ನಾನು ಮೆಚ್ಚಿದ ವಾಟ್ಸಪ್

Thursday, November 28, 2024

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

 ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಈದಿನ (೨೮.೧೧.೨೦೨೪ ಗುರುವಾರ) ಮಿಂಚಿನ ಕಾರ್ಯಾಚರಣೆ ನಡೆಸಿದ ಬಡಾವಣೆ ನಿವಾಸಿಗಳು ಹಲವರನ್ನು ಪತ್ತೆ ಹಚ್ಚಿ ಝಾಡಿಸಿದ ಘಟನೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ನಡೆದಿದೆ.

ಪ್ರತಿನಿತ್ಯ ಬಡಾವಣೆಯಲ್ಲಿ ಸಂಚರಿಸುವ ಬಿಬಿಎಂಪಿ ಕಸದ ಗಾಡಿಗೆ ಕಸವನ್ನು ಕೊಡದೇ ಬೆಳ್ಳಂ ಬೆಳಗಿನ ಹೊತ್ತಿನಲ್ಲಿ ಇಲ್ಲವೇ ನಡುರಾತ್ರಿಯ ರಾತ್ರಿಯ ವೇಳೆಯಲ್ಲಿ ಬಡಾವಣೆಯ ಮುಖ್ಯ ರಸ್ತೆಯಲ್ಲೇ ಕಸ ಎಸೆಯುತ್ತಿದ್ದ ಇಂತಹ ವ್ಯಕ್ತಿಗಳಿಗೆ ಬಿಬಿಎಂಪಿ ಮಾರ್ಷಲ್‌ ಗಳೂ ಝಾಡಿಸಿ ದಂಡ ವಸೂಲು ಮಾಡಿದ್ದಾರೆ.

ಕೆಲವು ವ್ಯಕ್ತಿಗಳು ಸ್ಕೂಟರಿನಲ್ಲಿ, ರಿಕ್ಷಾದಲ್ಲಿ ಅಕ್ಕ ಪಕ್ಕದ ಬಡಾವಣೆಗಳಿಂದ ಬಂದು ಕಸ ಎಸೆಯುತ್ತಿದ್ದ್ದುದೂ ಪತ್ತೆಯಾಗಿದ್ದು ಅವರನ್ನು ಕೂಡಾ ಬಡಾವಣೆಯ ನಿವಾಸಿಗಳು ಹಿಡಿದು ಝಾಡಿಸಿದರು.

ದಿನದ ಹಿಂದೆ ಕಸ ಎಸೆಯುತ್ತಿದ್ದ ಇಬ್ಬರು ವ್ಯಕ್ತಿಗಳು ತಮ್ಮನ್ನು ಪ್ರಶ್ನಿಸಿದ ಬಡಾವಣೆಯ ಪ್ರಜ್ಞಾವಂತ ನಿವಾಸಿಯೊಬ್ಬರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಬಳಿಕ ಬಡಾವಣೆಯ ನಿವಾಸಿಗಳು, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಜೊತೆಗೂಡಿ ಮಿಂಚಿನ ಕಾರ್ಯಾಚರಣೆ ನಡೆಸಿದರು.

ತನ್ನನ್ನು ಪ್ರಶ್ನಿಸಿದ ಪ್ರಜ್ಞಾವಂತ ನಿವಾಸಿಯ ಕೈಯಿಂದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಕೂಡಾ ಗುರುತು ಹಿಡಿದ ಮಾರ್ಷಲ್‌ ಗಳು ಆತನಿಗೂ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ವಿಡಿಯೊ ನೋಡಲು ಮೊದಲ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ:   ಬಡಾವಣೆ ಮಲಿನಕಾರಿಗಳ ವಿರುದ್ಧ ಮಿಂಚಿನ ಕಾರ್ಯಾಚರಣೆ ಬೆಂ ಗಳೂರು: ನಸುಕಿನಲ್ಲಿ ಬಂದು ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿ ಬಡಾವಣೆಯನ್ನು ಮಲಿನಗೊಳಿಸುತ್ತಿದ್ದ ವ್ಯಕ್ತಿಗ...

No comments:

Post a Comment