Showing posts with label Hegade Nagara. Show all posts
Showing posts with label Hegade Nagara. Show all posts

Wednesday, September 30, 2026

PARYAYA: ಸತ್ಯನಾರಾಯಣ -ಸಂಕಷ್ಟಿ ಪೂಜಾ

 ಸತ್ಯನಾರಾಯಣ -ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೨೬ರ ಶನಿವಾರ ಪೌರ್ಣಮಿಯ ದಿನ ಭಾದ್ರಪದ ಮಾಸದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸೆಪ್ಟೆಂಬರ್‌ ೨೯ರ ಮಂಗಳವಾರ ಭಾದ್ರಪದ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಬಾರಿಯ ಸಂಕಷ್ಟಿ ಪೂಜೆ ಮಂಗಳವಾರ ಬಂದ ಕಾರಣ ಬಹಳಷ್ಟು ಭಕ್ತರು ಅಂಗಾರಕ ಸಂಕಷ್ಟಿ ಪೂಜೆಯಲ್ಲಿ ವಿಶೇಷಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟಕ್ಕೆ, ವಿಡಿಯೋ ನೋಡಲು ಚಿತ್ರಗಳನ್ನು ಕ್ಲಿಕ್‌ ಮಾಡಿರಿ.









PARYAYA: ಸತ್ಯನಾರಾಯಣ -ಸಂಕಷ್ಟಿ ಪೂಜಾ:   ಸತ್ಯನಾರಾಯಣ -ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ...

Saturday, September 5, 2026

PARYAYA: ಶ್ರೀ ಕೃಷ್ಣ ಜನ್ಮಾಷ್ಟಮಿ

 ಶ್ರೀ ಕೃಷ್ಣ ಜನ್ಮಾಷ್ಟಮಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಸೆಪ್ಟೆಂಬರ್‌ ೪ರ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಕಥಾ ಶ್ರವಣ, ಪೂಜೆ, ಕುಂಕುಮಾರ್ಚನೆಯನ್ನೂ ನೆರವೇರಿಸಲಾಯಿತು. ಶ್ರೀ ಕೃಷ್ಣೋಜಿರಾವ್‌ ಮತ್ತು ಕುಟುಂಬ ಸದಸ್ಯರು ಅಲಂಕಾರ, ಪ್ರಸಾದ ಸೇವೆಯ ವ್ಯವಸ್ಥೆ ಮಾಡಿದ್ದರು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ, ಭಜನೆ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡರು. ಪುಟಾಣಿ ಮಕ್ಕಳು ಬಾಲಕೃಷ್ಣ, ರಾಧೆ ವೇಷಗಳನ್ನು ಧರಿಸಿ ಆಗಮಿಸಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.









PARYAYA: ಶ್ರೀ ಕೃಷ್ಣ ಜನ್ಮಾಷ್ಟಮಿ:   ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ...

Tuesday, August 25, 2026

PARYAYA: ಪತಂಜಲಿ ಯೋಗ ತರಗತಿ ಆರಂಭ

 ಪತಂಜಲಿ ಯೋಗ ತರಗತಿ ಆರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ., ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಚಟುವಟಿಕೆಗಳಿಗೆ, 2026 ಆಗಸ್ಟ್‌ 24ರ ಸೋಮವಾರ ಯೋಗ ತರಗತಿಗಳ ಆರಂಭದೊಂದಿಗೆ ಹೊಸ ಮಜಲು ಸೇರ್ಪಡೆಯಾಯಿತು.

ಆಗಸ್ಟ್‌ 24ರಂದು ಪತಂಜಲಿ ಯೋಗ ಸಮಿತಿಯು ದೇವಸ್ಥಾನದ ಆವರಣದಲ್ಲಿ  ಉಚಿತ ಯೋಗ ತರಗತಿಗಳನ್ನು ಆರಂಭಿಸಿತು.

ಪತಂಜಲಿ ಯೋಗ ಸಮಿತಿಯು ಬೆಂಗಳೂರಿನ ಉತ್ತರ ಭಾಗದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಉಚಿತ ಯೋಗ ತರಗತಿಗಳನ್ನು ಆರಂಭಿಸಿತ್ತು. ಪ್ರಸ್ತುತ ಸಮಿತಿಯು ಈ ಭಾಗದಲ್ಲಿ ಸುಮಾರು 30 ಉಚಿತ ಯೋಗ ತರಗತಿಗಳನ್ನು ನಡೆಸುತ್ತಿದೆ.

ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯು ನಡೆಸುತ್ತಿರುವ ಈ ದೇವಸ್ಥಾನದಲ್ಲಿ ಭಾನುವಾರ ನಡೆದ ಯೋಗ ತರಗತಿ ಆರಂಭ ಕಾರ್ಯಕ್ರಮದಲ್ಲಿ ಯೋಗ ಸಮಿತಿಯ ಸುಧಾಮ, ಆನಂದ್‌ ಮತ್ತಿತರರು ಯೋಗದ ಬಗ್ಗೆ ವಿವರಗಳನ್ನು ನೀಡಿದರು.

ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿಗೆ ಪೂಜೆ ನೆರವೇರಿಸುವ ಮೂಲಕ ಯೋಗ ತರಗತಿಯ ಶುಭಾರಂಭವನ್ನು ಮಾಡಲಾಯಿತು.

ದೇವಸ್ಥಾನ ಸೇವಾ ಸಮಿತಿ ಟ್ರಸ್ಟಿನ ಅಧ್ಯಕ್ಷ ಚೌಡರೆಡ್ಡಿ, ಟ್ರಸ್ಟಿಗಳಾದ ಸುಗುಣನ್‌, ನೆತ್ರಕೆರೆ ಉದಯಶಂಕರ, ಯೋಗಸಮಿತಿಯ ತರಬೇತಿದಾರರಾದ ಉಮಾ ಜಯಶಂಕರ್‌ ಮತ್ತಿತರರೂ ಈ ಸಂದರ್ಭದಲ್ಲಿ ಹಾಜರಿದ್ದರು.ಯೋಗ ತರಗತಿ ಆರಂಭ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ. ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ದೇವಸ್ಥಾನದ ಆವರಣದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗ ತರಗತಿಗಳು ನಡೆಯಲಿವೆ.

ದೇವಸ್ಥಾನದ ಆವರಣದಲ್ಲಿ ಈಗಾಗಲೇ ಯಕ್ಷ ಕಲಾ ಕೌಸ್ತುಭ, ಬೆಂಗಳೂರು ತಂಡದ ವತಿಯಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನೇತೃತ್ವದಲ್ಲಿ ಯಕ್ಷಗಾನ ತರಗತಿಗಳು ನಡೆಯುತ್ತಿವೆ.

Tuesday, May 26, 2026

PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

 ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

ಹನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ, ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರುವ ಶ್ರೀ ಹನುಮಂತನ ಕೃಪೆಗೆ ಪಾತ್ರವಾಗಲು ನೆರವೇರಿಸುವ ಅತ್ಯಂತ ಪವಿತ್ರವಾದ ಒಂದು ಆಚರಣೆ.

ಜೀವನದ ಹಾದಿಯಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಅಡೆತಡೆಗಳನ್ನು ನಿವಾರಿಸಲು ಹಾಗೂ ಎಲ್ಲ ಬಗೆಯ ದುಃಖ-ಕಷ್ಟಗಳಿಂದ ಮುಕ್ತಿ ಪಡೆಯಲು ಈ ಹೋಮವನ್ನು ಮಾಡಲಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಹನುಮಂತನ ದಿವ್ಯ ರಕ್ಷಾಕವಚ ಮತ್ತು ಆಶೀರ್ವಾದವನ್ನು ಪಡೆಯುವುದೇ ಇದರ ಮುಖ್ಯ ಉದ್ದೇಶ.

ಆಂಜನೇಯ ಹೋಮದ ಆಚರಣೆಯು ಭಕ್ತರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನಲ್ಲಿದ್ದ ಭೀತಿಯನ್ನು ಹೋಗಲಾಡಿಸಿ, ಜೀವನದ ವಿವಿಧ ಮಜಲುಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಲು ದಾರಿಯಾಗುತ್ತದೆ.

ಈ ಪವಿತ್ರ ವಿಧಿಯಲ್ಲಿ ಹನುಮಂತನ ಮೂಲಮಂತ್ರ ಸಹಿತ ಶಕ್ತಿಶಾಲಿ ಮಂತ್ರಗಳನ್ನು ಪಠಿಸಲಾಗುತ್ತದೆ. ಹೋಮ ಕುಂಡದಲ್ಲಿ ಪವಿತ್ರ ಹವಿಸ್ಸನ್ನು ಅರ್ಪಿಸುವ ಮೂಲಕ, ಹನುಮದೇವನ ದಿವ್ಯ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಸಕಲ ಅಭೀಷ್ಟಗಳನ್ನು ಈಡೇರಿಸಿಕೊಳ್ಳುವ ಸುಂದರ ಪ್ರಕ್ರಿಯೆ ಇದು.

ಹನುಮ ಜಯಂತಿಯಂತಹ ಅತ್ಯಂತ ಮಂಗಳಕರ ಸಂದರ್ಭಗಳಲ್ಲಿ ಈ ಹೋಮವನ್ನು ನೆರವೇರಿಸುವುದರಿಂದ ವಿಶೇಷ ಫಲಗಳು ಲಭ್ಯವಾಗುತ್ತವೆ. ಇದು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಮತ್ತಷ್ಟು ಉನ್ನತಗೊಳಿಸಿ, ಭಗವಂತನ ಕೃಪೆಗೆ ಪಾತ್ರರನ್ನಾಗಿ ಮಾಡುತ್ತದೆ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಶಾಸ್ತ್ರಿ ಮತ್ತು ಅವರ ಸಹ ಋತ್ವಿಜರು ೨೦೨೬ ಮೇ ೨೬ರ ಮಂಗಳವಾರ ಅಭಯ ಆಂಜನೇಯನ ಸನ್ನಿಧಾನದಲ್ಲಿ ಕೌಟುಂಬಿಕ ಸಂಕಲ್ಪಕ್ಕೆ ಅನುಗುಣವಾಗಿ ದಶದ್ರವ್ಯ ಆಹುತಿಯೊಂದಿಗೆ ಈ ಆಂಜನೇಯ ಹೋಮವನ್ನು ನೆರವೇರಿಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ:   ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯ ಕ್ಕಾಗಿ ಹ ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ , ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರು...

Tuesday, May 5, 2026

PARYAYA: ಅಂಗಾರಕ ಸಂಕಷ್ಟಿ ಪೂಜಾ

 ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೫ರ ಮಂಗಳವಾರ ವೈಶಾಖ ಮಾಸದ ಶ್ರೀ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.


ಭಕ್ತರು ಶ್ರೀ ಮಹಾಗಣಪತಿಗೆ ಮೋದಕ ಹಾರ, ಕರ್ಜಿಕಾಯಿ ಹಾರ ಅರ್ಪಣೆಯೊಂದಿಗೆ ಸಂಗೀತ ಸೇವೆಯನ್ನೂ ಸಲ್ಲಿಸಿದರು.


೨೦೨೬ ಮೇ ೧ರ ಶುಕ್ರವಾರ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿ ವೈಶಾಖ ಮಾಸದ ಶ್ರೀ ಸತ್ಯ ನಾರಾಯಣ ಪೂಜೆಯನ್ನೂ ನೆರವೇರಿಸಲಾಗಿತ್ತು.

ಭಕ್ತರು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿವೆ. ಮಹಾಮಂಗಳಾರತಿಯವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಅಂಗಾರಕ ಸಂಕಷ್ಟಿ ಪೂಜಾ:   ಅಂಗಾರಕ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್...

Sunday, April 5, 2026

PARYAYA: ಚೈತ್ರ ಮಾಸದ ಸಂಕಷ್ಟಿ ಪೂಜಾ

 ಚೈತ್ರ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಏಪ್ರಲ್‌ ೫ರ ಭಾನುವಾರ ಚೈತ್ರ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು ಭಜನಾ ಕೈಂಕರ್ಯದಲ್ಲೂ ಪಾಲ್ಗೊಂಡು ಶ್ರೀ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ ವಿಡಿಯೋ ನೋಡಬಹುದು.


PARYAYA: ಚೈತ್ರ ಮಾಸದ ಸಂಕಷ್ಟಿ ಪೂಜಾ:   ಚೈತ್ರ ಮಾಸದ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾ...

Saturday, February 7, 2026

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

 ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

ಇದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ.

ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ ಇರುವುದು ಪ್ರಯಾಣಿಕರನ್ನು ಕರೆದೊಯ್ಯಲು. ಆದರೆ ಇಲ್ಲಿ ಅಂದರೆ ರಾಮಕೃಷ್ಣ ಹೆಗಡೆ ನಗರದಲ್ಲಿ ಆಟೋರಿಕ್ಷಾಗಳು ಪ್ರಯಾಣಿಕರ ಜೊತೆಗೆ ಅವರ ಕಸವನ್ನೂ ಸಾಗಿಸುತ್ತವೆ.

ಯಾಕೆ ಎಂದು ಕೇಳುತ್ತೀರಲ್ಲವೇ?

ಪ್ರಯಾಣಿಕರಿಗೆ ತಮ್ಮ ಮನೆಯನ್ನು ಸ್ವಚ್ಚಗೊಳಿಸಿದ ಬಳಿಕ ಗೋಣಿಯಲ್ಲಿ ತುಂಬಿದ ಕಸವನ್ನು ಪಕ್ಕದ ಬಡಾವಣೆಯಲ್ಲಿ ಮನೆಗಳ ಮುಂದೆ ಸುರಿಯಲು ಅಷ್ಟೇ.

ಕೆಲವು ದಿನಗಳ ಹಿಂದೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಹಿಂದಿನ ಬಿಬಿಎಂಪಿ ಸಿಬ್ಬಂದಿ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಕಸ ಬಿಸಾಕಿದವರ ಮನೆಗೆ ಕಸ ತಂದು ಸುರಿದು ದಂಡ ವಿಧಿಸುವ ಕ್ರಮ ಜರುಗಿಸಿದ್ದರು.

ಈಗ ಅವರ ಬದಲಿಗೆ ಜನರೇ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ತಮ್ಮ ಮನೆಯ ಕಸ ಸಾಗಿಸಿ ಸುರಿಯುವ ಕೆಲಸಕ್ಕೆ ಹೊರಟಿದ್ದಾರೆ. ಅವರಿಗೆ ಕಸ ಒಯ್ಯಲು ನೆರವಾಗುತ್ತಿರುವುದು ಆಟೋ ರಿಕ್ಷಾಗಳು ಅದಕ್ಕೆ ಹೇಳಿದ್ದು ಇದು ಬೆಂಗಳೂರಿನ  ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ ಎಂದು.

ಇಲ್ಲಿರುವ ವಿಡಿಯೋ ನೋಡಿ. ಇದು ಹೆಗಡೆ ನಗರದ ಬಸವಲಿಂಗಪ್ಪ ನಗರಲ್ಲಿ ಇರುವ ಹತ್ಮನೆ ಬಡಾವಣೆಯಿಂದ ೭ನೇ ಅಡ್ಡರಸ್ತೆಯ ಮೂಲಕ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ ಬಂದು ೪೦೮ನೇ ನಂಬರಿನ ಮನೆಯ ಗೇಟಿನ ಮುಂದೆ ಜಾರಿಸಿ ಹೋದ ದೃಶ್ಯ. ಆಟೋ ರಿಕ್ಷಾ ೪೦೭ನೇ ನಂಬರಿನ ಮನೆಯ ಮುಂದೆ ಕಸದ ಮೂಟೆ ಇಟ್ಟುಕೊಂಡು ಬರುವುದು ಮತ್ತು ೪೦೮ನೇ ನಂಬರಿನ ಮನೆಯ ಮುಂದೆ ಜಾರಿಸಿ ಮುಂದಕ್ಕೆ ಹೋಗುವುದು ಈ ಎರಡೂ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಂ. ಬಹಳ ಮುಖ್ಯವಾದದ್ದು ಏನು ಎಂದರೆ ಇದು ೨೦೨೬ ಫೆಬ್ರುವರಿ ೫ರಂದು ಮಟ ಮಟ ಮಧ್ಯಾಹ್ನ ೩.೩೦ರ ಸಮಯದಲ್ಲಿ ನಡೆದ ಘಟನೆ.

ರಾತ್ರಿ ಹೊತ್ತಿನಲ್ಲಿ ಇಲ್ಲಿನ ರಸ್ತೆ ರಸ್ತೆಗಳಿಗೂ ಹೀಗೆಯೇ ಕಸ ಬಂದು ಬೀಳುತ್ತಿರುತ್ತವೆ.

ರಿಕ್ಷಾಗಳಷ್ಟೇ ಅಲ್ಲ, ಸ್ಕೂಟರುಗಳಲ್ಲಿ ಹೀಗೆ ಕಸದ ಮೂಟೆ ತಂದು ಮನೆಗಳ ಮುಂದೆ ತಂದು ಇಟ್ಟು ಆ ಮನೆಯವರ ಮೂಲಕ ಅದನ್ನು ಬಿಬಿಎಂಪಿ ವಾಹನಕ್ಕೆ ತಲುಪಿಸುವವರೂ ಇದ್ದಾರೆ.

ಬಿಬಿಎಂಪಿ/ ಜಿಬಿಎಯ ʼದಂಡʼಕ್ಕೆ ಇವರು ಬಗ್ಗುವುದಿಲ್ಲ. ಇವರಿಗೆ ʼದಂಡಂ ದಶಗುಣಂʼ ಎನ್ನುವ ಹಾಗೆ  ಆರಡಿ ಉದ್ದದ ದಂಡಗಳಿಂದಲೇ ಬುದ್ದಿ ಕಲಿಸಬೇಕಾದ ಕಾಲ ಬರುತ್ತದೋ ಏನೋ.

ಬೆಂಗಳೂರಿನಲ್ಲಿ ಬೇರೆ ಯಾವುದಾದರೂ ಬಡಾವಣೆಯವರಿಗೆ ಇಂತಹ ಉಚಿತ ಕಸ ಸಾಗಣೆ ಆಟೋ ವ್ಯವಸ್ಥೆ ಬೇಕಾಗಿದ್ದರೆ ಅತ್ಯಂತ ವೇಗವಾಗಿ ನಂಬರ್‌ ಕೂಡಾ ಗೊತ್ತಾಗದಂತೆ ಸಾಗಿ ಹೋದ ಈ ಆಟೋ ರಿಕ್ಷಾದ ನಂಬರ್‌ ಗುರುತಿಸಿ ಅವರನ್ನೇ ಸಂಪರ್ಕಿಸಬಹುದು.

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!:   ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ! ಇ ದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ. ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ...

Saturday, January 10, 2026

PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

 ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ್ಷಿಸುತ್ತೀರಿ ಮತ್ತು ನಿಮ್ಮ ಬಂಧು ಮಿತ್ರರಿಗೆ ಇವುಗಳನ್ನು ಕಳುಹಿಸಿಕೊಡುತ್ತೀರಿ.

ಇವು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ʼಫೂಟ್‌ ಪಲ್ಸ್‌ʼ ಥೆರಪಿ ಶಿಬಿರದ ಸಂದರ್ಭದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಸಂಪನ್ಮೂಲ ವ್ಯಕ್ತಿ ಡಾ. ರತ್ನಾಕರ ಶೆಟ್ಟಿ ಅವರು ಆಡಿದ ಮಾತುಗಳ ವಿಡಿಯೋಗಳು.

ಕೆಳಗೆ ಕ್ಲಿಕ್‌ ಮಾಡಿ ನೋಡಿ. ನಿಮ್ಮ ಬಂಧು ಮಿತ್ರರಿಗೂ ಕಳುಹಿಸಿಕೊಡಿ.



PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?:   ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ? ನಿ ಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ...

Friday, January 9, 2026

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?

 ಆರೋಗ್ಯ ರಕ್ಷಣೆ ಏಕೆ ಮುಖ್ಯ?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಕಂಪಾನಿಯೋ ಸಹಯೋಗದಲ್ಲಿ ನಡೆಯುತ್ತಿರುವ ಉಚಿತ ಆಕ್ಯೂ ಪ್ಲಸ್‌ ಥೆರೆಪಿ ಶಿಬಿರದಲ್ಲಿ ೨೦೨೬ ಜನವರಿ ೯ರ ಶುಕ್ರವಾರ ಒಂದು ವಿಶೇಷ ಕಾರ್ಯಕ್ರಮ.

ಆರೋಗ್ಯ ತಜ್ಞ ಹಾಗೂ ಖ್ಯಾತ ಟಿವಿ ಶೋ ಸಂಪನ್ಮೂಲ ವ್ಯಕ್ತಿ ಶ್ರೀ ರತ್ನಾಕರ ಶೆಟ್ಟಿ ಅವರಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ. ಆರೋಗ್ಯ ರಕ್ಷಣೆಯ ಸೂತ್ರಗಳನ್ನು ಅತ್ಯಂತ ಸರಳವಾಗಿ, ಮನ ಮುಟ್ಟುವಂತೆ ನಿರರ್ಗಳವಾಗಿ ವಿವರಿಸಿದ ಅವರು ಆರೋಗ್ಯ ಕಾಪಾಡಿಕೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎನ್.‌ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ರಾಜೇಶ ಹೆಗಡೆ ಮತ್ತಿತರರು ಹಾಜರಿದ್ದರು. ಕಂಪಾನಿಯೋ ಪ್ರತಿನಿಧಿ ಕಾರ್ತಿಕ್‌ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಕಂಪಾನಿಯೋ ಕಾರ್ಯಕರ್ತೆ ಪ್ರಫುಲ್ಲ ಹಾಗೂ ಕಾರ್ತಿಕ್‌ ದೇವಾಡಿಗ ಶಿಬಿರವನ್ನು ಮುಂದುವರೆಸಿದರು.

ಈ ಸಂದರ್ಭದ ಕೆಲವು ಫೊಟೋಗಳು ಹಾಗೂ ವಿಡಿಯೋಗಳು ಇಲ್ಲಿವೆ. ಶ್ರೀ ರತ್ನಾಕರ ಶೆಟ್ಟಿ ಅವರ ಮಾತುಗಳ ಇನ್ನಷ್ಟು ವಿಡಿಯೋ ಮುಂದಿನ ದಿನಗಳಲ್ಲಿ ಇಲ್ಲಿ ಮೂಡಿ ಬರಲಿದೆ.

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?:   ಆರೋಗ್ಯ ರಕ್ಷಣೆ ಏಕೆ ಮುಖ್ಯ? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥ...

Tuesday, January 6, 2026

PARYAYA: ಅಂಗಾರಕ ಸಂಕಷ್ಟಿ ಪೂಜಾ

 ಅಂಗಾರಕ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಜನವರಿ ೬ರ ಮಂಗಳವಾರ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು ವಿಘ್ನೇಶ್ವರನಿಗೆ ಕಡುಬಿನ ಹಾರದ ಸೇವೆಯನ್ನೂ ಸಲ್ಲಿಸಿದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/yzDZdbkfa58



PARYAYA: ಅಂಗಾರಕ ಸಂಕಷ್ಟಿ ಪೂಜಾ:   ಅಂಗಾರಕ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್...

Monday, January 5, 2026

PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರವು ೨೦೨೬ ಜನವರಿ ೩ರಿಂದ ಆರಂಭಗೊಂಡಿದೆ.

ಪ್ರತಿದಿನ ಬೆಳಗ್ಗೆ ೯.೩೦ಕ್ಕೆ ಆರಂಭವಾಗಿ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಶಿಬಿರವು ಜನವರಿ ೧೨ರವರೆಗೂ ನಡೆಯಲಿದೆ.


ಪ್ರತಿದಿನ ೩೦ ನಿಮಿಷಗಳ ಅವಧಿಯ ಚಿಕಿತ್ಸೆ ಪಡೆಯುವುದರಿಂದ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದ ಪರಿಹಾರ ಲಭಿಸುತ್ತದೆ.

ಮಧುಮೇಹ, ಮಧುಮೇಹದಿಂದ ಬರುವ ಪಾದ ಉರಿಯೂತ, ಸಂಧಿವಾತ, ಕುತ್ತಿಗೆ ನೋವು ಇತ್ಯಾದಿ ಸಮಸ್ಯೆಗಳಿಗೂ ಈ ಚಿಕಿತ್ಸೆಯಲ್ಲಿ ಪರಿಹಾರ ಲಭ್ಯವಿದೆ. ಬಹುಮುಖ್ಯವಾಗಿ ಫಿಸಿಯೋಥೆರೆಪಿ ಅಗತ್ಯ ಉಳ್ಳವರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಈ ಚಿಕಿತ್ಸಾ ತಜ್ಞ ಕಾರ್ತಿಕ್.‌

ಚಿಕಿತ್ಸೆ ಬಗ್ಗೆ ಅವರೇನು ಹೇಳುತ್ತಾರೆ ? ಇಲ್ಲಿ 👇 ನೋಡಿ.


ಇದನ್ನೂ ನೋಡಿ:
PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?:   ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Thursday, January 1, 2026

PARYAYA: ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

 ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ  "ಉಚಿತ ಫುಟ್ ಪಲ್ಸ್ ಥೆರಪಿ " ಶಿಬಿರವನ್ನು ದೇವಾಲಯ ಆವರಣದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ, ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘ ಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದೆ ಚಿಕತ್ಸೆ ಸಲಹೆಗಳನ್ನು ನೀಡಲಾಗುವುದು.

ಶಿಬಿರವು ದಿನಾಂಕ 03-01-2026 ರಿಂದ 12-01-2026 ರವರೆಗೆ, ಬೆಳಗ್ಗೆ 9.30 ರಿಂದ ಸಂಜೆ 05:00 ಗಂಟೆಯ ತನಕ ನಡೆಯುತ್ತದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಪ್ರಕಟಣೆ ತಿಳಿಸಿದೆ.

ಆಸಕ್ತರು ವಿವರಗಳಿಗೆ ಮೇಲಿನ ಚಿತ್ರ ಕ್ಲಿಕ್‌ ಮಾಡಿನೋಡಬಹುದು ಅಥವಾ ಕಾರ್ತಿಕ್‌  (ಮೊಬೈಲ್‌ ನಂಬರ್‌ 9901612625) ಅವರನ್ನು ಸಂಪರ್ಕಿಸಬಹುದು.

PARYAYA: ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ:   ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಹಾಗೂ ಕಂಪಾನಿ...

Tuesday, December 30, 2025

PARYAYA: ವೈಕುಂಠ ಏಕಾದಶಿ ಸಡಗರ

 ವೈಕುಂಠ ಏಕಾದಶಿ ಸಡಗರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ರ ಮಂಗಳವಾರ ವೈಕುಂಠ ಏಕಾದಶಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.

ನಸುಕಿನ ಬ್ರಾಹ್ಮೀ ಮುಹೂರ್ತದಲ್ಲಿಯೇ ಅಭಿಷೇಕದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಲಂಕಾರ, ಮಹಾಮಂಗಳಾರತಿ ನಡೆಯಿತು.

ಭಾರೀ ಸಂಖ್ಯೆಯಲ್ಲಿ ಭಕ್ತರು ಮುಂಜಾನೆಯಲ್ಲೇ ಆಗಮಿಸಿ ದೇವರ ದರ್ಶನ, ವೈಕುಂಠ ದ್ವಾರದ ದರ್ಶನ ಪಡೆದು ಪುನೀತರಾದರು.

ಮಾಜಿ ಸಚಿವರಾದ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ ಅವರಿಂದ ಲಡ್ಡು ಪ್ರಸಾದ ಸೇವೆ, ಶ್ರೀ ಮುನಿರಾಜು ಮತ್ತು ಕುಟುಂಬದವರಿಗೆ ಅಲಂಕಾರ ಸೇವೆ, ಶ್ರೀ ನಾಗರಾಜ್‌ ಕೆ.ಎಂ. ಮತ್ತು ಕುಟುಂಬ, ಶ್ರೀ ಚೌಡರೆಡ್ಡಿ ಮತ್ತು ಕುಟುಂಬದವರಿಂದ ಪ್ರಸಾದ ಸೇವೆ ವ್ಯವಸ್ಥೆಯಿತ್ತು. ವಿದ್ಯಾ ರಘು ಪ್ರಸಾದ್‌ ಮತ್ತು ತಂಡ ಹಾಗೂ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದ ಕೆಲವು ವಿಡಿಯೋ ಹಾಗೂ ಚಿತ್ರಗಳು ಇಲ್ಲಿವೆ. ಅಭಿಷೇಕದ ದೃಶ್ಯ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ - Video link https://youtu.be/31F2f6wRhmI ಇದನ್ನು ಕ್ಲಿಕ್‌ ಮಾಡಿರಿ.

 
ಮಹಾಮಂಗಳಾರತಿ ದೃಶ್ಯ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ:

PARYAYA: ವೈಕುಂಠ ಏಕಾದಶಿ ಸಡಗರ:   ವೈಕುಂಠ ಏಕಾದಶಿ ಸಡಗರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲ...

Monday, December 29, 2025

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

 ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ ಮಂಗಳವಾರದ ವೈಕುಂಠ ಏಕಾದಶಿ ಆಚರಣೆಗೆ ಸಡಗರದ ಸಿದ್ಧತೆ, ಶ್ರಮದಾನ ಕಾರ್ಯಕ್ರಮಗಳು ಡಿಸೆಂಬರ್‌ ೨೯ರಂದು ಭರದಿಂದ ನಡೆದವು.

ಭಕ್ತಾದಿಗಳು ದೇವಾಲಯ ಸ್ವಚ್ಛತೆಯಿಂದ ಹಿಡಿದು ಅಲಂಕಾರದವರೆಗೆ ಎಲ್ಲ ರೀತಿಯ ಶ್ರಮದಾನದಲ್ಲಿ ಲಗುಬಗೆಯಿಂದ ಪಾಲ್ಗೊಂಡರು.

ಮಂಗಳವಾರ ಬೆಳಗ್ಗೆ ೪ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ೧೧ ಗಂಟೆಗೆ ವಿದ್ಯಾ ರಘು ಪ್ರಸಾದ್‌ ತಂಡವು ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದೆ.

ವೈಕುಂಠ ದ್ವಾರವನ್ನು ಶನಿವಾರ ರಾತ್ರೆಯ ವೇಳಗೆ ಸಜ್ಜುಗೊಳಿಸಲಾಗಿದ್ದು ಬೆಳಗ್ಗೆಯಿಂದ ರಾತ್ರಿ ೯ ಗಂಟೆಯವರೆಗೆ ವೈಕುಂಠ ದ್ವಾರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಮಾಜಿ ಸಚಿವ ಮಾಲೂರು ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ:   ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Tuesday, December 2, 2025

PARYAYA: ಹನುಮ ಜಯಂತಿ ಆಚರಣೆ

 ಹನುಮ ಜಯಂತಿ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೦೨ರ ಮಂಗಳವಾರ ಹನುಮ ಜಯಂತಿಯನ್ನು ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ವಿಡಿಯೋ ಇಲ್ಲಿದೆ. ವಿಡಿಯೋ ನೋಡಲು ಕೆಳಗಿನಚಿತ್ರ ಅಥವಾ ಯೂ ಟ್ಯೂಬ್‌ ಲಿಂಕ್‌  https://youtu.be/nUgCzPHhwjU ಕ್ಲಿಕ್‌ ಮಾಡಿರಿ.

PARYAYA: ಹನುಮ ಜಯಂತಿ ಆಚರಣೆ:   ಹನುಮ ಜಯಂತಿ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ...

Monday, November 3, 2025

PARYAYA: ತುಳಸೀ ಪೂಜಾ

 ತುಳಸೀ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೫ ನವೆಂಬರ್‌ ೨ರ ಭಾನುವಾರ ತುಳಸೀ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ತುಳಸೀ ಪೂಜಾ:   ತುಳಸೀ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೫ ನವೆಂಬರ್‌ ೨ರ ಭಾನುವಾರ ತುಳಸೀ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರ...

Sunday, October 12, 2025

PARYAYA: ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ

 ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣರಾಜಪುರಂ ಭಾಗದ ಹೆಗಡೆ ನಗರ ಘಟಕವು ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ೨೦೨೫ ಅಕ್ಟೋಬರ್‌ ೧೨ರ ಭಾನುವಾರ ರಾಮಕೃಷ್ಣ ಹೆಗಡೆ ನಗರದಲ್ಲಿ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲಾ ಮೈದಾನದಿಂದ ಆರಂಭವಾದ ಪಥ ಸಂಚಲನವು ಥಣಿಸಂದ್ರ ಮುಖ್ಯರಸ್ತೆ, ಕೆಂಪೇಗೌಡ ವೃತ್ತ ಹೆಗಡೆ ನಗರ, ಶಬರಿ ನಗರ, ಗಣೇಶ ದೇವಸ್ಥಾನ, ಕೆ. ನಾರಾಯಣಪುರ ಮುಖ್ಯರಸ್ತೆ ಮೂಲಕ ಸಾಗಿ, ರಾಷ್ಟ್ರೋತ್ಥಾನ ಶಾಲೆಯಲ್ಲಿ ಕೊನೆಗೊಂಡಿತು.

ಪಥ ಸಂಚಲನ ಮಾರ್ಗದಲ್ಲಿ ಅಲ್ಲಲ್ಲಿ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌  - https://youtu.be/a1Wl8kglycc

ಕ್ಲಿಕ್‌ ಮಾಡಿ.



PARYAYA: ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ:   ಆರೆಸ್ಸೆಸ್‌ ಶತಮಾನ ಉತ್ಸವ, ವಿಜಯದಶಮಿ ಪಥ ಸಂಚಲನ ರಾ ಷ್ಟ್ರೀಯ ಸ್ವಯಂ ಸೇವಕ ಸಂಘದ ಕೃಷ್ಣರಾಜಪುರಂ ಭಾಗದ ಹೆಗಡೆ ನಗರ ಘಟಕವು ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ೨೦೨೫ ...