ಇಂದಿನ ಇತಿಹಾಸ History Today ಡಿಸೆಂಬರ್ 30
2020: ನವದೆಹಲಿ: ಪ್ರತಿಭಟನಾ ನಿರತ ರೈತ ಸಂಘಗಳೊಂದಿಗೆ 2020 ಡಿಸೆಂಬರ್ 30ರ ಬುಧವಾರ ನಡೆದ ಆರನೇ ಸುತ್ತಿನ ಮಾತುಕತೆ ಧನಾತ್ಮಕವಾಗಿದ್ದು, ನಾಲ್ಕು ವಿಷಯಗಳ ಪೈಕಿ ಎರಡರಲ್ಲಿ ಒಮ್ಮತ ಮೂಡಿದೆ, ಮುಂದಿನ ಮಾತುಕತೆ ಜನವರಿ ೪ರಂದು ನಡೆಯಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು 2020 ಡಿಸೆಂಬರ್ 30ರ ಬುಧವಾರ ತಿಳಿಸಿದರು. ಮಾತುಕತೆ ಮುಕ್ತಾಯದ ಬಳಿ ಪತ್ರಕರ್ತರೊಂದಿಗೆ ಮಾvನಾಡಿದ ಅವರು ಮಾತುಕತೆ ಉತ್ತಮ ವಾತಾವರಣದಲ್ಲಿ ನಡೆದಿದ್ದು, ಸಕಾರಾತ್ಮಕ ಟಿಪ್ಪಣಿಯೊಂದಿಗೆ ಕೊನೆಗೊಂಡಿದೆ ಎಂದು ಹೇಳಿದರು. ಈ ಸಭೆಯು ದೀರ್ಘಾವಧಿಯ ಅಂತರದ ನಂತರ ಬಂದಿತು, ಏಕೆಂದರೆ ಕೊನೆಯ ಸಭೆಯ ನಂತರ ರೈತರು ಕಾನೂನುಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂಬ ಬೇಡಿಕೆಯ ಮೇಲೆ ಮತ್ತು ಕೇಂದ್ರವು ಅದನ್ನು ಸ್ವೀಕರಿಸದಿರುವ ಬಗ್ಗೆ ತೀವ್ರವಾಗಿ ಒತ್ತಾಯಿಸುವುದರೊಂದಿಗೆ ಕೊನೆಗೊಂಡಿತ್ತು. ಸಭೆ ಮಧ್ಯಾಹ್ನ ೨ ಗಂಟೆ ಸುಮಾರಿಗೆ ಪ್ರಾರಂಭವಾಯಿತು ಮತ್ತು ನಾಲ್ಕು ಗಂಟೆಗಳ ಕಾಲ ನಡೆಯಿತು. ರೈತರ ಬೇಡಿಕೆಗಳಿಗೆ ಯಾವುದೇ ನಿರ್ದಿಷ್ಟ ಉತ್ತರವಿಲ್ಲದಿದ್ದರೂ, ನಾಯಕರು ಊಟದ ಮತ್ತು ಸಂಜೆ ಲಘು ಸಮಯದಲ್ಲಿ ಕೇಂದ್ರ ಪ್ರತಿನಿಧಿಗಳೊಂದಿಗೆ ಬೆರೆಯುವುದರಿಂದ ಬುಧವಾರ ಪರಿಸರ ಸೌಹಾರ್ದಯುತವಾಗಿತ್ತು. ರೈತ ಸಂಘದ ನಾಯಕರು ಇದುವರೆಗೆ ವಿಜ್ಞಾನ ಭವನದಲ್ಲಿ ನೀಡುತ್ತಿರುವ ಆಹಾರವನ್ನು ನಿರಾಕರಿಸಿದ್ದರು. ಏಕೆಂದರೆ ಅವರು ಯಾವಾಗಲೂ ಲಂಗಾರ್‌ನಲ್ಲಿ ಬೇಯಿಸಿದ ಆಹಾರಕ್ಕಾಗಿ ವ್ಯವಸ್ಥೆ ಮಾಡಿಕೊಂಡಿರುತ್ತಿದ್ದರು. ಈದಿನ, ಅವರು ತಮ್ಮ ಲಂಗರ್ ಆಹಾರವನ್ನು ಸೇವಿಸುತ್ತಿದ್ದಾಗ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರೊಂದಿಗೆ ಸೇರಿಕೊಂಡರು. ಸಂಘಗಳ ನಾಯಕರು ಕೂಡ ಸಂಜೆ ಚಹಾ ವಿರಾಮದ ಸಮಯದಲ್ಲಿ ಸರ್ಕಾರ ನೀಡುವ ಪಾನೀಯವನ್ನು ಸ್ವೀಕರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಬಣಗಳ ಘರ್ಷಣೆಯಿಂದ ಬಳಲುತ್ತಿರುವ ಆಡಳಿತ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು (ಎನ್‌ಸಿಪಿ) ಒಗ್ಗೂಡಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿಯೋಜಿಸಿದ ಚೀನಾದ ನಿಯೋಗವು ಎನ್‌ಸಿಪಿ ಧುರೀಣರನ್ನು ಒಗ್ಗೂಡಿಸುವ ತನ್ನ ಯತ್ನದಲ್ಲಿ ಯಶಸ್ಸು ಕಾಣದೆ ಕೈ ಕೈ ಹಿಸುಕಿಕೊಂಡು 2020 ಡಿಸೆಂಬರ್ 30ರ ಬುಧವಾರ ತನ್ನ ನೇಪಾಳ ಭೇಟಿಯನ್ನು ಮುಕ್ತಾಯಗೊಳಿಸಿದೆ. ಇದರೊಂದಿಗೆ ನೇಪಾಳ ರಾಜಕೀಯದಲ್ಲಿ ಮೂಗು ತೂರಿಸಲು ಯತ್ನಿಸಿದ ಚೀನಾಕ್ಕೆ ಭಾರೀ ಮುಖಭಂಗವಾದಂತಾಗಿದೆ. ನಾಲ್ಕು ದಿನಗಳ ಭೇಟಿಯ ಅವಧಿಯಲ್ಲಿ ಕ್ಸಿ ಜಿನ್ ಪಿಂಗ್ ಪ್ರಾಯೋಜಿತ ನಿಯೋಗಕ್ಕೆ ತನ್ನ ಉದ್ದೇಶವನ್ನು ಈಡೇರಿಸಲು ಅಥವಾ ಮುಂದಿನ ವರ್ಷಕ್ಕೆ ನಿಗದಿಯಾಗಿರುವ ರಾಷ್ಟ್ರೀಯ ಚುನಾವಣೆಗಳಿಗಾಗಿ ಕಮ್ಯುನಿಸ್ಟರ ನೇತೃತ್ವದ ಪರ್ಯಾಯ ಮೈತ್ರಿಯನ್ನು ರೂಪಿಸಲು ಸಾಧ್ಯವಾಗಲಿಲ್ಲ ಎಂದು ಸುದ್ದಿ ಮೂಲಗಳು ತಿಳಿಸಿವೆ. ಕಮ್ಯುನಿಸ್ಟ್ ಪಕ್ಷದ ನಾಯಕರ ನಾಲ್ಕು ಸದಸ್ಯರ ಪ್ರಮುಖ ತಂಡದ ನೇತೃತ್ವ ವಹಿಸಿದ್ದ ಕಮ್ಯುನಿಸ್ಟ್ ಪಕ್ಷದ ಚೀನಾದ ಕೇಂದ್ರ ಸಮಿತಿಯ ಅಂತಾರಾಷ್ಟ್ರೀಯ ವಿಭಾಗದ ಉಪ-ಮಂತ್ರಿ ಗುಯೋ ಯೆಝೊವು ಅವರು ನೇಪಾಳ ಕಮ್ಯುನಿಸ್ಟ್ ಪಕ್ಷದ ನಾಯಕರೊಂದಿಗೆ ಸಭೆಗಳನ್ನು ನಡೆಸಿದ ಬಳಿಕ ಬುಧವಾರ ಬೆಳಗ್ಗೆ ಕಠ್ಮಂಡುವಿನ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿದರು. ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಅವರ ಇಬ್ಬರು ಪ್ರಧಾನ ಪ್ರತಿಸ್ಪರ್ಧಿಗಳಾದ ಮಾಜಿ ಪ್ರಧಾನ ಮಂತ್ರಿಗಳಾದ ಪುಷ್ಪ ಕಮಲ್ ದಹಲ್ ಅಕಾ ಪ್ರಚಂಡ ಮತ್ತು ಮಾಧವ ನೇಪಾಳ ಅವರ ಜೊತೆ ಚೀನೀ ನಿಯೋಗ ಕಳೆದ ನಾಲ್ಕು ದಿನಗಳ ಕಾಲ ವ್ಯಾಪಕ ಮಾತುಕತೆ ನಡೆಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಇಂಗ್ಲೆಂಡಿನ ರೂಪಂತರೀ ಕೊರೋನಾವೈರಸ್ ಭಾರತದಲ್ಲೂ ಪತ್ತೆಯಾದ ಹಿನ್ನೆಲೆಯಲ್ಲಿ ೨೦೨೧ರ ಜನವರಿ ೩೧ರವರೆಗೆ ಭಾರತದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 2020 ಡಿಸೆಂಬರ್ 30ರ ಬುಧವಾರ ಅಮಾನತುಗೊಳಿಸಿದೆ. ಆದರೆ ಸರಕು ಕಾರ್ಯಾಚರಣೆಗಳಿಗೆ ಇದರಿಂದ ವಿನಾಯ್ತಿ ನೀಡಿದೆ. ಇಂಗ್ಲೆಂಡಿಗೆ ಹೋಗುವ ಮತ್ತು ಅಲ್ಲಿಂದ ಬರುವ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಜನವರಿ ೭ ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದೂ ಡಿಜಿಸಿಎ ತನ್ನ ಮಾರ್ಪಾಡು ಮಾಡಲಾದ ಆದೇಶದಲ್ಲಿ ತಿಳಿಸಿತು. ಭಾರತ-ಇಂಗ್ಲೆಂಡ್ ವಿಮಾನ ಯಾನ ಸ್ಥಗಿತವನ್ನು ಜನವರಿ ೭ ರವರೆಗೆ ವಿಸ್ತರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಡಿಸೆಂಬರ್ ೩೦ ರಂದು ಶಿಫಾರಸು ಮಾಡಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಡಿಜಿ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆಯ ಜಂಟಿ ಮೇಲ್ವಿಚಾರಣಾ ಗುಂಪಿನ ಒಳಹರಿವಿನ ಆಧಾರದ ಮೇಲೆ ಈ ಶಿಫಾರಸು ಮಾಡಲಾಗಿದೆ. ರೂಪಾಂತರಿತ ಕೋವಿಡ್ -೧೯ ವೈರಸ್ಸನ್ನು ಪತ್ತೆಹಚ್ಚಲು ಆರೋಗ್ಯ ಸಚಿವಾಲಯವು ಡಿಸೆಂಬರ್ ೯ ರಿಂದ ೨೨ ರವರೆಗೆ ಭಾರತಕ್ಕೆ ಆಗಮಿಸಿದವರ ಮತ್ತು ಕೋವಿಡ್ -೧೯ ಸೋಂಕು ಕಂಡು ಬಂದವರ ಮಾದರಿಗಳನ್ನು ಜಿನೊಮ್ ಪರೀಕ್ಷೆಗೆ ಒಳಪಡಿಸುತ್ತಿದೆ. "ಕಳೆದ ೧೪ ದಿನಗಳಲ್ಲಿ (ಡಿಸೆಂಬರ್ ೯ ರಿಂದ ೨೨ ರವರೆಗೆ) ಭಾರತಕ್ಕೆ ಆಗಮಿಸಿರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು, ರೋಗಲಕ್ಷಣ ಮತ್ತು ಸೋಂಕು ಹೊಂದಿದ್ದರೆ, ಅವರ ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯ ಡಿಸೆಂಬರ್ ೩೦ ರಂದು ಹೇಳಿಕೆಯಲ್ಲಿ ತಿಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಲಾವೆಪೊರಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಮೂವರು ಸ್ಥಳೀಯ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು 2020 ಡಿಸೆಂಬರ್ 30ರ ಬುಧವಾರ ತಿಳಿಸಿವೆ. ಆದಾಗ್ಯೂ, ಹತ್ಯೆಗೀಡಾದವರ ಕುಟುಂಬಗಳು ಭದ್ರತಾ ಪಡೆಗಳ ಹೇಳಿಕೆಯನ್ನು ಖಂಡಿಸಿ, ಗುಂಡಿನ ಘರ್ಷಣೆಯಲ್ಲಿ ಹತರಾದ ಯುವಕರು ನಾಗರಿಕರು ಎಂದು ಪ್ರತಿಪಾದಿಸಿದ್ದಾರೆ. ಮೃತರ ಕುಟುಂಬ ಸದಸ್ಯರು. ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯ ಹೊರಗೆ ಕುಟುಂಬಗಳು ಪ್ರತಿಭಟನೆ ನಡೆಸಿದರು. ಮಂಗಳವಾರ ಸಂಜೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ. ತರುವಾಯ ಈ ಪ್ರದೇಶದಲ್ಲಿ ಜಂಟಿ ಪಡೆಗಳ ಮೂಲಕ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮೂರು ಕೃಷಿ ಕಾಯಿದೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ಕೃಷಿ ಮುಖಂಡರೊಂದಿಗೆ 2020 ಡಿಸೆಂಬರ್ 30ರ ಬುಧವಾರ ಆರನೇ ಸುತ್ತಿನ ಮಾತುಕತೆ ನಡೆಸಿದ ಮೂವರು ಕೇಂದ್ರ ಸಚಿವರು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಚಳವಳಿಕಾರರು ಹೇಳುವ ಮೂರು ಕೃಷಿ ಕಾನೂನು ರದ್ದುಪಡಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ, ಆದಾಗ್ಯೂ, ಹೊಸ ಕಾಯ್ದೆಗಳ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರವು ಪ್ರಸ್ತಾಪಿಸಿದೆ. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್ ಮತ್ತು ಸೋಮ ಪ್ರಕಾಶ್ ಕೂಡ ಕೃಷಿ ಬೆಲೆಗಳಿಗೆ ಕನಿಷ್ಠ ಬೆಲೆಗಳನ್ನು ಖಾತರಿಪಡಿಸುವ ಕಾನೂನಿನ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ರೈತ ಪ್ರತಿನಿಧಿಯೊಬ್ಬರು ತಿಳಿಸಿದರು. ಮೊದಲ ಸುತ್ತಿನ ಮಾತುಕತೆಯ ನಂತರ ಮಂತ್ರಿಗಳು ಊಟದ ವಿರಾಮದ ಸಮಯದಲ್ಲಿ ರೈತರೊಂದಿಗೆ ಊಟ ಹಂಚಿಕೊಂಡು ಕಠಿಣ ಮಾತುಕತೆಗಳ ಮಧ್ಯೆ ಸ್ನೇಹಪರತೆಯನ್ನು ಪ್ರಸ್ತುತಪಡಿಸಿದರು. ಬುಧವಾರ ಮೊದಲ ಸುತ್ತಿನ ಮಾತುಕತೆಯಲ್ಲಿ, ಊಟದ ವಿರಾಮದ ನಂತರ, ರೈತರು ಇತ್ತೀಚಿನ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವ ಪ್ರಮುಖ ವಿಷಯವನ್ನು ಎತ್ತಿದರು. ತಮ್ಮ ಬೇಡಿಕೆಗಳ ನಡುವೆ, ರೈತರು ಕನಿಷ್ಠ ಬೆಂಬಲ ಬೆಲೆಗಳು ಎಂದು ಕರೆಯಲ್ಪಡುವ ನಿಗದಿತ ಕನಿಷ್ಠ ಬೆಂಬಲ ಬೆಲೆಗಳನ್ನು ಕೇಂದ್ರ- ರಾಜ್ಯಗಳು ಸಂಯುಕ್ತವಾಗಿ ನಿರ್ಧರಿಸಲು ಕಾನೂನು ರೂಪಿಸುವ ಸಲಹೆ ಮುಂದಿಟ್ಟರು. "ಮಂತ್ರಿಗಳು ಈ ಬಗ್ಗೆ ಏನನ್ನೂ ಹೇಳಲಿಲ್ಲ ಆದರೆ ಎಂಎಸ್‌ಪಿ ಕುರಿತು ಕಾನೂನಿನ ಬೇಡಿಕೆಯನ್ನು ಚರ್ಚಿಸಲು ಅವರು ಬಯಸಿರುವುದಾಗಿ ಹೇಳಿದರು" ಎಂದು ಭಾರತೀಯ ಕಿಸಾನ್ ಯೂನಿಯನ್ ಬಣದ ಮುಖಂಡ ಜೋಗಿಂದರ್ ಸಿಂಗ್ ಉಗರ್‍ಹಾನ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ಗೆ ತಮ್ಮ ಕೋವಿಡ್ -೧೯ ಲಸಿಕೆಗಳ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ನೀಡಲು ಭಾರತದ ಔಷಧ ಮಹಾನಿಯಂತ್ರಕ ಸಂಸ್ಥೆಯು (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ-ಡಿಸಿಜಿಐ) 2020 ಡಿಸೆಂಬರ್ 30ರ ಬುಧವಾರ ನಿರಾಕರಿಸಿದೆ ಎಂದು ಸುದ್ದಿ ಮೂಲಗಳು ಹೇಳಿದವು. ನಿಯಂತ್ರಕವು ಲಸಿಕೆ ತಯಾರಕರಿಂದ ಹೆಚ್ಚುವರಿ ಮಾಹಿತಿಯನ್ನು ಕೋರಿದೆ ಎಂದು ಸುದ್ದಿ ಮೂಲಗಳು ಹೇಳಿವೆ. ಇಂಗ್ಲೆಂಡಿನಲ್ಲಿ ಬುಧವಾರ ಆಕ್ಸ್‌ಫರ್ಡ್- ಅಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಗೆ ಅಧಿಕಾರ ಕೋರಿ ಇಯುಎಗೆ ಎಸ್‌ಐಐ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಪುರಸ್ಕರಿಸಿ ಅನುಮೋದನೆ ನೀಡಲಾಗಿದೆ. ಆದರೆ ಭಾರತ್ ಬಯೋಟೆಕ್ ಭಾರತದ ಸ್ಥಳೀಯ ಲಸಿಕೆ ಕೋವಾಕ್ಸಿನ್ ಗೆ ಅನುಮತಿ ಕೋರಿತ್ತು. ಅಮೆರಿಕದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಕೋವಿಡ್-೧೯ ಸೋಂಕನ್ನು ಹೊಂದಿರುವ ಭಾರತ, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ೩೦ ಕೋಟಿ (೩೦೦ ಮಿಲಿಯನ್) ಜನರಿಗೆ ಕೋರೋನಾ ಲಸಿಕೆಯ ಚುಚ್ಚುಮದ್ದು ನೀಡಲು ಯೋಜಿಸಿದೆ. ಕೈಗೆಟುಕುವ ಆಕ್ಸ್‌ಫರ್ಡ್ ಲಸಿಕೆ ಅದರ ದೊಡ್ಡ ಆಶಯವಾಗಿದೆ. ಎಸ್‌ಐಐ ಜೊತೆ ಭಾರತ ಸರ್ಕಾರ ಇನ್ನೂ ಖರೀದಿ ಒಪ್ಪಂದಕ್ಕೆ ಸಹಿ ಹಾಕಿಲ್ಲವಾದರೂ, ಕಂಪೆನಿಯು ಮೊದಲು ತನ್ನ ಗೃಹ ಮಾರುಕಟ್ಟೆಯತ್ತ ಗಮನ ಹರಿಸುವುದಾಗಿ ಹೇಳಿದೆ. ತದನಂತರ ಮುಖ್ಯವಾಗಿ ದಕ್ಷಿಣ ಏಷ್ಯಾದ ದೇಶಗಳು ಮತ್ತು ಆಫ್ರಿಕಾಕ್ಕೆ ರಫ್ತು ಮಾಡುತ್ತದೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಇಂಗ್ಲೆಂಡಿನಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -೧೯ ಲಸಿಕೆಗೆ ಅನುಮೋದನೆ ನೀಡುವ ಸುದ್ದಿಯಿಂದ ಉತ್ತೇಜನಗೊಂಡಿದೆ ಮತ್ತು ಭಾರತದಲ್ಲಿ ಔಷಧಗಳ ಅಂತಿಮ ಅನುಮೋದನೆಗಾಗಿ ಕಂಪೆನಿಯು ಈಗ ಕಾಯಲಿದೆ ಎಂದು ಹೇಳಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ) ಇಂದಿನ ಇತಿಹಾಸ History Today ಡಿಸೆಂಬರ್ 30 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment