Saturday, December 5, 2020

ಇಂದಿನ ಇತಿಹಾಸ History Today ಡಿಸೆಂಬರ್ 05

 ಇಂದಿನ ಇತಿಹಾಸ  History Today ಡಿಸೆಂಬರ್ 05

2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೧೦ ರಂದು ಹೊಸ ಸಂಸತ್ ಕಟ್ಟಡಕ್ಕೆ ಅಡಿಪಾಯ ಹಾಕಲಿದ್ದಾರೆ ಎಂದು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು 2020 ಡಿಸೆಂಬರ್ 05ರ ಶನಿವಾರ  ಹೇಳಿದರು. ೯೭೧ ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವ ಹೊಸ ಕಟ್ಟಡವು ಒಟ್ಟು ೬೪,೫೦೦ ಚದರ ಮೀಟರ್ ವಿಸ್ತೀರ್ಣ ಜಾಗzಲ್ಲಿ ಮೂಡಿ ಬರಲಿದೆ ಎಂದು ಬಿರ್ಲಾ ಹೇಳಿದರು.  "ಈಗ ಅಸ್ತಿತ್ವದಲ್ಲಿರುವ ಪ್ರಜಾಪ್ರಭುತ್ವದ ದೇವಾಲಯವು ೧೦೦ ವರ್ಷಗಳನ್ನು ಪೂರೈಸುತ್ತಿದೆ ... ಹೊಸದನ್ನು ನಮ್ಮ ಜನರಿಂದ ಆತ್ಮ ನಿರ್ಭರ ಭಾgತದ ಒಂದು ಪ್ರಮುಖ ಉದಾಹರಣೆಯಾಗಿ ನಿರ್ಮಿಸಲಾಗುವುದು ಎಂಬುದು ನಮ್ಮ ದೇಶದ ಜನರಿಗೆ ಹೆಮ್ಮೆಯ ವಿಷಯವಾಗಿದೆಪ್ರಸ್ತಾವಿತ ಹೊಸ ಕಟ್ಟಡದ ವಿವರಗಳನ್ನು ನೀಡುತ್ತಾ ಲೋಕಸಭಾಧ್ಯಕ್ಷರು ಹೇಳಿದರು.  "ಹೊಸ ಕಟ್ಟಡವು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಸ್ವಾತಂತ್ರ್ಯದ ೭೫ ನೇ ವರ್ಷದಲ್ಲಿ, ಹೊಸ ಕಟ್ಟಡದಲ್ಲಿ ಸಂಸತ್ತಿನ ಅಧಿವೇಶನ ನಡೆಯಲಿದೆಎಂದು ಅವರು ನುಡಿದರುಹೊಸ ಕಟ್ಟಡವು ಭೂಕಂಪ ನಿರೋಧಕವಾಗಲಿದೆ ಮತ್ತು ಸಾವಿರ ಜನರು ಹೊಸ ಕಟ್ಟಡದ ನಿರ್ಮಾಣದಲ್ಲಿ ನೇರವಾಗಿ ಮತ್ತು ,೦೦೦ ಜನರು ಪರೋಕ್ಷವಾಗಿ ಭಾಗಿಯಾಗಲಿದ್ದಾರೆ ಎಂದು ಬಿರ್ಲಾ ಹೇಳಿದರು. ಹೊಸ ಕಟ್ಟಡದಲ್ಲಿ ,೨೨೪ ಸಂಸದರು ಒಟ್ಟಿಗೆ ಕುಳಿತುಕೊಳ್ಳಬಹುದು, ಆದರೆ ಉಭಯ ಸದನಗಳ ಎಲ್ಲಾ ಸಂಸದರಿಗೆ ಹೊಸ ಕಚೇರಿ ಸಂಕೀರ್ಣವನ್ನು ಈಗಿರುವ ಶ್ರಮಶಕ್ತಿ ಭವನದ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ಸಂಸತ್ತಿನ ಕಟ್ಟಡವು ದೇಶದ ಪುರಾತತ್ವ ಆಸ್ತಿಯಾಗಿರುವುದರಿಂದ ಅದನ್ನು ಸಂರಕ್ಷಿಸಲಾಗುವುದು ಎಂದು ಬಿರ್ಲಾ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಮುಂಬೈ: ರಾಜ್ಯದಲ್ಲಿ "ಸ್ಥಿರ" ಸರ್ಕಾರವನ್ನು ಬಯಸುವುದಾದರೆ ಪಕ್ಷದ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷವು 2020 ಡಿಸೆಂಬರ್ 05ರ ಶನಿವಾರ ಶಿವಸೇನೆ ನೇತೃತ್ವದ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲಿನ (ಎಂವಿಎ) ತನ್ನ ಮಿತ್ರಪಕ್ಷಗಳಿಗೆ ಮನವಿ ಮಾಡಿತು. ರಾಹುಲ್ ಗಾಂಧಿಯವರ ನಾಯಕತ್ವವು "ಸ್ಥಿರತೆಯನ್ನು ಹೊಂದಿಲ್ಲ ಎಂಬುದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ ನಂತರ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಅಧ್ಯಕ್ಷೆ ಯಶೋಮತಿ ಠಾಕೂರ್ ಅವರು ಮನವಿಯನ್ನು ಮಾಡಿದರು. ಯಶೋಮತಿ ಅವರು ಲೋಕಮತ ಮರಾಠಿ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪವಾರ್ ಅವರ ಕುರಿತಾದ  ಹೇಳಿಕೆಗಳು ಬಂದವು. ಇಂಗ್ಲಿಷ್ ಮತ್ತು ಮರಾಠಿ ಭಾಷೆಯ ಸರಣಿ ಟ್ವೀಟ್ಗಳಲ್ಲಿ ಠಾಕೂರ್ ಅವರು ಎಂವಿಎ ನಾಯಕರ ಸಂದರ್ಶನಗಳು ಮತ್ತು ಲೇಖನಗಳನ್ನು ಉಲ್ಲೇಖಿಸಿದರು. ನೀವು ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ಬಯಸಿದರೆ ನಾನು ಎಂವಿಎ ಸಹೋದ್ಯೋಗಿಗಳಿಗೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ ಎಂಬುದಾಗಿ ನಾನು ಎಂವಿಎ ನಾಯಕರಿಗೆ ಮನವಿ ಮಾಡಬೇಕಾಗಿದೆಎಂದು ಅವರು ಟ್ವೀಟ್ ಮಾಡಿದರು. ಎಲ್ಲರೂ ಒಕ್ಕೂಟದ ಮೂಲ ನಿಯಮಗಳನ್ನು ಪಾಲಿಸಬೇಕು. ನಮ್ಮ ನಾಯಕತ್ವವು ತುಂಬಾ ಪ್ರಬಲವಾಗಿದೆ ಮತ್ತು ಸ್ಥಿರವಾಗಿದೆಎಂದು ಠಾಕೂರ್ ಬರೆದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಲಂಡನ್: ಭಾರತೀಯ ಮೂಲದ ಕೆಲವರು ಹಾಗೂ ಪಂಜಾಬ್ ಜೊತೆ ಸಂಪರ್ಕ ಹೊಂದಿರುವ ಇತರರು ಸೇರಿದಂತೆ ವಿವಿಧ ಪಕ್ಷಗಳ ಮೂವತ್ತಾರು ಮಂದಿ ಬ್ರಿಟಿಷ್ ಸಂಸತ್ ಸದಸ್ಯರು ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜೊತೆಗೆ ರೈತರ ಆಂದೋಲನದ ವಿಷಯ ಪ್ರಸ್ತಾಪಿಸುವಂತೆ ಬ್ರಿಟಿಷ್ ಸರ್ಕಾರವನ್ನು 2020 ಡಿಸೆಂಬರ್ 05ರ ಶನಿವಾರ ಆಗ್ರಹಿಸಿದರು. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಬರೆದ ಪತ್ರ ಒಂದರಲ್ಲಿ ಸಂಸದರು ಆಗ್ರಹ ಮಾಡಿದರು. ಲೇಬರ್ ಸಂಸದ ತನ್ಮಂಜೀತ್ ಸಿಂಗ್ ಧೇಸಿ ಅವರ ಸಮನ್ವಯದೊಂದಿಗೆ, ಪತ್ರವು ರಾಬ್ ಅವರೊಂದಿಗೆ ತುರ್ತು ಸಭೆ ನಡೆಸಲು ಬಯಸಿದೆ ಮತ್ತು ವಿದೇಶಾಂಗ ಕಚೇರಿಯು ವಿಷಯದ ಬಗ್ಗೆ ಭಾರತದೊಂದಿಗೆ ಮಾಡಿರುವ ಪ್ರಾತಿನಿಧ್ಯಗಳ ಬಗ್ಗೆ ಅನುದಿನದ ಮಾಹಿತಿಯನ್ನು ಕೋರಿದೆ. ಮಾಜಿ ಕಾರ್ಮಿಕ ಮುಖಂಡ ಜೆರೆಮಿ ಕಾರ್ಬಿನ್, ವೀರೇಂದ್ರ ಶರ್ಮಾ, ಸೀಮಾ ಮಲ್ಹೋತ್ರಾ, ವ್ಯಾಲೆರಿ ವಾಜ್, ನಾಡಿಯಾ ವಿಟ್ಟೋಮ್, ಪೀಟರ್ ಬಾಟಮ್ಲೆ, ಜಾನ್ ಮೆಕ್ಡೊನೆಲ್, ಮಾರ್ಟಿನ್ ಡೊಚೆರ್ಟಿ-ಹ್ಯೂಸ್ ಮತ್ತು ಅಲಿಸನ್ ಥೆವ್ಲಿಸ್ ಸೇರಿದಂತೆ ಲೇಬರ್, ಕನ್ಸರ್ವೇಟಿವ್ ಮತ್ತು ಸ್ಕಾಟಿಷ್ ರಾಷ್ಟ್ರೀಯ ಪಕ್ಷದ ಸಂಸದರು ಪತ್ರಕ್ಕೆ ಸಹಿ ಹಾಕಿದ್ದಾರೆ. ಇದು ಇಂಗ್ಲೆಂಡಿನಲ್ಲಿರುವ ಸಿಖ್ಖರಿಗೆ ಮತ್ತು ಪಂಜಾಬಿಗೆ ಸಂಬಂಧಿಸಿರುವವರಿಗೆ ನಿರ್ದಿಷ್ಟವಾದ ಕಾಳಜಿಯ ವಿಷಯವಾಗಿದೆ, ಅಲ್ಲದೆ ಇದು ಇತರ ಭಾರತೀಯ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅನೇಕ ಬ್ರಿಟಿಷ್ ಸಿಖ್ಖರು ಮತ್ತು ಪಂಜಾಬಿಗಳು ತಮ್ಮ ಸಂಸದರೊಂದಿಗೆ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ, ಏಕೆಂದರೆ ಅವರು ಪಂಜಾಬ್ನಲ್ಲಿರುವ ಕುಟುಂಬ ಸದಸ್ಯರು ಮತ್ತು ಪೂರ್ವಜರ ಭೂಮಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆಎಂದು ಪತ್ರ ಹೇಳಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಸ್ವಯಂ ಸೇವಕರಾಗಿ ಕೋವಿಡ್-೧೯ ವಿರುದ್ಧ ತಯಾರಿಸಲಾಗುತ್ತಿರುವ ಭಾರತದ ಮೊದಲ ಸ್ಥಳೀಯ ಲಸಿಕೆ ಕೋವಾಕ್ಸಿನ್ ತೆಗೆದುಕೊಂಡ ಹರಿಯಾಣದ ಸಚಿವ ಅನಿಲ್ ವಿಜ್ ಅವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆನ್ನಲ್ಲೇ ಔಷಧ ತಯಾರಿ ಸಂಸ್ಥೆಯು ವ್ಯಕ್ತಿಯು ಎರಡು ಡೋಸ್ ತೆಗೆದುಕೊಂಡರೆ ಪರಿಣಾಮಕಾರಿಯಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ ಎಂದು 2020 ಡಿಸೆಂಬರ್ 05ರ ಶನಿವಾರ ತಿಳಿಸಿತು. ಒಬ್ಬ ವ್ಯಕ್ತಿಯು ಎರಡು ಡೋಸ್ ತೆಗೆದುಕೊಂಡರೆ ಪರಿಣಾಮಕಾರಿಯಾಗುವಂತೆ ಭಾರತದ ಮೊದಲ ಸ್ಥಳೀಯ ಲಸಿಕೆ ಕೋವಾಕ್ಸಿನ್ನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೈದರಾಬಾದ್ ಮೂಲದ ಔಷಧ ಸಂಸ್ಥೆ ಭಾರತ್ ಬಯೋಟೆಕ್ ಶನಿವಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿತು. ‘ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ಪಡೆದ ೧೪ ದಿನಗಳ ನಂತರ ನಿರ್ಧರಿಸಬಹುದುಎಂದು ಸಂಸ್ಥೆ ಹೇಳಿತು. ತಮ್ಮ ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ಪ್ರಯೋಗಗಳಲ್ಲಿ ಸ್ವಯಂಸೇವಕರಾಗಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ತಮಗೆ ಕೋವಿಡ್-೧೯ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ ಕೂಡಲೇ ಔಷಧ ತಯಾರಿ ಸಂಸ್ಥೆ ಸ್ಪಷ್ಟೀಕರಣ ನೀಡಿತು. "ಲಸಿಕೆ ಅಭಿವೃದ್ಧಿಯಲ್ಲಿ ಸುರಕ್ಷತೆಯು ನಮ್ಮ ಪ್ರಾಥಮಿಕ ಮಾನದಂಡವಾಗಿದೆಎಂದು ಫಾರ್ಮಾ ಸಂಸ್ಥೆ ಭರವಸೆ ನೀಡಿತು. "ಕೊವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳು -ಡೋಸ್ ವೇಳಾಪಟ್ಟಿಯನ್ನು ಆಧರಿಸಿವೆ, ಇದನ್ನು ೨೮ ದಿನಗಳ ಅಂತರದಲ್ಲಿ ನೀಡಲಾಗಿದೆ. ನೇ ಡೋಸ್ ಕೊಟ್ಟ ೧೪ ದಿನಗಳ ನಂತರ ಲಸಿಕೆ ಪರಿಣಾಮಕಾರಿತ್ವವನ್ನು ನಿರ್ಧರಿಸಲಾಗುತ್ತದೆಎಂದು ಹೈದರಾಬಾದ್ ಸಂಸ್ಥೆ ಹೇಳಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಜಮಾಯಿಸಿ ಪ್ರತಿಭಟಿಸುತ್ತಿರುವ ರೈತ ಗುಂಪುಗಳು ಮತ್ತು ಕೇಂದ್ರ ಸರ್ಕಾರದ ನಡುವೆ 2020 ಡಿಸೆಂಬರ್ 05ರ ಶನಿವಾರ ನಡೆದ ೫ನೇ ಸುತ್ತಿನ ಮಾತುಕತೆಯೂ ಅನಿಶ್ಚಿತವಾಗಿದ್ದು, ಡಿಸೆಂಬರ್ ೯ರಂದು ಮುಂದಿನ ಸುತ್ತಿನ ಮಾತುಕತೆಗೆ ಉಭಯರು ಒಪ್ಪಿಕೊಂಡಿದ್ದಾರೆ. ಹೊಸ ಕೃಷಿ ಕಾನೂನುಗಳ ಬಗೆಗಿನ ಗೊಂದಲಕ್ಕೆ ನಿವಾರಣೆಗಾಗಿ ಪ್ರತಿಭಟನಾ ನಿರತ ಕೃಷಿ ಒಕ್ಕೂಟದ ಮುಖಂಡರು ಮತ್ತು ಸರ್ಕಾರದ ನಡುವೆ ಐದನೇ ಸುತ್ತಿನ ಮಾತುಕತೆ ವಿಜ್ಞಾನ ಭವನದಲ್ಲಿ ಶನಿವಾರ ನಡೆಯಿತು.  ಸಂಧಾನ ಸಭೆಯಲ್ಲಿಯಸ್ ಆರ್ ನೋ. ನೋ ಚರ್ಚಾ (ಹೌದು ಅಥವಾ ಇಲ್ಲ, ಚರ್ಚೆ ಇಲ್ಲಎಂಬ ಪ್ಲೇಕಾರ್ಡ್ಗಳನ್ನು ಪ್ರದರ್ಶಿಸಿದ ರೈತ ಪ್ರತಿನಿಧಿಗಳು ‘ಮೌನ ಪ್ರತಿಭಟನೆ’ ನಡೆಸಿದರು. ರೈತರ ಜೊತೆಗೆ ಮಾತುಕತೆ ಆರಂಭಕ್ಕೆ ಕೆಲವು ಗಂಟೆಗಳ ಮುನ್ನ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಮೂವರು ಕೇಂದ್ರ ಸಚಿವರು ಮತ್ತು ರೈತರ ೪೦ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳ ನಡುವೆ ಈವರೆಗೆ ನಡೆಸಿದ ನಾಲ್ಕು ಸುತ್ತಿನ ಮಾತುಕತೆಗಳು ಕಗ್ಗಂಟು ಬಿಡಿಸಲು ವಿಫಲವಾಗಿವೆ. ಇತ್ತೀಚೆಗೆ ಜಾರಿಗೆ ಬಂದ ಶಾಸನವನ್ನು ಮರುಪರಿಶೀಲಿಸಲು ಮತ್ತು ರೈತರ ಬೇಡಿಕೆಗಳನ್ನು ಪರಿಹರಿಸಲು ಅಗತ್ಯವಿದ್ದರೆ ತಿದ್ದುಪಡಿ ತರಲು ಕೇಂದ್ರ ಒಪ್ಪಿದೆ. ಆದಾಗ್ಯೂ, ರೈತರು ಹೊಸ ಕಾನೂನುಗಳಿಗೆ ತಿದ್ದುಪಡಿಗಳನ್ನು ಬಯಸುವುದಿಲ್ಲ ಆದರೆ ಅವುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕೆಂದು ರೈತರು ಪಟ್ಟು ಹಿಡಿದರು ಎಂದು ಸುದ್ದಿ ಮೂಲಗಳು ಹೇಳಿದವು. ಎಲ್ಲ ಪಾಲುದಾರರ ಕೋರಿಕೆಯ ಮೇರೆಗೆ ಡಿಸೆಂಬರ್ ರಂದು ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ಮುಂದಿನ ಸುತ್ತಿನ ಮಾತುಕತೆ ನಡೆಸಲು ಶನಿವಾರದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸುದ್ದಿ ಮೂಲ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚಂದ್ರ ಗ್ರಹದ ಮೇಲೆ ತನ್ನ ರಾಷ್ಟ್ರಧ್ವಜವಾದ ಕೆಂಬಾವುಟವನ್ನು ಅದು ನೆಟ್ಟಿದೆ. ಇದರೊಂದಿಗೆ ಚಂದ್ರನಲ್ಲಿ ಇಳಿದು ರಾಷ್ಟ್ರಧ್ವಜ ನೆಡುವ ಸಾಧನೆ ಮಾಡಿದ  ಜಗತ್ತಿನ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಯಿತು. ೫೦ ವರ್ಷಗಳ ಹಿಂದೆ ಅಮೆರಿಕ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿತ್ತು.  ತೀವ್ರ ಕಸರತ್ತಿನ ಬಳಿಕ ಚೀನಾ ಚಂದ್ರನ ಅಧ್ಯಯನಕ್ಕೆ ನೌಕೆ ಕಳಿಸಿತ್ತು. ಅದರ ಸಾಹಸ ಯಾತ್ರೆ ಯಾವುದೇ ಅಡ್ಡಿ ಎದುರಾಗದೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಹೆಮ್ಮೆಯ ಸಂಕೇತವಾಗಿ ನೌಕೆ ಭೂಮಿಯತ್ತ ವಾಪಸಾಗುವ ಮುನ್ನ ಚಂದ್ರನ ಮೇಲೆ ಚೀನಾದ ರಾಷ್ಟ್ರಧ್ವಜವನ್ನು ನೆಟ್ಟಿದೆ. ಚಾಂಗ್ - ನೌಕೆಗೆ ಅಳವಡಿಸಿದ್ದ ಕ್ಯಾಮರಾ ಮೂಲಕ ಧ್ವಜ ಹಾರಾಟದ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು 2020 ಡಿಸೆಂಬರ್ 05ರ ಶನಿವಾರ ಹಂಚಿಕೊಂಡಿತು.  ಚಂದ್ರನ ಮೇಲೆ ಹಾರಿಸಿರುವ ಚೀನಾ ಧ್ವಜವು ಮೀ. ಉದ್ದ ೯೦ ಸೆಂ.ಮೀ ಅಗಲ ಇದೆ.  ಚಾಂಗ್- ನೌಕೆಯನ್ನು ನವೆಂಬರ್ ೨೩ರಂದು ಬಾನಿನತ್ತ ಕಳಿಸಲಾಗಿತ್ತು. ಡಿಸೆಂಬರ್ ೦೧ರ ಮಂಗಳವಾರ ಅದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ನಿರ್ದೇಶಿತ ಕಾರ್ಯ ಸಾಧನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 05 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment