Monday, March 31, 2025

PARYAYA: ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

 ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ

 ಬೆಂಗಳೂರು: ತಾನು ಪ್ರಕಟಿಸಿರುವ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ ಮೂಲಕ ನಗರದ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥೆಯು ದೆಹಲಿ ಮೂಲದ ರೆಸ್‌ ಗೌ (ಫೌಂಡೇಶನ್‌ ಫಾರ್‌ ರೆಸ್ಪಾನ್ಸಿವ್‌ ಗವರ್ನೆನ್ಸ್)‌ ಸಂಸ್ಥೆಯ ಧನಾತ್ಮಕ ಕಾರ್ಯಕ್ಕೆ ಸಹಕಾರ ನೀಡಿದೆ.

ಪಂಚಾಯತ್‌ ರಾಜ್‌ ಸಚಿವಾಲಯದ ಹಿಂದಿನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಅವರು ನಿರ್ದೇಶಕರಾಗಿರುವ ದೆಹಲಿಯ ರೆಸ್‌ ಗೌ ಸಂಸ್ಥೆಯು ಸ್ಪಂದನಶೀಲ ಆಡಳಿತಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ನಂಜನಗೂಡು, ಯಾದಗಿರಿ ತಾಲೂಕು ಮತ್ತು ಜಿಲ್ಲೆ, ಬಿಜಾಪುರ ತಾಲೂಕು ಮತ್ತು ಜಿಲ್ಲೆಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಚಟುವಟಿಕೆ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಾರ್ಗದರ್ಶನ ಮಾಡುವ ಮೂಲಕ ಅವರ ಸಾಮರ್ಥ್ಯ ವೃದ್ಧಿಗೆ ರೆಸ್‌ ಗೌ ಶ್ರಮಿಸುತ್ತಿದೆ.

ಈ ವಿಚಾರವನ್ನು ಅರಿತ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಈ ಜಿಲ್ಲೆಗಳ ಆಯ್ದ 60 ಮಂದಿ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ತಾನು ಪ್ರಕಟಿಸಿದ ಡಾ. ಶಂಕರ ಕೆ ಪ್ರಸಾದ್‌ ಅವರ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ಉಚಿತವಾಗಿ ಒದಗಿಸಿದೆ. ರೆಸ್‌ ಗೌ ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್.‌ ಮತ್ತು ಇತರರು ಪುಸ್ತಕಗಳನ್ನು ಚುನಾಯಿತ ಮಹಿಳಾ ಸದಸ್ಯರು ಮತ್ತು ತರಬೇತಿದಾರರಿಗೆ ವಿತರಿಸಿದ್ದಾರೆ.

ದುರ್ಬಲ ವರ್ಗದ ಜನರ ಸಾಮರ್ಥ್ಯ ವೃದ್ಧಿಗಾಗಿ ಕ್ರಿಯಾಶೀಲ ಮಾರ್ಗದರ್ಶನ, ಶಿಕ್ಷಣ ನೀಡುವುದು, ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಗಳ ಕುರಿತು ಸಮೀಕ್ಷೆ ನಡೆಸಿ ಸ್ಪಂದನಶೀಲ ಆಡಳಿತಕ್ಕಾಗಿ ಶಿಫಾರಸು ಮಾಡುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿರುವ ರೆಸ್‌ ಗೌ, ಹಿಂದುಳಿದ ರಾಜ್ಯಗಳಾದ ಜಾರ್ಖಂಡ್‌, ಬಿಹಾರ, ಮೇಘಾಲಯ, ಮಧ್ಯಪ್ರದೇಶ ಮತ್ತಿತರ ಕಡೆ ಕಾರ್ಯ ನಿರ್ವಹಿಸುತ್ತಿದೆ.

ಪಂಚಾಯತ್‌ ರಾಜ್‌ ಸಚಿವಾಲಯದ ನಿವೃತ್ತ ಕಾರ್ಯದರ್ಶಿ, ಐಎಎಸ್‌ ಅಧಿಕಾರಿ ಸುನೀಲ್‌ ಕುಮಾರ್‌ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ರೂಪಿಸಿದ ʼದಿಕ್ಸೂಚಿ ಕಲಿಕಾ ತಂತ್ರಜ್ಞಾನʼವನ್ನು (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ ಎಲ್‌ ಟಿ) ಮೆಚ್ಚಿಕೊಂಡು ಪಂಚಾಯಿತಿ ಸದಸ್ಯರಿಗೆ ತರಬೇತಿಗೆ ಅದನ್ನು ಬಳಸಿಕೊಳ್ಳುವಂತೆ ಸಲಹೆ ಮಾಡಿದ್ದರು.

 ಚಿತ್ರ: ರೆಸ್‌ ಗೌ ಸಂಸ್ಥೆಯ ಹಿರಿಯ ರಾಜ್ಯ ಒಡನಾಡಿ ಶೈಲಜಾ ಎಸ್‌ ಅವರು ಆಯ್ದ ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ಮತ್ತು ತರಬೇತಿದಾರರಿಗೆ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಒದಗಿಸಿದ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕಗಳನ್ನು ವಿತರಿಸಿದರು.

 ಇವುಗಳನ್ನೂ ಓದಿರಿ: 

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……

ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ
ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ
ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆತ್ಮ ನಿರ್ಭರ ಗ್ರಾಮ ಪಂಚಾಯ್ತಿ ಪುಸ್ತಕದ ಡಿಜಿಟಲ್‌ ಆವೃತ್ತಿಯೂ ಇದೀಗ ಲಭ್ಯ. ಶೇಕಡಾ 50ರಷ್ಟು ದರ ಪಾವತಿಸಿ ಡಿಜಿಟಲ್‌ ಪುಸ್ತಕವನ್ನು ಪಡೆಯಬಹುದು. ಪುಸ್ತಕ ಪಡೆಯಲು ಸಂಪರ್ಕಿಸಿ: ಮೊಬೈಲ್‌ ನಂಬರ್‌ 9480215706 ಅಥವಾ 9845049970. ಡಿಜಿಟಲ್‌ ಪುಸ್ತಕ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼಸಂಪೂರ್ಣʼ ಸಹಕಾರ:   ರೆಸ್ಪಾನ್ಸಿವ್‌ ಗವರ್ನೆನ್ಸ್‌ ಗೆ ʼ ಸಂಪೂರ್ಣ ʼ ಸಹಕಾರ   ಬೆಂ ಗಳೂರು: ತಾನು ಪ್ರಕಟಿಸಿರುವ ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಪುಸ್ತಕಗಳನ್ನು ಉಚಿತವಾಗಿ ಒದಗಿಸುವ ...

Sunday, March 30, 2025

PARYAYA: ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

 ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಮಾರ್ಚ್‌ ೩೦ರ ಭಾನುವಾರ ವಿಶ್ವಾವಸು ಸಂವತ್ಸರ ಆರಂಭದ ಚಾಂದ್ರ ಯುಗಾದಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.

ಹೊಸ ವರ್ಷಾರಂಭದ ಪ್ರಯುಕ್ತ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ, ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆದವು. ಬಡಾವಣೆಯ ಶ್ರೀ ನಾರಾಯಣ ಸ್ವಾಮಿ ಮತ್ತು ಕುಟುಂಬದವರು ದೇವರಿಗೆ ಈ ದಿನದ ವಸ್ತ್ರಾಲಂಕಾರ ಸೇವೆಯನ್ನು, ಶ್ರೀ ಮುನಿರಾಜು ಮತ್ತು ಕುಟುಂಬದವರು ಪ್ರಸಾದ ಹಾಗೂ ಹೂವಿನ ಅಲಂಕಾರವನ್ನು ವಹಿಸಿಕೊಂಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಇಲ್ಲಿವೆ. ವಿಡಿಯೋ ನೋಡಲು ವಿಶೇಷ ವಸ್ತ್ರಾಲಂಕಾರದಲ್ಲಿ ಇರುವ ಎಡಬದಿಯ ಶ್ರೀ ವೆಂಕಟೇಶ್ವರ ಅಥವಾ ಕೆಳಗೆ ಇರುವ ಶ್ರೀ ಮಹಾಗಣಪತಿ ಇಲ್ಲವೇ ಅಭಯ ಆಂಜನೇಯ ಸ್ವಾಮಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ


ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

ರಾತ್ರಿ ಜ್ಯೋತಿಯ ಮಂದ ಬೆಳಕಿನಲ್ಲಿ ನಡೆದ ಪಂಚಾರತಿ, ಮಹಾರತಿ, ಮಹಾ ಮಂಗಳಾರತಿ ವೀಕ್ಷಣೆಯ ಅನಿರ್ವಚನೀಯ ಆನಂದವನ್ನು ಭಕ್ತರು ಪಡೆದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.



PARYAYA: ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ:   ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ...

PARYAYA: ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?

 ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?

ವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಧಿಕೃತ ಐಷಾರಾಮಿ ಕಾರು ಲಿಮೋಸಿನ್‌ ಮಾಸ್ಕೋದಲ್ಲಿ ಸ್ಫೋಟಗೊಂಡಿದೆ ಎಂದು ʼದಿ ಸನ್ʼ ವರದಿ ಮಾಡಿದೆ.

೨,೭೫,೦೦೦ ಪೌಂಡ್‌ ಬೆಲೆಯ ಪುಟಿನ್‌ ಅವರ ಈ ಅಧಿಕೃತ ಕಾರು ಸ್ಪೋಟಗೊಂಡು ಬೆಂಕಿಗೆ ಆಹುತಿಯಾಗಿರುವುದು ಈಗ ರಷ್ಯಾ ಅಧ್ಯಕ್ಷರ  ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಭೀತಿಯನ್ನು ಹುಟ್ಟು ಹಾಕಿದೆ. ಜೊತೆಗೆ ಕ್ರೆಮ್ಲಿನ್‌ನೊಳಗಿನ ಆಂತರಿಕ ಬೆದರಿಕೆಗಳ ಬಗ್ಗೆಯೂ ಅನುಮಾನಗಳನ್ನು ಹೆಚ್ಚಿಸಿದೆ.

ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿರುವ ಲಿಮೋದ ವೀಡಿಯೊ ಅಂತರ್ಜಾಲದಲ್ಲಿಯೂ ಕಾಣಿಸಿಕೊಂಡಿದೆ. ರಷ್ಯಾ ಅಧ್ಯಕ್ಷರ ಅನಾರೋಗ್ಯ ಸಂಬಂಧಿತ ವದಂತಿಗಳ ನಡುವೆ ರಷ್ಯಾ ಯುದ್ಧದಲ್ಲಿ ನಿರ್ಣಾಯಕ ಹಿನ್ನಡೆಯನ್ನು ಅನುಭವಿಸಬಹುದು ಎಂಬುದಾಗಿ ಉಕ್ರೇನಿನ ಅಧ್ಯಕ್ಷ ವ್ಲೊಡಿಮಿರ್‌ ಝೆಲೆನ್ಸ್ಕಿ ಅವರು ಭವಿಷ್ಯ ನುಡಿದ ಕೆಲವೇ ದಿನಗಳಲ್ಲಿ ಈ ಸ್ಫೋಟ ಸಂಭವಿಸಿದೆ.

ರಣರಂಗದಲ್ಲಿ ಹೆಚ್ಚುತ್ತಿರುವ ನಷ್ಟಗಳ ಮಧ್ಯೆಝೆಲೆನ್ಸ್ಕಿ ಇತ್ತೀಚೆಗೆ ನಡೆಯುತ್ತಿರುವ ಯುದ್ಧದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದರು. "ವಾಲ್ಡಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆಎಂಬುದಾಗಿ ಝೆಲೆನ್ಸ್ಕಿ ಹೇಳಿದ್ದು ಸತ್ಯ ಎಂಬುದಾಗಿ ಮಿರರ್ ವರದಿ ಮಾಡಿತ್ತು.

 "...ಇದು (ಯುದ್ಧ) ಕೊನೆಗೊಳ್ಳುತ್ತದೆ" ಎಂದು ಹೇಳಿದ್ದ ಉಕ್ರೇನ್‌ ಅಧ್ಯಕ್ಷ, "ಬಲವಾಗಿರಿ" ಮತ್ತು ಮಾಸ್ಕೋದ ಆಕ್ರಮಣವನ್ನು ನಿಲ್ಲಿಸಲು ಒತ್ತಡವನ್ನು ಮುಂದುವರಿಸಿʼ ಎಂದು ಅಮೆರಿಕಕ್ಕೆ ಮನವಿ ಮಾಡಿದ್ದರು.

ರಷ್ಯಾದ ರಾಜಕೀಯ ಗಣ್ಯರ ಸಂಕೇತವೆಂದು ಪರಿಗಣಿಸಲಾದ £275,000 ಮೌಲ್ಯದ ಔರಸ್ ಸೆನಾಟ್ಲುಬಿಯಾಂಕಾದಲ್ಲಿರುವ ಎಫ್‌ ಎಸ್‌ ಬಿ (FSB) ಪ್ರಧಾನ ಕಚೇರಿಯ ಬಳಿ ಉರಿಯುತ್ತಿರುವುದು ಕಂಡುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರಎಂಜಿನ್‌ನಿಂದ ಜ್ವಾಲೆಗಳು ಹೊರಬಂದು ನಂತರ ವಾಹನದೊಳಗೆ ಹರಡಿತು. ಅಗ್ನಿಶಾಮಕ ಸಿಬ್ಬಂದಿ ಬರುವ ಮೊದಲು ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಇದ್ದ ಜನರು ಸಹಾಯ ಮಾಡಲು ಧಾವಿಸಿದರು. ವಾಹನದಿಂದ ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವುದನ್ನು ದೃಶ್ಯಗಳು ತೋರಿಸಿವೆ ಮತ್ತು ಕಾರಿನ ಹಿಂಭಾಗದಲ್ಲಿ ಹಾನಿ ಕಂಡುಬಂದಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ದಿ ಸನ್ ವರದಿಯ ಪ್ರಕಾರಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಘಟನೆಯ ಬಳಿಕ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಿರತರಾಗಿರುವುದನ್ನೂ ವಿಡಿಯೋ ತೋರಿಸಿದೆ.

PARYAYA: ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?:   ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ? ನ ವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಧಿಕೃತ ಐಷಾರಾಮಿ ಕಾರು ಲಿಮೋಸಿನ್‌ ಮಾಸ್ಕೋದಲ್ಲಿ ಸ್ಫೋಟಗೊಂ...

Friday, March 28, 2025

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತ...

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತ...:   ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ ದೈ ವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿ...

Thursday, March 27, 2025

PARYAYA: ಭಾರತದ ಹಳೆಯ ರಂಗಮಂದಿರಗಳು

 ಭಾರತದ ಹಳೆಯ ರಂಗಮಂದಿರಗಳು

ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆಇದು ರಂಗಭೂಮಿ ಕಲೆಅದರ ವೃತ್ತಿಪರರು ಮತ್ತು ಸಾಂಸ್ಕೃತಿಕ ವಿನಿಮಯ ಮತ್ತು ಮಾನವ ಅಭಿವ್ಯಕ್ತಿಯಲ್ಲಿ ಅದರ ಪಾತ್ರವನ್ನು ಗೌರವಿಸಲು ಮೀಸಲಾಗಿರುವ ದಿನಈ ದಿನವು ಪ್ರಪಂಚದಾದ್ಯಂತ ವಿವಿಧ ಸಮಾಜಗಳ ಮೇಲೆ ರಂಗಭೂಮಿಯ ಪ್ರಭಾವವನ್ನು ಪ್ರತಿಬಿಂಬಿಸಲು ಮತ್ತು ರಂಗಭೂಮಿ ಕಲೆಗಳ ಮಹತ್ವವನ್ನು ಎತ್ತಿ ತೋರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.

ವಿಶ್ವ ರಂಗಭೂಮಿ ದಿನವು ಈ ಜಾಗತಿಕ ಆಚರಣೆಯನ್ನು ಮೊದಲು ಪ್ರಾರಂಭಿಸಿದ ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ITI) ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ವಿಶ್ವ ರಂಗಭೂಮಿ ದಿನವನ್ನು 1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ (ITI) ಆರಂಭಿಸಿತು. ಈ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯನ್ನು 1948ರಲ್ಲಿ ಯುನೆಸ್ಕೋ ಮತ್ತು ಅಂತಾರಾಷ್ಟ್ರೀಯ ರಂಗಭೂಮಿ ಮಂಡಳಿ ಸ್ಥಾಪಿಸಿದವು. ರಂಗಭೂಮಿಯ ಮಹತ್ವವನ್ನು ಒಂದು ಕಲಾ ಪ್ರಕಾರವಾಗಿ ಉತ್ತೇಜಿಸಲು ಮತ್ತು ಸಾಂಸ್ಕೃತಿಕ ವಿನಿಮಯಶಿಕ್ಷಣ ಮತ್ತು ಸಮಾಜದಲ್ಲಿ ಅದು ವಹಿಸುವ ಮಹತ್ವದ ಪಾತ್ರವನ್ನು ಆಚರಿಸಲು ಈ ದಿನದ ಆಚರಣೆಯನ್ನು ಶುರು  ಮಾಡಲಾಯಿತು.

ಈ ಸಂದರ್ಭದಲ್ಲಿ ಭಾರತದಲ್ಲಿ ಸುದೀರ್ಘ ಕಾಲದಿಂದ ಬೆಳೆದು ಬಂದಿರುವ ಕೆಲವು ರಂಗಮಂದಿರಗಳ ಬಗ್ಗೆ ತಿಳಿಯೋಣ.

ಮಿನರ್ವ ಥಿಯೇಟರ್, ಕೋಲ್ಕತ

ಭಾರತದ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿರುವ ಒಂದು ಪ್ರಸಿದ್ಧ ರಂಗಮಂದಿರ ಮಿನರ್ವ ಥಿಯೇಟರ್. ಇದನ್ನು 1893ರಲ್ಲಿ ನಿರ್ಮಿಸಲಾಯಿತು. ಇದನ್ನು ಮೊದಲು ಗ್ರೇಟ್ ನ್ಯಾಷನಲ್ ಥಿಯೇಟರ್ ಇದ್ದ ಬೀಡನ್ ಸ್ಟ್ರೀಟ್‌ನಲ್ಲಿರುವ ಸ್ಥಳದಲ್ಲಿ ನಿರ್ಮಿಸಲಾಯಿತು. ಈ ರಂಗಮಂದಿರದಲ್ಲಿ ನಡೆದ ಮೊದಲ ನಾಟಕ "ಮ್ಯಾಕ್‌ಬೆತ್". ಇದು ಆರಂಭದಲ್ಲಿ ನಾಗೇಂದ್ರ ಭೂಷಣ್ ಮುಖ್ಯೋಪಾಧ್ಯಾಯ ಅವರ ಒಡೆತನದಲ್ಲಿತ್ತು. ಕಾಲಾನಂತರದಲ್ಲಿಇದು ಅನೇಕ ಮಾಲೀಕತ್ವದ ವರ್ಗಾವಣೆಗಳಿಗೆ ಸಾಕ್ಷಿಯಾಯಿತು. ಶ್ರೀ ಗಿರೀಶ್ ಘೋಷ್ ಈ ರಂಗಮಂದಿರದಲ್ಲಿ ತಮ್ಮ ಜೀವಮಾನದ ಕೊನೆಯ ಅದ್ಭುತ ಪ್ರಸ್ತುತಿಯನ್ನು ನೀಡಿದುದಕ್ಕಾಗಿ ಖ್ಯಾತರಾಗಿದ್ದಾರೆ. 1922 ರಲ್ಲಿ "ಮಿನರ್ವ" ಬೆಂಕಿಯಲ್ಲಿ ಸುಟ್ಟುಹೋಯಿತು. ನಂತರ ಇದನ್ನು ನವೀಕರಿಸಲಾಯಿತು. 1925ರಲ್ಲಿ ಇದು ತನ್ನ ಹಳೆಯ ಸ್ಥಾನಮಾನವನ್ನು ಮರಳಿ ಪಡೆಯಿತು ಮತ್ತು ನಾಟಕ ಪ್ರದರ್ಶನವನ್ನು ಪುನರಾರಂಭಿಸಿತು. ಸ್ಟಾರ್ ಥಿಯೇಟರ್ ಮತ್ತು ದಿ ಕ್ಲಾಸಿಕ್ ಥಿಯೇಟರ್ ಜೊತೆಗೆಮಿನರ್ವ ಕೂಡಾ ಹಿರಾಲಾಲ್ ಸೇನ್ ನಿರ್ಮಿಸಿದ ಪಶ್ಚಿಮ ಬಂಗಾಳದ ಮೊದಲ ಚಲನಚಿತ್ರಗಳನ್ನು ಪ್ರದರ್ಶಿಸಿದ ಸ್ಥಳಗಳಲ್ಲಿ ಒಂದಾಗಿದೆ.

ಪಾರ್ಸಿ ರಂಗಮಂದಿರ ಮತ್ತು ಗ್ರಾಂಟ್ ರೋಡ್ ಥಿಯೇಟರ್ಮುಂಬೈ

ಭಾರತದ ʼಕಲ್ಚರಲ್‌ ಮೆಲ್ಟಿಂಗ್‌ ಪಾಟ್‌ʼ ಎಂಬುದಾಗಿ ಸಾಮಾನ್ಯವಾಗಿ ಪರಿಗಣಿಸಲ್ಪಡುವ ಮುಂಬೈಯಲ್ಲಿ 19 ನೇ ಶತಮಾನದಲ್ಲಿ ಪಾರ್ಸಿ ರಂಗಮಂದಿರ ಜನಿಸಿತು. 1800ರ ದಶಕದ ಮಧ್ಯಭಾಗದಲ್ಲಿ ಸ್ಥಾಪಿಸಲಾದ ಗ್ರಾಂಟ್ ರೋಡ್ ಥಿಯೇಟರ್ ಈ ಪ್ರದರ್ಶನಗಳಿಗೆ ಮೂಲಾಧಾರವಾಯಿತು. ಭಾರತೀಯ ಪುರಾಣಗಳನ್ನು ಪಾಶ್ಚಿಮಾತ್ಯ ಶೈಲಿಯ ಆಪೆರಾಟಿಕ್ಸ್‌ನೊಂದಿಗೆ ಬೆರೆಸಿಪಾರ್ಸಿ ರಂಗಮಂದಿರ ಬಾಲಿವುಡ್‌ನ ಕಥೆ ಹೇಳುವ ತಂತ್ರಗಳಿಗೆ ಅಡಿಪಾಯ ಹಾಕಿತು.

1853 ರಲ್ಲಿಪಾರ್ಸಿ ಡ್ರಾಮಾಟಿಕ್ ಕಾರ್ಪ್ ಬಾಂಬೆಯ ಗ್ರಾಂಟ್ ರೋಡ್ ಥಿಯೇಟರ್‌ನಲ್ಲಿ ʼರುಸ್ತಮ್ ಜಬುಲಿ ಮತ್ತು ಜೊಹ್ರಾಬ್ʼ ನಾಟಕವನ್ನು ಪ್ರದರ್ಶಿಸಿತು. ಈ ನಾಟಕವು ಹತ್ತನೇ ಶತಮಾನದಲ್ಲಿ ಪರ್ಷಿಯನ್ ಕವಿ ಫೆರ್ದೌಸಿ ಬರೆದ ಪರ್ಷಿಯನ್ ಮಹಾಕಾವ್ಯ ʼಶಹನಮೆʼ ಯ ರೂಪಾಂತರವಾಗಿತ್ತು.

ಇದು ಯೋಧರಾದ ರುಸ್ತಮ್ ಮತ್ತು ಆತನ ಪುತ್ರ ಸೊಹ್ರಾಬ್ ಅವರ ದುಃಖದ ಕಥೆಯನ್ನು ಹೇಳುತ್ತದೆ. ಈ ಪ್ರದರ್ಶನವು ನಗರದಲ್ಲಿ ಪಾರ್ಸಿ ರಂಗಭೂಮಿ ಚಳುವಳಿಯ ಆರಂಭವನ್ನು ಗುರುತಿಸಿತುವಿಶೇಷವಾಗಿ ಹಿಂದಿ ಸಿನೆಮಾ ಉದ್ಯಮದ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿತು. ನಗರದ ಮೊದಲ ರಂಗಮಂದಿರವು ವಾಣಿಜ್ಯ ಸ್ವರೂಪ ಪಡೆದ ಸುಮಾರು ಎಪ್ಪತ್ತು ವರ್ಷಗಳ ನಂತರ ಪಾರ್ಸಿ ಡ್ರಾಮಾಟಿಕ್ ಕಾರ್ಪ್ ಈ ನಾಟಕವನ್ನು ಪ್ರದರ್ಶಿಸಿತು. ಈ ಮಧ್ಯೆಬಾಂಬೆಯಲ್ಲಿರುವ ಪಾರ್ಸಿ ಸಮುದಾಯದಿಂದ  ನಾಟಕ ಕ್ಷೇತ್ರ ಪ್ರವೇಶಕ್ಕಾಗಿ ವಿವಿಧ ಕಾರ್ಯಕ್ರಮಗಳು ನಡೆದವು.

1776ರಲ್ಲಿ ಬಾಂಬೆ ಗ್ರೀನ್ ನೆರೆಹೊರೆಯಲ್ಲಿ ಸ್ಥಾಪಿಸಲಾದ ನಗರದ ಆರಂಭಿಕ ರಂಗಮಂದಿರವಾದ ಬಾಂಬೆ ಥಿಯೇಟರ್‌ನಲ್ಲಿ ಯುರೋಪಿಯನ್ ನಿರ್ಮಾಣ ಕಂಪನಿಗಳು ಸಾಂದರ್ಭಿಕವಾಗಿ ಪ್ರದರ್ಶನ ನೀಡುತ್ತಿದ್ದವು. ಬಾಂಬೆ ಗವರ್ನರ್ ಮೌಂಟ್‌ಸ್ಟುವರ್ಟ್ ಎಲ್ಫಿನ್‌ಸ್ಟೋನ್ ಈ ರಂಗಮಂದಿರಕ್ಕೆ ಹಣಕಾಸು ಒದಗಿಸಿದರೂಎಲ್ಫಿನ್‌ಸ್ಟೋನ್ ನಿರ್ಗಮನದ ನಂತರ ಅದು ಸಾಲದ ಸುಳಿಗೆ ಸಿಲುಕಿತು. 1834ರಲ್ಲಿ ನಡೆದ ಪ್ರಮುಖ ಸರ್ಕಾರಿ ಅಧಿಕಾರಿಗಳ ಸಮ್ಮೇಳನದಲ್ಲಿಹಣ ನಷ್ಟವಾಗುತ್ತಿದ್ದರೆ ರಂಗಮಂದಿರವನ್ನು ಕ್ಲಬ್‌ಹೌಸ್ ಆಗಿ ಪರಿವರ್ತಿಸಲು ಸೂಚಿಸಲಾಯಿತು. ಅಂದರೆ ಅಷ್ಟೊಂದು ದುಸ್ಥಿತಿಗೆ ಅದು ತಲುಪಿತ್ತು.

ಈ ಹಂತದಲ್ಲಿಪ್ರಸಿದ್ಧ ಪಾರ್ಸಿ ಉದ್ಯಮಿ ಮತ್ತು ದಾನಿ ಜಮ್ಸೆಟ್ಜೀ ಜೀಜೀಭಾಯ್ ರಂಗಮಂದಿರದ ರಕ್ಷಕನಾಗಿ ಮಧ್ಯಪ್ರವೇಶಿಸಿದರು. 1835ರಲ್ಲಿಅವರು ರಂಗಮಂದಿರಕ್ಕಾಗಿ 50,000 ರೂಪಾಯಿಗಳ ದೇಣಿಗೆ ನೀಡಿದರು. ಎಲ್ಲ ಸಾಲ ಮತ್ತು ಬಿಲ್‌ಗಳನ್ನು ತೆರವುಗೊಳಿಸಿದರು ಮತ್ತು ರಂಗಮಂದಿರದ ಆಸ್ತಿಯನ್ನು ಉಳಿಸಿಕೊಂಡರು.

ಒಂದು ದಶಕದ ಕಾಲಬಾಂಬೆಯಲ್ಲಿರುವ ರಂಗಮಂದಿರ ಮುಚ್ಚಲ್ಪಟ್ಟಿತ್ತು. 1844 ರಲ್ಲಿಬಾಂಬೆಯ ಪ್ರಮುಖ ವ್ಯಾಪಾರಿ ಜಗನ್ನಾಥ್ ಶಂಕರ್‌ಸೇತ್ಗ್ರಾಂಟ್ ರೋಡ್ ಥಿಯೇಟರ್ ನಿರ್ಮಿಸಲಾದ ಗ್ರಾಂಟ್ ರೋಡ್‌ನಲ್ಲಿ ಒಂದು ಭೂಮಿಯನ್ನು ದಾನ ಮಾಡಿದರು. ಈ ಸ್ಥಳದಲ್ಲಿಇಂಗ್ಲಿಷ್ ಶಿಕ್ಷಣ ಪಡೆದ ಭಾರತೀಯರು ಬರೆದ ನಾಟಕಗಳನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. 1846 ರಲ್ಲಿಹೊಸದಾಗಿ ಸ್ಥಾಪಿಸಲಾದ ಹಿಂದೂ ನಾಟಕ ದಳ ಎಂದು ಕರೆಯಲ್ಪಟ್ಟ ರಂಗಭೂಮಿ ಗುಂಪು ಖೇತ್ವಾಡಿ ರಂಗಮಂದಿರದಲ್ಲಿ ಮರಾಠಿಗುಜರಾತಿ ಮತ್ತು ಹಿಂದೂಸ್ತಾನಿ ಭಾಷೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿತು.

ಮದ್ರಾಸ್ ಸಂಗೀತ ಅಕಾಡೆಮಿಚೆನ್ನೈ

ಪ್ರಾಥಮಿಕವಾಗಿ ಕರ್ನಾಟಕ ಸಂಗೀತದ ವೇದಿಕೆಯಾಗಿದ್ದರೂ, 1928 ರಲ್ಲಿ ಸ್ಥಾಪನೆಯಾದ ಈ ಐಕಾನಿಕ್ ಸಂಸ್ಥೆಯು ಸಾಂಪ್ರದಾಯಿಕ ಭಾರತೀಯ ನೃತ್ಯ ನಾಟಕಗಳು ಮತ್ತು ನಾಟಕ ಪ್ರದರ್ಶನಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಭರತನಾಟ್ಯದಂತಹ ಶಾಸ್ತ್ರೀಯ ಕಲಾ ಪ್ರಕಾರಗಳನ್ನು ಸಂರಕ್ಷಿಸುವತ್ತ ಅಕಾಡೆಮಿಯ ಗಮನವು ಸಾಂಸ್ಕೃತಿಕ ಕೇಂದ್ರಬಿಂದುವಾಗಿ ಚೆನ್ನೈಯ ಸ್ಥಾನಮಾನವನ್ನು ಭದ್ರಪಡಿಸಿತು.

ಮದ್ರಾಸ್‌ನ ಸಂಗೀತ ಅಕಾಡೆಮಿಲಲಿತಕಲೆಗಳ ಇತಿಹಾಸದಲ್ಲಿ ಒಂದು ಹೆಗ್ಗುರುತು ಸಂಸ್ಥೆ. ಇದು ಡಿಸೆಂಬರ್ 1927 ರಲ್ಲಿ ಮದ್ರಾಸ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಒಂದು ಅಂಗವಾಗಿ ಹೊರಹೊಮ್ಮಿತು. ಅದರೊಂದಿಗೆ ಸಂಗೀತ ಸಮ್ಮೇಳನ ನಡೆಯಿತು ಮತ್ತು ಚರ್ಚೆಗಳ ಸಮಯದಲ್ಲಿಸಂಗೀತ ಅಕಾಡೆಮಿಯ ಕಲ್ಪನೆ ಹೊರಹೊಮ್ಮಿತು. ಆಗಸ್ಟ್ 18, 1928 ರಂದು ಎಸ್ಪ್ಲನೇಡ್‌ನ ವೈಎಂಸಿಎ ಆಡಿಟೋರಿಯಂನಲ್ಲಿ ಸರ್ ಸಿ ಪಿ ರಾಮಸ್ವಾಮಿ ಅಯ್ಯರ್ ಅವರು ಉದ್ಘಾಟಿಸಿದ ಈ ಸಂಸ್ಥೆಯು ಕರ್ನಾಟಕ ಸಂಗೀತದ ಮಾನದಂಡವನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕೆಂದು ಭಾವಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ, 1929 ರಲ್ಲಿ ಸಂಗೀತದ ಕುರಿತು ವಾರ್ಷಿಕ ಸಮ್ಮೇಳನಗಳನ್ನು ಆಯೋಜಿಸುವ ಅಭ್ಯಾಸವನ್ನು ಇದು ಪ್ರಾರಂಭಿಸಿತುಇದು ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಮದ್ರಾಸಿನಲ್ಲಿ ಡಿಸೆಂಬರ್ ಸಂಗೀತ ಉತ್ಸವಕ್ಕೆ ನಾಂದಿ ಹಾಡಿತು.

1930ರ ದಶಕದಲ್ಲಿ ಸಂಗೀತ ಅಕಾಡೆಮಿ ಶಾಸ್ತ್ರೀಯ ನೃತ್ಯದ ಉದ್ದೇಶವನ್ನು ಸಮರ್ಥಿಸಿಕೊಂಡಿತು ಮತ್ತು ಈ ವಿಷಯದ ಕುರಿತು ಚರ್ಚೆಗಳಿಗೆ ವೇದಿಕೆಯನ್ನು ಒದಗಿಸಿತು. ಹೆಚ್ಚು ಮುಖ್ಯವಾಗಿಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕಲೆಯ ಸೌಂದರ್ಯವನ್ನು ಸಾರ್ವಜನಿಕರು ನೋಡುವಂತೆ ಮಾಡುವ ಉದ್ದೇಶದಿಂದ ನೃತ್ಯ ಪ್ರದರ್ಶನಗಳನ್ನು ನೀಡಿತು. ದಕ್ಷಿಣ ಭಾರತೀಯ ಸಂಗೀತ ಮತ್ತು ನೃತ್ಯದ ಜೊತೆಗೆಸಂಗೀತ ಅಕಾಡೆಮಿಯು ಭಾರತದ ಉಳಿದ ಭಾಗ ಮತ್ತು ಪ್ರಪಂಚದಾದ್ಯಂತದ ಹಿಂದೂಸ್ತಾನಿ ಸಂಗೀತಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ಒಂದು ವೇದಿಕೆಯಾಗಿದೆ. ವರ್ಷಗಳಲ್ಲಿ ಅಕಾಡೆಮಿಯ ಡಿಸೆಂಬರ್ ಸಂಗೀತ ಋತುವಿನ ಸಂಘಟನೆಯು ದಕ್ಷತೆಗೆ ಪರ್ಯಾಯ ಪದವಾಯಿತು ಮತ್ತು ಅದರ ಸಭಾಂಗಣವು ಪ್ರಪಂಚದಾದ್ಯಂತದ ಸಂಗೀತ ಪ್ರಿಯರು ಅದರ ವಿಶಿಷ್ಟ ಕಲಾತ್ಮಕ ವಾತಾವರಣದಲ್ಲಿ ಆನಂದಿಸಲು ಅಲ್ಲಿಗೆ ಬರುವುದನ್ನು ಕಂಡಿದೆ.

ರಂಗಾಯಣಮೈಸೂರು

1989ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಉದ್ಘಾಟನೆಯಾದ ರಂಗಾಯಣವು ವಸಾಹತುಶಾಹಿ ಯುಗದ ರಂಗಭೂಮಿಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಹೊಸದು. ಆದರೆ ಕರ್ನಾಟಕದ ಶ್ರೀಮಂತ ರಂಗಭೂಮಿ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ. ಇದು ಸಮಕಾಲೀನ ನಿರ್ಮಾಣಗಳನ್ನು ಪೋಷಿಸುವಾಗ ಯಕ್ಷಗಾನ ಮತ್ತು ಕನ್ನಡ ರಂಗಭೂಮಿಯ ಪರಂಪರೆಯನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

೧೯೮೯ರಲ್ಲಿ ಕರ್ನಾಟಕ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ರಂಗಾಯಣವು ದಿವಂಗತ ಬಿ.ವಿ.ಕಾರಂತರ ಕನಸಿನ ಕೂಸು. ರಂಗಾಯಣವು ಕಲಾವಿದರುತಂತ್ರಜ್ಞರು ಮತ್ತು ಸಿಬ್ಬಂದಿಗಳ ಕಠಿಣ ಪರಿಶ್ರಮದೊಂದಿಗೆ ಅವರ ಕಲ್ಪನೆದೃಷ್ಟಿಕೋನಪ್ರತಿಭೆಕನಸನ್ನು ಮೈಗೂಡಿಸಿಕೊಂಡಿದೆ. ಶ್ರೀ ಸಿ.ಬಸವಲಿಂಗಯ್ಯ ಮತ್ತು ಶ್ರೀ ಪ್ರಸನ್ನನಂತರ ನಿರ್ದೇಶಕರಾದ ಶ್ರೀ ಚಿದಂಬರ ರಾವ್ ಜಂಬೆ ಹಾಗೂ ಶ್ರೀ ಬಿವಿ ಕಾರಂತ ಅವರು ಈ ಸಂಸ್ಥೆಗೆ ಪರಿಕಲ್ಪನಾತ್ಮಕ ಅಡಿಪಾಯವನ್ನು ನಿರ್ಮಿಸಲು ಮತ್ತು ಅದರ ವ್ಯಾಪ್ತಿ ಮತ್ತು ದಿಗಂತವನ್ನು ವಿಸ್ತರಿಸಲು ಬಹಳ ಶ್ರಮಿಸಿದ್ದಾರೆ.

ಸ್ಟಾರ್ ಥಿಯೇಟರ್ಕೋಲ್ಕತ್ತಾ

1883 ರಲ್ಲಿ ನಿರ್ಮಿಸಲಾದ ಸ್ಟಾರ್ ಥಿಯೇಟರ್ ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಒಂದು ಪೌರಾಣಿಕ ಸ್ಥಾನಮಾನವನ್ನು ಹೊಂದಿದೆ. ನಾಟಕಗಳಲ್ಲಿ ವಿದ್ಯುತ್ ಬೆಳಕನ್ನು ಪರಿಚಯಿಸಿದ ಮೊದಲ ಸ್ಥಳಗಳಲ್ಲಿ ಇದು ಒಂದಾಗಿತ್ತು. ಸಾಮಾಜಿಕ ಸುಧಾರಣಾವಾದಿ ನಾಟಕಗಳನ್ನು ಪ್ರದರ್ಶಿಸಲು ಹೆಸರುವಾಸಿಯಾದ ಇದು ಬಂಗಾಳ ನವೋದಯದ ಸಮಯದಲ್ಲಿ ಪ್ರಗತಿಪರ ಚಿಂತನೆಗೆ ದಾರಿದೀಪವಾಯಿತು.

ಸ್ಟಾರ್ ಥಿಯೇಟರ್ಕೋಲ್ಕತ್ತಾದ ಹತಿಬಗನ್‌ನಲ್ಲಿರುವ ಒಂದು ರಂಗಮಂದಿರವಾಗಿದೆ. ಇದನ್ನು 1883ರಲ್ಲಿ ನಿರ್ಮಿಸಲಾಯಿತು. ಆರಂಭದಲ್ಲಿ ಬೀಡನ್ ಸ್ಟ್ರೀಟ್‌ನಲ್ಲಿ ನೆಲೆಗೊಂಡಿದ್ದ ಈ ರಂಗಮಂದಿರವು ನಂತರ ಕಾರ್ನ್‌ವಾಲಿಸ್ ಸ್ಟ್ರೀಟ್‌ಗೆ ಸ್ಥಳಾಂತರಗೊಂಡಿತು - ಈಗ ಬಿಧಾನ್ ಸರನಿ ಎಂದು ಕರೆಯಲಾಗುತ್ತದೆ. ಬಿನೋದಿನಿ ಥಿಯೇಟರ್ಮಿನರ್ವ ಥಿಯೇಟರ್ ಜೊತೆಗೆವಾಣಿಜ್ಯ ಬಂಗಾಳಿ ರಂಗಭೂಮಿಯ ಮೊದಲ ಸಂಸ್ಥೆಗಳಲ್ಲಿ ಒಂದಾಗಿತ್ತು.

ಹಿರಾ ಲಾಲಾ ಸೇನ್ ನಿರ್ಮಿಸಿದ ಬಂಗಾಳದ ಮೊದಲ ಚಲನಚಿತ್ರಗಳನ್ನು ಪ್ರದರ್ಶಿಸಿದ ಸ್ಥಳಗಳಲ್ಲಿ ಮಿನರ್ವ ಮತ್ತು ದಿ ಕ್ಲಾಸಿಕ್ ಥಿಯೇಟರ್ ಜೊತೆಗೆ ಸ್ಟಾರ್ ಥಿಯೇಟರ್ ಕೂಡ ಒಂದಾಗಿತ್ತು. 1880 ರ ದಶಕದಲ್ಲಿ ಸ್ಟಾರ್ ಥಿಯೇಟರ್‌ನಲ್ಲಿ ನಾಟಕಗಳನ್ನು ನಿರ್ಮಿಸಿದ ಮೊದಲಿಗರಲ್ಲಿ ಗಿರೀಶ್ ಚಂದ್ರ ಘೋಷ್ ಒಬ್ಬರು. ಇದು ಕಲ್ಕತ್ತಾದ (ಕೋಲ್ಕತ್ತಾ) ಒಂದು ಪರಂಪರೆಯ ತಾಣವಾಗಿದ್ದುದು ಅಗ್ನಿ ದುರಂತದಲ್ಲಿ ನಾಶಗೊಂಡಿತ್ತು. ನಂತರ ಸ್ಥಳೀಯ ಪುರಸಭೆಯು ಅದನ್ನು ಮರು ನಿರ್ಮಾಣ ಮಾಡಿತು.

ಮರುಸ್ಥಾಪನೆಗೊಂಡ ಸ್ಟಾರ್ ಥಿಯೇಟರ್ ಪರಂಪರೆಯ ಮುಂಭಾಗವನ್ನು ನಿರ್ವಹಿಸುತ್ತದೆಒಳಾಂಗಣಗಳು ಸಮಕಾಲೀನವಾಗಿವೆ. ಆಸ್ತಿಯನ್ನು ಖಾಸಗಿ ಕಂಪನಿಯು ನಿರ್ವಹಿಸುತ್ತದೆ.

ಈ ರಂಗಮಂದಿರಗಳು ಪ್ರದರ್ಶನ ಸ್ಥಳಗಳಿಗಿಂತ ಹೆಚ್ಚಿನವುಅವು ಇತಿಹಾಸದ ಜೀವಂತ ಭಂಡಾರಗಳು. ಭಾರತದ ಸಾಮಾಜಿಕ-ಸಾಂಸ್ಕೃತಿಕ ವಿಕಾಸವನ್ನು ಪ್ರತಿಬಿಂಬಿಸುತ್ತವೆ. ದಶಕಗಳಲ್ಲಿಅವು ಬದಲಾಗುತ್ತಿರುವ ಅಭಿರುಚಿಗಳಿಗೆ ಹೊಂದಿಕೊಂಡಿವೆಶಾಸ್ತ್ರೀಯ ನಿರೂಪಣೆಗಳನ್ನು ರಕ್ಷಿಸುವಾಗ ಆಧುನಿಕ ನಿರ್ಮಾಣಗಳನ್ನು ಅಳವಡಿಸಿಕೊಂಡಿವೆ. ಈ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವವರು ಪ್ರದರ್ಶನಗಳನ್ನು ಮಾತ್ರವಲ್ಲದೆ ಹಿಂದಿನ ಪ್ರತಿಧ್ವನಿಗಳನ್ನು ಅನುಭವಿಸುತ್ತಾರೆಅಲ್ಲಿ ಕಲೆ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ.

ಭಾರತದ ಅತ್ಯಂತ ಹಳೆಯ ರಂಗಮಂದಿರಗಳು ದೇಶದ ಕಲಾತ್ಮಕ ಸ್ಥಿತಿಸ್ಥಾಪಕತ್ವದ ಕಾಲಾತೀತ ಜ್ಞಾಪನೆಗಳಾಗಿವೆಪ್ರೇಕ್ಷಕರನ್ನು ಅದರ ಸಾಂಸ್ಕೃತಿಕ ಪರಂಪರೆಯ ಶ್ರೀಮಂತ ವೇಷಭೂಷಣದೊಂದಿಗೆ ಜೋಡಿಸುತ್ತವೆ. ಈ ಸಾಂಪ್ರದಾಯಿಕ ಹಂತಗಳು ಉಳಿದುಕೊಂಡಂತೆಅವು ಕಥೆ ಹೇಳುವ ಶಕ್ತಿ ಮತ್ತು ನೇರ ಪ್ರದರ್ಶನದ ನಿರಂತರ ಆಕರ್ಷಣೆಗೆ ಸಾಕ್ಷಿಯಾಗಿ ನಿಲ್ಲುತ್ತವೆ.

-ನೆತ್ರಕೆರೆಉದಯಶಂಕರ

(ಮಾಹಿತಿ ಕೃಪೆ: ವಿವಿಧ ಮೂಲಗಳಿಂದ)

PARYAYA: ಭಾರತದ ಹಳೆಯ ರಂಗಮಂದಿರಗಳು:   ಭಾರತದ ಹಳೆಯ ರಂಗಮಂದಿರಗಳು ಪ್ರ ತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ , ಇದು ರಂಗಭೂಮಿ ಕಲೆ , ಅದರ ವೃತ್ತಿಪರರು ಮತ್ತು ಸಾಂಸ್ಕೃತ...

Monday, March 24, 2025

PARYAYA: ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!

  ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!

ಪ್ರತಿ ವರ್ಷ 500,000 ಕ್ಕೂ ಹೆಚ್ಚು ಜನರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ.

2009 ರಲ್ಲಿ ನಿಗೂಢ ಘಟನೆಯೊಂದು ಸಂಭವಿಸಿತು.

ಒಬ್ಬ ವ್ಯಕ್ತಿ ಕಾಣಿಸಿಕೊಂಡ. ಆತನ ಗುರುತು ಇಲ್ಲ. ಭೂತಕಾಲದ ವಿವರವಿಲ್ಲ. ಅವನು ಎಲ್ಲಿಂದ ಬಂದ ಎಂಬುದರ ದಾಖಲೆ ಇಲ್ಲ. ಆತ ಹೇಳಿಕೊಂಡ ಪ್ರಕಾರ ಆತನ ಹೆಸರು ಪೀಟರ್‌ ಬರ್ಗ್‌ಮನ್.‌ ಆದರೆ ಇಂತಹ ವ್ಯಕ್ತಿ ಅಸ್ತಿತ್ವದಲ್ಲೇ ಇಲ್ಲ ಎಂಬುದು ದಾಖಲೆಗಳು ಬಹಿರಂಗ ಪಡಿಸಿದ ಸತ್ಯ. ಹೀಗಾಗಿ ಇದು ಸಾರ್ವಕಾಲಿಕ ಅಂತರ್ಜಾಲ ರಹಸ್ಯಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಹಾಗಿದ್ದರೆ ಈ ಘಟನೆ ಏನು?

ಅದು ಜೂನ್ 2009. ತನ್ನನ್ನು ಪೀಟರ್ ಬರ್ಗ್‌ಮನ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬ ಐರ್ಲೆಂಡಿನ ಸ್ಲಿಗೊ ಪಟ್ಟಣಕ್ಕೆ ಬಂದ. ಆತ  ಒಂದು ಸಣ್ಣ ಹೋಟೆಲ್‌ಗೆ ಭೇಟಿ ನೀಡಿ, ನಗದು ಪಾವತಿಸಿ ಕೊಠಡಿಯೊಂದನ್ನು ಪಡೆದ. ಆತನ ಬಳಿ ಸವೆದ ಒಂದೇ ಒಂದು ಹಳೆಯ ಚೀಲವಿತ್ತು.

(ವಿವರಗಳಿಗೆ  ಇಲ್ಲಿ ಕ್ಲಿಕ್‌ ಮಾಡಿ ಅಥವಾ ನಿಗೂಢ ಪುಟ ನೋಡಿ)

PARYAYA: ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!:     ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..! ಪ್ರ ತಿ ವರ್ಷ  500,000  ಕ್ಕೂ ಹೆಚ್ಚು ಜನರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ. 2009  ರಲ್ಲಿ   ನಿಗೂಢ ಘಟನೆಯ...

Saturday, March 22, 2025

PARYAYA: ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರ...

 ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು

ಭಾರತದ  ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಬಲಿದಾನದ ದಿನ ಮಾರ್ಚ್‌ ೨೩ರ ಈದಿನ. ೧೯೩೧ರ ಮಾರ್ಚ್‌ ೨೩ರಂದು ಬ್ರಿಟಿಷರು ಈ ಮೂರೂ ಮಂದಿ ದೇಶಭಕ್ತರನ್ನು ಗಲ್ಲಿಗೇರಿಸಿದ್ದರು.

ಬ್ರಿಟಿಷರನ್ನು ದುಃಸ್ವಪ್ನವಾಗಿ ಕಾಡಿದ್ದ ಈ ಮೂವರು ದೇಶಭಕ್ತರು ದೆಹಲಿಯ ಸೆಂಟ್ರಲ್‌ ಅಸೆಂಬ್ಲಿಯಲ್ಲಿ ಬಾಂಬ್‌ ಎಸೆದು ಬ್ರಿಟಿಷರ ಎದೆಯನ್ನೇ ನಡುಗಿಸಿದ್ದರು. ಅವರನ್ನು ೧೯೩೧ರ ಮಾರ್ಚ್‌ ೨೪ರಂದು ಗಲ್ಲಿಗೇರಿಸುವುದಾಗಿ ಪ್ರಕಟಿಸಿದ್ದರೂ ಒಂದು ದಿನ ಮುಂಚಿತವಾಗಿಯೇ ಅವರನ್ನು ಗಲ್ಲಿಗೇರಿಸಲಾಗಿತ್ತು.

ಈ ಹುತಾತ್ಮರ ಗೌರವಾರ್ಥವಾಗಿ ದೇಶದಲ್ಲಿ ಈದಿನವನ್ನು ʼಬಲಿದಾನ ದಿವಸʼವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಈ ಮೂವರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ʼಇಂದು ನಮ್ಮ ದೇಶವು ಭಗತ್‌ ಸಿಂಗ್‌, ಸುಖದೇವ್‌ ಮತ್ತು ರಾಜಗುರು ಅವರ ಅಪ್ರತಿಮ ಹೋರಾಟ, ಪರಾಕ್ರಮ ಮತ್ತು ತ್ಯಾಗವನ್ನು ಸ್ಮರಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಮತ್ತು ನ್ಯಾಯಕ್ಕಾಗಿ ಅವರು ನಡೆಸಿದ ನಿರ್ಭೀತ ಹೋರಾಟ ನಮಗೆಲ್ಲರಿಗೂ ಸ್ಫೂರ್ತಿದಾಯಕʼ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದರ ಸಹಿತವಾಗಿ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್)‌ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಇವುಗಳನ್ನೂ ಓದಿ:

Let us pay tribute to Great Patriots

PARYAYA: ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರ...:   ಬಲಿದಾನ ದಿನ: ಹುತಾತ್ಮ ಭಗತ್‌ ಸಿಂಗ್‌, ಸುಖದೇವ್‌, ರಾಜಗುರು ನೆನಪು ಭಾ ರತದ   ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಹುತಾತ್ಮ ಭಗತ್‌ ಸಿಂಗ್‌, ಸ...

PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ:   ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ ಬೆಂ ಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳ...

Friday, March 21, 2025

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩

ವೃದ್ಧ ಬ್ರಾಹ್ಮಣನ ಜೊತೆ ಮಾತನಾಡಿದ ಸದೃಢಕಾಯದ ವ್ಯಕ್ತಿ ತಾನು ಪಾಂಡು ರಾಜನ ಪುತ್ರ ಮಧ್ಯಮ ಪಾಂಡವ ಪಾರ್ಥ ಎಂಬುದಾಗಿ ಹೇಳುತ್ತಾನೆ. ಹಳೆಯ ಸೇತುವೆ ಇದ್ದ ಈ ಸಮುದ್ರ ತೀರಕ್ಕೆ ಬಂದಾಗ ಮುದಿ ಕೋತಿಯೊಂದಿಗೆ ನಡೆದ ಮಾತುಕತೆ ವಾಗ್ವಾದಕ್ಕೆ ತಿರುಗಿ, ಪಂಥಾಹ್ವಾನ ಮಾಡಿಕೊಂಡು ತಾನು ಅಗ್ನಿಕುಂಡಕ್ಕೆ ಹಾರಬೇಕಾದ ಸ್ಥಿತಿ ಹೇಗೆ ಬಂದೊದಗಿತು ಎಂದು ವಿವರಿಸುತ್ತಾನೆ. ಹಾಗಾದರೆ ಮುದಿ ಕೋತಿ ಜೊತೆಗಿನ ಮಾತುಕತೆಯಾದರೂ ಏನು?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

ಈ ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ….

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೧

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩:   ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-೩ ವೃ ದ್ಧ ಬ್ರಾಹ್ಮಣನ ಜೊತೆ ಮಾತನಾಡಿದ ಸದೃಢಕಾಯದ ವ್ಯಕ್ತಿ ತಾನು ಪಾಂಡು ರಾಜನ ಪುತ್ರ ಮಧ್ಯಮ ಪಾಂಡವ ಪಾರ್ಥ ಎಂಬುದಾಗಿ ಹೇಳುತ್ತಾನೆ...

Thursday, March 20, 2025

PARYAYA: ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

 ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ಈಕೆಯ ಪಿಟೀಲು ವಾದನದ ಮಾಧುರ್ಯಕ್ಕೆ ತಲೆದೂಗದವರಿಲ್ಲ.

ಆದರೆ ಇತ್ತೀಚೆಗೆ ಕೇರಳದ ಅಲಪ್ಪುಳದ ಕೊಟ್ಟಂಕುಲಂಗರ ದೇವಸ್ಥಾನದಲ್ಲಿ ಈಕೆಯ ಭಕ್ತಿ ಸಂಗೀತಕ್ಕೆ ಪೊಲೀಸರ ತಡೆ ಬಿತ್ತು. ದೇವಸ್ಥಾನದಲ್ಲಿ ಇನ್ನೂ ಉತ್ಸವ ಮುಂದುವರೆದಿತ್ತು. ದೇವಸ್ಥಾನ ಸಮೀಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಬಾಲಕಿ ಶಶಿ ಭಾವಪೂರ್ಣವಾಗಿ ಪಿಟೀಲು ವಾದನದಲ್ಲಿ ನಿರತಳಾಗಿದ್ದಳು.

ಆಕೆ ನುಡಿಸುತ್ತಿದ್ದ ʼಮರುತಮಲೈ ಮಾಮನಿಯೇ ಮುರುಗಯ್ಯʼ ತಮಿಳು ಹಾಡಿಗೆ ಅಲ್ಲಿ ನೆರೆದಿದ್ದ ಸಹಸ್ರಾರು ಮಂದಿ ತಲೆದೂಗುತ್ತಾ ಕುಳಿತಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ʼರಾತ್ರಿ ೧೦ ಗಂಟೆಯಾಗಿದೆ. ಕಚೇರಿ ನಿಲ್ಲಿಸುʼ ಎಂದು ಆಕೆಯ ಬಳಿಗೆ ವೇದಿಕೆಯೇರಿ ಬಂದು ಸೂಚಿಸಿದರು. ಈ ದಿಢೀರ್‌ ಸೂಚನೆಯಿಂದ ಪುಟ್ಟ ಬಾಲಕಿ ಆಘಾತಕ್ಕೆ ಒಳಗಾದಳು. ನೆರೆದಿದ್ದ ಜನರೂ ದಿಗ್ಭ್ರಮೆಗೊಂಡರು. ಪೊಲೀಸರೂ ಬಂದು ಸಂಗೀತ ಕಾರ್ಯಕ್ರಮ ನಿಲ್ಲಿಸಿದರು.

ಕೊನೆಗೆ ಆ ಪುಟ್ಟ ಬಾಲಕಿ ಕೊಠಡಿಯೊಂದರಲ್ತಲಿ ಪ್ರೀತಿಯ ಪಿಟೀಲನ್ನು ಹಿಡಿದುಕೊಂಡು ಕುಳಿತಿದ್ದ ದೃಶ್ಯವನ್ನು ಕೂಡಾ ಸೇರಿಸಿ ಮಲಯಾಳಂ ಮನೋರಮಾ ವರದಿ ಮಾಡಿದೆ.

ಪುಟ್ಟ ಬಾಲಕಿಯ ಪಿಟೀಲುವಾದನಕ್ಕೆ ತಡೆ ಹಾಕಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ. 

ಈ ಘಟನೆ ಬಗ್ಗೆ ನಿಮಗೆ ಏನನ್ನಿಸಿತು? ಕಾಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.

ಬಾಲಕಿಯ ಮಧುರವಾದ ಪಿಟೀಲು ಧ್ವನಿ ಆಲಿಸಲು ಈ ಕೆಳಗಿನ ಸುದ್ದಿಯಲ್ಲಿನ ವಿಡಿಯೋ ನೋಡಿರಿ:

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

PARYAYA: ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!:   ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ! ಹ ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ...