Thursday, December 24, 2020

ಇಂದಿನ ಇತಿಹಾಸ History Today ಡಿಸೆಂಬರ್ 24

 ಇಂದಿನ ಇತಿಹಾಸ  History Today ಡಿಸೆಂಬರ್ 24

2020: ಕೋಲ್ಕತಾ: ವಿಧಾನಸಭಾ ಚುನಾವಣೆಗೆ ಮುನ್ನಹೊರಗಿನವರಮೂಲಕ ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಲು ಬಿಡುವುದಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರವೀಂದ್ರ ನಾಥ ಟ್ಯಾಗೋರ್ ಅವರಗುಜರಾತ್ ಸಂಪರ್ಕವನ್ನು ನೆನಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ 2020 ಡಿಸೆಂಬರ್ 24ರ ಗುರುವಾರ ಎದಿರೇಟು ನೀಡಿದರು.  ‘ವೈವಿಧ್ಯತೆಯಲ್ಲಿ ಏಕತೆಮಂತ್ರದ ಬಗ್ಗೆ ಜನರಿಗೆ ನೆನಪಿಸಿz ಪ್ರಧಾನಿರವೀಂದ್ರನಾಥ ಟ್ಯಾಗೋರ್ ಅವರು ಗುಜರಾತಿನೊಂದಿಗೆ ಹೇಗೆ ಸಂಪರ್ಕ ಹೊಂದಿದ್ದರುಎಂದು ವಿವರಿಸಿದರುವೀಡಿಯೊ ಸಮಾವೇಶದ ಮೂಲಕ ಶಾಂತಿನಿಕೇತದ ವಿಶ್ವ-ಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನಾನು ರವೀಂದ್ರನಾಥ ಟ್ಯಾಗೋರ್ ಬಗ್ಗೆ ಮಾತನಾಡುವಾಗಲೆಲ್ಲಾ ಅವರ ಗುಜರಾತ್ ಸಂಪರ್ಕದ ಬಗ್ಗೆ ಮತ್ತೆ ಮತ್ತೆ ಹಂಚಿಕೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ. ಕಳೆದ ಬಾರಿ ನಾನು ವಿಶ್ವ ಭಾರತಿಗೆ ಭೇಟಿ ನೀಡಿದಾಗ ಅದನ್ನು ಉಲ್ಲೇಖಿಸಿದ್ದೇನೆ. ಇಂದು, ಮತ್ತೊಮ್ಮೆ, ಗುರುದೇವ (ರವೀಂದ್ರನಾಥ ಟ್ಯಾಗೋರ್) ಮತ್ತು ಗುಜರಾತಿನಆತ್ಮೀಯತೆಬಗ್ಗೆ ನಮ್ಮೆಲ್ಲರಿಗೂ ನೆನಪಿಸಲು ಬಯಸುತ್ತೇನೆಎಂದು ಹೇಳಿದರು.  ‘ನಾವು ಇದನ್ನು ಪುನಃ ಪುನಃ ನೆನಪು ಮಾಡಿಕೊಳ್ಳಬೇಕು. ಏಕೆಂದರೆ ಇದುಏಕ ಭಾರತ-ಶ್ರೇಷ್ಠ ಭಾರತಬಗ್ಗೆ ಕಲಿಸುತ್ತದೆಎಂದು ಅವರು ನುಡಿದರು. "ವಿವಿಧ ಭಾಷೆಗಳು, ಉಪಭಾಷೆ, ಆಹಾರ ಮತ್ತು ಬಟ್ಟೆಗಳ ಹೊರತಾಗಿಯೂ, ನಮ್ಮ ದೇಶವು ಉತ್ತಮವಾಗಿ ಸಂಪರ್ಕ ಹೊಂದಿದೆ ಎಂದು ಇದು ತೋರಿಸುತ್ತದೆ. ನಮ್ಮ ವಿಭಿನ್ನ ಸಂಸ್ಕೃತಿಗಳ ಹೊರತಾಗಿಯೂ, ನಾವು ಪರಸ್ಪರ ಒಂದಾಗಿದ್ದೇವೆ ಎಂದು ಇದು ತೋರಿಸುತ್ತದೆ. ಇದು ನಮಗೆ ಸಹೋದರತ್ವವನ್ನು ಕಲಿಸುತ್ತದೆಎಂದು ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: “ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಸಮಯದಲ್ಲಿ ಮಾತುಕತೆಗೆ ಬನ್ನಿ ಎಂದು ಕೇಂದ್ರ ಕೃಷಿ ಸಚಿವಾಲಯವು 2020 ಡಿಸೆಂಬರ್ 24ರ ಗುರುವಾರ ರೈತ ಸಂಘಗಳಿಗೆ ಮತ್ತೊಮ್ಮೆ ಪತ್ರ ಬರೆದು, ಆರನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಪ್ರತಿಭಟನಾ ನಿರತ ರೈತರು ವಿಷಯದಲ್ಲಿ ತನ್ನ ಹಿಂದಿನ ಪ್ರಸ್ತಾಪವನ್ನು ತಿರಸ್ಕರಿಸಿದ ಒಂದು ದಿನದ ನಂತರ ಸಚಿವಾಲಯವು ಪತ್ರ ಬರೆದಿದೆ. ಸರ್ಕಾರವು "ಹೊಸ ಕಾರ್ಯಸೂಚಿಯನ್ನು ರೂಪಿಸುವವರೆಗೆ" ಯಾವುದೇ ಮಾತುಕತೆಗಳು ನಡೆಯುವುದಿಲ್ಲ ಎಂದು ಪ್ರತಿಭಟನಾ ನಿರತ ರೈತ ಮುಖಂಡರು ಬುಧವಾರ ಹೇಳಿದ್ದರುಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು ಸಹಿ ಮಾಡಿದ ಪತ್ರದಲ್ಲಿ, ರೈತ ಸಂಘಗಳು ಸರ್ಕಾರದ ಹಿಂದಿನ ಪ್ರಸ್ತಾಪವನ್ನು ತಿರಸ್ಕರಿಸಿ ಸರ್ಕಾರಕ್ಕೆ ಬುಧವಾರ ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ, ಪ್ರತಿಭಟನಾ ನಿರತ ರೈತರು ಎತ್ತಿದ ಎಲ್ಲ ಸಮಸ್ಯೆಗಳಿಗೆತಾರ್ಕಿಕ ಪರಿಹಾರಗಳನ್ನುತಲುಪುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದೆ. ದೇಶದ ವಿವಿಧ ರೈತರ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ಮುಕ್ತವಾಗಿ ಇರಿಸಿಕೊಳ್ಳುವುದು ಸರ್ಕಾರಕ್ಕೆ ನಿರ್ಣಾಯಕವಾಗಿದೆ ಎಂದೂ ಪತ್ರ ಹೇಳಿದೆ.  "ಸರ್ಕಾರವು ಗೌರವಯುತವಾಗಿ ಮತ್ತು ಮುಕ್ತ ಮನಸ್ಸಿನಿಂದ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದೆ ಮತ್ತು ಮುಂದಿನ ಸುತ್ತಿನ ಮಾತುಕತೆಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಸಲು ಪ್ರಸ್ತಾಪಿಸಿದೆಎಂದು ಪತ್ರದಲ್ಲಿ ತಿಳಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿದಂತೆ ರೈತ ಸಂಘಗಳು ಎತ್ತಿದ ವಿವಿಧ ಆಕ್ಷೇಪಣೆಗಳ ಬಗ್ಗೆ ಮತ್ತು ಡಿಸೆಂಬರ್ , ಮತ್ತು ರಂದು ನಡೆದ ಮಾತುಕತೆಗಳು ಸೇರಿದಂತೆ ಇದುವರೆಗಿನ ಐದು ಸುತ್ತಿನ ಸಭೆಗಳಲ್ಲಿ ಉಭಯ ಕಡೆಯವರ ನಡುವೆ ಚರ್ಚಿಸಲಾದ ಅಂಶಗಳ ಬಗ್ಗೆಯೂ ಪತ್ರ ಉಲ್ಲೇಖಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಒಂದು ತಿಂಗಳ ಕಾಲ ನಡೆದ ರೈತ ಪ್ರತಿಭಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ಮೇಲೆ 2020 ಡಿಸೆಂಬರ್ 24ರ ಗುರುವಾರ ತೀವ್ರ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ’ಈಗ ಭಾರತದಲ್ಲಿ "ಪ್ರಜಾಪ್ರಭುತ್ವವಿಲ್ಲ" ಮತ್ತು ಪ್ರಧಾನ ಮಂತ್ರಿಯ ವಿರುದ್ಧ ಎತ್ತಿದವರೆಲ್ಲರಿಗೂ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. (ಆರ್ಎಸ್ಎಸ್ ಮುಖ್ಯಸ್ಥ) ಮೋಹನ್ ಭಾಗವತ್ಗೆ ಕೂಡಾ ಇದೇ ಗತಿಎಂದು ಚುಚ್ಚಿದರುಬಂಡವಾಳಶಾಹಿ ಗಳನ್ನು ಸಂತೃಪ್ತ ಪಡಿಸಲು ಜಾರಿಗೆ ತರಲಾಗಿರುವ ಕೃಷಿ ಕಾಯ್ದೆಗಳನ್ನು ತತ್ ಕ್ಷಣ ರದ್ದು ಪಡಿಸಿಎಂದು ರಾಹುಲ್ ಆಗ್ರಹಿಸಿದರು.  "ಪ್ರಧಾನಿ ಮೋದಿ ಅವರು ತಮ್ಮ ಆಪ್ತರಾದ ಬಂಡವಾಳಶಾಹಿಗಳನ್ನು ಸಂತುಷ್ಟಿಗೊಳಿಸಲು ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ಅವರ ವಿರುದ್ಧ ನಿಲ್ಲುವ ಯಾರೇ ವ್ಯಕ್ತಿಗಳನ್ನು ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಗುತ್ತದೆ- ಅದು ರೈತರು, ಕಾರ್ಮಿಕರು ಅಥವಾ ಮೋಹನ ಭಾಗವತ್ ಆಗಿದ್ದರೂ ಸರಿಎಂದು ರಾಹುಲ್ ಗಾಂಧಿ ನುಡಿದರು. "ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಇಲ್ಲ. ಇದೆ ಎಂಬುದಾಗಿ ನಿಮ್ಮಲ್ಲಿ ಯಾರಾದರೂ ಭಾವಿಸಿದ್ದರೆ ಅದು ನಿಮ್ಮ ಕಲ್ಪನೆಯಲ್ಲಿ ಮಾತ್ರ ಇದೆಎಂದು ಕಾಂಗ್ರೆಸ್ ನಾಯಕ ಹೇಳಿದರು. ಸೆಪ್ಟೆಂಬರಿನಲ್ಲಿ ಜಾರಿಗೆ ಬಂದ ಕೃಷಿ ಕಾನೂನುಗಳ ಬಗ್ಗೆ ದೆಹಲಿ ಬಳಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರ ನಿಯೋಗದ ನೇತೃತ್ವವನ್ನು ರಾಹುಲ್ ಗಾಂಧಿ ವಹಿಸಿದ್ದರು.   (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ೨೦೨೧ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಗೆ ಎಡಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಕಾಂಗ್ರೆಸ್  2020 ಡಿಸೆಂಬರ್ 24ರ ಗುರುವಾರ  ಔಪಚಾರಿಕವಾಗಿ ಪ್ರಕಟಿಸಿತುಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಘೋಷಣೆಯನ್ನು ಟ್ವೀಟ್ ಮಾಡಿದರು.  "ಕಾಂಗ್ರೆಸ್ ವರಿಷ್ಠ ಮಂಡಳಿಯು (ಹೈಕಮಾಂಡ್) ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗಿನ ಚುನಾವಣಾ ಮೈತ್ರಿಯನ್ನು ಔಪಚಾರಿಕವಾಗಿ ಇಂದು ಅನುಮೋದಿಸಿದೆಎಂದು ಚೌಧರಿ ಟ್ವೀಟ್ ಮಾಡಿದರು. ಪಶ್ಚಿಮ ಬಂಗಾಳವು ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ಜೊತೆಗೆ ಮುಂದಿನ ವರ್ಷ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಚುನಾವಣೆಗೆ ಹೋಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಜಾತ್ಯತೀತ ಪಕ್ಷಗಳೊಂದಿಗೆ ಚುನಾವಣಾ ತಿಳುವಳಿಕೆಯನ್ನು ಹೊಂದುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ಭಾರತದ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೇಂದ್ರ ಸಮಿತಿಯು ಅಕ್ಟೋಬರ್ ತಿಂಗಳಲ್ಲಿ ಅಂಗೀಕರಿಸಿತ್ತು. ಸಿಪಿಐ (ಎಂ) ರಾಜಕೀಯ ಬ್ಯೂರೋ ಕ್ರಮಕ್ಕೆ ಮುಂದಾಗಿತ್ತು ಆದರೆ ಅಂತಿಮ ತೀರ್ಮಾನವನ್ನು ಕೇಂದ್ರ ಸಮಿತಿಗೆ ಬಿಟ್ಟಿತ್ತು. ೨೦೧೬ ಚುನಾವಣೆಯಲ್ಲಿ, ಸಿಪಿಐನ (ಎಂ) ಕೇಂದ್ರ ಸಮಿತಿಯು ಯುದ್ದ ತಂತ್ರವಾಗಿ ಕಾಂಗ್ರೆಸ್ ಜೊತೆಗೆ ಸ್ಥಾನ ಹಂಚಿಕೊಳ್ಳುವ ಪಶ್ಚಿಮ ಬಂಗಾಳ ಘಟಕದ ನಿರ್ಧಾರವನ್ನು ತಿರಸ್ಕರಿಸಿತ್ತು. ನಂತರದ ಚುನಾವಣೆಗಳಲ್ಲಿ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿತು ಮತ್ತು ಎಡರಂಗವು ಕೇವಲ ೩೨ ಸ್ಥಾನಗಳಿಗೆ ತೃಪಿ ಪಡಬೇಕಾಗಿ ಬಂದಿತ್ತು.  (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಚೆನ್ನೈ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡಿನ ರಾಜಕೀಯದಲ್ಲಿಸಂಶಯಾತ್ಮಕ ನಡೆಅನುಸರಿಸುತ್ತಿರುವ ಚಿತ್ರನಟ ರಜನಿಕಾಂತ್ ಅವರ ಜೊತೆಗೆ ಡಿಎಂಕೆ ಮಾಜಿ ಮುಖಂಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಕೂಡಾಸಸ್ಪನ್ಸ್ ಬ್ಯಾಂಡ್ ವ್ಯಾಗನ್ಸೇರಿಕೊಂಡಿದ್ದಾರೆ. ಬೆಂಬಲಿಗರು ಬಯಸಿದರೆ ಪಕ್ಷವನ್ನು ಪ್ರಾರಂಭಿಸುತ್ತೇವೆಎಂದು ಅಳಗಿರಿ ಗುರುವಾರ ಪ್ರಕಟಿಸಿದ್ದು, ಹಲವಾರು ವರ್ಷಗಳ ಬಳಿಕ ಅಳಗಿರಿ ರಾಜಕೀಯಕ್ಕೆ ಮರಳುವ ಬಗ್ಗೆ ಸ್ವತಃ ಅವರ ಬೆಂಬಲಿಗರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ರಜನೀಕಾಂತ್ ಅವರು ತಮ್ಮ ರಾಜಕೀಯ ಯೋಜನೆಗಳು ಹಾಗೂ ಮುಂದಿನ ನಡೆಯ ಬಗ್ಗೆ ತಮಿಳುನಾಡಿನ ಜನರನ್ನು ಊಹಾಪೋಹದಲ್ಲಿ ಇರಿಸಿದ್ದಾರೆ. ಎರಡನೇ ಅವಧಿಯ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಅಳಗಿರಿ 2020 ಡಿಸೆಂಬರ್ 24ರ ಗುರುವಾರ ಗೋಪಾಲಪುರಂನ ಕುಟುಂಬ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ದಯಾಳ ಅಮ್ಮಲ್ ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ಜನವರಿ ರಂದು ತಮ್ಮ ಬೆಂಬಲಿಗರನ್ನು ಸಂಪರ್ಕಿಸಿ ಹೊಸ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆಮ್ ಆದ್ಮಿ ಪಕ್ಷವು ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿ ಜಲ ಮಂಡಳಿಯ ಕಚೇರಿಯನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಎಎಪಿ ಮುಖಂಡ ರಾಘವ್ ಛಡ್ಡಾ ಮತ್ತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2020 ಡಿಸೆಂಬರ್ 24ರ ಗುರುವಾರ ಆರೋಪಿಸಿದರು. ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ರಾಘವ್ ಛಡ್ಡಾ ಗುರುವಾರವಿಡಿಯೊ ಟ್ವೀಟ್ಮಾಡುವ ಮೂಲಕ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಾಳಿಯನ್ನು ನಾಚಿಕೆಗೇಡು ಎಂದು ಕರೆದರು. ಇಂತಹ ಹೇಡಿತನದ ದಾಳಿಗೆ ತಾನು ಮತ್ತು ಅವರ ಪಕ್ಷ ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಆಮ್ ಆದ್ಮಿ ಪಕ್ಷ ಮತ್ತು ನನ್ನ ಸರ್ಕಾರ ತಮ್ಮ ಕೊನೆಯ ಉಸಿರಾಟದವರೆಗೂ ರೈತರೊಂದಿಗೆ ಸಂಪೂರ್ಣವಾಗಿ ಇರುತ್ತವೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ. ಬಿಜೆಪಿಯ ಇಂತಹ ದಾಳಿಯಿಂದ ಪ್ರಚೋದನೆಗೆ ಒಳಗಾಗಬಾರದು ಎಂದು ನಾನು ಎಲ್ಲ ಕಾರ್ಯಕರ್ತರಿಗೆ  ಮನವಿ ಮಾಡುತ್ತೇನೆ ಮತ್ತು ರೈತರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತೇನೆಎಂದು ಎಎಪಿ ಮುಖ್ಯಸ್ಥ ಹಿಂದಿಯಲ್ಲಿ ಟ್ವೀಟ್ ಮಾಡಿದರು. ಬಿಜೆಪಿ ಗೂಂಡಾಗಳು ದೆಹಲಿ ಜಲಮಂಡಳಿಯ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಕಚೇರಿಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಕಚೇರಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆಎಂದು ಛಡ್ಡಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಡಿಸೆಂಬರ್ 24 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment