ಜಿದಾರರು ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.

ಅಧ್ಯಕ್ಷ .ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಶ್ರೀಮತಿ ಎಂ. ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ.ಪಿ. ಜಯಸಿಂಹ ಮತ್ತು ಪ್ರತಿವಾದಿ ಬ್ಯಾಂಕಿನ ಪರ ವಕೀಲ ದೀಪಕ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಪ್ರತಿವಾದಿ ಬ್ಯಾಂಕು ಅರ್ಜಿದಾರರ ಎಲ ಆಪಾದನೆಗಳನ್ನೂ ನಿರಾಕರಿಸಿ, ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದೊಡನೆಯೇ ಪೊಲೀಸರಲ್ಲಿ  ದೂರು ದಾಖಲಿಸುವುದರ ಜೊತೆಗೆ ಅರ್ಜಿದಾರರಿಗೂ ಮಾಹಿತಿ ನೀಡಲಾಗಿದೆ. ಅರ್ಜಿದಾರರು ಚೆಕ್ ನೀಡಿದವರಿಂದ ಹಣ ಪಡೆಯಲು ಅಥವಾ ಬೇರೆ ಚೆಕ್ ಪಡೆಯಲು ಕ್ರಮ ಕೈಗೊಳ್ಳುವ ಬದಲು ತನ್ನ ವಿರುದ್ದ ಸುಳ್ಳು ಖಟ್ಲೆ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸಿತು.

ಕಳೆದು ಹೋಗಿರುವ ಚೆಕ್ ಪತ್ತೆಗಾಗಿ ತಾವು ಯತ್ನಿಸುತ್ತಿದ್ದು, ಅದು ಪತ್ತೆಯಾದೊಡನೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರು ಬ್ಯಾಂಕಿನ ವಿರುದ್ಧ ದೂರು ನೀಡುವ ಬದಲು ಚೆಕ್ ನೀಡಿದವರ ವಿರುದ್ಧವೇ ಹಣಕ್ಕಾಗಿ ದಾವೆ ಹೂಡಬಹುದು. ಅವರು ಬ್ಯಾಂಕಿನ ವಿರುದ್ಧ ಸೇವಾಲೋಪದ ಆರೋಪ ಮಾಡಿದ್ದು ಸರಿಯಲ್ಲ ಎಂದು ವಾದಿಸಿದ ಬ್ಯಾಂಕು ಅರ್ಜಿಯನ್ನು ತಳ್ಳಿಹಾಕುವಂತೆ ಮನವಿ ಮಾಡಿತು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನ ಖಾತೆದಾರರಾಗಿದ್ದು, ನಗದೀಕರಣಕ್ಕಾಗಿ ಎರಡೆರಡು ಸಲ ಬ್ಯಾಂಕಿಗೆ ಚೆಕ್ ಸಲ್ಲಿಸಿದ್ದನ್ನು ಬ್ಯಾಂಕು ನಿರಾಕರಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ತನ್ನ ಗ್ರಾಹಕನಿಗೆ ಸಮರ್ಪಕ ಸೇವೆ ಒದಗಿಸಬೇಕಾದದ್ದು ಬ್ಯಾಂಕಿನ ಕರ್ತವ್ಯ. ರವಾನೆ ಕಾಲದಲ್ಲಿ ಚೆಕ್ ಕಳೆದುಹೋದರೆ ಗ್ರಾಹಕನನ್ನು ಸಂತೃಪ್ತಿ ಪಡಿಸಲು ಪೊಲೀಸರಿಗೆ ದೂರು ಕೊಟ್ಟು ಬಿಟ್ಟರೆ ಅದು ತನ್ನ ಕರ್ತವ್ಯ ನಿರ್ವಹಿಸಿದಂತಾಗುವುದಿಲ್ಲ. ಚೆಕ್ ಕಳೆದುಹೋಗಿದೆ ಎಂದು ಒಪ್ಪಿಕೊಂಡಾಗ ಅದು ಸೇವಾಲೋಪ ಎಂದೇ ಅರ್ಥವಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು. 
ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ. ಇಲ್ಲಿ ಅರ್ಜಿದಾರರು ತನಗೆ ಚೆಕ್ ನೀಡಿದಾತನ ಜೊತೆ ಸೇರಿ ಬ್ಯಾಂಕು ಚೆಕ್ ಕಳೆದುಕೊಂಡದ್ದರ ದುರುಪಯೋಗ ಪಡೆಯುವ ಬಗ್ಗೆ ಚಿಂತಿಸಿದ ಸಾಧ್ಯತೆಯನ್ನೂ ಅಲಗಳೆಯಲಾಗುವುದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇನೇ ಇದ್ದರೂ ಪ್ರಕರಣದ್ಲದಲ್ಲಿ ಚೆಕ್ ಕಳೆದುಕೊಳ್ಳುವ ಮೂಲಕ ಪ್ರತಿವಾದಿ ಬ್ಯಾಂಕು ಸೇವಾಲೋಪ ಎಸಗಿದ್ದು ಖಚಿತವಾದ ಕಾರಣ, ಅರ್ಜಿದಾರರು ಪರಿಹಾರಕ್ಕೆ ಅರ್ಹರಾಗುತ್ತಾರೆ. ಆದರೆ ಅವರು ಕೇಳಿದಷ್ಟು ಪರಿಹಾರವನ್ನು ಪ್ರತಿವಾದಿ ಕೊಡಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯವು ಬಂದಿತು.

ಹಿನ್ನೆಲೆಯಲ್ಲಿ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯವು, ೫೦೦೦ ರೂಪಾಯಿಗಳ ಪರಿಹಾರವನ್ನು ೧೦೦೦ ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರನಿಗೆ ಪಾವತಿ ಮಾಡುವಂತೆ ಪ್ರತಿವಾದಿ ಬ್ಯಾಂಕಿಗೆ ಆದೇಶ ನೀಡಿತು.