ನಾನು ಮೆಚ್ಚಿದ ವಾಟ್ಸಪ್

Tuesday, December 8, 2020

ಇಂದಿನ ಇತಿಹಾಸ History Today ಡಿಸೆಂಬರ್ 08

 ಇಂದಿನ ಇತಿಹಾಸ  History Today ಡಿಸೆಂಬರ್ 08

2020: ನವದೆಹಲಿ: ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಎತ್ತರ ೮೮೪೮.೮೬ ಮೀಟರ್ ಎಂಬುದಾಗಿ ನಿಗದಿ ಪಡಿಸಿರುವ ನೇಪಾಳ ಮತ್ತು ಚೀನಾ ವಿಶ್ವದ ಅತಿ ಎತ್ತರದ ಪರ್ವತದ ಎತ್ತರದ ಬಗೆಗಿನ ದೀರ್ಘಕಾಲದ ಚರ್ಚೆಯನ್ನು ಕೊನೆಗೊಳಿಸುವುದಾಗಿ 2020 ಡಿಸೆಂಬರ್ 08ರ ಮಂಗಳವಾರ ಜಂಟಿಯಾಗಿ ಪ್ರಕಟಿಸಿದವು.  ಹೊಸ ಎತ್ತರವು ಹಿಂದಿನ ಅಳತೆಗಿಂತ ೮೬ ಸೆಂ.ಮೀನಷ್ಟು ( ಅಡಿಗಿಂತ ಸ್ವಲ್ಪ ಕಡಿಮೆ) ಹೆಚ್ಚು ಎಂದು ದೇಶದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನೇಪಾಳ-ಚೀನಾ ಗಡಿಯನ್ನು ವ್ಯಾಪಿಸಿರುವ ಪರ್ವತ ಶಿಖರದ ಎತ್ತರವನ್ನು ಏಕಕಾಲದಲ್ಲಿ ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಗಯಾವಲಿ ಮತ್ತು ಕಠ್ಮಂಡು ಮತ್ತು ಬೀಜಿಂಗ್ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಘೋಷಿಸಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.  "ಇದು ಒಂದು ಐತಿಹಾಸಿಕ ದಿನ" ಎಂದು ವಿದೇಶಾಂಗ ಸಚಿವ ಗಯಾವಲಿ ಮಂಗಳವಾರ ಬಹುನಿರೀಕ್ಷಿತ ಘೋಷಣೆ ಮಾಡುತ್ತಾ ಹೇಳಿದರು. ನೇಪಾಳ ೨೦೧೧ ರಿಂದ ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯುವ ಕೆಲಸ ಮಾಡುತ್ತಿತ್ತು. ಅಧಿಕೃತ ಎವರೆಸ್ಟ್ ಹಿಮಶಿಖರದ ಎತ್ತರವನ್ನು ,೮೪೮ ಮೀಟರ್ (೨೯,೦೨೮ ಅಡಿ) ಎಂಬುದಾಗಿ ೧೯೫೪ ರಲ್ಲಿ ಭಾರತೀಯ ಸರ್ವೇಕ್ಷಣಾ (ಸರ್ವೆ ಆಫ್ ಇಂಡಿಯಾ) ಮಾಪನ ಮಾಡಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರು 2020 ಡಿಸೆಂಬರ್ 08ರ ಮಂಗಳವಾರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಸೌದಿ ಅರೇಬಿಯಾಗಳಿಗೆ ಒಂದು ವಾರದ ಪ್ರವಾಸ ಕೈಗೊಂಡಿದ್ದಾರೆ, ಇದು ಪಶ್ಚಿಮ ಏಷ್ಯಾದ ಎರಡೂ ರಾಜ್ಯಗಳಿಗೆ ಸೇನಾ ಮುಖ್ಯಸ್ಥರ ಮೊದಲ ಪ್ರವಾಸವಾಗಿದ್ದು, ಭದ್ರತಾ ಸಂಬಂಧಗಳನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಅಕ್ಟೋಬರಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರೀಂಗ್ಲಾ ಅವರೊಂದಿಗೆ ಮ್ಯಾನ್ಮಾರ್ಗೆ ಮತ್ತು ನವೆಂಬರಿನಲ್ಲಿ ನೇಪಾಳಕ್ಕೆ ಭೇಟಿ ನೀಡಿದ ನಂತರ, ರಾಜತಾಂತ್ರಿಕ ಮಾತುಕತೆಗಳೊಂದಿಗೆ ವರ್ಷ ನರವಣೆ ಅವರು ನಡೆಸುತ್ತಿರುವ ಮೂರನೇ ವಿದೇಶ ಪ್ರವಾಸ ಇದಾಗಿದೆ.  " ಭೇಟಿ ಐತಿಹಾಸಿಕವಾಗಿದ್ದು, ಭಾರತೀಯ ಸೇನಾ ಮುಖ್ಯಸ್ಥರು ಯುಎಇ ಮತ್ತು ಸೌದಿ ಅರೇಬಿಯಾ ಸಾಮ್ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿತು. ಡಿಸೆಂಬರ್ ೧೪ ರಂದು ಕೊನೆಗೊಳ್ಳುವ ಪ್ರವಾಸದಲ್ಲಿ ನರವಣೆ ಅವರು ಯುಎಇ ಮತ್ತು ಸೌದಿ ಅರೇಬಿಯಾದ ತಮ್ಮ ಸಹವರ್ತಿಗಳನ್ನು ಮತ್ತು ಉಭಯ ದೇಶಗಳ ಹಿರಿಯ ಸೇನಾ ನಾಯಕತ್ವವನ್ನು ಭೇಟಿ ಮಾಡಲಿದ್ದಾರೆ. ಸೇನಾ ಮುಖ್ಯಸ್ಥರು ಡಿಸೆಂಬರ್ -೧೦ರ ಅವಧಿಯಲ್ಲಿ ಯುಎಇಯಲ್ಲಿ ಇರುತ್ತಾರೆ ಮತ್ತು ಹಿರಿಯ ಸೇನಾ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಭೇಟಿಯು ಭಾರತ-ಯುಎಇ ರಕ್ಷಣಾ ಸಂಬಂಧವನ್ನು ಹೆಚ್ಚಿಸಲಿದೆ ಎಂದು ಎಂದು ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ/ ಜಿನೀವಾ: ಭಾರತೀಯ ಮೂಲದ ಜಾಗತಿಕ ಆರೋಗ್ಯ ತಜ್ಞ ಅನಿಲ್ ಸೋನಿ ಅವರು ಹೊಸದಾಗಿ ಪ್ರಾರಂಭಿಸಲಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಷ್ಠಾನದ (ದಿ ಡಬ್ಲ್ಯುಎಚ್ ಫೌಂಡೇಶನ್) ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ 2020 ಡಿಸೆಂಬರ್ 08ರ ಮಂಗಳವಾರ ನೇಮಕಗೊಂಡಿದ್ದಾರೆ. ಪ್ರತಿಷ್ಠಾನವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ವಿಶ್ವದಾದ್ಯಂತ ಹೆಚ್ಚಿನ ಆರೋಗ್ಯ ಸವಾಲುಗಳನ್ನು ಎದುರಿಸಲು ಕೆಲಸ ಮಾಡುತ್ತದೆ. ಮುಂದಿನ ವರ್ಷ ಜನವರಿ ರಂದು ಫೌಂಡೇಶನ್ ಚೊಚ್ಚಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೋನಿ ತಮ್ಮ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ತಮ್ಮ ಹೊಸ ಪಾತ್ರದಲ್ಲಿ, ಸೋನಿ ಅವರು ಪ್ರತಿಷ್ಠಾನದ "ಆರೋಗ್ಯಕರ ಜೀವನವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಎಲ್ಲರಿಗೂ ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶವನ್ನು ತಲುಪಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಬೆಂಬಲ ನೀಡುವ ನವೀನ, ಪುರಾವೆ ಆಧಾರಿತ ಉಪಕ್ರಮಗಳಲ್ಲಿ ಹೂಡಿಕೆ ಮಾಡುವ ಕೆಲಸವನ್ನು ಚುರುಕು ಗೊಳಿಸಲಿದ್ದಾರೆ ಎಂದು ಪ್ರತಿಷ್ಠಾನ ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಅನುದಾನ ನೀಡುವ ಸಂಸ್ಥೆ ಡಬ್ಲ್ಯುಎಚ್ ಪ್ರತಿಷ್ಠಾನವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ಮತ್ತು ಜಾಗತಿಕ ಆರೋಗ್ಯ ಸಮುದಾಯದೊಂದಿಗೆ ಕೆಲಸ ಮಾಡುವ ಸಲುವಾಗಿ ಮತ್ತು ವಿಶ್ವದ ೨೦೨೦ ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ೨೦೨೦ರ ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು.  (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಆರ್ಥಿಕ ದುಷ್ಪರಿಣಾಮವನ್ನು ನಿವಾರಿಸಲು ಕತಾರ್ ಹೂಡಿಕೆ ಪ್ರಾಧಿಕಾರದ ಹೂಡಿಕೆಗಳಿಗೆ ಅನುಕೂಲವಾಗುವಂತೆ ವಿಶೇಷ ಕಾರ್ಯಪಡೆಯನ್ನು ರಚಿಸಲು ಭಾರತ ಮತ್ತು ಕತಾರ್ 2020 ಡಿಸೆಂಬರ್ 08ರ ಮಂಗಳವಾರ ನಿರ್ಧರಿಸಿದವು.  ಕೋವಿಡ್ -೧೯ರ ಆರ್ಥಿಕ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಪ್ರಮುಖ ದೇಶಗಳನ್ನು ತಲುಪುವ  ಭಾರತದ ಯತ್ನದ ಮುಂದುವರಿದ ಭಾಗವಾಗಿ ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದ ವೇಳೆಯಲ್ಲಿ ಕಾರ್ಯಪಡೆ ರಚನೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಭಾರತದ ಸಂಪೂರ್ಣ ಇಂಧನ ಮೌಲ್ಯ ಸರಪಳಿಯಲ್ಲಿ ಸಂಭವನೀಯ ಕತಾರಿ ಹೂಡಿಕೆಗಳತ್ತ ಉಭಯ ನಾಯಕರು ಮಾತುಕತೆ ವೇಳೆ ಬೆಳಕು ಚೆಲ್ಲಿದರು. ಕತಾರ್ ಮತ್ತು ಕುವೈತ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಭೇಟಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಲೀಧರನ್ ಅವರು ಒಮಾನ್ಗೆ ಪ್ರವಾಸ ಕೈಗೊಳ್ಳುವ ಮುನ್ನ ಮಂಗಳವಾರ ಕ್ರಮ ಕೈಗೊಳ್ಳಲಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಭಾರತ ಬಂದ್ ಕರೆಯಮೇರೆಗೆ 2020 ಡಿಸೆಂಬರ್ 08ರ ಮಂಗಳವಾರ ರಾಷ್ಟ್ರಾದ್ಯಂತ ರಸ್ತೆತಡೆ, ರೈಲು ತಡೆ ಸೇರಿದಂತೆ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ಬಹುತೇಕ ಶಾಂತಿಯುತವಾಗಿ ನಡೆದವು. ಪ್ರತಿಭಟನಕಾರ ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಜಕೀಯ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ೨೫ ರಾಜ್ಯಗಳಲ್ಲಿ ಸುಮಾರು ೧೦,೦೦೦ ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ, ಹರತಾಳಗಳು ನಡೆದವು ಎಂದು  ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಹೇಳಿದರು.  "ಮುಕ್ತ ಜೈಲು" ಆಗಿರುವ ಕಾರಣ ಪ್ರತಿಭಟನಾಕಾರರು ಬುರಾರಿ ಮೈದಾನಕ್ಕೆ ಹೋಗುವುದಿಲ್ಲ. ಪ್ರತಿಭಟನೆಗೆ ತಮಗೆ ರಾಮಲೀಲಾ ಮೈದಾನವನ್ನು ನೀಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ದೆಹಲಿ ಮತ್ತು ಹರಿಯಾಣದ ಜನರಿಗೆ ತೊಂದರೆ ಕೊಡಲು ಅವರು ಬಯಸುವುದಿಲ್ಲ. ಆದ್ದರಿಂದ ದೆಹಲಿ ಗಡಿಗಳಲ್ಲೇ ಪ್ರತಿಭಟನೆ ಮುಂದುವರೆಸುವುದಾಗಿ ಅವರು ಹೇಳಿದರು. ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣದ ಹೆಚ್ಚಿನ ರೈತರು ಸಿಂಗು ಗಡಿಯಲ್ಲಿ ಟ್ರ್ಯಾಕ್ಟರ್-ಟ್ರಾಲಿಗಳು ಮತ್ತು ಕಾರುಗಳನ್ನು ತಂದು ಹೆದ್ದಾರಿಗಳನ್ನು ಅಡ್ಡಗಟ್ಟಿದರು. ಗಡಿಯಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಅಕ್ಕಿ, ಗೋಧಿ ಹಿಟ್ಟು, ಮಸೂರ, ಎಣ್ಣೆ, ಹಾಲು, ಸಾಬೂನು ಮತ್ತು ಟೂತ್ ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಂqವು. ಹೋರಾಟದ  ಸಮಯದಲ್ಲಿ, ಪ್ರತಿಭಟನಾಕಾರರು ಹಲವಾರು ಲಾಭರಹಿತ ಸಂಸ್ಥೆಗಳು ಆಯೋಜಿಸಿದ್ದ ಲಂಗಾರ್ಗಾಗಿ (ಊಟ) ಸಾಲುಗಳಲ್ಲಿ ಕುಳಿತರು. ನಂತರ, ಕೆಲವರು ತಮ್ಮ ಟ್ರಾಲಿಗಳಲ್ಲಿಯೇ ವಿಶ್ರಾಂತಿ ಪಡೆದರು. ಇತರರು ತಮ್ಮ ನಾಯಕರು ವೇದಿಕೆಯಿಂದ ಮಾಡಿದ ಭಾಷಣಗಳನ್ನು ಆಲಿಸಿದರು. ಭಾರತ್ ಬಂದ್ ಕರೆಯ ಮೇರೆಗೆ ದೇಶಾದ್ಯಂತ ರೈಲ್ವೆ ಹಳಿಗಳು ಮತ್ತು ಹೆದ್ದಾರಿಗಳನ್ನು ನಿರ್ಬಂಧಿಸಲಾಯಿತು. ೧೦ ದಿನಗಳ ನಂತರ ರಾಜಧಾನಿಯೂ ಸಂಪೂರ್ಣ ದಿಗ್ಬಂಧನಕ್ಕೆ ಒಳಗಾಯಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೃಷಿ ಕಾನೂನುಗಳ ವಿರುದ್ಧದ ಬೃಹತ್ ಪ್ರತಿಭಟನೆಗಳನ್ನು ಕೊನೆಗೊಳಿಸಲು ಸರ್ಕಾರದ ಆರನೇ ಸುತ್ತಿನ ಮಾತುಕತೆಗೆ ಒಂದು ದಿನ ಮುಂಚಿತವಾಗಿ ಸಭೆಯ ಕಾರ್ಯಸೂಚಿ ಬಗ್ಗೆ ಚರ್ಚಿಸಲು 2020 ಡಿಸೆಂಬರ್ 08ರ ಮಂಗಳವಾರ  ರಾತ್ರಿ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ರೈತರನ್ನು ಭೇಟಿಯಾದರು.  ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮತ್ತು ರೈತ ಮುಖಂಡ ರುದ್ರು ಸಿಂಗ್ ಮಾನ್ಸಾ ಮತ್ತು ಇತರರು ಅಮಿತ್ ಶಾ  ಅವರ ಜೊತೆ ಮಾತುಕತೆಗೆ ಆಗಮಿಸಿದ್ದರು. ಸರ್ಕಾರವು ರೈತರೊಂದಿಗೆ ಉನ್ನತ ಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಸೂಚಿಸುವ ಗೃಹ ಸಚಿವರ ಆಹ್ವಾನವು ರಾಷ್ಟ್ರವ್ಯಾಪಿ ಭಾರತ ಬಂದ್ - ಪ್ರತಿಭಟನೆಗಳ ಮಧ್ಯ ಬಂದಿದ್ದು, ಬಿಕ್ಕಟ್ಟು ಇತ್ಯರ್ಥದ ಹೊಸ ಭರವಸೆ ಮೂಡಿಸಿದೆ.  "ನನಗೆ ಫೋನ್ ಕರೆ ಬಂತು. ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ನಮ್ಮನ್ನು ಗಂಟೆಗೆ ಬರಲು ತಿಳಿಸಲಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು. ದೆಹಲಿ ಬಳಿಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಗುಂಪುಗಳ ವಿವಿಧ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಕಾಯತ್ ಹೇಳಿದರು(ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

2020: ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ 2020 ಡಿಸೆಂಬರ್ 08ರ ಮಂಗಳವಾರ  ಅಂಗೀಕಾರಗೊಂಡಿತು. ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್ ಒತ್ತಾಯಿಸಿದ ಕಾರಣ ಸಭಾಪತಿ ಮತ ವಿಭಜನೆ ಮಾಡಿದರು. ಮತಕ್ಕೆ ಹಾಕಿದಾಗ 37-21 ಮತಗಳ ಅಂತರದಲ್ಲಿ ಮಸೂದೆ ಅನುಮೋದನೆ ಪಡೆಯಿತು. ಧ್ವನಿ ಮತದ ಒಪ್ಪಿಗೆ ಬೇಡ, ಮತ ವಿಭಜನೆ ಮಾಡಿ ಎಂದು ವಿರೋಧ ಪಕ್ಷ  ಸದಸ್ಯರು ಒತ್ತಾಯಿಸಿದರು. ಮತ ವಿಭಜನೆ ವೇಳೆ ಮರಿತಿಬ್ಬೇಗೌಡ ಅವರನ್ನು ಹೊರತುಪಡಿಸಿ ಉಳಿದೆಲ್ಲ ಜೆಡಿಎಸ್ ಸದಸ್ಯರು ಮಸೂದೆ ಪರ ಎದ್ದು ನಿಂತು ಬೆಂಬಲ ವ್ಯಕ್ತಪಡಿಸಿದರು. ಸದಸ್ಯರ ಮತ ವಿಭಜನೆ ನಡೆಸಿದ ಸಂದರ್ಭದಲ್ಲಿ ಪರ ಹಾಗೂ ವಿರುದ್ಧ ತಲೆ ಎಣಿಕೆ ನಡೆಸಿದ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ, ಎಡಭಾಗದ ನಾಲ್ಕನೇ ಸಾಲು ಎನ್ನುವ ಬದಲು ಎಡಭಾಗದ ನಾಲ್ಕನೇ ಸೋಲು ಎಂದು ಬಾಯ್ತಪ್ಪಿ ಹೇಳಿದರು. ಇಡೀ ಸದನ ನಗೆಗಡಲಲ್ಲಿ ತೇಲಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 08 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment