ನಾನು ಮೆಚ್ಚಿದ ವಾಟ್ಸಪ್

Friday, December 18, 2020

ಇಂದಿನ ಇತಿಹಾಸ History Today ಡಿಸೆಂಬರ್ 18

 ಇಂದಿನ ಇತಿಹಾಸ  History Today ಡಿಸೆಂಬರ್ 18

2020: ಕೋಲ್ಕತ/ ನವದೆಹಲಿ: ಸುವೇಂದು ಅಧಿಕಾರಿ ಅವರ ಬಳಿಕ ತೃಣಮೂಲ ಕಾಂಗ್ರೆಸ್ ಶಾಸಕ ಸಿಲಭದ್ರ ದತ್ತ ಅವರು 2020 ಡಿಸೆಂಬರ್ 18ರ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಚುನಾವಣೆಯಲ್ಲಿ ಹೋರಾಡದಿರುವ ಇಚ್ಛೆ ವ್ಯಕ್ತ ಪಡಿಸಿದ್ದರು. ಆದರೆ ಪಕ್ಷದ ಸಂಧಾನಕಾರರು ಅವರನ್ನು ಭೇಟಿ ಮಾಡಿ ಮಾತನಾಡಲು ವಿಫಲರಾಗಿದ್ದಾರೆ, ಅದರ ನಂತರ ಟಿಎಂಸಿಯಿಂದ ಅವರು ದೂರವಾಗಿದ್ದರು. ತಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಟಿಎಂಸಿ ನಾಯಕತ್ವ ಹೆಚ್ಚು ಸಕ್ರಿಯವಾಗಿರಬೇಕಾಗಿತ್ತು ಎಂದು ದತ್ತ ಹೇಳಿದರು. ಸಾಂಸ್ಥಿಕ ವಿಷಯಗಳ ಬಗ್ಗೆ ಪಕ್ಷದ ಪ್ರಚಾರ ಕಾರ್ಯತಂತ್ರವನ್ನು ನೋಡಿಕೊಳ್ಳುತ್ತಿರುವ ಭಾರತೀಯ ರಾಜಕೀಯ ಕ್ರಿಯಾ ಸಮಿತಿಯ (-ಪಿಎಸಿ/ -ಪ್ಯಾಕ್) ಅಧಿಕಾರಿಗಳೊಂದಿಗೆ ಮಾತನಾಡಲು ಅವರು ನಿರಾಕರಿಸಿದ ನಂತರ, ಟಿಎಂಸಿಯ ಉತ್ತರ ೨೪ ಪರಗಣ ಜಿಲ್ಲಾ ಅಧ್ಯಕ್ಷರು ಎರಡು ವಾರಗಳ ಹಿಂದೆ ದತ್ತ ಅವರ ನಿವಾಸಕ್ಕೆ ಹೋಗಿದ್ದರು.  ಅದರೆ ದತ್ತ ಅವರು ಮನೆಯಲ್ಲಿ ಇಲ್ಲದ ಕಾರಣ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. -ಪ್ಯಾಕ್ ಎಂಬುದು ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ್ ಅವರ ಸಂಘಟನೆಯಾಗಿದೆ. "ಅವರು ನನ್ನೊಂದಿಗೆ ಮಾತನಾಡಲು ಬಂದಿದ್ದರು, ನಾನು ಅವರೊಂದಿಗೆ ಸಾಂಸ್ಥಿಕ ವಿಷಯಗಳನ್ನು ಚರ್ಚಿಸುವುದಿಲ್ಲ ಎಂದು ಹೇಳಿದೆ. ರಾಜಕೀಯ ಅಥವಾ ಸಾಂಸ್ಥಿಕ ಕಾರ್ಯಗಳನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಖಾಸಗಿ ಏಜೆನ್ಸಿಯಿಂದ ನಿರ್ದೇಶನಗಳನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಿಲ ಎಂದು ಬ್ಯಾರಕ್ಪೋರ್ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಟಿಎಂಸಿ ಶಾಸಕ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ರಾತ್ರೋರಾತ್ರಿ ತಂದದ್ದಲ್ಲ, ಸಾಕಷ್ಟು ಪರಿಶೀಲನೆಯ ಬಳಿಕ ತರಲಾಗಿದೆ. ಕಾನೂನುಗಳ ಅಂಶ -ಅಂಶಗಳ ಬಗೆಗೂ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಡಿಸೆಂಬರ್ 18ರ ಶುಕ್ರವಾರ ರೈತರಿಗೆ ಭರವಸೆ ನೀಡಿದರು.  ರೈತರನ್ನು ತಲುಪುವ ಕಾರ್ಯಕ್ರಮದ ಭಾಗವಾಗಿ ವಿಡಿಯೋ ಲಿಂಕ್ ಮೂಲಕ ಮಧ್ಯಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕನಿಷ್ಠ ಬೆಂಬಲ ಬೆಲೆ ಅಥವಾ ಮಂಡಿ ವ್ಯವಸ್ಥೆಯನ್ನು ರದ್ದುಗೊಳಿಸುವ ಬಗ್ಗೆ ರೈತರು ಚಿಂತಿಸಬೇಕಾಗಿಲ್ಲ ಎಂದು ಸುಮಾರು ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಹೇಳಿದರು.  ಕೃಷಿ ಸಮುದಾಯದಿಂದ ಭಾರಿ ಪ್ರತಿಭಟನೆಗಳನ್ನು ಎದುರಿಸುತ್ತಿರುವ ಮೂರು ಹೊಸ ಕೃಷಿ-ಮಾರುಕಟ್ಟೆ ಸುಧಾರಣಾ ಕಾನೂನುಗಳ ಬಗ್ಗೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಅವರು ಹೇಳಿದರು.  ದೆಹಲಿಯ ಗಡಿಯಲ್ಲಿ ೨೩ ನೇ ದಿನಕ್ಕೆ ೩೦ ಕ್ಕೂ ಹೆಚ್ಚು ರೈತ ಸಂಘಗಳ ಪ್ರತಿಭಟನೆ ಮುಂದುವರೆದಿರುವಂತೆಯೇ  ಪ್ರತಿಯೊಂದು ವಿಷಯದ ಬಗ್ಗೆಕೈ ಜೋಡಿಸಿ ಮತ್ತು ತಲೆ ಬಾಗಿಸಿ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮೋದಿ ಹೇಳಿದರು. "ದೇಶದ ರೈತರು ಮತ್ತು ಅವರ ಹಿತಾಸಕ್ತಿಗಳು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಸೇರಿವೆ ಎಂದು ಪ್ರಧಾನಿ ನುಡಿದರು. ಎಂದು ಪ್ರಧಾನಿ ಹೇಳಿದರು. ಪ್ರತಿಪಕ್ಷಗಳ ಮೇಲೆ ತೀಕ್ಷ್ಣ ದಾಳಿ ಮಾಡಿದ ಮೋದಿ, ಕೃಷಿ ಕಾನೂನುಗಳ ಬಗ್ಗೆ ಮೂರು ದೊಡ್ಡ ಸುಳ್ಳುಗಳನ್ನು ಹರಡಲಾಗುತ್ತಿದೆ ಎಂದು ಆಪಾದಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರ್ಗಸೂಚಿಗಳು ಮತ್ತು ಎಸ್ಒಪಿಗಳ ಅನುಷ್ಠಾನದ ಕೊರತೆಯ ಕಾರಣ ಕೋವಿಡ್ -೧೯ ಸಾಂಕ್ರಾಮಿಕ ರೋಗವು ಕಾಳ್ಗಿಚ್ಚಿನಂತೆ (ಕಾಡಿನ ಬೆಂಕಿ) ಹರಡಿದೆ ಎಂದು ಸುಪ್ರೀಂ ಕೋರ್ಟ್ 2020 ಡಿಸೆಂಬರ್ 18ರ ಶುಕ್ರವಾರ ಹೇಳಿತು. ಜಗತ್ತಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಬಳಲುತ್ತಿದ್ದಾರೆ. ಹೋರಾಟವು ಕೋವಿಡ್ -೧೯ ವಿರುದ್ಧದ ವಿಶ್ವ ಸಮರವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿತು. ಹೆಚ್ಚಿನ ಜಾಗರೂಕತೆ ಮತ್ತು ಕಣ್ಗಾವಲು ವಹಿಸುವಂತೆ ಕರೆ ನೀಡಿದ ನ್ಯಾಯಪೀಠ, ಅಧಿಕಾರಿಗಳು ಕರ್ಫ್ಯೂ ಅಥವಾ ಲಾಕ್ಡೌನ್ ವಿಧಿಸಲು ನಿರ್ಧರಿಸುವುದಾದರೆ, ಅದನ್ನು ಮೊದಲೇ ಪ್ರಕಟಿಸಬೇಕು. ಇದರಿಂದ ಜನರು ತಮ್ಮ ಜೀವನೋಪಾಯಕ್ಕೆ ಅವಕಾಶಗಳನ್ನು ಕಲ್ಪಿಸಿಕೊಳ್ಳಬಹುದು ಎಂದು ಸಲಹೆ ಮಾಡಿತು. ಕೋವಿಡ್ -೧೯ ಮಾರ್ಗಸೂಚಿಗಳು ಮತ್ತು ಎಸ್ಒಪಿಗಳನ್ನು ಉಲ್ಲಂಘಿಸುವವರ ವಿರುದ್ಧ ಅವರ ಸ್ಥಾನಮಾನ ಲೆಕ್ಕಿಸದೆ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ಡೆಹರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು 2020 ಡಿಸೆಂಬರ್ 18ರ ಶುಕ್ರವಾರ ದೃಢಪಟಿತು. ಕುರಿತು ಸ್ವತಃ ಟ್ವೀಟ್ ಮಾಡಿರುವ ರಾವತ್, ಕೋವಿಡ್-೧೯ ದೃಢಪಟ್ಟ ಬಳಿಕ ಹೋಮ್ ಕ್ವಾರಂಟೈನಿಗೆ ತೆರಳುತ್ತಿರುವುದಾಗಿ ತಿಳಿಸಿದರು. ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪ್ರತ್ಯೇಕ ವಾಸಕ್ಕೆ ಒಳಗಾಗಿ ಮತ್ತು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ರಾವತ್ ಮನವಿ ಮಾಡಿದರು. ಇಂದು ನಾನು ಕೊರೊನಾ ಪರೀಕ್ಷೆಯನ್ನು ಮಾಡಿಸಿದ್ದೇನೆ ಮತ್ತು ವರದಿಯು ಪಾಸಿಟಿವ್ ಬಂದಿದೆ. ನನ್ನ ಆರೋಗ್ಯವು ಉತ್ತಮವಾಗಿದೆ ಮತ್ತು ನನಗೆ ಯಾವುದೇ ಲಕ್ಷಣಗಳಿಲ್ಲ. ವೈದ್ಯರ ಸಲಹೆಯ ಮೇರೆಗೆ ನಾನು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪ್ರತ್ಯೇಕ ವಾಸಕ್ಕೆ ಮುಂದಾಗಿ ಮತ್ತು ಪರೀಕ್ಷೆಗೆ ಒಳಗಾಗಿ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಪಕ್ಷವು ಶೀಘ್ರದಲ್ಲೇ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಮತ್ತು ನಾನೂ ಸೇರಿದಂತೆ ಪಕ್ಷದ ಶೆ.೯೯. ಸದಸ್ಯರು ರಾಹುಲ್ ಗಾಂಧಿಯವರು ಚುಕ್ಕಾಣಿ ಹಿಡಿಯಬೇಕೆಂದು ಬಯಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ 2020 ಡಿಸೆಂಬರ್ 18ರ ಶುಕ್ರವಾರ ಹೇಳಿದರು. ಕಾಂಗ್ರೆಸ್ ಚುನಾವಣಾ ಕಾಲೇಜು, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಸುರ್ಜೆವಾಲ ಹೇಳಿದರು. ಪಕ್ಷದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಧಾನವನ್ನು ಪಕ್ಷ ಶೀಘ್ರದಲ್ಲೇ ಪ್ರಾರಂಭಿಸುತ್ತದೆ. ಕಾಂಗ್ರೆಸ್ ಚುನಾವಣಾ ಕಾಲೇಜು, ಎಐಸಿಸಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸದಸ್ಯರು ಯಾರು ಹೆಚ್ಚು ಸೂಕ್ತವೆಂದು ಆಯ್ಕೆ ಮಾಡುತ್ತಾರೆ. ನಾನು ಸೇರಿದಂತೆ ಶೇ.೯೯. ಮಂದಿ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಬಯಸುತ್ತಾರೆಎಂದು ಅವರು ಹೇಳಿದರು. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ತಮಿಳುನಾಡಿನ ನಿರ್ಣಾಯಕ ಚುನಾವಣೆಗಳಿಗೆ ಮುಂಚೆಯೇ ಪಕ್ಷವು ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಬಿಹಾರ ಮತ್ತು ಮಹಾರಾಷ್ಟ್ರದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಇತ್ತೀಚಿನ ಕಳಪೆ ಸಾಧನೆಯು ಅದರ ಹಲವಾರು ಪ್ರಖ್ಯಾತ ನಾಯಕರನ್ನು ಭಿನ್ನಮತೀಯರನ್ನಾಗಿ ಮಾಡಿವೆ. (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 18 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment