Showing posts with label Canada. Show all posts
Showing posts with label Canada. Show all posts

Wednesday, May 14, 2025

PARYAYA: ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ

 ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ

ಈಕೆ ಕೆನಡಾದ ನೂತನ ವಿದೇಶಾಂಗ ಸಚಿವೆ

ವದೆಹಲಿ: ಕೆನಡಾದ ನೂತನ ವಿದೇಶಾಂಗ ಸಚಿವೆಯಾಗಿ ಭಾರತೀಯ ಮೂಲದ ವಕೀಲೆ ಅನಿತಾ ಇಂದಿರಾ ಆನಂದ್‌ ಅವರು ಈದಿನ (೨೦೨೫ ಮೇ ೧೪) ಪ್ರಮಾಣ ವಚನ ಸ್ವೀಕರಿಸಿದರು.

ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಕೆನಡಾದ ಪ್ರಪ್ರಥಮ ಹಿಂದೂ ಮಹಿಳೆಯಾಗಿದ್ದಾರೆ ಈಕೆ. ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದೇ ಈಕೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ (ಕೆಳಗಿನ ವಿಡಿಯೋ ನೋಡಿ). ಹಿಂದೆ ಸಾರಿಗೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಈಕೆ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದೇ ಪ್ರಮಾಣ ವಚನ ಸ್ವೀಕರಿಸಿದ್ದರು. 

ಪ್ರಮುಖ ಸಚಿವ ಸಂಪುಟ ಬದಲಾವಣೆಯಲ್ಲಿಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಅನಿತಾ ಆನಂದ್ ಅವರನ್ನು ಕೆನಡಾದ ವಿದೇಶಾಂಗ ಸಚಿವೆಯಾಗಿ ನೇಮಿಸಿದ್ದಾರೆ. ಅನಿತಾ ಅವರು ಪ್ರಸ್ತುತ ಕೈಗಾರಿಕಾ ಸಚಿವೆಯಾಗಿ ಸೇವೆ ಸಲ್ಲಿಸಲಿರುವ ಮೆಲಾನಿ ಜೋಲಿ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.

ತಮ್ಮ ಹೊಸ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದ ನಂತರ, ಅನಿತಾ ಅವರು, "ಕೆನಡಾದ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡಿರುವುದು ನನಗೆ ಗೌರವ ತಂದಿದೆ. ಸುರಕ್ಷಿತನ್ಯಾಯಯುತ ಜಗತ್ತನ್ನು ನಿರ್ಮಿಸಲು ಮತ್ತು ಕೆನಡಿಯನ್ನರಿಗೆ ಅದನ್ನು ತಲುಪಿಸಲು ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾನು ಕಾದಿದ್ದೇನೆ" ಎಂದು ಟ್ವೀಟ್‌ ಮಾಡಿದರು.

ಅನಿತಾ ಆನಂದ್ ಯಾರು?

ಅನಿತಾ ಇಂದಿರಾ ಆನಂದ್ ಅವರು ಕೆನಡಾದ ವಕೀಲೆಶಿಕ್ಷಣ ತಜ್ಞೆ ಮತ್ತು ರಾಜಕಾರಣಿ. ಅವರು ಇಲ್ಲಿಯವರೆಗೆ ಕೆನಡಾದ ರಕ್ಷಣಾ ಸಚಿವೆಸಾರಿಗೆ ಸಚಿವೆ ಮತ್ತು ನಾವೀನ್ಯತೆವಿಜ್ಞಾನ ಮತ್ತು ಕೈಗಾರಿಕಾ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಕೆನಡಾದ ವಿದೇಶಾಂಗ ಸಚಿವೆಯಾಗಿ ನೇಮಕಗೊಂಡ ಮೊದಲ ಹಿಂದೂ ಮಹಿಳೆಯಾಗಿದ್ದಾರೆ.

ಅನಿತಾ ಅವರು ನೋವಾ ಸ್ಕಾಟಿಯಾದ ಕೆಂಟ್ವಿಲ್ಲೆಯಲ್ಲಿ 1960 ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಕ್ಕೆ ವಲಸೆ ಬಂದ ಭಾರತೀಯ ವೈದ್ಯ ಪೋಷಕರಿಗೆ ಜನಿಸಿದರು. ಅವರ ತಾಯಿ ಪಂಜಾಬ್ ಮೂಲದವರು ಮತ್ತು ಅವರ ತಂದೆ ತಮಿಳುನಾಡು ಮೂಲದವರು. ಅವರಿಗೆ ಗೀತಾ ಮತ್ತು ಸೋನಿಯಾ ಎಂಬ ಇಬ್ಬರು ಸಹೋದರಿಯರಿದ್ದಾರೆ.

ಅನಿತಾ ಆನಂದ್ ಅವರು ವಿದ್ವಾಂಸರುವಕೀಲರುಸಂಶೋಧಕರು ಮತ್ತು ನಾಲ್ಕು ಮಕ್ಕಳ ತಾಯಿ ಎಂದು ಲಿಬರಲ್ ಪಕ್ಷದ ವೆಬ್‌ಸೈಟ್‌ನಲ್ಲಿ ಅವರ ಪ್ರೊಫೈಲ್ ತಿಳಿಸಿದೆ. ಅವರು ಕ್ವೀನ್ಸ್ ವಿಶ್ವವಿದ್ಯಾಲಯದಿಂದ ರಾಜಕೀಯ ಅಧ್ಯಯನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್)ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ನ್ಯಾಯಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್)ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅನಿತಾ ಆನಂದ್ ಅವರ ರಾಜಕೀಯ ಪ್ರಯಾಣ

ಆನಂದ್ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಕೆನಡಾದ ಸಾರ್ವಜನಿಕ ಸೇವೆಗಳು ಮತ್ತು ಖರೀದಿ ಸಚಿವಾಲಯವನ್ನು ಮುನ್ನಡೆಸಿದ್ದರು.ನಂತರರಾಷ್ಟ್ರೀಯ ರಕ್ಷಣಾ ಸಚಿವೆಯಾಗಿಕೆನಡಾದ ಸಶಸ್ತ್ರ ಪಡೆಗಳಲ್ಲಿ ಲೈಂಗಿಕ ದುರುಪಯೋಗ ತಡೆ ಮತ್ತು ಸಾಂಸ್ಕೃತಿಕ ಬದಲಾವಣೆಯನ್ನು ತರಲು ಅವರು ಉಪಕ್ರಮಗಳನ್ನು ಕೈಗೊಂಡಿದ್ದರು.

ರಷ್ಯಾದ ಉಕ್ರೇನ್ ಮೇಲಿನ ಆಕ್ರಮಣದ ನಂತರ ಉಕ್ರೇನಿಯನ್ ಸೈನಿಕರಿಗೆ ತರಬೇತಿ ನೀಡಲು ಮಿಲಿಟರಿ ನೆರವು ಮತ್ತು ಸಿಬ್ಬಂದಿಯನ್ನು ಒದಗಿಸುವ ಕೆನಡಾದ ಪ್ರಯತ್ನಗಳನ್ನು ಸಹ ಅವರು ನಡೆಸಿದ್ದರು.

ಪ್ರಮುಖ ಸಂಪುಟ ಬದಲಾವಣೆಯಲ್ಲಿಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರು ಕೆನಡಾದ ವಿದೇಶಾಂಗ ಸಚಿವೆಯಾಗಿ ಅನಿತಾ ಆನಂದ್ ಅವರನ್ನು ನೇಮಿಸಿದ್ದು, ಈವರೆಗೆ ವಿದೇಶಾಂಗ ಸಚಿವರಾಗಿದ್ದ ಮೆಲಾನಿ ಜೋಲಿ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ.

PARYAYA: ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ:   ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಈಕೆ ಕೆನಡಾದ ನೂತನ ವಿದೇಶಾಂಗ ಸಚಿವೆ ನ ವದೆಹಲಿ: ಕೆನಡಾದ ನೂತನ ವಿದೇಶಾಂಗ ಸಚಿವೆಯಾಗಿ ಭಾರತೀಯ ಮೂಲದ ವಕೀಲೆ ಅನಿತಾ ಇಂದಿ...

Thursday, November 14, 2024

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರ ಬುಡಕ್ಕೇ ಬತ್ತಿ ಇಡಲು ಹೊರಟಿದ್ದಾರೆ. ಕೆನಡಾದ ಸ್ಥಳೀಯರನ್ನೇ ಇಂಗ್ಲೆಂಡಿಗೆ ಅಟ್ಟುವ ಯೋಚನೆ ಮಾಡಹೊರಟಿದ್ದಾರೆ.

ʼತಲೆಗೆ ಹಾಕಿಕೊಂಡ ನೀರು ಬೇರೆ ಎಲ್ಲಿಗೂ ಹೋಗುವುದಿಲ್ಲ, ತನ್ನ ಕಾಲ ಬುಡಕ್ಕೇ ಇಳಿಯುತ್ತದೆʼ ಎಂಬ ಸತ್ಯ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೋ ಅರಿವಿಗೆ ಈಗಲಾದರೂ ಬರಲಾರಂಭ ಆಗಿರಬಹುದು.

ಏನಿದು ವಿಚಾರ ಎಂಬ ಪ್ರಶ್ನೆ ಎದ್ದಿರಬಹುದಲ್ಲವೇ?

ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರನ್ನೇ ಆಕ್ರಮಣಕಾರರು ಎಂಬುದಾಗಿ ಕರೆದು 'ಇಂಗ್ಲೆಂಡ್ಯುರೋಪಿಗೆ ವಾಪಸಾಗಿʼ ಎಂದು ಹೇಳಲು ಹೊರಟಿದ್ದಾರೆ.

ಖಲಿಸ್ಥಾನಿ ಉಗ್ರಗಾಮಿಗಳ ಹೊರ ವರಸೆ ಇದೀಗ ಅಲ್ಲಿ ನಡೆದ ʼನಗರ ಕೀರ್ತನ್‌ʼ ಕಾರ್ಯಕ್ರಮದ ಎರಡು ನಿಮಿಷಗಳ ವಿಡಿಯೋ ಒಂದರಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಖಲಿಸ್ಥಾನಿ ಉಗ್ರಗಾಮಿಗಳು ತಮ್ಮ ಧ್ವಜಗಳನ್ನು ಪ್ರದರ್ಶಿಸುತ್ತಾ ʼ “ಇದು ಕೆನಡಾನಮ್ಮದೇ ದೇಶ. ನೀವು [ಕೆನಡಿಯನ್ನರು] ಹಿಂತಿರುಗಿ, ಇಂಗ್ಲೆಂಡಿಗೆ, ಯುರೋಪಿಗೆ ಹೋಗಿ" ಎಂದು ಧ್ವನಿವರ್ಧಕದಲ್ಲಿ ಕೂಗಿ ಹೋಗಿ ಹೇಳುತ್ತಿರುವ ದೃಶ್ಯದ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಭಾರತೀಯ ಗುಪ್ತಚರ ಮೂಲಗಳು ಈ ಘಟನೆಯನ್ನು ಕೆನಡಾದ "ಹೊಸ ಸಾಮಾನ್ಯ ಸ್ಥಿತಿ" ಎಂದು ಕರೆದಿವೆ. ಖಲಿಸ್ಥಾನಿಗಳು ನಿಧಾನವಾಗಿ ದೇಶದ ಎಲ್ಲಾ ಕ್ಷೇತ್ರಗಳನ್ನೂ "ವಶಪಡಿಸಿಕೊಳ್ಳುತ್ತಿದ್ದಾರೆಸರಿಯಾದ ಕಣ್ಗಾವಲು ಇಲ್ಲ. ಹೀಗಾಗಿ ಈ ಗುಂಪುಗಳು ಸ್ಥಳೀಯ ಕೆನಡಿಯನ್ನರಿಂದಲೂ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿವೆ. ಹಿಂದೂಗಳಿಂದ ರಕ್ಷಣೆ ಒದಗಿಸಲು ಹಣ ಕೀಳಲಾಗುತ್ತದೆ. ಈಗ ಸ್ಥಳೀಯ ಕೆನಡಿಯನ್ನರಿಗೆ ಅವರ ಕಾಲೋನಿಗಳಲ್ಲೇ ಬೆದರಿಕೆ ಇದೆʼ ಎಂದು ಭಾರತೀಯ ಗುಪ್ತಚರ ಮೂಲಗಳು ಹೇಳಿವೆ.

ಕಳೆದ ವರ್ಷ ಭಾರತವು ʼಭಯೋತ್ಪಾದಕʼ ಎಂಬುದಾಗಿ ಘೋಷಿಸಿದ್ದ ಖಲಿಸ್ಥಾನಿ ಸಹಾನುಭೂತಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಜೂನ್ 2023 ರಲ್ಲಿ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಮತ್ತು ಭಾರತ ಸರ್ಕಾರದ ನೇರ ಪಾತ್ರವಿದೆ ಎಂದು ಆಪಾದಿಸಿ ಆ ಕುರಿತು ತನಿಖೆಗೆ ಆಜ್ಞಾಪಿಸಿದ್ದರು. ಈ ಘಟನೆಯ ಬಳಿಕ ಉಭಯ ದೇಶಗಳೂ ಪರಸ್ಪರರ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದ್ದವು.

ಭಾರತವು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ.  ಟ್ರೂಡೊ ಭಾರತದ ವಿರುದ್ಧ ಸಂಚು ಹೂಡುತ್ತಿರುವಖಲಿಸ್ಥಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ.

ಇದೇ ವೇಳೆಯಲ್ಲಿ ಕೆನಡಾ ನೆಲದಲ್ಲಿ ಹಿಂದೂಗಳ ಮೇಲೆ ಖಲಿಸ್ಥಾನಿಗಳಿಂದ ಹಲ್ಲೆ ನಡೆಯುತ್ತಿದೆ. ಇತ್ತೀಚಿಗೆಕೆನಡಾದಲ್ಲಿ ಹಿಂದೂಗಳ ಮೇಲೆ ದಾಳಿ ಘಟನೆಗಳೂ ನಡೆದಿವೆ. ದೇವಸ್ಥಾನದಲ್ಲಿ ಹಿಂದೂ  ಭಕ್ತರ ಮೇಲೆ ಹಲ್ಲೆ ನಡೆದಿದೆ. ದೇವಾಲಯಗಳಲ್ಲಿ ಹಿಂದೂ ಭಕರ ಮೇಲಿನ "ಉದ್ದೇಶಪೂರ್ವಕ ದಾಳಿ"ಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನೂ ನೀಡಿದ್ದಾರೆ.

ಕೆನಡಾದಲ್ಲಿ ನಡೆಯಲಿರುವ ಮುಂದಿನ ವರ್ಷದ ಚುನಾವಣೆಯಲ್ಲಿ ಸಂಸದ ಜಗ್ಮೀತ್ ಸಿಂಗ್ ಅವರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಟ್ರೂಡೊ ಖಲಿಸ್ತಾನಿ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಮತ್ತು ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ತನ್ನ ಜನಪ್ರಿಯತೆಯ ಶ್ರೇಯಾಂಕದಲ್ಲಿ ಕುಸಿತವಾಗಿರುವುದನ್ನು ಕಂಡಿರುವ ಟ್ರೂಡೋ, ತನ್ನ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಿವೆ. ಆ ಬಳಿಕ ತನ್ನ ಭಾರತ ವಿರೋಧೀ ಆರೋಪಗಳು ಕೇವಲ ಗುಪ್ತಚರ ಮಾಹಿತಿ ಮಾತ್ರ ಅದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ" ಎಂದು ಟ್ರೂಡೋ ಒಪ್ಪಿಕೊಂಡಿದ್ದರು.

 “ಟ್ರೂಡೊ ಅವರು ತಾನು ಹೇಗೆ ಐಎಸ್‌ಐ ಮತ್ತು ಖಲಿಸ್ಥಾನಿಗಳ ಕೈಗೊಂಬೆಯಾಟ  ಗೊಂಬೆಯಾಟ ಆಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಎಲ್ಲದಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಮೂಲಕ ಬಾಲಿಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಆರೋಪಗಳು ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡುತ್ತಿವೆ ಮತ್ತು ಅವರ ವೈಯಕ್ತಿಕ ಇಮೇಜ್ ಅನ್ನು ಹಾಳುಮಾಡುತ್ತಿವೆ ಎಂದು ಗುಪ್ತಚರ ಮೂಲಗಳು ಹೇಳಿದ್ದವು.

ಕೆನಡಾದಲ್ಲಿನ ಖಲಿಸ್ತಾನಿಗಳ ಹೊಸ ಹುನ್ನಾರವನ್ನು ತೋರಿಸುವ ವಿಡಿಯೋ ಇಲ್ಲಿದೆ.


ವಿಡಿಯೋದ ʼಎಕ್ಸ್‌ʼ ಕೊಂಡಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ:
https://twitter.com/i/status/1856837451697844720

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...! ತ ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿ...