ನಾನು ಮೆಚ್ಚಿದ ವಾಟ್ಸಪ್

Monday, December 7, 2020

ಇಂದಿನ ಇತಿಹಾಸ History Today ಡಿಸೆಂಬರ್ 07

 ಇಂದಿನ ಇತಿಹಾಸ  History Today ಡಿಸೆಂಬರ್ 07

2020: ನವದೆಹಲಿ/ ಲಕ್ನೋ: ‘ಅಭಿವೃದ್ಧಿಗಾಗಿ ಸುಧಾರಣೆ ಕ್ರಮಗಳು ಅತ್ಯಗತ್ಯವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  2020 ಡಿಸೆಂಬರ್ 07ರ ಸೋಮವಾರ ಪ್ರತಿಪಾದಿಸಿದರು. ಆಗ್ರಾ ಮೆಟ್ರೋ ರೈಲು ಯೋಜನೆಯ (ಎಎಂಆರ್ಪಿ) ನೇ ಹಂತದ ನಿರ್ಮಾಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಎಲ್ಲ ಕ್ಷೇತ್ರಗಳ ಸಮಗ್ರ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.  ಹೊಸ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ, ‘ಕೆಲವು ಕಾನೂನುಗಳು ಹಿಂದಿನ ಶತಮಾನದಲ್ಲಿ ಉತ್ತಮವಾಗಿದ್ದವು. ಆದರೆ, ಈಗ ಅಂತಹ ಕಾನೂನುಗಳು ಅಪ್ರಸ್ತುತವಾಗಿವೆ ಎಂದು ಅವರು ನುಡಿದರು.  ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಧಾರಣೆ ಕ್ರಮಗಳು ಭಾಗಶಃ ಜಾರಿಗೆ ಬರುತ್ತಿದ್ದವು ಅಥವಾ ಅವ್ಯವಸ್ಥೆಯಿಂದ ಕೂಡಿರುತ್ತಿದ್ದವು. ಈಗ ಸುಧಾರಣೆ ಕ್ರಮಗಳಿಂದ ಜನರ ಜೀವನಮಟ್ಟ ಸುಧಾರಿಸುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರ ಬದುಕು ಸರಳ ಮತ್ತು ಸುಂದರವಾಗಿರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದು ಮೋದಿ ಹೇಳಿದರು.  ,೦೦೦ ಕೋಟಿ ರೂ.ಗಳ ಮೌಲ್ಯದ ಮೆಟ್ರೋ ಯೋಜನೆಯು ಆಗ್ರಾದಲ್ಲಿ ಸ್ಮಾರ್ಟ್ ಸೌಲಭ್ಯಗಳ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದರು. "ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಒಂದು ದೊಡ್ಡ ಸಮಸ್ಯೆ ಎಂದರೆ ಯೋಜನೆಗಳನ್ನು ಘೋಷಿಸಲಾಯಿತು ಆದರೆ ನಿಧಿಗಳ ವ್ಯವಸ್ಥೆಗೆ ಹೆಚ್ಚಿನ ಗಮನ ನೀಡಲಾಗಿಲ್ಲ. ಆದ್ದರಿಂದ, ಯೋಜನೆಗಳು ವರ್ಷಗಳ ಕಾಲ ಎಳೆಯುತ್ತಲೇ ಇದ್ದವು. ಹೊಸ ಯೋಜನೆಗಳನ್ನು ಪ್ರಾರಂಭಿಸುವುದರ ಜೊತೆಗೆ ಅವುಗಳಿಗೆ ಹಣವನ್ನು ವ್ಯವಸ್ಥೆ ಮಾಡುವ ಬಗ್ಗೆ ನನ್ನ ಸರ್ಕಾರ ಗಮನಹರಿಸಿದೆ ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಗಡಿ ಸೇನಾ ಘರ್ಷಣೆ ಮತ್ತು ಕೊರೋನವೈರಸ್ ಸಾಂಕ್ರಾಮಿಕ ರೋಗವು ಆರ್ಥಿಕ ಸ್ಥಿತಿಗತಿ ಮೇಲೆ ಬೀರಿದ ಪ್ರಭಾವದ ಹೊರತಾಗಿಯೂ ೨೦೨೦ರ ಸಾಲಿನ ಮೊದಲ ೧೧ ತಿಂಗಳಲ್ಲಿ ಚೀನಾಕ್ಕೆ ಭಾರತದ ರಫ್ತು ಶೇಕಡಾ ೧೬ರಷ್ಟು ಹೆಚ್ಚಾಗಿದೆ ಎಂದು ಚೀನಾದ ಕಸ್ಟಮ್ಸ್ ಅಂಕಿಸಂಖ್ಯೆಗಳು 2020 ಡಿಸೆಂಬರ್ 07ರ ಸೋಮವಾರ ತೋರಿಸಿತು. ಇದಕ್ಕೆ ವ್ಯತಿರಿಕ್ತವಾಗಿ, ಇದೇ ಅವಧಿಯಲ್ಲಿ ಭಾರತವು ಚೀನಾದಿಂದ ಕಡಿಮೆ ಆಮದು ಮಾಡಿಕೊಂಡಿದ್ದು, ಇದು ಶೇಕಡಾ ೧೩ರಷ್ಟು ಕುಸಿತವನ್ನು ತೋರಿಸುತ್ತದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ಉಲ್ಲೇಖಿಸಿದ ಮಾಹಿತಿ ತೋರಿಸಿತು. ಪೂರ್ವ ಲಡಾಖ್ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಮೇ ತಿಂಗಳಿನಿಂದ ನಡೆಯುತ್ತಿರುವ ಗಡಿ ಘರ್ಷಣೆಯನ್ನು ಬೀಜಿಂಗ್ ರಾಜಕೀಯಗೊಳಿಸದ ಕಾರಣ ಚೀನಾಕ್ಕೆ ಭಾರತದ ರಫ್ತು ಏರಿಕೆಯಾಗುತ್ತಿದೆ. ಆದರೆ ನವದೆಹಲಿಯು ಚೀನಾದಿಂದ ಭಾರತಕ್ಕೆ ಬರುವ ಆಮದು ವಸ್ತುಗಳ ಮೇಲೆ ಕಡಿವಾಣ ಹಾಕಿದೆ ಎಂಬುದರತ್ತ ಚೀನಾದ ರಾಜ್ಯ ಮಾಧ್ಯಮಗಳು ಬೊಟ್ಟು ಮಾಡಿವೆ.  ಸಾಂಕ್ರಾಮಿಕ ರೋಗದಿಂದಾಗಿ ಭಾರತಕ್ಕೆ ಚೀನಾದ ರಫ್ತು ಕುಸಿತವು ಭಾರತದಲ್ಲಿ ಆಂತರಿಕ ಬೇಡಿಕೆ ಕುಸಿಯಲು ಕಾರಣವಾಗಿದೆ ಎಂದು ಟ್ಯಾಬ್ಲಾಯ್ಡ್ ಗ್ಲೋಬಲ್ ಟೈಮ್ಸ್ ಇತ್ತೀಚಿನ ದ್ವಿಪಕ್ಷೀಯ ವ್ಯಾಪಾರ ಅಂಕಿ ಅಂಶಗನ್ನು ಉಲ್ಲೇಖಿಸಿರುವ ವರದಿಯಲ್ಲಿ ತಿಳಿಸಿದೆ. "ಸೋಮವಾರ ಬಿಡುಗಡೆಯಾದ ಕಸ್ಟಮ್ಸ್ ಮಾಹಿತಿಯ ಪ್ರಕಾರ, ಅಮೆರಿಕನ್ ಡಾಲರ್ ಪರಿಭಾಷೆಯಲ್ಲಿ ಚೀನಾ ಜನವರಿಯಿಂದ ನವೆಂಬರವರೆಗೆ ಭಾರತಕ್ಕೆ ಸುಮಾರು ೫೯೦೦ ಕೋಟಿ (೫೯ ಬಿಲಿಯನ್) ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ, ಇದು ಶೇಕಡಾ ೧೩ರಷ್ಟು ಕಡಿಮೆಯಾಗಿದೆ. ವರ್ಷದ ಮೊದಲ ೧೦ ತಿಂಗಳಲ್ಲಿ ಶೇಕಡಾ ೧೬.೨ರಷ್ಟು ಕುಸಿತಕ್ಕೆ ಹೋಲಿಸಿದರೆ ಕುಸಿತ ಸ್ವಲ್ಪ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆಯೇ, ದೇಶಾದ್ಯಂತ 2020 ಡಿಸೆಂಬರ್ 07ರ ಮಂಗಳವಾರ ರಾಷ್ಟ್ರವ್ಯಾಪಿ ಬಂದ್ ಆಚರಿಸಲು ರೈತರು ಕರೆ ನೀಡಿದ್ದಾರೆ. ಬಂದ್ ಬೆಳಗ್ಗೆ ೧೧ ಗಂಟೆಯಿಂದ ಸಂಜೆ ಗಂಟೆಯವರೆಗೆ ಮಾತ್ರ ನಡೆಯುತ್ತದೆ ಜನಸಾಮಾನ್ಯರಿಗೆ ತೊಂದರೆ ಇರುವುದಿಲ್ಲ ಎಂದು ರೈತ ನಾಯಕರು ಘೋಷಿಸಿದ್ದಾರೆ. ರಾಷ್ಟ್ರವ್ಯಾಪಿ ಬಂದ್ ಕರೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳಿಗೆ ಕೇಂದ್ರ ಸರ್ಕಾರವು 2020 ಡಿಸೆಂಬರ್ 07ರ ಸೋಮವಾರ ಸಲಹೆ ಮಾಡಿದೆ. ಆರೋಗ್ಯ ಮತ್ತು ಸಾಮಾಜಿಕ ಅಂತರ ಪಾಲನೆಗೆ ಸಂಬಂಧಿಸಿದಂತೆ ಹೊರಡಿಸಲಾದ ಎಲ್ಲ ಕೋವಿಡ್ -೧೯ ಮಾರ್ಗಸೂಚಿಗಳನ್ನು ಪ್ರತಿಭಟನಾಕಾರರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಹೇಳಿದೆ. ದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಶಾಂತಿ ಮತ್ತು ನೆಮ್ಮದಿಯ ಬಗ್ಗೆ ಕೇಂದ್ರದ ಮುಖ್ಯ ಗಮನ, ಅದನ್ನು ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಸುತ್ತೋಲೆ ತಿಳಿಸಿದೆ. ಕಳೆದ ೧೧ ದಿನಗಳಿಂದ ಸಾವಿರಾರು ರೈತರು ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈವರೆಗೆ ಸರ್ಕಾರದೊಂದಿಗಿನ ಮಾತುಕತೆ ನಿರರ್ಥಕವಾಗಿದ್ದರಿಂದ, ಪ್ರತಿಭಟನಾ ನಿರತ ರೈತರು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಪ್ರತಿಭಟನಾ ರೈತರು ತಮ್ಮ ಮುಷ್ಕರವನ್ನು ಬೆಳಿಗ್ಗೆ ೧೧ ರಿಂದ ಪ್ರಾರಂಭಿಸುತ್ತಾರೆ ಮತ್ತು ಇದು ಮಧ್ಯಾಹ್ನ ಗಂಟೆಯವರೆಗೆ ಮುಂದುವರೆಯುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತೀಯ ನೌಕಾಪಡೆಯ ಮಿಗ್ -೨೯ ವಿಮಾನ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಪೈಲಟ್ ದೇಹ ೧೧ ದಿನಗಳ ನಂತರ ಪತ್ತೆಯಾಗಿದೆ. ನಾಪತ್ತೆಯಾದ ಮಿಗ್ -೨೯ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಶವವನ್ನು ವಿಮಾನ ಅಪಘಾತಕ್ಕೀಡಾದ ಪ್ರದೇಶದಲ್ಲಿಯೇ ಪತ್ತೆ ಹಚ್ಚಲಾಗಿದೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು 2020 ಡಿಸೆಂಬರ್ 07ರ ಸೋಮವಾರ ತಿಳಿಸಿದರು. ಆದಾಗ್ಯೂ, ದೇಹವು ಸಿಂಗ್ ಅವರದ್ದು ಎಂಬುದಾಗಿ ಖಚಿತಪಡಿಸಲು ಡಿಎನ್ ಪರೀಕ್ಷೆಯ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು. ಕಮಾಂಡರ್ ಸಿಂಗ್ ಅವರು ಮಿಗ್ -೨೯ ಕೆ ತರಬೇತುದಾರ ವಿಮಾನ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿದ ನಂತರ ನವೆಂಬರ್ ೨೬ ರಂದು ನಾಪತ್ತೆಯಾಗಿದ್ದರು. ವಿಮಾನದಲ್ಲಿದ್ದ ಇನ್ನೊಬ್ಬ ಪೈಲಟ್ನನ್ನು ರಕ್ಷಿಸಲು ರಕ್ಷಣಾ ತಂಡಗಳಿಗೆ ಸಾಧ್ಯವಾಗಿತ್ತು. ರಷ್ಯಾ ಮೂಲದ ಅವಳಿ ಆಸನಗಳ ತರಬೇತುದಾರ ಜೆಟ್ ದೇಶದ ಏಕೈಕ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯದ ಡೆಕ್ನಿಂದ ಹೊರಟ ನಂತರ ಭಾರತದ ಪಶ್ಚಿಮ ಕರಾವಳಿಯಲ್ಲಿ ಸಮುದ್ರಕ್ಕೆ ಅಪ್ಪಳಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಹೈದರಾಬಾದ್: ಆಂಧ್ರಪ್ರದೇಶದ ಎಲೂರಿನಲ್ಲಿ ಹರಡಲು ಪ್ರಾರಂಭಿಸಿರುವ ನಿಗೂಢ ರೋಗವು ಇದುವರೆಗೆ ಯಾವುದೇ ಸಾಂಕ್ರಾಮಿಕ ಲಕ್ಷಣಗಳನ್ನು ತೋರಿಸಿಲ್ಲ ಎಂದು ಕೇಂದ್ರ ಅಧಿಕಾರಿಗಳು 2020 ಡಿಸೆಂಬರ್ 07ರ ಸೋಮವಾರ ಹೇಳಿದ್ದಾರೆ, ಕೇಂದ್ರ ಸರ್ಕಾರವು ತುರ್ತಾಗಿ 2020 ಡಿಸೆಂಬರ್ 07ರ ಮಂಗಳವಾರ ತಜ್ಞರ ತಂಡವನ್ನು ಪಟ್ಟಣಕ್ಕೆ ಕಳುಹಿಸುವುದಾಗಿ ಘೋಷಿಸಿತು. "ಇಲ್ಲಿಯವರೆಗೆ, ಅನಾರೋಗ್ಯವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಿಲ್ಲ ಎಂದು ಕಲೆಕ್ಟರ್ ರೇವು ಮುತ್ಯಾಲಾ ರಾಜು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಇದುವರೆಗೆ ೩೪೦ಕ್ಕೂ ಹೆಚ್ಚು ಜನರು ನಿಗೂಢ ರೋಗದ ಪರಿಣಾಮವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ರೋಗನಿರ್ಣಯ ಮಾಡಲಾಗದ ನಿಗೂಢ ಕಾಯಿಲೆಯು ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಪ್ರಸ್ತುತ, ೧೫೭ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, ೧೬೮ ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಪೀಡಿತ ವ್ಯಕ್ತಿಗಳಲ್ಲಿ, ೩೦೭ ಮಂದಿ ಎಲೂರು ಪಟ್ಟಣದಿಂದ ಬಂದವರು, ೩೦ ಮಂದಿ ಗ್ರಾಮೀಣ ಪ್ರದೇಶದವರು ಮತ್ತು ಮೂವರು ಡೆಂಡುಲೂರಿನವರು. ಪೀಡಿತ ವ್ಯಕ್ತಿಗಳು ಪುನರಾವರ್ತನೆಯಿಲ್ಲದ ರಿಂದ ನಿಮಿಷಗಳ ಅಪಸ್ಮಾರ ಫಿಟ್ಸ್, ಮರೆವು, ಆತಂಕ, ವಾಂತಿ, ತಲೆನೋವು ಮತ್ತು ಬೆನ್ನು ನೋವು ಬಗ್ಗೆ ದೂರಿದ್ದಾರೆ ಎಂದು ರಾಜು ಅವರ ವರದಿ ತಿಳಿಸಿದೆ. ಸರಬರಾಜು ಮಾಡಲಾದ ನೀರು ನಿಗೂಢ ರೋಗಕ್ಕೆ ಕಾರಣ ಎಂದು ಕೆಲವರು ಅನುಮಾನಿಸಿದ್ದರೂ, ಎಲೂರು ಪುರಸಭೆಯ ನೀರು ವಿತರಿಸದ ಇತರ ಪ್ರದೇಶಗಳ ಜನರು ಸಹ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ರಾಜು ಅವರು ವರದಿಯಲ್ಲಿ ಹೇಳಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 07 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment